ಪ್ರಕೃತಿಯ ಸ್ವರೂಪ ಪಂಚ ಪರಿವರ್ತನೆಯ ಇನ್ನೊಂದು ವಿಷಯವೇ ಪರಿಸರ. ಈ ಪ್ರಕೃತಿಯು ಭೂಮಿ, ಆಕಾಶ, ಗಾಳಿ, ಬೆಂಕಿ ಮತ್ತು ನೀರು ಎಂಬ ಪಂಚಭೂತಗಳಿAದ ನಿರ್ಮಿತವಾಗಿದೆ. ಭೂಮಿಯಿಂದ ಗಂಧ(ವಾಸನೆ), ಆಕಾಶದಿಂದ ಶಬ್ದ, ಗಾಳಿಯಿಂದ ಸ್ಪರ್ಶ, ನೀರಿನಿಂದ ರುಚಿ ಹಾಗೂ ಬೆಂಕಿಯಿAದ ರೂಪ (ದೃಶ್ಯ)ವು ಉಂಟಾಗಿದೆ. ಮಹರ್ಷಿ ಚರಕರು ತಮ್ಮ ಸಂಹಿತೆಯಲ್ಲಿ ಈ ಪಂಚಭೂತಗಳ ಜೊತೆಗೆ ಮತ್ತೊಂದು ತತ್ತ÷್ವವನ್ನು ಸೇರಿಸಿ, ಆರು ತÀತ್ತ÷್ವಗಳಿಂದ ಈ ಭೂಮಿಯ ನಿರ್ಮಾಣವಾಗಿದೆ ಎಂದು ವಿವರಿಸಿದ್ದಾರೆ. ಆದ್ದರಿಂದ ಮನುಷ್ಯನು ತೀರಿಕೊಂಡು ಅವನ ಅಂತ್ಯಕ್ರಿಯೆ ನಡೆದಾಗ ‘ದೇಹವು ಪಂಚಭೂತಗಳಲ್ಲಿ ವಿಲೀನವಾಯಿತು’ ಎಂದು ಹೇಳುತ್ತೇವೆ. ಈ ವಿಲೀನತೆ ಹಲವು ರೀತಿಯಲ್ಲಿ ನಡೆಯುತ್ತದೆ. ಮಣ್ಣಿನಲ್ಲಿ ಹೂಳುವ ಮೂಲಕ, ಜಲ ಸಮಾಧಿಯ ಮೂಲಕ, ಬೆಂಕಿಯಲ್ಲಿ ಸುಡುವ ಅಥವಾ ಗಾಳಿಯಲ್ಲಿ ಕರಗುವ ಮೂಲಕ ನಡೆಯುತ್ತದೆ. ಇಲ್ಲಿ ಆರನೇ ತÀತ್ತ÷್ವವು ಆತ್ಮ ಅಥವಾ ಭಗವಂತ. ಭಗವಂತನೆAಬ ಈ ಚೇತನದಿಂದಾಗಿಯೇ ಪಂಚಭೂತಗಳ ಮೂಲಕ ಪ್ರಕೃತಿ ಅಥವಾ ಮನುಷ್ಯನ ಸೃಷ್ಟಿಯಾಯಿತು. ಭಗವಂತನೆAಬ ಈ ಚೈತನ್ಯ ಶಕ್ತಿಯೇ ಇವೆಲ್ಲವನ್ನೂ ಸಚೇತನ ಮತ್ತು ಕ್ರಿಯಾಶೀಲಗೊಳಿಸುತ್ತದೆ. ಮತ್ತು ಆತ್ಮರಹಿತವಾಗುತ್ತಿದ್ದಂತೆ, ಈ ಪಂಚತÀತ್ತ÷್ವಗಳು ನಿರ್ಜೀವವಾಗುತ್ತವೆ. ಈ ಪಂಚಭೂತಗಳ ವಿಶಿಷ್ಟ ಸಮತೋಲನದಿಂದಲೇ ಎಲ್ಲಾ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿರುತ್ತವೆ. ಈ ಸಮತೋಲನಕ್ಕೆ ಯಾವುದೇ ರೀತಿಯ ತೊಂದರೆ ಬಾರದಂತೆ ಕಾಪಾಡುವುದು ಮನುಷ್ಯನ ಕರ್ತವ್ಯವಾಗಿದೆ ಎಂದು ಆಚಾರ್ಯ ಚರಕರು ಹೇಳುತ್ತಾರೆ. ಮಾಲಿನ್ಯ ಮತ್ತು ವೃಕ್ಷಾರೋಹಣ ಮೇಲೆ ತಿಳಿಸಿದಂತಹ ಅಸಮತೋಲನವೇ ಇಂದಿನ ಅತಿದೊಡ್ಡ ಜಾಗತಿಕ ಸಮಸ್ಯೆಯಾಗಿದೆ. ಮಾಲಿನ್ಯ ಎಂದರೇನು? ಜಲ ಮಾಲಿನ್ಯ, ವಾಯು ಮಾಲಿನ್ಯ, ಭೂ ಮಾಲಿನ್ಯ ಇಂತಹ ಅನೇಕ ಮಾಲಿನ್ಯಗಳು ಇಂದು ಜಾಗತಿಕ ಚರ್ಚೆಯ ವಿಷಯಗಳಾಗಿವೆ. ಭಾರತೀಯ ಸಂಸ್ಕöÈತಿಯಲ್ಲಿ ‘ಮಾಲಿನ್ಯ’ ಎಂಬ ಪದವೇ ಇರಲಿಲ್ಲ ಎಂಬುದು ಗಮನಾರ್ಹ ಅಂಶ. ಈ ಪದವನ್ನು ನಂತರ ಬಳಕೆಗೆ ತರಲಾಯಿತು. ಮಿಥ್ಯಾಯೋಗ ಅಥವಾ ದುರುಪಯೋಗದಿಂದ ಉಂಟಾಗುವ ಪರಿಣಾಮಗಳ ಕುರಿತು ಚರಕ ಸಂಹಿತೆಯಲ್ಲಿ ವಿಸ್ತಾರವಾಗಿ ವಿವರಿಸಲಾಗಿದೆ. ಪೃಥ್ವಿ ಸೂಕ್ತದಲ್ಲಿ ನಮ್ಮ ಭೂಮಿಗೆ ವಸುಂಧರಾ, ಅವನಿ, ಪರಿಪಾಲಕ, ಪೋಷಕ, ಗೌರಿ, ಅನಂತಾ, ಪೃಥ್ವಿ ಮುಂತಾದ ೭೦ಕ್ಕೂ ಹೆಚ್ಚು ಹೆಸರುಗಳನ್ನು ನೀಡಲಾಗಿದೆ. ನಮ್ಮ ಸಂಸ್ಕöÈತಿಯಲ್ಲಿ ಭೂಮಿಯನ್ನು ತಾಯಿ ಎಂದು ಸಂಬೋಧಿಸಲಾಗುತ್ತದೆ. “ಮಾತಾ ಭೂಮಿಃ ಪುತ್ರೋಽಹಂ ಪೃಥಿವ್ಯಾಃ” (ಭೂಮಿಯು ತಾಯಿ, ನಾನು ಪೃಥ್ವಿಯ ಮಗ) ಅಥರ್ವವೇದದ ಭೂಮಿ ಸೂಕ್ತ. ನಾವು ಭೂಮಿಯನ್ನು ತಾಯಿ ಎಂದು ಮತ್ತು ನಮ್ಮನ್ನು ಅದರ ಮಕ್ಕಳೆಂದು ಕರೆದಿದ್ದೇವೆ. ನಮ್ಮ ಪೂರ್ವಜರು ಸೃಷ್ಟಿಯನ್ನು ತಮ್ಮನ್ನು ಪಾಲಿಸುವ ಅಂಶವೆAದು ಭಾವಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ತಮ್ಮ ನಾಗರಿಕತೆಯನ್ನು ಕಟ್ಟಿದರು. ನಾವು ಯಾವಾಗಲೂ ಪ್ರಕೃತಿ ಮತ್ತು ಪುರುಷರ ನಡುವೆ ಸಮತೋಲನವನ್ನು ಕಾಪಾಡಲು ಪ್ರಯತ್ನಿಸಿದೆವು ಮತ್ತು ನಮ್ಮ ಜೀವನಶೈಲಿ ಹಾಗೂ ಸಂಸ್ಕöÈತಿಯ ವಿಕಾಸವು ಈ ಮೂಲಮಂತ್ರವನ್ನು ಗಮನದಲ್ಲಿಟ್ಟುಕೊಂಡೇ ನಡೆಯಿತು. ಸಂಯಮಿತ ಜೀವನಶೈಲಿ ಎಂದರೇನು? ಬದುಕಿ ಮತ್ತು ಬದುಕಲು ಬಿಡಿ, ಸಾವಿರಾರು ಲಕ್ಷಾಂತರ ವರ್ಷಗಳಿಂದ ವಿವಿಧ ಪ್ರಾಣಿಗಳು ಈ ಭೂಮಿಯ ಮೇಲೆ ವಾಸಿಸುತ್ತಿವೆ, ಆದರೆ ಅವು ಪ್ರಕೃತಿಗೆ ಯಾವುದೇ ಅನ್ಯಾಯವನ್ನು ಮಾಡಿಲ್ಲ. ಆದರೆ, ಮನುಷ್ಯರು ಮಾತ್ರ ತಮ್ಮ ನಾಗರಿಕತೆಯ ಅಭಿವೃದ್ಧಿಗೆ ಪ್ರಕೃತಿಯನ್ನು ಶೋಷಿಸುತ್ತಿದ್ದಾರೆ. ವಿವಿಧ ರೀತಿಯ ಮಾಲಿನ್ಯಗಳು ತಾಂತ್ರಿಕ ಕ್ರಾಂತಿಯ ಈ ಯುಗದಲ್ಲಿ, ಇ-ತ್ಯಾಜ್ಯದ (ಎಲೆಕ್ಟಾçನಿಕ್ ತ್ಯಾಜ್ಯ) ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮನ್ನು ನಾವು ವಿಶ್ಲೇಷಿಸಿಕೊಂಡರೆ, ನಾವು ಎಷ್ಟು ಸಿಡಿಗಳನ್ನು, ಎಷ್ಟು ಚಾರ್ಜರ್ಗಳನ್ನು ಬಳಸಿದ ನಂತರ ಬಿಸಾಡಿದ್ದೇವೆ ಎಂಬುದು ನಮಗೆ ತಿಳಿಯುತ್ತದೆ. ರೈಲು ಪ್ರಯಾಣದಲ್ಲಿ ಹಳಿಗಳ ಎರಡೂ ಬದಿಯಲ್ಲಿ ನೋಡಿದರೆ, ಖಾಲಿ ಬಾಟಲಿಗಳ ರಾಶಿಗಳು ಕಾಣಿಸುತ್ತವೆ. ಈ ರಾಶಿಗಳು ಎಲ್ಲಿಂದ ಬಂದವು? ಅವು ಪ್ರಕೃತಿಯಿಂದ ಬಂದವೇ? ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು ನೂರಾರು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಮಗೆಲ್ಲ ತಿಳಿದಿದೆ. ಆದ್ದರಿಂದ, ಪ್ಲಾಸ್ಟಿಕ್ ಇಂದಿನ ಯುಗದ ಅತಿ ದೊಡ್ಡ ಸಮಸ್ಯೆಯಾಗಿದೆ ಮತ್ತು ಇದರಿಂದ ಉದ್ಭವಿಸುವ ಸವಾಲುಗಳು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಈ ಪ್ಲಾಸ್ಟಿಕ್ ರಾಶಿಗಳು ಹೇಗೆ ಉಂಟಾಗುತ್ತವೆ ಎಂಬುದರ ಕುರಿತು ನಾವೆಲ್ಲರೂ ಯೋಚಿಸಬೇಕಾಗಿದೆ. ಅನಗತ್ಯ ಹಾಗೂ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರವು ಈ ಭಯಾನಕ ರೂಪವನ್ನು ಪಡೆದುಕೊಂಡಿದೆ, ಇದರ ವಿಡಿಯೋಗಳು ಮತ್ತು ಚಿತ್ರಗಳನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಸಂಯಮಿತ ಜೀವನಶೈಲಿಯಿಂದ ನಾವು ಪ್ರಕೃತಿಯನ್ನು ಮತ್ತು ನಮ್ಮನ್ನು ಉಳಿಸಬಹುದು. ಈ ತಿಳುವಳಿಕೆ ನಮ್ಮೆಲ್ಲರಿಗೂ ಇದ್ದೇ ಇದೆ, ಆದರೆ ಅದನ್ನು ಆಚರಣೆಯಲ್ಲಿ ತರುವಲ್ಲಿ ತೊಂದರೆಯಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ವಿಷಯ ನಮಗೆಲ್ಲರಿಗೂ ಗೊತ್ತಿರುವಂಥದ್ದೇ. ಭೂಮಿಯ ಸರಾಸರಿ ಉಷ್ಣತೆಯು ಇನ್ನೊಂದು ಡಿಗ್ರಿ ಹೆಚ್ಚಾದರೂ ಸಹ ಬದುಕುವುದು ಕಷ್ಟವಾಗುತ್ತದೆ. ಭಾರತದಲ್ಲೇ ಅನೇಕ ಸ್ಥಳಗಳಲ್ಲಿ ತಾಪಮಾನವು ೫೦-೫೨ ಡಿಗ್ರಿಗಳವರೆಗೆ ತಲುಪುತ್ತಿದೆ. ಒಂದು ವೇಳೆ ೬೦ ಡಿಗ್ರಿಗಿಂತ ಹೆಚ್ಚಾದರೆ ಮನುಷ್ಯನು ಜೀವಂತವಾಗಿರಲು ಸಾಧ್ಯವಿಲ್ಲ. ಹಾಗೂ ಓಝೋನ್ ಪದರದಲ್ಲಿ ಆಗುತ್ತಿರುವ ರಂಧ್ರದಿAದಲೂ ಸಹ ವಿವಿಧ ಸಮಸ್ಯೆಗಳು ಉದ್ಭವಿಸುತ್ತಿವೆ. ಸೂರ್ಯನ ಕಿರಣಗಳು ನೇರವಾಗಿ ನಮ್ಮನ್ನು ತಲುಪುವುದಿಲ್ಲ, ಅವು ಓಝೋನ್ ಪದರದ ಮೂಲಕ ಶೋಧಿಸಿ ನಂತರ ನಮ್ಮನ್ನು ತಲುಪುತ್ತವೆ. ಓಝೋನ್ ಪದರವು ಹಾನಿಕಾರಕ ನೇರಳಾತೀತ ಕಿರಣಗಳು (ಅಲ್ಟಾç-ವೈಲೆಟ್ ಕಿರಣಗಳು) ನಮ್ಮನ್ನು ತಲುಪದಂತೆ ತಡೆಯುತ್ತವೆ. ಈ ನೇರಳಾತೀತ ಕಿರಣಗಳು ನೇರವಾಗಿ ನಮ್ಮನ್ನು ತಲುಪಲು ಪ್ರಾರಂಭಿಸಿದರೆ, ಅದು ಗಂಭೀರ ದುಷ್ಪರಿಣಾಮವನ್ನು ಬೀರುತ್ತದೆ ಮತ್ತು ಬದುಕುವುದು ಕಷ್ಟಕರವಾಗುತ್ತದೆ. ಇದರ ಬಗ್ಗೆ ಜಾಗೃತಿ ಕೂಡ ಮೂಡುತ್ತಿರುವುದರಿಂದ ಅನೇಕ ದೇಶಗಳಲ್ಲಿ ಇದರ ನಿವಾರಣೆಗೆ ಪ್ರಯತ್ನಗಳು ನಡೆದಿವೆ. ಪರಿಸ್ಥಿತಿಯು ತಕ್ಕ ಮಟ್ಟಿಗೆ ಸುಧಾರಿಸಿದೆ. ಆದರೆ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಯನ್ನು ಪರಿಹರಿಸಲು ಈ ಪ್ರಯತ್ನಗಳು ಸಾಕಾಗುವುದಿಲ್ಲ. ಇನ್ನೊಂದು ಗಂಭೀರ ಸಮಸ್ಯೆ ಇದೆ, ಅದುವೇ ಆಮ್ಲ ಮಳೆ (ಆಸಿಡ್ ರೇನ್). ಊಹಿಸಿಕೊಳ್ಳಿ, ಒಂದು ವೇಳೆ ನದಿಗಳಲ್ಲಿ ನೀರಿನ ಬದಲು ಆಮ್ಲ (ಆಸಿಡ್) ಹರಿಯಲು ಶುರುವಾದರೆ ಏನಾಗಬಹುದು! ಇದು ಕೇವಲ ಕಲ್ಪನೆಗೆ ಸೀಮಿತವಾಗಿಲ್ಲ. ಪರಿಸರದಲ್ಲಿ ಹೆಚ್ಚುತ್ತಿರುವ ಸಲ್ಫರ್ ಡೈಆಕ್ಸೆöÊಡ್ ಮತ್ತು ನೈಟ್ರೇಟ್ ನ ಪ್ರಮಾಣದಿಂದಾಗಿ ಆಸಿಡ್ ಮಳೆಯು ಒಂದು ಸಾಮಾನ್ಯ ವಿದ್ಯಮಾನವಾಗುತ್ತಿದೆ. ಹಲವೆಡೆ ಆಸಿಡ್ ಮಳೆಯು ಅಲ್ಲಿನ ಜೀವನದ ಮೇಲೆ ಪರಿಣಾಮ ಬೀರಿದೆ. ಸಮುದ್ರ ಮಾಲಿನ್ಯವೂ ಹೆಚ್ಚುತ್ತಿದೆ. ಇನ್ನು ಬಳಕೆಯ ನಂತರ ಎಸೆಯಲಾದ ಪ್ಲಾಸ್ಟಿಕ್ ಅಂತಿಮವಾಗಿ ಸಮುದ್ರವನ್ನು ತಲುಪುತ್ತದೆ ಮತ್ತು ಅದನ್ನು ಕಲುಷಿತಗೊಳಿಸುತ್ತದೆ, ಇದು ಸಮುದ್ರ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ದೊಡ್ಡ ದೊಡ್ಡ ಹಡಗುಗಳು ತೈಲವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವಾಗ, ಹಲವು ಬಾರಿ ಬೇರೆ ಬೇರೆ ಕಾರಣಗಳಿಂದಾಗಿ ತೈಲವು ನೀರಿನಲ್ಲಿ ಸೋರಿಕೆಯಾಗುತ್ತದೆ ಮತ್ತು ಆ ತೈಲವು ಸಮುದ್ರದ ಮೇಲ್ಮೆöÊಯಲ್ಲಿ ಸಂಗ್ರಹವಾಗಿ ತೇಲುತ್ತಾ ಇರುತ್ತದೆ. ಕೆಲವು ವರ್ಷಗಳ ಹಿಂದೆ ಮಲೇಷ್ಯಾ ಬಳಿ ಇದೇ ರೀತಿಯ ಘಟನೆ ಸಂಭವಿಸಿತ್ತು, ಇದರಿಂದಾಗಿ ಹಿಂದೂ ಮಹಾಸಾಗರದಲ್ಲಿ ಅಪಾರ ಸಂಖ್ಯೆಯಲ್ಲಿ ಮೀನುಗಳು ಸತ್ತವು. ನಾವು ನಮ್ಮ ದೈನಂದಿನ ಇಂಧನ ಬಳಕೆಯನ್ನು ನಿಯಂತ್ರಣಕ್ಕೆ ತರಬೇಕು ಹಾಗೂ ಎಚ್ಚರಿಕೆಯಿಂದ ಮತ್ತು ಸಂಯಮದಿAದ ಬಳಸಬೇಕು. ಅರಣ್ಯದ ಮಹತ್ವ ಒಟ್ಟು ಭೂಮಿಯ ಶೇ.೩೩ ರಷ್ಟು ಭಾಗವು ಅರಣ್ಯವಾಗಿರಬೇಕು ಎಂದು ಅಂತರರಾಷ್ಟಿçÃಯ ಮಟ್ಟದಲ್ಲಿ ಒಪ್ಪಂದವಾಗಿದೆ. ಭಾರತವೂ ಸಹ ರಾಷ್ಟಿçÃಯ ಅರಣ್ಯ ನೀತಿಯಲ್ಲಿ ಇದೇ ಮಾತನ್ನು ಪುನರುಚ್ಚರಿಸಿದೆ, ಅದರೊಳಗೆ ೩೩ ಪ್ರತಿಶತದಷ್ಟು ಅರಣ್ಯ ಪ್ರದೇಶದ ಗುರಿಯನ್ನು ಇಡಲಾಗಿದೆ, ಆದರೆ ಈಗ ಉಳಿದಿರುವ ಅರಣ್ಯವೆಷ್ಟು? ಕೇವಲ ೨೧.೭೬ ಪ್ರತಿಶತ. ಒಂದು ವೇಳೆ ೩.೪೧ ಪ್ರತಿಶತದಷ್ಟು ಇತರ ಮರಗಳನ್ನೂ ಸೇರಿಸಿದರೆ, ಒಟ್ಟು ಅರಣ್ಯ ಪ್ರದೇಶವು ೨೫.೧೭ ಪ್ರತಿಶತ ಮಾತ್ರ ಆಗುತ್ತದೆ. ‘ಭಾರತ ಅರಣ್ಯ ಸ್ಥಿತಿಗತಿ ವರದಿ (ಐ.ಎಸ್.ಎಫ್.ಆರ್) ೨೦೨೩’ ರ ಪ್ರಕಾರ ೧೪೪೫ ಚದರ ಕಿ.ಮೀ. ಅರಣ್ಯ ಹೆಚ್ಚಳವಾಗಿದೆ. ಆದರೂ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗಳು ನಡೆಯುವುದು ಅವಶ್ಯಕ. ಗಿಡಗಳನ್ನು ನೆಡಿ, ಮರಗಳನ್ನು ಬೆಳೆಸಿ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಹೀಗೇಕೆ ಹೇಳುತ್ತಿರುತ್ತಾರೆ ಎಂಬ ಬಗ್ಗೆ ಯೋಚಿಸಬೇಕು. ನಾವು ಹಸಿರನ್ನು ಹೆಚ್ಚಿಸಬೇಕು, ನಮ್ಮ ಭಾರತದ ಮೂರನೇ ಒಂದು ಭಾಗದಷ್ಟು ಭೂಮಿ ಅರಣ್ಯ ಪ್ರದೇಶವಾಗಿರಬೇಕು. ಕೆಲವು ಸ್ಥಳಗಳಲ್ಲಿ ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಮರುಭೂಮಿಯಲ್ಲಿ ಮರಗಳನ್ನು ನೆಡುವುದು ಸಾಧ್ಯವಿಲ್ಲ, ಲೇಹ್ ಲಡಾಖ್ನಲ್ಲಿರುವ ಹಿಮಾವೃತ ಪ್ರದೇಶಗಳಲ್ಲಿ ಮತ್ತು ಹಿಮಾಲಯದಲ್ಲಿಯೂ ಇದು ಸಾಧ್ಯವಿಲ್ಲ. ಆದ್ದರಿಂದ, ಲಭ್ಯವಿರುವ ೩೩ ಪ್ರತಿಶತದಷ್ಟು ಭೂಮಿಯನ್ನು ಅರಣ್ಯೀಕರಣ ಮಾಡಬೇಕು ಮತ್ತು ಎಲ್ಲಿ ಸಾಧ್ಯವೋ ಅಲ್ಲಿ ಹೆಚ್ಚು ಗಿಡಮರಗಳನ್ನು ನೆಡಬೇಕು. ಈ ಗುರಿಯನ್ನು ಸಾಧಿಸಲು ದೇಶದಲ್ಲಿ ಒಂದು ದೊಡ್ಡ ಅಭಿಯಾನವನ್ನು ನಡೆಸಬೇಕು. ಪರಿಸರ ಸ್ನೇಹಿ ಜೀವನಶೈಲಿ ಹವಾಮಾನಕ್ಕೆ ಅನುಗುಣವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆಯೇ ನಮ್ಮ ದೈನಂದಿನ ಜೀವನದಲ್ಲಿ ಪ್ರಕೃತಿಯೊಂದಿಗೂ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಪ್ರಕೃತಿ ಮತ್ತು ಮನುಷ್ಯನ ನಡುವೆ ಆಳವಾದ ಸಂಬAಧವಿದೆ. ಉದಾಹರಣೆಗೆ ಪ್ರಕೃತಿಯಲ್ಲಿ ಅಗ್ನಿ ಮತ್ತು ಗಾಳಿ, ಗಾಳಿ ಮತ್ತು ಆಕಾಶ, ಆಕಾಶ ಮತ್ತು ಭೂಮಿ ಸಂಬAಧ ಹೊಂದಿರುವAತೆಯೇ ಮನುಷ್ಯ ಮತ್ತು ಪ್ರಕೃತಿಯೂ ಸಹ ಒಂದಕ್ಕೊAದು ಬೆಸೆದುಕೊಂಡಿದೆ. ಈ ಸೃಷ್ಟಿಚಕ್ರವನ್ನು ಹಾಳುಮಾಡಲು ಬಿಡಬಾರದು. ನೀರಿನ ಮಿತ ಬಳಕೆ ತಜ್ಞರ ಪ್ರಕಾರ, ೨೦೫೦ರ ವೇಳೆಗೆ ಭಾರತದ ೮-೧೦ ರಾಜ್ಯಗಳ ಸುಮಾರು ೧೫೦ ರಿಂದ ೨೦೦ ಜಿಲ್ಲೆಗಳಲ್ಲಿ ನೀರಿನ ಕೊರತೆ ಹೆಚ್ಚಾಗಲಿದೆ. ೧೯೪೭ರವರೆಗೆ ನಮ್ಮ ದೇಶದಲ್ಲಿ ಪ್ರತಿ ವ್ಯಕ್ತಿಗೆ ಸುಮಾರು ೬೦೦೦ ಘನ ಮೀಟರ್ ನೀರು ಲಭ್ಯವಿತ್ತು, ಆದರೆ ೨೦೦೦ದಲ್ಲಿ ಮಾಡಿದ ಅಂದಾಜಿನ ಪ್ರಕಾರ ಇದು ತಲಾ ಸುಮಾರು ೨೦೦೦ ಘನ ಮೀಟರ್ಗೆ ಇಳಿದಿದೆ. ೧೯೪೭ರಿಂದ ೨೦೦೦ದವರೆಗೆ ಹೀಗಾದರೆ, ೨೦೫೦ರ ವೇಳೆಗೆ ಏನಾಗಬಹುದು! ಇದು ತಲಾ ಸುಮಾರು ೧೨೦೦ ಘನ ಮೀಟರ್ಗೆ ಇಳಿಯುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ, ಆದರೆ ನೀರಿನ ಮೂಲಗಳು ಹೆಚ್ಚಾಗುತ್ತಿಲ್ಲ. ಆದ್ದರಿಂದ, ಈ ಸಮಸ್ಯೆಯ ಪರಿಹಾರಕ್ಕಾಗಿ ನಾವು ಯೋಚಿಸಬೇಕಿದೆ. ಮುಂದಿನ ವಿಶ್ವಯುದ್ಧವು ನೀರಿನ ಕಾರಣದಿಂದ ನಡೆಯಲಿದೆ ಎಂದು ಪ್ರಪಂಚದ ಅನೇಕ ಚಿಂತಕರು ಹೇಳಿದ್ದಾರೆ. ಆದ್ದರಿಂದ, ನೀರನ್ನು ಹನಿ ಹನಿಯಾಗಿ ರಕ್ಷಿಸುವುದು ಅವಶ್ಯಕ ಮತ್ತು ನೀರಿನ ಮೂಲಗಳ ಸಂಖ್ಯೆಯೂ ಹೆಚ್ಚಾಗಬೇಕು. ನಗರೀಕರಣದ ಪ್ರಕ್ರಿಯೆಯು ಹೆಚ್ಚು ವ್ಯಾಪಕವಾಗುತ್ತಿರುವುದರಿಂದ ಕೆರೆಗಳು ಮಾಯವಾಗುತ್ತಿವೆ. ಕೆರೆಗಳ ಜಾಗದಲ್ಲಿ ಬಸ್ ನಿಲ್ದಾಣಗಳಂತಹ ಅನೇಕ ರೀತಿಯ ಸಾರ್ವಜನಿಕ ವ್ಯವಸ್ಥೆಗಳಿಗೆ ಸಂಬAಧಿಸಿದ ನಿರ್ಮಾಣಗಳನ್ನು ಮಾಡಲಾಗುತ್ತಿದೆ. ಇರುವ ಕೆರೆಗಳು ನಿರಂತರವಾಗಿ ಒಣಗುತ್ತಿವೆ ಮತ್ತು ಆ ಪ್ರಮಾಣದಲ್ಲಿ ಹೊಸ ಕೆರೆಗಳ ನಿರ್ಮಾಣವಾಗುತ್ತಿಲ್ಲ. ಹೀಗಿರುವ ಕೆರೆಗಳೂ ಒಣಗಿಹೋದರೆ, ಆಗ ಎಂತಹ ಭಯಾನಕ ಪರಿಸ್ಥಿತಿ ಉಂಟಾಗಬಹುದು ಎಂಬುದನ್ನು ಯೋಚಿಸಿ! ಭೂಮಿಯ ಮೇಲಿನ ಒಟ್ಟು ನೀರಿನ ಪ್ರಮಾಣದಲ್ಲಿ ಕೇವಲ ೪ ಪ್ರತಿಶತದಷ್ಟು ಮಾತ್ರ ಶುದ್ಧವಾಗಿದೆ ಅಥವಾ ಕುಡಿಯಲು ಯೋಗ್ಯವಾಗಿದೆ ಎಂದು ನಮಗೆ ತಿಳಿದಿದೆಯಲ್ಲವೇ? ನಮ್ಮ ಉಪಕ್ರಮಗಳು ಅವಶ್ಯಕ ಈ ಎಲ್ಲಾ ಪರಿಸ್ಥಿತಿಗಳಲ್ಲಿ, ನಾವು ಭಾರತದ ಪರಿಸ್ಥಿತಿಯನ್ನು ಮುಂದಿಟ್ಟುಕೊAಡು ಯೋಚಿಸಿದಾಗ ಗಂಭೀರ ಚಿಂತನೆಗಳು ನಮ್ಮಲ್ಲಿ ಮೂಡುತ್ತದೆ. ಸುಮ್ಮನೆ ಕುಳಿತುಕೊಳ್ಳುವುದರಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ, ಬದಲಾಗಿ ನಾವು ನಮ್ಮ ಜೀವನಶೈಲಿಯ ಬಗ್ಗೆ ಆಲೋಚಿಸಬೇಕು. ಕೆಲವು ವಸ್ತುಗಳನ್ನು ಮರುಬಳಕೆ ಮಾಡುವುದು, ಪ್ಲಾಸ್ಟಿಕ್ ಬಳಕೆಯನ್ನು ಹಂತಹAತವಾಗಿ ಕಡಿಮೆ ಮಾಡುತ್ತಾ ಹೋಗುವುದು. ಎಲ್ಲಿ ಸಾಧ್ಯವೋ ಅಲ್ಲಿ ಪ್ಲಾಸ್ಟಿಕ್ ಬಳಸದಿರುವುದು ಪರಿಹಾರೋಪಾಯಗಳಾಗಿವೆ. ಬಟ್ಟೆ ಮತ್ತು ಕಾಗದವನ್ನು ಪದೇ ಪದೇ ಬಳಸಬಹುದು. ಬುದ್ಧನ ಶಿಷ್ಯರಲ್ಲಿ ಪ್ರಸಿದ್ಧನಾದ ಆನಂದನೆAಬ ಶಿಷ್ಯನ ಒಂದು ಕಥೆಯೊಂದಿದೆ. ಒಮ್ಮೆ ಆನಂದನು ಬೌದ್ಧ ಭಿಕ್ಷುಗಳಿಗಾಗಿ ಬಟ್ಟೆ ಕೇಳಲು ಶ್ರೇಷ್ಠಿಯ (ವ್ಯಾಪಾರಿ) ಬಳಿಗೆ ಹೋದನು. ವ್ಯಾಪಾರಿಯು ‘ಹಿಂದಿನ ಬಾರಿ ತೆಗೆದುಕೊಂಡು ಹೋಗಿದ್ದ ಬಟ್ಟೆಗಳನ್ನು ಏನು ಮಾಡಿದಿರಿ?’ ಎಂದು ಕೇಳಿದ. ಆನಂದನು ‘ಆ ಬಟ್ಟೆಗಳನ್ನು ನಾವು ಉಟ್ಟೆವು ಮತ್ತು ಅವು ಹರಿದುಹೋದವು’ ಎಂದು ಉತ್ತರಿಸಿದನು. ವ್ಯಾಪಾರಿಯು ಎರಡನೇ ಪ್ರಶ್ನೆಯನ್ನು ಕೇಳಿದ - ‘ಬಟ್ಟೆ ಹರಿದ ನಂತರ ಏನು ಮಾಡಿದಿರಿ?’ ‘ನಾವು ಅದನ್ನು ದೇಹವನ್ನು ಒರೆಸಲು ಬಳಸಿಕೊಂಡೆವು’ ಎಂದುತ್ತರಿಸಿದ ಆನಂದ. ‘ಆಮೇಲೆ ಏನಾಯಿತು?’ ‘ಮತ್ತೆ ಹರಿದುಹೋಯಿತು.’ ‘ಮತ್ತೆ ಹರಿದ ನಂತರ ಏನು ಮಾಡಿದಿರಿ?’ ‘ನಾವು ಅದನ್ನು ಅಡುಗೆಮನೆ ಇತ್ಯಾದಿ ಸ್ಥಳಗಳಲ್ಲಿ ಚೆಲ್ಲಿದ ನೀರನ್ನು ಒರೆಸಲು, ನೆಲ ಒರೆಸುವ ಬಟ್ಟೆಯಾಗಿ ಬಳಸಿಕೊಂಡೆವು’. ಇದನ್ನು ಕೇಳಿದ ಶ್ರೇಷ್ಠಿಗೆ ಭಿಕ್ಷುಗಳು ಬಟ್ಟೆಯ ಪ್ರತಿಯೊಂದು ದಾರವನ್ನೂ ಬಳಸಿದ್ದಾರೆ ಎಂಬುದು ಅರ್ಥವಾಯಿತು. ಅವನು ಸಂತೋಷಗೊAಡನು ಮತ್ತು ಬೌದ್ಧ ಭಿಕ್ಷುಗಳಿಗೆ ಅವರಿಗೆ ಬೇಕಾದಷ್ಟು ಬಟ್ಟೆಗಳನ್ನು ಕೊಡಲು ನಿರ್ದೇಶಿಸಿದನು. ಪ್ರಕೃತಿಯ ಶೋಷಣೆ ಮಾಡದಂತೆ ಮತ್ತು ಅದನ್ನು ಸಂರಕ್ಷಿಸಲು ನಾವು ನಮ್ಮ ಜೀವನದಲ್ಲಿ ಬಳಸುವ ವಸ್ತುವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು ಎನ್ನುವುದೇ ಈ ಕತೆಯ ಸಂದೇಶ. ಆದ್ದರಿಂದ ಕೆಲವು ವಸ್ತುಗಳನ್ನು ಅದರ ಗರಿಷ್ಠ ಬಳಕೆಯ ಚಕ್ರ ಪೂರ್ಣಗೊಳ್ಳುವಂತೆ ಉಪಯೋಗಿಸಬೇಕು. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಒಂದೊAದು ಸಸಿಯೊಂದಿಗೆ ಜೋಡಿಸಿ, ಪ್ರತಿದಿನ ಶಾಲೆ ಮುಗಿಸಿ ಹೋಗುವಾಗ ತಮ್ಮ ಸಸಿಯ ಬಳಿ ಹೋಗಿ ಅದರ ಆರೈಕೆ ಮಾಡಬೇಕು ಎಂದು ಅವರಲ್ಲಿ ವಿನಂತಿಸಬಹುದು. ಇದೇ ರೀತಿಯ ಪ್ರಯತ್ನಗಳನ್ನು ಮಾಡಿ ಜನರು ಮರುಭೂಮಿಯಲ್ಲಿ ಕಾಡುಗಳನ್ನು ಸೃಷ್ಟಿಸಿದ್ದಾರೆ. ಸ್ಥಳೀಯ ಮಣ್ಣು, ಸಾವಯವ ಗೊಬ್ಬರಗಳ ಮಿಶ್ರಣ ಮಾಡಿ ಸೀಡ್ಬಾಲ್ ಬಳಕೆಯನ್ನು ಉತ್ತೇಜಿಸುವುದು - ಪ್ರಕೃತಿ ಮತ್ತು ಜಲ ಸಂರಕ್ಷಣೆಯ ದೃಷ್ಟಿಯಿಂದ ಹೆಚ್ಚು ಉಪಯುಕ್ತ.
ಬನ್ನಿ, ಸಮರ್ಥ ಭಾರತವನ್ನು ನಿರ್ಮಿಸೋಣ ೧೯೨೫ರ ವಿಜಯದಶಮಿಯಂದು ಪ್ರಾರಂಭವಾದ ರಾಷ್ಟಿçÃಯ ಸ್ವಯಂಸೇವಕ ಸಂಘವು ತನ್ನ ಸ್ಥಾಪನೆಯ ೧೦೦ ವರ್ಷಗಳನ್ನು ಪೂರೈಸಿದೆ. ಸಂಘವು ಇಂದು ಜಗತ್ತಿನ ಅತಿದೊಡ್ಡ ಸಾಮಾಜಿಕ ಸಂಘಟನೆಯಾಗಿ ಬೆಳೆದಿದೆ. ಸಾವಿರಾರು ಜನರನ್ನು ಸೇವಾಕಾರ್ಯದಲ್ಲಿ ಹಾಗೂ ಸಮಾಜ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿಸಿದೆ. ಹಾಗಾಗಿ ಸಂಘವನ್ನು ತಿಳಿಯಬೇಕೆಂಬ ಕುತೂಹಲ ಸಹಜವಾಗಿಯೇ ಸಮಾಜದಲ್ಲಿ ಹೆಚ್ಚಿದೆ. ಸಂಘವನ್ನು ತಿಳಿಯಬೇಕಾದರೆ ಸಂಘದ ಸ್ಥಾಪಕರಾದ ಡಾ|| ಕೇಶವ ಬಲಿರಾಮ ಹೆಡಗೇವಾರ್ ಅವರನ್ನು ತಿಳಿಯುವುದು ಅಗತ್ಯ. ಹುಟ್ಟಿನಿಂದಲೇ ದೇಶಭಕ್ತರಾಗಿದ್ದ ಹೆಡಗೇವಾರರು ಸ್ವಾತಂತ್ರö್ಯ ಹೋರಾಟದ ಅನೇಕ ವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿಯೇ ಪಾಲ್ಗೊಂಡಿದ್ದರು. ಈ ಕಾರಣದಿಂದಾಗಿ ಅವರು ಎರಡು ಬಾರಿ (೧೯೨೧ ಮತ್ತು ೧೯೩೦ರಲ್ಲಿ) ಜೈಲುವಾಸವನ್ನು ಅನುಭವಿಸಿದ್ದರು. ಸಂಘ ಸ್ಥಾಪನೆ ನಮ್ಮ ದೇಶವು ಸ್ವಾತಂತ್ರö್ಯಕ್ಕಾಗಿ ಹೋರಾಡುತ್ತಿದ್ದ ಸಮಯದಲ್ಲಿ ಸಂಘದ ಸ್ಥಾಪನೆಯಾಯಿತು. ರಾಷ್ಟçದ ಸ್ವಾತಂತ್ರö್ಯ, ಅದರ ನಂತರ ರಾಷ್ಟçದ ಸರ್ವತೋಮುಖ ವಿಕಾಸ, ಸಮಾಜದ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ - ಇವೆಲ್ಲ ಇಲ್ಲಿನ ಹಿಂದು ಸಮಾಜವನ್ನು ಸಂಘಟಿಸುವುದರಿAದ ಮಾತ್ರ ಸಾಧ್ಯ ಎಂಬುದು ಡಾ|| ಹೆಡಗೇವಾರರ ಸ್ಪಷ್ಟ ಅಭಿಪ್ರಾಯವಾಗಿತ್ತು. ಜಾತಿ, ಭಾಷೆ, ಪ್ರಾಂತ ಇತ್ಯಾದಿ ಹೆಸರಿನಲ್ಲಿ ಹರಿದು ಹಂಚಿಹೋಗಿದ್ದ ಹಿಂದು ಸಮಾಜವನ್ನು ‘ಹಿಂದುತ್ವ’ದ ಆಧಾರದ ಮೇಲೆ ಸಂಘಟಿಸುವ ದೃಢಸಂಕಲ್ಪವನ್ನು ಮಾಡಿ ಸಂಘವನ್ನು ಸ್ಥಾಪಿಸಿದರು. ನಮ್ಮಲ್ಲಿ ಹಿಂದುತ್ವ ಎಂದರೆ ಯಾವುದೋ ಒಂದು ಪೂಜಾಪದ್ಧತಿ ಅಥವಾ ಮತ (ಖeಟigioಟಿ) ಅಲ್ಲ, ಅದೊಂದು ಜೀವನದೃಷ್ಟಿ ಮತ್ತು ಆ ದೃಷ್ಟಿಯ ಆಧಾರದ ಮೇಲೆ ಬೆಳೆದುನಿಂತ ಜೀವನ ಪದ್ಧತಿಯಾಗಿದೆ. ಸಂಘಕಾರ್ಯವನ್ನು ರಾಷ್ಟçವ್ಯಾಪಿಯಾಗಿ ಬೆಳೆಸಬೇಕಾದರೆ ಸಾವಿರಾರು ಸಂಖ್ಯೆಯಲ್ಲಿ ಗುಣವಂತ ಕಾರ್ಯಕರ್ತರು ಅವಶ್ಯಕ. ಅಂತಹ ಕಾರ್ಯಕರ್ತರನ್ನು ರೂಪಿಸಲು ಡಾ|| ಹೆಡಗೇವಾರರು ಒಂದು ಸರಳವಾದ, ಆದರೆ ಅತ್ಯಂತ ಪರಿಣಾಮಕಾರಿಯಾದ ದೈನಂದಿನ ಶಾಖಾ ಪದ್ಧತಿಯನ್ನು ವಿಕಸಿತಗೊಳಿಸಿದರು. ವ್ಯಕ್ತಿ ನಿರ್ಮಾಣದ ಕಾರ್ಯಪದ್ಧತಿ ನಮಗೆ ಅತ್ಯಂತ ಸಾಮಾನ್ಯವೆಂದು ಕಾಣುವ ಆಟ, ವ್ಯಾಯಾಮ, ಯೋಗಾಸನ, ಗೀತೆ, ಪ್ರಾರ್ಥನೆ ಮುಂತಾದ ಕಾರ್ಯಕ್ರಮಗಳು ದೈನಂದಿನ ಶಾಖೆಯಲ್ಲಿ ನಡೆಯುತ್ತವೆ. ಈ ಸರಳ ಕಾರ್ಯಕ್ರಮಗಳೇ ಸ್ವಯಂಸೇವಕರಲ್ಲಿ ಶಿಸ್ತು, ಧೈರ್ಯ, ದೇಶಭಕ್ತಿ, ಸೇವೆ, ಪ್ರಾಮಾಣಿಕತೆ ಮುಂತಾದ ಗುಣಗಳನ್ನು ಅರಳಿಸಿ ಬೆಳೆಸುತ್ತವೆ. ಈವರೆಗೆ ಸಾವಿರಾರು ಕಾರ್ಯಕರ್ತರು ದೇಶದಾದ್ಯಂತ ತಯಾರಾಗಿದ್ದುದು ಈ ಪದ್ಧತಿಯಿಂದಲೇ. ‘ಈ ದೇಶ ನನ್ನದು, ಈ ಸಮಾಜ ನನ್ನದು. ನಾನು ಇದರ ಋಣವನ್ನು ತೀರಿಸಬೇಕು’ ಎಂಬ ಸಂಸ್ಕಾರವನ್ನು ಜನಸಾಮಾನ್ಯರ ಅಂತಃಕರಣದಲ್ಲಿ ಅಂಕಿತಗೊಳಿಸುವಲ್ಲಿ ಶಾಖಾಪದ್ಧತಿ ಯಶಸ್ವಿಯಾಗಿದೆ. ಅದಕ್ಕಾಗಿಯೇ ಸಂಘವು ಸಾಮಾನ್ಯ ಜನರ ಅಸಾಮಾನ್ಯ ಸಂಘಟನೆಯಾಗಿದೆ. ಶಾಖೆಯಲ್ಲಿ ತಯಾರಾದ ಸ್ವಯಂಸೇವಕರ ನಡವಳಿಕೆಯ ಕಾರಣದಿಂದ ‘ಸಂಘ ಅಂದರೆ ದೇಶಭಕ್ತಿ, ಶಿಸ್ತು, ನಿಸ್ವಾರ್ಥ ಸೇವೆ’ ಎಂಬ ಭಾವ ಜನಮನದಲ್ಲಿ ಅಚ್ಚೊತ್ತಿದೆ. ಸಂಘಕಾರ್ಯದ ವಿಸ್ತಾರ ಯಾವುದೇ ಶ್ರೇಷ್ಠ ಕಾರ್ಯವು ಅಪಹಾಸ್ಯ, ನಿರ್ಲಕ್ಷö್ಯ, ವಿರೋಧ ಮತ್ತು ಸ್ವೀಕಾರ ಎಂಬ ೪ ಹಂತಗಳನ್ನು ದಾಟಬೇಕಾಗುತ್ತದೆ. ಅದೇ ರೀತಿ ಸಂಘವೂ ಈ ಎಲ್ಲ ಹಂತಗಳನ್ನು ದಾಟಿ ಸಮಾಜದ ವಿಶ್ವಾಸವನ್ನು ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಇಂದು ಸಂಘಕಾರ್ಯವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಛ್ನಿಂದ ಅರುಣಾಚಲ ಪ್ರದೇಶದವರೆಗೆ ಭಾರತದ ಮೂಲೆಮೂಲೆಗೂ ತಲುಪಿದೆ. ಇಂದು ಭಾರತದ ಬಹುತೇಕ ಎಲ್ಲ ಜಿಲ್ಲೆಗಳಿಗೂ ಸಂಘ ವ್ಯಾಪಿಸಿದೆ. ಒಟ್ಟು ೬೬೧೮ ತಾಲ್ಲೂಕುಗಳ ಪೈಕಿ ೯೨% ತಾಲ್ಲೂಕುಗಳಲ್ಲಿ ಸಂಘದ ಚಟುವಟಿಕೆಗಳು ನಡೆಯುತ್ತಿವೆ. ದೇಶದ ೫೧,೭೪೦ ಸ್ಥಾನಗಳಲ್ಲಿ ೮೩,೧೨೯ ದೈನಂದಿನ ಶಾಖೆಗಳು ಮತ್ತು ೨೬,೪೬೦ ಸ್ಥಾನಗಳಲ್ಲಿ ೩೨,೧೪೭ ಸಾಪ್ತಾಹಿಕ ಮಿಲನ್ಗಳ ಮೂಲಕ ಸಂಘಕಾರ್ಯವು ದೇಶಾದ್ಯಂತ ವಿಸ್ತರಿಸಿದೆ. ಒಟ್ಟು ಶಾಖೆಗಳಲ್ಲಿ ೫೯% ವಿದ್ಯಾರ್ಥಿಗಳ ಹಾಗೂ ೪೧% ಉದ್ಯೋಗಿಗಳ ಶಾಖೆಗಳಾಗಿವೆ. ಒಟ್ಟಿನಲ್ಲಿ ಸಂಘದಷ್ಟು ವ್ಯಾಪಕವಾದ ಸಂಘಟನೆ ಭಾರತದಲ್ಲಿ ಇನ್ನೊಂದಿಲ್ಲ ಎಂದೇ ಹೇಳಬಹುದು. ಸೇವೆಗೆ ಸದಾ ಸಿದ್ಧ ಯಾವುದೇ ನೈಸರ್ಗಿಕ ಅಥವಾ ಇತರ ದುರಂತಗಳು - ಭೂಕಂಪ, ನೆರೆ, ಬರಗಾಲ, ಅಗ್ನಿದುರಂತ, ವಿಮಾನ ದುರಂತ ಇತ್ಯಾದಿಗಳು ಸಂಭವಿಸಿದಾಗ ಅಲ್ಲಿ ಸಂತ್ರಸ್ತರ ನೆರವಿಗೆ ಮೊಟ್ಟಮೊದಲು ಧಾವಿಸುವವರು ಸಂಘದ ಸ್ವಯಂಸೇವಕರೇ. ಕೇವಲ ವಿಪತ್ತಿನ ಘಳಿಗೆಯಲ್ಲಿ ಅಷ್ಟೇ ಅಲ್ಲ, ಸಮಾಜದಲ್ಲಿ ಕಂಡುಬರುವ ಕೊರತೆ, ನೋವು, ಉಪೇಕ್ಷೆಗಳನ್ನು ಹೋಗಲಾಡಿಸಲು ಸ್ವಯಂಸೇವಕರು ನಿಯಮಿತವಾಗಿ ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂದು ಸ್ವಯಂಸೇವಕರು ಸಮಾಜದ ಸಹಯೋಗದೊಂದಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶಿಕ್ಷಣ, ಸಂಸ್ಕಾರ, ಆರೋಗ್ಯ ಮತ್ತು ಸ್ವಾವಲಂಬನೆಯ ಕ್ಷೇತ್ರಗಳಲ್ಲಿ ೧,೨೯,೦೦೦ ಕ್ಕೂ ಹೆಚ್ಚು ಸೇವಾಕಾರ್ಯಗಳನ್ನು ನಡೆಸುತ್ತಿದ್ದಾರೆ. ಇದರ ಜೊತೆಗೆ, ಕೇವಲ ಸರ್ಕಾರ ಅಥವಾ ಆಡಳಿತವನ್ನು ಅವಲಂಬಿಸದೆ, ಗ್ರಾಮಸ್ಥರೇ ಒಗ್ಗೂಡಿ ತಮ್ಮ ಗ್ರಾಮದ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವಂತಾಗಬೇಕು ಎಂಬ ಉದ್ದೇಶದಿಂದ ಸ್ವಯಂಸೇವಕರು ‘ಗ್ರಾಮವಿಕಾಸ’ದ ಕಾರ್ಯವನ್ನು ಮಾಡುತ್ತಿದ್ದಾರೆ. ಭಾರತೀಯ ತಳಿಯ ಹಸುಗಳ ಸಂರಕ್ಷಣೆ, ಸಂವರ್ಧನೆ, ತಳಿ ಸುಧಾರಣೆಯ ಜೊತೆಗೆ ಗೋಮಯ ಆಧಾರಿತ ಸಾವಯವ ಕೃಷಿಗಾಗಿ ರೈತರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ‘ಗೋ ಸೇವೆ-ಗೋ ಸಂವರ್ಧನೆ’ಯ ಕಾರ್ಯವೂ ನಡೆಯುತ್ತಿದೆ. ಪಂಚ ಪರಿವರ್ತನೆ ಈ ವರ್ಷದಿಂದ ೫ ವಿಷಯಗಳ ಕುರಿತು ಜನಜಾಗೃತಿಗಾಗಿ ಸ್ವಯಂಸೇವಕರು ಸಮಾಜದ ಸಜ್ಜನಶಕ್ತಿಯ ಸಹಕಾರದೊಂದಿಗೆ ವಿಶೇಷ ಪ್ರಯತ್ನಗಳನ್ನು ಮಾಡಲಿದ್ದಾರೆ. ಇವುಗಳನ್ನು ‘ಪಂಚ ಪರಿವರ್ತನೆ’ ಎಂದು ಕರೆಯಲಾಗಿದೆ. ಆ ೫ ವಿಷಯಗಳು ಈ ರೀತಿ ಇವೆ: ೧. ಸಾಮಾಜಿಕ ಸಾಮರಸ್ಯ ದುರದೃಷ್ಟವಶಾತ್, ಅನೇಕ ಶತಮಾನಗಳಿಂದ ನಮ್ಮದೇ ಸಮಾಜದ ಕೆಲವರ್ಗಗಳನ್ನು ಅಸ್ಪೃಶ್ಯರೆಂದು ಪರಿಗಣಿಸಿ, ಅವರನ್ನು ಎಲ್ಲ ಸೌಲಭ್ಯಗಳು ಮತ್ತು ಗೌರವದಿಂದ ವಂಚಿತರನ್ನಾಗಿ ಮಾಡಿರುವುದು ಅತ್ಯಂತ ಅಮಾನವೀಯ ಸಂಗತಿಯಾಗಿದೆ. ಅಸ್ಪೃಶ್ಯತೆ ನಮ್ಮ ಹಿಂದು ಸಮಾಜಕ್ಕೆ ಅಂಟಿರುವ ಘೋರ ಕಳಂಕವಾಗಿದೆ. ಈ ಅನ್ಯಾಯವನ್ನು ಹೋಗಲಾಡಿಸಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರಸ್ಯದ ಪ್ರಯತ್ನಗಳಿಗೆ ಎಲ್ಲರೂ ಬಲ ತುಂಬಬೇಕಾಗಿದೆ. ಅದಕ್ಕಾಗಿ, ನಮ್ಮ ಸ್ನೇಹಿತ ಮತ್ತು ಕುಟುಂಬ ವಲಯದಲ್ಲಿ ಎಲ್ಲ ಜಾತಿ ಸಮುದಾಯದ ಜನರನ್ನು ಸೇರಿಸಿಕೊಳ್ಳುವುದು, ನಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅವರ ಕುಟುಂಬಗಳನ್ನು ಗೌರವಪೂರ್ವಕವಾಗಿ ಆಮಂತ್ರಿಸುವುದು, ನಮ್ಮ ಮನೆ ಅಥವಾ ನಾವು ಕೆಲಸ ಮಾಡುವ ಸ್ಥಾನದಲ್ಲಿ ಸೇವೆ ಮಾಡುತ್ತಿರುವ ಎಲ್ಲರ ಜೊತೆ ಆತ್ಮೀಯತೆಯ ವ್ಯವಹಾರ, ಆಗಾಗ್ಗೆ ಅವರ ಮನೆ ಭೇಟಿ, ಎಲ್ಲ ಜಾತಿಸಮುದಾಯಗಳ ಪ್ರಮುಖರು ಒಟ್ಟಿಗೆ ಕುಳಿತು ಸಾಮಾಜಿಕ ಸಮಸ್ಯೆ-ಸವಾಲುಗಳ ಬಗ್ಗೆ ಚರ್ಚಿಸುವುದು ಮತ್ತು ಅವುಗಳ ಪರಿಹಾರಕ್ಕೆ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದು ಅಗತ್ಯವಾಗಿದೆ. ೨. ಪರಿಸರ ಸಂರಕ್ಷಣೆ ಈ ಪ್ರಕೃತಿಯು ನಮ್ಮೆಲ್ಲ ಜೀವಿಗಳ ತಾಯಿ. ಹೆಚ್ಚುತ್ತಿರುವ ಭೋಗಜೀವನದ ಪರಿಣಾಮವಾಗಿ ಪ್ರಕೃತಿಯ ಶೋಷಣೆ ನಿರಂತರ ನಡೆಯುತ್ತಿದೆ. ಪಾಶ್ಚಾತ್ಯ ಮಾನದಂಡಗಳ ಆಧಾರದ ಮೇಲೆ ನಡೆದ ಅಭಿವೃದ್ಧಿಯಿಂದಾಗಿ ಕೇವಲ ೫೦೦ ವರ್ಷಗಳಲ್ಲಿ ಪರಿಸರದ ಸಮತೋಲನ ಹದಗೆಟ್ಟಿದೆ. ಅನ್ನ, ನೀರು, ಗಾಳಿ, ಭೂಮಿ ಎಲ್ಲವೂ ವಿಷಮಯವಾಗುತ್ತಿವೆ, ಮಾಲಿನ್ಯದ ಅಪಾಯ ಬಹಳಷ್ಟು ಹೆಚ್ಚಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮೂರು ಕೆಲಸವನ್ನು ನಾವೆಲ್ಲರೂ ಮಾಡಬಹುದು – I. ನೀರನ್ನು ಉಳಿಸುವುದು (ನೀರಿನ ಮಿತಬಳಕೆ) II. ಮರಗಳನ್ನು ನೆಡುವುದು III. ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು. (Siಟಿgಟe Use Pಟಚಿsಣiಛಿ - ಏಕಬಳಕೆ ಪ್ಲಾಸ್ಟಿಕನ್ನು ಸಂಪೂರ್ಣ ತ್ಯಜಿಸುವುದು) ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದನ್ನು ಸಂರಕ್ಷಿಸುವ ಚಟುವಟಿಕೆಗಳನ್ನು ಸಮಾಜದ ಸಹಭಾಗಿತ್ವದೊಂದಿಗೆ ವ್ಯಾಪಕವಾಗಿ ಮಾಡಬೇಕಾಗಿದೆ. ೩. ಕುಟುಂಬ ಪ್ರಬೋಧನ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬಗಳ ಪಾತ್ರ ಅತ್ಯಂತ ಮಹತ್ವದ್ದು. ನಮ್ಮ ಸಂಸ್ಕೃತಿ, ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುವುದು ಕುಟುಂಬ ವ್ಯವಸ್ಥೆಯ ಕಾರಣದಿಂದಲೇ. ಇತ್ತೀಚಿನ ವರ್ಷಗಳಲ್ಲಿ ನಗರೀಕರಣ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಬದಲಾಗುತ್ತಿರುವ ಜೀವನಶೈಲಿ ಇತ್ಯಾದಿ ಕಾರಣಗಳಿಂದ ಈ ಕುಟುಂಬ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವುದು ಗಂಭೀರ ಚಿಂತೆಯ ವಿಷಯವಾಗಿದೆ. ಆದ್ದರಿಂದ ಪ್ರತಿಯೊಂದು ಕುಟುಂಬದಲ್ಲೂ ಎಲ್ಲಾ ಸದಸ್ಯರು ಆಗಾಗ್ಗೆ ಒಟ್ಟಿಗೆ ಸೇರಿ ಮಾತುಕತೆ, ಭಜನೆ, ಸದ್ವಿಚಾರಗಳ ಬಗ್ಗೆ ಚರ್ಚೆ, ಒಟ್ಟಿಗೆ ಕೂತು ಭೋಜನ, ನೆರೆಕೆರೆಯ ಕೆಲ ಕುಟುಂಬಗಳ ಜತೆ ಸೇರಿ ಕುಟುಂಬ ಮಿಲನ್ (ಸತ್ಸಂಗ), ಅಲ್ಲಿ ಕುಟುಂಬದ ಉತ್ತಮ ಸಂಪ್ರದಾಯ-ರೂಢಿಗಳ ಬಗ್ಗೆ ವಿಚಾರ ವಿನಿಮಯ - ಈ ರೀತಿ ಕೌಟುಂಬಿಕ ಮೌಲ್ಯಗಳನ್ನು ಗಟ್ಟಿಗೊಳಿಸುವಂಥ ಚಟುವಟಿಕೆಗಳು ಹೆಚ್ಚೆಚ್ಚು ನಡೆಯುವಂತಾಗಬೇಕು. ೪. `ಸ್ವ’ ಆಧಾರಿತ ಜೀವನ ಈ ಮಣ್ಣಿನ ವಿಚಾರ, ಮೌಲ್ಯಗಳು ಮತ್ತು ಸಂಪನ್ಮೂಲಗಳ ಆಧಾರದ ಮೇಲೆ ರಾಷ್ಟçಜೀವನವನ್ನು ರೂಪಿಸಬೇಕು, ಆ ಮೂಲಕ ಭಾರತವು ಒಂದು ಸ್ವಾವಲಂಬಿ, ಬಲಿಷ್ಠ ರಾಷ್ಟçವಾಗಿ ಎದ್ದು ನಿಲ್ಲುವಂತಾಗಬೇಕು. `ಸ್ವ ಆಧಾರಿತ ಜೀವನ’ದ ತಾತ್ಪರ್ಯವಿದು. ಸ್ವದೇಶಿ ಜೀವನಶೈಲಿಯನ್ನು ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಕುಟುಂಬವೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಭಾರತವು ಆತ್ಮನಿರ್ಭರವಾಗುತ್ತದೆ. ನಮ್ಮ ಮಾತೃಭಾಷೆ, ನಮ್ಮ ಉಡುಗೆ ತೊಡುಗೆ, ನಮ್ಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಅಭಿಮಾನ ಇಟ್ಟುಕೊಂಡು ಜೀವನದಲ್ಲಿ ಅನುಸರಿಸಬೇಕು. ೫. ನಾಗರಿಕ ಕರ್ತವ್ಯಪ್ರಜ್ಞೆ ಸಂವಿಧಾನ, ಕಾನೂನು, ನಿಯಮ, ಶಿಸ್ತುಗಳನ್ನು ಎಲ್ಲರೂ ಎಲ್ಲ ಸಂದರ್ಭಗಳಲ್ಲೂ ಪಾಲಿಸಬೇಕು. ಯಾವುದೇ ಪ್ರಚೋದನಕಾರಿ ಘಟನೆ ನಡೆದಾಗಲೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನು ಬಾಹಿರವಾಗಿ ವರ್ತಿಸಬಾರದು. ಇಂದು ದೇಶಕ್ಕಾಗಿ ೨೪ ಗಂಟೆ ಬದುಕುವ ಅವಶ್ಯಕತೆ ಇದೆ. ಸಣ್ಣಪುಟ್ಟ ವಿಷಯಗಳಲ್ಲೂ ಎಲ್ಲರ ಬಗ್ಗೆ, ದೇಶ ಮತ್ತು ಸಮಾಜದ ಬಗ್ಗೆ ಕಾಳಜಿ ಇರಬೇಕು. ‘ಇದು ನನ್ನಿಂದಲೇ ಆರಂಭವಾಗಬೇಕು’ ಎಂದು ಪ್ರತಿಯೊಬ್ಬರೂ ನಿಶ್ಚಯಿಸಿ ಕಾರ್ಯಪ್ರವೃತ್ತರಾಗಬೇಕು. ಆಗ ಇದು ನಮ್ಮಿಂದ ಸಮಾಜಕ್ಕೂ, ಆ ಮೂಲಕ ಇಡೀ ದೇಶಕ್ಕೂ ವ್ಯಾಪಿಸುತ್ತದೆ. ಸಮಾಜ ಬಾಂಧವರಿಗೆ ಕರೆ ಕಳೆದ ನೂರು ವರ್ಷಗಳಿಂದ ರಾಷ್ಟç ಪುನರ್ನಿರ್ಮಾಣದ ಈ ಮಹಾನ್ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಡೀ ಸಮಾಜವನ್ನು ಸಂಘಟಿಸಿ, ಆ ಮೂಲಕ ದೇಶ ಎದುರಿಸುತ್ತಿರುವ ಸಮಸ್ಯೆ-ಸವಾಲುಗಳಿಗೆ ಪರಿಹಾರ ಹುಡುಕುವುದು, ಸಮಾಜದಲ್ಲಿ ಸುಯೋಗ್ಯ ಬದಲಾವಣೆಗಳನ್ನು ತರಲು ಕಾಲಕ್ಕೆ ತಕ್ಕಂತೆ ಸಮಾಜದ ವ್ಯವಸ್ಥೆಗಳನ್ನು ರೂಪಿಸುವುದು ಸಂಘಕಾರ್ಯದ ಮುಂದಿನ ಹಂತವಾಗಿದೆ. ನಮ್ಮದು ಬಹಳ ವಿಶಾಲವಾದ ದೇಶ. ಯಾವುದೇ ಒಂದೇ ಸಂಘಟನೆಯಿAದ ಶಾಶ್ವತ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಎಲ್ಲರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಒಂದಾಗಿ ಕೆಲಸ ಮಾಡಿದರೆ ಮಾತ್ರ ಇದು ಸಾಧ್ಯವಾದೀತು. ಈ ರಾಷ್ಟçಕಾರ್ಯದಲ್ಲಿ ಎಲ್ಲ ಸೋದರ ಸೋದರಿಯರು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸಕ್ರಿಯ ಪಾತ್ರ ವಹಿಸಬೇಕೆಂಬ ವಿನಂತಿ ನಮ್ಮದು. ತಾಯಿ ಭಾರತಿಯ ರಥವನ್ನು ಎಳೆಯಲು ಎಲ್ಲರ ಕೈಗಳು ಮತ್ತು ಶಕ್ತಿ ಸೇರಲಿ. ಬನ್ನಿ! ಈ ಅಮೃತಕಾಲದಲ್ಲಿ ಎಲ್ಲರೂ ಸೇರಿ ನಮ್ಮ ಭಗೀರಥ ಪ್ರಯತ್ನದಿಂದ ಭಾರತಾಂಬೆಯನ್ನು ಪರಮ ವೈಭವದತ್ತ ಕೊಂಡೊಯ್ಯೋಣ. ಭಾರತಮಾತೆಗೆ ಜಯವಾಗಲಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರು ಕಲಿಯುಗಾಬ್ಧ 5127ರ ಆಶ್ವಯುಜ ಶುಕ್ಲ ದಶಮಿ, 2 ಅಕ್ಟೋಬರ್ 2025ರ ಗುರುವಾರದಂದು ನಾಗಪುರದಲ್ಲಿ ನಡೆದ ಶ್ರೀ ವಿಜಯದಶಮಿ ಉತ್ಸವದಲ್ಲಿ ಮಾಡಿದ ಭಾಷಣದ ಸಾರಾಂಶ. ನಾಗ್ಪುರ, ಅಕ್ಟೋಬರ್ 2, 2025 ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವು ನೂರು ವರ್ಷವನ್ನು ಪೂರೈಸುವ ಹೊತ್ತಿನ ಈ ವಿಜಯದಶಮಿ ಉತ್ಸವದಲ್ಲಿ ನಾವೆಲ್ಲರೂ ಇಲ್ಲಿ ಒಟ್ಟು ಸೇರಿದ್ದೇವೆ. ಸಂಯೋಗವೆಂದರೆ ಇದು ಶ್ರೀ ಗುರು ತೇಗ್ ಬಹದ್ದೂರ್ ಮಹಾರಾಜರು ದೇಹತ್ಯಜಿಸಿದ 350ನೇ ವರ್ಷವಾಗಿದೆ. ಅವರ ತ್ಯಾಗವು ಹಿಂದುತ್ವದ ಗುರಾಣಿಯಾಗುವ ಮೂಲಕ ಹಿಂದೂ ಸಮಾಜವನ್ನು ವಿದೇಶಿ ವಿಧರ್ಮಿಗಳ ದೌರ್ಜನ್ಯಗಳಿಂದ ರಕ್ಷಿಸಿತು. ಆಂಗ್ಲ ದಿನಾಂಕದಂತೆ ಇಂದು ಸ್ವರ್ಗೀಯ ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾಗಿದೆ. ನಮ್ಮ ಸ್ವಾತಂತ್ರ್ಯ ಹೋರಾಟದ ಸೇನಾನಿಗಳಲ್ಲಿ ಅವರು ಅಗ್ರಗಣ್ಯರು ಮಾತ್ರವಲ್ಲದೇ, ಜೊತೆಗೆ ಸ್ವಾತಂತ್ರ್ಯೋತ್ತರ ಭಾರತವನ್ನು ‘ಸ್ವತ್ವ’ದ ಆಧಾರದಲ್ಲಿ ನಿರ್ಮಿಸಬೇಕೆಂಬ ಸಂಕಲ್ಪ ತೊಟ್ಟ ದಾರ್ಶನಿಕರಲ್ಲಿಯೂ ಅವರು ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಸರಳತೆ, ವಿನಮ್ರತೆ, ಪ್ರಾಮಾಣಿಕತೆ ಹಾಗೂ ದೃಢತೆಯ ಪ್ರತಿಮೆಯಾಗಿದ್ದ ಹಾಗೂ ದೇಶಹಿತಕ್ಕಾಗಿ ತಮ್ಮ ಪ್ರಾಣವನ್ನೂ ತ್ಯಾಗ ಮಾಡಿದ ನಮ್ಮ ಭೂತಪೂರ್ವ ಪ್ರಧಾನಮಂತ್ರಿ ಸ್ವರ್ಗೀಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಇಂದೇ ಆಗಿದೆ. ಭಕ್ತಿ, ಸಮರ್ಪಣೆ ಹಾಗೂ ದೇಶಸೇವೆಯ ಈ ಉತ್ತುಂಗ ಆದರ್ಶಗಳು ನಮಗೆಲ್ಲರಿಗೂ ಅನುಕರಣೀಯವಾದವು. ಮನುಷ್ಯನು ನಿಜವಾಗಿ ಮನುಷ್ಯ ಆಗುವುದು ಹಾಗೂ ಜೀವನವನ್ನು ಮುನ್ನಡೆಸುವುದು ಹೇಗೆ ಎನ್ನುವುದರ ಶಿಕ್ಷಣವು ಈ ಮಹಾಪುರುಷರಿಂದ ನಮಗೆ ಲಭಿಸುತ್ತದೆ. ಇಂದಿನ ದೇಶ ಮತ್ತು ವಿಶ್ವದ ಪರಿಸ್ಥಿತಿಯೂ ನಾವೆಲ್ಲ ಭಾರತೀಯರಿಂದ ಇಂತಹದ್ದೇ ವ್ಯಕ್ತಿಗತ ಮತ್ತು ರಾಷ್ಟ್ರೀಯ ಚಾರಿತ್ರ್ಯಭರಿತ ಜೀವನವನ್ನು ಅಪೇಕ್ಷಿಸುತ್ತಿದೆ. ಒಂದು ಸ್ವತಂತ್ರ ರಾಷ್ಟ್ರದ ರೂಪದಲ್ಲಿ ಕಳೆದ ವರ್ಷದ ಅವಧಿಯಲ್ಲಿ ನಾವು ನಿಶ್ಚಯಿಸಿ ಕ್ರಮಿಸಿದ ಮಾರ್ಗಗಳನ್ನು ಪುನರಾವಲೋಕನ ನಡೆಸಿದಾಗ ಈ ವಿಚಾರವು ಗಮನಕ್ಕೆ ಬರುತ್ತದೆ. ವರ್ತಮಾನದ ಪರಿದೃಶ್ಯ: ನಿರೀಕ್ಷೆ ಮತ್ತು ಸವಾಲುಗಳು ಕಳೆದ ವರ್ಷದ ಕಾಲಾವಧಿಯು ಒಂದು ರೀತಿಯಲ್ಲಿ ವಿಶ್ವಾಸ ಹಾಗೂ ನಿರೀಕ್ಷೆಗೆ ಹೆಚ್ಚಿನ ಬಲ ನೀಡಿದೆ. ಇನ್ನೊಂದೆಡೆ, ಈಗಾಗಲೇ ನಮ್ಮೆದುರಿರುವ ಹಳೆಯ ಸವಾಲುಗಳ ಜೊತೆಗೆ ಹೊಸ ಸವಾಲುಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಾ, ಮುಂದಿನ ಕರ್ತವ್ಯದ ಹಾದಿಯತ್ತ ನಡೆಯಲು ಮಾರ್ಗದರ್ಶನ ನೀಡಿದೆ. ಹಿಂದಿನ ವರ್ಷದಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸರ್ವ ಭಾರತೀಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರ ಜೊತೆಗೆ ಕುಂಭಮೇಳದ ಆಯೋಜನೆಯಲ್ಲಿ ಐತಿಹಾಸಿಕ ದಾಖಲೆಗಳೆಲ್ಲವನ್ನೂ ಮುರಿದು ಜಾಗತಿಕ ವಿಕ್ರಮವನ್ನು ಸ್ಥಾಪಿಸಿತು. ಈ ಮಹಾಕುಂಭಮೇಳವು ಸಂಪೂರ್ಣ ಭಾರತದಲ್ಲಿ ಶ್ರದ್ಧೆ ಹಾಗೂ ಏಕತೆಯ ಪ್ರಚಂಡ ಅಲೆಯನ್ನು ಜಾಗೃತಗೊಳಿಸಿತು. ಇದೇ ವರ್ಷದ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಗಡಿ ಪ್ರದೇಶ ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಉಗ್ರವಾದಿಗಳು, 26 ಭಾರತೀಯ ನಾಗರಿಕರಾದ ಪ್ರವಾಸಿಗರ ಹಿಂದೂ ಧರ್ಮದ ಹಿನ್ನೆಲೆಯನ್ನು ಖಚಿತಪಡಿಸಿಕೊಂಡು ಅವರನ್ನು ಹತ್ಯೆಗೈದರು. ಇದರಿಂದಾಗಿ ಸಂಪೂರ್ಣ ಭಾರತದ ನಾಗರಿಕರಲ್ಲಿ ದುಃಖ ಹಾಗೂ ಆಕ್ರೋಶದ ಜ್ವಾಲೆ ಭುಗಿಲೆದ್ದಿತು. ಮೇ ತಿಂಗಳಲ್ಲಿ ಭಾರತ ಸರ್ಕಾರವು ಅತ್ಯಂತ ಯೋಜಿತ ರೀತಿಯಲ್ಲಿ ಈ ಕುಕೃತ್ಯಕ್ಕೆ ಸೂಕ್ತ ಉತ್ತರ ನೀಡಿತು. ಈ ಎಲ್ಲ ಸಂದರ್ಭಗಳಲ್ಲಿ ದೇಶದ ನಾಯಕತ್ವದ ದೃಢತೆ ಹಾಗೂ ನಮ್ಮ ಸೇನೆಯ ಪರಾಕ್ರಮ ಮತ್ತು ಯುದ್ಧ ಕೌಶಲದ ಜೊತೆಗೆ ಸಮಾಜದ ದೃಢತೆ ಮತ್ತು ಏಕತೆಯನ್ನು ಕಾಣಲು ಸಾಧ್ಯವಾಯಿತು. ಎಲ್ಲರ ಜೊತೆಗೂ ಸದಾಕಾಲವೂ ಮಿತ್ರತ್ವದ ನೀತಿ ಮತ್ತು ಮೈತ್ರಿಭಾವಕ್ಕೆ ತುಡಿಯುತ್ತಲೇ ನಮ್ಮ ಸುರಕ್ಷತೆಯ ವಿಷಯದಲ್ಲಿ ಹೆಚ್ಚು ಹೆಚ್ಚು ಜಾಗೃತರಾಗಿರಬೇಕಾದ ಅವಶ್ಯಕತೆಯನ್ನು ಈ ಸನ್ನಿವೇಶಗಳು ಮನವರಿಕೆ ಮಾಡಿಕೊಟ್ಟವು. ಈ ವಿಚಾರದಲ್ಲಿ ವಿಶ್ವದ ಇತರ ದೇಶಗಳು ತಳೆದ ನಿಲುವುಗಳು ಹಾಗೂ ಇರಿಸಿದ ಹೆಜ್ಜೆಗಳ ಮೂಲಕ, ನಮ್ಮ ಮಿತ್ರರು ಯಾರು ಹಾಗೂ ಅವರು ಎಲ್ಲಿಯವರೆಗೆ ನಮ್ಮೊಂದಿಗಿರುತ್ತಾರೆ ಎನ್ನುವ ಪರೀಕ್ಷೆಯೂ ನಡೆದುಹೋಯಿತು. ದೇಶದೊಳಗೆ ಉಗ್ರವಾದಿ ನಕ್ಸಲ್ ಕಾರ್ಯಚಟುವಟಿಕೆಗಳ ಮೇಲೆ ಸರ್ಕಾರದ ಕಠಿಣ ಹೆಜ್ಜೆಗಳು ಹಾಗೂ ನಕ್ಸಲರ ವಿಚಾರಗಳ ಪೊಳ್ಳುತನ ಹಾಗೂ ಕ್ರೂರತೆಯ ಕುರಿತು ಜನರಿಗೆ ಮನವರಿಕೆ ಆಗುತ್ತಿರುವ ಕಾರಣದಿಂದ ಈ ಸಮಸ್ಯೆಯು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಈ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದ್ದ ಶೋಷಣೆ ಹಾಗೂ ಅನ್ಯಾಯಗಳು, ಅಭಿವೃದ್ಧಿಯ ಕೊರತೆ ಹಾಗೂ ಈ ವಿಚಾರಗಳ ಕುರಿತು ಆಡಳಿತವು ಹೊಂದಿದ್ದ ಸಂವೇದನಾಹೀನತೆಯೇ ನಕ್ಸಲರ ಪ್ರಭಾವ ಹೆಚ್ಚಲು ಮೂಲ ಕಾರಣವಾಗಿತ್ತು. ಈಗ ನಕ್ಸಲ್ ಸಮಸ್ಯೆಯು ದೂರವಾಗಿರುವ ಬೆನ್ನಿಗೇ ಈ ಪ್ರದೇಶಗಳಲ್ಲಿ ನ್ಯಾಯಪಾಲನೆ, ಅಭಿವೃದ್ಧಿ, ಸದ್ಭಾವನೆ, ಸಂವೇದನೆ ಹಾಗೂ ಸಾಮರಸ್ಯ ಸ್ಥಾಪನೆಯ ನಿಟ್ಟಿನಲ್ಲಿ ಆಡಳಿತವು ವ್ಯಾಪಕ ಯೋಜನೆಗಳನ್ನು ರೂಪಿಸುವ ಅವಶ್ಯಕತೆಯಿದೆ. ಆರ್ಥಿಕ ಕ್ಷೇತ್ರದಲ್ಲಿಯೂ ಪ್ರಚಲಿತ ಪರಿಣಾಮಗಳ ಆಧಾರದಲ್ಲಿ ನಮ್ಮ ಆರ್ಥಿಕ ಸ್ಥಿತಿಯು ಪ್ರಗತಿಯಲ್ಲಿದೆ ಎಂದು ಹೇಳಬಹುದು. ವಿಶ್ವದಲ್ಲಿ ನಮ್ಮ ದೇಶವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಬೇಕೆಂಬ ಉತ್ಸಾಹವು ಉದ್ಯೋಗ ಜಗತ್ತಿನಲ್ಲಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಕಂಡುಬರುತ್ತಿದೆ. ಆದರೆ ಪ್ರಚಲಿತ ಆರ್ಥಿಕ ನೀತಿಯ ಪ್ರಯೋಗದ ಕಾರಣದಿಂದಾಗಿ ಶ್ರೀಮಂತ ಮತ್ತು ಬಡವರ ನಡುವಿನ ಅಂತರದ ಹೆಚ್ಚಳ, ಆರ್ಥಿಕ ಸಾಮರ್ಥ್ಯವು ಕೇಂದ್ರೀಕೃತವಾಗುವುದು, ಶೋಷಣೆ ಮಾಡುತ್ತಿದ್ದವರಿಗೆ ಶೋಷಣೆಯ ಹೊಸ ಮಾರ್ಗಗಳು ಖಚಿತವಾಗುವುದು, ಪರಿಸರ ಹಾನಿ, ಮನುಷ್ಯರ ನಡುವಿನ ವ್ಯವಹಾರಗಳಲ್ಲಿ ಸಂಬಂಧಗಳ ಜಾಗವನ್ನು ವ್ಯಾಪಾರಿ ದೃಷ್ಟಿ ಮತ್ತು ಅಮಾನವೀಯತೆಯು ಆಕ್ರಮಿಸಿಕೊಂಡಿದೆ. ಇಂತಹ ದೋಷಗಳು ಇದೀಗ ವಿಶ್ವದೆಲ್ಲೆಡೆಯೂ ಕಾಣಿಸಿಕೊಂಡಿವೆ. ಈ ಎಲ್ಲ ದೋಷಗಳ ಪರಿಣಾಮ ನಮ್ಮ ಮೇಲೆ ಆಗದಿರಲಿ ಎಂಬ ಕಾರಣಕ್ಕೆ ಹಾಗೂ ಇದೀಗ ಅಮೇರಿಕಾವು ತನ್ನ ಹಿತ ಕಾಯ್ದುಕೊಳ್ಳುವ ನೆಪದಲ್ಲಿ ಕೈಗೊಂಡಿರುವ ಆಮದು ಶುಲ್ಕ ಹೆಚ್ಚಳದ ಪರಿಣಾಮವನ್ನೂ ಕ್ಷೀಣಗೊಳಿಸಲು ನಾವು ಕೆಲವು ವಿಚಾರಗಳಲ್ಲಿ ಪುನರಾವಲೋಕನ ಮಾಡಿಕೊಳ್ಳಬೇಕಿದೆ. ವಿಶ್ವವು ಪರಸ್ಪರ ನಿರ್ಭರತೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಪರಸ್ಪರಾವಲಂಬನೆಯು ನಮ್ಮನ್ನು ಒತ್ತಡಕ್ಕೆ ಸಿಲುಕಿಸದಂತೆ ನಾವು ಎಚ್ಚರವಹಿಸಿ ಆತ್ಮನಿರ್ಭರವಾಗಬೇಕು ಹಾಗೂ ಅದರ ಆಧಾರದಲ್ಲಿ ವಿಶ್ವದ ಏಕತೆಯನ್ನು ಗಮನದಲ್ಲಿರಿಸಿಕೊಂಡು ನಮ್ಮ ಇಚ್ಛೆಗೆ ಅನುಗುಣವಾಗಿ ಬದುಕಲು ಸಾಧ್ಯವಾಗಬೇಕಿದೆ. ಸ್ವದೇಶಿ ಹಾಗೂ ಸ್ವಾವಲಂಬನೆಗೆ ಯಾವ ಪರ್ಯಾಯವೂ ಇಲ್ಲ. ಭೌತಿಕವಾದ ಮತ್ತು ಸಂಕುಚಿತ ದೃಷ್ಟಿಯಾಧಾರಿತ ಅಭಿವೃದ್ಧಿಯ ಪರಿಕಲ್ಪನೆಯನ್ನು ಕೇಂದ್ರವಾಗಿರಿಸಿಕೊಂಡ ಭೌತಿಕವಾದ ಮತ್ತು ಉಪಭೋಗವಾದಿ ನೀತಿಯು ವಿಶ್ವದಾದ್ಯಂತ ಪ್ರಚಲಿತವಾಗಿರುವುದರ ದುಷ್ಪರಿಣಾಮಗಳು ಹೆಚ್ಚುತ್ತಿರುವುದು ಈಗ ಎಲ್ಲೆಡೆ ಗೋಚರವಾಗುತ್ತಿವೆ. ಈ ನೀತಿಯ ಕಾರಣದಿಂದಲೇ ಭಾರತದಲ್ಲಿ ಅನಿಯಮಿತ ಮತ್ತು ಅನಿರೀಕ್ಷಿತ ಮಳೆ, ಭೂಕಂಪನ, ಹಿಮನದಿಗಳ ಒಣಗುವಿಕೆ ಮುಂತಾದ ಪರಿಣಾಮಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ತೀವ್ರವಾಗಿವೆ. ನೈಋತ್ಯ ಏಷ್ಯಾ ಭೂಭಾಗದ ಸಂಪೂರ್ಣ ಜಲಮೂಲವು ಹಿಮಾಲಯವೇ ಆಗಿದೆ. ಹಿಮಾಲಯ ಪ್ರದೇಶದಲ್ಲಿ ಇತ್ತೀಚೆಗೆ ದುರ್ಘಟನೆಗಳು ಸಂಭವಿಸುತ್ತಿರುವುದು ಭಾರತ ಹಾಗೂ ನೈಋತ್ಯ ಏಷ್ಯಾದ ಇನ್ನಿತರೆ ದೇಶಗಳಿಗೆ ಎಚ್ಚರಿಕೆಯ ಘಂಟೆ ಎಂದೇ ಭಾವಿಸಬೇಕಾಗಿದೆ. ಕಳೆದ ವರ್ಷಗಳಲ್ಲಿ ನಮ್ಮ ನೆರೆಹೊರೆ ದೇಶಗಳಲ್ಲಿ ಅನೇಕ ಏರಿಳಿತಗಳು ಸಂಭವಿಸಿವೆ. ಶ್ರೀಲಂಕಾದಲ್ಲಿ, ಬಾಂಗ್ಲಾದೇಶದಲ್ಲಿ ಹಾಗೂ ಇತ್ತೀಚೆಗಷ್ಟೇ ನೇಪಾಳದಲ್ಲಿ ನಡೆದ ಜನಾಕ್ರೋಶದ ಹಿಂಸಾತ್ಮಕ ರೂಪ ಮತ್ತು ಆಡಳಿತ ಪರಿವರ್ತನೆ ನಡೆದ ರೀತಿಯು ನಾವು ಚಿಂತಿಸಬೇಕಾದ ವಿಚಾರಗಳಾಗಿವೆ. ಭಾರತದಲ್ಲಿಯೂ ಇಂತಹ ಘಟನೆಗಳು ನಡೆಯಬೇಕು ಎಂಬ ಶಕ್ತಿಗಳು ನಮ್ಮ ದೇಶದೊಳಗೆ ಹಾಗೂ ವಿದೇಶಗಳಲ್ಲಿಯೂ ಸಕ್ರಿಯವಾಗಿವೆ. ಸಮಾಜದೊಂದಿಗೆ ಆಡಳಿತವು ಸಂಬಂಧವನ್ನು ಕಡಿದುಕೊಂಡಿರುವುದು, ಚುರುಕು ಮತ್ತು ಲೋಕಹಿತದ ಆಡಳಿತ ಕಾರ್ಯಗಳ ಕೊರತೆಯು ಈ ರೀತಿಯ ಅಸಂತೋಷಗಳ ಉಲ್ಬಣಕ್ಕೆ ಸ್ವಾಭಾವಿಕ ಹಾಗೂ ತತ್ಕಾಲೀನ ಕಾರಣಗಳಾಗಿರುತ್ತವೆ. ಆದರೆ ಹಿಂಸಾತ್ಮಕ ಅಭಿವ್ಯಕ್ತಿಯು ನಿರೀಕ್ಷಿತ ಪರಿವರ್ತನೆ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಪ್ರಜಾತಾಂತ್ರಿಕ ಮಾರ್ಗಗಳ ಮೂಲಕವಷ್ಟೇ ಸಮಾಜವು ಆಮೂಲಾಗ್ರ ಪರಿವರ್ತನೆಯನ್ನು ತರಬಲ್ಲದು. ಇಲ್ಲದಿದ್ದರೆ ಇಂತಹ ಹಿಂಸಾತ್ಮಕ ಸಂದರ್ಭಗಳಲ್ಲಿ ವಿಶ್ವದ ಪ್ರಭಾವಿ ಶಕ್ತಿಗಳು ಸ್ವಹಿತವನ್ನು ಸಾಧಿಸಿಕೊಳ್ಳುವ ಅವಕಾಶವನ್ನು ನೀಡಿದಂತಾಗುತ್ತದೆ. ಈ ನೆರೆಯ ದೇಶಗಳು ಸಾಂಸ್ಕೃತಿಕ ದೃಷ್ಟಿಯಿಂದ ಹಾಗೂ ನಾಗರಿಕರ ದಿನನಿತ್ಯದ ಸಂಬಂಧಗಳ ದೃಷ್ಟಿಯಿಂದಲೂ ಭಾರತದೊಂದಿಗೆ ಬೆಸೆದುಕೊಂಡಿವೆ. ಒಂದು ರೀತಿಯಲ್ಲಿ ಈ ನೆರೆಯ ದೇಶಗಳು ನಮ್ಮದೇ ಪರಿವಾರ. ಅಲ್ಲೆಲ್ಲ ಶಾಂತಿ ನೆಲೆಸಲಿ, ಸ್ಥಿರತೆ ಬರಲಿ ಹಾಗೂ ಅಭಿವೃದ್ಧಿಯಾಗಲಿ, ಸುಖ ಮತ್ತು ಸಮೃದ್ಧಿಯಾಗಲಿ ಎನ್ನುವುದು ನಮ್ಮ ಹಿತದೃಷ್ಟಿಯನ್ನೂ ಮೀರಿ ಎಲ್ಲರಲ್ಲೂ ಆತ್ಮೀಯತೆಯನ್ನು ಕಾಣುವ ನಮ್ಮ ಸ್ವಾಭಾವಿಕ ಅವಶ್ಯಕತೆಯಾಗಿದೆ. ಜಗತ್ತಿನಾದ್ಯಂತ ಜ್ಞಾನ-ವಿಜ್ಞಾನದ ಪ್ರಗತಿ, ಮಾನವ ಜೀವನದ ಹಲವು ಅಂಶಗಳನ್ನು ಹೆಚ್ಚು ಅನುಕೂಲಕರವಾಗಿಸುವ ತಂತ್ರಜ್ಞಾನದ ಸಾಮರ್ಥ್ಯ ಹಾಗೂ ಸಂವಹನ ಮತ್ತು ಜಾಗತಿಕ ವ್ಯಾಪಾರದಿಂದಾಗಿ ದೇಶಗಳ ನಡುವೆ ಹೆಚ್ಚುತ್ತಿರುವ ಸಂಬಂಧವು ಸಕಾರಾತ್ಮಕ ಚಿತ್ರಣವನ್ನು ನೀಡುತ್ತಿದೆ. ಆದರೂ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ವೇಗ ಮತ್ತು ಮಾನವ ಇವುಗಳಿಗೆ ಹೊಂದಿಕೊಳ್ಳುವ ವೇಗದ ನಡುವೆ ಗಣನೀಯ ವ್ಯತ್ಯಾಸವಿದೆ. ಇದರಿಂದಾಗಿ, ಸಾಮಾನ್ಯ ಜನರ ಜೀವನದಲ್ಲಿ ಹಲವಾರು ಸಮಸ್ಯೆಗಳು ಉತ್ಪತ್ತಿಯಾಗುವುದು ಗೋಚರಿಸುತ್ತಿದೆ. ಅದೇ ರೀತಿ, ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳ ಸಹಿತ ಇತರ ದೊಡ್ಡ ಮತ್ತು ಸಣ್ಣ ಸಂಘರ್ಷಗಳು, ಪರಿಸರ ಹಾನಿಯಿಂದಾಗಿ ಪ್ರಕೃತಿಯ ವಿಕೋಪ, ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳು ದುರ್ಬಲಗೊಳ್ಳುತ್ತಿರುವುದು ಮತ್ತು ನಾಗರಿಕ ಜೀವನದಲ್ಲಿ ಹೆಚ್ಚಾಗುತ್ತಿರುವ ಅನಾಚಾರ ಮತ್ತು ಅತ್ಯಾಚಾರದಂತಹ ಸಮಸ್ಯೆಗಳೂ ಜೊತೆಗೆ ಹೆಚ್ಚಾಗುವುದು ಕಂಡುಬರುತ್ತಿವೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಲಾಗಿದೆಯಾದರೂ ಪರಿಸ್ಥಿತಿಯು ಹದಗೆಡುವುದನ್ನು ತಡೆಯಲು ಅಥವಾ ಸಮಗ್ರ ಪರಿಹಾರವನ್ನು ಒದಗಿಸಲು ಅವು ವಿಫಲವಾಗಿವೆ. ಸಂಸ್ಕೃತಿ, ಶ್ರದ್ಧೆ, ಪರಂಪರೆಗಳ ಸಂಪೂರ್ಣ ವಿನಾಶವೇ ಈ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವೆಂದು ನಂಬುವ ವಿಕೃತ ಮತ್ತು ವಿಪರೀತ ವಿಚಾರ ಹೊಂದಿದ ಶಕ್ತಿಗಳಿಂದಾಗಿ ಎಲ್ಲಾ ದೇಶಗಳೂ ಅಪಾಯವನ್ನು ಎದುರಿಸುತ್ತಿವೆ. ಮಾನವೀಯತೆಯ ಮೇಲೆ ಪರಿಣಾಮ ಬೀರುವ ಸಾಮಾಜಿಕ ಅನಿಷ್ಟಗಳು, ಸಂಘರ್ಷ ಮತ್ತು ಹಿಂಸೆಯನ್ನು ಈ ಶಕ್ತಿಗಳು ಉಲ್ಬಣಗೊಳಿಸುತ್ತವೆ. ಭಾರತದಲ್ಲಿಯೂ ಈ ಎಲ್ಲಾ ಸನ್ನಿವೇಶಗಳನ್ನು ನಾವು ವಿವಿಧ ರೀತಿಯಲ್ಲಿ ಅನುಭವಿಸುತ್ತಿದ್ದೇವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತೀಯ ದೃಷ್ಟಿಕೋನದ ಚಿಂತನೆಗಳ ಕುರಿತು ಇದೀಗ ಜಗತ್ತು ಕುತೂಹಲದಿಂದ ನಮ್ಮತ್ತ ನೋಡುತ್ತಿದೆ. ದೇಶಾದ್ಯಂತ, ವಿಶೇಷವಾಗಿ ಯುವ ಪೀಳಿಗೆಯಲ್ಲಿ, ದೇಶಭಕ್ತಿಯ ಭಾವನೆ ಹಾಗೂ ಸಂಸ್ಕೃತಿ ಕುರಿತ ನಂಬಿಕೆ ಮತ್ತು ವಿಶ್ವಾಸ ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ನಮ್ಮ ಭರವಸೆಯನ್ನು ಬಲಪಡಿಸುವ ಸಂಗತಿಯಾಗಿದೆ. ಸಂಘದ ಸ್ವಯಂಸೇವಕರ ಜೊತೆಗೆ, ಸಮಾಜದ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು, ಹಾಗೆಯೇ ವ್ಯಕ್ತಿಗಳು, ಸಮಾಜದ ಅಭಾವಗ್ರಸ್ತ ವರ್ಗಗಳಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಮುಂದೆ ಬರುತ್ತಿದ್ದಾರೆ. ಇದರ ಫಲಸ್ವರೂಪವಾಗಿ ಸಮಾಜವು ಸಕ್ಷಮಗೊಂಡು, ತನ್ನದೇ ಉಪಕ್ರಮಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಅಗತ್ಯತೆಗಳನ್ನು ಪೂರೈಸುವ ಸಮಾಜದ ಚೈತನ್ಯ ಹೆಚ್ಚಾಗಿದೆ. ಸಂಘದ ಚಟುವಟಿಕೆಗಳು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಬಯಕೆಯು ಸಮಾಜದಲ್ಲಿ ಹೆಚ್ಚುತ್ತಿರುವುದು ಸ್ವಯಂಸೇವಕರ ಗಮನಕ್ಕೆ ಬರುತ್ತಿದೆ. ಪ್ರಸಕ್ತ ಜಾಗತಿಕ ಮಾದರಿಗಳಿಗಿಂತಲೂ ನಮ್ಮ ದೇಶದ ವೈಶ್ವಿಕ ಜೀವನದೃಷ್ಟಿ ಹಾಗೂ ಪ್ರಕೃತಿಕೇಂದ್ರಿತ ಅಭಿವೃದ್ಧಿ ಮತ್ತು ಸಾರ್ವಜನಿಕ ಆಡಳಿತದ ಕುರಿತು ನಮ್ಮ ಸ್ವತಂತ್ರವಾದ ಅಥವಾ ಇತರ ರೀತಿಯ ಮಾದರಿಗಳನ್ನು ಅನ್ವೇಷಿಸುವ ಬಗ್ಗೆ ಬುದ್ಧಿಜೀವಿಗಳ ವಲಯದಲ್ಲಿ ಚಿಂತನೆಗಳು ಹೆಚ್ಚುತ್ತಿವೆ. ಭಾರತೀಯ ಚಿಂತನದೃಷ್ಟಿ ಸ್ವಾಮಿ ವಿವೇಕಾನಂದರಿಂದ ಹಿಡಿದು ಮಹಾತ್ಮಾ ಗಾಂಧಿ, ದೀನದಯಾಳ್ ಉಪಾಧ್ಯಾಯ, ರಾಮ ಮನೋಹರ್ ಲೋಹಿಯಾ ಅವರುಗಳವರೆಗೆ ಭಾರತ ಮತ್ತು ಜಗತ್ತನ್ನು ಭಾರತೀಯ ದೃಷ್ಟಿಕೋನ ಆಧರಿಸಿ ನಮ್ಮ ಎಲ್ಲಾ ಆಧುನಿಕ ಚಿಂತಕರು ಮತ್ತು ನಮ್ಮ ಸಮಾಜವನ್ನು ಮುನ್ನಡೆಸಿದ ಎಲ್ಲಾ ಮಹಾಪುರುಷರು ಮೇಲಿನ ಸಮಸ್ಯೆಗಳ ಕುರಿತು ಪರಾಮರ್ಶೆ ಮಾಡುತ್ತಾ ಒಂದು ಸಮಾನ ದಿಶಾದರ್ಶನ ಮಾಡಿದ್ದರು. ಆಧುನಿಕ ಜಗತ್ತಿನ ಜೀವನದ ದೃಷ್ಟಿಕೋನವು ಸಂಪೂರ್ಣವಾಗಿ ತಪ್ಪಲ್ಲ, ಆದರೆ ಅದು ಅಪೂರ್ಣವಾದದ್ದು. ಆದ್ದರಿಂದ, ಮಾನವನ ಭೌತಿಕ ಅಭಿವೃದ್ಧಿಯು ಕೆಲವು ದೇಶಗಳು ಮತ್ತು ವರ್ಗಗಳಿಗೆ ಉಪಕಾರಿಯಾಗಿದೆ ಎನ್ನುವಂತೆ ತೋರುತ್ತದೆ, ಆದರೆ ಎಲ್ಲರಿಗೂ ಅಲ್ಲ. ಕೆಲವು ಸಂಶೋಧಕರು ಹೇಳುವಂತೆ ಭಾರತವು ಅಮೇರಿಕಾದಂತೆ ಸಮೃದ್ಧ ಮತ್ತು ಸಂಪೂರ್ಣ ಭೌತಿಕ ಜೀವನವನ್ನು ನಡೆಸಬೇಕಾದರೆ, ಇನ್ನೂ ಐದು ಭೂಮಿಗಳಷ್ಟು ಸಂಪನ್ಮೂಲಗಳು ಬೇಕಾಗುತ್ತವೆ. ಪ್ರಸ್ತುತ ನೀತಿಯಿಂದಾಗಿ ಭೌತಿಕ ಅಭಿವೃದ್ಧಿಯ ಜೊತೆಜೊತೆಗೆ ಮಾನವನ ಮಾನಸಿಕ ಮತ್ತು ನೈತಿಕ ಬೆಳವಣಿಗೆಗಳು ಆಗಿಲ್ಲ. ಆದ್ದರಿಂದ, ಅಭಿವೃದ್ಧಿಯ ಜೊತೆಜೊತೆಗೇ ಹೊಸಹೊಸ ಸಮಸ್ಯೆಗಳು ಹೊರಹೊಮ್ಮುತ್ತಿವೆ, ಇದು ಮಾನವೀಯತೆ ಮತ್ತು ವಿಶ್ವಕ್ಕೆ ಮಾರಣಾಂತಿಕ ಅಪಾಯಗಳನ್ನು ಒಡ್ಡುತ್ತಿದೆ. ಇದಕ್ಕೆ ಕಾರಣವೇ ದೃಷ್ಟಿಯ ಅಪೂರ್ಣತೆ! ನಮ್ಮ ಸನಾತನ, ಆಧ್ಯಾತ್ಮಿಕ, ಸಮಗ್ರ ಮತ್ತು ಏಕಾತ್ಮ ದೃಷ್ಟಿಕೋನವು ಮಾನವನ ಭೌತಿಕ ಬೆಳವಣಿಗೆಯ ಜೊತೆಜೊತೆಗೆ ಮನಸ್ಸು, ಬುದ್ಧಿ ಮತ್ತು ಆಧ್ಯಾತ್ಮಿಕತೆಯ ವಿಕಾಸವನ್ನು, ವ್ಯಕ್ತಿಯ ಜೊತೆಜೊತೆಗೆ ಮಾನವ ಸಮೂಹ ಮತ್ತು ಸೃಷ್ಟಿಯ ವಿಕಾಸ, ಮನುಷ್ಯನ ಅಗತ್ಯಗಳು ಮತ್ತು ಆಸೆಗಳಿಗೆ ಅನುಗುಣವಾಗಿ ಆರ್ಥಿಕ ಸ್ಥಿತಿಯ ಜೊತೆಜೊತೆಗೆ ಸಮಾಜ ಮತ್ತು ಸೃಷ್ಟಿಯ ಕುರಿತು ಕರ್ತವ್ಯಪ್ರಜ್ಞೆಯ ಜಾಗೃತಿ, ಎಲ್ಲದರಲ್ಲೂ ನಮ್ಮತನದ ಭಾವನೆಯನ್ನು ಅನುಭವಿಸುವ ಸ್ವಭಾವವನ್ನು ವಿಕಸಿತಗೊಳಿಸುವ ಶಕ್ತಿಯನ್ನು ಹೊಂದಿದೆ. ಏಕೆಂದರೆ ಎಲ್ಲರನ್ನೂ ಜೋಡಿಸುವ ತತ್ತ್ವವನ್ನು ಅರಿತುಕೊಂಡಿದ್ದೇವೆ. ಇದರ ಆಧಾರದ ಮೇಲೆಯೇ ಸಾವಿರಾರು ವರ್ಷಗಳಿಂದ ಈ ಜಗತ್ತಿನಲ್ಲಿ ಸುಂದರವಾದ, ಪರಸ್ಪರ ಸಂಬಂಧಗಳನ್ನು ಗೌರವಿಸುವ, ಮನುಷ್ಯ ಹಾಗೂ ಸೃಷ್ಟಿಯ ಸಹಯೋಗಿ ಜೀವನವನ್ನು ನಡೆಸುವ ಸಮೃದ್ಧ ಮತ್ತು ಶಾಂತಿಯುತ ಜೀವನವನ್ನು ಸ್ಥಾಪಿಸಿದ ಅನುಭವವನ್ನು ಹೊಂದಿದ್ದೇವೆ. ಈ ಸಮಗ್ರ ಮತ್ತು ಏಕಾತ್ಮ ದೃಷ್ಟಿಕೋನದ ಆಧಾರದ ಮೇಲೆ, ವಿಶ್ವದ ಇಂದಿನ ಅಗತ್ಯಗಳನ್ನು ಪೂರೈಸುವ ಜೊತೆಜೊತೆಗೇ ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸುವ ಹೊಸ ವ್ಯವಸ್ಥೆಯ ಅಗತ್ಯವಿದೆ. ನಮ್ಮ ಉದಾಹರಣೆಗಳ ಮೂಲಕ ವಿಶ್ವಕ್ಕೆ ಆ ಹೊಸ ವ್ಯವಸ್ಥೆಯ ಅನುಕರಣೀಯ ಮಾದರಿಯನ್ನು ಒದಗಿಸುವ ಕಾರ್ಯವನ್ನು ಭಾರತೀಯರು ಮಾಡಬೇಕೆಂಬುದು ವಿಧಿಯ ಅಪೇಕ್ಷೆಯಾಗಿದೆ.. ಸಂಘದ ಚಿಂತನೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಕಾರ್ಯದ 100 ವರ್ಷಗಳನ್ನು ಪೂರೈಸಿದೆ. ಸಂಘದಲ್ಲಿ ವಿಚಾರ ಮತ್ತು ಸಂಸ್ಕಾರಗಳನ್ನು ಮೈಗೂಡಿಸಿಕೊಂಡ ಸ್ವಯಂಸೇವಕರು ಸಾಮಾಜಿಕ ಜೀವನದ ವಿಭಿನ್ನ ಆಯಾಮಗಳಲ್ಲಿ, ವಿವಿಧ ಸಂಘಟನೆಗಳಲ್ಲಿ, ಸಂಸ್ಥೆಗಳಲ್ಲಿ ಹಾಗೂ ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿರುವ ಅನೇಕ ಸಜ್ಜನರ ಜೊತೆಗೆ ಸ್ವಯಂಸೇವಕರ ಸಹಕಾರ ಮತ್ತು ಮಾತುಕತೆ ನಡೆಯುತ್ತಿರುತ್ತವೆ. ಅವುಗಳ ಸಂಕಲಿತ ಅನುಭವಗಳ ಆಧಾರದಲ್ಲಿ ಸಂಘವು ಕೆಲವು ಅವಲೋಕನ ಮತ್ತು ನಿಷ್ಕರ್ಷೆಗಳನ್ನು ಹೊಂದಿದೆ. 1) ಭಾರತದ ಪ್ರಗತಿಯ ಪ್ರಕ್ರಿಯೆಯು ವೇಗವನ್ನು ಪಡೆಯುತ್ತಿದೆ. ಆದರೂ ನಾವು ಇನ್ನೂ ಅದೇ ಅಪೂರ್ಣ ನೀತಿಗಳು ಮತ್ತು ವ್ಯವಸ್ಥೆಗಳ ಮಿತಿಯೊಳಗೆ ಯೋಚಿಸುತ್ತಿದ್ದೇವೆ, ಅದರ ಅಪೂರ್ಣತೆಯು ಇಂದು ನಾವು ನೋಡುತ್ತಿರುವ ಫಲಿತಾಂಶಗಳಿಂದ ಬಟಾಬಯಲಾಗಿದೆ. ಈಗಾಗಲೇ ಅದೇ ನೀತಿಗಳ ಆಧಾರದಲ್ಲಿ ವಿಶ್ವದೊಂದಿಗೆ ನಾವು ಸಾಕಷ್ಟು ಮುಂದೆ ಬಂದುಬಿಟ್ಟಿದ್ದೇವೆ, ದಿಢೀರನೆ ಅದನ್ನು ಬದಲಿಸಲು ಸಾಧ್ಯವಿಲ್ಲ. ನಾವು ಒಂದು ದೀರ್ಘವೃತ್ತದ ಮೂಲಕ ನಿಧಾನವಾಗಿ ತಿರುಗಬೇಕಾಗುತ್ತದೆ. ನಮ್ಮದೂ ಸೇರಿದಂತೆ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಭವಿಷ್ಯದ ಅಪಾಯಗಳನ್ನು ತಪ್ಪಿಸಲು ಇದನ್ನು ಹೊರತುಪಡಿಸಿ ಅನ್ಯ ಮಾರ್ಗವಿಲ್ಲ. ನಮ್ಮ ಸಮಗ್ರ ಮತ್ತು ಏಕಾತ್ಮ ದೃಷ್ಟಿಕೋನವನ್ನು ಆಧರಿಸಿ ನಮ್ಮದೇ ಆದ ಅಭಿವೃದ್ಧಿಯ ಮಾರ್ಗವನ್ನು ರೂಪಿಸುವ ಮೂಲಕ ಜಗತ್ತಿಗೆ ಉತ್ತಮ ಮಾದರಿಯನ್ನು ಪ್ರಸ್ತುತಪಡಿಸಬೇಕು. ಅರ್ಥ ಮತ್ತು ಕಾಮದ ಅಂಧಾನುಕರಣೆ ಮಾಡುತ್ತಿರುವ ಜಗತ್ತಿಗೆ ಪೂಜಾಪದ್ಧತಿಗಳನ್ನು ಮೀರಿದ, ಎಲ್ಲರನ್ನೂ ಒಂದುಗೂಡಿಸುವ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮತ್ತು ಎಲ್ಲರ ಪ್ರಗತಿಯನ್ನು ಏಕಕಾಲದಲ್ಲಿ ಸಾಧ್ಯವಾಗಿಸುವ ಧರ್ಮದ ಮಾರ್ಗವನ್ನು ತೋರಿಸಬೇಕಿದೆ. 2) ಸಂಪೂರ್ಣ ದೇಶವು ಅಂತಹ ಆದರ್ಶ ಚಿತ್ರಣವನ್ನು ಜಗತ್ತಿಗೆ ಪ್ರಸ್ತುತಪಡಿಸುವ ಕಾರ್ಯವು ಕೇವಲ ದೇಶದ ಆಡಳಿತ ವ್ಯವಸ್ಥೆಗೆ ಮಾತ್ರ ಸೀಮಿತವಾಗಿಲ್ಲ, ಏಕೆಂದರೆ ಆಡಳಿತ ವ್ಯವಸ್ಥೆಗಳು ಪರಿವರ್ತನೆ ಕುರಿತು ಸೀಮಿತ ಇಚ್ಛೆ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ಪರಿವರ್ತನೆಗೆ ಪ್ರೇರಣೆ ಮತ್ತು ನಿಯಂತ್ರಣವು ಸಮಾಜದ ಬಲವಾದ ಇಚ್ಛಾಶಕ್ತಿಯನ್ನು ಆಧರಿಸಿದೆ. ಆದ್ದರಿಂದ ವ್ಯವಸ್ಥೆಯ ಪರಿವರ್ತನೆಗಾಗಿ ಸಮಾಜದ ಜಾಗೃತಿ ಮತ್ತು ಅದರ ನಡವಳಿಕೆಯ ಬದಲಾವಣೆಯು ವ್ಯವಸ್ಥಾಪರಿವರ್ತನೆಯ ಪೂರ್ವಷರತ್ತುಗಳಾಗಿವೆ. ಸಾಮಾಜಿಕ ನಡವಳಿಕೆಯಲ್ಲಿ ಬದಲಾವಣೆಯು ಭಾಷಣಗಳು ಅಥವಾ ಪುಸ್ತಕಗಳಿಂದ ಮಾತ್ರ ಬರಲು ಸಾಧ್ಯವಿಲ್ಲ. ಸಮಾಜಕ್ಕೆ ವ್ಯಾಪಕ ಜಾಗೃತಿಯ ಅಗತ್ಯವಿದೆ ಮತ್ತು ಆ ಜಾಗೃತಿಯನ್ನು ಉಂಟುಮಾಡುವವರು ಸ್ವತಃ ಬದಲಾವಣೆಯ ಮಾದರಿಗಳಾಗಬೇಕು. ತಮ್ಮ ಜೀವನದಲ್ಲಿ ಪಾರದರ್ಶಕತೆ ಮತ್ತು ನಿಸ್ವಾರ್ಥತೆಯನ್ನು ಅನುಭಾವಿಸಿಕೊಂಡಿರುವ ಮತ್ತು ಸಮಾಜದೊಂದಿಗಿನ ದೈನಂದಿನ ಸಂವಹನದಲ್ಲಿ ಇಡೀ ಸಮಾಜವನ್ನು ತಮ್ಮದೇ ಎಂದು ಭಾವಿಸುವ, ತನ್ನದೇ ಆದ ಅನುಕರಣೀಯ ವ್ಯಕ್ತಿಗಳನ್ನು ಸಮಾಜವು ಎಲ್ಲಾ ಸ್ಥಾನಗಳಲ್ಲಿ ಹೊಂದಿರಬೇಕು. ಸಮಾಜದಲ್ಲಿ ಪ್ರತಿಯೊಬ್ಬರ ಜೊತೆಗಿರುತ್ತಾ ತಮ್ಮ ಮಾದರಿಯಿಂದ ಸಮಾಜಕ್ಕೆ ಪ್ರೇರಣೆ ನೀಡುವ ಸ್ಥಾನೀಯ ಸಾಮಾಜಿಕ ನಾಯಕತ್ವ ನಮಗೆ ಬೇಕು. ಆದ್ದರಿಂದ, ವ್ಯಕ್ತಿ ನಿರ್ಮಾಣದಿಂದ ಸಾಮಾಜಿಕ ಪರಿವರ್ತನೆ ಮತ್ತು ಸಾಮಾಜಿಕ ಪರಿವರ್ತನೆಯ ಮೂಲಕ ವ್ಯವಸ್ಥಾ ಪರಿವರ್ತನೆಯು ದೇಶ ಮತ್ತು ವಿಶ್ವದಲ್ಲಿ ಬದಲಾವಣೆಯನ್ನು ತರುವ ನಿಜವಾದ ಮಾರ್ಗಗಳು ಎನ್ನುವುದು ಸ್ವಯಂಸೇವಕರ ಅನುಭವವಾಗಿದೆ. 3) ಅಂತಹ ವ್ಯಕ್ತಿಗಳನ್ನು ರೂಪಿಸುವ ವ್ಯವಸ್ಥೆಗಳು ಅನೇಕ ಸಮಾಜಗಳಲ್ಲಿ ಸಕ್ರಿಯವಾಗಿರುತ್ತವೆ. ಆದರೆ ದೀರ್ಘಕಾಲದ ಆಕ್ರಮಣದ ಸಮಯದಲ್ಲಿ ನಮ್ಮ ಸಮಾಜದಲ್ಲಿ ಈ ವ್ಯವಸ್ಥೆಗಳು ನಾಶಹೊಂದಿದವು. ಆದ್ದರಿಂದ ಮನೆ, ಶಿಕ್ಷಣ ವ್ಯವಸ್ಥೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಯುಗಾನುಕೂಲ ವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕಾಗುತ್ತದೆ. ಈ ಕೆಲಸವನ್ನು ಮಾಡಬಲ್ಲ ವ್ಯಕ್ತಿಗಳನ್ನು ಸಿದ್ಧಗೊಳಿಸಬೇಕಾಗಿದೆ. ಈ ಕಲ್ಪನೆಯನ್ನು ಮನಸ್ಸು ಮತ್ತು ಬುದ್ಧಿಯಲ್ಲಿ ಸ್ವೀಕರಿಸಿದ ನಂತರವೂ, ಅವುಗಳನ್ನು ಆಚರಣೆಗೆ ತರಲು ಮನಸ್ಸು, ಮಾತು ಮತ್ತು ಕ್ರಿಯೆಗಳಲ್ಲಿನ ಅಭ್ಯಾಸಗಳನ್ನು ಬದಲಾಯಿಸಬೇಕು; ಇದಕ್ಕಾಗಿ ಒಂದು ವ್ಯವಸ್ಥೆಯ ಅಗತ್ಯವಿರುತ್ತದೆ. ಸಂಘದ ಶಾಖೆಯು ಅಂತಹದ್ದೇ ಒಂದು ವ್ಯವಸ್ಥೆ. ನೂರು ವರ್ಷಗಳಿಂದ ಈ ವ್ಯವಸ್ಥೆಯನ್ನು ಎಲ್ಲಾ ರೀತಿಯ ಪರಿಸ್ಥಿತಿಗಳ ನಡುವೆಯೂ ಸಂಘದ ಸ್ವಯಂಸೇವಕರು ಆಗ್ರಹಪೂರ್ವಕವಾಗಿ ನಿರ್ವಹಿಸಿದ್ದಾರೆ ಮತ್ತು ಮುಂದೆಯೂ ಇದೇ ರೀತಿ ಅದನ್ನು ಮುಂದುವರಿಸಬೇಕಾಗಿದೆ. ಆದ್ದರಿಂದ, ಸ್ವಯಂಸೇವಕರು ದೈನಂದಿನ ಶಾಖೆಯ ಕಾರ್ಯಕ್ರಮಗಳಲ್ಲಿ ಶ್ರದ್ಧೆಯಿಂದ ಭಾಗವಹಿಸುತ್ತಾ ಅವರ ಸ್ವಭಾವಗಳನ್ನು ಬದಲಾಯಿಸುವ ಸಾಧನೆಯನ್ನು ಮಾಡಬೇಕಾಗುತ್ತದೆ. ವೈಯಕ್ತಿಕ ಸದ್ಗುಣಗಳು ಮತ್ತು ಸಾಮೂಹಿಕತೆಯನ್ನು ವೃದ್ಧಿಸುತ್ತಲೇ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮತ್ತು ಸಹಕರಿಸುವ ಮೂಲಕ ಸಮಾಜದಲ್ಲಿ ಸದ್ಗುಣಗಳ ಮತ್ತು ಸಾಮೂಹಿಕತೆಯ ವಾತಾವರಣವನ್ನು ನಿರ್ಮಿಸುವ ಸಲುವಾಗಿಯೇ ಸಂಘದ ಶಾಖೆಯು ಅಸ್ತಿತ್ವದಲ್ಲಿದೆ. 4) ಯಾವುದೇ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಅಂಶವೆಂದರೆ ಅಲ್ಲಿನ ಸಮಾಜದ ಏಕತೆ. ನಮ್ಮ ದೇಶವು ವಿವಿಧತೆಯ ದೇಶವಾಗಿದೆ. ವೈವಿಧ್ಯಮಯ ಭೌಗೋಳಿಕತೆಯಿಂದಾಗಿ ಹಲವು ಭಾಷೆಗಳು, ಹಲವು ಪಂಥಗಳು ಮತ್ತು ಜೀವನಶೈಲಿಗಳು, ವಿಭಿನ್ನ ರೀತಿಯ ಆಹಾರ-ವಿಹಾರ, ಜಾತಿಗಳು ಮತ್ತು ಉಪಜಾತಿಗಳು ಮೊದಲಾದ ವಿವಿಧತೆಗಳು ಈಗಾಗಲೇ ಇವೆ. ಕಳೆದ ಸಾವಿರ ವರ್ಷಗಳಲ್ಲಿ, ಕೆಲವು ವಿದೇಶಿ ಪಂಥಗಳು ಭಾರತಕ್ಕೆ ಗಡಿಯ ಹೊರಗಿನ ದೇಶಗಳಿಂದ ಬಂದಿವೆ. ವಿದೇಶಿಯರು ಈಗ ನಿರ್ಗಮಿಸಿದ್ದರೂ, ಆ ಪಂಥಗಳನ್ನು ಸ್ವೀಕರಿಸಿ ವಿವಿಧ ಕಾರಣಗಳಿಗಾಗಿ ಅವುಗಳನ್ನು ಅನುಸರಿಸುತ್ತಿರುವ ನಮ್ಮ ಬಂಧುಗಳು ಭಾರತದಲ್ಲಿ ಅಸ್ತಿತ್ವದಲ್ಲಿದ್ದಾರೆ. ಭಾರತೀಯ ಪರಂಪರೆಯು ಇವರೆಲ್ಲರನ್ನೂ ಸ್ವಾಗತಿಸಿದೆ ಮತ್ತು ಸ್ವೀಕರಿಸಿದೆ. ನಾವು ಅವುಗಳನ್ನು ಪ್ರತ್ಯೇಕ ಎನ್ನುವ ದೃಷ್ಟಿಯಿಂದ ನೋಡುವುದಿಲ್ಲ. ನಮ್ಮ ವಿವಿಧತೆಯನ್ನು ನಮ್ಮದೇ ಆದ ಅನನ್ಯತೆ ಎಂದು ಗುರುತಿಸುತ್ತೇವೆ ಮತ್ತು ನಮ್ಮ ವಿಶಿಷ್ಟತೆಯನ್ನು ಗೌರವಿಸುವ ಸ್ವಭಾವವನ್ನೂ ಅರಿತಿದ್ದೇವೆ. ಆದಾಗ್ಯೂ, ಈ ವಿಶಿಷ್ಟತೆಗಳು ವಿಭಜನೆಯ ಕಾರಣವಾಗಬಾರದು. ನಮ್ಮ ಎಲ್ಲಾ ವಿಶಿಷ್ಟತೆಯ ಹೊರತಾಗಿಯೂ, ನಾವೆಲ್ಲರೂ ಒಂದು ಬೃಹತ್ ಸಮಾಜದ ಭಾಗವಾಗಿದ್ದೇವೆ. ಸಮಾಜ, ದೇಶ, ಸಂಸ್ಕೃತಿ ಮತ್ತು ರಾಷ್ಟ್ರವಾಗಿ ನಾವೆಲ್ಲರೂ ಒಂದಾಗಿದ್ದೇವೆ. ಈ ದೊಡ್ಡ ಗುರುತು ನಮಗೆ ಎಲ್ಲಕ್ಕಿಂತಲೂ ಉನ್ನತವಾದದ್ದು ಎನ್ನುವುದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇದರ ಪರಿಣಾಮವಾಗಿ ಸಮಾಜದಲ್ಲಿ ಪರಸ್ಪರರೊಂದಿಗಿನ ಸಂವಹನವು ಸದ್ಭಾವನಾಪೂರ್ಣ ಮತ್ತು ಸಂಯಮಪೂರ್ಣವಾಗಿರಬೇಕು. ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆಗಳು, ಮಹಾಪುರುಷರು ಮತ್ತು ಪೂಜಾಸ್ಥಾನಗಳಿವೆ. ಮನಸ್ಸು, ಮಾತು ಅಥವಾ ಕ್ರಿಯೆಯಲ್ಲಿ ಇವುಗಳನ್ನು ಅಗೌರವಿಸದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿಯ ಅವಶ್ಯಕತೆಯಿದೆ. ಆದ್ದರಿಂದ, ನಿಯಮಗಳನ್ನು ಪಾಲಿಸುವುದು, ವ್ಯವಸ್ಥಾ ಪಾಲನೆ ಮತ್ತು ಸದ್ಭಾವದಿಂದ ವರ್ತಿಸುವುದು ನಮ್ಮ ಸ್ವಭಾವವಾಗಬೇಕು. ಸಣ್ಣ ಅಥವಾ ದೊಡ್ಡ ವಿಷಯಗಳಲ್ಲಿ ಅಥವಾ ನಮ್ಮ ಮನಸ್ಸಿನಲ್ಲಿರುವ ಅನುಮಾನಗಳಿಂದಾಗಿ ಕಾನೂನನ್ನು ನಮ್ಮ ಕೈಗೆತ್ತಿಕೊಳ್ಳುವುದು, ಗೂಂಡಾಗಿರಿ ಮತ್ತು ಹಿಂಸಾಚಾರಕ್ಕೆ ಇಳಿಯುವುದು ಒಳ್ಳೆಯ ಪ್ರವೃತ್ತಿಯಲ್ಲ. ಪೂರ್ವಗ್ರಹಗಳೊಂದಿಗೆ ಅಥವಾ ನಿರ್ದಿಷ್ಟ ಸಮುದಾಯವನ್ನು ಪ್ರಚೋದಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಗಳನ್ನು ಯೋಜಿತವಾಗಿ ಕೆಲವರು ಮಾಡಿಸುತ್ತಿದ್ದಾರೆ. ಅಂಥವರ ಬಲೆಗೆ ಬೀಳುವುದು ತಕ್ಷಣದ ಮತ್ತು ದೀರ್ಘಾವಧಿಯ – ಎರಡೂ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಪ್ರವೃತ್ತಿಗಳನ್ನು ನಿಗ್ರಹಿಸುವುದು ಅತ್ಯಗತ್ಯ. ಸರ್ಕಾರ ಮತ್ತು ಆಡಳಿತವು ತಮ್ಮ ಕೆಲಸವನ್ನು ಪಕ್ಷಪಾತವಿಲ್ಲದೆ ಮತ್ತು ಒತ್ತಡಕ್ಕೆ ಮಣಿಯದೆ, ನಿಯಮಗಳಿಗೆ ಅನುಸಾರವಾಗಿ ನಿರ್ವಹಿಸಬೇಕು. ಆದಾಗ್ಯೂ, ಸಮಾಜದ ಸಜ್ಜನಶಕ್ತಿ ಮತ್ತು ಯುವಪೀಳಿಗೆಯು ಸಹ ಜಾಗರೂಕರಾಗಿರಬೇಕು ಮತ್ತು ಸಂಘಟಿತರಾಗಿರಬೇಕು. ಅಗತ್ಯವಿರುವೆಡೆಯಲ್ಲಿ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸಬೇಕು. 5) ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಏಕತೆಯ ಆಧಾರವನ್ನು “Inherent cultural unity” (ಅಂತರ್ಗತ ಸಾಂಸ್ಕೃತಿಕ ಏಕತೆ) ಎಂದು ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದಲೂ ಹರಿದು ಬಂದಿರುವ ಭಾರತದ ವಿಶೇಷತೆಯಾಗಿದೆ. ಇದು ಸರ್ವಸಮಾವೇಶಕವಾಗಿದೆ. ಎಲ್ಲಾ ವಿವಿಧತೆಯನ್ನು ಗೌರವಿಸಲು ಮತ್ತು ಸ್ವೀಕರಿಸಲು ನಮಗೆ ಕಲಿಸುತ್ತಿದೆ. ಏಕೆಂದರೆ ಅದು ಭಾರತದ ಆಧ್ಯಾತ್ಮಿಕ ಸತ್ಯ ಮತ್ತು ಕರುಣೆ, ಶುದ್ಧತೆ ಮತ್ತು ತಪಸ್ಸಿನ ಸದ್ಗುಣಗಳ ಅಂದರೆ ಧರ್ಮದ ಮೇಲೆ ಆಧಾರಿತವಾಗಿದೆ. ಈ ರಾಷ್ಟ್ರದ ಪುತ್ರರೂಪಿ ಹಿಂದೂ ಸಮಾಜವು ಅನಾದಿಕಾಲದಿಂದಲೂ ಈ ಸಂಸ್ಕೃತಿಯನ್ನು ತಮ್ಮ ನಡವಳಿಕೆಯಲ್ಲಿ ಹೊಂದಿಸಿಕೊಂಡಿದೆ, ಆದ್ದರಿಂದಲೇ ಇದನ್ನು ಹಿಂದೂ ಸಂಸ್ಕೃತಿ ಎಂದೂ ಕರೆಯುತ್ತಾರೆ. ಪ್ರಾಚೀನ ಭಾರತದಲ್ಲಿ ಋಷಿಮುನಿಗಳು ತಮ್ಮ ತಪೋಬಲದಿಂದ ಹಿಂದೂ ಸಂಸ್ಕೃತಿಯನ್ನು ಬೆಳೆಸಿದರು. ಭಾರತದ ಸಮೃದ್ಧ ಮತ್ತು ಸುರಕ್ಷಿತ ವಾತಾವರಣವು ಇದನ್ನು ಸಾಧಿಸಲು ಅವರಿಗೆ ಅನುವು ಮಾಡಿಕೊಟ್ಟಿತು. ನಮ್ಮ ಪೂರ್ವಜರ ಕಠಿಣ ಪರಿಶ್ರಮ, ತ್ಯಾಗ ಮತ್ತು ಸಮರ್ಪಣೆಯಿಂದಾಗಿ ಈ ಸಂಸ್ಕೃತಿಯು ಅರಳಿ ಉಳಿದಿದೆ ಹಾಗೂ ಇಂದಿನವರೆಗೂ ತಲುಪಿದೆ. ಆ ನಮ್ಮ ಸಂಸ್ಕೃತಿಯ ಆಚರಣೆ, ಅದನ್ನು ಆದರ್ಶವನ್ನಾಗಿರಿಸಿಕೊಂಡ ನಮ್ಮ ಪೂರ್ವಜರ ಕುರಿತು ಮನಸ್ಸಿನಲ್ಲಿ ಗೌರವ ಮತ್ತು ಅವರ ವಿವೇಕಪೂರ್ಣ ಅನುಕರಣೆ ಹಾಗೂ ಇದೆಲ್ಲವನ್ನೂ ಸಾಧ್ಯವಾಗಿಸಿದ ನಮ್ಮ ಪವಿತ್ರ ಮಾತೃಭೂಮಿಯ ಮೇಲಿನ ಭಕ್ತಿ - ಇವೆಲ್ಲವೂ ಒಟ್ಟಾಗಿ ನಮ್ಮ ರಾಷ್ಟ್ರೀಯತೆಯನ್ನು ರೂಪಿಸಿವೆ. ವಿವಿಧತೆಯನ್ನು ಸಂಪೂರ್ಣವಾಗಿ ಸ್ವೀಕರಿಸಿ ಮತ್ತು ಗೌರವದೊಂದಿಗೆ ನಮ್ಮೆಲ್ಲರನ್ನೂ ಒಂದು ಸೂತ್ರದಲ್ಲಿ ಪೋಣಿಸುವ ಈ ಹಿಂದೂ ರಾಷ್ಟ್ರೀಯತೆಯು ನಮ್ಮನ್ನು ಒಟ್ಟಾಗಿರಿಸಿಕೊಂಡು ಬಂದಿದೆ. ನಮ್ಮದು ‘Nation State' ಪರಿಕಲ್ಪನೆ ಅಲ್ಲ. ಆಡಳಿತಗಳು ಹೊಸದಾಗಿ ಬರುತ್ತವೆ ಹೋಗುತ್ತವೆ, ಆದರೆ ರಾಷ್ಟ್ರ ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತದೆ. ನಮ್ಮೆಲ್ಲರ ಏಕತೆಯ ಈ ಆಧಾರವನ್ನು ನಾವು ಎಂದಿಗೂ ಮರೆಯಬಾರದು. 6) ಸಂಪೂರ್ಣ ಹಿಂದೂ ಸಮಾಮಾಜದ ಬಲಸಂಪನ್ನ, ಶೀಲಸಂಪನ್ನ ಮತ್ತು ಸಂಘಟಿತ ಸ್ವರೂಪವು ಈ ದೇಶದ ಏಕತೆ, ಏಕಾತ್ಮತೆ, ಅಭಿವೃದ್ಧಿ ಮತ್ತು ಸುರಕ್ಷತೆಯ ಗ್ಯಾರಂಟಿಯಾಗಿದೆ. ಹಿಂದೂ ಸಮಾಜವು ಈ ದೇಶದ ಜವಾಬ್ದಾರಿಯುತ ಸಮಾಜವಾಗಿದೆ ಮತ್ತು ಹಿಂದೂ ಸಮಾಜವು ಸರ್ವಸಮಾವೇಶಕವಾಗಿದೆ. ಮೇಲ್ನೋಟದಲ್ಲಿ ಕಾಣಸಿಗುವ ವಿವಿಧ ಹೆಸರುಗಳು ಮತ್ತು ರೂಪಗಳ ಆಧಾರದಲ್ಲಿ "ನಾವು ಮತ್ತು ಅವರು" ಎಂಬ ಪ್ರತ್ಯೇಕತಾಭಾವದಿಂದ ಮಾನವರಲ್ಲಿ ವಿಭಜನೆ ಮತ್ತು ಪ್ರತ್ಯೇಕತೆಯನ್ನು ಸೃಷ್ಟಿಸುವ ಮಾನಸಿಕತೆಯಿಂದ ಹಿಂದೂ ಸಮಾಜವು ಮುಕ್ತವಾಗಿದೆ ಹಾಗೂ ಮುಕ್ತವಾಗಿರಲಿದೆ. ಹಿಂದೂ ಸಮಾಜವು "ವಸುಧೈವ ಕುಟುಂಬಕಂ" ಎಂಬ ಉದಾರ ನೀತಿಯ ಪ್ರವರ್ತಕ ಮತ್ತು ಸಂರಕ್ಷಕ. ಆದ್ದರಿಂದ, ಭಾರತವನ್ನು ವೈಭವಸಂಪನ್ನ ಹಾಗೂ ಸಂಪೂರ್ಣ ವಿಶ್ವದಲ್ಲಿ ತನ್ನ ಅಪೇಕ್ಷಿತ ಹಾಗೂ ಯಥೋಚಿತ ಕೊಡುಗೆ ನೀಡುವ ದೇಶವಾಗುವುದು – ಇದು ಹಿಂದೂ ಸಮಾಜದ ಕರ್ತವ್ಯವಾಗಿದೆ. ತನ್ನ ಸಂಘಟಿತ ಕಾರ್ಯಶಕ್ತಿಯ ಮೂಲಕ ವಿಶ್ವಕ್ಕೆ ಹೊಸ ದಾರಿ ನೀಡಬಲ್ಲ, ಧರ್ಮವನ್ನು ಸಂರಕ್ಷಿಸುತ್ತಾ ಭಾರತವನ್ನು ವೈಭವಸಂಪನ್ನವಾಗಿ ಮಾಡುವುದು – ಈ ಸಂಕಲ್ಪದೊಂದಿಗೆ ಸಂಘವು ಇಡೀ ಹಿಂದೂ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಿದೆ. ಸಂಘಟಿತ ಸಮಾಜವು ತನ್ನ ಎಲ್ಲಾ ಕರ್ತವ್ಯಗಳನ್ನು ತನ್ನದೇ ಆದ ಶಕ್ತಿಯ ಮೇಲೆ ನಿರ್ಧರಿಸುತ್ತದೆ. ಅದಕ್ಕಾಗಿ ಬೇರೆಯವರಾರೂ ಪ್ರತ್ಯೇಕವಾಗಿ ಏನನ್ನೂ ಮಾಡುವ ಅಗತ್ಯವೇ ಇರುವುದಿಲ್ಲ. 7) ಈ ರೀತಿಯ ಸಮಾಜದ ಚಿತ್ರಣವು ವಾಸ್ತವವಾಗಬೇಕಾದರೆ ವ್ಯಕ್ತಿಗಳು ಮತ್ತು ಸಮುದಾಯಗಳಲ್ಲಿ ವೈಯಕ್ತಿಕ ಚಾರಿತ್ರ್ಯಮತ್ತು ರಾಷ್ಟ್ರೀಯ ಚಾರಿತ್ರ್ಯಗಳನ್ನು ಸದೃಢಗೊಳಿಸಬೇಕಾದ ಅವಶ್ಯಕತೆಯಿದೆ. ನಮ್ಮ ರಾಷ್ಟ್ರ ಸ್ವರೂಪದ ಸ್ಪಷ್ಟ ಕಲ್ಪನೆ ಹಾಗೂ ಗೌರವ ಭಾವನೆಯು ಸಂಘದ ಶಾಖೆಯಲ್ಲಿ ಲಭಿಸುತ್ತದೆ. ನಿತ್ಯಶಾಖೆಯಲ್ಲಿ ನಡೆಯುವ ದೈನಂದಿನ ಚಟುವಟಿಕೆಗಳು ಸ್ವಯಂಸೇವಕರಲ್ಲಿ ವ್ಯಕ್ತಿತ್ವ, ಕರ್ತೃತ್ವ, ನೇತೃತ್ವ, ಭಕ್ತಿ ಮತ್ತು ತಿಳುವಳಿಕೆಯನ್ನು ಬೆಳೆಸುತ್ತವೆ. ಇದೆಲ್ಲದರ ಹಿನ್ನೆಲೆಯಲ್ಲಿ ಶತಾಬ್ದಿ ವರ್ಷದಲ್ಲಿ ವ್ಯಕ್ತಿನಿರ್ಮಾಣದ ಕಾರ್ಯವು ದೇಶದಲ್ಲಿ ಭೌಗೋಳಿಕವಾಗಿ ಸರ್ವವ್ಯಾಪಿಯಾಗಬೇಕು ಹಾಗೂ ಸಾಮಾಜಿಕ ನಡವಳಿಕೆಯಲ್ಲಿ ಸಹಜ ಬದಲಾವಣೆಗಳನ್ನು ತರುವ ಪಂಚಪರಿವರ್ತನೆಯ ಕಾರ್ಯಕ್ರಮಗಳನ್ನು ಸ್ವಯಂಸೇವಕರ ಉದಾಹರಣೆಯ ಮೂಲಕ ಸಮಾಜವ್ಯಾಪಿಯಾಗಿಸಲು ಪ್ರಯತ್ನಿಸಬೇಕು. ವ್ಯಕ್ತಿಗಳು ಮತ್ತು ಕುಟುಂಬಗಳು ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವಬೋಧ ಅಥವಾ ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರ ಹಾಗೂ ಸಂವಿಧಾನದ ಪಾಲನೆ ಎಂಬ ಐದು ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉದಾಹರಣೆಗಳ ಮೂಲಕ ಅನುಕರಣೀಯವಾಗಲಿ. ಈ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿರುವ ಚಟುವಟಿಕೆಗಳು ಸರಳ ಮತ್ತು ಅನುಷ್ಠಾನಕ್ಕೆ ಸುಲಭವಾಗಿವೆ. ಈ ಕುರಿತು ಸಂಘದ ಕಾರ್ಯಕ್ರಮಗಳಲ್ಲಿ ಕಾಲಕಾಲಕ್ಕೆ ವಿವರವಾಗಿ ಚರ್ಚಿಸಲಾಗಿದೆ. ಸಂಘದ ಸ್ವಯಂಸೇವಕರ ಜೊತೆಗೆ ಸಮಾಜದಲ್ಲಿನ ಇತರೆ ಅನೇಕ ಸಂಘಸಂಸ್ಥೆಗಳು ಮತ್ತು ವ್ಯಕ್ತಿಗಳು ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸಂಘದ ಸ್ವಯಂಸೇವಕರು ಅವರೊಂದಿಗೆ ಸಹಯೋಗ ಮತ್ತು ಸಮನ್ವಯ ಸಾಧಿಸುತ್ತಿದ್ದಾರೆ. ಕಾಲಕಾಲಕ್ಕೆ ಪ್ರಪಂಚದಲ್ಲಿ ಸಂಭವಿಸುವ ಅಸಮತೋಲನವನ್ನು ಸರಿಪಡಿಸುವ ಮತ್ತು ವಿಶ್ವ ಜೀವನದಲ್ಲಿ ಸಂಯಮ ಮತ್ತು ಘನತೆಯ ಪ್ರಜ್ಞೆಯನ್ನು ರೂಪಿಸುವ ವಿಶ್ವಧರ್ಮವನ್ನು ಒದಗಿಸುವುದೇ ಜಗತ್ತಿನ ಇತಿಹಾಸಕ್ಕೆ ಭಾರತದ ಮಹತ್ವದ ಕೊಡುಗೆ. ಭಾರತದಲ್ಲಿ ವಾಸಿಸುವ ವೈವಿಧ್ಯಮಯ ಸಮಾಜವನ್ನು ಸಂಘಟಿಸಿದ ನಮ್ಮ ಪೂರ್ವಜರು, ಒಂದು ರಾಷ್ಟ್ರವಾಗಿ ಈ ಕರ್ತವ್ಯವನ್ನು ಪದೇಪದೇ ನಿರ್ವಹಿಸುವ ಸಾಧನವಾಗಿ ಇಲ್ಲಿನ ಸಮಾಜವನ್ನು ರೂಪಿಸಿದರು. ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ನವೋತ್ಥಾನದ ನಾಯಕರ ಮುಂದೆಯೂ ಸ್ವತಂತ್ರ ಭಾರತದ ಸಮೃದ್ಧಿ ಮತ್ತು ಸಾಮರ್ಥ್ಯವೃದ್ಧಿಯ ಈ ಮಂಗಲಮಯ ಪರಿಣಾಮದ ಚಿತ್ರಣವಿತ್ತು. ಬಂಗಾಳ ಪ್ರಾಂತದ ನಮ್ಮ ಪೂರ್ವ ಸಂಘಚಾಲಕರಾಗಿದ್ದ ದಿವಂಗತ ಕೇಶವ ಚಂದ್ರ ಚಕ್ರವರ್ತಿ ಅವರು ಇದನ್ನು ಸುಂದರವಾದ ಕಾವ್ಯಾತ್ಮಕ ಸಾಲುಗಳಲ್ಲಿ ಹೀಗೆ ವಿವರಿಸಿದ್ದಾರೆ: ಬಾಲೀ ಸಿಂಘಲ ಜಬದ್ವೀಪೆ ಪ್ರಾಂತರ್ ಮಾಝೆ ಉಠೆ | ಕೋತೋ ಮಠ್ ಕೋತೋ ಮಂದಿರ್ ಕೋತೋ ಪ್ರಸ್ತರೆ ಫೂಲ್ ಫೋಟೆ | ತಾದೇರ್ ಮುಖೇರ್ ಮಧುಮಯ್ ಬಾನೀ ಸುನೆ ಥೇಮೇ ಜಾಯ್ ಸಬ್ ಹಾನಾಹಾನೀ | ಅಭ್ಯುದಯೇರ್ ಸಭ್ಯತಾ ಜಾಗೇ ವಿಶ್ವೇರ್ ಘರೇ-ಘರೇ | (ಭಾರತೀಯ ಸಂಸ್ಕೃತಿಯ ಪ್ರಭಾವ ಸಿಂಹಳ ಮತ್ತು ಜಾವಾ ದ್ವೀಪವನ್ನೂ ಮೀರಿ ವ್ಯಾಪಿಸಿತ್ತು. ಎಲ್ಲೆಡೆ ಮಠಮಂದಿರಗಳಿದ್ದವು, ಅಲ್ಲಿ ಜೀವನದ ಸುಗಂಧವು ಹೂವುಗಳಂತೆ ಪಸರಿಸಿತ್ತು. ಭಾರತದ ಮಧುರ ಮತ್ತು ಜ್ಞಾನಮಯೀ ಧ್ವನಿಯಿಂದಾಗಿ ಅನ್ಯ ದೇಶಗಳಲ್ಲಿನ ದ್ವೇಷ ಮತ್ತು ಅಶಾಂತಿಯೂ ದೂರವಾಗುತ್ತಿತ್ತು.) ಬನ್ನಿ, ಇಂದಿನ ದೇಶ-ಕಾಲ-ಪರಿಸ್ಥಿತಿಗೆ ಅನುಗುಣವಾಗಿ ಈ ಭಾರತದ ಆತ್ಮಸ್ವರೂಪವನ್ನು ಜಗತ್ತಿನಲ್ಲಿ ಪುನಃಸ್ಥಾಪಿಸೋಣ. ನಮ್ಮ ಪೂರ್ವಜರು ನಮಗೆ ವಹಿಸಿಕೊಟ್ಟ ಈ ಕರ್ತವ್ಯವನ್ನು ಪೂರೈಸಲು, ವಿಶ್ವದ ಪ್ರಸ್ತುತ ಅಗತ್ಯಗಳನ್ನು ಪೂರೈಸಲು, ನಾವೆಲ್ಲರೂ ಜೊತೆಗೂಡೋಣ. ಒಟ್ಟಿಗೆ ಸಾಗೋಣ. ವಿಜಯದಶಮಿಯ ಈ ಶುಭ ಸಂದರ್ಭದಲ್ಲಿ ಸೀಮೋಲ್ಲಂಘನದ ಮೂಲಕ ನಮ್ಮ ಕರ್ತವ್ಯದ ಹಾದಿಯಲ್ಲಿ ಮುನ್ನಡೆಯೋಣ. || ಭಾರತ್ ಮಾತಾ ಕಿ ಜಯ್ || ಹೆಡಗೇವಾರ್, ಅಂಬೇಡ್ಕರ್ ಸ್ಫೂರ್ತಿ: ರಾಮನಾಥ ಕೋವಿಂದ್ ಆರೆಸ್ಸೆಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್ ಮತ್ತು ಡಾ.ಬಾಬಾಸಾಹೇಬ್. ಅಂಬೇಡ್ಕರ್ ಅವರು ತಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರಿಬ್ಬರೂ ಹಂಚಿಕೊಂಡ ರಾಷ್ಟ್ರೀಯ ಏಕತೆ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಆರೆಸ್ಸೆಸ್ ನಲ್ಲಿ ಯಾವುದೇ ಜಾತೀಯತೆ ಮತ್ತು ತಾರತಮ್ಯ ಇಲ್ಲ. ಆರೆಸ್ಸೆಸ್ ಸಂಸ್ಥಾಪಕರ ವಿಚಾರಗಳು ಸಮಾಜ ಮತ್ತು ರಾಷ್ಟ್ರವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು ಎಂದು ಮಾಜಿ ರಾಷ್ಟ್ರಪತಿ ಕೋವಿಂದ್ ತಿಳಿಸಿದರು.
(ಸೆಪ್ಟೆಂಬರ್ ೫ ಶಿಕ್ಷಕರ ದಿನಾಚರಣೆ ವಿಶೇಷ ಲೇಖನ) - ಡಾ.ಟಿ.ಎನ್.ಲೋಕೇಶ್ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷರುನ್ಮೀಲಿತಂ ಯೇನ ತಸ್ಮೈಶ್ರೀ ಗುರುವೇ ನಮಃ ಅಜ್ಞಾನವೆಂಬ ಕತ್ತಲಿನಿಂದ ಅಂಧನಾದವನ ಕಣ್ಣನ್ನು ಜ್ಞಾನವೆಂಬ ಅಂಜನ ಶಲಾಕೆಯಿಂದ ಬಿಡಿಸಿದ ಶ್ರೀಗುರುವಿಗೆ ನಮಸ್ಕಾರ ಎಂಬುದೇ ಈ ಶ್ಲೋಕದ ತಾತ್ಪರ್ಯವಾಗಿದೆ. ಅದು ಸಾವಿರಾರು ವರ್ಷಗಳ ಕತ್ತಲೆಯೇ ಇರಲಿ, ಚಿಕ್ಕ ಹಣತೆಯನ್ನು ಬೆಳಗಿಸಿದ ತಕ್ಷಣವೇ ಕತ್ತಲೆ ಎಲ್ಲಾ ಮಾಯವಾಗುತ್ತದೆ. ಹಾಗೆಯೇ ಸಾವಿರ ಜನ್ಮದ ಅಜ್ಞಾನದ ಅಂಧಕಾರದಿAದ ಜೀವವು ಬಂಧಿತವಾಗಿರಬಹುದು ಆದರೆ ಜೀವನದಲ್ಲಿ ಜ್ಞಾನಜ್ಯೋತಿಯಾದ ಶ್ರೀ ಗುರುವಿನ ಆಗಮನದಿಂದ ತಕ್ಷಣ ಅಜ್ಞಾನದ ಅಂಧಕಾರವೆಲ್ಲ ಕಳೆದು ಅವನು ಜೀವನ್ಮುಕ್ತನಾಗುವನು. ಮಾನವನು ಭೌತಿಕವಾಗಿ ಎರಡು ಕಣ್ಣುಗಳನ್ನು ಹೊಂದಿದ್ದರೂ ಸಹ ಅವನಿಗೆ ಜ್ಞಾನವೆಂಬ ಮೂರನೇ ಕಣ್ಣನ್ನು ನೀಡುವವನು ಶ್ರೀ ಗುರು. ಆದ್ದರಿಂದಲೇ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ಉತ್ಕೃಷ್ಟವಾದ ಸ್ಥಾನ ಕಲ್ಪಿಸಲಾಗಿದೆ. ತೈತ್ತೀರಿಯ ಉಪನಿಷತ್ ‘ಆಚಾರ್ಯ ದೇವೋಭವ’ ಎಂದಿದೆ. ಅಂದರೆ ಗುರು ಶಿಕ್ಷಣದ ಮೂಲಕ ಜೀವಸಂಸ್ಕಾರ ಮತ್ತು ಆತ್ಮಜ್ಞಾನವನ್ನು ನೀಡುವುದರಿಂದ ಗುರು ಸೃಷ್ಟಿ, ಸ್ಥಿತಿ, ಲಯ ಕರ್ತರಿಗೆ ಸಮಾನವೆಂದು ಗೌರವಿಸಲಾಗಿದೆ. ಪುರಾಣ ಮಹಾಪುರುಷರಾದ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣರು ವಿಷ್ಣುವಿನ ಅವತಾರವೆಂದು ಉಲ್ಲೇಖಿಸಲಾಗಿದ್ದರೂ ಸಹ ಗುರುವಿನ ಮಾರ್ಗದರ್ಶನದಲ್ಲಿ ತಮ್ಮ ದೈವ ಜೀವನವನ್ನು ರೂಪಿಸಿಕೊಂಡರು. ಶ್ರೀ ಗುರು ಗಂಗಾ ನದಿಯಂತೆ, ಸಾಮಾನ್ಯರು ಕಸವನ್ನೆಲ್ಲಾ ಗಂಗಾ ನದಿಗೆ ಎಸೆದರೂ ಗಂಗಾ ನದಿಯ ಪಾವಿತ್ರö್ಯತೆ ಕಡಿಮೆಯಾಗುವುದಿಲ್ಲ. ಅಂತೆಯೇ ಶ್ರೀ ಗುರು ಎಲ್ಲಾ ವಿಧದ ನೀಚ, ಅಪಮಾನ ಮತ್ತು ನಿಂದನೆಗಳಿAದ ಮೇಲಿರುವವನು ಎಂದಿದ್ದಾರೆ ಶ್ರೀರಾಮಕೃಷ್ಣ ಪರಮಹಂಸರು. ಭಕ್ತಿಭAಡಾರಿ ಬಸವಣ್ಣನವರು ತಮ್ಮ ವಚನದಲ್ಲಿ ಗುರುವಿನ ಮಹತ್ವವನ್ನು ಈ ಕೆಳಕಂಡAತೆ ವರ್ಣಿಸಿದ್ದಾರೆ. ‘ಮಡಿಕೆಯ ಮಾಡುವಡೆ ಮಣ್ಣೆ ಮೊದಲು ತೊಡುಗೆಯ ಮಾಡುವಡೆ ಹೊನ್ನೆ ಮೊದಲು ಶಿವಪಥವನರಿವಡೆ ಗುರುಪಥವೇ ಮೊದಲು’ ಚೈತನ್ಯನು, ಶಾಶ್ವತನು, ಶಾಂತನು ಆಕಾಶವನ್ನು ಮೀರಿ ನಿಂತವನು, ದೋಷವಿಲ್ಲದವನು, ಬಿಂದು - ನಾದಕಲೆಗಳಿಗೆ ಅತೀತನು ಆದ ಶ್ರೀಗುರುವನ್ನು ಕೃತಜ್ಞಾಪೂರ್ವಕವಾಗಿ ನಮಿಸುವ ಹಲವು ಸಂದರ್ಭಗಳು ನಮ್ಮ ಸಂಸ್ಕೃತಿಯಲ್ಲಿದೆ. ಅನಾದಿ ಕಾಲದಿಂದ, ಇಂದಿನವರೆಗೂ ಶ್ರೇಷ್ಠ ಗುರುಪರಂಪರೆಯನ್ನು ಭಾರತ ಕಂಡಿದೆ. ಅನೇಕ ಮಂದಿ ಗುರುಗಳು ತಮ್ಮ ಜೀವನವನ್ನೇ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ, ವ್ಯಕ್ತಿತ್ವ ವಿಕಸನಕ್ಕಾಗಿ ಮುಡಿಪಿಟ್ಟಿದ್ದಾರೆ. ಅಂತಹವರಲ್ಲಿ ಭಾರತ ಕಂಡ ಶ್ರೇಷ್ಠ ದಾರ್ಶನಿಕ, ರಾಜನೀತಿಜ್ಞ, ಶಿಕ್ಷಣ ತಜ್ಞ, ಶಿಕ್ಷಕ ಹಾಗೂ ಸ್ವಾತಂತ್ರö್ಯ ಭಾರತದ ಎರಡನೇ ರಾಷ್ಟçಪತಿಯಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಪ್ರಮುಖರು. ಅವರ ಜನ್ಮ ದಿನಾಂಕ ಸೆಪ್ಟೆಂಬರ್ ೦೫ನ್ನು ‘ಶಿಕ್ಷಕರ ದಿನ’ವಾಗಿ ಆಚರಿಸಲಾಗುತ್ತದೆ. ಭಾರತದಾದ್ಯಂತ ಶಿಕ್ಷಕರಿಗೆ ಗೌರವಪೂರ್ವಕವಾಗಿ ಹಬ್ಬದಂತೆ ಆಚರಿಸುವ ದಿನವೇ ಈ ಶಿಕ್ಷಕರ ದಿನಾಚರಣೆ. ಮೂಲತಃ ವೃತ್ತಿಯಿಂದ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ಶಿಕ್ಷಕವೃತ್ತಿಯ ಮೌಲ್ಯಗಳ ಪ್ರತಿರೂಪವಾಗಿದ್ದರು. ಅವರ ಅಪಾರ ಶಿಷ್ಯವರ್ಗ ಅವರನ್ನು ಭೇಟಿ ಮಾಡಿ ಸೆಪ್ಟೆಂಬರ್ ೫ ರಂದು ನಿಮ್ಮ ಹುಟ್ಟುಹಬ್ಬವನ್ನು ನಾವೆಲ್ಲಾ ವಿಜೃಂಭಣೆಯಿAದ ಆಚರಿಸುತ್ತೇವೆ ಎಂಬ ಕೋರಿಕೆಯನ್ನು ಮಾಡಿದಾಗ ಅದನ್ನು ಅತ್ಯಂತ ನಮ್ರತೆಯಿಂದ ನಿರಾಕರಿಸಿದ ರಾಧಾಕೃಷ್ಣನ್ ರವರು ತನ್ನ ಜನ್ಮದಿನವನ್ನು ಆಚರಿಸುವ ಬದಲು ರಾಷ್ಟçಕ್ಕೆ ಗುರುಪರಂಪರೆ ನೀಡಿದ ಮಹತ್ವವನ್ನು ಸ್ಮರಿಸಿ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನಾಚರಣೆ ಆಚರಿಸಿ ಎಂದು ಶಿಷ್ಯವೃಂದಕ್ಕೆ ತಾಕೀತು ಮಾಡಿದರು. ೧೯೬೨ರಲ್ಲಿ ಮೊದಲ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಅಂದಿನಿAದ ಇಂದಿನವರೆಗೆ ಸೆಪ್ಟೆಂಬರ್೦೫ನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತಾ ಬರಲಾಗಿದೆ. ಪ್ರತಿ ಮಗುವೂ ತನ್ನ ವಿದ್ಯಾರ್ಥಿ ಜೀವನದಲ್ಲಿ ತನ್ನ ತಂದೆ-ತಾಯಿಗಿAತ ಹೆಚ್ಚು ಸಮಯ ತೊಡಗಿಸಿಕೊಳ್ಳುವುದು ಶಾಲೆಯಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ. ಹಾಗಾಗಿ ರಾಷ್ಟçದ ಶಿಕ್ಷಣದ ಗುಣಮಟ್ಟ ಪ್ರತ್ಯಕ್ಷವಾಗಿ ಶಿಕ್ಷಕನ ವ್ಯಕ್ತಿತ್ವವನ್ನು ಅವಲಂಬಿಸಿದೆ. ಅದೆಷ್ಟೇ ಶ್ರೇಷ್ಠವಾದ ಪಠ್ಯಕ್ರಮವನ್ನು, ಶಿಕ್ಷಣ ವ್ಯವಸ್ಥೆಯನ್ನು ಯಾವುದೇ ದೇಶ ಹೊಂದಿದ್ದರೂ, ಅದನ್ನು ಸಮರ್ಥವಾಗಿ ವಿದ್ಯಾರ್ಥಿಗಳ ಹೃದಯಕ್ಕೆ ಇಳಿಸದೇ ಇದ್ದರೆ ಅದು ವ್ಯರ್ಥ. ಹಾಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕನ ಪಾತ್ರ ಮಹತ್ವವಾದದ್ದು. ಆದ ಕಾರಣ ಶಿಕ್ಷಕರು ಎಲ್ಲಾ ಮೌಲ್ಯಗಳ ಗಣಿಯಂತಿರಬೇಕು. ಶಿಕ್ಷಕ ವೃತ್ತಿಯನ್ನು ನಿಸ್ವಾರ್ಥ ಸೇವೆಯೆಂದು ಪರಿಭಾವಿಸಿ ಸದೃಢ ರಾಷ್ಟçನಿರ್ಮಾಣ ಮಾಡುವ ಕೈಂಕರ್ಯದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕ ರಾಷ್ಟçಶಿಲ್ಪಿ, ರಾಷ್ಟç ನಿರ್ಮಾಪಕನಾಗಿ ದೇಶ ಕಟ್ಟುವ ಕಾಯಕದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿರುತ್ತಾನೆ. ರಾಷ್ಟಿçÃಯ ಶಿಕ್ಷಣ ನೀತಿ – ೨೦೨೦ ಸಹ ಶಿಕ್ಷಕನ ಮಹತ್ವವನ್ನು, ಔನತ್ಯವನ್ನು ಕೊಂಡಾಡಿದೆ. ಸದೃಢ ಮನಸ್ಥಿತಿ, ಮೌಲ್ಯಾಧಾರಿತ ವ್ಯಕ್ತಿತ್ವ ಹೊಂದಿರುವರು ಶಿಕ್ಷಕ ವೃತ್ತಿಗೆ ಬರುವ ಅನಿವಾರ್ಯತೆ ಇಂದು ಎದುರಾಗಿದೆ. ತಂದೆ ತಾಯಿ ಮಗುವಿಗೆ ಕೇವಲ ಭೌತಿಕ ಜನ್ಮ ನೀಡಿದರೆ, ಶ್ರೀ ಗುರು ಮಗುವಿಗೆ ಸಂಸ್ಕಾರ ನೀಡಿ ಆತನನ್ನು ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸುತ್ತಾನೆ. ಯಾವ ದೇಶದಲ್ಲಿ ಉತ್ಕೃಷ್ಟ ಶಿಕ್ಷಕರ ಕೊರತೆ ಇರುವುದೋ ಆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಶಿಕ್ಷಕ ತರಬೇತಿಯ ಅಂಕಪಟ್ಟಿ ಮಾತ್ರವೇ ಉತ್ತಮ ಶಿಕ್ಷಕನನ್ನು ಅಳೆಯುವ ಮಾನದಂಡವಲ್ಲ. ಅಂಕ ಮಾತ್ರ ಆಗಲೂ ಬಾರದು. ಆದರೆ ಆತ ಪಡೆದ ತರಬೇತಿಯ ಗುಣಮಟ್ಟ, ಪಡೆದ ಅನುಭವ, ಗಳಿಸಿದ ಜ್ಞಾನ ಎಲ್ಲವೂ ಶಿಕ್ಷಕನನ್ನು ಸಮಾಜದಲ್ಲಿ ಒಬ್ಬ ಅನುಕರಣಾಪ್ರಾಯ, ಆದರ್ಶ ವ್ಯಕ್ತಿಯನ್ನಾಗಿ ರೂಪಿಸಲು ಸಾಧ್ಯ. ಜಗತ್ತಿನಲ್ಲಿ ಭಾವನಾತ್ಮಕವಾಗಿ ಅತ್ಯಂತ ಹೆಚ್ಚು ಗೌರವಿಸಲ್ಪಡುವ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿಯು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಪ್ರತಿ ಮನೆಯಲ್ಲೂ ತಮ್ಮ ಮಕ್ಕಳನ್ನು ಒಬ್ಬ ಒಳ್ಳೆಯ ವೈದ್ಯ, ಇಂಜಿನಿಯರ್, ವಕೀಲ, ಉದ್ಯಮಿ, ವಿಜ್ಞಾನಿಯಾಗಬೇಕೆಂದೆಲ್ಲಾ ಬಯಸುವುದು ಸಹಜ. ಹಾಗಾಗಿ ಒಳ್ಳೆಯ ವಿದ್ಯಾಭ್ಯಾಸ ಸಿಗುವ ಶಾಲೆಗಳಿಗೆ, ಒಳ್ಳೆಯ ವ್ಯವಸ್ಥೆಗಳಿರುವ ವಿದ್ಯಾಲಯಗಳಿಗೆ ಸೇರಿಸುತ್ತಾರೆ, ಲಕ್ಷಾಂತರ ರೂಪಾಯಿಗಳನ್ನೂ ಖರ್ಚು ಮಾಡುತ್ತಾರೆ. ಮಧ್ಯಮ ವರ್ಗದವರು ಲಕ್ಷಗಟ್ಟಲೇ ಲೋನ್ ಮಾಡಿಯಾದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗುತ್ತಾರೆ. ಆದರೆ ಎಷ್ಟೇ ಹಣ ಖರ್ಚು ಮಾಡಿದರೂ, ವಿದ್ಯೆಯನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸುವ ಶಿಕ್ಷಕರಿಲ್ಲದಿದ್ದರೆ ಈ ಪ್ರಯತ್ನಗಳೆಲ್ಲ ವ್ಯರ್ಥ. ಆದ್ದರಿಂದ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧನೆ ಮಾಡುವ ಶಿಕ್ಷಕರ ಅಗತ್ಯತೆ ಪ್ರತಿಯೊಂದು ಕಾಲಕ್ಕೂ ಇದ್ದೇ ಇದೆ. ಇದರ ಅನಿವಾರ್ಯತೆಯನ್ನು ಅರಿತು ಸಮಾಜ ರೂಪಿಸುವುದಕ್ಕಾಗಿ, ಶಿಕ್ಷಕರಾಗುವುದಕ್ಕೇ ಮನಸ್ಸು ಮಾಡಬೇಕಾದ ಕರ್ತವ್ಯ ಇಂದಿನ ಪೀಳಿಗೆಯಲ್ಲಿದೆ. ತಾನು ಏನಾಗಬೇಕೆಂದು ನಿಶ್ಚಯಿಸುವ ಆಯ್ಕೆ ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಅದಕ್ಕೆ ತಕ್ಕಂತೆ ಅವರು ಲಭ್ಯವಿರುವ ಹಲವು ಕೋರ್ಸ್ಗಳನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ಮುಂದಿನ ಪೀಳಿಗೆ ಹೇಗಿರಬೇಕು, ಅವರನ್ನು ಹೇಗೆ ಸಮಾಜಕ್ಕೆ ಪೂರಕವಾಗಿ ತಯಾರು ಮಾಡಬೇಕು ಎನ್ನುವುದನ್ನು ನಿರ್ಧರಿಸುವ ಶಕ್ತಿ ಒಬ್ಬ ಸಮರ್ಥ ಶಿಕ್ಷಕನಿಗೆ ಇರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಇಂದಿನ ಯುವಪೀಳಿಗೆ ಶಿಕ್ಷಕ ವೃತ್ತಿಯ ಕಡೆಗೂ ಪ್ರಾಧಾನ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಶಿಕ್ಷಕ ವೃತ್ತಿಯನ್ನು ಪ್ರೀತಿಸುವವರು, ಶಿಕ್ಷಕನ ಸ್ಥಾನಕ್ಕೆ ನ್ಯಾಯವನ್ನು ಒದಗಿಸುವವರು ಶಿಕ್ಷಕ ವೃತ್ತಿಗೆ ಬರಬೇಕಾಗಿದೆ. ಶಿಕ್ಷಕರು ನಿಜಾರ್ಥದಲ್ಲಿ ಭಾರತೀಯತೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ರಾಯಭಾರಿಗಳು. ಈ ನಾಡಿನ ಭವ್ಯ ಇತಿಹಾಸವನ್ನು ಗಮನಿಸಿದಾಗ ಇಲ್ಲಿನ, ಸಂಸ್ಕೃತಿ, ಆಚರಣೆಗಳು, ಶ್ರೇಷ್ಠ ಚಿಂತನೆಗಳೆಲ್ಲವೂ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಗಮನಾರ್ಹ ಕೆಲಸ ಮಾಡಿರುವುದು ಇಲ್ಲಿನ ಗುರುಪರಂಪರೆಯೇ ಆಗಿದೆ. ಇಂದು ಶಿಕ್ಷಣದಲ್ಲಿ ಭಾರತೀಯತೆಯ ಕುರಿತು ಚರ್ಚೆಯಾಗುತ್ತಿರುವ ಹೊತ್ತಿಗೆ ಶಿಕ್ಷಕರಾಗುವವರು ಭಾರತವನ್ನು ಸರಿಯಾಗಿ ಅರಿತು, ಅದನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ. ಅವರನ್ನೂ ಭಾರತದ ಮೌಲ್ಯಗಳನ್ನು ತಮ್ಮ ಮುಂದಿನ ಪೀಳಿಗೆಗೆ ಪಸರಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರಾಗುವಂತೆ ಪ್ರೇರೇಪಿಸಬೇಕು. ೨೦೪೭ರ ವಿಕಸಿತ ಭಾರತದ ಕನಸನ್ನು ನನಸು ಮಾಡುವ ಈ ಅಮೃತ ಕಾಲಘಟ್ಟದಲ್ಲಿ ಯುವಜನತೆ ಶಿಕ್ಷಕನ ವೃತ್ತಿಯನ್ನು ಗೌರವಿಸಲಿ. ಆತ್ಮನಿರ್ಭರ ಭಾರತವಾಗುವ ಪ್ರಯತ್ನದಲ್ಲಿ ಜ್ಞಾನವನ್ನು ಬಯಸಿ ಬರುವ ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡುವ ಸಮರ್ಥ ಶಿಕ್ಷಕರನ್ನು ಒಳಗೊಳ್ಳುವುದೂ ಪ್ರಮುಖವಾದ ಅಂಶವೇ ಆಗಿದೆ. ಭಾರತ ಹಿಂದಿನಿAದಲೂ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ತನ್ನ ಜ್ಞಾನ ಪ್ರಸರಣದ ಕಾರಣಕ್ಕಾಗಿಯೇ ಎನ್ನುವುದನ್ನು ಮರೆಯುವಂತಿಲ್ಲ. ಜಗತ್ತಿನಲ್ಲಿ ಹಲವು ದೇಶಗಳು ಸುಸಂಸ್ಕೃತಗೊAಡಿದ್ದು ಇಲ್ಲಿನ ಗುರುಗಳು ಅಲ್ಲಿಗೆ ಹೋಗಿ ಜ್ಞಾನದಾನ ಮಾಡಿದ ಕಾರಣಕ್ಕಾಗಿಯೇ ಎನ್ನುವುದು ಇತಿಹಾಸ. ಇತಿಹಾಸದ ಗತವೈಭವವನ್ನು ಮರುಕಳಿಸಲು, ಹಾಗೆಯೇ ಜಗತ್ತಿಗೆ ಭಾರತೀಯ ಶಿಕ್ಷಕರ ಕೊಡುಗೆಯ ಮಹತ್ವ ಜಗಜ್ಜಾಹೀರುಗೊಳಿಸಬೇಕಿದೆ. ಯುವಜನತೆ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ರಾಷ್ಟç ಸೇವೆಯಲ್ಲಿ ಮತ್ತೊಮ್ಮೆ ಭಾರತ ಜಗದ್ಗುರು ಭಾರತವಾಗಿ ಇಡೀ ಮನುಕುಲಕ್ಕೆ ದಾರಿದೀಪವಾಗಬೇಕಿದೆ.
ಜೂನ್ ೨೬, ೧೯೯೯. ಈ ದಿನ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಏಕೆಂದರೆ ೧೯೪೮, ೧೯೬೫, ೧೯೭೧ರಲ್ಲಿ ಭಾರತದ ಭೂಭಾಗ ಕಬಳಿಸುವ ದುರುದ್ದೇಶದಿಂದ ಭಾರತದ ಮೇಲೆ ಆಕ್ರಮಣ ಮಾಡಿದ ಪಾಕಿಸ್ತಾನ ಘೋರ ಸೋಲನ್ನು ಅನುಭವಿಸಿದ್ದರೂ, ೧೯೯೯ರಲ್ಲಿ ಮತ್ತೊಮ್ಮೆ ಭಾರತದ ವಿರುದ್ಧ ಸೆಣೆಸುವ ದುಸ್ಸಾಹಸಕ್ಕೆ ಕೈ ಹಾಕುತ್ತದೆ. ಆದರೆ ನಮ್ಮ ಸೈನಿಕರ ಧೈರ್ಯ, ಸಾಹಸ, ಪರಾಕ್ರಮದಿಂದ ಈ ಯುದ್ಧವನ್ನೂ ಗೆದ್ದ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನೂ, ವಿಶ್ವಕ್ಕೆ ಭಾರತದ ಸೈನಿಕರ ಸಾಮರ್ಥ್ಯದ ಪರಿಚಯವನ್ನು ಮಾಡಿಕೊಡುತ್ತದೆ. ಈ ಯುದ್ಧಕ್ಕೆ “ಆಪರೇಶನ್ ವಿಜಯ್” ಎಂಬ ಹೆಸರಿಟ್ಟ ಕಾರಣ ಯುದ್ಧ ಗೆದ್ಧನಂತರ ರಾಷ್ಟಾçದ್ಯಂತ ವಿಜಯ್ ದಿವಸನ್ನು ಆಚರಿಸಲಾಗುತ್ತದೆ. ಈ ವಿಜಯೋತ್ಸವಕ್ಕೆ ೨೬ನೇ ಸಂವತ್ಸರ. ಕಾರ್ಗಿಲ್! ಕಾಶ್ಮೀರದ ಶ್ರೀನಗರದಿಂದ ೨೦೫ ಕಿ.ಮೀ. ದೂರದಲ್ಲಿರುವ ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್ಗೆ ಸಂಪರ್ಕ ಕಲ್ಪಿಸುವ ರಾಷ್ಟಿçÃಯ ಹೆದ್ದಾರಿ ೧ ಇದೇ ಕಾರ್ಗಿಲ್ ಮೂಲಕ ಹಾದು ಹೋಗುತ್ತದೆ. ಇದೇ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಇದೆ. ಚಳಿಗಾಲದಲ್ಲಿ ಮೈನಸ್ ಡಿಗ್ರಿಗೆ ಇಳಿಯುವ ತಾಪಮಾನದಿಂದಾಗಿ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಮೊದಲಿನಿಂದಲೂ ಜೆಂಟಲ್ಮನ್ ಒಪ್ಪಂದದ ಪ್ರಕಾರ ಎರಡೂ ರಾಷ್ಟçದ ಸೇನೆ ಚಳಿಗಾಲದಲ್ಲಿ ಬೇಸ್ಕ್ಯಾಂಪ್ಗೆ ತೆರಳಬೇಕಿತ್ತು. ಆದರೆ ಪಾಕಿಸ್ತಾನ ತಂತ್ರಹೂಡಿ ಈ ಸಮಯವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿತು. ತಯಾರಿ ಹೇಗಿತ್ತು ಗೊತ್ತೇನು?. ಪಾಕಿಸ್ತಾನಿ ಸೇನೆಯೊಂದಿಗೆ ದೀರ್ಘಕಾಲದ ಗೆಳತನ ಹೊಂದಿರುವ ಜಮಾಲ್-ಎ-ಇಸ್ಲಾಮಿಯೆಂಬ ಜಿಹಾದಿ ತಂಡದೊಡಗೂಡಿ ಭಯೋದ್ಪಾದಕರ ವೇಷಧರಿಸಿ ಗುಡ್ಡವನ್ನೇರಿ, ಬಂಕರ್ಗಳನ್ನು ವಶಪಡಿಸಿಕೊಂಡು, ತಾತ್ಕಾಲಿಕ ಸಂರ್ಗಳನ್ನೂ ನಿರ್ಮಿಸಿತ್ತು. ಮಾಹಿತಿಗಳ ಪ್ರಕಾರ ಲಾಹೋರ್ ಒಪ್ಪಂದಕ್ಕೂ ಮುನ್ನ ಪಾಕಿಸ್ತಾನ ಯುದ್ಧದ ತಂತ್ರವನ್ನು ಹೂಡಿಯಾಗಿತ್ತು. ಆದ್ದರಿಂದ ೧೯೯೯ರಲ್ಲಿ ಫೆಬ್ರವರಿಯ ಮೊದಲ ಭಾಗದಲ್ಲಿ ಭಾರತಕ್ಕೆ ಚಿಕ್ಕಪುಟ್ಟ ದಾಳಿಗಳನ್ನು ಮಾಡಲು ಪ್ರಾರಂಭಿಸಿತು. ರಜೌರಿ, ಪೂಂಚ್, ಗಂದರ್ಬಾಲ್, ಅನಂತ್ನಾಗ್ ಹಾಗೂ ಇನ್ನಿತರ ಸಮೀಪದ ಪ್ರದೇಶಗಳ ಸುತ್ತಲೇ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದರಿಂದ ಪಾಕಿಸ್ತಾನದ ಉದ್ದೇಶ ಭಾರತದ ಭೂಭಾಗವನ್ನು ಕಬಳಿಸುವುದೆನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ೧೯೯೯ರ ಮೇ.೯, ೧೦ರಂದು ಸೇನಾ ಬ್ರಿಗೇಡ್ನ ಶಸ್ತಾçಸ್ತç ಘಟಕದ ಹತ್ತಿರಕ್ಕೆ ಪಾಕಿಸ್ತಾನದ ಬಾಂಬ್ ಶೆಲ್ ಬಂದು ಬಿತ್ತು. ಅದು ಶಕ್ತಗುರಿಯೆಂದು ಸೇನೆ ಭಾವಿಸಲಿಲ್ಲ. ಆದರೆ ಮರುದಿನ ಗುಡ್ಡದ ಮೇಲೆ ಕುರಿಗಳನ್ನು ಮೇಯಿಸಲು ಹೋದ ಒಂದಷ್ಟು ತರುಣರು ಅಪರಿಚಿತರನ್ನು ಗುರುತಿಸಿ ಸೇನಾ ಠಾಣ್ಯಕ್ಕೆ ವಿಷಯ ಮುಟ್ಟಿಸಿದರು. ಮೇ ೧೨ರೊಳಗೆ ಭಯೋತ್ಪಾದಕರು ಬಂದು ಕುಳಿತಿರುವುದು ಸೇನೆಗೆ ಖಾತ್ರಿಯಾಗಿತ್ತು. ನುಸಳುಕೋರರು ಬಂದಿದ್ದಾರೆ ಎಂದೇ ಭಾವಿಸಿದ್ದ ಅಂದಿನ ರಕ್ಷಣ ಸಚಿವ ಜಾಜ್ ಫೆರ್ನಾಂಡಿಸ್ ೪೮ ಗಂಟೆಗಳಲ್ಲಿ ಅವರನ್ನು ಹೊರದಬ್ಬುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತಾರೆ. ಆದರೆ ಅಲ್ಲಿಗೆ ಬಂದದ್ದು ಪಾಕಿಸ್ತಾನದ ಸುಸಜ್ಜಿತ ಸೇನೆಯೇ ಆಗಿತ್ತು. ವಿಷಯ ತಿಳಿದ ಮರುದಿನವೆ ಸೇನೆ ಜಾಟ್ ರೆಜಿಮೆಂಟಿನ ಕ್ಯಾಪ್ಟನ್ ಸೌರಭ್ ಕಾಲಿಯ ಹಾಗೂ ೬ ಜನರ ತಂಡ ಗುಡ್ಡವೇರಲು ಬೇಕಾದಷ್ಟು ಮಂಜು ಕರಗಿದೆಯೇ ಎಂದು ನೋಡಲು ಕಕ್ಸರ್ ಭಾಗದ ಬಜರಂಗ್ ಪೋಸ್ಟ್ನತ್ತ ಹೊರಟರು. ಆಗ ಬಂಕರ್ಗಳನ್ನು ಆವರಿಸಿಕೊಂಡ ದೊಡ್ಡ ನುಸುಳುಕೋರರ ಕುರಿತಾದ ಮೊದಲ ಮಾಹಿತಿ ಸೇನೆಗೆ ತಲುಪಿಸುತ್ತಾರೆ. ತನ್ನ ವ್ಯಾಪ್ತಿಯ ಗುಡ್ಡವನ್ನು ನುಸಳುಕೋರರು ಆಕ್ರಮಿಸಿರುವುದನ್ನು ಸಹಿಸದ ಕ್ಯಾ.ಸೌರಭ್ ಕಾಲಿಯ ತನ್ನ ತಂಡದೊಡನೆ ಯುದ್ಧಕ್ಕಿಳಿದರು. ಶತ್ರುವನ್ನು ಅಂದಾಜಿಸುವುದರಲ್ಲಿ ಎಡವಿದ್ದು ತಿಳಿದ ತಂಡ ಹಿಂದೆ ಹೋಗುವುದನ್ನೊಪ್ಪದೆ ಕೊಂಡೊಯ್ದ ಗುಂಡುಗಳು ಮುಗಿದರೂ ಯುದ್ದವನ್ನು ಮುಂದುವರಿಸುತ್ತಾರೆ. ಆದರೆ ತಕ್ಷಣ ಸುತ್ತುವರಿದ ಪಾಕಿಸೇನೆ ಜೀವಂತವಾಗಿ ಅವರನ್ನು ಬಂಧಿಸುತ್ತಾರೆ. ೨೨ ದಿನಗಳಕಾಲ ಕ್ಯಾ.ಸೌರಭ್ ಕಾಲಿಯರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಕೊಟ್ಟು ಗುಂಡಿಟ್ಟು ಕೊಲ್ಲಲಾಗುತ್ತದೆ. ಶವವನ್ನು ಭಾರತಕ್ಕೆ ಹಸ್ತಾಂತರಿಸಿದಾಗ ನಮ್ಮ ಯೋಧರನ್ನು ಕೆಟ್ಟದಾಗಿ ನೆಡೆಸಿಕೊಂಡ ಪಾಕಿಸ್ತಾನದ ನಡೆಯನ್ನು ಕಂಡು ಸೇನೆಯ ಎಲ್ಲಾ ಸೈನಿಕರೂ ಬೆಚ್ಚಿಬೀಳುತ್ತಾರೆ ಮತ್ತು ಇದಕ್ಕೆ ತಕ್ಕ ಉತ್ತರವನ್ನು ನೀಡಬೇಕೆಂದು ನಿಶ್ಚಯಿಸುತ್ತಾರೆ. ೧೯೯೯ರಲ್ಲಿ ಕಾರ್ಗಿಲ್ ಕದನವು ಆರಂಭವಾದದ್ದು ಹೀಗೆ! ಈ ಘಟನೆಯ ನಂತರ ದೇಶದೆಲ್ಲೆಡೆ ಸಂಚಲನ ಮೂಡುತ್ತದೆ. ಮೇ ೩ರಂದು ಆರಂಭವಾದ ಕಾರ್ಯಾಚರಣೆ ನಿಜಕ್ಕೂ ದೊಡ್ಡ ಸವಾಲಾಗಿತ್ತು. ಪರ್ವತ ಶ್ರೇಣಿಯ ಮೇಲಿರುವ ಪಾಕ್ ಸೈನಿಕರನ್ನು ಕೆಳಗಿನಿಂದ ಎದುರಿಸುವುದು ಸುಲಭವಾಗಿರಲಿಲ್ಲ. ತುಸು ಚಲನೆ ಕಂಡರೂ ಮೇಲಿನಿಂದ ಗುಂಡಿನ ಸುರಿಮಳೆ ಆಗುತ್ತಿತ್ತು. ಆದರೆ ನಮ್ಮ ದೇಶದ ಶಕ್ತಿಯಾದ ಕಾಲ್ದಳ, ವಾಯುದಳ ಹಾಗೂ ನೌಕದಳ ಒಟ್ಟಾಗಿ ಹೋರಾಡಲು ನಿಶ್ಚಯಿಸುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವಾಯುಪಡೆ ಮೇ ೨೬ರಿಂದ ಭೂಸೇನೆಯ ಜೊತೆಗೆ ನಿಂತಿತು. ಭೂಸೇನೆಗೆ ವಾಯುಪಡೆಗೆ ಸಾಥ್ ಕೊಟ್ಟ ಬೆನ್ನಲ್ಲೇ ನೌಕಾಪಡೆ ತಾನೂ ಆಪರೇಷನ್ ವಿಜಯಕ್ಕೆ ಕೈ ಜೋಡಿಸಿತು. ‘ಆಪರೇಶನ್ ತಲವಾರ್' ಎಂಬ ಹೆಸರಿನಲ್ಲಿ ಅರಬ್ಬಿ ಸಮುದ್ರದಲ್ಲಿ ತನ್ನ ಹಿಡಿತ ಹೆಚ್ಚಿಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ತಲುಪದಂತೆ ಮಾಡಿತು. ನೌಕಾಪಡೆ ಮಾಡಿದ ಅನಿರೀಕ್ಷಿತ ದಾಳಿ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಕೊಟ್ಟಿತು. ಇತ್ತ ವಾಯುಪಡೆಯ ಆಪರೇಷನ್ ಸಫೇದ್ ಸಾಗರ್ ಪಾಕ್ ಸೈನಿಕರನ್ನು ಘಾಸಿಗೊಳಿಸಿತ್ತು. ಭೂಸೇನೆಯ ಸತತ ಪ್ರಯತ್ನದಿಂದ ಟೋಲೋಲಿಂಗ್, ಟೈಗರ್ ಹಿಲ್ಸ್, ದ್ರಾಸ್ ಮತ್ತು ಇತರ ಭೂಭಾಗಗಳನ್ನು ವಶಪಡಿಸಿತು. ಎರಡು ತಿಂಗಳುಗಳ ಕಾರ್ಯಾಚರಣೆಯ ಮೂಲಕ ಬಹುತೇಕ ಭಾಗಗಳು ಭಾರತವು ಪುನಃ ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಒತ್ತಡದಿಂದಾಗಿ ಪಾಕಿಸ್ತಾನ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿತು. ಕ್ಯಾನ್ಬರ್ರಾ ಎಂಬ ಪರಿಶೋಧನೆಯ ವಿಮಾನದ ಮೂಲಕ ಗುಡ್ಡಗಳ ಮೇಲಿನ ಸ್ಥಿತಿಯ ಕುರಿತು ಮಾಹಿತಿ ದೊರೆತವು. ನಂತರದ ದಿನಗಳಲ್ಲಿ ಹಲವಾರು ವೀರ ಸೈನಿಕರ ಪ್ರಾರ್ಣಾಪಣೆಯಿಂದಾಗಿ ಪಾಕಿಗಳ ವಶದಲ್ಲಿದ್ದ ಒಂದೊAದೆ ಪರ್ವತವನ್ನು ಗೆಲ್ಲಲಾಗುತ್ತದೆ. ತೋಲೋಲಿಂಗ್, ಪಾಯಿಂಟ್ ೫೧೪೦, ಪಾಯಿಂಟ್ ೪೭೦೦, ಥ್ರೀ ಪಿಂಪಲ್, ಟೈಗರ್ ಹಿಲ್, ದ್ರಾಸ್ ವಿಭಾಗದ ಸ್ಥಳಗಳು, ಪಿಂಪಲ್ ೨, ಜುಬೇರ್ ಹಿಲ್( ಇದನ್ನು ಗೆದ್ದರೆ ಪಾಯಿಂಟ್ ೪೮೧೨, ಖಾಲೂಬಾರ್, ಪಾಯಿಂಟ್ ೫೮೨೭ಗಳನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಹಾಯವಾಗುತ್ತದೆ.), ಪಾಯಿಂಟ್ ೫೫೦೦, ಪಾಯಿಂಟ್೫೫೯೦ ಹಾಗೂ ಇನ್ನಿತರ ಗುಡ್ಡಗಳನ್ನು ಗೆದ್ದು ವಿಶ್ವಮಟ್ಟದಲ್ಲಿ ನಮ್ಮ ಸೇನೆ ಸೈ ಎನಿಸಿಕೊಳ್ಳುತ್ತದೆ. ಈ ಎಲ್ಲಾ ಗುಡ್ಡಗಳನ್ನು ಗೆಲ್ಲುವುದು ಸುಲಭದ ಮಾತಗಿರಲಿಲ್ಲ. ನೆನಪಿರಲಿ ನಮ್ಮ ಸೈನಿಕರು ಗುಡ್ಡಗಳ ಕೆಳಗಿನಿಂದ ಯುದ್ಧ ಮಾಡಬೇಕಿತ್ತು!. ಮೇಲಿಂದ ಒಂದು ಬಂಡೆಗಲ್ಲು ತಳ್ಳಿದ್ದರೂ ಹಲವಾರು ಸೈನಿಕರು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ. ಹೀಗಿದ್ದರೂ ಕೂಡ ಭಾರತ ಈ ಯುದ್ಧದಲ್ಲಿ ವಿಜಯ ಪತಾಕೆಯನ್ನು ಹಾರಿಸುತ್ತದೆ. ಈ ವಿಜಯಕ್ಕಾಗಿ ನಾವು ಕಳೆದು ಕೊಂಡಿದ್ದು ಅಜಯ್ ಅಹುಜಾ, ಮೇ.ರಾಜೇಶ್ ಅಧಿಕಾರಿ, ಆರ್.ಪುಂಡಿರ್, ಮುಹಿಲನ್, ವಿವೇಕ್ ಗುಪ್ತ, ವಿಕ್ರಂ ಬಾತ್ರ, ಮೇ.ಪದ್ಮಪಾಣಿ ಆಚಾರ್ಯ, ರೈಫಲ್ ಮ್ಯಾನ್ ಸಂಜಯ್ ಕುಮಾರ್, ಮನೋಜ್ ಕುಮಾರ್ ಪಾಂಡೆಯAತಹ ಅನರ್ಘ್ಯ ರತ್ನಗಳನ್ನು. ಅಕಸ್ಮಾತ್ ನಮ್ಮ ಸೈನಿಕರು ವೀರಾವೇಶದಿಂದ ಹೋರಾಡಿ ವಿಜಯ ದೊರಕಿಸಿಕೊಡದಿದ್ದರೆ ಇಂದು ಭಾರತದ ಅನೇಕ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿರುತ್ತಿತ್ತು. ೧೯೯೯ರ ಕಾರ್ಗಿಲ್ ಕದನದಲ್ಲಿ ಭಾರತದ ಗೆಲುವನ್ನು ಜುಲೈ ೨೬ರಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈ ಯುದ್ಧದಲ್ಲಿ ತಾಯಿ ಭಾರತಿ ಕಳೆದುಕೊಂಡದ್ದು ೫೨೭ ಪರಾಕ್ರಮಿ ಪುತ್ರರನ್ನು! ಜಗತ್ತಿನ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಒಂದಾದ ಕಾರ್ಗಿಲ್ನಲ್ಲಿ ನಡೆದ ಕದನದಲ್ಲಿ ಭಾರತ ಕಂಡ ವಿಜಯವು ಐತಿಹಾಸಿಕ ಮಾತ್ರವಾಗಿರದೆ, ೫೨೭ ಯೋಧರ ಬಲಿದಾನದ ಫಲವಾದ್ದರಿಂದ ಇಡೀ ದೇಶ ಭಾವನಾತ್ಮಕವಾಗಿ ಕಂಬನಿ ಮಿಡಿಯಿತು. ಯೋಧರು ಪ್ರಾಣ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಟ ಮಾಡಿ ಕೊನೆಗೆ ಶಿಖರದ ಮೇಲೆ ತಿರಂಗಾ ಹಾರಿಸಿ ವಿಜಯವನ್ನು ಆಚರಿಸಿಕೊಂಡ ಆ ಅಪೂರ್ವ ಕ್ಷಣಗಳನ್ನು ದೂರದರ್ಶನದ ಮೂಲಕ ಇಡೀ ದೇಶ ಬೆರಗಾಗಿ ನೋಡಿತು. ಭಾರತದ ಸ್ವಾತಂತ್ರö್ಯಕ್ಕೆ ಹೇಗೆ ಲಕ್ಷಾಂತರ ಮಹಾಪುರುಷರು ಕಾರಣವೋ, ಹಾಗೆ ಇಂದು ನಾವು ಈ ವಿಶಾಲವಾದ ರಾಷ್ಟçದ ಪುಟ್ಟ ಗ್ರಾಮದಲ್ಲಿ ನಿರ್ಭಯವಾಗಿ ಜೀವಿಸಲು ಸೈನಿಕರು ಕಾರಣ. ಹಗಲು ರಾತ್ರಿಯೆನ್ನದೆ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ರಾಷ್ಟçದ ಸುರಕ್ಷತೆಗಾಗಿ ದುಡಿಯುತ್ತಾರಲ್ಲ ನಿಜಕ್ಕೂ ಅವರು ಶ್ರೇಷ್ಠರು. ನಮ್ಮ ಜೀವನದಲ್ಲಿ ಯಾರನ್ನು ಮರೆತರೂ ರಾಷ್ಟç ಕಾಯೊ ಯೋಧ, ಅನ್ನದಾತ ರೈತ ಹಾಗೂ ರಾಷ್ಟçದ ಒಳಿತಿಗಾಗಿ ದುಡಿದ ಹಾಗೂ ದುಡಿಯುತ್ತಿರುವವರನ್ನೂ ಮಾತ್ರ ಮರೆಯಬಾರದು.

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ| ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರುವೇ ನಮಃ|| ಅವಿಭಾಜ್ಯ, ಅನಂತ, ಕಾಲಾತೀತ, ದೈವಿಕ ಮತ್ತು ಇಡೀ ವಿಶ್ವವನ್ನು ವ್ಯಾಪಿಸಿರುವ ಸತ್ಯವನ್ನು ನನಗೆ ಬಹಿರಂಗಪಡಿಸಿದ ಗುರುವಿಗೆ ನಮನ ಎನ್ನುವುದು ಈ ಮೇಲಿನ ಶ್ಲೋಕದ ಅರ್ಥ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ‘ಗುರು’ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುವವನು ಗುರು. ಆ ಹಿನ್ನೆಲೆಯಲ್ಲಿಯೇ ರಾಷ್ಟçಕವಿ ಕುವೆಂಪು ಅವರು ಕೂಡ ‘ಮುಂದೆ ಗುರಿಯಿರಬೇಕು, ಹಿಂದೆ ಗುರುವಿರಬೇಕು’ ಎಂದು ಹೇಳಿದ್ದಾರೆ. ಭಾರತೀಯ ಪರಂಪರೆಯಲ್ಲಿ ‘ಗುರು’ವಿಗೆ ವಿಶೇಷವಾದ ಸ್ಥಾನಮಾನವನ್ನು ನೀಡಿದ್ದೇವೆ. ‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂದು ದಾಸಶ್ರೇಷ್ಠರು ತಿಳಿಸಿದ್ದಾರೆ. ಗುರು: ಹಿಂದು ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಮಹತ್ವದ್ದು. ಗುರು ಪದದ ಅರ್ಥವೇ ಮಹಾನ್ ಎಂದು. ಹಾಗಾಗಿ ಗುರುವನ್ನು ಭಗವಂತನಿಗೆ ಸಮಾನ ಎಂದು ನಮ್ಮ ಪೂರ್ವಜರು ಭಾವಿಸಿ, ಗುರುವಿನಲ್ಲಿ ಬ್ರಹ್ಮ, ವಿಷ್ಣು ಮಹೇಶ್ವರರನ್ನು ಕಂಡಿದ್ದಾರೆ. ವ್ಯಕ್ತಿಯ ಜೀವನದಲ್ಲಿನ ಕತ್ತಲೆಯನ್ನು ತೊಡೆದುಹಾಕುವವನು ಗುರು, ಜ್ಞಾನವೆಂಬ ಔಷಧಿಯಿಂದ ಅಜ್ಞಾನವನ್ನು ಹೋಗಲಾಡಿಸುವವನೇ ಗುರು - ಹೀಗೆ ನಮ್ಮ ಪೂರ್ವಜರು ಗುರುವನ್ನು ವರ್ಣಿಸಿದ್ದಾರೆ. ಆಕಸ್ಮಿಕ ಮರಣ ಮತ್ತು ನಿಶ್ಚಿತ ಮರಣದ ಮಧ್ಯದ ಬದುಕಿನ್ನು ಶ್ರೇಷ್ಠವಾಗಿಸಲು ವ್ಯಕ್ತಿಯ ಬದುಕಿನಲ್ಲಿ ಗುರಿ ಇರಬೇಕು. ಹಾಗೆಯೇ ಗುರಿಯ ಕಡೆಗೆ ಸರಿಯಾದ ದಾರಿಯಲ್ಲಿ ಮುನ್ನಡೆಸಲು ಗುರು ಅವಶ್ಯಕ. ವ್ಯಾಸಪೂರ್ಣಿಮೆ: ಆಷಾಢ ಮಾಸದ ಹುಣ್ಣಿಮೆ ಕೃಷ್ಣದ್ವೆöÊಪಾಯನರ ಜನ್ಮದಿನ. ತಮ್ಮ ಅಪಾರ ಜ್ಞಾನದಿಂದ ಮಹಾಭಾರತ, ಭಗವದ್ಗೀತೆಯ ಕರ್ತೃ ಆದರು. ವೇದಗಳನ್ನು ವರ್ಗೀಕರಿಸಿ ‘ವೇದವ್ಯಾಸ’ರಾಗಿ ಪ್ರಖ್ಯಾತರಾದರು. ಆದಿಗುರು ಎಂದು ಕರೆಯಲ್ಪಡುವ ವೇದವ್ಯಾಸರ ಜನ್ಮದಿನವನ್ನು ಶ್ರೀಗುರುಪೂರ್ಣಿಮೆಯಾಗಿ ಆಚರಿಸುವುದು ಹಿಂದು ಸಮಾಜದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿ. ಸಪ್ತಚಿರಂಜೀವಿಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಡುವ ವೇದವ್ಯಾಸರು ಪುರಾಣಗಳನ್ನು, ಬ್ರಹ್ಮಸೂತ್ರಗಳನ್ನು ರಚಿಸಿ ಭಾರತದ ಭವ್ಯ ಜ್ಞಾನ ಸಂಪತ್ತಿಗೆ ಅತ್ಯದ್ಭುತ ಕೊಡುಗೆ ನೀಡಿದವರು. ಭಗವಾಧ್ವಜ ನಮ್ಮ ಗುರು: ವ್ಯಕ್ತಿಯ ಬದುಕಿನಲ್ಲಿ ಹೇಗೆ ಗುರು ಅವಶ್ಯಕವೋ ಅಂತೆಯೇ ಸಂಘಟನೆಗೂ ಗುರುವಿನ ಅವಶ್ಯಕತೆ ಇದೆ ಎಂಬುದನ್ನು ರಾಷ್ಟಿçÃಯ ಸ್ವಯಂಸೇವಕ ಸಂಘದ ಸ್ಥಾಪಕ ಡಾ. ಹೆಡಗೇವಾರ್ ಮನಗಂಡರು. ಸಂಘದಲ್ಲಿ ವ್ಯಕ್ತಿ ನಿಷ್ಠೆಯಿಲ್ಲ, ತತ್ವನಿಷ್ಠೆ ಇದೆ. ಸಂಘಕಾರ್ಯ ಸಮಸ್ತ ಸಮಾಜದ ಸರ್ವಾಂಗೀಣ ಉನ್ನತಿಯ ಮಹತ್ತರ ಕಾರ್ಯ. ಇದು ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಆಗುವಂತಹುದಲ್ಲ. ನಿರಂತರ ಕಾರ್ಯಕ್ಕೆ ನಿರಂತರ ಪ್ರೇರಣೆ ನೀಡುವ ಗುರು ಅವಶ್ಯ. ವ್ಯಕ್ತಿ ಪರಿಪೂರ್ಣನಲ್ಲ; ಶಾಶ್ವತನಲ್ಲ. ಹಾಗಾಗಿ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಪ್ರತಿನಿಧಿಸುವ ಭಗವಾಧ್ವಜವೇ ನಮಗೆ ಗುರುವಿನ ಸ್ಥಾನದಲ್ಲಿದೆ. ಮೂರ್ತರೂಪದ ಬಟ್ಟೆಯ ಧ್ವಜದಲ್ಲಿ ಅಡಕವಾಗಿರುವುದು ಅಮೂರ್ತ ತತ್ತ÷್ವಗಳು. ಹೇಗೆ ನೀರಿಗೆ ಶ್ರದ್ಧೆಯನ್ನು ಜೋಡಿಸಿದಾಗ ತೀರ್ಥವಾಗುವುದೋ, ಆಹಾರಕ್ಕೆ ಶ್ರದ್ಧೆಯನ್ನು ಜೋಡಿಸಿದಾಗ ನೈವೇದ್ಯವಾಗುವುದೋ, ಅಂತೆಯೇ ಬರಿಗಣ್ಣಿನಿಂದ ಕಾಣುವುದು ಬಟ್ಟೆಯ ತುಂಡಾದರೂ ಶ್ರದ್ಧೆ, ಭಕ್ತಿಯಿಂದ ಕಂಡಾಗ ಭಗವಾಧ್ವಜದಲ್ಲಿ ಗುರುವನ್ನು ಕಾಣಬಹುದು. ಜ್ಞಾನ: ಕತ್ತಲೆ ಕಳೆದು ಬೆಳಕು ಹರಿಯುವಾಗಿನ ಅರುಣೋದಯದ, ಜ್ಞಾನೋದಯದ ಸಂಕೇತ ಅರುಣ ವರ್ಣ ಭಗವೆಯದ್ದು. ಭಗವೆಯನ್ನು ಕಂಡಾಗ ಜಗತ್ತಿಗೆ ಜ್ಞಾನಸುಧೆಯನ್ನು ಹರಿಸಿದ ಪುಣ್ಯಭೂಮಿ ಭಾರತದ ಜ್ಞಾನದ ಪರಂಪರೆ ನಮಗೆ ನೆನಪಾಗಬೇಕು. ಶೌರ್ಯ: ಹಿಂದು ಸಮಾಜದ ಮೇಲೆ ಸಹಸ್ರಾರು ವರ್ಷಗಳ ಕಾಲದಿಂದ ನಿರಂತರ ಆಕ್ರಮಣ ನಡೆದಿದೆ. ಆ ಎಲ್ಲಾ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದ ಶೌರ್ಯದ ಪರಂಪರೆ ನಮ್ಮದು. ನಮ್ಮೆಲ್ಲಾ ವೀರ ಮಹಾಪುರುಷರಿಗೆ ಪ್ರೇರಣೆ ನೀಡಿದ ಧ್ವಜ ಭಗವಾಧ್ವಜ. ನಮ್ಮ ಪುರಾಣಗಳಲ್ಲಿ ಧರ್ಮಧ್ವಜವಾಗಿ ಮೆರೆದ ಭಗವೆಯನ್ನೇ, ಇತಿಹಾಸದಲ್ಲಿ ನಮ್ಮೆಲ್ಲಾ ಹಿಂದು ವೀರರು ಉಪಯೋಗಿಸಿದ್ದು ಮತ್ತು ಅದರಿಂದಲೇ ಪ್ರೇರಣೆ ಪಡೆದಿದ್ದು. ಭಗವಾಧ್ವಜವನ್ನು ಕಂಡಾಗ ಭಾರತದ ಶೌರ್ಯದ ಪರಂಪರೆ ನೆನಪಾಗಬೇಕು. ತ್ಯಾಗ: ತ್ಯಾಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ, ಸರ್ವಸಂಗ ಪರಿತ್ಯಾಗಿಗಳಾಗಿ ಅಧ್ಯಯನ, ಅಧ್ಯಾಪನ ಮಾಡುತ್ತಾ ಸಮಾಜದ ಹಿತಚಿಂತನೆ ಮಾಡುವ ಸನ್ಯಾಸಿ ಪರಂಪರೆಯ ಸಂಕೇತ ಭಗವಾಧ್ವಜ. ತ್ಯಾಗ, ಬಲಿದಾನಗಳಿಂದ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿದ ಶೂರ-ವೀರರ, ಮಹಾತ್ಮರ ಪರಂಪರೆ ನೆನಪಿಸುವ ಸಂಕೇತ ಭಗವಾಧ್ವಜ. ಹಾಗಾಗಿ ನಮ್ಮ ಸಂಸ್ಕೃತಿಯ ಪುನರುಜ್ಜೀವನಕ್ಕೆ ಕಟಿಬದ್ಧವಾದ ಸಂಘಕಾರ್ಯಕ್ಕೆ ಗುರುವಿನ ಸ್ಥಾನದಲ್ಲಿರುವ ಭಗವಾಧ್ವಜವೇ ನಮಗೆ ಪ್ರೇರಕ ಶಕ್ತಿ. ಸಮರ್ಪಣೆ: ವಜ್ರಾಯುಧಕ್ಕಾಗಿ ತನ್ನ ಬೆನ್ನುಮೂಳೆಯನ್ನೇ ಸಮರ್ಪಿಸಿದ ದಧೀಚಿ, ಪುಟ್ಟ ಹಕ್ಕಿಯ ಪ್ರಾಣ ಉಳಿಸಲು ತನ್ನ ಶರೀರದ ಭಾಗಗಳನ್ನೇ ಕತ್ತರಿಸಿ, ಅದೂ ಸಾಲದಾದಾಗ ತನ್ನನ್ನೇ ಸಮರ್ಪಿಸಿಕೊಂಡ ಶಿಬಿ ಚಕ್ರವರ್ತಿ ಇತ್ಯಾದಿ ಸಮಾಜಹಿತಕ್ಕೆ ಸಮರ್ಪಣೆ ಮಾಡಿದ ಉದಾಹರಣೆಗಳೇ ನಮಗೆ ಪ್ರೇರಣೆ. ಯಜ್ಞದಲ್ಲಿ ನಾವು ಶ್ರೀಗಂಧ, ತುಪ್ಪ, ರೇಶಿಮೆ ಮುಂತಾದ ಶ್ರೇಷ್ಠವಾದ ವಸ್ತುಗಳನ್ನೇ ಅರ್ಪಿಸುತ್ತೇವೆ. ಹಾಗೆಯೇ ಸಮಾಜದ ಕೆಲಸಕ್ಕೆ ನಮ್ಮಲ್ಲಿನ ಶ್ರೇಷ್ಠ ಸಂಗತಿಗಳನ್ನು ಅರ್ಪಿಸಬೇಕು. ಅಗ್ನಿ ಹೇಗೆ ಲೋಹಗಳನ್ನು ಕರಗಿಸಿ ಶುದ್ಧೀಕರಿಸುತ್ತದೋ ಹಾಗೆಯೇ ಈ ಸಮಾಜದೇವನಲ್ಲಿ ನಮ್ಮೆಲ್ಲಾ ಕೆಟ್ಟಗುಣಗಳೂ ನಾಶವಾಗಿ ನಾವು ಸದ್ಗುಣಿಗಳಾಗುತ್ತೇವೆ. ಗುರುಪೂಜೆ: ಹೂ-ಹಣ್ಣು, ದೀಪ-ಧೂಪ-ನೈವೇದ್ಯ, ಆರತಿ, ಮಂತ್ರ-ತAತ್ರ ಇತ್ಯಾದಿಗಳಿಂದ ಮಾಡುವ ಪೂಜೆ - ಬಾಹ್ಯ ಪೂಜೆ. ನಾವೂ ಸದ್ಗುಣಗಳನ್ನು ಮೈಗೂಡಿಸಿಕೊಂಡು, ಪರಹಿತಕ್ಕಾಗಿ ಬದುಕುತ್ತಾ ದೇವರಂತೆಯೇ ಆಗಲು ಯತ್ನಿಸುವುದೇ ನಿಜವಾದ ದೇವರ ಪೂಜೆ. ಸಂಘದ ಕೆಲಸ ಮಾಡುತ್ತಾ ನಾವು ಮಾಡುವ ಸತತ ಸಾಧನೆ, ಸಮಾಜ ಹಿತಕ್ಕಾಗಿ ನಮ್ಮದೆಲ್ಲವನ್ನೂ ಸಮರ್ಪಿಸುವುದು - ಇದುವೇ ನಿಜವಾದ ಗುರುಪೂಜೆ. ಗುರುದಕ್ಷಿಣೆ: ಸಂಘ ಒಂದು ಕುಟುಂಬವಿದ್ದAತೆ. ಕುಟುಂಬದ ಎಲ್ಲ ಅವಶ್ಯಕತೆಗಳು ಕುಟುಂಬದ ಸದಸ್ಯರಿಂದಲೇ ಪೂರೈಕೆಯಾಗುತ್ತವೆ. ಸಂಘಕಾರ್ಯಕ್ಕೆ ಅವಶ್ಯವಿರುವ ಆರ್ಥಿಕ ಸಂಪನ್ಮೂಲವೂ ಸ್ವಯಂಸೇವಕರಿAದಲೇ ಆಗಬೇಕಾದುದು ಸಹಜ. ಸಂಘದ ಗುರುಪೂಜೆ ಉತ್ಸವದಲ್ಲಿ ಸ್ವಯಂಸೇವಕರು ಮಾಡುವ ಗುರುದಕ್ಷಿಣೆಯ ಅರ್ಪಣೆ ಇದಕ್ಕೆ ಪೂರಕ. ಗುರುದಕ್ಷಿಣೆ ವಂತಿಗೆಯಲ್ಲ, ದೇಣಿಗೆಯಲ್ಲ, ಕಾಣಿಕೆಯಲ್ಲ. ನಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟು ಭಗವಾಧ್ವಜದ ಸಮಕ್ಷಮದಲ್ಲಿ ಗುರುದಕ್ಷಿಣೆಯಾಗಿ ಸಮರ್ಪಿಸುತ್ತಿದ್ದೇವೆ. ಇದು ಯಜ್ಞಕ್ಕೆ ಸಮರ್ಪಿಸುವ ಹವಿಸ್ಸಿನಂತೆ - "ರಾಷ್ಟಾçಯ ಸ್ವಾಹಾ, ಇದಂ ನ ಮಮ" (ರಾಷ್ಟçಕ್ಕೆ ಸಮರ್ಪಿಸುತ್ತಿದ್ದೇನೆ, ಇದು ನನ್ನದಲ್ಲ). ನಮ್ಮ ಸಂಪಾದನೆ ನಾವು ಸಮಾಜದಿಂದ ಪಡೆದಿರುವುದು. ನಮ್ಮ ಅವಶ್ಯಕತೆಗಳ ಪೂರೈಕೆಗೆ ಬೇಕಾಗುವಷ್ಟು ಮಾತ್ರ ನಮ್ಮದು. ಉಳಿದದ್ದೆಲ್ಲ ವಾಸ್ತವವಾಗಿ ಸಮಾಜದ್ದೇ, ಸಮಾಜಕ್ಕೆ ಸಲ್ಲಬೇಕು. ಸಂಘ ಕಾರ್ಯ: ವ್ಯಕ್ತಿ ನಿರ್ಮಾಣದಿಂದ ರಾಷ್ಟçನಿರ್ಮಾಣ - ಈ ಕಲ್ಪನೆಯೊಂದಿಗೆ ಕಾರ್ಯ ಮಾಡುತ್ತಿರುವ ಸಂಘದ ಶಾಖೆ ೬೦ ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ನಡೆಯುತ್ತಿದೆ. ಶಾಖೆಯಲ್ಲಿ ನಿರ್ಮಾಣಗೊಂಡ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವ್ಯವಸ್ಥಾ ಪರಿವರ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಸೇವಾ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜ ಪರಿವರ್ತನೆಯ ದೃಷ್ಟಿಯಿಂದ ಧರ್ಮಜಾಗರಣ, ಕುಟುಂಬ ಪ್ರಬೋಧನ್, ಸಾಮರಸ್ಯ, ಗ್ರಾಮವಿಕಾಸ, ಗೋಸೇವೆ, ರ್ಯಾವರಣದ ಕಾರ್ಯಕ್ಕೆ ಸಂಘದ ಸ್ವಯಂಸೇವಕರು, ಸಮಾಜವನ್ನು ಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಸಮಯ ಸಮರ್ಪಣೆ ಸಂಘಕ್ಕೆ ೧೦೦ ವರ್ಷಗಳು ತುಂಬುವ ಈ ಅಮೃತಕಾಲದಲ್ಲಿ ಭಾರತವು ವೈಶ್ವಿಕ ನೇತೃತ್ವವನ್ನು ಕೊಡುವಂತಾಗಲು ಸಂಘಟಿತ ಪ್ರಯತ್ನ ಮಾಡಬೇಕಾಗಿದೆ. ಹಿಂದು ಧರ್ಮ, ಸಂಸ್ಕೃತಿ, ಸಮಾಜಯ ರಕ್ಷಣೆಯ ಮೂಲಕ ಹಿಂದುರಾಷ್ಟçದ ಸರ್ವಾಂಗೀಣ ಉನ್ನತಿಯ ಕಾರ್ಯ ಮಾಡಬೇಕಾಗಿದೆ. ಸಮಾಜ ಪರಿವರ್ತನೆಯ ಕಾರ್ಯ ನನ್ನಿಂದ, ನನ್ನ ಮನೆಯಿಂದ, ನನ್ನ ಪರಿಸರದಲ್ಲಿ ಆಗುವಂತೆ ಪ್ರಯತ್ನ ಆಗಬೇಕಾಗಿದೆ. ಪಂಚ ಪರಿವರ್ತನೆಗಳಾದ ಕುಟುಂಬ ಪ್ರಬೋಧನ, ಸಾಮರಸ್ಯ, ಪರ್ಯಾವರಣ, ಸ್ವದೇಶಿ ಜೀವನಶೈಲಿ, ನಾಗರಿಕ ಕರ್ತವ್ಯ - ನನ್ನಿಂದ ಆರಂಭಗೊAಡು, ನನ್ನ ಮನೆಯಲ್ಲಿ ಅನುಷ್ಠಾನ, ನನ್ನ ಪ್ರಯತ್ನದಿಂದ ನನ್ನ ಮನೆಯ ಸುತ್ತಲಿನ ಹತ್ತು ಮನೆಗಳಲ್ಲಿ ಪರಿವರ್ತನೆಯನ್ನು ತರುವುದರ ಮೂಲಕ ಸಮಾಜ ಪರಿವರ್ತನೆಯ ಕಾರ್ಯಕ್ಕೆ ಸಮಯ ನೀಡಬೇಕಾಗಿದೆ. ರಾಷ್ಟçಸೇವೆಯ ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಸ್ವಲ್ಪ ಸಮಯವನ್ನು, ಹಲವರು ಹೆಚ್ಚು ಸಮಯವನ್ನು, ಕೆಲವರು ಪೂರ್ಣ ಸಮಯವನ್ನು ನೀಡಬೇಕಾಗಿದೆ. ಎಲ್ಲರಿಗೂ ಗುರುವಿನ ಸ್ಥಾನದಲ್ಲಿ ನಿಂತು ಪ್ರೇರಣೆ ತುಂಬುವ ಕೆಲಸವನ್ನು ಭಗವಾಧ್ವಜ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.
‘ಭಾರತ ರಾಷ್ಟçದ ಕಲ್ಪನೆಯಲ್ಲಿ ಜಾತಿಮತಭೇದ ಉಚಿತವಲ್ಲ ಮತ್ತು ಭಾರತೀಯರು ಪೂಜಿಸಬೇಕಾದುದು ಮಾತೃಭೂಮಿಯನ್ನು, ಪಾಲಿಸಬೇಕಾದುದು ಭಾರತೀಯ ಸಂಸ್ಕೃತಿಯನ್ನು' ಎಂದು ಜನರಿಗೆ ತಿಳಿ ಹೇಳಿದ ಅಪ್ರತಿಮ ದೇಶಭಕ್ತರಲ್ಲಿ ವೀರ ಸಾವರ್ಕರರು ಅಗ್ರ ಗಣ್ಯರಾಗಿ ನಿಲ್ಲುತ್ತಾರೆ. ತಾಯಿ ಭಾರತಿಯ ಕುರಿತಾಗಿ ಅದೆಷ್ಟು ಬರೆದರೂ ಸವೆಯದ ಅವರ ಲೇಖನಿ, ಅದೆಷ್ಟು ಹೊಗಳಿದರೂ ಸುಸ್ತು ಕಾಣದ ಮುಖ, ಆರದ ದೇಶಭಕ್ತಿಯ ಜ್ಯೋತಿ ನವಭಾರತದ ಯುವಶಕ್ತಿಗೆ ದೇಶಸೇವೆಗೈಯಲು ಪ್ರೇರಣಾದಾಯಕವಾಗಿದೆ. ತನ್ನ ಯೌವನದ ಕಾಲದಲ್ಲಿ ರಾಷ್ಟೊçÃತ್ಥಾನಕ್ಕೆ ಶ್ರಮಿಸಿದ ವಿನಾಯಕ ದಾಮೋದರ ಸಾವರ್ಕರರು ದೇಶ ಕಂಡ ಅಪ್ರತಿಮ ದೇಶಭಕ್ತರಲ್ಲಿ ಒಬ್ಬರು. ಬಾಲ್ಯದಲ್ಲಿ ಶಿವಾಜಿ ಮಹಾರಾಜರ ಕಥೆಗಳನ್ನು ಕೇಳಿ ಬೆಳೆದ ವೀರ ಸಾವರ್ಕರರಿಗೆ ಸ್ವರಾಜ್ಯ ಮತ್ತು ಸ್ವಧರ್ಮದ ಬಗ್ಗೆ ಆಸಕ್ತಿ ತಾನಾಗಿಯೇ ಬಂದಿತ್ತು. ಒಂದು ದೇಶದ ಪ್ರಗತಿಯಲ್ಲಿ ಯುವಶಕ್ತಿಯ ಪಾತ್ರ ಏನೆಂದು ಜನರಿಗೆ ತಿಳಿಹೇಳಿದ ವೀರ ಸಾವರ್ಕರರು ಬರಿಯ ಸ್ವಾತಂತ್ರ್ಯ ಸಮರ ಸೇನಾನಿ ಮಾತ್ರವಲ್ಲದೆ ರಾಷ್ಟಿçÃಯ ಏಕತೆಗೆ ಶ್ರಮಿಸಿದ ಸಮಾಜ ಸುಧಾರಕರೂ ಆಗಿದ್ದರು. ಯುವಜನರಲ್ಲಿ ದೇಶಭಕ್ತಿ ಮೂಡಿದರೆ ಪರಕೀಯರು ಹೇಗೆ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದನ್ನು ಯುವ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಆಜಾದ್, ರಾಜ್ಗುರು ಮುಂತಾದ ಯುವ ಕ್ರಾಂತಿಕಾರಿಗಳ ಮೂಲಕ ಸಾವರ್ಕರರು ಸಂದೇಶವನ್ನು ಕೊಡುತ್ತಾರೆ. ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳಿರುವ, ಜಾತಿ-ಮತಗಳ ಆಧಾರದಲ್ಲಿ ಭೇದ ಭಾವ ಇರದ, ಅಲ್ಪ ಸಂಖ್ಯಾತರ ಸಂಸ್ಕೃತಿಗೆ ಪೂರಕವಾಗಿರುವ ಮತ್ತು ಬಹುಸಂಖ್ಯಾತರಿಗೆ ಶಾಸನ ಬದ್ಧ ಅಧಿಕಾರಕ್ಕೆ ಅವಕಾಶ ಇರುವ ಅಖಂಡ ಭಾರತದ ಕಲ್ಪನೆಯು ಸಾವರ್ಕರರ ಮನಸ್ಸಿನಲ್ಲಿತ್ತು. ಸಿಂಧೂ ಉಗಮಸ್ಥಾನದಿಂದ ದಕ್ಷಿಣ ಸಾಗರದವರೆಗಿನ ಭಾರತ ಭೂಮಿಯನ್ನು ಪುಣ್ಯ ಭೂಮಿ ಎಂದು ಕಾಣುವವನೇ ಹಿಂದೂ ಎಂದು ಬಲವಾಗಿ ನಂಬಿದ್ದ ಸಾವರ್ಕರರು ಜಾತಿ ಪದ್ಧತಿಯನ್ನು ವಿರೋಧಿಸುತ್ತಿದ್ದರು. ಒಂದು ರಾಷ್ಟçದ ಮುನ್ನಡೆಯಲ್ಲಿ ಅದರ ಇತಿಹಾಸದ ಸರಿಯಾದ ಗ್ರಹಿಕೆಯ ಅಗತ್ಯ ಇದೆ ಎಂದು ತಿಳಿದು ಸಾವರ್ಕರರು ಬರೆದ ‘೧೮೫೭ ಭಾರತದ ಸ್ವಾತಂತ್ರ್ಯ ಸಂಗ್ರಾಮ' ಎಂಬ ಪುಸ್ತಕ ಪ್ರಕಟಣೆಗೆ ಮುಂಚೆ ಎರಡು ದೇಶಗಳಲ್ಲಿ ನಿಷೇಧಕ್ಕೆ ಒಳಗಾಗಿತ್ತು. ಸಾವರ್ಕರರ ಲೇಖನಿಯೇ ಹಾಗೆ! ಕತ್ತಿಯಂತೆ ಹರಿತ! ಮಾತು ಬೆಂಕಿಯ ಕಿಡಿಗಳನ್ನು ಸ್ಫುರಿಸುವಂತಹವುಗಳು. ಆಂಗ್ಲರ ದಬ್ಬಾಳಿಕೆಗೆ ಪ್ರತ್ಯುತ್ತರವಾಗಿ ಅನೇಕ ದೇಶಭಕ್ತರನ್ನು ಹುಟ್ಟು ಹಾಕಿದ ಸ್ಪೂರ್ತಿದಾಯಕ ಮಾತುಗಳು. ೧೯೦೧ರಲ್ಲಿ ವಿಕ್ಟೋರಿಯಾ ರಾಣಿ ಮರಣವನ್ನಪ್ಪಿದ ಸಂದರ್ಭದಲ್ಲಿ ಸಾವರ್ಕರರು ಲಕ್ಷಾಂತರ ಭಾರತೀಯರ ರಕ್ತಪಾತಕ್ಕೆ ಕಾರಣಳಾದ ಅವಳ ಸಾವಿಗೆ ನಾವು ಶೋಕಾಚರಣೆ ಮಾಡುವ ಅಗತ್ಯವಿಲ್ಲ ಎಂದು ಜನರಿಗೆ ಅರ್ಥವಾಗುವಂತೆ ಹೇಳುತ್ತಾರೆ. ‘ಆಂಗ್ಲರು ಮಹಾಸಾಗರವನ್ನು ದಾಟಿ, ನಮ್ಮ ನೆಲದಲ್ಲಿ ಬಂದು ಇಲ್ಲಿನ ಹವೆಗೆ ಒಗ್ಗಿಸಿಕೊಂಡು ಆಡಳಿತವನ್ನು ಕಿತ್ತುಕೊಂಡಿದ್ದಾರೆ ಎಂದಾದರೆ ಅವರ ನೆಲದಲ್ಲಿ ಹೋಗಿ ನಾನೇಕೆ ನನ್ನ ಜನ್ಮಭೂಮಿಯ ಶ್ರೇಷ್ಠತೆಯ ಬಗ್ಗೆ ಹೇಳಬಾರದು?' ಎಂಬ ಆಲೋಚನೆ ಬಂದೊಡನೆ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನು ಈ ಸ್ವಾತಂತ್ರ್ಯ ವೀರ ಮಾಡುತ್ತಾರೆ. ದೇಶಸೇವೆಗೆ ವೀರ ಸಾವರ್ಕರರಿಗೆ ಸಮಯದ ಅಭಾವವಿಲ್ಲ, ಭಾರತಾಂಬೆಯ ಗುಣಗಾನ ಮಾಡುವುದಕ್ಕೆ ಲೇಖನಿಯ ಶಾಯಿ ಖಾಲಿಯಾಗುವುದಿಲ್ಲ, ಪರಕೀಯರ ವಿರುದ್ಧ ಮಾತನಾಡಲು ಗಂಟಲ ಪಸೆ ಆರುವುದಿಲ್ಲ. ಬಂಗಾಳ ವಿಭಜನೆಯ ಸಮಯದಲ್ಲಿ ವಿದೇಶಿ ಉತ್ಪನ್ನಗಳ ಬಹಿಷ್ಕಾರ ಮಾಡಬೇಕೆಂದು ಯುವಶಕ್ತಿಗೆ ಕರೆ ನೀಡಿದ ಸಾವರ್ಕರರು ವಿದೇಶಿ ವಸ್ತçಗಳಿಗೆ ಬೆಂಕಿ ಹಚ್ಚಿದಾಗ ಅವರಲ್ಲಿ ದೇಶಭಕ್ತರನ್ನು ಹುಟ್ಟು ಹಾಕುವ ದೂರಾಲೋಚನೆ ಇತ್ತು. ಚಾಪೇಕರ್ ಸಹೋದರರ, ಮಂಗಲ್ ಪಾಂಡೆಯAಥ ವೀರರು ಅನುಸರಿಸಿದ ಮಾರ್ಗದಲ್ಲಿ ನಡೆದರೆ ಮಾತ್ರವೇ ಆಂಗ್ಲರು ನಮ್ಮ ದೇಶ ಬಿಟ್ಟು ತೊಲಗುತ್ತಾರೆ ಎಂಬ ವಾಸ್ತವವನ್ನು ಲಂಡನ್ನಲ್ಲಿರುವ ಭಾರತೀಯರಿಗೆ ಸ್ಪಷ್ಟಪಡಿಸಲು ಸಾವರ್ಕರರು ಪ್ರಯತ್ನವನ್ನು ಮಾಡುವಾಗ ಅವರ ಸಂಪರ್ಕಕ್ಕೆ ಬಂದ ಮದನ್ ಲಾಲ್ ಧಿಂಗ್ರಾ ಅಪ್ರತಿಮ ದೇಶಭಕ್ತನಾಗಿ ಬದಲಾದನು. ಭಾರತದಲ್ಲಿ ದಬ್ಬಾಳಿಕೆ ನಡೆಸಿ, ಜನರಿಗೆ ಶೋಷಣೆ ಕೊಟ್ಟಿದ್ದ ಕರ್ಜನ್ ವಾಯಿಲಿಯನ್ನು ಸಂಹರಿಸಿ ನಿಶ್ಚಿಂತೆಯಿAದ ನೇಣುಗಂಬವೇರಿದ ಧಿಂಗ್ರಾ ಯುವಜನರಲ್ಲಿ ಸ್ಫೂರ್ತಿ ತುಂಬಿದ್ದ. ಕ್ರಾಂತಿಕಾರಿಗಳ ಜೊತೆ ಕ್ರೂರವಾಗಿ ನಡೆದು ಕೊಂಡಿದ್ದ ಜಾಕ್ಸನ್ ಎಂಬಾತನು ಲಕ್ಷö್ಮಣ್ ಕಾನ್ಹೇರಿ ಎಂಬ ಹದಿನೆಂಟರ ದೇಶಭಕ್ತನಿಂದ ಪರಲೋಕ ಸೇರಿದ್ದ. ಇದೇ ಕಾರಣಗಳನ್ನು ಇಟ್ಟುಕೊಂಡು ಸರ್ಕಾರವು ಸಾವರ್ಕರರ ಮನೆಯನ್ನು ಜಪ್ತಿ ಮಾಡುತ್ತದೆ. ಈ ಅಪ್ರತಿಮ ದೇಶಭಕ್ತರಿಗೆ ಕಾಲಾಪಾನಿ ಎಂಬ ಆಜೀವ ಪರ್ಯಂತ ಶಿಕ್ಷೆಯನ್ನು ೨ ಅವಧಿಗೆ ವಿಧಿಸಿ ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತದೆ. ‘ದೇಶಭಕ್ತಿ' ಎಂಬ ಮಹಾಪರಾಧಕ್ಕಾಗಿ ಬ್ರಿಟಿಷ್ ಸರಕಾರವು ವೀರ ಸಾವರ್ಕರರಿಗೆ ಕಾಲಾಪಾನಿ ಶಿಕ್ಷೆಯನ್ನು ವಿಧಿಸುತ್ತದೆ. ಭಾರತದ ಯುವ ಕ್ರಾಂತಿಕಾರಿಗಳನ್ನು ಸಂಘಟಿಸಿ ಆಂಗ್ಲರಿಗೆ ಹೊಸ ಭಯ ಸೃಷ್ಟಿಸಿದ ಸಾವರ್ಕರರ ಕಾರ್ಯಗತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಎರಡೆರಡು ಕರಿನೀರಿನ ಶಿಕ್ಷೆ ವಿಧಿಸಿದ ಸರಕಾರಕ್ಕೆ ಅವರು ಜೈಲಿನಲ್ಲಿದ್ದರೂ ಅವರ ದೇಶದ ಕಾಯಕಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಅಂಡಮಾನ್ನಲ್ಲಿ ರಾಜಕೀಯ ಕೈದಿಗಳಿಗೆ ಇದ್ದ ಗಾಣದಿಂದ ಎಣ್ಣೆ ತೆಗೆಯುವ ಕೆಲಸ ಮತ್ತು ಹಗ್ಗ ಹೊಸೆಯುವ ಕೆಲಸವನ್ನು ಮಾಡಬೇಕಿತ್ತು. ಎತ್ತಿನ ಬದಲಿಗೆ ಮನುಷ್ಯನನ್ನು ಗಾಣಕ್ಕೆ ಕಟ್ಟಿ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದ ಎಣ್ಣೆಯನ್ನು ತೆಗೆಯಬೇಕು, ಇಲ್ಲದಿದ್ದರೆ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆರೋಗ್ಯ ಹದೆಗಟ್ಟರೂ ಕೇಳುವವರಾರೂ ಇಲ್ಲ. ಜೈಲಿನಲ್ಲಿ ಲೇಖನಿ-ಕಾಗದ ಕೊಡಲಿಲ್ಲ ಎಂಬ ಮಾತ್ರಕ್ಕೆ ಸಾವರ್ಕರರು ಬರೆಯುವುದನ್ನು ನಿಲ್ಲಿಸಲಿಲ್ಲ. ಬದಲಿಗೆ ಒಂದು ಮೊಳೆಯಿಂದ ಗೋಡೆ ಮೇಲೆ ದೇಶಭಕ್ತಿ ಗೀತೆಗಳನ್ನು ಬರೆದರು. ತಮ್ಮ ಅಮ್ಮನ ಕುರಿತಾಗಿ ಬರೆಯುವಾಗ ಕೈಗಳಲ್ಲಿದ್ದ ಕೋಳಗಳು ಭಾರವೆನಿಸಲಿಲ್ಲ, ದೇಹಕ್ಕೆ ಆಯಾಸವಾಗಲಿಲ್ಲ. ಜೈಲಿನಲ್ಲಿ ಹಿಂದೂ ಕೈದಿಗಳಿಗೆ ಆಗುತ್ತಿದ್ದ ಶೋಷಣೆಯನ್ನು, ನಿರಂತರವಾಗಿ ನಡೆಯುತ್ತಿದ್ದ ಮತಾಂತರವನ್ನು ಸಾವರ್ಕರರು ತಡೆಯುತ್ತಾರೆ ‘ಘರ್ ವಾಪಸಿ'ಗೆ ಅವಕಾಶ ಕೊಡುತ್ತಾರೆ. ಸಮಾಜ ಸುಧಾರಣೆಯ ಮೂಲಕ ದೇಶಸೇವೆ: ೧೯೨೧ರಲ್ಲಿ ಜೈಲಿನಿಂದ ಬಿಡುಗಡೆಯಾದ ಸಾವರ್ಕರರು ಅಸ್ಪೃಶ್ಯತೆಯನ್ನು ತೊಡೆದು ಹಾಕವುದಕ್ಕಾಗಿ ಕೆಳಜಾತಿಯೆಂದು ಪರಿಗಣಿಸಿಲ್ಪಟ್ಟವರಿಗೆ ದೇವಾಲಯ ಪ್ರವೇಶ, ಸಹಭೋಜನಗಳನ್ನು ಏರ್ಪಡಿಸಿದರು. ‘ದೇಶಕ್ಕೆ ಅಗತ್ಯ ಬಿದ್ದಾಗ ಪೆನ್ನು ಚೆಲ್ಲಿ ಗನ್ನು ಹಿಡಿಯುವವರು ಬೇಕು' ಎಂದು ಯುವಶಕ್ತಿಗೆ ಕರೆ ನೀಡಿದ ಅವರು ಪ್ರಾಯೋಗಿಕ ಚಿಂತನೆ ಇಲ್ಲದೆ ಯಾವುದೇ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಮತಾಂತರದಿAದ ರಾಷ್ಟಾçತರವಾಗುವುದೆಂಬ ವಾಸ್ತವವನ್ನು ಅರ್ಥೈಸಿಕೊಂಡಿದ್ದ ಅವರು ಶುದ್ಧಿ ಚಳುವಳಿ ಮಾಡುತ್ತಿದ್ದರು. ೧೯೪೭ರಲ್ಲಿ ಭಾರತ ದಾಸ್ಯಮುಕ್ತವಾದಾಗ! ಅಖಂಡ ಭಾರತದ ಕನಸು ಈಡೇರಲಿಲ್ಲ ಎಂಬ ಕೊರಗು ಅವರಲ್ಲಿತ್ತು. ಭಾರತ ವಿಭಜಿಸಲ್ಪಟ್ಟಾಗ ಲಕ್ಷಾಂತರ ಅಮಾಯಕ ಜನರ ಕಗ್ಗೊಲೆ, ಅತ್ಯಾಚಾರಗಳಾದವು. ದೇಶದ ವಿಭಜನೆಯ ಈ ದುರಂತಕ್ಕೆ ಕಾರಣರಾದ ಅನೇಕರು ಈ ಹಿಂಸಾಚಾರದ ಸಂದರ್ಭದಲ್ಲಿ ಮೂಕರಾಗಿದ್ದರು. ಸಾವರ್ಕರರು ಬೀಜ ಬಿತ್ತಿ ಬೆಳೆಸಿದ ಸಂಘಟನೆಯಾದ ಅಭಿನವ ಭಾರತದಲ್ಲಿದ್ದ ತರುಣರು ಜನರಲ್ಲಿ ರಾಷ್ಟಿçÃಯ ಚಿಂತನೆಗಳನ್ನು ತರಲು ಪ್ರಯತ್ನ ಮಾಡುತ್ತಲೇ ಇದ್ದರು. ತಾಯ್ನಾಡಿನಿಂದ ಬಹಳಷ್ಟು ದೂರದಲ್ಲಿದ್ದರೂ ಶಿವಾಜಿ ಜಯಂತಿಯನ್ನು ಆಚರಿಸಿದ ಅಭಿನವ ಭಾರತವು ಲಂಡನ್ನಲ್ಲಿ ಬ್ರಿಟಿಷರಿಗೆ ಅಸೂಯೆಯಾಗುವ ರೀತಿಯಲ್ಲಿ ಬೆಳೆದು ನಿಂತಿತ್ತು. ಸಶಸ್ತç ಕ್ರಾಂತಿಯ ಅಗತ್ಯ ಏನೆಂದು ಮನಗಂಡು ಅನೇಕ ಭಾರತೀಯರು ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಲು ಸಿದ್ಧರಾಗಿ ಮುಂದೆ ಬರುತ್ತಿದ್ದರು. ಸುಖ್ ದೇವ್, ರಾಜ್ ಗುರು, ಭಗತ್ ಸಿಂಗ್ ಮುಂತಾದ ಕ್ರಾಂತಿಕಾರಿಗಳನ್ನು ಸೃಷ್ಟಿಸಿ ಸ್ವತಂತ್ರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಿದ ವೀರ ಸಾವರ್ಕರರು ನಿಜಕ್ಕೂ ಆದರ್ಶ ಪ್ರಾಯರು! ಶಾಂತಿಯ ಜೊತೆ ಜೊತೆಯಲ್ಲಿ ಕ್ರಾಂತಿ ಇದ್ದ ಕಾರಣಕ್ಕೆ ಸಾವಿರದ ಒಂಬೈನೂರ ನಲ್ವತ್ತೇಳರಲ್ಲಿ ಪರಕೀಯರು ಭಾರತವನ್ನು ಅನಿವಾರ್ಯವಾಗಿ ಬಿಡಬೇಕಾಯಿತು. ದೇಶಸೇವೆಗಾಗಿ ಕರೆ ಬಂದರೆ ಸದಾ ಸಿದ್ಧರಾಗಿರಬೇಕೆಂಬ ಸಂದೇಶವನ್ನು ಸಾವರ್ಕರರು ನೀಡುತ್ತಾರೆ. ಸಾಮಾಜಿಕ ಸಾಮರಸ್ಯ ಕಾಪಾಡುವುದರಲ್ಲಿಯೂ ಸಾವರ್ಕರರದ್ದು ಮುಖ್ಯ ಪಾತ್ರವಿದೆ. ರತ್ನಾಗಿರಿಯಲ್ಲಿ ಇವರು ಕಟ್ಟಿಸಿದ ಪತಿತ ಪಾವನ ಮಂದಿರದಲ್ಲಿ ಎಲ್ಲಾ ಜಾತಿಯವರಿಗೂ ಪ್ರವೇಶ ಕಲ್ಪಿಸಿ, ಅಸ್ಪೃಶ್ಯತೆಯು ರೂಢಿಯಲ್ಲಿ ಬಂದ ಮೂಢನಂಬಿಕೆ ಎಂದು ಜನರಿಗೆ ಮನವರಿಕೆ ಮಾಡಿ ಕೊಟ್ಟರು. ಸ್ವತಃ ಅಂಬೇಡ್ಕರರೇ ತಮ್ಮ ಪತ್ರಿಕೆಯಲ್ಲಿ ಸಾವರ್ಕರರನ್ನು ಹೊಗಳಿದ್ದುದೂ ಇದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆ ಎಂಬ ತತ್ವಗಳನ್ನು ಪುನರುಚ್ಚರಿಸಿದ ಸಾವರ್ಕರರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಚಿಂತನೆ ಇತ್ತು ಎಂಬುದು ಗಮನಾರ್ಹ ಸಂಗತಿ. ಭಾರತದ ಸಂಸ್ಕೃತಿಯ ಉಳಿವಿಗಾಗಿ, ಸನಾತನ ಧರ್ಮದ ರಕ್ಷಣೆಗಾಗಿ ಶುದ್ಧಿ ಚಳುವಳಿಯನ್ನು ಪ್ರಾರಂಭಿಸಿದ ಸಾವರ್ಕರರಿಗೆ ಮತಾಂತರದಿAದಾಗಿ ಆಗುವ ಅಪಾಯದ ಅರಿವು ಇತ್ತು . ಸ್ವದೇಶಿ ಉತ್ಪನ್ನಗಳ ಬಳಕೆಗೆ ಒತ್ತು ಕೊಟ್ಟ ಇವರು ನಮ್ಮ ದೇಶದಲ್ಲಿ ಉತ್ಪಾದಿಸಲ್ಪಟ್ಟ ದಿನೋಪಯೋಗಿ ವಸ್ತುಗಳ ಪರವಾಗಿ ಪ್ರಚಾರ ಮಾಡಿದ್ದರು. ಸ್ವದೇಶಿ ಭಾಷೆಗಳಲ್ಲಿ ಸೇರಿ ಹೋಗಿದ್ದ ಅನೇಕ ಪರದೇಶಿ ಭಾಷಾ ಶಬ್ದಗಳಿಗೆ ಇದ್ದ ಪರ್ಯಾಯವಾದ ಶಬ್ದಗಳನ್ನು ನೆನಪಿಸಿ ಭಾಷೆಗಳ ಶುದ್ಧೀಕರಣವನ್ನೂ ಮಾಡುತ್ತಾರೆ. ಹೀಗೆ ಭಾರತದ ಆತ್ಮನಿರ್ಭರತೆಯ ಅಗತ್ಯತೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಅರಿತುಕೊಂಡಿದ್ದರು. ಸುಭಾಷ್ಚಂದ್ರ ಬೋಸರ ಇಂಡಿಯನ್ ನ್ಯಾಷನಲ್ ಆರ್ಮಿಯ ಸ್ಥಾಪನೆಗೆ ಸಾವರ್ಕರರು ಪರೋಕ್ಷವಾಗಿ ಕಾರಣರಾಗಿದ್ದರು. ‘ಶತ್ರುವಿನ ಶತ್ರು ನಮಗೆ ಮಿತ್ರ' ಎಂಬ ಶಿವಾಜಿಯ ಸಿದ್ಧಾಂತವನ್ನು ನಂಬಿದ್ದ ಸಾವರ್ಕರರ ದೂರದರ್ಶಿ ಚಿಂತನೆಗೆ ಇದೇ ಸಾಕ್ಷಿ. ಸಾವರ್ಕರರ ಚಿಂತನೆಗಳು ಗಹನವಾದ ಅರ್ಥವಿರುವ ಮತ್ತು ಭಾರತದ ಸುಂದರ ನಾಳೆಗಳತ್ತ ಮುಖ ಮಾಡಿದವುಗಳಾಗಿದ್ದವು. ಭಾರತವು ಜಗದ್ಗುರುವಾಗಬೇಕಾದರೆ ಯುವಶಕ್ತಿ ಸಂಘಟಿತವಾಗಿಬೇಕೆAದು ಬೋಧಿಸುತ್ತಿದ್ದರು. "ದೇಶಕ್ಕಾಗಿ ಸರ್ವಸ್ವವನ್ನು ತೊರೆದುಕ್ಕೊಳ್ಳುತ್ತೇವೆ ಎಂದುಕ್ಕೊಳ್ಳುವವರು ಜನಪ್ರಿಯತೆಯನ್ನೂ ಸಹ ತ್ಯಜಿಸಬೇಕು. ಸೇವೆಯನ್ನು ಮಾಡುವಾಗ ಜನಹಿತಕ್ಕಾಗಿ ಮಾಡಬೇಕು ಹೊರತು ಜನಸ್ತುತಿಗಾಗಿ ಅಲ್ಲ" - ವೀರ ಸಾವರ್ಕರರು ಇಂತಹ ಧೋರಣೆಯು ಅವರ ಔನ್ನತ್ಯವನ್ನು ತಿಳಿಸುವುದು. ಬೆನ್ನ ಹಿಂದೆ ಚಾಪೇಕರ್ ಸಹೋದರರನ್ನು ಗುರುವೆಂದು ಪರಿಗಣಿಸಿ, ಎದುರಿಗೆ ಸಧೃಡ ಭಾರತದ ಗುರಿ ಇಟ್ಟುಕೊಂಡಿದ್ದ ವೀರ ಸಾವರ್ಕರರ ಜೀವನಗಾಥೆ ಯುವಮನಸ್ಸುಗಳಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತದೆ. ಸುಖ , ಆಡಂಬರಗಳನ್ನು ಬಯಸುವ ಈ ಕಾಲದಲ್ಲಿ ಯಾವುದೇ ಸ್ವಂತ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕಾಗಿ ಬದುಕುವುದು ಎಂದರೆ ದೊಡ್ಡ ಸವಾಲಿನಂತೆ ಕಾಣಿಸುತ್ತದೆ. ಮಾನಸಿಕ ಚಿತ್ರಹಿಂಸೆ ಮತ್ತು ದೈಹಿಕ ಶಿಕ್ಷೆಗಳನ್ನು ಅನುಭವಿಸುವಾಗ ಸಾಮಾನ್ಯನಾದವನು ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವನೇ ಹೊರತು ಅವನಿಗೆ ದೇಶಸೇವೆ ಮಾಡುವ ಚಿಂತನೆ ಬಾರದು. ಆದರೆ ಸಾವರ್ಕರರು ಅಸಾಮಾನ್ಯ ವ್ಯಕ್ತಿ, ಎಂತಹ ಪರಿಸ್ಥಿತಿ ಬಂದರೂ ಮನಸ್ಥಿತಿಯನ್ನು ಬದಲು ಮಾಡದೆ, ಭಾರತ ಮಾತೆಯ ಸೇವೆ ಮಾಡುವ ಪಣ ತೊಟ್ಟ ನೈಜ ದೇಶಭಕ್ತರು. ಮೇರೆಯಿಲ್ಲದ ದೇಶಭಕ್ತಿ, ವಿರಾಮವಿಲ್ಲದ ಜನಸೇವೆ ಎಂಬಿವುಗಳಲ್ಲಿ ಸಾವರ್ಕರರು ಭಾರತೀಯರಿಗೆ ಆದರ್ಶವೆನಿಸುತ್ತಾರೆ. ಹೊತ್ತು- ಹೊತ್ತಿಗೆ ಹೊಟ್ಟೆಗೆ ಹಿಟ್ಟು ಹಾಕಿ , ಹಾಯಾಗಿ ನಿದ್ರಿಸುವ ಅನೇಕ ಸ್ವಯಂ ಘೋಷಿತ ಸಮಾಜ ಸೇವಕರಿರುವ ಈ ಕಾಲಘಟ್ಟದಲ್ಲಿ ಸಾವರ್ಕರರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುವುದು ವಿರಳ. ಆದರೆ ಅವರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಪ್ರಶ್ನಿಸುವುದು ಸೂಕ್ತವಲ್ಲ. ಅಭಿನವ ಭಾರತದ ರೂವಾರಿ ನವಭಾರತಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು. ನಮ್ಮ ದೇಶವು ವಿಶ್ವಗುರು ಆಗಬೇಕೆಂದರೆ ಯುವಜನತೆ ಸಾವರ್ಕರರ ಹಾದಿಯಲ್ಲಿ ನಡೆಯಬೇಕಿದೆ.
- ಡಾ ಸುಧಾಕರ ಹೊಸಳ್ಳಿ ಪ್ರತಿವರ್ಷ ಏಪ್ರಿಲ್ ೧೪ರ ದಿನ ಭಾರತ ಮಾತ್ರವಲ್ಲದೆ, ಜಗತ್ತು ಕೂಡ ವಿಶ್ವ ಜ್ಞಾನ ದಿನದ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತದೆ. ಎಷ್ಟೋ ಜನ ಸಾಮಾಜಿಕ ಸಮಾನತೆಗಾಗಿ ಸಮ- ಸಮಾಜದ ಸೃಷ್ಟಿಗಾಗಿ ಹೋರಾಟ ಮಾಡಿದ ಮಹಾಪುರುಷರ ಐತಿಹಾಸಿಕ ದಾಖಲೆ ನಮಗೆ ಸಿಗುತ್ತದೆ. ಆದರೆ, ಸಾಮಾಜಿಕ ಸಮಾನತೆ ಎಂಬುದನ್ನು ಸಾಂವಿಧಾನಿಕ ಹಕ್ಕನ್ನಾಗಿ ಮಾರ್ಪಡಿಸಿದ ಹಾಗೂ ಅಸಮಾನತೆಯ ಆಚರಣೆಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಗುರಿಪಡಿಸಿದ ಕಾರಣಕ್ಕಾಗಿ, ಅಂಬೇಡ್ಕರರನ್ನು ಸಮ-ಸಮಾಜದ ದಿಸೆಯಲ್ಲಿ ನಿಂತು ನೋಡುವ ಎಲ್ಲರೂ ತಮ್ಮೊಳಗೆ ಆತ್ಮಾರ್ಪಿಸಿಕೊಳ್ಳುತ್ತಾರೆ. ಇಂಥ ವಿಶೇಷ ದಿನದಂದು ಸಾಮಾಜಿಕ ಅಸಮಾನತೆ ಸಂಪೂರ್ಣ ನಾಶವಾಗಿದೆ, ಜಾತೀಯತೆ ಕಣ್ಮರೆಯಾಗಿದೆ ಎಂದು ಎದೆಯುಬ್ಬಿಸಿ ಹೇಳಲು ಸಾಧ್ಯವಾಗದೇ ಇರಬಹುದು, ಆದರೆ ಸಮ-ಸಮಾಜದ ನಿರ್ಮಾಣದ ಕಾರ್ಯ ಆಶಾದಾಯಕ ನೆಲಗಟ್ಟಿನಲ್ಲಿ ಸ್ಥಾಪಿತವಾಗಿರುವುದನ್ನೂ, ಅಸ್ಪೃಶ್ಯತೆ ಆಚರಣೆಗೆ ಬೆನ್ನು ತೋರಿಸುವವರ ಸಂಖ್ಯೆ ಹಿರಿದಾದದ್ದನ್ನು ಅವಿತಿಡಲು ಸಾಧ್ಯವಿಲ್ಲ. ದೇಶ ಇಂತಹ ಸಕಾರಾತ್ಮಕ ಪಥದಲ್ಲಿ ಸಾಗಲು ಸಾಧ್ಯವಾದದ್ದು, ಅಂಬೇಡ್ಕರರ ಸಾಂವಿಧಾನಿಕ ಶಕ್ತಿಯಿಂದ ಎಂಬುದು ನಿರ್ವಿವಾದ. ಈ ದೆಸೆಯಲ್ಲಿ ಶೋಷಿತರು, ಅಬಲರು, ತಳಸಮುದಾಯಗಳು ಈ ದಿನವನ್ನು ಅತ್ಯಂತ ಪೂಜ್ಯ ಭಾವನೆಯಿಂದ ಸ್ಮರಿಸುವ, ಆಚರಿಸುವ, ಮುಂದುವರಿದು ಪೂಜೆಗೈವ ಸಂಗತಿಗಳು ಕಾಣಸಿಗುತ್ತವೆ. ಇಂದು ಪ್ರಜ್ಞಾವಂತ ಮನಸ್ಥಿತಿಯುಳ್ಳ ಸರ್ವರೂ ಅಂಬೇಡ್ಕರರ ಸಮಾಜಪರ ಕೊಡುಗೆಗಳನ್ನು ಅಭಿನಂದಿಸಿರುತ್ತಾರೆ. ಹಾಗಾದರೆ, ಈ ದಿವಸ ಕೇವಲ ಸ್ಮರಣೆ ಮತ್ತು ಅಭಿನಂದನೆಗೆ ಸೀಮಿತವಾದರೆ, ಅದು ಅಂಬೇಡ್ಕರರಿಗೆ ಮಾಡುವ ಅಪಮಾನವೇ ಸರಿ. ಕಾರಣವಿಷ್ಟೇ, ಅಂಬೇಡ್ಕರರ ನೈಜ ಆಶಯಗಳನ್ನು ಅವರ ಇರುವಿಕೆಯ ನಂತರ ಹಿಮ್ಮುಖವಾಗಿ ಬಿಂಬಿಸುವ ಕೆಲಸ ನಿರಂತರವಾಗಿ ಸಾಗುತ್ತಲೇ ಬಂದಿದೆ. ಅಂಬೇಡ್ಕರರು ಸಮಾಜದ ಭಾಗವಾಗಬೇಕೆನಿಸಿದ್ದ ಅನೇಕ ಸಂಗತಿಗಳನ್ನು, ವಿರುದ್ಧ ದಿಕ್ಕಿನಲ್ಲಿ ತೋರುವ ಮೂಲಕ ಯುವ ಸಮುದಾಯದಲ್ಲಿ ಗೊಂದಲ ಮತ್ತು ಅಸತ್ಯದ ಅಂಬೇಡ್ಕರರನ್ನು ಅನುಸರಿಸುವಂತೆ ಅಪವ್ಯಾಖ್ಯಾನ ಮಾಡುತ್ತಲೇ ಬಂದಿದ್ದಾರೆ. ಅಖಂಡ ಭಾರತದ ಪ್ರತಿಪಾದಕ ಡಾ.ಬಿ.ಆರ್.ಅಂಬೇಡ್ಕರ್ ಭಾರತದ ಅಖಂಡತೆಯನ್ನು ಅನೇಕರು, ಪ್ರತಿಪಾದನೆ ಮಾಡಿದ್ದು ದಿಟವೇ ಆದರೂ, ಭಾರತ ಪ್ರಕೃತಿದತ್ತವಾಗಿಯೇ ಅಖಂಡವಾದುದ್ದು ಎಂದು ಸಾರಿದ ಮೊದಲಿಗ ಮತ್ತು ಏಕೈಕ ರಾಷ್ಟಿçÃಯವಾದಿ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ. ಆದಾಗಿಯೂ ಅಂಬೇಡ್ಕರ ರಾಷ್ಟçಪ್ರೇಮದ ಸಂಕಲ್ಪವನ್ನು ಮರೆಮಾಚುವ ಪ್ರಯತ್ನಗಳು, ನಡವಳಿಕೆಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿರುತ್ತವೆ. ಇದಕ್ಕೆ ನಿದರ್ಶನವೆಂಬAತೆ ಭಾರತದಲ್ಲಿ ಆಗಾಗ ನಡೆಯುವ ರಾಷ್ಟçದ ಸಾರ್ವಭೌಮತೆಗೆ ಧಕ್ಕೆಯನ್ನುಂಟುಮಾಡುವ ಹೋರಾಟಗಳಲ್ಲಿಯೂ ಅಂಬೇಡ್ಕರ್ರ ಭಾವಚಿತ್ರವನ್ನು ಬಳಸಲಾಗುತ್ತದೆ. ಇದು ವಿಪರ್ಯಾಸ ಅಷ್ಟೇ ಅಲ್ಲ - ಹಿಡನ್ ಅಜೆಂಡವು ಹೌದು. ಪ್ರಾದೇಶಿಕವಾದ, ಪ್ರತ್ಯೇಕತೆಯ ಅಮಲನ್ನು ಯುವ ಜನತೆಗೆ ವಾಮ ಮಾರ್ಗದ ಮೂಲಕ ತುಂಬುವ ಒಂದು ವರ್ಗ ಅದರ ಬಹುದೊಡ್ಡ ಅಸ್ತçವನ್ನಾಗಿ ಅಂಬೇಡ್ಕರರನ್ನು ಬಳಸುವುದು ಆಧುನಿಕ ಭಾರತದ ವೈರುಧ್ಯಗಳಲ್ಲಿ ಅಗ್ರಗಣ್ಯವಾದದ್ದು. ಅಪ್ರತಿಮ ರಾಷ್ಟçಭಕ್ತರಾದ ಅಂಬೇಡ್ಕರರನ್ನು ಒಡಕಿನ, ದೇಶ ವಿರೋಧ ಹೋರಾಟಗಳಲ್ಲಿ ಪ್ರೇರಕ ಶಕ್ತಿಯಂತೆ ಬಿಂಬಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಅಂಬೇಡ್ಕರರು ಸಮಾಜಕ್ಕೆ ಮುಟ್ಟಿಸಬೇಕೆಂದಿದ್ದ ಅಂತರಾಳದ ಸಂಗತಿಗಳನ್ನು ಅವಲೋಕಿಸುವುದು ಜರೂರು. ಅಂತಹ ಅಪವ್ಯಾಖ್ಯಾನಗಳನ್ನು ಸಂಶೋಧಿತ ಪರಾಮರ್ಶೆಯ ಮುಖಾಂತರ ಒಡೆದು ಉರುಳಿಸುವ ಹೊಣೆಗಾರಿಕೆಯು ರಾಷ್ಟಿçÃಯತೆಯ ಆರಾಧಕರ ಮೇಲೆಯೇ ಇದೆ. ಉದಾಹರಣೆಗೆ, ಸಕಲವು ರಾಷ್ಟç ಪ್ರಾಧಾನ್ಯತೆಯನ್ನೇ ಹೊಂದಬೇಕು. ಡಿಸೆಂಬರ್ ೧೭, ೧೯೪೬ರಂದು ತಮಗೆ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಲು ದೊರಕಿದ ಪ್ರಥಮ ಅವಕಾಶದಲ್ಲಿ ತಮ್ಮ ಪ್ರತಿಪಾದನೆಯುದ್ದಕ್ಕೂ ಭಾರತಕ್ಕೆ ರಚನೆಯಾಗುವ ಹೊಸ ಸಂವಿಧಾನ ಸರ್ವಪಥದಲ್ಲೂ ಭಾರತದ ಸ್ಥಿರತೆಯ ದೃಷ್ಟಿಕೋನವನ್ನು ತನ್ನ ಆದ್ಯತೆಯ ಚೌಕಟ್ಟನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದರು. ರಾಷ್ಟçದ ಗುರಿಯನ್ನು ಗುರುತು ಮಾಡುವಾಗ ವ್ಯಕ್ತಿಗಳ ಪಕ್ಷಗಳ ಗುರುತನ್ನು ಪರಿಗಣಿಸಬಾರದು, ಪ್ರತಿಯೊಂದಕ್ಕೂ ರಾಷ್ಟçವನ್ನೇ ಪ್ರಧಾನವಾಗಿ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಭಾರತವನ್ನು ವಿಭಜಿಸುವುದು ಎಂದರೆ ಕೇವಲ ವಿಭಜನೆ ಅಲ್ಲ, ಅದು ಭಾರತದ ಒಂದು ಭಾಗವನ್ನು ಕತ್ತರಿಸಿ ಕೊಡುವುದು ಎಂದರ್ಥ. ಹಾಗಾಗಿ ಭಾರತ ಐಕ್ಯವಾಗಿರಬೇಕೆ ಹೊರತು ಇಬ್ಭಾಗವಾಗಬಾರದು ಎಂದಿದ್ದರು. (ಆಧಾರ: ಸಂವಿಧಾನ ರಚನಾ ಸಭೆಯ ಚರ್ಚೆಗಳು ಪುಟ ಸಂಖ್ಯೆ ೧೫೦ ಸಂಪುಟ -೧) ೧೩ ಸಂವಿಧಾನ ರಚನೆಯ ಉಪ ಸಮಿತಿಗಳಲ್ಲಿ ಅಂಬೇಡ್ಕರರನ್ನು ನಿರ್ಲಕ್ಷಿಸಲಾಗಿತ್ತು. ಸಂವಿಧಾನ ರಚನೆಯ ಆರಂಭದ ಕಾಲಘಟ್ಟದಲ್ಲಿ ಅಂಬೇಡ್ಕರ್ರನ್ನು ಕೇವಲ ಅಧಿಕಾರ ರಹಿತ ಸದಸ್ಯನಾಗಿ ಮಾಡಿದ್ದಾಗಿಯೂ ಭಾವಿ ಸಂವಿಧಾನವು ಭಾರತೀಯತೆಯನ್ನು ಬಿಟ್ಟು ತನ್ನ ಚೌಕಟ್ಟು ಸೃಷ್ಟಿ ಮಾಡಿಕೊಳ್ಳದಂತೆ ಜಾಗೃತೆವಹಿಸಿದ್ದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಆಗಸ್ಟ್ ೨೯, ೧೯೪೭ಕ್ಕೆ ಅಂಬೇಡ್ಕರ್ರನ್ನು ಸಂವಿಧಾನ ರಚನಾ ಸಭೆಯು ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ದಿವಸಕ್ಕಿಂತ ಮುಂಚೆ ೨೬೫ ದಿನಗಳ ಸಂವಿಧಾನ ರಚನೆಯ ಪ್ರಾರಂಭದ ದಿನಗಳಲ್ಲಿ ರಚಿತವಾದ ೧೩ ಉಪ ಸಮಿತಿಗಳಲ್ಲಿ ಅಂಬೇಡ್ಕರರಿಗೆ ಅಧ್ಯಕ್ಷೀಯ ಸ್ಥಾನವಿರಲಿ, ಸದಸ್ಯರಾಗಿಯೂ ಅವಕಾಶ ನೀಡಿರಲಿಲ್ಲ. (ಆಧಾರ- ಸಂವಿಧಾನ ರಚನಾ ಸಭೆಯ ಚರ್ಚೆಗಳು, ಡಿಸೆಂಬರ್ ೨೩ /೧೯೪೬ ಪುಟ ಸಂಖ್ಯೆ, ೨೪೫, ೨೪೬, ೨೪೭ ಸಂಪುಟ -೧) ಆರ್ಯ ಅನಾರ್ಯ ಸಿದ್ಧಾಂತ ತಿರಸ್ಕರಿಸಿದ್ದರು. ಆರ್ಯ ಜನಾಂಗವು ಭಾರತದ ಮೇಲೆ ದಾಳಿ ಮಾಡಿ ಅಲ್ಲಿನ ಮೂಲ ನಿವಾಸಿಗಳನ್ನು ದಾಸ್ಯಕ್ಕೆ ದೂಡಿದರು ಎಂಬುದಕ್ಕೆ ಯಾವ ಆಧಾರವಿದೆ? ಆರ್ಯರು ಹೊರಗಿನಿಂದ ಬಂದವರು ಎನ್ನುವುದಕ್ಕೆ ಲವಲೇಶದ ಆಧಾರವೂ ಇಲ್ಲ, ಆರ್ಯ- ದ್ರಾವಿಡ ಸಿದ್ಧಾಂತವು ಎಂದು ಸತ್ತು ಹೋಗಬೇಕಿತ್ತು ಎಂದು ತಿಳಿಸಿದರು. (ಆಧಾರ-ಅಂಬೇಡ್ಕರರ ಅವರ ಬದುಕು ಬರೆಹಗಳು ಮತ್ತು ಭಾಷಣಗಳು, ಪುಟ ಸಂಖ್ಯೆ ೬೮, ಸಂಪುಟ- ೬) ಬೌದ್ಧ ಮತದಲ್ಲಿ ಇರುವ ಜಾತಿ ಮತ್ತು ಪಂಥಗಳನ್ನು ತಿರಸ್ಕರಿಸಿದ್ದರು. ಅಕ್ಟೋಬರ್ ೧೩ ೧೯೫೬ರ ಬೌದ್ಧ ಮತದ ಕುರಿತು ಅವರ ಭಾಷಣದಲ್ಲಿ “I ತಿiಟಟ ಚಿಛಿಛಿeಠಿಣ ಚಿಟಿಜ ಜಿoಟಟoತಿ ಣhe ಣeಚಿಛಿhiಟಿgs oಜಿ ಃuಜಜhಚಿ. I ತಿiಟಟ ಞeeಠಿ mಥಿ ಠಿeoಠಿಟe ಚಿತಿಚಿಥಿ ಜಿಡಿom ಣhe ಜiಜಿಜಿeಡಿeಟಿಣ oಠಿiಟಿioಟಿs oಜಿ ಊiಟಿಚಿಥಿಚಿಟಿಚಿ ಚಿಟಿಜ ಒಚಿhಚಿಥಿಚಿಟಿಚಿ, ಔuಡಿ ಃuಜಜhism is ಓಚಿvಚಿಥಿಚಿಟಿಚಿ.” ಎಂಬ ಸಂದೇಶ ಕೊಟ್ಟಿದ್ದರು. ಆರ್ಎಸ್ಎಸ್ ಶ್ಲಾಘಿಸಿದ್ದ ಅಂಬೇಡ್ಕರರು. ೧೨-೦೫-೧೯೩೯ ಪುಣೆಯ ಭಾವೆ ಶಾಲೆ ಆವರಣದಲ್ಲಿ, “ಈ ಶಿಬಿರದಲ್ಲಿ ನನಗೆ ನಿಮ್ಮ ನಡೆ-ನುಡಿ, ಶಿಸ್ತು, ಸಂಯಮ, ಕಾರ್ಯ, ಸಮಯ ಪಾಲನೆ ನೋಡಿ ಸೈನಿಕರ ನೆನಪಾಗಿದೆ. ಸಂಘದ ಕಾರ್ಯ ಆದರ್ಶವಾದದ್ದು” ಎಂದಿದ್ದರು. (ಆಧಾರ: ಅಂಬೇಡ್ಕರರೇ ಸ್ಥಾಪಿಸಿದ್ದ ಎಸ್ಸಿ ಫೆಡರೇಶನ್ ರಾಜಕೀಯ ಪಕ್ಷದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬಾಳಾಸಾಹೇಬ್ ಸಾಳುಂಕೆ ಅವರ ದಿನಚರಿ ಆಧರಿಸಿದ ಹಮಾರೇ ಸಾಹೇಬ್ ಪುಸ್ತಕ) ಜಾತ್ಯತೀತತೆಯನ್ನು ಸಂವಿಧಾನದ ಒಳಬಿಡಲು ಸಾಧ್ಯವಿಲ್ಲವೆಂದಿದ್ದರು. ಜಾತ್ಯಾತೀತತೆಯನ್ನು ಸಂವಿಧಾನದ ಭಾಗವಾಗಬೇಕೆಂದು ಪ್ರೊ ಕೆ.ಟಿ ಷಾ ಮಂಡಿಸಿದ್ದ ತಿದ್ದುಪಡಿಯನ್ನು ತಿರಸ್ಕರಿಸಿ ಜಾತ್ಯಾತೀತೆ ಎಂಬುದು ಪಶ್ಚಿಮಾತ್ಯ ಚಿಂತನೆ, ಇದು ಈ ನೆಲದ ಗುಣಕ್ಕೆ ಹೊಂದುವುದಿಲ್ಲ ಎಂದಿದ್ದರು. (ಆಧಾರ-೧೫ ನವಂಬರ್ ೧೯೪೮ರ ಸಂವಿಧಾನ ರಚನಾ ಸಭೆಯ ಚರ್ಚೆಗಳು, ಪುಟ ಸಂಖ್ಯೆ ೫೪೭, ೫೪೮ ಸಂಪುಟ- ೩) ಬಲಿಷ್ಠ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಆಧಾರ. “ಒಟ್ಟು ಭಾರತ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಆಧಾರಯುಕ್ತವಾದದ್ದು, ಅಧಿಕಾರಕ್ಕೆ ಬರುವ ಸರ್ಕಾರಗಳು ಈ ನಿಯಮವನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕು ಭಾರತವನ್ನು ಒಟ್ಟುಗೂಡಿಸುವಲ್ಲಿ ಈ ನಿಯಮದ ಪಾತ್ರ ಅವಿಸ್ಮರಣೀಯವಾದದ್ದು, ಈ ನಿಯಮಗಳಲ್ಲಿ ಯಾವುದೇ ಧರ್ಮದ ಹಂಗಿಲ್ಲದೆ ಹಿಂದೂ ಕಾನೂನುಗಳನ್ನು ಸೇರಿಸಿದ್ದೇನೆ. ಅವು ಹಿಂದೂ ಕಾನೂನುಗಳು ಅನ್ನುವುದಕ್ಕಿಂತ ಶ್ರೇಷ್ಠವಾದವು ಎನ್ನುವ ಕಾರಣಕ್ಕೆ ನಿಯಮದ ಭಾಗ ಮಾಡಿದ್ದೇನೆ” ಎಂದು ಸಾರಿದ್ದರು. (ಆಧಾರ ಸಂವಿಧಾನ ರಚನಾ ಸಭೆಯ ಚರ್ಚೆಗಳು ಪುಟ ಸಂಖ್ಯೆ ೭೩೦ ೭೩೩ ೭೩೯ ೭೪೧ ೭೪೨ ಸಂಪುಟ - ೩) ಹೀಗೆ ಅಂಬೇಡ್ಕರರ ವಾಸ್ತವದ ವ್ಯಾಖ್ಯಾನಗಳನ್ನು ಮುಖ ತಿರುಗಿಸಿ ನಿಲ್ಲಿಸುವ ಕೆಲಸಕ್ಕೆ, ಸಂಶೋಧನೆ ಎಂಬ ಅಸ್ತçದ ಮೂಲಕ ತಡೆ ಹೇರಬೇಕಿದೆ, ಆ ಮುಖಾಂತರ ನೈಜ ಅಂಬೇಡ್ಕರನ್ನು ಅವರ ತತ್ತ÷್ವಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯದೊಟ್ಟಿಗೆ ಅಂಬೇಡ್ಕರರಿಗೆ ಸಂಶೋಧನಾ ಗೌರವ ತಲುಪಿಸುವುದು ಪ್ರಾಜ್ಞರ ಗುರುತ್ತರ ಜವಾಬ್ದಾರಿ. ಮುಸ್ಲಿಮರು ಕ್ರಿಶ್ಚಿಯನ್ ನಿಂದ ಬಂದAತಹ ಬಹುದೊಡ್ಡ ಆಮಿಷಗಳನ್ನು ತಿರಸ್ಕರಿಸಿ ನಾನು ರಾಷ್ಟಾçಂತರ ಮಾಡುವ ಪ್ರಶ್ನೆಯೇ ಇಲ್ಲ. ನಾನು ಮೊದಲು ಭಾರತೀಯ ಕಡೆಗೂ ಭಾರತೀಯ ಎಂಬ ಹೆಮ್ಮೆಯ ಭಾವ ಪಸರಿಸಿದ್ದ ಅಂಬೇಡ್ಕರರನ್ನು ಯುವ ಸಮುದಾಯ ಅನುಸರಿಸುವಂತೆ, ಆ ಮೂಲಕ ರಾಷ್ಟçನಿರ್ಮಾಣದ ಕಾರ್ಯದಲ್ಲಿ ಸ್ವ-ತೊಡಗಿಕೊಳ್ಳುವಂತೆ, ಪ್ರೇರೇಪಿಸುವುದು ಅಂಬೇಡ್ಕರರಿಗೆ ಸಲ್ಲಿಸುವ ಗೌರವದ ಮಾದರಿ.
ಜೀವ ಜಲ ಎಂದು ಕರೆಸಿಕೊಳ್ಳುವ ನೀರು, ಜೀವಸಂಕುಲದ ಅಸ್ತಿತ್ವಕ್ಕೆ ಅತ್ಯಂತ ಅಗತ್ಯವಾದ ಅಂಶವಾಗಿದೆ. ನೀರಿಲ್ಲದ ಜೀವನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಕುಡಿಯಲಿಕ್ಕೆ ಅಥವಾ ಜೀವಂತ ಇರುವುದಕ್ಕೆ ಎಷ್ಟು ಪ್ರಮಾಣದ ನೀರು ಅಗತ್ಯವೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾವು ಬಳಸುವ ಎಲ್ಲಾ ವಸ್ತುಗಳ ತಯಾರಿಕೆಗೆ ಅಂದರೆ ಬಟ್ಟೆ ಯಂತ್ರೋಪಕರಣ ಮನೆಯ ವಾಹನ ಸೇರಿದಂತೆ ಪ್ರತಿ ವಸ್ತುಗಳ ತಯಾರಿಕೆಗೂ ಅನಿವಾರ್ಯ ಮನುಷ್ಯ ಮಾತ್ರವಲ್ಲದೆ ಗಿಡಮರಗಳು ಪ್ರಾಣಿ ಪಕ್ಷಿಗಳು ಜಲಚರಗಳು ಜೀವ ಸಂಕುಲದ ಅಸ್ತಿತ್ವ ನೀರಿನ ಮೇಲೆ ಅವಲಂಬಿತವಾಗಿದೆ. ಹೀಗೆ ಪ್ರಕೃತಿಯ ಚಕ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನೀರಿನ ಅಗತ್ಯತೆ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಇಷ್ಟೆಲ್ಲಾ ತಿಳಿದಿದ್ದರೂ ಸಹ ಜಲ ಸಂರಕ್ಷಣೆ ವಿಷಯ ಬಂದಾಗ ಜಲ ಸಂರಕ್ಷಣೆ ಜವಾಬ್ದಾರಿ ಸರ್ಕಾರದ್ದು, ಪರಿಸರ ಹಿತಾಸಕ್ತರದ್ದು, ಸ್ಥಳೀಯ ವ್ಯವಸ್ಥೆಯದ್ದೋ ಎಂದು ಕೈ ಚಾಚಿ ಕುಳಿತುಕೊಳ್ಳುವವರ ಸಂಖ್ಯೆಯೇ ಹೆಚ್ಚು. ನನ್ನ ಅಸ್ತಿತ್ವಕ್ಕೆ ಕಾರಣವಾದ ನೀರಿನ ಸಂರಕ್ಷಣೆಯಲ್ಲಿ ನನ್ನದೇ ಮುಖ್ಯ ಪಾತ್ರ ಎಂಬ ಜವಾಬ್ದಾರಿ ಪ್ರಸ್ತುತದಲ್ಲಿ ಕಾಣಿಸಿಕೊಳ್ಳುವುದು ತುಂಬಾ ವಿರಳ. ವಾಸ್ತವದಲ್ಲಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಜಲವನ್ನು ಕೇವಲ ಒಂದು ದ್ರವ ವಸ್ತು ಎಂದಾಗಲಿ ಮತ್ತು ಜಲಮೂಲಗಳನ್ನು ಕೇವಲ ಒಂದು ಸ್ಥಳ ಎಂದು ಪರಿಗಣಿಸದೆ ಜಲ ಮತ್ತು ಜಲ ಮೂಲಗಳಲ್ಲಿ ದೈವ ಸ್ವರೂಪವನ್ನು ನೋಡಲಾಗಿದೆ. ಜಲ ಕೇವಲ ನಮಗೆ ಭೌತಿಕ ಸಂಪತ್ತಲ್ಲ ಅದು ಸೃಷ್ಟಿಯ ಮೂಲ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ‘ಸರ್ವಂ ಆಪಃ’ ಎಂದರೆ ಜಲವೇ ಎಲ್ಲಾ ವಸ್ತುಗಳ ಮೂಲ ಎಂಬ ಉಲ್ಲೇಖವಿದೆ. ಸನಾತನ ಪರಿಭಾಷೆಯಲ್ಲಿ ಜೀವನಾಧಾರವಾಗಿರುವ ಅಂಶಗಳೆಲ್ಲವೂ ನಮಗೆ ಪೂಜನೀಯ ಮತ್ತು ಗೌರವಾರ್ಥ. ಈ ಪೂಜಾರ್ಹ ವಸ್ತುಗಳನ್ನು, ಅವಶ್ಯಕತೆಗೆ ಮೀರಿ ಉಪಭೋಗಿಸುವುದು ನಿಷಿದ್ಧವಾಗಿದೆ. ‘ತೇನ ತ್ಯಕ್ತೇನ ಭುಂಜಿಥಾ’ ಎಂದು ಈಶೋಪನಿಷತ್ನಲ್ಲಿ ನಮ್ಮ ಋಷಿಮುನಿಗಳು ಹೇಳಿದ್ದಾರೆ. ಪ್ರಕೃತಿ ಅಥವಾ ಪ್ರಕೃತಿಯಲ್ಲಿನ ಸಂಪತ್ತು ನಮಗೆ ಭೋಗದ ವಸ್ತುಗಳಲ್ಲ. ಪ್ರಕೃತಿಯ ಮುಖ್ಯ ಭಾಗವಾದ ಜಲ ನಮಗೆ ಆಧ್ಯಾತ್ಮಿಕತೆಯ ಸಾಧನ. ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲಸ್ಮೀನ್ ಸನ್ನಿಧಿಂ ಕುರು’ ಎಂದು ಪವಿತ್ರ ನದಿಗಳ ನೀರನ್ನು ಆವಾಹನೆ ಮಾಡುತ್ತೇವೆ. ಶುಭಕಾರ್ಯಗಳಿಗೆ ಮಾತ್ರವೇ ಅಲ್ಲದೆ ಮನುಷ್ಯನ ಜೀವನದ ಅಂತ್ಯದ ನಂತರ ಚಿತಾಭಸ್ಮವನ್ನು ಸಹ ಪವಿತ್ರ ಜಲದಲ್ಲಿ ವಿಸರ್ಜಿಸುವುದು ಸಂಪ್ರದಾಯ. ಹಾಗೆ ನೋಡಿದಾಗ ಇಹದಲ್ಲಿ ಮಾತ್ರವಲ್ಲದೆ ಮೋಕ್ಷ ಸಾಧನೆಗೂ ನಾವು ಅವಲಂಬಿಸಿರುವುದು ಪವಿತ್ರ ಜಲವನ್ನೇ ಸರಿ. ಪೂರ್ವಜರ ಮೋಕ್ಷ ಪ್ರಾಪ್ತಿಗಾಗಿ ಗಂಗೆಯನ್ನು ಭೂಮಿಗೆ ತರಲು ಭಗೀರಥ ಪಟ್ಟ ಪ್ರಯತ್ನ ನಮಗೆಲ್ಲ ತಿಳಿದೇ ಇದೆ. ಉಷಃ ಕಾಲದಲ್ಲಿ ಸೂರ್ಯ ದೇವರಿಗೆ ಜಲದ ಅರ್ಘ್ಯವನ್ನು ನೀಡದೆ ಆಹಾರ ಸೇವನೆ ಮಾಡದೇ ಇರುವ ಎಷ್ಟೋ ಜನ ಇಂದಿಗೂ ನಮ್ಮ ನಡುವೆ ಇದ್ದಾರೆ. ದೇಶದ ಅನೇಕ ಪುಣ್ಯಕ್ಷೇತ್ರಗಳಲ್ಲಿ ಪವಿತ್ರ ಜಲಕ್ಕೆ ಪ್ರಾತಃ ಮತ್ತು ಸಂಧ್ಯಾ ಕಾಲದಲ್ಲಿ ಆರತಿ ಮಾಡುವ ಸಂಪ್ರದಾಯಗಳಿವೆ. ಕಾರ್ತಿಕ ಮಾಸದಲ್ಲಿ ಆಚರಿಸುವ ಗಂಗಾಷ್ಟಮಿಯAತಹ ಹಬ್ಬಗಳು ಪ್ರತಿಯೊಬ್ಬರೂ ಬಳಸುವ ನೀರನ್ನು ಗಂಗಾಮಾತೆ ಎಂದು ಪೂಜಿಸಿ ಜಲಕ್ಕೆ ಕೃತಜ್ಞತಾ ಭಾವ ಸಮರ್ಪಿಸುವ ಹಬ್ಬವೇ ಆಗಿದೆ. ಅಂದರೆ ನಮ್ಮ ಸಂಸ್ಕೃತಿಯ ಕಣಕಣದಲ್ಲೂ ಜಲದ ಸಂರಕ್ಷಣೆ ಬಗ್ಗೆ ಸಾಂಕೇತಿಕವಾಗಿ ಹೇಳಲಾಗಿದೆ. ಇಂತಹ ಶ್ರೇಷ್ಠ ಸಂಸ್ಕೃತಿಯ ವಾರಸುದಾರರಾದ ನಾವು ಜಲ ಸಂರಕ್ಷಣೆಗೆ ಎಷ್ಟು ಆದ್ಯತೆ ನೀಡುತ್ತಿದ್ದೇವೆ ಎಂದು ಅಂತರಾವಲೋಕನ ಮಾಡಿಕೊಳ್ಳಬೇಕಾಗಿದೆ. ಅವಶ್ಯಕತೆಗೆ ಮೀರಿ ಜಲವನ್ನು ಬಳಸುವುದು ಸಹ ಒಂದು ಅಪರಾಧವೆಯಾಗಿದೆ. ಕಾರ್ಖಾನೆಗಳಿಂದ ಜಲಮೂಲಗಳು ಮಲಿನವಾಗುತ್ತಿದೆ, ಕೊಳವೆ ಬಾವಿಗಳಿಂದ ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದೆ ಎಂಬ ಮಾತು ಎಷ್ಟು ಸತ್ಯವೋ ಜಲ ಮಾಲಿನ್ಯಕ್ಕೆ ಪ್ರತಿ ಮನುಷ್ಯನೂ ಹೊಣೆ ಎಂಬುದು ಸಹ ಅಷ್ಟೇ ಸತ್ಯ. ದಿನ ಬೆಳಗಾದರೆ ನಾವು ಮನೆಗಳಲ್ಲಿ ಬಳಸುವ ಹಲ್ಲುಜ್ಜುವ ಪೇಸ್ಟ್, ಸಾಬುನು, ಶ್ಯಾಂಪೂ ಕಂಡೀಷನರ್ ಎಲ್ಲಾ ಮಾರ್ಜಕಗಳು, ಪಾತ್ರೆ ತೊಳೆಯಲು ಬಟ್ಟೆ ತೊಳೆಯಲು ಬಳಸುವ ಎಲ್ಲ ರಾಸಾಯನಿಕಗಳು ಅಂತಿಮವಾಗಿ ಜಲಮೂಲವನ್ನೇ ಸೇರುತ್ತವೆ, ಹಾಗಾಗಿ ಪರೋಕ್ಷವಾಗಿ ಪ್ರತಿಯೊಬ್ಬರೂ ಜಲವನ್ನು ಮಲಿನ ಮಾಡುತ್ತಿದ್ದೇವೆ. ಹಾಗಾದರೆ ಇವುಗಳ ಬಳಕೆ ಇಲ್ಲದೆ ನಾವು ಬದುಕಬೇಕೆ ಎಂಬ ಪ್ರಶ್ನೆ ಮೂಡಬಹುದು. ಆದರೆ ರಾಸಾಯನಿಕ ಯುಕ್ತ ಪದಾರ್ಥಗಳಿಗೆ ಪರ್ಯಾಯವಾಗಿ ನೈಸರ್ಗಿಕ ಉತ್ಪನ್ನಗಳನ್ನು ರಾಸಾಯನಿಕ ರಹಿತ ಉತ್ಪನ್ನಗಳ ಬಳಕೆ ಮಾಡಬೇಕು. ದಿನನಿತ್ಯ ಜೀವನದಲ್ಲಿ ನೀರಿನಲ್ಲಿ ಲಭ್ಯತೆ ಸಾಕಷ್ಟು ಇದೆ ಎನ್ನುವ ಕಾರಣಕ್ಕೆ ಅನಗತ್ಯವಾಗಿ ನೀರಿನ ಬಳಕೆ ಮಾಡುವುದು ಎಷ್ಟು ಸರಿ? ಕೇವಲ ಒಂದು ಬಕೆಟ್ನಲ್ಲಿ ಸ್ನಾನ ಮಾಡಲು ಸಾಧ್ಯವಿದ್ದರೂ ಅನಗತ್ಯವಾಗಿ ನೀರು ಪೋಲು ಮಾಡುವುದು ಇತ್ತೀಚಿಗಿನ ಅಭ್ಯಾಸವಾಗಿಬಿಟ್ಟಿದೆ. ಹಲ್ಲುಜ್ಜುವಾಗ ಹರಿಯಲು ಪ್ರಾರಂಭಿಸಿದ ಎಷ್ಟೋ ಕೊಳಾಯಿಯ ನೀರು ಹಲ್ಲುಜ್ಜಿ ಮುಗಿಯುವತನಕ ಅನಾವಶ್ಯಕವಾಗಿ ಹರಿಯುತ್ತಿರುತ್ತದೆ. ಕೊಳಾಯಿಗಳು ಸೋರುತ್ತಿದ್ದರೆ ಪೋಲಾಗುತ್ತಿರುವುದು ಕೇವಲ ಒಂದು ಹನಿ ತಾನೆ ಎನ್ನುವ ತಾತ್ಸಾರ ಸಾವಿರಾರು ಲೀಟರ್ ನಷ್ಟು ನೀರನ್ನು ವ್ಯರ್ಥ ಮಾಡುತ್ತದೆ. ಅಡಿಗೆ ಮಾಡುವಾಗ ತರಕಾರಿ ತೊಳೆದ ನೀರು, ಅಕ್ಕಿ ಬೇಳೆ ತೊಳೆದ ನೀರು ಇವುಗಳನ್ನು ಸಂಗ್ರಹಿಸಿ ಕೈತೋಟದ ಗಿಡಗಳಿಗೆ ಹಾಕುವುದು ಮನೆಯ ಅಂಗಳ ತೊಳೆಯುವಾಗ ಮತ್ತು ವಾಹನಗಳನ್ನ ತೊಳೆಯುವಾಗ ಕನಿಷ್ಠ ಪ್ರಮಾಣದ ನೀರನ್ನು ಮಾತ್ರ ಬಳಸುವುದು ಇಂತಹ ಚಿಕ್ಕ ಚಿಕ್ಕ ವೈಯಕ್ತಿಕ ಬದಲಾವಣೆಗಳು ಸಹ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಅಂತರ್ಜಲ ಹೆಚ್ಚಿಸಲು ಇಂಗುಗುAಡಿ ಮತ್ತು ನೀರಿನ ಉಳಿಕೆಗೆ ಮಳೆನೀರು ಕೊಯ್ಲು ಸಹ ಪ್ರತಿಯೊಬ್ಬರೂ ಮಾಡಬಹುದಾಗಿದೆ. ನೀರಿನ ಕೊಳಾಯಿಗಳಿಗೆ ಎರೇಟರ್ ಎಂಬ ಚಿಕ್ಕ ಉಪಕರಣ ಅಳವಡಿಸಿದರೆ ಪ್ರತಿ ಮನೆಯಲ್ಲೂ ದಿನ ಬಳಕೆ ೫೦% ನೀರನ್ನು ಉಳಿಸಬಹುದಾಗಿದೆ. ಜಲ ಕ್ಷಾಮಕ್ಕೆ ಅಥವಾ ಜಲ ಮಾಲಿನ್ಯಕ್ಕೆ ನಾನೊಬ್ಬ ಮಾಡಿದರೆ ಏನು ಪ್ರಯೋಜನ ಎನ್ನುವ ಮನೋಭಾವಕ್ಕಿಂತ ಪವಿತ್ರ ಜೀವ ಜಲದ ಸಂರಕ್ಷಣೆಗೆ ನನ್ನ ಪಾತ್ರ ಏನು ಎಂಬ ಸದ್ಭಾವನೆ ಎಲ್ಲರಲ್ಲೂ ಜಾಗೃತಗೊಳ್ಳಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈಗಿನಷ್ಟು ಯಥೇಚ್ಛವಾಗಿ ಕೊಳವೆ ಬಾವಿ ಉಪಲಬ್ಧತೆ ಇಲ್ಲದ ಸಮಯದಲ್ಲಿ ಬಾವಿಯಿಂದ ನೀರನ್ನು ಸೇದಿ ತರುವ ಅಥವಾ ಕೆರೆಗಳಿಂದ ನೀರನ್ನು ಹೊತ್ತು ತರುವ ಸಂದರ್ಭಗಳಲ್ಲಿ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸುತ್ತಿದ್ದರು. ಆದರೆ ಈಗ ಅಂತರ್ಜಲ ಮಟ್ಟವನ್ನು ಕುಗ್ಗಿಸುವ ಕೊಳವೆ ಬಾವಿಗಳದ್ದೇ ಕಾರುಬಾರು, ಹಾಗಾಗಿ ನೀರಿನ ಬಳಕೆಗೆ ಕಡಿವಾಣವೇ ಇಲ್ಲದಂತಾಗಿದೆ. ಇಲ್ಲಿ ಕೂಡ ವಾಸ್ತವಿಕತೆಯ ಜಾಗೃತಿ ಅತ್ಯಂತ ಅವಶ್ಯವಾಗಿದೆ. ಕಾಡುಗಳನ್ನು ನದಿಯ ತಾಯಿ ಎಂದು ಹೇಳಲಾಗಿದೆ ಎಂದು ಕಾಡು ನಾಶವಾಗುತ್ತಿರುವ ಕಾರಣ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗುತ್ತಿರುವುದು ಅಂತರ್ಜಲದ ಕುಸಿತಕ್ಕೆ ಕಾರಣವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಕನಿಷ್ಠ ೫ ಗಿಡವನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಅವುಗಳ ಪೋಷಣೆ ಮಾಡಿ ಪರಿಸರಕ್ಕೆ ಚಿಕ್ಕ ಕೊಡುಗೆಯನ್ನು ಕೊಡಬಹುದು. ಸಮಾನಚಿತ್ತರ ಗುಂಪು ರಚಿಸಿ ಜಲಮೂಲಗಳ ಕಲ್ಯಾಣಿಗಳ ಸ್ವಚ್ಛತೆಗೆ ಶ್ರಮದಾನ ಮಾಡುವ ಮೂಲಕ ಸಹ ಜೀವ ಜಲಕ್ಕೆ ಗೌರವ ಸಲ್ಲಿಸಬಹುದು. ನಮ್ಮ ವೇದ ಉಪನಿಷತ್ ಪುರಾಣಗಳಲ್ಲಿ ಜಲಕ್ಕೆ ಸಂಬAಧಿಸಿ ಉಲ್ಲೇಖಿಸಿರುವ ಎಲ್ಲಾ ವಿಷಯಗಳು, ನೀರಿಗೆ ಸಂಬAಧಿಸಿದ ನಮ್ಮ ಹಬ್ಬಗಳು ಕೇವಲ ಸಂಪ್ರದಾಯಕ್ಕೆ ಸೀಮಿತವಾಗಿರದೆ ಅದರ ತಾತ್ಪರ್ಯಯುತ ಅನುಷ್ಠಾನಕ್ಕೆ ಬಂದರೆ ಜಲದ ಪ್ರತಿ ಹನಿ ಹನಿಯೂ ಪಾವನ ತೀರ್ಥವೇ ಸರಿ. ನದಿಯ ಹರಿವನು ತಡೆದರೆ ಬಾಯಾರಿಕೆಯು ಹರಿವ ತೋಡು ಮುಚ್ಚಿದರೆ ಜೀವಕ್ಕಿಷ್ಟು ಕಹಿ ಹರಿವು ಶುದ್ದಗೊಳಿಸೋ ಸಜ್ಜನ ಕಾರ್ಯ ಜಲಜೀವನ ಶ್ರೇಯ ಮಂಕುತಿಮ್ಮ ಎನ್ನುವ ಡಿವಿಜಿ ಅವರ ಕಗ್ಗ ಜಲ ಸಾಕ್ಷರರಾಗಲು ಸರ್ವರನ್ನು ಪ್ರೇರೇಪಿಸಲಿ. ಬಾಕ್ಸ್ ನೀರನ್ನು ಉಳಿಸಲು ನಾವೇನು ಮಾಡಬೇಕು? ೧. ನೀರನ್ನು ಮಿತವಾಗಿ ಬಳಸುವುದು. ಮನೆಯಲ್ಲಿ ನಲ್ಲಿ, ಪೈಪ್ಗಳು ಕೆಟ್ಟುಹೋಗಿ ನೀರು ಪೋಲಾಗುತ್ತಿದ್ದರೆ ತಕ್ಷಣ ದುರಸ್ತಿ ಮಾಡುವುದು. ಇಂದಿನ ದಿನಗಳಲ್ಲಿ ಒಂದೊAದು ಹನಿಯೂ ಅತ್ಯಮೂಲ್ಯ. ೨. ವಾಹನಗಳನ್ನು ತೊಳೆಯಲು ನೀರಿನ ಪೈಪನ್ನು ಬಳಸದೆ ಬಕೆಟ್ಟಿನಲ್ಲಿ ನೀರು ತೆಗೆದುಕೊಂಡು ತೊಳೆಯುವುದು. ಇದರಿಂದ ನೀರಿನ ಅತಿ ಪೋಲು ಕಡಮೆಯಾಗುತ್ತದೆ. ೩. ಕಡ್ಡಾಯವಾಗಿ ಪ್ರತಿ ಕಟ್ಟಡ-ಮನೆಗಳಲ್ಲಿ ಮಳೆನೀರು ಕೊಯ್ಲು ಅಳವಡಿಸುವುದು. ೪. ಕೆರೆ, ನದಿಗಳ ಮೂಲ ಮಲಿನವಾಗದಂತೆ ಎಚ್ಚರವಹಿಸುವುದು. ೫. ಸಭೆ, ಸಮಾರಂಭಗಳಲ್ಲಿ ಹೆಚ್ಚು ನೀರು ಪೋಲಾಗದಂತೆ ಜಾಗ್ರತೆ ವಹಿಸುವುದು. ಕಾರ್ಯಾಗಾರಗಳನ್ನು ಹಮ್ಮಿಕೊಂಡು ನೀರಿನ ಸದ್ಬಳಕೆ ಬಗ್ಗೆ ತಿಳಿಸುವುದು. ೬. ಪ್ರಕೃತಿ, ಪರಿಸರದ ರಕ್ಷಣೆಗೆ ಒತ್ತುನೀಡುವುದು. ೭. ಬಟ್ಟೆ ಒಗೆದ ನಂತರ ಆ ನೀರನ್ನು ಚೆಲ್ಲದೆ ಹೂವಿನ ಗಿಡಗಳಿಗೋ, ಅಂಗಳವನ್ನು ತೊಳೆಯಲಿಕ್ಕೋ ಉಪಯೋಗಿಸಬಹುದು. ೮. ಮಕ್ಕಳಿಗೆ ಬಾಲ್ಯದಲ್ಲೇ ನೀರಿನ ಸಂರಕ್ಷಣೆ ಮತ್ತು ಮಿತಬಳಕೆಯ ಬಗ್ಗೆ ಅರಿವು ಮೂಡಿಸುವುದು. ೯. ವ್ಯರ್ಥವಾಗಿ ಹರಿದುಹೋಗುವ ನೀರನ್ನು ಮರುಸಂಸ್ಕರಿಸಿ ಇತರ ಉಪಯೋಗಗಳಿಗೆ ಬಳಸಿಕೊಳ್ಳುವ ಯೋಜನೆಗಳತ್ತ ಗಮನ ಹರಿಸುವುದು. ೧೦. ನೀರಿನ ಬಳಕೆಯ ಬಗೆಗಿನ ಜಾಗೃತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಸಹನಾ ಹೆಗಡೆ
ಅಜಿತ್ ಶೆಟ್ಟಿ ಹೆರಂಜೆ ಚುನಾವಣೆಯನ್ನು ಪ್ರಜಾಪ್ರಭುತ್ವದ ಉತ್ಸವ ಎನ್ನುತ್ತಾರೆ, ಆದರೆ ಮುಂದೊAದು ದಿನ ಇದೇ ಉತ್ಸವ ಪ್ರಜಾಪ್ರಭುತ್ವವೆಂಬ ತೇರನ್ನು ಎಳೆಯಲಾಗದಷ್ಟು ಭಾರವಾದಾಗ ಏನು ಮಾಡಬೇಕು? ಸಹಜವಾಗಿಯೇ ಭಾರವನ್ನು ಕಡಿಮೆಯಾಗಿಸಬೇಕು ಅಲ್ಲವೇ. ಆ ಭಾರವನ್ನು ಇಳಿಸುವ ಸಲುವಾಗಿಯೇ ‘ಒಂದು ದೇಶ ಒಂದು ಚುನಾವಣೆ’ಯ ನೀತಿಯನ್ನು ಜಾರಿಗೆ ತರಲು ಈಗ ಕೇಂದ್ರದ ಮೋದಿ ಸರಕಾರ ಹೊರಟಿದೆ. ವರ್ತಮಾನದ ಸಂಕೀರ್ಣವಾದ ಚುನಾವಣಾ ಪ್ರಕ್ರಿಯೆಯಲ್ಲಿ ಈ ರೀತಿಯ ಕ್ರಾಂತಿಕಾರಿ ನಿರ್ಧಾರವನ್ನು ತೆಗೆದುಕೊಂಡು, ಅದನ್ನು ಅತ್ಯಂತ ಸಮರ್ಪಕವಾಗಿ ಭಾರತದಂತಹ ದೇಶದಲ್ಲಿ ಅನುಷ್ಠಾನಕ್ಕೆ ತರುವುದು ನಿಜಕ್ಕೂ ಒಂದು ಸವಾಲಿನ ಸಂಗತಿಯೇ. ಚುನಾವಣಾ ಆವರ್ತನೆ ಹಳಿತಪ್ಪಿದ್ದು ಹೇಗೆ ಭಾರತದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದದ್ದು ೨೫ ಅಕ್ಟೋಬರ್ ೧೯೫೧ ಮತ್ತು ೨೧ ಫೆಬ್ರವರಿ ೧೯೫೨ರ ನಡುವೆ. ೬೮ ಹಂತದಲ್ಲಿ ನಡೆದ ಈ ಚುನಾವಣೆಯಲ್ಲಿ ಸುಮಾರು ೩೫ ಕೋಟಿ ಇದ್ದ ಭಾರತದ ಜನಸಂಖ್ಯೆಯಲ್ಲಿ ೧೬ ಕೋಟಿ ಮಂದಿ ಚುನಾವಣೆಯಲ್ಲಿ ಭಾಗಿಯಾಗಿದ್ದರು. ನಂತರ ೧೯೫೭ರಲ್ಲಿ ರಾಜ್ಯ ಮತ್ತು ಲೋಕಸಭೆಗಳಿಗೆ ಏಕಕಾಲದಲ್ಲಿಯೇ ನಡೆದ ಚುನಾವಣೆಯೂ ಸೇರಿದಂತೆ ದೇಶದಲ್ಲಿ ೨ ಬಾರಿ ‘ಒಂದು ದೇಶ ಒಂದು ಚುನಾವಣೆ’ ಯಶಸ್ವಿಯಾಗಿ ನಡೆದಿವೆ. ಆದರೆ ಇದರ ಆವರ್ತನೆ ತಪ್ಪಿದ್ದು ಇದರ ನಂತರದ ಚುನಾವಣೆಯಲ್ಲಿ. ೧೯೫೯ರಲ್ಲಿ ಪ್ರಧಾನಿ ನೆಹರು ಆರ್ಟಿಕಲ್ ೩೫೬ ಅನ್ನು ಬಳಿಸಿ ೧೯೫೭ರಲ್ಲಿ ಚುನಾಯಿತವಾದ ಕೇರಳದ ಕಮ್ಯುನಿಸ್ಟ್ ಸರಕಾರವನ್ನು ವಜಾ ಮಾಡಿತು. ಅಲ್ಲಿಂದಾಚೆಗೆ ೨೦೧೪ರವರಗೆ ರಾಜಕೀಯ ಹಾಗೂ ಸಾಂವಿಧಾನಿಕ ಕಾರಣಗಳಿಂದ ಒಟ್ಟು ೧೨೫ ಬಾರಿ ರಾಜ್ಯ ಸರಕಾರಗಳು ಬರ್ಕಾಸ್ತುಗೊಂಡಿವೆ. ಇದರ ಜೊತೆಗೆ, ಭಾಷಾವಾರು ರಾಜ್ಯಗಳ ರಚನೆ, ರಾಜ್ಯಗಳ ವಿಭಜನೆ ಹಾಗೂ ಹೊಸ ರಾಜ್ಯಗಳ ರಚನೆ ಚುನಾವಣೆ ಆವರ್ತನಗಳನ್ನು ಬದಲು ಮಾಡಿತು. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ೧೯೭೫ರಲ್ಲಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ದೇಶದ ಬಹುತೇಕ ಚುನಾಯಿತ ರಾಜ್ಯ ಸರಕಾರಗಳನ್ನು ವಜಾಗೊಳಿಸಿದರು. ಈ ಅಷ್ಟೂ ಘಟನೆಗಳು ದೇಶದಲ್ಲಿ ಒಂದೇ ಆವರ್ತನದಲ್ಲಾಗುತ್ತಿದ್ದ ಚುನಾವಣಾ ಪ್ರಕ್ರಿಯೆಯ ಹಳಿ ತಪ್ಪಿಸಿತು. ಭಾರತಕ್ಕೆ ಭಾರವಾದ ವರ್ತಮಾನದ ಚುನಾವಣಾ ವ್ಯವಸ್ಥೆ ಪ್ರಸ್ತುತ ದೇಶದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿ ೩೬ ರಾಜ್ಯಗಳು, ೨,೩೭,೫೩೯ ಗ್ರಾಮ ಪಂಚಾಯತ್, ೬,೩೨೬ ಬ್ಲಾಕ್ ಪಂಚಾಯತ್, ೬೫೫ ಜಿಲ್ಲಾ ಪಂಚಾಯತ್. ಹಾಗೂ ೪,೯೪೬ ನಗರಾಡಳಿತ ವ್ಯವಸ್ಥೆಗಳಿವೆ. ಈ ಕಾರಣದಿಂದಾಗಿಯೇ ದೇಶದಲ್ಲಿ ಪ್ರತೀ ವರ್ಷ ಯಾವುದಾದರೂ ೫-೬ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಲೇ ಇರುತ್ತದೆ. ಈಗ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂ ಬಂದ ಕಾರಣಕ್ಕೆ ಈ ಪರಿಯ ಚುನಾವಣಾ ಒತ್ತಡಗಳನ್ನು ನಿಭಾಯಿಸುವುದು ಸರಕಾರಿ ವ್ಯವಸ್ಥೆಗಳಿಗೆ ಅಸಾಧ್ಯವೇನಿಲ್ಲ. ಈಗ ಭಾರತದ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟç. ೨೦೨೪ರ ಚುನಾವಣೆಯಲ್ಲಿ ೯೬ ಕೋಟಿ ಮತದಾದರು, ೧೦ ಲಕ್ಷ ಚುನಾವಣಾ ಬೂತ್ಗಳು, ಜೊತೆಗೆ ೧.೨ ಕೋಟಿ ಚುನಾವಣಾ ಸಿಬ್ಬಂದಿಗಳನ್ನು ಬಳಸಲಾಗಿತ್ತು. ಇದರಲ್ಲಿ ೨೦ ಲಕ್ಷ ಮಂದಿ ಭದ್ರತಾ ಸಿಬ್ಬಂದಿಗಳಿದ್ದರು. ಈ ಪ್ರಮಾಣದಲ್ಲಿ ಚುನಾವಣೆ ನಡೆಸಲು ಸರಕಾರಿ ಯಂತ್ರಗಳು ೧ ವರ್ಷ ಇರುವಾಗಲೇ ಪೂರ್ವ ತಯಾರಿ ನಡೆಸುತ್ತವೆ. ಸುಮಾರು ಮೂರು ತಿಂಗಳುಗಳ ಕಾಲ ನೀತಿಸಂಹಿತೆ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಸರಕಾರದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ತಬ್ಧವಾಗುತ್ತದೆ. ಸರಕಾರದ ರಾಜಕೀಯ ನೇತೃತ್ವ ದೇಶದ ಆಡಳಿತದ ಬಗ್ಗೆ ಗಮನ ಹರಿಸುವ ಬದಲು ಚುನಾವಣೆಯತ್ತ ತಮ್ಮ ಗಮನ ಕೇಂದ್ರೀಕರಣ ಮಾಡಬೇಕಾಗುತ್ತದೆ. ಇದರ ಜೊತೆ ರಾಜಕೀಯ ಪಕ್ಷದ ಕಾರ್ಯಕರ್ತರು ಬೃಹತ್ ಪ್ರಮಾಣದಲ್ಲಿ ತಮ್ಮ ಎಲ್ಲಾ ದೈನಂದಿನ ಕೆಲಸಗಳನ್ನು ಬಿಟ್ಟು ಚುನಾವಣೆಗೆ ಧುಮುಕುತ್ತಾರೆ. ರಾಜ್ಯದ ವಿಧಾನಸಭಾ ಚುನಾವಣೆಗಳು ಮೇಲೆ ಉಲ್ಲೇಖಿಸಿದ ಕಾರಣಗಳಿಂದಾಗಿ ಲೋಕಸಭಾ ಚುನಾವಣೆಯ ಜೊತೆಗೆ ಆಗುತ್ತಿಲ್ಲವಾದುದರಿಂದ ಇವುಗಳನ್ನು ಪ್ರತ್ಯೇಕವಾಗಿ ಮಾಡಬೇಕಾಗುತ್ತಿದೆ. ಇದೆಲ್ದರ ಜೊತೆಗೆ ವಲಸೆ ಕಾರ್ಮಿಕರ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ ದೇಶದಲ್ಲಿ ಇಂತಹ ಅನಿಯಮಿತ ಚುನಾವಣೆಗಳು ಉತ್ಪಾದನಾ ವಲಯಗಳು ಹಾಗೂ ಮೂಲಭೂತ ಸೌಕರ್ಯ ನಿರ್ಮಾಣ ವಲಯಗಳ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ. ಇವುಗಳ ಜೊತೆಗೆ ಸ್ಥಳಿಯ ಸಂಸ್ಥೆಗಳ ಚುನಾವಣೆಗಳದ್ದು ಬೇರೆಯೇ ಲೆಕ್ಕ. ಹೀಗೆ ಪ್ರತೀ ವರ್ಷದಲ್ಲಿ ಕನಿಷ್ಠ ಪಕ್ಷ ೩-೫ ತಿಂಗಳು ಚುನಾವಣೆಯ ಸುತ್ತಲೇ ಗಿರಕಿ ಹೊಡೆದರೆ ದೇಶದ ಅಭಿವೃದ್ದಿಯ ಕೆಲಸ ಮಾಡುವುದು ಯಾವಾಗ? ಆ ಕಾರಣಕ್ಕೇ ಈ ಭಾರವನ್ನು ತಗ್ಗಿಸಲೆಂದೇ ಒಂದು ರಾಷ್ಟç ಒಂದು ಚುನಾವಣೆಯ ಕಲ್ಪನೆ ಹುಟ್ಟಿಕೊಂಡಿತು ಒAದು ರಾಷ್ಟç ಒಂದು ಚುನಾವಣೆಯ ಕಲ್ಪನೆ ಪ್ರಥಮ ಬಾರಿಗೆ ಇದರ ಉಲ್ಲೇಖವನ್ನು ೧೯೮೩ರಲ್ಲಿ ಭಾರತಿಯ ಚುನಾವಣಾ ಆಯೋಗ ತನ್ನ ಮೊದಲ ವಾರ್ಷಿಕ ವರದಿಯಲ್ಲಿ ಮಾಡಿತ್ತು. ಅಂದಿನಿAದ ಕಾನೂನು ಆಯೋಗ, ರಾಷ್ಟಿçÃಯ ಆಯೋಗ ಮತ್ತು ನೀತಿ ಆಯೋಗಗಳು ಇದರ ಎಲ್ಲಾ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತಲೇ ಬಂದಿದ್ದವು. ನಂತರ ಸಂಸತ್ತಿನ ೨೦೧೮ರ ಅಧಿವೇಷನದಲ್ಲಿ ಅಂದಿನ ರಾಷ್ಟçಪತಿಗಳಾಗಿದ್ದ ರಾಮನಾಥ ಕೋವಿಂದ್ ಇದರ ಅವಶ್ಯಕತೆಯನ್ನು ಪ್ರಸ್ತಾಪಿಸಿದ್ದರು. ಅಲ್ಲಿಂದ ನೇಪತ್ಯ ಕಂಡಿದ್ದ ಈ ಚಿಂತನೆ ಮತ್ತೆ ಮುನ್ನೆಲೆಗೆ ಬಂತು. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಪ್ರಸ್ತುತ ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಇದರ ಔಚಿತ್ಯದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಉನ್ನತ ಮಟ್ಟದ ಆಯೋಗದ ರಚನೆ ಮತ್ತು ಶಿಫಾರಸ್ಸುಗಳು ೨೦೨೩ರಲ್ಲಿ ಭಾರತ ಸರಕಾರ, ಮಾಜಿ ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ಅವರ ನೇತ್ರತ್ವದಲ್ಲಿ ಇದರ ಬಗ್ಗೆ ಅಧ್ಯಯನ ಮಾಡಿ ವಿಸ್ತೃತವಾದ ವರದಿ ಸಲ್ಲಿಸಲು ಉನ್ನತ ಮಟ್ಟದ ಆಯೋಗದ ರಚನೆ ಮಾಡಿತು. ಈ ಸಮಿತಿ ಮಾರ್ಚ್ ೧೪, ೨೦೨೪ರಂದು ೧೮,೦೦೦ ಪುಟಗಳ ತನ್ನ ವರದಿಯನ್ನು ಸರಕಾರ ಸಲ್ಲಿಸಿತು. ಇದರಲ್ಲಿ ಸಮಿತಿ ಸಾಂವಿಧಾನಿಕ ತಿದ್ದುಪಡಿ ಸೇರಿದಂತೆ ಒಂದಷ್ಟು ಆಡಳಿತಾತ್ಮಕ ಸುಧಾರಣೆಗಳನ್ನು ತರಲು ಸೂಚಿಸಿತು. ಈ ಪಕ್ರಿಯೆಯಲ್ಲಿ ಸಮಿತಿಯು ೪೭ ರಾಷ್ಟಿçÃಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿದ್ದು ಅದರಲ್ಲಿ ೩೨ ಪಕ್ಷಗಳು ಇದನ್ನು ಬೆಂಬಲಿಸಿದವು ಮತ್ತು ೧೫ ರಾಜಕೀಯ ಪಕ್ಷಗಳು ಅದನ್ನು ವಿರೋಧಿಸಿದವು. ಈ ಪ್ರಕ್ರಿಯೆಯಲ್ಲಿ ಭಾರತದ ನಾಲ್ವರು ಮಾಜಿ ಮುಖ್ಯ ನ್ಯಾಯಮೂರ್ತಿಗಳೊಂದಿಗೂ ಸಹ ಸಮಾಲೋಚಿಸಲಾಯಿತು. ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿಲ್ಲ ಎನ್ನುವ ಕಾರಣಕ್ಕೆ ಅವರೆಲ್ಲರೂ ಇದನ್ನು ಬೆಂಬಲಿಸಿದರು. ದೇಶದ ಉದ್ದಗಲದಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಈ ಮೈಲ್, ವೆಬ್ಸೈಟ್ ಮತ್ತು ಅಂಚೆ ಮೂಲಕ ಸ್ವೀಕರಿಸಿದ ೨೧,೫೫೮ ಅಭಿಪ್ರಾಯಗಳಲ್ಲಿ ೮೦% ಪ್ರತಿಕ್ರಿಯೆಗಳು ಇದರ ಪರವಾಗಿ ಬಂದಿದೆ. ಶಿಫಾರಸ್ಸುಗಳು ಎರಡು ಹಂತದ ಚುನಾವಣೆ: ವರದಿಯು ಎರಡು-ಹಂತದ ಚುನಾವಣಾ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ, ಇದರಲ್ಲಿ ಲೋಕಸಭೆ ಮತ್ತು ಆಯಾ ರಾಜ್ಯ ಅಸೆಂಬ್ಲಿಗಳಿಗೆ ಚುನಾವಣೆಗಳನ್ನು ಮೊದಲ ಹಂತದಲ್ಲಿ ಮಾಡಬೇಕು. ಇದರ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸದನದ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಗಳು ನಡೆದ ನೂರು ದಿನಗಳೊಳಗೆ ನಡೆಸಬೇಕು. ಮಧ್ಯಂತರ ಚುನಾವಣೆಗಳು ಮತ್ತು ಅವಧಿಗೂ ಮುನ್ನದ ಚುನಾವಣೆ: ಸಂವಿಧಾನದಲ್ಲಿ ತಿದ್ದುಪಡಿ ಮಾಡುವು ಮೂಲಕ. ಲೊಕಸಭೆ ಅಥವಾ ಯಾವುದೇ ಶಾಸಕಾಂಗ ಸಭೆಗಳು ಮದ್ಯಾವಧಿಯಲ್ಲಿ ವಿಸರ್ಜಿಸಲ್ಪಟ್ಟರೆ ಅವುಗಳ ಹಿಂದಿನ ಸರಕಾರದ ಉಳಿದ ಅವಧಿಗಷ್ಟೇ ಮಾಡಬೇಕು. ಟ್ರಾನ್ಸಿಟರಿ ನಿಬಂಧನೆಗಳು: ಈ ಹೊಸ ವ್ಯವಸ್ಥೆಯ ಅಡಿಯಲ್ಲಿ ಒಂದೇ ಆವರ್ತನೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆಗಳನ್ನು ರಚಿಸಲ್ಪಡುವ ಸರಕಾರಗಳು ಆ ದಿನದಿನದ ತನ್ನ ನಿಗದಿಗೊಳಿಸದ ಅಷ್ಟೂ ಅವಧಿಗೆ ಇರಬೇಕು ಎನ್ನು ಕಾನೂನನ್ನು ಜಾರಿಗೆ ತರಬೇಕು. ಇದೇರಿತಿಯ ವ್ಯವಸ್ಥೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮಾಡಬೇಕು. ಸಧ್ಯ ಈ ಮಸೂದೆ ಲೋಸಭೆಯಲ್ಲಿ ಮಂಡನೆಗೊAಡು ಅನುಮೋದೆನೆಯಾಗಿದೆ. ಏಕ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಚುನಾವಣೆಗಳನ್ನು ನಡೆಸಲು ತಾನು ಸನ್ನದ್ಧವಿರುವುದಾಗಿ ಕೇಂದ್ರ ಚುನಾವಣಾ ಆಯೋಗವು ಹೇಳಿದೆ. ಇದು ಜಾರಿಗೆ ಬರುವುದರಿಂದ ಅಪಾರ ಪ್ರಮಾಣದ ಹಣ, ಮಾನವ ಸಂಪನ್ಮೂಲ ವ್ಯರ್ಥವಾಗುವುದು ನಿಲ್ಲುತ್ತದೆ. ಚುನಾವಣಾ ಭ್ರಷ್ಟಾಚಾರವು ಸಹ ಕಡಿಮೆಯಾಗಬಹುದು. ರಾಜಕೀಯ ಕಾರಣಕ್ಕಾಗಿ ದೂರದೃಷ್ಟಿ ತೀರ್ಮಾನಗಳನ್ನು ಕೈಗೊಳ್ಳಲು ಹಿಂದೆಟು ಹಾಕುವ ಅಂಜಿಕೆ ಕಡಿಮೆಯಾಗಿ ಅಭಿವೃದ್ಧಿಪರ ತೀರ್ಮಾನಗಳನ್ನು ಸರ್ಕಾರಗಳು ಕೈಗೊಳ್ಳಲು ಸಾಧ್ಯವಾಗಬಹುದು. ಪದೇ ಪದೇ ಬಂದೆರಗುವ ನೀತಿ ಸಂಹಿತೆಗಳು ಇಲ್ಲವಾಗುವುದರಿಂದ ಪ್ರಗತಿಯ ಯೋಜನೆಗಳು ಮತ್ತು ಕಾಮಗಾರಿಗಳು ನಿರಾಂತಕವಾಗಿ ಮುಂದುವರೆಯುತ್ತವೆ
ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮವಹಿಸಿದ ಮಹಾನ್ ವಿಜ್ಞಾನಿ ಸತೀಶ್ ಧವನ್. ಇವರು 1920ರ ಸೆಪ್ಟೆಂಬರ್ 25ರಂದು ಶ್ರಿನಗರದಲ್ಲಿ ಜನಿಸಿದರು. ಭೌತಶಾಸ್ತ್ರ ಮತ್ತು ಗಣಿತಶಾಸ್ತçದಲ್ಲಿ ವಿಜ್ಞಾನ ಪದವಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಕಲಾ ಸ್ನಾತಕೋತ್ತರ ಪದವಿಯನ್ನು ಪಡೆದರು. 1947ರಲ್ಲಿ, ಅವರು ಮಿನ್ನಿಯಾಪೋಲಿಸ್‌ನ ಮಿನ್ನೇಸೋಟ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮತ್ತು ಏರೋನಾಟಿಕ್ಸ್ನಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದರು. 1972ರಲ್ಲಿ ಇವರು ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಸ ದಿಕ್ಕನ್ನು ಸೃಷ್ಟಿಸುತ್ತಾರೆ. ಇವರ ನೇತೃತ್ವದಲ್ಲಿ ಭಾಸ್ಕರ ಉಪಗ್ರಹ, ಆರ್ಯಭಟ ಉಪಗ್ರಹ ಸೇರಿದಂತೆ ಹಲವು ಯಶಸ್ವಿ ಉಪಗ್ರಹಗಳನ್ನು ಉಡಾಯಿಸಲಾಯಿತು. ಸತೀಶ್ ಧವನ್ ಅವರು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಗ್ರಾಮೀಣ ಅಭಿವೃದ್ಧಿಯೊಂದಿಗೆ ಹೊಂದಿಸಬೇಕು ಎಂಬ ದೃಷ್ಟಿಕೋನ ಹೊಂದಿದ್ದರು. ಇದರಿಂದ ದೂರದರ್ಶನದ ಮೂಲಕ ಗ್ರಾಮೀಣ ಶಿಕ್ಷಣ ಮತ್ತು ಮಾಹಿತಿ ಹಂಚಿಕೆಗೆ ಪೂರಕವಾದ ಸೈಟ್ (Satellite Instructional Television Experiment) ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರುತ್ತಾರೆ. ಹಾಗೆಯೇ ದ್ರವಗತಿಯಶಾಸ್ತ್ರ, ಗಾಳಿಯುಂಡೆಗಳ ಅಧ್ಯಯನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿರುತ್ತಾರೆ. ವೈಜ್ಞಾನಿಕ ಸಾಧನೆಗಳೊಂದಿಗೆ ಇವರು ಪ್ರಾಮಾಣಿಕತೆ, ಶಿಸ್ತು, ಮತ್ತು ಜನಮೆಚ್ಚುಗೆಯ ನಾಯಕತ್ವಕ್ಕಾಗಿ ಹೆಸರಾಗಿದ್ದರು. ತಮ್ಮ ಸೇವೆಯ ಅವಧಿಯಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟು ತಮ್ಮ ಜ್ಞಾನವನ್ನು ಜಗತ್ತಿಗೇ ಸಾರಿದ್ದಾರೆ. ಹೀಗೆ ತಮ್ಮದೇ ದೃಷ್ಟಿಕೋನದಿಂದ ಸಾಧನೆಗಳನ್ನು ಮೆರೆದ ಸತೀಶ್ ಧವನ್ ಅವರಿಗೆ ಭಾರತ ಸರ್ಕಾರವು 1971ರಲ್ಲಿ ಪದ್ಮಭೂಷಣ ಮತ್ತು 1981ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತಾರೆ. ಇಂದು ಇಸ್ರೋ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸತೀಶ್ ಧವನ್ ಅವರ ದೂರದೃಷ್ಟಿ ಮತ್ತು ದೃಢನಂಬಿಕೆ ಅಳವಡಿಕೆಗೊಂಡಿರುವುದು ಗಮನಾರ್ಹವಾಗಿದೆ. ಇವರನ್ನು ಭಾರತದಲ್ಲಿ ಪ್ರಾಯೋಗಿಕ ದ್ರವ ಚಲನಶಾಸ್ತç ಸಂಶೋಧನೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ತಮ್ಮ ಜ್ಞಾನದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲಿ ತಮ್ಮದೇ ನಾಯಕತ್ವವನ್ನು ಹೊಂದಿದ್ದಾರೆ. ಇವರು ಜನವರಿ 3, 2002 ರಂದು ಎಲ್ಲರನ್ನೂ ಅಗಲುತ್ತಾರೆ. ಅವರ ಸ್ಮರಣಾರ್ಥವಾಗಿ ಇಸ್ರೋದ ಶ್ರೀಹರಿಕೋಟ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ ಎಂದು 5 ಸೆಪ್ಟೆಂಬರ್ 2002ರಲ್ಲಿ ಹೆಸರಿಡಲಾಗುತ್ತದೆ. ಇವರು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಇಂದಿಗೂ ಶಾಶ್ವತವಾಗಿದೆ.
ಹಿಂದುಳಿದ ವರ್ಗಗಳ ಹರಿಕಾರ ಎಂದೇ ಖ್ಯಾತರಾಗಿರುವ ಡಿ. ದೇವರಾಜ ಅರಸ್ ಅವರು ಜನನಾಯಕ, ಬಡವರ ಧ್ವನಿಯಾಗಿ, ಸಮಾಜ ಸೇವಕರಾಗಿ ಪ್ರಸಿದ್ಧರಾದವರು. ಇವರು ರಾಜಕೀಯ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ. ಡಿ.ದೇವರಾಜ ಅರಸ್ ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದವರು. ಎರಡು ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಡಿ. ದೇವರಾಜ ಅರಸ್ ಅವರು ಆಗಸ್ಟ್ ೨೦, ೧೯೧೫ ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ದೇವರಾಜ ಅರಸು ಮತ್ತು ತಾಯಿ ದೇವೀರ ಅಮ್ಮಣ್ಣಿ. ದೇವರಾಜ ಅರಸ್ ಅವರ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಮೈಸೂರಿನ ಉರ್ಸ್ ಬೋರ್ಡಿಂಗ್ ಶಾಲೆಯಲ್ಲಿ ಪಡೆದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಅಧ್ಯಯನ ಮಾಡಿದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಲಹಳ್ಳಿಗೆ ಹಿಂದಿರುಗಿದ ಅರಸ್ ಕೃಷಿಯಲ್ಲಿ ತೊಡಗಿದರು. ಆದರೆ ಸ್ವಭಾವತಃ ನಾಯಕತ್ವದ ಗುಣವನ್ನು ಹೊಂದಿದ್ದ ಅರಸ್ ನಂತರದ ದಿನಗಳಲ್ಲಿ ರಾಜಕೀಯಕ್ಕೆ ಪಾದರ್ಪಣೆ ಮಾಡಿದರು. ರಾಜಕೀಯ ಜೀವನ: ದೇವರಾಜ ಅರಸ್ ಅವರು ೧೯೫೨ ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸಿದರು. ಈ ಸಮಯದಲ್ಲಿ, ಮಹಾರಾಜರು ಇನ್ನೂ ಮೈಸೂರಿನಲ್ಲಿ ರಾಜ್ಯದ ಮುಖ್ಯಸ್ಥರಾಗಿದ್ದರು. ನಂತರ ಸತತ ಹತ್ತು ವರ್ಷ ಶಾಸಕರಾಗಿ ಆಯ್ಕೆಯಾಗಿದ್ದ ಅರಸ್ ಮಾರ್ಚ್ ೨೦, ೧೯೭೨ – ಡಿಸೆಂಬರ್ ೩೧, ೧೯೭೭ ಹಾಗೂ ಫೆಬ್ರವರಿ ೨೮, ೧೯೭೮ – ಜನವರಿ ೭, ೧೯೮೦ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಸಾಮಾಜಿಕ ಸುಧಾರಣೆ: ದೇವರಾಜ ಅರಸು ಸಮಾಜ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇವರಿಗೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವುದು ಮೊದಲ ಗುರಿಯಾಗಿತ್ತು. ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ ಹಾಗೂ ತಂತ್ರಜ್ಞಾನ ಹೊಂದಿದ ಮಂತ್ರಿಮಂಡಲವನ್ನು ರಚಿಸಿದರು. “ಉಳುವವನಿಗೆ ಭೂಮಿ” ಅವರ ಮತ್ತೊಂದು ಮಹತ್ತರವಾದ ಯೋಜನೆಯನ್ನು ಜಾರಿಗೆ ತಂದಿದ್ದರು. ೧೯೭೩ರಲ್ಲಿ ಮೈಸೂರನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಿದರು. ಅವರ ಕಾಲದಲ್ಲಿ ೧೬,೦೦೦ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಒದಗಿಸಲಾಯಿತು. ಇವರ ಯೋಜನೆಗಳಿಂದಾಗಿ ಕೂಲಿ ಮಾಡುವವರು ಭೂ-ಮಾಲೀಕರಾದರು, ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆಯಾಯಿತು. ಇದ್ದರಿಂದ ದೇಶದಲ್ಲಿ ಸಾಮಾಜಿಕ ಅಸಮಾನತೆಯನ್ನು ಕಡಿಮೆಗೊಳಿಸಲಾಯಿತು. ರಾಜ್ಯದಲ್ಲಿ ಅಭಿವೃದ್ದಿಯ ಹೊಸ ಶಖೆಗೆ ಕಾರಣರಾಗಿದ್ದರು. ಪ್ರತಿ ಮನೆಯಲ್ಲೂ ವಿದ್ಯುತ್ ಬಲ್ಬ್ ಹೊಂದುವ ಯೋಜನೆಯನ್ನು ಜಾರಿಗೆ ತಂದವರು. ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಅಭಿವೃದ್ಧಿಪಡಿಸಲು ದೇವರಾಜ ಅರಸ್ ಅವರು ಬೆಂಬಲ ಸೂಚಿಸಿದರು. ೧೯೭೬ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಈ ಆರಂಭಿಕ ಬೀಜ ಹೂಡಿಕೆಯು ಎಲೆಕ್ಟಾçನಿಕ್ಸ್ ಸಿಟಿಗೆ ಅಡಿಪಾಯ ಹಾಕಿತು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಅನೇಕ ಸಹಾಯ ಮಾಡಿದ್ದರು. ಅವುಗಳಲ್ಲಿ ಒಂದಾದ ಕಾಳಿ ಯೋಜನೆಯು ಹಲವಾರು ವಲಯಗಳ ವಿರೋಧದ ನಡುವೆ ಕಾರ್ಯಗತಗೊಂಡಿತು. ಡಿ. ದೇವರಾಜ ಅರಸ್ ಅವರು ಜೂನ್ ೬, ೧೯೮೨ ತಮ್ಮ ೬೬ ವಯಸ್ಸಿನಲ್ಲಿ ನಿಧನರಾದರು.
ಸಂಘಶತಾಬ್ದಿ ವರ್ಷದ ಸಂದರ್ಭದಲ್ಲಿ, ಪಂಚಪರಿವರ್ತನೆಯ ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶೀ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರ- ಈ ಐದು ವಿಷಯಗಳ ಕುರಿತು ಚರಿತಪಂಚಕ ನೂತನ ಕೃತಿ ಮೂಡಿಬಂದಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿರುವ ಶ್ರೀ ನಾರಾಯಣ ಶೇವಿರೆಯವರು ಈ ಕೃತಿಯ ಲೇಖಕರು. ರಾಷ್ಟ್ರೋತ್ಥಾನ ಸಾಹಿತ್ಯ ಈ ಕೃತಿಯನ್ನು ಪ್ರಕಟಿಸಿದೆ. ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಮತ್ತು ಪೋಷಣೆಯನ್ನು ಒದಗಿಸಿದ್ದ ಹಿಂದೂ ಕುಟುಂಬಪದ್ಧತಿಯ ಪುನಃಸ್ಥಾಪನೆಯ ಅವಶ್ಯಕತೆ, ಸಕಲ ಜೀವಜಾಲವನ್ನೂ ಪೊರೆಯುತ್ತಿರುವ ಪಂಚಭೂತಾತ್ಮಕವಾದ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ, ಪ್ರತಿಯೊಬ್ಬರ ಗೌರವಪೂರ್ಣ ಬದುಕಿಗೆ ದಾರಿಮಾಡುವ ಸಾಮಾಜಿಕ ಸಾಮರಸ್ಯಸಾಧನೆಯ ಮಾರ್ಗಗಳು, ಸ್ವಂತಿಕೆಯ ಮೂಲಕ ಸ್ವಾವಲಂಬನೆ ಸಾಧಿಸಲು ಕಾರಣವಾಗಬಲ್ಲ ಸ್ವದೇಶೀ ಪ್ರಸ್ಥಾನದ ಅನುಸರಣೆ, ಎಲ್ಲರ ಹಕ್ಕುಗಳನ್ನೂ ಖಾತ್ರಿಪಡಿಸುವ ನಾಗರಿಕ ಕರ್ತವ್ಯಪ್ರಜ್ಞೆಯ ಜಾಗರಣ - ಇವುಗಳನ್ನು ಕುರಿತು ಒಂದಿಷ್ಟು ಚಿಂತನ ಮಂಥನಕ್ಕೆ ಬೇಕಾದ ಆಕರ ಸಾಮಗ್ರಿಯನ್ನೊದಗಿಸುತ್ತದೆ ಚರಿತಪಂಚಕ. ಪುಸ್ತಕಕ್ಕಾಗಿ ಸಂಪರ್ಕಿಸಿ: 6360581957
ಬೇಂದ್ರೆಯವರ ಸಾಹಿತ್ಯದ ಮೇಲೆ ಅಲ್ಲಿ ಇಲ್ಲಿ ಕೆಲವು ಲೇಖನಗಳು, ಅವರ ಕಾವ್ಯದ ಮೇಲೆ ಒಂದೆರಡು ಗ್ರಂಥಗಳು ಬಂದಿದ್ದರೂ ಸಮಗ್ರವಾಗಿ ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ, ಅವರ ಸಾಹಿತ್ಯ ಮೇಲೆ ಬಂದಿರುವ ಎಲ್ಲ ವಿಮರ್ಶೆಗಳನ್ನೂ ಗಮನಿಸಿ, ತಮ್ಮ ಕೃತಿಗಳ ಮೇಲೆ ಬೇಂದ್ರೆಯವರೆ ಹೇಳಿರುವ ಮಾತುಗಳನ್ನೆಲ್ಲ ಸಂಗ್ರಹಿಸಿ, ಸಮೀಕ್ಷೆ ನಡೆಸಿ, ಬೇಂದ್ರೆಯವರು ಯಾವ ಯಾವ ಕೃತಿಗಳಿಂದ, ಸಾಹಿತಿಗಳಿಂದ ಪ್ರಭಾವಿತರಾದರು. ಆ ಪ್ರಭಾವಗಳನ್ನೆಲ್ಲ ಮೀರಿ ನಿಂತು ಅವರ ಕೃತಿಗಳು ಹೇಗೆ ಸ್ವತಂತ್ರ ಕೃತಿಗಳಾಗಿ ಕನ್ನಡ ಕಾವ್ಯ ಸಂಪ್ರದಾಯದಲ್ಲೇ ಅನನ್ಯವಾಗಿವೆ ಎಂಬುದನ್ನು ಇಲ್ಲಿ ಸವಿಸ್ತಾರವಾಗಿ ಚಿತ್ರಿಸಿ ಶ್ರೀ ಅಮೂರರು ಬೇಂದ್ರೆಯವರ ಸಾಹಿತ್ಯದ ಆಳವಾದ ಅಭ್ಯಾಸಕ್ಕೆ ತುಂಬ ಸಹಕಾರಿಯಾಗುವಂತೆ ರಚಿಸಿದ ಕೃತಿ ಇಲ್ಲಿದೆ. ಕನ್ನಡ ರಸಿಕರೆಲ್ಲರೂ ಗಮನಿಸಲೇಬೇಕಾದ ಗ್ರಂಥ ಇದು ಎಂದೂ ಧಾರಾಳವಾಗಿ ಹೇಳಬಹುದು. ಹಾಗಂತ ಇಲ್ಲಿ ಹೇಳಿದ ಎಲ್ಲ ಸಂಗತಿಗಳನ್ನೂ ಎಲ್ಲರೂ ಒಪ್ಪುತ್ತಾರೆಂದಾಗಲೀ, ಒಪ್ಪಲೇಬೇಕೆಂದಾಗಲೀ ಅಲ್ಲ. ಮುಂದೆ ಚರ್ಚಿಸಿ ಒಂದು ಸಿದ್ಧಾಂತಕ್ಕೆ ಬರಬಹುದಾದ, ಹಾಗೆ ಬರಲು ತಕ್ಕ ಮೌಲಿಕ ಸಾಮಗ್ರಿ ಇಲ್ಲಿದೆ. ಅಂಥ ಕೆಲಸ ಸಾರೋದ್ಧಾರ ನಡೆಯಲಿ. ಆ ಮೂಲಕ ಈ ಕೃತಿ ಕೃತಿಕಾರ ಇಬ್ಬರೂ ಕೃತಾರ್ಥತೆ ಪಡೆಯಲಿ ಎಂಬುದು ನಮ್ಮ ಹಾರೈಕೆ.
ಆರ್ಎಸ್ಎಸ್ ನನ್ನ ಹೃದಯದ ಮಿಡಿತ. – ಜನರಲ್ ಕೆ. ಸಿ. ಕಾರ್ಯಪ್ಪ ನಾನೊಬ್ಬ ಆರ್ಎಸ್ಎಸ್ನ ಗೌರವ ಸದಸ್ಯ. – ಆಚಾರ್ಯ ವಿನೋಬಾ ಭಾವೆ ಸಾಮಾಜಿಕ ಪರಿವರ್ತನೆ, ಜಾತಿ ನಿರ್ಮೂಲನ ಹಾಗೂ ಬಡವರ ಕಣ್ಣೀರು ತೊಡೆಯುವ ಸಾಮರ್ಥ್ಯ ಆರ್ಎಸ್ಎಸ್ಗೆ ಮಾತ್ರವಿದೆ. – ಶ್ರೀ ಜಯಪ್ರಕಾಶ ನಾರಾಯಣ ನಾನು ಆರ್ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಅನುಶಾಸನ ಹಾಗೂ ಅಸ್ಪೃಶ್ಯತೆಯ ಲವಲೇಶವೂ ಇಲ್ಲದ ವಾತಾವರಣ ಕಂಡು ತುಂಬಾ ಪ್ರಭಾವಿತನಾಗಿರುವೆ. – ಮಹಾತ್ಮ ಗಾಂಧಿ, ಸೆಪ್ಟೆಂಬರ್ 16, 1947 ದೆಹಲಿ. ತನ್ನ ಜೊತೆಗಿರುವ ಸ್ವಯಂಸೇವಕನ ಜಾತಿ ಯಾವುದೆಂಬುದನ್ನು ತಿಳಿಯುವ ಆಸಕ್ತಿ ತೋರದೆ, ಪರಸ್ಪರ ಸಹೋದರರಂತೆ ಹಾಗೂ ಸಂಪೂರ್ಣ ಸಮಾನತೆಯಿಂದ ಸ್ವಯಂಸೇವಕರು ವ್ಯವಹರಿಸುವುದನ್ನು ನೋಡಿ ನಾನು ಆಶ್ಚರ್ಯಚಕಿತನಾಗಿರುವೆ. – ಡಾ. ಬಿ. ಆರ್. ಅಂಬೇಡ್ಕರ್, (1939ರ ಮೇ ತಿಂಗಳಲ್ಲಿ ಪುಣೆಯಲ್ಲಿ ನಡೆದ ಆರ್ಎಸ್ಎಸ್ ಶಿಬಿರದಲ್ಲಿ) ಜಗತ್ತಿನಲ್ಲಿ ಕೇವಲ ಎಡಪಂಥೀಯೇತರ ಕ್ರಾಂತಿಕಾರಿ ಪಡೆ ಮತ್ತು ಅದರ ನೇತೃತ್ವವನ್ನು ವಹಿಸಿದ್ದ ನೂರಾರು, ಸಾವಿರಾರು ಸ್ವಯಂಸೇವಕರು ಭಾರತಕ್ಕೆ ಮತ್ತೆ ಪ್ರಜಾತಂತ್ರವನ್ನು ತಂದುಕೊಟ್ಟರು. - ದಿ ಎಕನಾಮಿಸ್ಟ್, ಲಂಡನ್, ಡಿಸೆಂಬರ್ 4, 1976. ‘ದೇಶದಲ್ಲಿ ಸಮುದಾಯಗಳ ನಡುವೆ ವಿಷಮತೆಯನ್ನು ಕಡಿಮೆ ಮಾಡಲು ನಡೆದಿರುವ ಎಲ್ಲ ಪ್ರಯತ್ನಗಳ ಪೈಕಿ ಸಂಘದ ಪ್ರಯತ್ನವೇ ಅತಿ ಪರಿಣಾಮಕಾರಿಯಾದದ್ದು. ಅಧ್ಯಾತ್ಮ, ಭಕ್ತಿ, ಸಾಮಾಜಿಕ ಎಲ್ಲದರಲ್ಲೂ ಈ ಪ್ರಯತ್ನದ ಪರಿಣಾಮ ಇದೆ. - ಪದ್ಮಶ್ರೀ ರಮೇಶ್ ಪತಂಗೆ, ಹಿರಿಯ ಚಿಂತಕ ಆರ್ಎಸ್ಎಸ್ನ ‘ಸೇವಾ ಉಪಕ್ರಮವು ಸೇವೆಯನ್ನು ಮಾಡುವವರು ಮತ್ತು ಅದನ್ನು ಪಡೆದುಕೊಳ್ಳುವವರು ಇಬ್ಬರನ್ನೂ 'ಇದು ನಮಗೆ ಸೇರಿದ್ದು' ಎನ್ನುವಂತಹ ಮನೋಭಾವಕ್ಕೆ ಮರುಜೀವ ನೀಡಿದೆ. - ಮಾಲಿನಿ ಭಟ್ಟಾಚಾರ್ಜಿ, ಲೇಖಕಿ ಸಂಘವು ಕೇವಲ ಒಂದಿಷ್ಟು ಚಟುವಟಿಕೆಗಳನ್ನು ಯಾಂತ್ರಿಕವಾಗಿ ಅನುಷ್ಠಾನಗೊಳಿಸಲು ಹುಟ್ಟಿರುವ ಸಂಸ್ಥೆಯಲ್ಲ. ದೇಶದ ಸಾಂಸ್ಕೃತಿಕ ಪುನರುಜ್ಜಿವನದ ತಾತ್ವಿಕ ಪರಿಕಲ್ಪನೆಗಳಿಂದ, ದೈಹಿಕ ಶಿಸ್ತು, ಮಾನಸಿಕ ಶಕ್ತಿ, ದೃಢ ಸಂಕಲ್ಪ ಮತ್ತು ಸೇವೆಗಳ ಮೂಲಕ ಸಮಾಜದ ಎಲ್ಲ ವರ್ಗಗಳ ಎಲ್ಲ ಜನರ ಹೃದಯ ಸ್ಪರ್ಶಿಸುವುದರ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನದ ದೂರದೃಷ್ಟಿಯ ಆಶಯವನ್ನು ಹೊಂದಿದೆ. - ಡಾ|| ಆರ್ ಬಾಲಸುಬ್ರಹ್ಮಣ್ಯಂ, ಸಾಮಾಜಿಕ ಕಾರ್ಯಕರ್ತ ಸಂಘಪರಿವಾರದ ತೇಜಸ್ಸು, ಶಿಸ್ತು, ಅಚ್ಚುಕಟ್ಟುತನ, ರಾಷ್ಟ್ರಭಕ್ತಿ, ನಿಃಸ್ವಾರ್ಥಸೇವಾ ಮನೋಭಾವವನ್ನು ಕಳೆದ ಕಾಲು ಶತಮಾನದಿಂದ ತುಂಬಾ ಹತ್ತಿರದಿಂದ ಕಾಣುತ್ತಿದ್ದೇನೆ. ಇಂಥ ಉನ್ನತಾದರ್ಶಗಳನ್ನು ಇಟ್ಟುಕೊಂಡ ಸಂಘಕ್ಕೆ ಈಗ ಶತಮಾನದ ಸಂಭ್ರಮ. ಇಂಥ ಸಂಸ್ಥೆಯ ಮೂಲಕ ರಾಷ್ಟçನಿರ್ಮಾಣದಲ್ಲಿ ಅದರ ಸಂಗೋಪನದಲ್ಲಿ ತೊಡಗಿಕೊಳ್ಳೋಣವೆಂಬ ಆಕಾಂಕ್ಷೆ ನಮ್ಮ ಜನರಲ್ಲಿ ಹೆಚ್ಚಲಿ, ಬೆಳೆಯಲೆಂದು ನಾನು ಆಶಿಸುತ್ತೇನೆ. - ಪ್ರೊ. ಮಲ್ಲೇಪುರಂ ಜಿ ವೆಂಕಟೇಶ, ಸಾಹಿತಿ. ಶಿಸ್ತು, ಅನುಶಾಸನ, ನೈತಿಕ ನಿಷ್ಠೆ, ದೈವಭಕ್ತಿ, ದೇಶಪ್ರೇಮ ಈ ಎಲ್ಲ ಸದ್ಗುಣಗಳನ್ನೂ ಜನರಲ್ಲಿ ಒಮ್ಮೆಗೇ ಉದ್ದುದ್ಧಗೊಳಿಸುವ ಜಗತ್ತಿನ ಏಕೈಕ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ನಿಮ್ಮ ಮಕ್ಕಳು ಯೋಗ್ಯವಾಗಿ, ಸರಿಯಾದ ಸಭ್ಯ ವಾತಾವರಣದಲ್ಲಿ ಬೆಳೆಯಬೇಕೆಂದು ಕಾಳಜಿಯಿದ್ದಲ್ಲಿ, ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಕಳಿಸಿ.” - ಕಂಚಿಯ ಜಗದ್ಗುರು ಶ್ರೀ ಜಯೇಂದ್ರ ಸರಸ್ವತಿಗಳು (1982ರ ಮೇ ತಿಂಗಳಲ್ಲಿ ಸೇಲಂನಲ್ಲಿ ನಡೆದ ರಾಜ್ಯಮಟ್ಟದ ಸಂಘಶಿಕ್ಷಾವರ್ಗದ ಸಮಾರೋಪ ಭಾಷಣದಲ್ಲಿ) ಉಜ್ವಲ ರಾಷ್ಟ್ರಭಕ್ತಿಯ ದ್ಯೋತಕವಾಗಿ ಇಂದಿಗೂ ಯುವಪೀಳಿಗೆಗೆ ಮಾರ್ಗದರ್ಶಕ ಸ್ಥಾನದಲ್ಲಿ ಸಂಘ ನಿಂತಿದೆ. ಶತಕದ ಹೊಸ್ತಿಲಲ್ಲಿ ದೇಶರಕ್ಷಣೆಯ ಭರವಸೆಯಾಗಿ ಸಂಘಕಾರ್ಯ ಬೆಳೆದು ನಿಂತಿದೆ. - ಪ್ರೊ| ಶಾಂತಿಶ್ರೀ ಧುಲಿಪುಡಿ ಪಂಡಿತ್, ಶಿಕ್ಷಣತಜ್ಞೆ ಆರ್ಎಸ್ಎಸ್ ತನ್ನ ಬೃಹತ್ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿ, ಯಾವುದೇ ಸಾರ್ವಜನಿಕ ನಿಧಿಯ ಮೇಲೆ ಅವಲಂಬಿತವಾಗದೆ. ಯಾವುದೇ ರೀತಿಯ ಫಲಾಕಾಂಕ್ಷೆ ಹೊಂದಿರದ ಜನರಿಂದ ನಡೆಯುತ್ತಿದೆ. ಕಳೆದ 100 ವರ್ಷಗಳಲ್ಲಿ ಈ ಸಂಸ್ಥೆಯನ್ನು ಸ್ವಯಂಸೇವಕರೇ ಗಟ್ಟಿಯಾಗಿ ಕಟ್ಟಿದ್ದಾರೆ. - ಡಾ. ರಾಮ್ ಮಾಧವ್, ಹಿರಿಯ ಪ್ರಚಾರಕರು, ಆರ್ ಎಸ್ ಎಸ್
ಜಗತ್ತಿನಲ್ಲಿ ಪ್ರಸ್ತುತ ಎಲ್ಲಾ ವೃತ್ತಿಗಳೂ ಮಹತ್ವವಾದದ್ದೇ. ಆರ್ಥಿಕ ನೆಲೆಗಟ್ಟಿನಲ್ಲಿ ಅಲ್ಲಿನ ಉದ್ಯೋಗಿಗಳಿಗೆ ಅವರವರ ಜವಾಬ್ದಾರಿಯ ಆಧಾರದ ಮೇಲೆ ಸಂಬಳ ಬರುತ್ತದೆಯಾದರೂ ವೃತ್ತಿಯ ಮಹತ್ವದಲ್ಲಿ ಯಾವುದೇ ಭಿನ್ನತೆ ಇಲ್ಲ. ಒಂದು ದೇಶಕ್ಕೆ ಅದರ ಪ್ರಧಾನಮಂತ್ರಿಯಿAದ ಅದರ ಸಾಮಾನ್ಯ ನಾಗರಿಕನವರೆಗೆ ಮಾಡುತ್ತಿರುವ ಎಲ್ಲಾ ವೃತ್ತಿಯೂ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಹಾಗಾಗಿ ಯಾವುದೇ ವೃತ್ತಿ ಮಾಡುವ ವ್ಯಕ್ತಿಯನ್ನು ಕೀಳಾಗಿ ಕಾಣಬಾರದು. ಎಲ್ಲಾ ವೃತ್ತಿಗಳಿಗೆ ವೃತ್ತಿಗೌರವ ನೀಡಬೇಕು. ವೃತ್ತಿಯಲ್ಲಿ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯ ಸಲ್ಲ. ಸಮಾಜದಲ್ಲಿ ವೃತ್ತಿಯಾಧಾರಿತವಾಗಿ ಮೇಲು, ಕೀಳೆಂಬ ಭಾವನೆ ಮೂಡಬಾರದು. ನಾವೆಲ್ಲರೂ ಒಂದೇ ಎನ್ನುವುದನ್ನು ಸಾರಬೇಕು. ಎಲ್ಲಾ ವೃತ್ತಿಯವರನ್ನೂ ಗೌರವಿಸಬೇಕು.
ನಗುವಿನಿಂದ ಪುಟಿದೇಳುತ್ತಿರುವ ಸುಂದರ ನಿಷ್ಕಲ್ಮಶ ಮುಖಗಳು, ಅನುಭವದ ಪರಿಪೂರ್ಣತೆಯಿಂದ ಹೊಳೆಯುತ್ತಿರುವ ಕಣ್ಣುಗಳು. ಇಲ್ಲಿನ ನಿವಾಸಿಗಳ ಪರಿಚಯವನ್ನು ಮಾಡಿಕೊಡುತ್ತವೆ. ಜೀವನೋತ್ಸಾಹದಿಂದ ತುಂಬಿರುವ ಇವರನ್ನು ನೋಡಿದರೆ, ವರ್ಷಾನುಗಟ್ಟಲೆಯಿಂದ ಇವರ ಕುಟುಂಬದವರು ಇವರೊಂದಿಗಿಲ್ಲ ಎಂದು ಊಹಿಸಲೂ ಆಗದಷ್ಟು ಅಚ್ಚರಿಯ ವಾತಾವರಣ. ಇದು ಕಾಣಸಿಗುವುದು ಮಧ್ಯಪ್ರದೇಶದ ರಾಜಧಾನಿ ಭೋಪಾಲದ ಮಧ್ಯದಲ್ಲಿರುವ ಆನಂದಧಾಮ ಹಿರಿಯರ ಜನಸೇವಾ ಕೇಂದ್ರದಲ್ಲಿ. ಮಧ್ಯಪ್ರದೇಶದ ಸೇವಾಭಾರತಿಯ ವತಿಯಿಂದ ನಡೆಸಲಾಗುತ್ತಿರುವ ಈ ಕೇಂದ್ರದಲ್ಲಿ ವಯೋವೃದ್ಧರು ಒಂದು ಕುಟುಂಬದವರಂತೆಯೇ ಆನಂದದಿಂದ ಇದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಸೇವಾಭಾರತಿಯ ಅಂದಿನ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ದೂರದರ್ಶಿತ್ವದಿಂದ ಈ ಕಲ್ಪನೆಯನ್ನು ಹುಟ್ಟು ಹಾಕಲಾಯಿತು. ತುಳಸೀ ರಾಮಾಯಣದಿಂದ ಸೌಖ್ಯಸುಧೆಯು ಹರಿಯುವಂತೆ, ಇಲ್ಲಿ ಶ್ರೀ ರಾಜೇಂದ್ರಪ್ರಸಾದ ಗುಪ್ತಾ ಪರಿವಾರದ ಸಾರಥ್ಯದಲ್ಲಿ ಹದಿನೈದು ವರ್ಷಗಳಿಂದ ಆನಂದದ ಹೊನಲು ಹರಿಯುತ್ತಿದೆ. ಬರಕತಉಲ್ಲಾ ವಿಶ್ವವಿದ್ಯಾಲಯದ ಡೆಪ್ಯುಟಿ ಡೈರೆಕ್ಟರ್ ಪದವಿಯಿಂದ ಸ್ವಯಂನಿವೃತ್ತರಾಗಿರುವ ಗುಪ್ತಾಜೀ ಸಭಾ ಕಾರ್ಯಕ್ರಮಗಳಲ್ಲಿ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಾರೆ. ಆ ಪರಿಸರದಲ್ಲಿ ಬಡವರ ಮಕ್ಕಳಿಗಾಗಿ ಮೂರು ಹೊತ್ತು ನಡೆಯುವ ತರಬೇತಿ ಸಂಸ್ಥೆಯಲ್ಲಿ ಸಾವಿರದೈನೂರಕ್ಕೂ ಹೆಚ್ಚಿನ ಮಕ್ಕಳು ಅದರ ಲಾಭವನ್ನು ಪಡೆಯುತ್ತಿದ್ದಾರೆ. ೨೦೦೫ರ ಡಿಸೆಂಬರ್ ೧೮ರಂದು ಈ ಕೇಂದ್ರದ ಸ್ಥಾಪನೆಯಾಯಿತು ಎಂದು ಸಂಸ್ಥೆಯ ಮುಖ್ಯಸ್ಥ ಶ್ರೀ ರವೀಂದ್ರ ಸುರಂಗೆ ಹೇಳುತ್ತಾರೆ. ಇಲ್ಲಿ ೧೫ ಮಹಿಳೆಯರು ಮತ್ತು ೧೩ ಪುರುಷರಿದ್ದಾರೆ. ಸಂಸ್ಥೆಯ ವತಿಯಿಂದ ಪರಿಸರದಲ್ಲಿ ಯೋಗ ಕೇಂದ್ರ, ಫಿಸಿಯೋಥೆರಪಿ, ನ್ಯೂರೋಥೆರಪಿ ಕೇಂದ್ರ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹಾಗೂ ಉಚಿತ ಸಲಹಾ ಕೇಂದ್ರ, ಇವೆಲ್ಲವನ್ನೂ ನಡೆಸಲಾಗುತ್ತಿದೆ. ಇಲ್ಲಿ ಪ್ರತಿದಿನ ಬರುವ ಹೋಮಿಯೋಪತಿ ವೈದ್ಯರು ಆಶ್ರಮವಾಸಿಗಳನ್ನು ಪರೀಕ್ಷಿಸುವುದರ ಜೊತೆಜೊತೆಗೆ ಹೊರ ರೋಗಿಗಳನ್ನೂ ಪರೀಕ್ಷಿಸುತ್ತಾರೆ. ಇಲ್ಲಿನ ಹೊರರೋಗಿ ವಿಭಾಗದಲ್ಲಿ ಪ್ರತಿ ತಿಂಗಳೂ ೫೦೦ಕ್ಕೂ ಹೆಚ್ಚಿನ ರೋಗಿಗಳು ಬಂದು ವೈದ್ಯಕೀಯ ಸೇವೆಯ ಉಪಯೋಗ ಪಡೆಯುತ್ತಾರೆ. ಬೆಳಿಗ್ಗೆ ಯೋಗದಿಂದ ಹಿಡಿದು ಸಂಜೆಯ ಪೂಜೆಯವರೆಗೆ ಒಂದು ವ್ಯವಸ್ಥಿತ ರೀತಿಯ ದಿನಚರಿಯ ಜೊತೆಗೆ, ಇಲ್ಲಿನ ಆಶ್ರಮವಾಸಿಗಳಿಗೆ ಪ್ರತಿದಿನ ೪ರಿಂದ ೬ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಾಮಾಜಿಕ ಕಳಕಳಿ ಇರುವ ಸೇವಾ ಮನೋಭಾವದ ವ್ಯಕ್ತಿಗಳೂ ಇವರೊಂದಿಗೆ ಸಮಯವನ್ನು ಕಳೆಯುತ್ತಾರೆ. ಕೆಲವರಂತೂ ತಮ್ಮ ಮಕ್ಕಳ ಜನ್ಮದಿನವನ್ನೋ, ಅಥವಾ ಕೆಲ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನೋ, ಈ ವೃದ್ಧರೊಂದಿಗೆ ಆಚರಿಸಿಕೊಳ್ಳುತ್ತಾರೆ. ಆವರಣದಲ್ಲಿ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳಿವೆ. ಜೊತೆಗೆ ಚಿಕಿತ್ಸೆ, ಚಿಂತನೆ, ಸಾಂಸ್ಕೃತಿಕ ಕೊಠಡಿಗಳೂ, ಮಂದಿರ ಹಾಗೂ ಉದ್ಯಾನವನ ಮತ್ತು ಉಪಾಹಾರದ ಕೊಠಡಿಗಳಿದ್ದು, ಒಂದು ಪುಸ್ತಕಾಲಯವೂ ಇದೆ. ತುರ್ತು ಅವಶ್ಯಕತೆಗಳಿಗಾಗಿ ಇಲ್ಲಿ ಒಂದು ಆಂಬ್ಯುಲೆನ್ಸ್ ದಿನದ ೨೪ ಗಂಟೆಗಳ ಕಾಲವೂ ಲಭ್ಯವಿರುತ್ತದೆ. ಈ ಕೇಂದ್ರದ ಪ್ರಾರಂಭದಿಂದಲೂ ಜೊತೆಗಿರುವ ಮತ್ತು ಹಿಂದೆ ಕ್ಷೇತ್ರದ ಸೇವಾ ಪ್ರಮುಖರಾಗಿದ್ದ ಗೋರೆಲಾಲ್, "ಇಲ್ಲಿ ನಾವು ೬೦ ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರನ್ನೇ ಸೇರಿಸಿಕೊಳ್ಳುತ್ತೇವೆ. ಅವರ ಅರ್ಜಿ ತುಂಬಿಸುವಾಗ ನಾವು ಅವರ ಕೌಟುಂಬಿಕ ಹಿನ್ನೆಲೆಯನ್ನು, ಪ್ರಸ್ತುತ ಪರಿಸ್ಥಿತಿಯನ್ನೂ ವಿಚಾರಿಸುತ್ತೇವೆ. ನಮ್ಮೊಂದಿಗಿನ ಸಮಾಲೋಚನೆಯಿಂದ ಬಿಕ್ಕಟ್ಟು ದೂರವಾಗಿ ಅವರು ತಮ್ಮ ಮನೆಗೆ ಹಿಂತಿರುಗಲಿ ಎನ್ನುವುದು ನಮ್ಮ ಮೊದಲ ಅಪೇಕ್ಷೆಯಾಗಿರುತ್ತದೆ" ಎನ್ನುತ್ತಾರೆ. ಕೇಂದ್ರದಲ್ಲಿರುವವರನ್ನು ಅವರ ಕುಟುಂಬದ ಸದಸ್ಯರು ಬಂದು ಭೇಟಿ ಮಾಡಲು ಒಂದು ನಿಗದಿತ ಸಮಯವಿರುತ್ತದೆ. ಸೇವಾಭಾರತಿಯ ಪೂರ್ಣಾವಧಿ ಕಾರ್ಯಕರ್ತ ಶ್ರೀ ಕೈಲಾಶ್ ಕುಶಾವಹ್ ಅವರು. "ಇಲ್ಲಿನ ಸಮಾಲೋಚನಾ ಸಮಿತಿಯ ಶ್ರಮದ ಫಲವಾಗಿ ಬಹಳಷ್ಟು ಜನ ತಂತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ" ಎನ್ನುತ್ತಾರೆ. ಸ್ವರ್ಗಸ್ಥರಾದ ಮುಕ್ತಾ ಸೆಹಗಲ್ ಅವರಿಗೆ ಯಾರೂ ಇರಲಿಲ್ಲ. ಅವರು ತಮ್ಮ ಮನೆಯಲ್ಲಿ ಬಿದ್ದು ಓಡಾಡಲು ಅಸಮರ್ಥರಾದಾಗ ಸೇವಾಭಾರತಿಯ ಕಾರ್ಯಕರ್ತರು ಅವರ ಚಿಕಿತ್ಸೆ ಹಾಗೂ ಸೇವೆಯನ್ನು ಅವರಿರುವಷ್ಟು ಕಾಲವೂ ನೋಡಿಕೊಂಡರು. ಮುಕ್ತಾಜೀ ಅವರು ತಾವು ದೇಹ ತ್ಯಜಿಸುವ ಮೊದಲು ಅರೇರಾ ಕಾಲೋನಿಯಲ್ಲಿರುವ ತಮ್ಮ ಮನೆಯನ್ನು ಬಡ ಹುಡುಗಿಯರ ವಿದ್ಯಾರ್ಥಿನಿ ನಿಲಯವನ್ನಾಗಿ ಮಾಡಬೇಕೆಂಬ ಇಚ್ಛೆಯಿಂದ ಸೇವಾಭಾರತಿಗೆ ದಾನ ನೀಡಿದರು" ಎಂದು ಹೃದಯ ತುಂಬಿದ ಮನದಿಂದ ನೆನಪಿಸಿಕೊಳ್ಳುತ್ತಾರೆ. ಮುಕ್ತಾಜೀ ಅವರಂತೆಯೇ ಇಲ್ಲಿ ಆನೇಕ ವೃದ್ಧರ ಅಂತಿಮ ವಿಧಿವಿಧಾನಗಳು ಕುಟುಂಬದವರು ಅಪೇಕ್ಷೆಪಟ್ಟಂತೆ ನಡೆಯುತ್ತವೆ. ಇಲ್ಲಿರುವ ಎಲ್ಲರಿಗೂ ಆನಂದಧಾಮವೇ ತಮ್ಮ ಮನೆ ಎನ್ನುವ ಪ್ರೀತಿಯ ಅನುಭೂತಿಯಿದೆ." ೧೫ ವರ್ಷಗಳಿಂದ ಈ ಧಾಮವು ಸರಕಾರದ ಯಾವುದೇ ಸಹಾಯವಿಲ್ಲದೆ, ಸಂಪೂರ್ಣವಾಗಿ ಸಮಾಜಮುಖಿ ಸನ್ಮನಸ್ಸಿನವರ ಬೆಂಬಲದಿAದಲೇ ಸಮರ್ಥವಾಗಿ ಸಾಗುತ್ತಿದೆ" ಎಂದು ಸೇವಾಭಾರತಿಯ ಕ್ಷೇತ್ರ ಸಂಘಟಕರಾದ ಶ್ರೀ ರಾಮೇಂದ್ರಜೀ ಹೇಳುತ್ತಾರೆ. ಸಂಪರ್ಕ - ಶ್ರೀ ರಾಮೇಂದ್ರಜೀ 9425116748
ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಇತ್ತೀಚೆಗೆ ಯುಕೆ ಸಂಸತ್ತಿಗೆ ಭೇಟಿ ನೀಡಿದ್ದು, ಈ ವೇಳೆ ಹನುಮಾನ್ ಚಾಲೀಸಾದ ಶ್ಲೋಕಗಳನ್ನು ಪಠಿಸಲಾಯಿತು. ಯುಕೆ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದು ಇದೇ ಮೊದಲು. ಜನರು ಒಟ್ಟಾಗಿ ಶ್ಲೋಕಗಳನ್ನು ಹಾಡುವ ವೀಡಿಯೊವನ್ನು ಬಾಗೇಶ್ವರ ಧಾಮದ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿದೆ. ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಸಮ್ಮುಖದಲ್ಲಿ ಹಲವಾರು ಜನರು, ಅಧಿಕಾರಿಗಳು ಮತ್ತು ಶಾಸಕರು ಕಣ್ಣು ಮುಚ್ಚಿ ಶ್ಲೋಕಗಳನ್ನು ಪಠಿಸುತ್ತಿರುವುದು ಕಂಡುಬಂದಿದೆ. ಸಂಸತ್ತಿನಲ್ಲಿ ಹಾಜರಿದ್ದ ಎಲ್ಲಾ ಅತಿಥಿಗಳು ಭಕ್ತಿಯಿಂದ ಪಠಿಸಿದರು ಎಂದು ಬಾಗೇಶ್ವರ ಧಾಮ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ವರದಿಯ ಪ್ರಕಾರ, ಬ್ರಿಟಿಷ್ ಸಂಸತ್ತಿನಲ್ಲಿ ಭಾರತೀಯ ಧಾರ್ಮಿಕ ಪಠ್ಯವನ್ನು ಪಠಿಸಿದ್ದು ಇದೇ ಮೊದಲು. ವೀಡಿಯೊದಲ್ಲಿ, ಪಂಡಿತ್ ಧೀರೇಂದ್ರ ಶಾಸ್ತ್ರಿ ಕೇಸರಿ ಉಡುಪನ್ನು ಧರಿಸಿ, ಅಲ್ಲಿದ್ದವರು ಅವರನ್ನು ಅನುಸರಿಸಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದಂತೆ ಮಂತ್ರಗಳನ್ನು ಮುನ್ನಡೆಸುತ್ತಿರುವುದು ಕಂಡುಬAದಿದೆ. ಧೀರೇಂದ್ರ ಶಾಸ್ತ್ರಿ ಅವರ ಅಂತರರಾಷ್ಟ್ರೀಯ ಸಂಪರ್ಕದ ಮಧ್ಯೆ ಈ ಭೇಟಿ ಬಂದಿದೆ. ಆಸ್ಟ್ರೇಲಿಯಾ, ಅಮೆರಿಕ ಮತ್ತು ಯುರೋಪ್ನಲ್ಲಿ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳು ಮತ್ತು ಪ್ರವಚನಗಳು ಇದರಲ್ಲಿ ಸೇರಿವೆ.

22ನೆಯ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರಟವರು ಸೂರ್ಯನಾರಾಯಣರಾವ್. 20ನೇ ಆಗಸ್ಟ್ 1924ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಸೂರೂಜೀಯವರು ಸಂಘದ ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ನಿರಂತರ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂಸೇವಕರನ್ನು ಸೇವೆಯೊಂದಿಗೆ ಜೋಡಿಸಿದ್ದಲ್ಲದೆ, ಇಡೀ ದೇಶದಲ್ಲಿ ಸೇವಾ ಕಾರ್ಯಗಳ ಯೋಜನೆಗಳನ್ನು ತಯಾರಿಸಿದರು. ಸೂರೂಜೀ ಅವರಿಗೆ ಬಾಲ್ಯದಲ್ಲೇ ಸಂಘದ ದ್ವಿತೀಯ ಸರಸಂಘಚಾಲಕರಾದ ಗೋಳ್ವಲ್ಕರ್ ಗುರೂಜಿಯವರ ಸಾನ್ನಿಧ್ಯ ದೊರೆಯಿತು. ಗುರೂಜಿಯವರು ಪ್ರವಾಸದ ನಿಮಿತ್ತ ಕರ್ನಾಟಕಕ್ಕೆ ಯಾವಾಗ ಬಂದರೂ ಇವರ ಮನೆಯಲ್ಲಿ ತಂಗುವುದು ಸಾಮಾನ್ಯವಾಗಿತ್ತು. ಸೂರೂಜಿಯವರು ಗಣಿತದಲ್ಲಿ ಆನರ್ಸ್ ಓದಿ, ಪ್ರಚಾರಕರಾಗಿ ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಂಡರು. ತಮ್ಮ ಪ್ರಚಾರಕ ಜೀವನದಲ್ಲಿ ಸೂರೂಜೀಯವರು ಬೇರೆ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿದರು. 1972ರಲ್ಲಿ ಸೂರೂಜೀಯವರಿಗೆ ತಮಿಳುನಾಡು ಪ್ರಾಂತ ಪ್ರಚಾರಕ್ ಜವಾಬ್ದಾರಿಯನ್ನು ವಹಿಸಲಾಯಿತು. ಆಗ ಆ ಪ್ರಾಂತದಲ್ಲಿ ಭಾಷಾ ಪ್ರತ್ಯೇಕತಾವಾದಗಳು ಉತ್ತುಂಗದಲ್ಲಿದ್ದವು. ಅವರಿಗೆ ತಮಿಳು ಬರುತ್ತಿರಲಿಲ್ಲ, ಆದರೆ ಅವರು ತಮಿಳು ಭಾಷೆಯನ್ನು ಕಲಿತು ಸಮಾಜದ ಎಲ್ಲ ವರ್ಗಗಳನ್ನೂ ಸಂಘ ಕಾರ್ಯದ ಜೊತೆ ಜೋಡಿಸಲು ಪಣತೊಟ್ಟರು. ನಿರಂತರವಾಗಿ 13 ವರ್ಷಗಳ ಕಾಲ ಅಂದರೆ 1984ರ ತನಕ ಅವರು ತಮಿಳುನಾಡಿನ ಪ್ರಾಂತ ಪ್ರಚಾರಕರಾಗಿ ಯುವಕರಲ್ಲಿ ರಾಷ್ಟ್ರಭಕ್ತಿ, ಉತ್ಸಾಹವನ್ನು ತುಂಬುವುದರ ಜೊತೆಗೆ, ಸಾಮಾಜಿಕ ಸಾಮರಸ್ಯವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದರು. ಸೂರೂಜೀ ಅವರ ಜೀವನದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರಗಳು ಬಹಳ ಗಾಢ ಪರಿಣಾಮ ಬೀರಿದ್ದವು. ವಿವೇಕಾನಂದರ ವಿಚಾರ "ನರಸೇವೆಯೇ ನಾರಾಯಣ ಸೇವೆ" ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊAಡು ಅವರು ಸ್ವಯಂಸೇವಕರಿಗೆ ಹೇಳುತ್ತಿದ್ದರು…"ಯಾರಿಗಾದರೂ ಸರಿ ಭೌತಿಕ ಮಟ್ಟದಲ್ಲಿ ಅನುಕೂಲಗಳನ್ನು ಮಾಡಿಕೊಡುವುದು ಒಂದು ಸಣ್ಣ ಮಟ್ಟದ ಸೇವೆಯೇ ಹೌದು. ಆದರೂ ಅವರಿಗೆ ಯೋಗ್ಯ ಗೌರವ ನೀಡಿ ಅವರು ಭಗವಂತನೆಂದೇ ಭಾವಿಸಿ ಸೇವೆಯನ್ನು ಮಾಡುವುದೇ ಶ್ರೇಷ್ಠ. ಪ್ರತಿಯೊಬ್ಬ ಸ್ವಯಂಸೇವಕನೂ ತಾನು ಸೇವೆಗೆಂದೇ ಮೀಸಲು ಎಂದು ಭಾವಿಸುವುದೇ ಒಂದು ನಿಜವಾದ ಸೇವೆಯಾಗಿದೆ.” ತನ್ನ ಸರಳ ಸ್ವಭಾವದಿಂದಾಗಿ ಅವರು ಪ್ರತಿಯೊಬ್ಬ ಕಾರ್ಯಕರ್ತನಿಗೂ ಇವರು ತಮ್ಮವರೇ ಎನಿಸುತ್ತಿದ್ದರು. ಹಾಗಾಗಿಯೇ ಅವರ ವಿಚಾರಗಳು ಸ್ವಯಂಸೇವಕರ ಮನಸ್ಸು, ಬುದ್ಧಿಗಳೆರಡರಲ್ಲೂ ಉಳಿಯುವಂತಾಯಿತು. 1990ರಲ್ಲಿ ಸೂರ್ಯನಾರಾಯಣರಾವ್ ಅವರು ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಾಗ ಸೇವಾ ವಿಭಾಗವು ಸಂಘದಲ್ಲಿ ಒಂದು ಹೊಸ ಪ್ರಯೋಗವಾಗಿತ್ತು. ಯಾವುದೇ ವಿಷಯವೇ ಆಗಿರಲಿ, ಪ್ರಯೋಗಶೀಲತೆಯು ಒಂದು ಸವಾಲೇ ಆಗಿತ್ತು. ಆ ಸವಾಲನ್ನು ಸ್ವೀಕರಿಸಿ ಪೂರ್ಣಗೊಳಿಸುವ ಸ್ವಭಾವ ಸೂರೂಜೀ ಅವರದಾಗಿತ್ತು. ಅವರು ಕಾರ್ಯಕರ್ತರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಸ್ವಾತಂತ್ರ್ಯವನ್ನು ಕೊಟ್ಟರು. ಬಹುಶಃ ಹಾಗಾಗಿಯೇ ಸಂಘದ ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಅವರ ಕಾಲದಲ್ಲಿ ಸೇವಾ ವಿಭಾಗದ ಕಾರ್ಯಗಳಿಗೆ ಒಂದು ವಿಶೇಷವಾದ ವೇಗ ಸಿಕ್ಕಿತು. ಸಂಸ್ಕಾರ ಕೇಂದ್ರವು ಸಂಪೂರ್ಣ ಸೇವಾಬಸ್ತಿಯ ಪರಿವರ್ತನೆಯ ವಾಹಕವಾಯಿತು. 1989ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಆದ್ಯ ಸರಸಂಘಚಾಲಕ ಡಾ. ಹೆಡಗೇವಾರರ ಜನ್ಮಶತಾಬ್ದಿಯನ್ನು ಆಚರಿಸಲು ಯೋಜನೆಯನ್ನು ರೂಪಿಸಿತು. ಆಗ ಮೊಟ್ಟಮೊದಲಿಗೆ ಈ ಬೃಹತ್ ಕಾರ್ಯಕ್ಕೋಸ್ಕರ ಆರ್ಥಿಕ ವ್ಯವಸ್ಥೆಯನ್ನು ಮಾಡಬೇಕೆಂಬ ಅವಶ್ಯಕತೆಯ ಅರಿವಾಯಿತು. ಸೇವಾ ಕಾರ್ಯಗಳ ಕಾರ್ಯವಿಸ್ತಾರದ ಸಲುವಾಗಿ ಆರ್ಥಿಕ ವ್ಯವಸ್ಥೆ ಮಾಡುವುದು, ಅದನ್ನು ಕಾನೂನಿನ ಚೌಕಟ್ಟಿನಲ್ಲಿ ತರುವುದು, ಈ ಮಹತ್ಕಾರ್ಯಕ್ಕೋಸ್ಕರ ಒಂದು ಟ್ರಸ್ಟ್ ಮಾಡಬೇಕು ಎಂದು ಸೂರೂಜಿಯವರ ಮನಸ್ಸಿನಲ್ಲಿ ಬಂದ ಕೂಡಲೇ 2003 ರಲ್ಲಿ ರಾಷ್ಟ್ರೀಯ ಸೇವಾ ಭಾರತೀ ಎಂಬ ಸಂಸ್ಥೆಯು ಜನ್ಮ ತಾಳಿತು. ಇಷ್ಟೇ ಅಲ್ಲ, ಈ ಹಣದ ಉಪಯೋಗ ಎಲ್ಲಿ ಹೇಗೆ ಆಗುತ್ತಿದೆ ಮತ್ತು ಅದರ ಪರಿಣಾಮ ಏನು, ಈ ಮಾಹಿತಿಯನ್ನು ಇಡೀ ಸಮಾಜಕ್ಕೆ ನೀಡಲು ಗುರೂಜಿಯವರ ಪ್ರೇರಣೆಯಿಂದಲೇ ಸೇವಾ-ದಿಶಾ ಪತ್ರಿಕೆಯ ಪ್ರಕಾಶನವು ಆರಂಭವಾಯಿತು. ಕಾಲ ಕಳೆದಂತೆ ಸೇವಾ ವಿಭಾಗದ ಆಗುಹೋಗುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ನಂಬಿದವರು. ಸೂರೂಜೀಯವರು ತಮ್ಮ 75 ನೇ ವಯಸ್ಸಿನಲ್ಲಿ ಸ್ವತ: ಜವಾಬ್ದಾರಿಯಿಂದ ಮುಕ್ತರಾಗಲು ಬಯಸಿದರು, ಒಬ್ಬ ಮಹಾನ್ ಸಂಘಟಕ, ಒಬ್ಬ ಶಕ್ತಿಶಾಲಿ ವಿಚಾರವಂತ, ಒಬ್ಬ ಅಸಾಮಾನ್ಯ ಸಂಚಾರಿ ಮತ್ತು ಒಬ್ಬ ಪಕ್ವವಾದ ಗುಂಪಿನ ನಾಯಕ, ಹೀಗೆ ಹಲವು ರೀತಿಯ ವೈಶಿಷ್ಟö್ಯಗಳನ್ನು ಹೊಂದಿದ ಮಾನ್ಯ ಸೂರ್ಯನಾರಾಯಣರಾವ್ ಅವರು ಸಂಘದ ವಿವಿಧ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದರು. ಅವರು ತಮ್ಮ ಸಾವಿನ ಕೆಲವು ವರ್ಷಗಳ ತನಕವೂ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಟೋಳಿಯ ಸದಸ್ಯರಾಗಿದ್ದರು. ಆರೋಗ್ಯ ಸ್ಥಿರವಾಗಿರುವ ತನಕ ದಕ್ಷಿಣ ಭಾರತದ ಪ್ರತಿಯೊಂದು ಸಂಘ ಶಿಕ್ಷಾ ವರ್ಗಗಳಿಗೆ ಹೋಗಿ ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇವರು 2016ರ ನವೆಂಬರ್ 19 ರಂದು ವಿಧಿವಶರಾದರು.
ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಮುನ್ನಡೆಸಿದ ಇಂಡಿಯನ್ ನ್ಯಾಶನಲ್ ಆರ್ಮಿಯನ್ನು ಕಟ್ಟುವುದಕ್ಕೆ ಅಡಿಪಾಯವನ್ನು ಹಾಕಿದ ಮಹಾನ್ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್. ರಾಸ್ ಬಿಹಾರಿ ಬೋಸ್ ಅವರು ಮೇ 25, 1886ರಂದು ಪಶ್ಚಿಮ ಬಂಗಾಳದ ಬುರ್ದ್ವಾನಿನ ಸುಬಲ್ದಹಾ ಹಳ್ಳಿಯಲ್ಲಿ ಜನಿಸಿದರು. ಬೋಸರು ತಮ್ಮ ಸಣ್ಣ ವಯಸ್ಸಿನಲ್ಲೇ ರೆವಲ್ಯೂಷನರಿ ಪಾರ್ಟಿಯನ್ನು ಸೇರಿದರು. ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬ್ಗಳಲ್ಲಿ ರಾಸ್ ಬಿಹಾರಿ ಬೋಸರು ಹಲವಾರು ಕ್ರಾಂತಿಕಾರಿಗಳೊಡನೆ ಬ್ರಿಟಿಷರ ವಿರುದ್ಧದ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜನ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಚಾಂದಿನಿ ಚೌಕದಲ್ಲಿ ಡಿಸೆಂಬರ್ 23, 1912 ರಂದು ಬಾಂಬ್ ಎಸೆದಾಗ ರಾಸ್ ಬಿಹಾರಿ ಬೋಸರ ಹೆಸರು ಪ್ರಖ್ಯಾತಿ ಪಡೆಯಿತು. ಈ ಬಾಂಬ್ ಎಸೆದ ನಂತರದಲ್ಲಿ ಬೋಸರು ಚಾಣಾಕ್ಷತನದಿಂದ ಪೊಲೀಸರ ಕಣ್ಣು ತಪ್ಪಿಸಿಕೊಂಡು ವಾರಾಣಾಸಿಯಲ್ಲಿ ಅವಿತು, ಗದರ್ ಪಕ್ಷದ ಕಾರ್ಯಕರ್ತರೊಡನೆ ಏಕಕಾಲದಲ್ಲಿ ಉತ್ತರ ಭಾರತದಲ್ಲೆಲ್ಲಾ ಧ್ವನಿಸುವಂತೆ ವಿವಿಧ ಕ್ರಾಂತಿಕಾರಕ ಹೋರಾಟಗಳಿಗೆ ಸೂತ್ರಧಾರಿಯಾದರು. ರಾಸ್ ಬಿಹಾರಿ ಬೋಸರ ಈ ಎಲ್ಲಾ ಯತ್ನಗಳನ್ನೂ ಬ್ರಿಟಿಷರು ಸದೆಬಡಿದು ಗದರ್ ಕ್ರಾಂತಿಕಾರರಲ್ಲಿ ಬಹಳಷ್ಟು ಜನರನ್ನು ಶಿಕ್ಷೆಗೆ ಒಳಪಡಿಸಿದರಾದರೂ ರಾಸ್ ಬಿಹಾರಿ ಬೋಸರನ್ನು ಮಾತ್ರ ಹಿಡಿಯಲಾಗಲಿಲ್ಲ. ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಜಪಾನಿಗೆ ತೆರಳಿದ್ದ ರಾಸ್ ಬಿಹಾರಿ ಬೋಸರ ಬಗ್ಗೆ ಆತಂಕಗೊAಡ ಬ್ರಿಟಿಷರು ಅಂತಾರಾಷ್ಟಿçÃಯ ಮಟ್ಟದಲ್ಲಿ ಅವರ ಬಂಧನಕ್ಕೆ ಯತ್ನಿಸಿಯೂ ವಿಫಲರಾದರು. ಇತ್ತ ಜಪಾನಿನಲ್ಲಿ ಭೂಗತನಾಗಿದ್ದುಕೊಂಡಿದ್ದ ಬೋಸರು ಬ್ರಿಟನ್ ವಿರೋಧಿ ದೇಶಗಳ ಸಖ್ಯ ಬೆಳೆಸಿಕೊಳ್ಳತೊಡಗಿದರು. ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್: ಮಾರ್ಚ್ 1942ರಲ್ಲಿ ಇಂಡಿಯನ್ ಇಂಡಿಪೆAಡೆAಟ್ಸ್ ಲೀಗ್ ಸ್ಥಾಪನೆಗಾಗಿ ಬೋಸರು ಒಂದು ಸಮಾವೇಶವನ್ನು ನಡೆಸಿದರು. ಈ ಸಂಸ್ಥೆಯ ಮೊದಲ ಅಧಿವೇಶನ ಜೂನ್ 1942ರಲ್ಲಿ ಬ್ಯಾಂಕಾಕಿನಲ್ಲಿ ಜರುಗಿತು. ಈ ಸಮಾವೇಶದಲ್ಲಿ ಅವರಿಗೆ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪನೆಗಾಗಿನ ಅಧಿಕಾರವನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ಅವರು ಜಪಾನಿನಲ್ಲಿದ್ದ ಯುದ್ಧ ಖೈದಿಗಳನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟದ ಸೈನಿಕರನ್ನಾಗಿ ಸಂಘಟಿಸಿದರು. 1943 ರಲ್ಲಿ ಸಿಂಗಪೂರಿನಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ನಾಯಕತ್ವವನ್ನು ರಾಸ್ ಬಿಹಾರಿ ಬೋಸರು ಸುಭಾಷ್ ಚಂದ್ರ ಬೋಸರಿಗೆ ವರ್ಗಾಯಿಸಿದರು. ರಾಸ್ ಬಿಹಾರಿ ಬೋಸರ ಒಟ್ಟೂ ಕ್ರಾಂತಿಕಾರಿ ಜೀವನದಲ್ಲಿ ಅವರ ಜೊತೆಗೆ ಸುಭಾಷ್ ಚಂದ್ರ ಬೋಸರಲ್ಲದೆ ಅರವಿಂದ್ ಘೋಷ್, ಖದಿರಾಮ್ ಬೋಸ್ ಬಾಘಾ ಜತಿನ್ ಮುಂತಾದ ಪ್ರಮುಖರೂ ಇದ್ದರು. ಲೇಖಕ, ಪತ್ರಕರ್ತರೂ ಆಗಿದ್ದ ರಾಸ್ ಬಿಹಾರಿ ಬೋಸರಿಗೆ ಜಪಾನ್ ಸರ್ಕಾರ ಆರ್ಡರ್ ಆಫ್ ದಿ ರೈಸಿನ್ಗ್ ಸನ್ ಎಂಬ ಗೌರವ ನೀಡಿತ್ತು. ದೇಶಕ್ಕಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟು ಸ್ವಾರ್ಥರಹಿತ, ಕಷ್ಟಕರವಾದ ಕ್ರಾಂತಿಕಾರಕ ಮಾರ್ಗದಲ್ಲಿ ಬದುಕಿದ ರಾಸ್ ಬಿಹಾರಿ ಬೋಸರು ಜನವರಿ 21, 1945 ರಂದು ಟೋಕಿಯೋದಲ್ಲಿ ನಿಧನರಾದರು.

ಆಧುನಿಕ ಹಿಂದಿ ಕವಿಗಳಲ್ಲಿ ಪ್ರಮುಖರಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತ. ರಾಷ್ಟ್ರಕವಿ ಎಂಬ ಅಭಿದಾನಕ್ಕೆ ಅನ್ವರ್ಥವಾಗಿ ರಾಷ್ಟ್ರೀಯತೆಯ ಕುರಿತಾದ ಮತ್ತು ದೇಶಭಕ್ತಿಯನ್ನು ಮೂಡಿಸುವ ಕವನಗಳನ್ನು ಬರೆಯುತ್ತಿದ್ದರು. ಸಾಹಿತ್ಯ ಕ್ಷೇತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಛಾಪುಮೂಡಿಸಿದ ಗುಪ್ತರು ಹಿಂದಿಯ ಖಾರಿ ಬೋಲಿ ಎಂಬ ಆಡುಭಾಷೆಯಲ್ಲಿ ಕವನಗಳನ್ನು ಬರೆದ ಮೊದಲಿಗರು. ಮೈಥಿಲಿ ಶರಣ್ ಗುಪ್ತ ಅವರು ಆಗಸ್ಟ್ 3, 1886ರಂದು ಉತ್ತರ ಪ್ರದೇಶದ ಝಾನ್ಸಿಯ ಚಿರ್ಗಾಂವ್ ಗ್ರಾಮದಲ್ಲಿ ಜನಿಸಿದವರು. ಅವರ ತಂದೆ ಹೆಸರು ಸೇಥ್ ರಾಮಚರಣ್, ಅವರ ತಾಯಿ ಕಾಶಿ ಬಾಯಿ. ತಮ್ಮ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಅವರು ನಂತರ ಝಾನ್ಸಿಯ ಮ್ಯಾಕ್ ಡೊನಾಲ್ಡ್ ಹೈಸ್ಕೂಲ್ನಲ್ಲಿ ಓದಿದ್ದರು. ಅವರು ರಾಮ್ ಸ್ವರೂಪ್ ಶಾಸ್ತ್ರೀ ಮತ್ತು ದುರ್ಗಾದತ್ ಪಂತ್ ಸೇರಿದಂತೆ ಹಿಂದಿ, ಬಾಂಗ್ಲಾ ಹಾಗೂ ಸಂಸ್ಕೃತ ಭಾಷೆಯಲ್ಲಿ ಅಧ್ಯಯನ ನಡೆಸಿದ್ದರು. ಅಷ್ಟೇ ಅಲ್ಲದೆ ಅವರು ಮುನ್ಸಿ ಅಜೇರಿ ಪ್ರೇಮ್ ಅವರಿಂದ ಸ್ಪೂರ್ತಿ ಪಡೆದು ಆನೇಕ ಪತ್ರಿಕೆಗಳಿಗೆ ಕವನಗಳನ್ನು ಬರೆಯುತ್ತಿದ್ದರು. ನಂತರ ಅವರು ಬಹುತೇಕ ಕಾವ್ಯಾತ್ಮಕ ಪುಸ್ತಕಗಳನ್ನು ರಚಿಸಿದ್ದರು. ಕೃತಿಗಳು: 1910ರಲ್ಲಿ ಅವರ ಮೊದಲ ಪ್ರಮುಖ ಕೃತಿ ರಂಗ್ ಮೇ ಭಂಗ್ ಇಂಡಿಯಾನ್ ಪ್ರೆಸ್ನಿಂದ ಪ್ರಕಟವಾಗಿತ್ತು. ಆಧ್ಯಾತ್ಮಿಕ ಗುರುಗಳು, ಐತಿಹಾಸಿಕ ಪಾತ್ರಗಳು, ಮಹಿಳಾ ಸಬಲೀಕರಣ, ದೇಶಭಕ್ತಿಯ ವಿಷಯಗಳ ಮೇಲೆ ಅವರ ಬರವಣಿಗೆ ಕೇಂದ್ರೀಕೃತವಾಗಿತ್ತು. ಅವರು 1910ರಲ್ಲಿ ಜಯದ್ರತ್ ವಥ್ ಮತ್ತು 1931ರಲ್ಲಿ ಸಾಕೇತ್ ಸೇರಿದಂತೆ ರಾಮಾಯಣ, ಮಹಾಭಾರತ, ಬೌದ್ಧ ಕತೆಗಳಾಧಾರಿತ ಆನೇಕ ಕವನ ಸಂಕಲನಗಳನ್ನು, ನಾಟಕಗಳನ್ನು ರಚಿಸಿದ್ದಾರೆ. 1912ರಲ್ಲಿ ಬಿಡುಗಡೆಯಾದ ಅವರ ಭಾರತ ಭಾರತಿ ಪುಸ್ತಕವು ಭಾರತೀಯ ಜನಸಾಮಾನ್ಯರಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಪ್ಲಾಸಿ ಕಾ ಯುದ್ಧ, ಭಾರತ ಭಾರತಿ, ಪಂಚವಟಿ ಸೇರಿದಂತೆ ಅನೇಕ ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದರು. ಯಶೋಧರ, ಅರ್ಜನ್ ಔರ್ ವಿಸರ್ಜನ್, ಜಯಭಾರತ್, ದ್ವಾಪರ, ವಿಶ್ವರಾಜ್ಯ, ಕಿರಣೊ ಕಾ ಕೇಲ್, ಮಾನವತಾ ಮುಂತಾದವು ಅವರ ಪ್ರಮುಖ ಕೃತಿಗಳು. ರಾಷ್ಟ್ರಕವಿ ಅಭಿದಾನ: ಏಪ್ರಿಲ್ 5 1932ರಲ್ಲಿ ಅವರು ಮಹಾತ್ಮ ಗಾಂಧಿಯವರಿAದ ಒಂದು ಪತ್ರವನ್ನು ಸ್ವೀಕರಿಸಿದ್ದು, ಅವರು ತಮ್ಮ ಸಾಕೇತ್ ಕೃತಿಗಳನ್ನು ಶ್ಲಾಘಿಸಿದರು. 1936ರಲ್ಲಿ ಕಾಶಿಯಲ್ಲಿ ನಡೆದ ಸಮಾರಂಭದಲ್ಲಿ ಮಹಾತ್ಮ ಗಾಂಧಿಯವರು ಮೈಥಿಲಿ ಶರಣ್ ಗುಪ್ತ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಿದ್ದರು. ರಾಜಕೀಯ ಜೀವನ: ಸ್ವಾತಂತ್ರ್ಯಾನAತರ 1952 ಮಾರ್ಚ 12 ರಂದು ಅವರು ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಗೊಳ್ಳುತ್ತಾರೆ. 1958ರಲ್ಲಿ ಅವರು ಎರಡನೇ ಬಾರಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಒಟ್ಟು 15 ವರ್ಷಗಳ ಕಾಲ ರಾಜ್ಯಸಭೆಯ ಗೌರವ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಶಸ್ತಿಗಳು: 1941ರಲ್ಲಿ ವಾರಣಾಸಿಯ ನಗರಿ ಪ್ರಚಾರಿಣಿ ಸಭಾದಿಂದ ಸುಧಾಕರ ಪದಕ ಪಡೆದಿದ್ದಾರೆ. 1946ರಲ್ಲಿ ಕರಾಚಿಯಲ್ಲಿ ಹಿಂದಿ ಸಾಹಿತ್ಯ ಸಂಘದಿAದ ಸಾಹಿತ್ಯ ವಾಚಸ್ಪತಿ, 1948ರಲ್ಲಿ ಆಗ್ರಾ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗೆಯೇ ಅವರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ 1954ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದ ಅತ್ಯುನ್ನತ ನಾಗರರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮೈಥಿಲಿ ಶರಣ್ ಗುಪ್ತ ಅವರು ಡಿಸೆಂಬರ್ 12, 1964 ರಂದು ತಮ್ಮ 78ನೇ ವಯಸ್ಸಿನಲ್ಲಿ ಝಾನ್ಸಿಯಾ ಚಿರ್ಗಾಂವ್ ಗ್ರಾಮದ ಸ್ವಗೃಹದಲ್ಲಿ ನಿಧನರಾದರು.

ಭಾರತದ ಸ್ವಾತಂತ್ರೊö್ಯÃತ್ತರ ಇತಿಹಾಸದಲ್ಲಿ ಈ ನಾಡಿನ ಸಾರ್ವಭೌಮತೆಗೆ, ಪ್ರಜಾಪ್ರಭುತ್ವಕ್ಕೆ, ಸಂವಿಧಾನದ ಆಶಯಗಳಿಗೆ ಒದಗಿದ ಬಹುದೊಡ್ಡ ಸಂಕಷ್ಟ ಇಂದಿರಾಗಾAಧಿಯವರ ಕಾಂಗ್ರೆಸ್ ಸರ್ಕಾರದಿಂದ ಜಾರಿಯಾದ ‘ಆಂತರಿಕ ತುರ್ತುಪರಿಸ್ಥಿತಿ’. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಕಾರ್ಯಾಚರಿಸುವ ಪ್ರಜಾಪ್ರಭುತ್ವವನ್ನು ಮೂಲೆಗುಂಪಾಗಿಸಲಾಯಿತು. ಯಾವ ಸರ್ಕಾರವನ್ನು ಇಡೀ ರಾಷ್ಟçದ ಜನಾದೇಶದÀ ಪ್ರತಿಫಲವೆನ್ನುತ್ತೇವೆಯೋ, ಜಾಗತಿಕವಾಗಿ ಭಾರತದ ಧ್ವನಿ ಎಂದು ಸಂಬೋಧಿಸುತ್ತೇವೆಯೋ ಅದೇ ಸರ್ಕಾರ ಅಧಿಕಾರದ ದಾಹದಿಂದಾಗಿ ಸರ್ವಾಧಿಕಾರಿ ಧೋರಣೆಯನ್ನು ತೋರಿದ್ದಲ್ಲದೇ ವಿಶ್ವದ ಮುಂದೆ ರಾಷ್ಟçವನ್ನು ತಲೆತಗ್ಗಿಸುವಂತೆ ಮಾಡಿತ್ತು. ಈ ವರ್ಷ ಈ ಕರಾಳ ಹೇರಿಕೆಗೆ, ಸರ್ವಾಧಿಕಾರಿ ಧೋರಣೆಗೆ ೫೦ ವರ್ಷ! ಹಿನ್ನೆಲೆ: ೧೯೬೬ರಲ್ಲಿ ಲಾಲ್ ಬಹದ್ದೂರ್ ಶಾಸ್ತಿçà ಅವರು ತಾಷ್ಕೆಂಟ್ ಒಪ್ಪಂದಕ್ಕೆAದು ತೆರಳಿ ನಿಗೂಢವಾಗಿ ನಿಧನರಾದ ನಂತರ ಇಂದಿರಾಗಾAಧಿ ಪ್ರಧಾನಿಯಾದರು. ಅವರು ಪ್ರಧಾನಿಯಾಗಿ ಕೆಲವೇ ವರ್ಷಗಳಲ್ಲಿ ಇಂದಿರಾಗಾAಧಿ ಅವರ ನೇತೃತ್ವಕ್ಕೆ ಕಾಂಗ್ರೆಸ್ನ ಹಿರಿಯ ನೇತಾರರಲ್ಲಿ ಭಿನ್ನಮತವುಂಟಾಗಿ ಕಾಂಗ್ರೆಸ್ ಇಬ್ಭಾಗವಾಯಿತು. ಕೆಲವರು ಸಮತಾ ಕಾಂಗ್ರೆಸ್ ಕಟ್ಟಿಕೊಂಡರು. ಕಮ್ಯುನಿಷ್ಟ್ ಹಿನ್ನೆಲೆಯ ಬೆಂಬಲದೊAದಿಗೆ ಇಂದಿರಾಗಾAಧಿ ಅಧಿಕಾರವನ್ನು ಮುನ್ನಡೆಸಿದರು. ಇಂದಿರಾಗಾAಧಿ ಅವರ ನೇತೃತ್ವದ ಸರ್ಕಾರಕ್ಕೆ ಜಾಗತಿಕ ಮನ್ನಣೆ ದೊರೆತಿದ್ದು ೧೯೭೧ರಲ್ಲಿ ಬಾಂಗ್ಲಾ ವಿಮೋಚನೆಗೆ ಭಾರತ ಸಹಕಾರಕೊಟ್ಟು ಪಾಕ್ ವಿರುದ್ಧ ನಡೆದ ಯುದ್ಧದಲ್ಲಿ ಜಯಗಳಿಸಿದ ನಂತರ. ಬಾಂಗ್ಲಾದ ಶೇಖ್ ಮುಜೀಬುರ್ ರಹಮಾನ್ ತನ್ನ ಅವಾಮಿ ಲೀಗ್ ಮೂಲಕ ಪಾಕ್ ವಿರುದ್ಧ ಹೋರಾಟ ಆರಂಭಿಸಿರುತ್ತಾರೆ. ಅವರಿಗೆ ಬೆಂಬಲವಾಗಿ ಭಾರತ ೧೯೭೧ರಲ್ಲಿ ಪಾಕ್ ವಿರುದ್ಧ ಹೋರಾಟ ಮಾಡಿ ಅತಿದೊಡ್ಡ ವಿಜಯವನ್ನು ಗಳಿಸುತ್ತೇವೆ. ೧೯೭೧ರಲ್ಲಿ ಡಿಸೆಂಬರ್ ೧೬ರಂದು ನಮ್ಮ ೧೬,೦೦೦ ಸೈನಿಕರು ೯೨೦೦೦ ಮಂದಿ ಪಾಕ್ ಸೈನಿಕರನ್ನು ವಶಕ್ಕೆ ತೆಗೆದುಕೊಂಡು ಗೆದ್ದರು. ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸಿ ನೂತನ ದೇಶವನ್ನು ರಚಿಸಲಾಯಿತು. ಇದರ ಬೆನ್ನಲ್ಲೇ ೧೯೭೨ರ ಚುನಾವಣೆಯಲ್ಲಿ ೫೧೮ ಲೋಕಸಭಾ ಕ್ಷೇತ್ರಗಳಲ್ಲಿ ೩೫೨ ಕ್ಷೇತ್ರಗಳನ್ನು ಕಾಂಗ್ರೆಸ್ ಸದಸ್ಯರು ಗೆದ್ದರು. ಆಗ ‘Iಟಿಜiಚಿ is Iಟಿಜiಡಿಚಿ, Iಟಿಜiಡಿಚಿ is Iಟಿಜiಚಿ’ ಎನ್ನುವ ಘೋಷಣೆಯೂ ಪ್ರಸಿದ್ಧಿ ಪಡೆಯಿತು. ದೇಶ – ವಿದೇಶಗಳಿಂದ ಹೊಗಳಿಕೆಗಳು ಬಂದಾಗ ಸಹಜವಾಗಿ ಇಂದಿರಾಗಾAಧಿಯವರಿಗೆ ಅಧಿಕಾರದ ಮದ ತಲೆಗೇರಿತು. ಜತೆಗೇ ಕಾಂಗ್ರೆಸ್ನ ಅನೇಕರು ಭ್ರಷ್ಟಾಚಾರಕ್ಕೆ ಇಳಿದರು. ೧೯೭೩ರಲ್ಲಿ ಗುಜರಾತ್ನಲ್ಲಿ ಸಮಾಜವಾದಿ ನಾಯಕ ಹಾಗೂ ರಾಷ್ಟಿçÃಯ ಸ್ವಯಂಸೇವಕ ಸಂಘದ ಹಿತೈಷಿಯಾಗಿದ್ದ ಜಯಪ್ರಕಾಶ್ ನಾರಾಯಣ್ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದರು. ಇದರ ಪರಿಣಾಮ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಚಿಮನ್ಭಾಯಿ ಪಟೇಲ್ ೧೯೭೩ರ ಡಿಸೆಂಬರ್ನಲ್ಲಿ ರಾಜೀನಾಮೆ ನೀಡಬೇಕಾಯಿತು, ಅಲ್ಲಿ ರಾಷ್ಟçಪತಿ ಆಡಳಿತ ಬಂತು. ಬಿಹಾರದಲ್ಲಿಯೂ ಪ್ರತಿಭಟನೆ ಕಾವೇರಿತು. ಈ ಸಂದರ್ಭದಲ್ಲಿ ಅನೇಕರು ಇಂದಿರಾಗಾAಧಿಗೆ “ವಿರೋಧ ಪಕ್ಷಗಳನ್ನು ಈಗಲೇ ಮಟ್ಟಹಾಕಬೇಕು” ಎಂದು ಸಲಹೆ ನೀಡಿದರು. ಆದರೆ ಕೆಲವೇ ದಿನಗಳಲ್ಲಿ ನಂತರ ಸ್ವತಃ ಇಂದಿರಾಗಾAಧಿ ಮೇಲೆ ೧೯೭೧ರ ಚುನಾವಣೆಯಲ್ಲಿ ಭ್ರಷ್ಟಾಚಾರ ಮಾಡಿದ ಆರೋಪದಿಂದ ಅಲಹಾಬಾದ್ ಹೈಕೋರ್ಟ್ನಲ್ಲಿ ಕೇಸು ದಾಖಲಾಯಿತು. ತುರ್ತುಪರಿಸ್ಥಿತಿ ಹೇರಿಕೆ: ೧೯೭೫ ಜೂನ್ ೧೨ಕ್ಕೆ ಅಲಹಾಬಾದಿನ ಹೈಕೋರ್ಟ್ ಇಂದಿರಾಗಾAಧಿ ಭ್ರಷ್ಟಾಚಾರ ಮಾಡಿದ್ದು ಹೌದು ಎಂದು ತೀರ್ಪಿಟ್ಟಿತ್ತು. ಅದೇ ದಿನ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಆಗ ಇಂದಿರಾಗಾAಧಿಯವರು ನ್ಯಾಯಾಂಗ ಬಂಧನದಿAದ ತಪ್ಪಿಸಿಕೊಳ್ಳಲು ಮಾಡಿದ ಯೋಜನೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಬೇಕು ಎನ್ನುವುದಾಗಿತ್ತು. ೧೯೭೫ ಜೂನ್ ೨೫ ರಾತ್ರಿ ಇಂದಿರಾಗಾAಧಿ ಅವರು ನೇರವಾಗಿ ರಾಷ್ಟçಪತಿಗಳಾಗಿದ್ದ ಡಾ|ಫಕ್ರುದ್ದೀನ್ ಅಲಿ ಅಹಮ್ಮದ್ ಅವರಿಂದ ತುರ್ತು ಪರಿಸ್ಥಿತಿ ಹೇರಲು ಒಪ್ಪಿಗೆ ಪಡೆದು ಜೂನ್ ೨೬ ಬೆಳಗ್ಗೆ ಇಡೀ ದೇಶ ಎರಡನೇ ಬಾರಿಗೆ ಗುಲಾಮಗಿರಿಗೆ ಮರಳುವಂತೆ ಮಾಡಿದರು. ಪತ್ರಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು, ಮುದ್ರಣಕ್ಕಿಂತ ಮುಂಚೆ ಸರಕಾರಿ ಅಧಿಕಾರಿಗಳ ಅನುಮತಿ ಪಡೆಯಬೇಕಿತ್ತು, ವಿರೋಧ ಪಕ್ಷದ ನಾಯಕರುಗಳಿಂದ ಹಿಡಿದು, ಅಸಂವಿಧಾನಿಕ ನಡೆಯನ್ನು ಪ್ರಶ್ನಿಸಿದ ಸಾಮಾನ್ಯರವರೆಗೆ ಎಲ್ಲರನ್ನೂ ಬಂಧಿಸಲಾಯಿತು. ಇಂದಿರಾಗಾAಧಿಗೆ ಅನೇಕರು “ಇದು ಸರಿಯಲ್ಲ” ಎಂದು ಸಲಹೆಕೊಟ್ಟರೂ ಅವರು ಕೇಳಲಿಲ್ಲ. ನನ್ನಲ್ಲಿ ಸೈನ್ಯ, ಪೊಲೀಸ್ ಇದೆ ಎಂಬ ಅಹಂಕಾರ ಮೂಡಿತ್ತು. ಯಾರೂ ಮಾತನಾಡುವಂತಿರಲಿಲ್ಲ. ಆರೆಸ್ಸೆಸ್ ಮೇಲೆ ನಿರ್ಬಂಧ: ಜುಲೈ ೪ ರಂದು ಆರೆಸ್ಸೆಸ್ಗೆ ನಿರ್ಬಂಧ. ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರನ್ನು ಪುಣೆಯ ಯರವಾಡ ಜೈಲಿಗೆ ಹಾಕಿದರು. ಆದರೆ ತರುಣ ಸ್ವಯಂಸೇವಕರು, ಕಾರ್ಯಕರ್ತರು ಅವರೆಲ್ಲರಿಗೂ ಅನಿಸಿದ್ದು ಇದು ದುರದೃಷ್ಟಕರ ಬೆಳವಣಿಗೆ. ಇದರ ವಿರುದ್ಧ ಸಮಾಜದಲ್ಲಿ ನೇತೃತ್ವ ವಹಿಸಿ ಯಾವ ಕಾರಣಕ್ಕೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೯೭೪ರಿಂದಲೇ ಲೋಕ ಸಂಘರ್ಷ ಸಮಿತಿ, ‘ಅiಣizeಟಿs ಜಿoಡಿ ಆemoಛಿಡಿಚಿಛಿಥಿ’ ದೇಶದಲ್ಲಿ ರಚನೆಯಾಯಿತು. ಅದರ ಪ್ರಮುಖರಾಗಿದ್ದ ಜಯಪ್ರಕಾಶ್ ನಾರಾಯಣರನ್ನೂ ಜೈಲಿಗೆ ಹಾಕಲಾಯಿತು. ಆಗ ಅವರು ಸಂಘದ ಹಿರಿಯ ಕಾರ್ಯಕರ್ತರು, ಸಂಸದ ನಾನಾಜಿ ದೇಶ್ಮುಖ್ ಅವರಿಗೆ ‘ಲೋಕ ಸಂಘರ್ಷ ಸಮತಿಯ ಕಾರ್ಯದರ್ಶಿಯಾಗಿ ನೀವು ಜವಾಬ್ದಾರಿ ತೆಗೆದುಕೊಂಡು, ಚಳುವಳಿ ರೂಪಿಸಿ’ ಎಂದು ಪತ್ರ ಬರೆದರು. ನಂತರ ಇಡೀ ದೇಶದಲ್ಲಿ ಅಭೂತಪೂರ್ವ ಹೋರಾಟ. ಒಟ್ಟು ೬ ರೀತಿಯ ಹಂತಗಳಲ್ಲೂ ಸಂಘರ್ಷ. ೧. ಅಖಿಲ ಭಾರತೀಯ ಮಟ್ಟದಲ್ಲಿ ಯೋಜನೆ. ೨. ಹೋರಾಟಕ್ಕೆ ಬೇಕಾದ ಭೂಗತ ಸಾಹಿತ್ಯ ರಚನೆ ೩. ರಾಜಕೀಯ ಪ್ರಮುಖರ ಜಾಗೃತಿಗೆ ವ್ಯವಸ್ಥೆ ೪. ಸಮಾಜದ ಜಾಗೃತಿಗೆ ವ್ಯವಸ್ಥೆ ೫. ಹೋರಾಟಗಾರರಿಗೆ ಜೈಲಾದರೆ ಅವರ ಮನೆಯ ಪರಿಸ್ಥಿತಿ ಕುರಿತು ಕಾಳಜಿ. ೬. ನಿಧಿ ಸಂಗ್ರಹ ಲೋಕ ಸಂಘರ್ಷ ಸಮಿತಿಯ ಹೆಸರಲ್ಲಿ ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ರೂಪಿಸಿದ್ದು ಸಂಘದ ಕಾರ್ಯಕರ್ತರು. ಆರೆಸ್ಸೆಸ್ ಅನ್ನು ವಿರೋಧಿಸುತ್ತಿದ್ದವರೂ ಬೆಂಬಲ ನೀಡಿದರು. ಗೋಕಾಕ್ನ ಸ್ವಾತಂತ್ರö್ಯ ಹೋರಾಟಗಾರ ಅಣ್ಣು ಗುರೂಜಿ ತಮ್ಮ ಆತ್ಮ ಚರಿತ್ರೆಯಲ್ಲಿ ಹೀಗೆ ಉಲ್ಲೇಖಿಸುತ್ತಾರೆ “ತುರ್ತುಪರಿಸ್ಥಿತಿ ವೇಳೆ ಹೋರಾಟ ಮಾಡಬೇಕೆಂದು ಅವರ ಊರಿನಲ್ಲಿದ್ದ, ಸರ್ಕಾರದ ಪಿಂಚಣಿ ಪಡೆಯುತ್ತಿದ್ದ ೩೦೦ ಮಂದಿ ಹೋರಾಟಗಾರರನ್ನು ಕೇಳಿಕೊಂಡೆ. ಆದರೆ ಪಿಂಚಣಿ ರದ್ದಾಗುವ ಭಯದಿಂದ ಒಬ್ಬರೂ ಬರಲಿಲ್ಲ. ನನ್ನ ಜತೆ ಹೆಗಲು ಕೊಟ್ಟು ದುಡಿದವರು ಆರೆಸ್ಸೆಸ್ ಸ್ವಯಂಸೇವಕರು” ಎಂದರು. ಅನೇಕರು ನೌಕರಿ ಕಳೆದುಕೊಂಡರು, ಪೊಲೀಸರ ದೌರ್ಜನ್ಯಕ್ಕೆ ಕೈ-ಕಾಲು ಕಳೆದುಕೊಂಡರು. ಈ ದೇಶವನ್ನು ನಿಜವಾಗಿ ಪ್ರೀತಿಸುವವರು ಆರೆಸ್ಸೆಸ್ನವರು ಎಂಬ ಭಾವ ಬಲಗೊಂಡಿತು. ಪಂಜಾಬ್ನಲ್ಲಿ ಅಕಾಲಿದಳ ತುರ್ತು ಪರಿಸ್ಥಿತಿಯ ವಿರುದ್ಧ ದೇಶಾದ್ಯಂತ ಏಕಕಾಲಕ್ಕೆ ಸತ್ಯಾಗ್ರಹವನ್ನು ನವೆಂಬರ್ ೧೪ ರಂದು ಏರ್ಪಡಿಸಿದರು. ಮೊಬೈಲ್ ಇಲ್ಲದ ಕಾಲದಲ್ಲಿ, ಹೊರಗಡೆ ಓಡಾಡಿದರೂ ಅರೆಸ್ಟ್ ಮಾಡುವ ಭೀತಿಯಿದ್ದ ಸಮಯದಲ್ಲಿ, ಇಡೀ ದೇಶದಲ್ಲಿ ತಾಲೂಕಿನವರೆಗೆ ಪೊಲೀಸ್ಗೆ ಗೊತ್ತಾಗದೇ ಸತ್ಯಾಗ್ರಹದ ಮಾಹಿತಿ ಹೋಯಿತು. ನವೆಂಬರ್ ೧೪ರಂದು ಏಕಕಾಲಕ್ಕೆ ಎಲ್ಲಾ ಕಡೆಗಳಲ್ಲಿ ಬಹುತೇಕ ಎಲ್ಲಾ ನಾಯಕರು ಸೇರಿ ಚಳುವಳಿ ಆರಂಭಿಸಿದರು. ಪಂಜಾಬಿನ ಅಕಾಲಿದಳ ಎಲ್ಲಿಯವರೆಗೆ ತುರ್ತು ಪರಿಸ್ಥಿತಿ ಹೋಗುವುದಿಲ್ಲವೋ ಅಲ್ಲಿಯವರೆಗೆ ಪ್ರತಿನಿತ್ಯ ಹೋರಾಟದ ನಿಶ್ಚಯ ಮಾಡಿದರು. ಇಡೀ ದೇಶದಲ್ಲಿ ಒಂದೇ ಒಂದು ಕಡೆ ಪೊಲೀಸರಿಗೆ ವಿರೋಧ ನೀಡದೆ ಶಾಂತಯುತವಾಗಿ ಸತ್ಯಾಗ್ರಹ ಮಾಡಿದರು. ಮಾಧವ ರಾವ್ ಮುಳೆ, ಮೋರೋಪಂತ ಪಿಂಗಳೆ, ಭಾವುರಾವ್ ದೇವರಸ್ ಇಡೀ ದೇಶದ ಎಲ್ಲಾ ಪ್ರಮುಖರ ಜತೆ ಸಂಪರ್ಕ ಸಾಧಿಸಿದರು. ಅತ್ಯಂತ ನೋವಿನ ಪರಿಸ್ಥಿತಿಯಲ್ಲೂ ಮನಸ್ಸಿನ ಸಂಕಲ್ಪ ಉಳಿಸಿಕೊಂಡರು. ಸ್ವಯಂಸೇವಕರ ಮನೆಯ ತಾಯಂದಿರೂ ಪೊಲೀಸರಿಂದ ಬೈಸಿಕೊಂಡರೂ, ಬಡಿಸಿಕೊಂಡರೂ ಪೊಲೀಸ್ ಎದುರು ಯಾವುದೇ ರೀತಿ ಮಾಹಿತಿ ಬಿಟ್ಟುಕೊಡಲಿಲ್ಲ. ತುರ್ತುಪರಿಸ್ಥಿತಿ ಹೇರಿಕೆಗೆ ವಿದೇಶಗಳಲ್ಲೂ ವಿರೋಧ: ಅಮೆರಿಕಾ, ಬ್ರಿಟನ್, ಜರ್ಮನಿ ಮುಂತಾದ ರಾಷ್ಟçಗಳಲ್ಲೂ ಭಾರತೀಯರ ಪ್ರಜಾಸತ್ತಾತ್ಮತೆಯನ್ನು ಉಳಿಸುವುದಕ್ಕಾಗಿ ಅನೇಕ ಸಂಸ್ಥೆಗಳು, ಪತ್ರಿಕೆಗಳು ಪ್ರಯತ್ನಿಸಿದವು. ಅಮೇರಿಕಾದಲ್ಲಿ ಸ್ಥಾಪನೆಯಾದ ‘ಇಂಡಿಯನ್ಸ್ ಫಾರ್ ಡೆಮಾಕ್ರಸಿ’ ಮತ್ತು ಇಂಗ್ಲೆAಡಿನ ‘ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ’ ಪರಸ್ಪರ ಸಂಪರ್ಕವನ್ನಿಟ್ಟುಕೊAಡು ವಿಶ್ವದ ಇತರೆ ರಾಷ್ಟçಗಳಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಿದರು. ನೋಡನೋಡುತ್ತಿದ್ದಂತೆ ೮೨ ರಾಷ್ಟçಗಳಲ್ಲಿನ ಭಾರತೀಯರ ಜೊತೆ ಇವು ಸಂಪರ್ಕ ಸಾಧಿಸಿತ್ತು. ತುರ್ತುಪರಿಸ್ಥಿತಿ ಮತ್ತು ಕರ್ನಾಟಕ: ಕರ್ನಾಟಕದಲ್ಲಿ ೧೮ ತಿಂಗಳ ಒಳಗಡೆ ಕಹಳೆ ಸೇರಿ ೫೭೭ ಪ್ರಕಟಣೆಗಳನ್ನು ಕಾರ್ಯಕರ್ತರು ತಂದರು. ೫೭ ಕಡೆಗಳಲ್ಲಿ, ೧೮ ತಿಂಗಳಲ್ಲಿ ಮುದ್ರಣವಾಗಿದ್ದು ೩೨ ಲಕ್ಷ ಪ್ರತಿಗಳು. ರಾಜ್ಯದಲ್ಲಿ ೧೭೦೦೦ ಜೈಲು ಸೇರಿದರೆ, ದಕ್ಷಿಣ ಕನ್ನಡ ಜಿಲ್ಲೆಯವರೇ ೧೧,೦೦೦ ಮಂದಿ ಇದ್ದರು. ಎಲ್ಲರೂ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ೧೯೭೬ರ ಅಂತ್ಯದಲ್ಲಿ ಇಂದಿರಾಗಾAಧಿ ಅವರಿಗೆ ಚುನಾವಣೆಯಲ್ಲಿ ಗೆದ್ದರೆ ಮತ್ತೆ ತನ್ನನ್ನು ತಡೆಯುವವರಾರೂ ಇಲ್ಲ ಎಂದನಿಸಿತು. ೧೯೭೭ ಫೆ.೧೮ಕ್ಕೆ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಆಗ ಸಂಘದ ಕಾರ್ಯಕರ್ತ ಶಕ್ತಿ ಇಡೀ ದೇಶದಲ್ಲಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಿದರು. ಜನಸಂಘ ಮತ್ತು ಇನ್ನಿತರ ರಾಜಕೀಯ ಪಕ್ಷಗಳು ‘ಜನತಾ ಪಕ್ಷ’ದ ಹೆಸರಿನಲ್ಲಿ ಒಂದಾಗಿ ಕಾಂಗ್ರೆಸ್ ಅನ್ನು ಎದುರಿಸಿತು. ಎಲ್ಲದರ ಪರಿಣಾಮವಾಗಿ ಮಾರ್ಚ್ ೨೭, ೧೯೭೭ ಫಲಿತಾಂಶ ಪ್ರಕಟವಾಗಿ ಇಂದಿರಾಗಾAಧಿ ಅವರಿಗೆ ಹೀನಾಯ ಸೋಲಾಯಿತು. ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತು. ಒಂದು ಕಾಲು ಲಕ್ಷ ಜನ ಸ್ವಯಂಸೇವಕರನ್ನು ಬಂಧಿಸಲಾಗಿತ್ತು. ಆಂತರಿಕ ತುರ್ತುಪರಿಸ್ಥಿತಿಯ ನಿರ್ಧಾರದ ವಿರುದ್ಧ ಮಾತನಾಡಿದ ಕಾರಣಕ್ಕಾಗಿ ಕರ್ನಾಟಕದಲ್ಲಿ ಪೊಲೀಸರ ಲಾಠಿಪ್ರಹಾರದಿಂದ ಗಾಯಗೊಂಡ ಸತ್ಯಾಗ್ರಾಹಿಗಳು, ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯಕ್ಕೆ ತುತ್ತಾದವರ ಒಟ್ಟು ಸಂಖ್ಯೆ ೧೯೧೭. ದೇಹದ ಯಾವುದಾದರೂ ಒಂದು ಅಂಗ ಶಾಶ್ವತವಾಗಿ ಊನವಾದವರ ಸಂಖ್ಯೆ ನೂರಕ್ಕೂ ಹೆಚ್ಚಿದೆ. ಅಧಿಕಾರದ ದಾಹಕ್ಕೆ ಬಲಿಯಾದವರ ಸಂಖ್ಯೆಯೂ ಹಲವಿದೆ. ತಮ್ಮ ಸತ್ಯಾಗ್ರಹದಿಂದಾಗಿ, ನ್ಯಾಯಕ್ಕಾಗಿ ಮಾಡಿದ ಹೋರಾಟದಿಂದಾಗಿ ಅವರ ಮನೆಯವರೂ ಕಷ್ಟಪಡುವಂತಾಗಿರುವುದನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡವರೂ, ಹೃದಯಾಘಾತಕ್ಕೆ ಒಳಗಾದವರೂ ಅನೇಕರು. ಇವರೆಲ್ಲರ ತ್ಯಾಗ ಮತ್ತು ಬಲಿದಾನದಿಂದ ೧೯೭೭ರ ಮಾರ್ಚ್ ೨೧ರ ಬೆಳಗ್ಗೆ ತುರ್ತುಪರಿಸ್ಥಿತಿ ಮುಕ್ತಾಯಗೊಂಡಿತು.
ಸುಮಾರು ೨೩೦ ವರ್ಷಗಳ ಕಾಲ ತಮ್ಮ ಸಾಮ್ರಾಜ್ಯದ ಚತುಃಸೀಮೆಯೊಳಗೆ ಯಾವ ಆಕ್ರಮಣಕಾರಿಯನ್ನೂ ಬರಗೊಡದೆ ಅಜೇಯವಾಗಿ ರಾಜ್ಯಭಾರ ನಡೆಸಿದ ವಿಜಯನಗರ ಸಾಮ್ರಾಜ್ಯ ೧೫೬೫ರ ರಕ್ಕಸ ತಂಗಡಿ ಯುದ್ಧದಲ್ಲಿ ಸೋಲುಪ್ಪಿಕೊಂಡು ಪತನದ ಅಂಚಿನಲ್ಲಿತ್ತು. ವಿಜಯನಗರದ ಸಾಮರ್ಥ್ಯ ಕುಂದಿದೆ ಎಂದು ತಿಳಿಯುತ್ತಿದ್ದಂತೆ ಅಲ್ಲಿಯವರೆಗೆ ಬಾಲ ಮುದುರಿಕೊಂಡಿದ್ದ ಆಕ್ರಮಣಕಾರಿಗಳು ಮತ್ತೆ ಚಿಗುರಿದರು. ವ್ಯಾಪಾರಕ್ಕೆಂದು ಬಂದಿದ್ದ ಪೋರ್ಚುಗೀಸರು ಗೋವಾದಲ್ಲಿ ನೆಲೆಯೂರಿ ಕರ್ನಾಟಕದ ಕರಾವಳಿಯಲ್ಲಿ ಲೂಟಿ ಆರಂಭ ಮಾಡಿದರು. ಬಸ್ರೂರು, ಬಾರ್ಕೂರು, ಮಂಗಳೂರು ಸಹಿತವಾಗಿ ಕರಾವಳಿಯ ಬಂದರುಗಳನ್ನು ಸಂಪೂರ್ಣ ತಮ್ಮ ವಶಕ್ಕೆ ತೆಗೆದುಕೊಂಡರು. ತಮ್ಮನ್ನು ಒಪ್ಪದವರನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿದರು, ಅಸಂಖ್ಯ ಅಂಗಡಿ, ಮನೆಗಳಿಗೆ, ತೆಂಗಿನ ತೋಟಗಳಿಗೆ ಬೆಂಕಿ ಇಟ್ಟರು. ಇಲ್ಲಿನ ತಾಮ್ರ, ಬೆಲೆ ಬಾಳುವ ಮಣಿಗಳು, ಪಾದರಸ, ಕರಿಮೆಣಸು ಏಲಕ್ಕಿ ಮುಂತಾದ ಸಾಂಬಾರ ಪದಾರ್ಥಗಳು ಎಲ್ಲವನ್ನೂ ಮನಸೋ ಇಚ್ಚೆ ದೋಚಿದರು. ಬಂದರಿನಲ್ಲಿದ್ದ ನಮ್ಮವರ ಹಡಗುಗಳನ್ನು ಮುಳುಗಿಸಿದರು. (ಸಮಕಾಲಿನ ಪೋರ್ಚುಗೀಸ್ ಇತಿಹಾಸಕಾರ ಕ್ಯಾಸ್ಟಾನಿಡಾ ಈ ಎಲ್ಲಾ ಘಟನೆಗಳನ್ನು ಸವಿವರವಾಗಿ ದಾಖಲಿಸಿದ್ದಾರೆ.) ಗೋವಾದಿಂದ ಉಳ್ಳಾಲದ ತನಕ ಕರಾವಳಿಯನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿರಿಸಿಕೊಂಡು, ಸಮುದ್ರದಲ್ಲಿನ ಯಾವುದೇ ಚಟುವಟಿಕೆಗೆ ಪೋರ್ಚುಗೀಸರಿಂದ ಅನುಮತಿ ಪಡೆಯಬೇಕಾದ ಅನಿವಾರ್ಯತೆ ನಮ್ಮವರದ್ದಾಯಿತು, ಉಳಿದ ಆಳರಸರು ಆಕ್ರಮಕರ ಕಾರ್ಯಗಳಿಗೆ ತಲೆಬಾಗಿ ಭಾರತೀಯರ ಮೇಲೆ ಅವರ ದೌರ್ಜನ್ಯಗಳನ್ನು ಕಂಡೂ ಕಾಣದಂತಿದ್ದು, ಕಾಲಕಾಲಕ್ಕೆ ಕಪ್ಪವನ್ನು ತಪ್ಪದೆ ನೀಡುತ್ತಾ ತೆಪ್ಪಗಿದ್ದ ಸಂದರ್ಭದಲ್ಲಿ, ಬೆಂಕಿಯ ಚೆಂಡಿನAತೆ ಪೋರ್ಚುಗೀಸರ ಹಡಗುಗಳಿಗೆ ಬೆಂಕಿ ಹಚ್ಚಿ ಅಧರ್ಮಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕ. ೧೫ನೇ ಶತಮಾನದವರೆಗೂ ಉತ್ತರದ ಅಂಕೋಲಾ ನದಿಯಿಂದ ದಕ್ಷಿಣದ ಕಾಸರಗೋಡಿನ ಪಯಸ್ವಿನಿ ನದಿಯ ತನಕ, ಸಮುದ್ರ ತಟದಿಂದ ಸಹ್ಯಾದ್ರಿ ಅಂಚಿನವರೆಗಿನ ಪ್ರದೇಶವನ್ನು ತುಳುನಾಡು ಎಂದೇ ಕರೆಯಲಾಗುತ್ತಿತ್ತು. ತನ್ನದೇ ಆದ ವೈಶಿಷ್ಟ್ಯ ಪೂರ್ಣ ರಾಜಕೀಯ, ಸಾಂಸ್ಕೃತಿಕ ಪರಂಪರೆಗಳಿದ್ದ ಪ್ರದೇಶ ಈ ತುಳುನಾಡು. “ಪುರುಷರು ಮಾತ್ರ ರಾಜ್ಯವಾಳಬೇಕಾದವರು, ಅಕಸ್ಮಾತ್ ಗಂಡು ಸಂತಾನವಿಲ್ಲದಿದ್ದರೆ ಆ ರಾಜ್ಯಕ್ಕೆ ಭವಿಷ್ಯವೇ ಇಲ್ಲ” ಅನ್ನುವ ಮಾನಸಿಕತೆಯಲ್ಲಿ ಯುರೋಪಿನಂತಹ ಮುಂದುವರಿದ ದೇಶಗಳಿದ್ದಾಗ, ಅಳಿಯ ಸಂತಾನ ಕಟ್ಟಿನ ಸಂಪ್ರದಾಯದAತೆ ಸ್ತಿçÃಯರಿಗೂ ಪಟ್ಟ ಕಟ್ಟಿ ಅವರ ಶೌರ್ಯವನ್ನು ಒರೆಗಲ್ಲಿಗೆ ಹಚ್ಚಿ, ಭಾರತೀಯ ನಾರಿಯರ ಪರಾಕ್ರಮವನ್ನು ಜಗತ್ತಿಗೆ ತಿಳಿಯಪಡಿಸಿದ ವಿಶಿಷ್ಟ ಸಂಪ್ರದಾಯ ತುಳುನಾಡಿನದ್ದು. ಅಬ್ಬಕ್ಕ ತುಳುನಾಡನ್ನು ಆಳುತ್ತಿದ್ದ ಚೌಟ ವಂಶಕ್ಕೆ ಸೇರಿದವಳು. ಅಹಿಂಸಾ ಪರಮೋ ಧರ್ಮಃ ಎನ್ನುವ ಜೈನ ಮತವನ್ನು ಅನುಸರಿಸುವವಳಾಗಿದ್ದರೂ, ಧರ್ಮ ಹಿಂಸಾ ತಥೈವ ಚ ಎನ್ನುತ್ತಾ ರಾಷ್ಟç ರಕ್ಷಣೆಗಾಗಿ ಕತ್ತಿಯನ್ನು ಹಿಡಿದು ಭಾರತೀಯ ಸಂಸ್ಕೃತಿಯನ್ನು ಮೆರೆದವಳು. ಚೌಟರ ಅರಸು ಮನೆತನದಲ್ಲಿ ಅಬ್ಬಕ್ಕ ಹೆಸರಿನ ನಾಲ್ವರು ಆಳಿದ ದಾಖಲೆಗಳು ಇರುವುದರಿಂದ ಈಕೆಯನ್ನು ಹಿರಿಯ ಅಬ್ಬಕ್ಕಳೆಂದೇ ಇತಿಹಾಸಕಾರರು ಗುರುತಿಸುತ್ತಾರೆ. ಈಕೆ ಉಳ್ಳಾಲವನ್ನು ಆಳಿದ್ದು ೧೫೫೪ರಿಂದ ೧೫೮೮ರವರೆಗೆ. ಅಬ್ಬಕ್ಕ ಪಟ್ಟಕ್ಕೆ ಬರುವ ಮೊದಲೇ ಯುದ್ಧ ಕೌಶಲ್ಯಗಳು, ಆಡಳಿತ ತರಬೇತಿಯನ್ನು ಹೊಂದಿದ್ದಳು ಜೊತೆಗೆ ಉತ್ತಮ ರೀತಿಯಲ್ಲಿ ಶಾಸ್ತಾçಭ್ಯಾಸವನ್ನು ಕೂಡ ಮಾಡಿದ್ದಳು. ಮಾತ್ರವಲ್ಲದೆ ಸಂಗೀತ ಹಾಗೂ ಸಾಹಿತ್ಯಗಳಲ್ಲಿ ಅಬ್ಬಕ್ಕಳಿಗೆ ಅಪಾರ ಅಭಿರುಚಿ ಇತ್ತು ಎಂಬುದನ್ನು ಪೋರ್ಚುಗೀಸ್ ಇತಿಹಾಸಕಾರರು ತಮ್ಮ ಬರವಣಿಗೆಯಿಂದ ತಿಳಿಯಪಡಿಸುತ್ತಾರೆ. ಅರಬ್ಬರು, ಕಲ್ಲಿಕೋಟೆಯ ಸಾಮುದ್ರಿ ಅರಸ(ಜಾಮೋರಿನ್) ಮುಂತಾದವರ ಜೊತೆ ವ್ಯಾವಹಾರಿಕ ಒಪ್ಪಂದವನ್ನು ಮಾಡಿಕೊಂಡಿದ್ದ ರಾಣಿ ಅಬ್ಬಕ್ಕ ಆ ಕಾಲದಲ್ಲಿಯೇ ಸಾಗರೋತ್ತರ ವ್ಯವಹಾರಗಳನ್ನು ನಡೆಸಿದ್ದಳು. ಆದರೆ ಕರ್ನಾಟಕ ಕರಾವಳಿಯಲ್ಲಿ ನಮ್ಮ ಅಧಿಪತ್ಯವಿರುವುದರಿಂದ ನಮ್ಮ ಅನುಮತಿ ಇಲ್ಲದೆ ಉಳ್ಳಾಲದ ರಾಣಿ ನಡೆಸುತ್ತಿರುವ ವ್ಯವಹಾರ ಪೋರ್ಚುಗೀಸರನ್ನು ಕೆರಳಿಸಿತು. ಅಬ್ಬಕ್ಕಳಿಗೆ ಎಚ್ಚರಿಕೆ ನೀಡಿದರು. ಅವರ ಕಾನೂನೂಗಳಿಗೆ ಕ್ಯಾರೇ ಅನ್ನದ ಅಬ್ಬಕ್ಕ “ಬೆಳೆ ನನ್ನ ದೇಶದ್ದು, ಬೆಳೆದವರು ನನ್ನ ದೇಶದ ರೈತರು, ಸಮುದ್ರ ನನ್ನ ದೇಶದ್ದು. ಇಲ್ಲಿ ವ್ಯವಹಾರ ಮಾಡುವುದಕ್ಕೆ ಎಲ್ಲಿಂದಲೋ ಬಂದ ದರೋಡೆಕೋರರ ಅನುಮತಿ ನಾನು ಪಡೆದುಕೊಳ್ಳಬೇಕೇ? ಸಾಧ್ಯವಿಲ್ಲ” ಎಂದು ದಿಟ್ಟತನದಿಂದ ಉತ್ತರ ನೀಡಿದ್ದಳು. ಪೋರ್ಚುಗೀಸರಿಂದ ಬರಬಹುದಾದ ಅಪಾಯವನ್ನು ತಡೆಗಟ್ಟಲು ಮತ್ತು ಅವರನ್ನು ಸಂಪೂರ್ಣ ಮಟ್ಟ ಹಾಕಲು ಅಬ್ಬಕ್ಕ ಸಂಪೂರ್ಣ ಸಿದ್ಧತೆಯನ್ನು ನಡೆಸಿದಳು. ಮೀನುಗಾರ ಸಮಾಜದ ಉಳ್ಳಾಲದ ಚನ್ನಪ್ಪ ಗುರಿಕಾರ ರಾಣಿ ಅಬ್ಬಕ್ಕಳ ನೌಕಾದಾಳದ ಮುಖ್ಯ ಅಧಿಕಾರಿಯಾಗಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಮೀನುಗಾರ ಸಮಾಜದ ಯುವಕರು ಅಬ್ಬಕ್ಕನ ಸೈನ್ಯವನ್ನು ಸೇರಿಕೊಳ್ಳುವುದು ಸಾಧ್ಯವಾಯಿತು. ಜೊತೆಗೆ ಕರಾವಳಿಯ ಬಿಲ್ಲವರು ಬಂಟರು ಮಾಪಿಳ್ಳೆಗಳು ಅಬ್ಬಕ್ಕನ ಸೈನ್ಯವನ್ನು ಸೇರಿ ಆಕೆಯ ಸೈನ್ಯದ ಶಕ್ತಿಯನ್ನು ಮತ್ತಷ್ಟು ಸಮರ್ಥವಾಗಿಸಿದ್ದರು. ಪೋರ್ಚುಗೀಸರಿಂದ ಸಂಭಾವ್ಯವಾದ ದಾಳಿಯನ್ನು ಊಹಿಸಿದ ಅಬ್ಬಕ್ಕ ಉಳ್ಳಾಲದಲ್ಲಿ ಅಭೇದ್ಯವಾದ ಕೋಟೆಯನ್ನು ನಿರ್ಮಿಸಿ ಅದರ ಮೇಲೆ ಫಿರಂಗಿಗಳನ್ನು ಸನ್ನದ್ಧವಾಗಿರಿಸಿದ್ದಳು. ರಾಣಿ ಅಬ್ಬಕ್ಕ ಅಷ್ಟು ಸುಲಭದಲ್ಲಿ ಬಗ್ಗುವವಳಲ್ಲವೆಂದು ಮೊದಲೇ ಅರಿತಿದ್ದ ಆಗಿನ ಪೋರ್ಚುಗೀಸ್ ವೈಸರಾಯ್ ೧೫೫೫ ರಲ್ಲಿ ತನ್ನ ಅತ್ಯಂತ ಸಮರ್ಥ ಅಡ್ಮಿರಲ್ ಡೋಮ್ ಅಲ್ವೇರೋ ಡ ಸಿಲ್ವೇರ ನೇತೃತ್ವದಲ್ಲಿ ೨೧ ಯುದ್ಧ ನೌಕೆಗಳನ್ನು ಮಂಗಳೂರಿಗೆ ಕಳುಹಿಸುತ್ತಾನೆ. ಆರಂಭವಾಯಿತು ಮಂಗಳೂರಿನಲ್ಲಿ ಪೋರ್ಚುಗೀಸರಿಂದ ನರಮೇಧ. ಉಳ್ಳಾಲದ ಸೋಮೇಶ್ವರ ದೇವಸ್ಥಾನದ ಮೇಲೂ ಬರ್ಬರ ದಾಳಿಯಾಯಿತು. ಅಬ್ಬಕ್ಕ ತಡಮಾಡಲಿಲ್ಲ. ಪೋರ್ಚುಗೀಸರೇ ಬೆಚ್ಚಿಬೀಳುವಂತಹ ಪ್ರತ್ಯಘಾತಗಳು ಆರಂಭವಾದವು. ತೆಂಗಿನ ಗರಿಗಳಿಂದ ತಯಾರು ಮಾಡಿದ ಸೂಟೆಗಳು (ದೊಂದಿಗಳು), ತೆಂಗಿನ ಗೆರೆಟೆಯೊಳಗೆ ಕೋವಿಯ ಮದ್ದನ್ನ ತುಂಬಿಸಿ ತಯಾರಿಸಿದ ಬಾಂಬುಗಳು, ಪುಂಖಾನುಪುAಖವಾಗಿ ಬರುತ್ತಿದ್ದ ಬೆಂಕಿಯ ಬಾಣಗಳಿಂದ, ಗೆರಟೆ ಬಾಂಬುಗಳಿAದ ಪೋರ್ಚುಗೀಸರು ತತ್ತರಿಸಿ ಹೋದರು. ಅನೇಕರು ಪ್ರಾಣ ಕಳೆದುಕೊಂಡರು ಪ್ರಾಣ ಉಳಿಸಿಕೊಂಡವರ ಮುಖ ಮೂತಿಗಳು ಸುಟ್ಟುಹೋದವು ಯುದ್ಧಕ್ಕೆ ಬಂದಿದ್ದ ಆ ೨೧ ಹಡಗುಗಳು ಕೂಡ ಸಂಪೂರ್ಣ ಸುಟ್ಟು ಬೂದಿಯಾದವು. ಸಾಕಷ್ಟು ಸಾವು ನೋವುಗಳು ಆಗುತ್ತಿರುವುದನ್ನು ಕಂಡು ಕಲ್ಲಿಕೋಟೆಯ ದೊರೆ ಸಾಮುದ್ರಿ ಅರಸ ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಿ ಯುದ್ದವನ್ನು ನಿಲ್ಲಿಸಿದ. ಅಬ್ಬಕ್ಕ ಮತ್ತವಳ ಸೈನ್ಯದ ವೀರಾವೇಶವನ್ನು ಜೀರ್ಣಿಸಿಕೊಳ್ಳಲು ಪೋರ್ಚುಗೀಸರಿಗೆ ಬರೋಬ್ಬರಿ ಎರಡು ವರ್ಷಗಳೇ ಬೇಕಾಯಿತು. ಆದರೆ ಹೊನ್ನು ಮಣ್ಣು ಮತ್ತು ಅಧಿಕಾರದ ಆಸೆಯಿಂದ ಮತ್ತೆ ೧೫೫೭ರಲ್ಲಿ ಮತ್ತೊಮ್ಮೆ ಕಾಲು ಕೆರೆದು ಯುದ್ಧಕ್ಕೆ ಬಂದರು. ಆಗ ಪೋರ್ಚುಗೀಸರ ಮುಂದಾಳುವಾಗಿದ್ದವನು ಲೂಯಿಸ್ ಡಿ ಮೆಲ್ಲೋ. ಪರಕೀಯರ ನೌಕೆಗಳು ಉಳ್ಳಾಲಕ್ಕೆ ಬಂದು ಮುಟ್ಟುವ ಮೊದಲೇ ಅಬ್ಬಕ್ಕನ ಸೈನ್ಯ ಮತ್ತು ಕರಾವಳಿಯ ಮೀನುಗಾರರು ಪ್ರಬಲ ಪ್ರತ್ಯಾಘಾತಗಳನ್ನು ಒಡ್ಡಿದರು. ಮುಂದೆ ನಡೆದ ಭೀಕರ ಯುದ್ಧದ ಪರಿಣಾಮ ಸಮುದ್ರದ ಮೂಲಕ ನೌಕೆಯಲ್ಲಿ ಬಂದ ಆಕ್ರಮಣಕಾರಿಗಳು “ಬದುಕಿದರೆ ಬಾಳು” ಎಂಬAತೆ ರಸ್ತೆಗಳ ಮೂಲಕ ಗೋವಾಕ್ಕೆ ಪಲಾಯನ ಮಾಡಿದರು. ಮುಂದೆ ಹತ್ತು ವರ್ಷಗಳ ಕಾಲ ಉಳ್ಳಾಲದ ಕಡೆ ತಲೆಹಾಕಿಯೂ ಮಲಗಲಿಲ್ಲ ಪೋರ್ಚುಗೀಸರು. ಮತ್ತೆ ಪ್ರಾರಂಭವಾಯಿತು ಅಬ್ಬಕ್ಕನ ಅಜೇಯ ರಾಜ್ಯಭಾರ. ಒಂದೆಡೆ ಪೋರ್ಚುಗೀಸರಿಗೆ ಸಲ್ಲುತ್ತಿದ್ದ ಕಪ್ಪಕ್ಕೂ ಕಲ್ಲು ಬಿತ್ತು, ಮತ್ತೊಂದೆಡೆ ಅವರ ವೈರಿ ಕಲ್ಲಿಕೋಟೆಯ ದೊರೆ ಸಾಮುದ್ರಿ ಅರಸನ ಜೊತೆಗೆ ರಾಜಕೀಯ ಸಖ್ಯವನ್ನು ಬೆಳೆಸಿಕೊಂಡು ಅವನ ಹಡಗುಗಳ ಜೊತೆ ಪರ್ಷಿಯಾ, ಅರಬ್ ಮುಂತಾದ ದೇಶಗಳ ಜೊತೆ ವ್ಯಾಪಾರ ವ್ಯವಹಾರವನ್ನು ಪುನರಾರಂಭಿಸಿದಳು. ಭಾರತದ ಪಶ್ಚಿಮ ಸಮುದ್ರದಲ್ಲಿ ವ್ಯವಹಾರಕ್ಕೆ ಪೋರ್ಚುಗೀಸರು ವಿಧಿಸಿದ್ದ ಕರ್ತಾಜ್ (ಅಚಿಡಿಣಚಿz -ಸಮುದ್ರ ವ್ಯವಹಾರಗಳ ತೆರಿಗೆ)ಗೆ ಕವಡೆ ಕಿಮ್ಮತ್ತಿನ ಬೆಲೆಯೂ ಇಲ್ಲದಾಯಿತು. ಮತ್ತೆ ಬಂದರು ದಂಡೆತ್ತಿ ಪೋರ್ಚುಗೀಸರು. ಆ ಮೂರನೇ ಕದನದಲ್ಲಿ ಪೋರ್ಚುಗೀಸರ ಸೇನಾಧಿಕಾರಿಯಾಗಿದ್ದವ ಜಾವೋ ಪಿಕ್ಸಿವೋಟೋ. ರಾಣಿ ಅಬ್ಬಕ್ಕ ಎದೆ ಕವಚವನ್ನು ಧರಿಸಿ ಬಿಳಿ ಕುದುರೆಯ ಮೇಲೆ ಕುಳಿತು, ಸೈನಿಕರಲ್ಲಿ ಯುದ್ದೋತ್ಸಾಹವನ್ನು ತುಂಬುತ್ತಿದ್ದ ರೀತಿಯನ್ನು ಪೋರ್ಚುಗೀಸ್ ಇತಿಹಾಸಕಾರರಾದ ಕೂಟೊ ಮತ್ತು ಫ್ರಾನ್ಸಿಕೋ ಬಹಳವಾಗಿ ಮೆಚ್ಚಿ ದಾಖಲಿಸುತ್ತಾರೆ ಪೋರ್ಚುಗೀಸ್ ಸೈನಿಕರು ಉಳ್ಳಾಲವನ್ನು ಆಕ್ರಮಿಸಿದರು. ಕಂಡ ಕಂಡವರನ್ನು ಸುಟ್ಟರು, ಊರಿಗೆ ಬೆಂಕಿ ಇಟ್ಟರು, ಕ್ರೂರವಾಗಿ ಜನರನ್ನು ಹಿಂಸಿಸ ತೊಡಗಿದರು. ಈ ನಡುವೆ ‘ಉಳ್ಳಾಲದ ಕ್ರೆöÊಸ್ತ ಜೆಸ್ಯೂಟ್ ಪಾದ್ರಿಗಳು ಶಿಲುಬೆ ಹಿಡಿದುಕೊಂಡು ಪೋರ್ಚುಗೀಸ್ ಸೈನಿಕರಿಗೆ ಯುದ್ಧ ನಡೆಸುವಂತೆ ಪ್ಪ್ರೋತ್ಸಾಹಿಸುತ್ತಿದ್ದರು’ ಎಂಬ ಕರಾಳ ಸತ್ಯವನ್ನು ಖ್ಯಾತ ಇತಿಹಾಸಜ್ಞರಾದ ಡಾ.ಕೆ.ಜಿ. ವಸಂತ ಮಾಧವ ಅವರು ಅಬ್ಬಕ್ಕನ ಕುರಿತಾದ ತಮ್ಮ ಸಂಶೋಧನಾ ಗ್ರಂಥದಲ್ಲಿ ಅನಾವರಣಗೊಳಿಸುತ್ತಾರೆ. ಅಬ್ಬಕ್ಕ ಮತ್ತವಳ ಸೈನಿಕರು ಪೋರ್ಚುಗೀಸರಿಗೆ ಬಹಳ ಪ್ರಬಲವಾದ ಪ್ರತಿರೋಧವನ್ನು ತೋರಿದರು. ಅಪಾರವಾದ ಸಾವು ನೋವುಗಳು ಉಳ್ಳಾಲದಲ್ಲಿ ಸಂಭವಿಸುತ್ತಿರುವುದನ್ನು ಕಂಡು ಅಬ್ಬಕ್ಕ ಯುದ್ಧ ತಂತ್ರದ ಭಾಗವಾಗಿ ತನ್ನ ಸೈನಿಕರ ಜೊತೆ ಅಲ್ಲಿಂದ ತಪ್ಪಿಸಿಕೊಂಡು ಪಕ್ಕದ ಬೆಟ್ಟಗಳಲ್ಲಿ ತಲೆಮರಿಸಿಕೊಂಡಳು. ಇತ್ತ ಅಬ್ಬಕ್ಕ ಓಡಿ ಹೋದಳೆಂದು ಪೋರ್ಚುಗೀಸ್ ಸೈನಿಕರು ವಿಜಯೋನ್ಮಾದದಿಂದ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದಾಗ ರಾತ್ರಿಯ ಹೊತ್ತು ಇದ್ದಕ್ಕಿದ್ದಂತೆ ಅಬ್ಬಕ್ಕ ತನ್ನ ಸೈನಿಕರೊಂದಿಗೆ ಸಿಂಹಿಣಿಯAತೆ ಎರಗುತ್ತಾಳೆ. ಸೇನಾಧಿಕಾರಿ ಜಾವೋ ಪಿಕ್ಸಿವೋಟೋ ಅಬ್ಬಕ್ಕನ ಅಬ್ಬರಕ್ಕೆ ಸಿಲುಕಿ ಇಹಲೋಕವನ್ನೇ ತ್ಯಜಿಸುತ್ತಾನೆ. ತಮ್ಮ ಸೇನಾಧಿಕಾರಿಯನ್ನು ಬರ್ಬರವಾಗಿ ಯಮಪುರಿಗಟ್ಟಿದ ಸುದ್ದಿ ತಿಳಿಯುತ್ತಿದ್ದಂತೆ ಪೋರ್ಚುಗೀಸ್ ಸೈನಿಕರು ಅರ್ಧ ದಾರಿಯಲ್ಲಿ ತಮ್ಮ ನೌಕೆಗಳನ್ನು ಗೋವೆಯತ್ತ ತಿರುಗಿಸಿ ಓಡಿದರು, ಅಸಂಖ್ಯ ಪೋರ್ಚುಗೀಸ ಸೈನಿಕರು ಸತ್ತು ಬಿದ್ದರು, ಬದುಕಿ ಉಳಿದವರು ಕಂಗಾಲಾಗಿ ವೈರಿಗಳು ಯಾರು ಎಂದು ತಿಳಿಯಲಾಗದೆ ತಮ್ಮವರಿಗೇ ಗುಂಡು ಹಾರಿಸಿಕೊಂಡರು. ೧೫೭೦ರ ಹೊತ್ತಿಗೆ ಪೋರ್ಚುಗೀಸರನ್ನ ಭಾರತದಿಂದ ಓಡಿಸಲು ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ, ಕಲ್ಲಿಕೋಟೆಯ ಸಾಮುದ್ರಿ ಅರಸ ಮತ್ತಿತರರು ಸೇರಿ ಯೋಜನೆ ಸಿದ್ಧಪಡಿಸುವಾಗ ಛಲದ ಜ್ವಾಲೆಯಂತಿದ್ದ ರಾಣಿ ಅಬ್ಬಕ್ಕಳೂ ಅವರೊಂದಿಗೆ ಸೇರಿಕೊಳ್ಳುತ್ತಾಳೆ. ಪೋರ್ಚುಗೀಸರಿಗೆ ಮತ್ತಷ್ಟು ಸಂಕಟವಾಯಿತು. ಈ ನಡುವೆ ಮಲಬಾರ್ ನೌಕಾಧಿಕಾರಿ ಕುಟ್ಟಿ ಪೋಕರೆಯನ್ನು ಆಹ್ವಾನ ಮಾಡಿ “ಮಂಗಳೂರಿನಲ್ಲಿದ್ದ ಪೋರ್ಚುಗೀಸರ ಕೋಟೆಯನ್ನು ವಶಪಡಿಸಿಕೋ, ಅದಕ್ಕೆ ಬೇಕಾದ ಎಲ್ಲ ಖರ್ಚುಗಳನ್ನು ನಾನು ನೋಡಿಕೊಳ್ಳುತ್ತೇನೆ” ಎಂದು ಆತನನ್ನು ಹುರಿದುಂಬಿಸುತ್ತಾಳೆ. ಇದರಿಂದ ಅಪಮಾನಿತರಾದ ಪೋರ್ಚುಗೀಸರು ಮತ್ತೆ ಬಂದರು ಕದನಕ್ಕೆ. ಎಂದಿನAತೆ ರಾಣಿ ಅಬ್ಬಕ್ಕಳ ವೀರಾವೇಶಕ್ಕೆ, ಅವಳ ಸೈನಿಕರ ಪರಾಕ್ರಮಕ್ಕೆ ಸೀಮೆಯೇ ಇರಲಿಲ್ಲ, ಆದರೆ ತನ್ನ ಗಂಡ ಲಕ್ಷö್ಮಪ್ಪ ಬಂಗರಸ ಪೋರ್ಚುಗೀಸರ ಜೊತೆ ಸೇರಿಕೊಂಡು ನಡೆಸಿದ ದ್ರೋಹದಿಂದಾಗಿ ಅಬ್ಬಕ್ಕ ಸೆರೆಸಿಕ್ಕುವಂತಾಯ್ತು. ಕಲ್ಲಿಕೋಟೆ ಅರಸನ ಸಂಧಾನದಿAದ ಬಿಡುಗಡೆಯಾಗಿ ಬಂದ ಆ ಕಡಲ ತಡಿಯ ಸಿಂಹಿಣಿ, ಮುಂದೆ ೧೫೮೮ರವರೆಗೆ ಉಳ್ಳಾಲದ ರಾಣಿಯಾಗಿ ಅಜೇಯಳಾಗಿ ರಾಜ್ಯಭಾರ ನಡೆಸುತ್ತಾಳೆ. ಮೀಸೆ ತಿರುವುತ್ತಲೇ ಸಿಂಹಾಸನದ ಮೇಲೆ ಕುಳಿತ ಅನೇಕ ರಾಜ ಮಹಾರಾಜರೇ ಆ ಐರೋಪ್ಯರ ಕಾನೂನುಗಳಿಗೆ ಬಗ್ಗಿ ಸಲಾಮು ಹಾಕುತ್ತಿದ್ದ ಕಾಲಘಟ್ಟದಲ್ಲಿ, ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಆ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಆ ವೀರ ಮಾತೆ ಅಬ್ಬಕ್ಕಳನ್ನು ತಾಯಿ ಭಾರತಿ ಪುತ್ರಿಯಾಗಿ ಪಡೆದು ಇಂದಿಗೆ ಐನೂರು ಸಂವತ್ಸರಗಳು.
ಭಾರತವನ್ನು ರತ್ನಗರ್ಭ ವಸುಂಧರಾ ಎಂದೂ ಕರೆಯಲಾಗುತ್ತದೆ. ಏಕೆಂದರೆ ಆಕೆಯ ಮಡಿಲನ್ನು ಶ್ರೀಮಂತಗೊಳಿಸಿದ ಅಸಂಖ್ಯಾತ ಮಹಾನ್ ಪುರುಷರು ಜನಿಸಿ ಈ ನಾಡಿನ ಏಳಿಗೆಗಾಗಿ ಶ್ರಮಿಸಿದ್ದಾರೆ. ಅಂತಹ ಮಹನೀಯರಲ್ಲಿ ಡಾ| ಕೇಶವ್ ಬಲಿರಾಮ್ ಹೆಡಗೇವಾರ್ ಪ್ರಮುಖರು. ರಾಷ್ಟç ದಾಸ್ಯದ ಕಗ್ಗತ್ತಲೆಯಲ್ಲಿದ್ದಾಗ ದಾಸ್ಯದ ಸಂಕೋಲೆಯನ್ನು ಬಿಡಿಸುವುದಕ್ಕಾಗಿ ಕ್ರಾಂತಿಕಾರಿಯಾಗಿ ಹೋರಾಡಿದರು. ಮುಂದೊAದು ದಿನ ಖಂಡಿತವಾಗಿಯೂ ನಮ್ಮದಾಗುವ ಸ್ವಾತಂತ್ರö್ಯವನ್ನು ಉಳಿಸಿಕೊಳ್ಳುವುದಕ್ಕೆ ಸಂಘಟಿತ ಸಮಾಜವನ್ನು ನಿರ್ಮಿಸಬೇಕೆಂದು ರಾಷ್ಟಿçÃಯ ಸ್ವಯಂಸೇವಕ ಸಂಘವನ್ನು ಪ್ರಾರಂಭಿಸಿ ಭಾರತೀಯರನ್ನು ಸಂಘಟಿಸಲು ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟ ರಾಷ್ಟçದ್ರಷ್ಟ ಡಾ| ಕೇಶವ ಬಲಿರಾಮ ಹೆಡಗೇವಾರ್. ೧೮೮೯ರ ಎಪ್ರಿಲ್ ೧ ಯುಗಾದಿಯ ಶುಭದಿನದಂದು ಜನಿಸಿದ ಡಾ.ಕೇಶವ ಬಲಿರಾಮ ಹೆಡಗೇವಾರರಿಗೆ ದೇಶಭಕ್ತಿ ರಕ್ತಗತವಾಗಿತ್ತು. ಬಾಲ್ಯದಲ್ಲೇ ವಿದೇಶಿಗರ ಸಂಭ್ರಮದ ಪ್ರಯುಕ್ತ ನೀಡಲಾಗಿದ್ದ ಸಿಹಿಯನ್ನು ತಿರಸ್ಕರಿಸಿ ಎಳವೆಯಲ್ಲೇ ತಮ್ಮ ಸ್ವಾಭಿಮಾನ ಮೆರೆದಿದ್ದರು. ಸೀತಾಬರ್ಡಿ ಕೋಟೆಯ ಮೇಲೆ ಹಾರಾಡುತ್ತಿದ್ದ ಬ್ರಿಟಿಷರ ಧ್ವಜ ಯೂನಿಯನ್ ಜಾಕ್ ಅನ್ನು ಕೆಳಗಿಳಿಸಲೇಬೇಕೆಂದು ನಿರ್ಧರಿಸಿ, ಸ್ನೇಹಿತರೊಡಗೂಡಿ ತಮ್ಮ ಗುರುವಿನ ಮನೆಯಿಂದ ಸೀತಾಬರ್ಡಿ ಕೋಟೆಗೆ ಸುರಂಗ ತೋಡುವ ಮೂಲಕ ದಾಸ್ಯದಿಂದ ಮುಖ್ತರಾಗಬೇಕು ಎಂಬ ಭಾವ ಬಾಲಕನಾಗಿರುವಾಗಲೇ ಅವರಲ್ಲಿ ಪ್ರಕಟವಾಗಿದ್ದನ್ನು ಗುರುತಿಸಬಹುದು. ಯಾವ ವಂದೇ ಮಾತರಂ ಘೋಷಣೆಯನ್ನು ಕೇಳಿದರೆ ಬ್ರಿಟಿಷರು ಉರಿದುಬೀಳುತ್ತಿದ್ದರೋ, ಅಂತಹ ಘೋಷಣೆಯನ್ನು ತಮ್ಮ ಶಾಲೆ ಆಗಮಿಸಿದ್ದ ಬ್ರಿಟಿಷ್ ಅಧಿಕಾರಿಯ ಎದುರು ಗೆಳೆಯರನ್ನೆಲ್ಲಾ ಸೇರಿಸಿಕೊಂಡು ರಣಕಹಳೆಯಂತೆ ಮೊಳಗಿಸಿದವರು ಇನ್ನೂ ವಿದ್ಯಾರ್ಥಿಯಾಗಿದ್ದ ಕೇಶವ. ಬಾಲ್ಯದಲ್ಲೇ ರಕ್ತಗತವಾಗಿದ್ದ ದೇಶಭಕ್ತಿಯ ಕಾರಣಕ್ಕಾಗಿ ಉನ್ನತ ವ್ಯಾಸಂಗವನ್ನು ನೆಪವನ್ನಾಗಿಟ್ಟುಕೊಂಡು ಅಂದಿನ ಕಾಲಕ್ಕೆ ಕ್ರಾಂತಿಕಾರಿಗಳ ನಾಡಾಗಿದ್ದ ಬಂಗಾಲಕ್ಕೆ ಬಂದರು. ೧೯೨೦ರ ದಶಕದಲ್ಲಿ ಯುಗಾಂತರ, ಅನುಶೀಲನ ಸಮಿತಿಯಂತಹ ಕ್ರಾಂತಿಕಾರಿ ಸಂಘಟನೆಗಳ ಭಾಗವಾಗಿದ್ದಲ್ಲದೇ ಮೊದಲ ದರ್ಜೆಯ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡಿದ್ದರು. ಅವರು ಪಾಂಡುರAಗ ಖಾನಖೋಜೇ, ಅರವಿಂದ ಘೋಷ್, ವಾರೀಂದ್ರ ಘೋಷ್, ತ್ರೆöÊಲೋಕ್ಯನಾಥ ಚಕ್ರವರ್ತಿ ಮೊದಲಾದವರ ಸಹವರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದವರು. ಕಲ್ಕತ್ತೆಯಲ್ಲಿ ವ್ಯಾಸಂಗ ಮುಗಿಸಿ ನಾಗಪುರಕ್ಕೆ ಬಂದ ಡಾಕ್ಟರ್ಜಿ ನಾಗಪುರ ಮತ್ತು ಬಂಗಾಳ ನಡುವಿನ ಕ್ರಾಂತಿಕಾರ್ಯದ ಒಂದು ಬಹು ಮಹತ್ವದ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಭಾರತ ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದರು. ನಾಗಪುರ ಪ್ರದೇಶ ಕಾಂಗ್ರೆಸ್ ಮುಖಂಡರಾಗಿಯೂ ಗುರುತಿಸಿಕೊಂಡಿದ್ದರು. ಅನೇಕ ಸತ್ಯಾಗ್ರಹಗಳಲ್ಲಿ ಭಾಗವಹಿಸಿದ ಕಾರಣ ಕಾರಾಗೃಹಶಿಕ್ಷೆ ಅನುಭವಿಸಿದರು. ಆದರೆ ರಾಜಕೀಯದಲ್ಲಿದ್ದ ಅನೇಕ ಲೋಪಗಳನ್ನು ನೋಡಿದ ಹೆಡಗೇವಾರರಿಗೆ ಇದರಿಂದ ಸಮಾಜಪರಿವರ್ತನೆ ಅಸಾಧ್ಯ ಎನಿಸಿತು. ದೇಶನಿಷ್ಠರಾದ ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲ, ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಸಂಘಟನೆ ಮಾಡುವ ಧೈರ್ಯಶಾಲಿ ಕಾರ್ಯಕರ್ತರು ಇದ್ದರೆ ಮಾತ್ರ ಸ್ವಾತಂತ್ರ್ಯಪ್ರಾಪ್ತಿ ಸಾಧ್ಯ ಹಾಗೂ ಬಂದAತಹದ ಸ್ವಾತಂತ್ರö್ಯದ ರಕ್ಷಣೆ ಸಾಧ್ಯ ಎಂಬುದು ಅವರಿಗೆ ಮನವರಿಕೆಯಾಯಿತು. ಅಂತಹ ವ್ಯಕ್ತಿಗಳನ್ನು ತಯಾರು ಮಾಡಲು ೧೯೨೫ರ ಸೆಪ್ಟೆಂಬರ್ ೨೭ರಂದು ವಿಜಯದಶಮಿಯ ಪರ್ವ ಕಾಲದಲ್ಲಿ ಸಂಘವನ್ನು ಪ್ರಾರಂಭಿಸಿದರು. ವ್ಯಕ್ತಿನಿರ್ಮಾಣದಿಂದ ಮಾತ್ರ ರಾಷ್ಟçನಿರ್ಮಾಣ ಸಾಧ್ಯ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಆದ್ದರಿಂದ ವ್ಯಕ್ತಿನಿರ್ಮಾಣವೇ ಸಂಘದ ಪ್ರಮುಖ ಉದ್ದೇಶವಾಯಿತು. ವ್ಯಕ್ತಿ ಶಾಶ್ವತವಲ್ಲ, ತತ್ತ÷್ವ ಶಾಶ್ವತ ಎನ್ನುವುದನ್ನು ಅರಿತಿದ್ದ ಡಾ.ಹೆಡಗೇವಾರ್ ಅವರು ತ್ಯಾಗ, ಶೌರ್ಯದ ಸಂಕೇತವಾದ ಕೇಸರಿ ಬಣ್ಣದ ‘ಭಗವಾ ಧ್ವಜ’ ವನ್ನು ಸಂಘದ ಗುರುವಾಗಿ ಸ್ವೀಕರಿಸಿದರು. ಇಡೀ ರಾಷ್ಟçವನ್ನು ಸಂಘಟಿತಗೊಳಿಸಬೇಕು ಎಂಬ ಉದ್ದೇಶಕ್ಕಾಗಿ ನಾಗಪುರದ ಅವರ ಮನೆಯ ಮೊದಲನೇ ಮಹಡಿಯಲ್ಲಿ ೧೫-೨೦ ಮಂದಿ ನಿತ್ಯ ಸೇರುವುದರೊಂದಿಗೆ ಶುರುವಾದ ರಾಷ್ಟಿçÃಯ ಸ್ವಯಂಸೇವಕ ಸಂಘ ನಿಧಾನವಾಗಿ ಸಂಘಟನೆಯ ರೂಪು ಪಡೆದು ವಿವಿಧ ಪ್ರಾಂತಗಳನ್ನು ತಲುಪಿತು. ಸಂಘದ ಕೆಲಸಕ್ಕಾಗಿ ತಮ್ಮ ಸರ್ವಸ್ವವನ್ನು ಮುಡಿಪಿಟ್ಟು ತಮ್ಮ ಕುಟುಂಬವನ್ನು ತೊರೆದು ಅನೇಕ ಮಂದಿ ಯುವಕರು ‘ಪ್ರಚಾರಕ’ರಾಗಿ ಹೊರಟರು. ೧೯೪೦ರ ಹೊತ್ತಿಗೆ ಇಡೀ ರಾಷ್ಟçದ ಎಲ್ಲಾ ಪ್ರಾಂತಗಳನ್ನು ರಾಷ್ಟಿçÃಯ ಸ್ವಯಂಸೇವಕ ಸಂಘ ತಲುಪಿತ್ತು. ಅದರ ಮೊದಲ ಸರಸಂಘಚಾಲಕರಾಗಿದ್ದ ಡಾ.ಹೆಡಗೇವಾರ್ ನಿರಂತರವಾಗಿ ದೇಶವ್ಯಾಪಿ ಪ್ರವಾಸಗಳಲ್ಲಿ ನಿರತರಾಗಿದ್ದರು. ಇದು ಅವರ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಿತ್ತು. ಕೊನೆಯದಾಗಿ ಅವರು ಮೇ ೧೬, ೧೯೪೦ ರಂದು ನಾಗಪುರದಲ್ಲಿ ಒಂದು ತಿಂಗಳ ಕಾಲ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಒಂದು ತಿಂಗಳ ಬದಲಾಗಿ ೩ ದಿನಗಳು ಮಾತ್ರ ಭಾಗವಹಿಸಿದ್ದರು. ಜೂನ್ ೯ ರಂದು ಶಿಬಿರದಲ್ಲಿ ಪಾಲ್ಗೊಂಡು ಭಾರತದ ಉದ್ದಗಲದಿಂದ ಬಂದಿದ್ದ ೧೫೦೦ ಸ್ವಯಂಸೇವಕರನ್ನು ಸಂಬೋಧಿಸಿದರು. ಅವರು "ಆರ್ಎಸ್ಎಸ್ ಒಂದು ಹಿಂದೂ ರಕ್ಷಣಾ ದಳವೋ, ಅರೆಸೈನಿಕ ಪಡೆಯೋ ಅಲ್ಲ. ಆದರೆ ಇಡೀ ರಾಷ್ಟçವನ್ನು ಮೌಲ್ಯಾಧಾರಿತ, ವೈಭವಯುತ, ಸರ್ವಾಂಗೀಣ ಉನ್ನತಿಯ ದಾರಿಯಲ್ಲಿ ಕೊಂಡುಹೋಗುವ ಮಹತ್ತರವಾದ ಜವಾಬ್ದಾರಿ ಎಲ್ಲಾ ಸ್ವಯಂಸೇವಕರ ಮೇಲೂ ಇದೆ" ಎಂದರು. ಇದೇ ಅವರ ಕಡೆಯ ಸಾರ್ವಜನಿಕ ಸಂಬೋಧನೆಯಾಗಿತ್ತು. ಹೆಡಗೇವಾರ್ ರವರು ಜೂನ್ ೨೧, ೧೯೪೦ ರಲ್ಲಿ ನಾಗಪುರದಲ್ಲಿ ನಿಧನರಾದರು. ೧೯೪೦ರಲ್ಲಿ ಡಾಕ್ಟರ್ಜೀ ನಿಧನರಾದಾಗ ‘ಕೇಸರಿ' ಪತ್ರಿಕೆ ಹೀಗೆ ಬರೆಯಿತು. “ಸಾಮಾನ್ಯವಾಗಿ ನಾಯಕರಲ್ಲಿ ಕಾಣಿಸದಿರುವ ವಿನಯಶೀಲತೆಯು ಅವರಲ್ಲಿ ತುಂಬಿತ್ತು. ರಾಷ್ಟ್ರಸೇವೆಗಾಗಿ ತಮ್ಮ ಸ್ವಂತ ಪರಿವಾರ ಹಾಗೂ ತಮ್ಮ ಉಜ್ವಲ ಭವಿಷ್ಯವನ್ನೂ ತ್ಯಾಗ ಮಾಡಿದವರು ಅವರು. ಇನ್ನೊಂದು ಮರಾಠಿ ಪತ್ರಿಕೆ 'ಕಾಳೆ' ಹೀಗೆ ಬರೆಯಿತು, "ಭಾರತದ ಸ್ವಾತಂತ್ರಕ್ಕಾಗಿ ಅವರು ನಡೆಸಿದ ಅವಿರತ ಪ್ರಯತ್ನಕ್ಕೆ ಸರಿಸಾಟಿಯಾದುದು ಬೇರೊಂದಿಲ್ಲ." ಅಂತಹ ಮಹಾನ್ ವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ ಹೇಳಿದ ಪ್ರೇರಣಾದಾಯಿ ಮಾತುಗಳನ್ನು ಇಲ್ಲಿ ನೀಡಲಾಗಿದೆ. ೧. ಕೇವಲ ಭೂಮಿಯ ಒಂದು ತುಂಡನ್ನು ರಾಷ್ಟç ಎಂದು ಕರೆಯಲು ಆಗುವುದಿಲ್ಲ. ಒಂದೇ ವಿಚಾರ, ಒಂದೇ ಆಚಾರ, ಒಂದೇ ಸಂಸ್ಕೃತಿ ಹಾಗೂ ಒಂದೇ ಪರಂಪರೆ ಇದ್ದು, ಪುರಾತನ ಕಾಲದಿಂದಲೂ ಒಂದು ಭೂಮಿಯಲ್ಲಿ ನೆಲೆಸಿ ಬಾಳಿರುವ ಜನರೇ ಒಂದು ರಾಷ್ಟçವಾಗುತ್ತಾರೆ. ೨. ನಮ್ಮಲ್ಲಿ ಮೇಲುನೋಟಕ್ಕೆ ಮತಭೇದಗಳು ಎಷ್ಟೇ ಇರಬಹುದು. ಅಷ್ಟಾದರೂ ಹಿಂದುಗಳಾದ ನಾವೆಲ್ಲರೂ ಒಂದೇ ರಾಷ್ಟç. ಸಮಾನ ಆಚಾರ ವಿಚಾರ, ಸಮಾನ ಸಂಸ್ಕೃತಿ, ಸಮಾನ ಪರಂಪರೆ ಮತ್ತು ಸಮಾನ ಧ್ಯೇಯಗಳಿಂದ ಕೂಡಿದವರಲ್ಲಿಯೇ ನಿಜವಾದ ಒಗ್ಗಟ್ಟು ಸಾಧ್ಯ. ನಮ್ಮ ಸಂಘಟನೆಯ ಈ ಅಡಿಪಾಯ ಅತ್ಯಂತ ಶಾಸ್ತçಶುದ್ಧವಾದುದು. ೩. ನಮ್ಮ ಸಮಾಜವನ್ನು ಪೀಡಿಸುತ್ತಿರುವ ಮೂಲ ರೋಗವನ್ನು ನಿವಾರಿಸಲು ನಮ್ಮ ಜನರ ರೋಮ ರೋಮಗಳಲ್ಲಿ ರಾಷ್ಟಿçÃಯತೆಯನ್ನು ತುಂಬಬೇಕು. ಇಡೀ ಸಮಾಜವನ್ನು ಶಿಸ್ತುಬದ್ಧಗೊಳಿಸಬೇಕು. ಚೈತನ್ಯಶಾಲಿಯಾಗಿಸಬೇಕು. ತನ್ಮೂಲಕ ಅದಕ್ಕೆ ಶಾಶ್ವತವಾದ ವಿಜಯಶಾಲಿ ರಾಷ್ಟçದ ಸ್ವರೂಪವನ್ನು ಮತ್ತೊಮ್ಮೆ ನಾವು ತಂದುಕೊಡಬೇಕು. ೪. ನಾವು ದುರ್ಬಲರಾಗಿ ಇರುವ ತನಕ ಸಹಜವಾಗಿಯೇ ಬಲಿಷ್ಠರಿಗೆ ನಮ್ಮ ಮೇಲೆ ಆಕ್ರಮಣ ಮಾಡುವ ಆಸೆಯಾಗುತ್ತದೆ. ನಾವು ಶಕ್ತಿವಂತರಾಗಿ ಇದ್ದಲ್ಲಿ, ನಮ್ಮ ಮೇಲೆ ಆಕ್ರಮಣ ಮಾಡುವ ಧೈರ್ಯವಾಗಲೀ, ನಮ್ಮನ್ನು ಅಪಮಾನಗೊಳಿಸುವ ಸಾಹಸವಾಗಲೀ ಯಾರಿಗೂ ಇರುತ್ತಿರಲಿಲ್ಲ. ೫. ನಮಗೆ ಶಕ್ತಿ ಗಳಿಸಬೇಕೆಂಬ ಆಸೆಯಿದೆ. ಅದನ್ನು ಗಳಿಸುವಂತಹ ಒಂದೇ ದಾರಿಯೂ ತಿಳಿದಿದೆ. ಆದರೆ, ಕೇವಲ ಆಸೆ ಮತ್ತು ತಿಳುವಳಿಕೆಗಳಿಂದ ಮಾತ್ರ ನಾವು ಬಲಶಾಲಿಗಳಾಗಲಾರೆವು. ಅದಕ್ಕಾಗಿ ನಿರಂತರ ಕೆಲಸ ಮಾಡುವ ಅಗತ್ಯವೂ ಇದೆ. ಸಂಘಟನೆಯ ತತ್ವವನ್ನು ನಾವು ಆಚರಣೆಯಲ್ಲಿ ತಂದಾಗ ಮಾತ್ರ ನಮ್ಮಲ್ಲಿ ಶಕ್ತಿ ಬೆಳೆಯಬಲ್ಲದು. ಶಕ್ತಿಯ ನಿರ್ಮಾಣವಾಗುವುದು ಮಾತುಗಳಿಂದಲ್ಲ, ಕೃತಿಯಿಂದ. ೬. ನಮ್ಮ ಪವಿತ್ರವಾದ ಹಿಂದು ಧರ್ಮ, ಹಿಂದು ಸಂಸ್ಕೃತಿಗಳು ಜಗತ್ತಿನಲ್ಲಿ ಗೌರವದಿಂದ ಚಿರಕಾಲ ಬಾಳಬೇಕೆಂಬುದೇ ನಮ್ಮ ಆಸೆ. ಆದರೆ, ನಮ್ಮ ಧರ್ಮ ಸಂಸ್ಕೃತಿಗಳು ಎಷ್ಟೇ ಶ್ರೇಷ್ಠವಾಗಿದ್ದರೂ, ಅವುಗಳನ್ನು ರಕ್ಷಿಸುವಷ್ಟು ಶಕ್ತಿ ನಮ್ಮ ಬಳಿ ಇಲ್ಲದಿದ್ದಲ್ಲಿ ಜಗತ್ತು ಅವುಗಳನ್ನು ಗೌರವಿಸುವುದಿಲ್ಲ. ೭. ನಾವು ಬಲಿಷ್ಠರಾಗಬಯಸುವುದು ಹಿಂಸೆ ಮಾಡುವುದಕ್ಕಲ್ಲ. ಆದರೆ, ಪ್ರಪಂಚದಲ್ಲಿನ ಹಿಂಸೆ, ಅತ್ಯಾಚಾರಗಳನ್ನು ಎಂದೆAದಿಗೂ ಇಲ್ಲದಂತೆ ಮಾಡುವುದಕ್ಕಾಗಿ. ೮. ತತ್ವ ಇರುವುದು ಪೊಳ್ಳು ಹರಟೆಗಾಗಿ ಅಲ್ಲ, • ವ್ಯವಹಾರದಲ್ಲಿ ತರುವುದಕ್ಕಾಗಿ. ತತ್ವದ ಆಚರಣೆಯೇ ವ್ಯವಹಾರ. ತತ್ವಕ್ಕೆ ಹೊಂದುವ ಬಾಳ್ವೆಯೇ ಧೈಯ ಪಥದಲ್ಲಿ ಮುಂದೆ ಸಾಗಲು, ಕೊನೆಯಲ್ಲಿ ಅಂತಿಮ ಗುರಿ ಸೇರಲು ಸಹ ನೆರವಾಗುವಂತಹದು. ೯. ತತ್ವಕ್ಕೆ ಮಹತ್ವ ಬರುವುದು ಅದನ್ನು ಪಟ್ಟಾಗಿ, ಛಲದಿಂದ ಎತ್ತಿ ಹಿಡಿದಾಗಲೇ. ತತ್ವವನ್ನು ಸಮರ್ಥಿಸುವವರು ಆಗಾಗ್ಗೆ ಏರಿಳಿತಕ್ಕೆ ಒಳಗಾಗಬಹುದು. ಆದರೆ ತತ್ವ ಮಾತ್ರ ಶಾಶ್ವತವಾದುದು. ೧೦. ಸಿದ್ಧಾಂತ ಮತ್ತು ವ್ಯವಹಾರಗಳ ಸಮನ್ವಯವನ್ನು ಕುಶಲತೆಯಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮನುಷ್ಯತ್ವ. ೧೧. ನಮ್ಮ ಮನಸ್ಸಿನ ದುರ್ಬಲತೆಯೇ ಎಲ್ಲಕ್ಕೂ ಹೆಚ್ಚು ಅಪಾಯಕಾರಿ. ಅದೇ ಎಲ್ಲಕ್ಕಿಂತ ದೊಡ್ಡ ದೋಷ. ನಮ್ಮ ಸಾಮರ್ಥ್ಯವನ್ನು ಅರಿತು, ಎಚ್ಚರಗೊಂಡು ನಾವು ಸಂಘಟಿತರಾದಾಗ ನಮ್ಮ ಶಕ್ತಿಯು ವಿರಾಟರೂಪ ತಾಳಬಲ್ಲದು. ಆಗ ಯಾವುದೇ ಕೆಲಸವೂ ನಮಗೆ ಅಸಾಧ್ಯ ಎನಿಸದು. ೧೨. ರಾಷ್ಟçದ ಜೀವನಕ್ರಮವನ್ನು ಸರಿಯಾಗಿ ನಡೆಸಬೇಕಾದರೆ ಅದಕ್ಕೆ ಅಸೀಮ ಪರಿಶ್ರಮ ಅಗತ್ಯ. ಪ್ರಯತ್ನವೇ ಇಲ್ಲದೆ ಸಿದ್ದಿ ಎಲ್ಲಿಯದು? ೧೩. ಮನುಷ್ಯನು ತನ್ನದೊಂದು ಚಿಕ್ಕ ಕುಟುಂಬವನ್ನು ಸಹ ಪ್ರಯತ್ನವಿಲ್ಲದೆ ನಿಭಾಯಿಸಲಾರನು. ಹಾಗಿದ್ದ ಮೇಲೆ ರಾಷ್ಟ್ರದ ವಿಶಾಲ ಜೀವನಕ್ರಮವು ನಮ್ಮ ಪ್ರಯತ್ನಗಳಿಲ್ಲದೆಯೇ, ತನ್ನಷ್ಟಕ್ಕೆ ಚಿರಂತನವಾಗಿ ನಡೆಯುತ್ತಾ ಹೋಗುವುದೆಂದು ಅಪೇಕ್ಷಿಸುವುದು ಮೂರ್ಖತನ, ವಿಶೇಷ ಪುರುಷಾರ್ಥವಿಲ್ಲದೆ ಹಿಂದು ರಾಷ್ಟçವನ್ನು ಅಮರಗೊಳಿಸುವುದು ಅಶಕ್ಯ. ೧೪. ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿಯೂ ಯಾರು ಕೆಲಸ ಮಾಡುತ್ತಾರೋ, ಅಂತಹರೇ ಕೊನೆಯಲ್ಲಿ ಗೆಲ್ಲುತ್ತಾರೆ. ಅಂತಹರ ಹೆಸರೇ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವುದು. ೧೫. ಕೇವಲ ಸದಾಶಯ ಇದ್ದ ಮಾತ್ರಕ್ಕೆ ಯಾವುದೇ ಕೆಲಸವಾಗದು. ಪ್ರತ್ಯಕ್ಷ ಪರಮಾತ್ಮನು ಸಹ ಹತ್ತು ಅವತಾರಗಳನ್ನು ಎತ್ತಿ ಮನುಷ್ಯಶಕ್ತಿಯ ಮೂಲಕವೇ ತನ್ನ ಕಾರ್ಯ ಸಾಧಿಸಬೇಕಾಯಿತು.
ಭರತವರ್ಷದ ಐತಿಹ್ಯ, ಅದರಾಧ್ಯಾತ್ಮಿಕತೆಯ ಮೂಲ ಸಹಸ್ರಾರು ವರ್ಷಗಳಷ್ಟು ಹಿಂದಿನದ್ದಾಗಿದೆ. “ನ ಆದಿ ನ ಅಂತ್ಯ'' ಎಂಬAತೆ ಆದಿಯೂ ಇಲ್ಲದ ಅಂತ್ಯವೂ ಇಲ್ಲದ ಆಧ್ಯಾತ್ಮಿಕತೆಯ ಪ್ರತೀಕವಾಗಿ ಇಲ್ಲಿನ ಆಚರಣೆಗಳು ನಿಂತಿವೆ. ಈ ಎಲ್ಲ ಆಚರಣೆಗಳ ಹರಿವೂ ಕೂಡ ಸೃಷ್ಟಿ, ಸ್ಥಿತಿ ಮತ್ತು ಲಯದ ಪ್ರತೀಕವಾಗಿರುವ ಋತದ ಚಲನೆಗನುಸಾರವಾಗಿ ಇರುತ್ತದೆಂಬುದು ಮಗದೊಂದು ವಿಶೇಷ. ಇದರ ಭಾಗವಾಗಿಯೇ ೨೦೨೫ರ ಮಹಾಕುಂಭಮೇಳವನ್ನು ಕೂಡ ನಾವು ಕಾಣಬಹುದಾಗಿದೆ. ಒಂದೆಡೆ ವಿಶ್ವದ ದಿಗ್ಗಜ ರಾಷ್ಟçಗಳ ಅನೇಕ ಗಣ್ಯವ್ಯಕ್ತಿಗಳು, ಅಲ್ಲಿನ ಸಮುದಾಯಗಳು ಸೇರಿದಂತೆ ಎಲ್ಲರ ಕಣ್ಮನಗಳನ್ನು ತನ್ನತ್ತ ಸೆಳೆದಿರುವ ‘ಮಹಾಕುಂಭ' ಮತ್ತೊಂದೆಡೆ ತನ್ನೊಡಲಲ್ಲಿ ‘ಅಧ್ಯಾತ್ಮ ಸಾಧನೆಯ' ಇಚ್ಛೆಯನ್ನು ಹೊತ್ತುಬರುವ ಅನೇಕ ಜೀವಾತ್ಮಗಳಿಗೆ ಮಡಿಲಾಗಿ ನಿಂತಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ೧೪೪ ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು ೪೫ ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಮಹಾಕುಂಭ ಎಂದರೇನು? ಮಹಾಕುಂಭವನ್ನು ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ವಿಶ್ವದ ಅತಿದೊಡ್ಡ ಮೇಳ ಎಂದು ಹೇಳಲಾಗುತ್ತದೆ. ಈ ಮೇಳ ಭಾರತದ ೪ ಸ್ಥಳಗಳಲ್ಲಿ (ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿ) ಮಾತ್ರ ನಡೆಯುತ್ತದೆ. ಮಹಾಕುಂಭದ ಸಮಯದಲ್ಲಿ ನಾಗಾ ಸಾಧುಗಳು ಮೊದಲು ಸ್ನಾನ ಮಾಡುತ್ತಾರೆ. ಮಹಾಕುಂಭದಲ್ಲಿ ಸ್ನಾನ ಮಾಡಿದ ನಂತರ ವ್ಯಕ್ತಿಯ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಎಂಬ ನಂಬಿಕೆ ಇದೆ. ಹಿಂದೂ ಗ್ರಂಥಗಳಲ್ಲಿ, ಕುಂಭಮೇಳವನ್ನು ‘ಅಮರತ್ವದ ಜಾತ್ರೆ’ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ಭಕ್ತರು ತಮ್ಮ ಆತ್ಮವನ್ನು ಶುದ್ಧೀಕರಿಸಲು ಈ ಪವಿತ್ರ ಸ್ಥಳದಲ್ಲಿ ಸ್ನಾನ ಮಾಡಲು ಬರುತ್ತಾರೆ, ಪ್ರಪಂಚದಾದ್ಯAತ ಇರುವ ಸಂತರು ಮತ್ತು ಭಕ್ತರಲ್ಲಿ ಕುಂಭಮೇಳದಲ್ಲಿ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಹರಿದ್ವಾರ, ಉಜ್ಜೆöÊನಿ, ಪ್ರಯಾಗರಾಜ್ ಮತ್ತು ನಾಸಿಕ್ನಲ್ಲಿ ಪ್ರತಿ ೩ ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯನ್ನು ಕುಂಭ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಹರಿದ್ವಾರ ಮತ್ತು ಪ್ರಯಾಗ್ರಾಜ್ನಲ್ಲಿ ಪ್ರತಿ ೬ ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧ ಕುಂಭ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ಪ್ರಯಾಗರಾಜ್ನಲ್ಲಿ ಪ್ರತಿ ೧೨ ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಎಂದು ಕರೆಯಲಾಗುತ್ತದೆ. ಇದಲ್ಲದೇ ಪ್ರಯಾಗರಾಜ್ನಲ್ಲಿ ೧೪೪ ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಮಹಾಕುಂಭಮೇಳವೆAದು ಕರೆಯಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಪ್ರತೀ ೧೪೪ ವರ್ಷಗಳಿಗೊಮ್ಮೆ ಪ್ರಯಾಗರಾಜ್ನಲ್ಲಿ ಮಹಾಕುಂಭವನ್ನು ಆಯೋಜಿಸಲಾಗುತ್ತದೆ. ೧೪೪ ಹೇಗೆ? ೧೨ ರಿಂದ ೧೨ನ್ನು ಗುಣಿಸಿದಾಗ ೧೪೪ ಆಗುತ್ತದೆ. ವಾಸ್ತವವಾಗಿ, ಕುಂಭ ಕೂಡ ಹನ್ನೆರಡು. ಅದರಲ್ಲಿ ನಾಲ್ಕು ಭೂಮಿಯಲ್ಲಿವೆ, ಉಳಿದ ಎಂಟು ಸ್ವರ್ಗದಲ್ಲಿವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಪ್ರತಿ ೧೪೪ ವರ್ಷಗಳಿಗೊಮ್ಮೆ ಮಹಾಕುಂಭವನ್ನು ಪ್ರಯಾಗರಾಜ್ನಲ್ಲಿ ಆಯೋಜಿಸಲಾಗುತ್ತದೆ. ಮಹಾಕುಂಭದ ಮಹತ್ವವನ್ನು ಇತರ ಕುಂಭಗಳಿಗಿAತ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಕುಂಭಮೇಳದ ಇತಿಹಾಸ ಕೆಲ ಮೂಲಗಳ ಪ್ರಕಾರ ಕುಂಭಮೇಳವನ್ನು ಆಯೋಜಿಸಿದ ಇತಿಹಾಸವು ೮೫೦ ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ. ಇದನ್ನು ಆದಿ ಶಂಕರರು ಪ್ರಾರಂಭಿಸಿದರು. ಅದೇ ಸಮಯದಲ್ಲಿ, ಸಮುದ್ರ ಮಥನದ ಕಥೆಯ ಪ್ರಾರಂಭದಿAದಲೂ ಕುಂಭವನ್ನು ಆಯೋಜಿಸಲಾಗಿದೆ ಎಂದು ಕೆಲವು ಕಥೆಗಳಲ್ಲಿ ಹೇಳಲಾಗಿದೆ. ಕೆಲವು ವಿದ್ವಾಂಸರು ಇದು ಗುಪ್ತ ಕಾಲದ ಆರಂಭ ಎಂದು ನಂಬುತ್ತಾರೆ. ಆದರೆ ಹರ್ಷವರ್ಧನ ಚಕ್ರವರ್ತಿಯ ಆಳ್ವಿಕೆ ಕಾಲದಿಂದಲೂ ಪುರಾವೆಗಳು ಲಭ್ಯವಿದೆ. ಪುರಾಣ ಕಥನಗಳ ಪ್ರಕಾರ, ದೇವರುಗಳು ಮತ್ತು ಅಸುರರು ಒಟ್ಟಾಗಿ ಸಮುದ್ರವನ್ನು ಮಥಿಸಿದರು. ಈ ಮಥನದ ಸಮಯದಲ್ಲಿ ಅನೇಕ ರತ್ನಗಳು, ಅಪ್ಸರೆಯರು, ಪ್ರಾಣಿಗಳು, ವಿಷ ಮತ್ತು ಅಮೃತ ಸೇರಿದಂತೆ ಇತ್ಯಾದಿ ವಸ್ತುಗಳು ಹೊರಬಂದವು. ದೇವರುಗಳು ಮತ್ತು ಅಸುರರ ನಡುವಿನ ಸಂಘರ್ಷವು ಅಮೃತದಿಂದ ಪ್ರಾರಂಭವಾಯಿತು. ಈ ಹೋರಾಟದ ಮಧ್ಯೆ, ಕೆಲವು ಹನಿ ಅಮೃತವು ಭೂಮಿಯ ಮೇಲೆ ಬಿದ್ದಿತು. ಅಮೃತದ ಹನಿಗಳು ಯಾವೆಲ್ಲ ಸ್ಥಳಗಳಲ್ಲಿ ಬಿದ್ದವೋ ಅಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿತ್ತು. ಪ್ರಯಾಗ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಗಳಲ್ಲಿ ಅಮೃತದ ಹನಿಗಳು ಬಿದ್ದಿದ್ದವು. ಇನ್ನು ಅಮೃತವನ್ನು ಎಳೆಯುವ ಸಂದರ್ಭದಲ್ಲಿ ಚಂದ್ರನು ಅಮೃತವನ್ನು ಇತರೆಡೆಗೆ ಹರಿಯದಂತೆ ಉಳಿಸಿದ್ದನಂತೆ. ಆ ನಂತರ ಗುರು ಬೃಹಸ್ಪತಿ ದೇವನು ಚಿತಾಭಸ್ಮವನ್ನು ಒಂದೆಡೆ ಯಾರಿಗೂ ಕಾಣದಂತೆ ಎತ್ತಿಟ್ಟಿದ್ದ, ಸೂರ್ಯದೇವ ಕಲಶ ಸ್ಪೋಟಿಸದಂತೆ ರಕ್ಷಿಸಿದನು ಮತ್ತು ಶನಿದೇವ ಇಂದ್ರನ ಕೋಪವನ್ನು ನಿಯಂತ್ರಿಸಿದನು. ಆದ್ದರಿಂದ, ಈ ಗ್ರಹಗಳ ಸಂಯೋಜನೆಯು ಒಂದು ರಾಶಿಚಕ್ರದಲ್ಲಿದ್ದಾಗ ಮಹಾ ಕುಂಭವನ್ನು ಆಯೋಜಿಸಲಾಗುತ್ತದೆ. ಏಕೆಂದರೆ ಅಮೃತ ಕಲಶವು ಈ ಗ್ರಹಗಳ ಸಂಯೋಜನೆಯಿAದ ರಕ್ಷಿಸಲ್ಪಟ್ಟಿತು ತದನಂತರ ದೇವರುಗಳು ವಿಷ್ಣುವಿನ ಸಹಾಯದಿಂದ ಅಮೃತವನ್ನು ಸೇವಿಸಿದರೆಂಬ ನಂಬಿಕೆಯುAಟು. ಇನ್ನು ವೈದಿಕ ಜ್ಯೋತಿಷ್ಯದ ಪ್ರಕಾರ, ಬೃಹಸ್ಪತಿ ಅಥವಾ ಗುರುವು ಒಂದೇ ರಾಶಿಯಲ್ಲಿ ಸುಮಾರು ಒಂದು ವರ್ಷಗಳ ಕಾಲ ವಾಸಿಸುತ್ತಾರೆ ಮತ್ತು ಇನ್ನೊಂದು ರಾಶಿಚಕ್ರವನ್ನು ಪ್ರಯಾಣಿಸಲು ಅವರಿಗೆ ೧೨ ವರ್ಷಗಳು ಬೇಕಾಗುತ್ತದೆ. ಆದ್ದರಿಂದ ೧೨ ವರ್ಷಗಳ ನಂತರ ಈ ಪವಿತ್ರ ಸ್ಥಳಗಳಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಕ್ಕೆ ನಿಗದಿಯಾದ ವಿವಿಧ ಸ್ಥಳಗಳಲ್ಲಿ ಜಾತ್ರೆ ನಡೆಯುತ್ತದೆ. ಗುರುವು ಕುಂಭರಾಶಿಯಲ್ಲಿದ್ದಾಗ ಮತ್ತು ಸೂರ್ಯ ಮೇಷ ರಾಶಿಯಲ್ಲಿದ್ದಾಗ, ಕುಂಭ ಮೇಳದ ಸಂಘಟನೆ ಪ್ರಾರಂಭವಾಗುತ್ತದೆ. ಶಾಹಿ ಸ್ನಾನದ ಮಹತ್ವ ಮಹಾಕುಂಭ ಮೇಳವು ಜಗತ್ತಿನ ಅತಿದೊಡ್ಡ ಸಾರ್ವಜನಿಕ ಸಮಾರಂಭ ಎಂದು ಖ್ಯಾತಿ ಪಡೆದಿದೆ. ಇದರಲ್ಲಿ ಶಾಹಿ ಸ್ನಾನವು ಪ್ರಮುಖವಾಗಿದೆ. ಕಾಶಿಯ ಪೀಠಾಧಿಪತಿಗಳು, ಸಂತರು, ಸನ್ಯಾಸಿಗಳು ತಮ್ಮ ಅನುಯಾಯಿಗಳೊಂದಿಗೆ ಪೂರ್ವಕಾಲದ ಸಾಂಸ್ಕೃತಿಕ ರೀತಿ-ನೀತಿಗಳನ್ನು ಪಾಲಿಸುತ್ತಾ ಪವಿತ್ರ ಸ್ನಾನವನ್ನು ಮಾಡುತ್ತಾರೆ. ಮಹಾಕುಂಭದ ಸಮಯದಲ್ಲಿ ಕೆಲವು ಪ್ರಮುಖ ದಿನಾಂಕಗಳಿವೆ. ಅವು ಧಾರ್ಮಿಕ ದೃಷ್ಟಿಕೋನದಿಂದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಪ್ರಮುಖ ದಿನಾಂಕಗಳಲ್ಲಿ ವಿವಿಧ ಋಷಿಗಳು ಮತ್ತು ಸಂತರು ತಮ್ಮ ಶಿಷ್ಯರೊಂದಿಗೆ ಭವ್ಯವಾದ ಮೆರವಣಿಗೆಗಳನ್ನು ನಡೆಸುತ್ತಾರೆ. ಅವರು ಕುಂಭಮೇಳದ ಆರಂಭವನ್ನು ಸೂಚಿಸುವ ‘ಶಾಹಿ ಸ್ನಾನ' ಎಂದೂ ಕರೆಯಲ್ಪಡುವ ಭವ್ಯವಾದ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಶಾಹಿ ಸ್ನಾನ ಈ ಮಹಾಕುಂಭಮೇಳದ ಪ್ರಮುಖ ಆಕರ್ಷಣೆಯಾಗಿದ್ದು, ಇದಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಶಾಹಿ ಸ್ನಾನದ ಸಂದರ್ಭದಲ್ಲಿ ಜನರು ಶಾಹಿ ಸ್ನಾನವನ್ನು ತೆಗೆದುಕೊಳ್ಳುವ ಸಂತರ ಆಶೀರ್ವಾದ ಪಡೆಯುತ್ತಾರೆ. ಮಹಾಕುಂಭದ ಮಹಾ ಆಯೋಜನೆ ಭಾರತದ ಪುರಾತನ ಸಾಂಸ್ಕೃತಿಕ, ಧಾರ್ಮಿಕ ಸಂಪ್ರದಾಯಗಳನ್ನು ಮಹಾಕುಂಭ ಮೇಳ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚಿಗೆ ಪ್ರಯಾಗ್ ರಾಜ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದರು. ತಮ್ಮ ಪುರಾತನ ಸಂಪ್ರದಾಯಗಳು ಹಾಗು ಸಾಂಸ್ಕೃತಿಕ ಬೇರುಗಳ ಜೊತೆಗೆ ಮರು ಸಂಬAಧ ಬೆಳೆಸಲು ಮಹಾಕುಂಭ ಮೇಳ ಜಗತ್ತಿನಾದ್ಯಂತದ ಜನರಿಗೆ ಅವಕಾಶ ಮಾಡಿಕೊಡುತ್ತದೆ. ಈ ಸಾಲಿನ ಮಹಾಕುಂಭ ಅದ್ದೂರಿತನ, ದೈವಿಕತೆ ಮತ್ತು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿ ಮೇಳೈಸಿದೆ. ಇದು ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಆಗಿರುವುದರಿಂದ ಮೇಳಕ್ಕೆ ಆಗಮಿಸುವ ಭಕ್ತರಿಗಾಗಿ ವಿವಿಧ ಕಾರ್ಯಕ್ರಮಗಳ ವಿವರ ತಿಳಿಯಲು ಸರಿಸುಮಾರು ೫೦ ಸಾವಿರ ಕಿಖ ಕೋಡ್ಗಳ ರಚನೆ ಮಾಡಲಾಗಿದೆ. ಇನ್ನು ೨೪ ಗಂಟೆಗಳ ಕಾಲ ನೀರೊಳಗಿನಿಂದ ಡ್ರೋಣ್ಗಳಿಂದ ನಿರಂತರ ಕಣ್ಗಾವಲು ಪಿಎಸಿ, ಎನ್ಡಿಆರ್ಎಫ್, ಎಟಿಎಸ್, ಎನ್ಎಸ್ಜಿ ಸೇರಿ ೪೫ ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯ ನಿಯೋಜನೆ ಸೇರಿದಂತೆ ೩,೦೦೦ಕ್ಕೂ ಹೆಚ್ಚು ಕ್ಯಾಮೆರಾಗಳ ಅಳವಡಿಕೆ ನೋಡಿದರೆ ಉತ್ತರಪ್ರದೇಶ ಸರ್ಕಾರವು ಸುಸಜ್ಜಿತ ಭದ್ರತೆಗೆ ಒತ್ತು ನೀಡಿರುವುದು ಕಂಡುಬರುತ್ತದೆ. ೧.೫ ಲಕ್ಷಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣ, ಭದ್ರತೆಯಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳ (ಂI) ಪರಿಣಾಮಕಾರಿ ಬಳಕೆ, ಸಂಗಮದಲ್ಲಿ ಭಕ್ತರ ಓಡಾಟಕ್ಕೆ ೩೦ ಪಾಂಟೂನ್ ಸೇತುವೆಗಳ ನಿರ್ಮಾಣ, ೧೦ ಸಾವಿರ ಎಕರೆ ಪ್ರದೇಶಗಳಲ್ಲಿ ಅಭೂತಪೂರ್ವ ವ್ಯವಸ್ಥೆಯಾಗಿದ್ದು, ವಿಶೇಷವಾಗಿ ಶುಚಿತ್ವ, ಭದ್ರತೆಗೆ ಪ್ರಾಶಸ್ತö್ಯ ನೀಡಿ ಆಧುನಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಶೌಚಾಲಯಗಳ ಶುಚಿತ್ವವನ್ನು ನಿರ್ವಹಿಸಲು ಭಕ್ತರ ಅನುಕೂಲಕ್ಕಾಗಿ ಡಿಜಿಟಲ್ ಟೂರಿಸಂ ಮ್ಯಾಪ್ ಇದೆ. ಸ್ಮಾರ್ಟ್ಫೋನ್ಗಳ ಮೂಲಕ ಕೃತಕ ಬುದ್ಧಿಮತ್ತೆ ಆಧಾರಿತ ಭದ್ರತಾ ವ್ಯವಸ್ಥೆಯನ್ನು ಸಂಯೋಜಿಸಲಾಗಿದೆ ಎಂದು ಸಿಎಂ ಯೋಗಿ ಹೇಳಿರುವರು. ಅದೇ ರೀತಿ ಮಹಾ ಕುಂಭ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಇದು ಸಾಮಾಜಿಕ ಮತ್ತು ಆಧ್ಯಾತ್ಮಿಕ ಒಗ್ಗಟ್ಟಿನ ಸಂಕೇತ ಎಂದೂ ಅವರು ಬಣ್ಣಿಸಿದ್ದಾರೆ. ಈ ಕಾರ್ಯಕ್ರಮವು ಪ್ರಯಾಗ್ರಾಜ್ ಅನ್ನು ವಿಶ್ವದ ಅತಿ ದೊಡ್ಡ ತಾತ್ಕಾಲಿಕ ನಗರವನ್ನಾಗಿಯೂ ಮಾರ್ಪಡಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟçದ ಐಕ್ಯತೆಗೆ ಬುನಾದಿ ಇನ್ನು ೨೧ನೇ ಶತಮಾನದಲ್ಲಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಭರತವರ್ಷದಾಧ್ಯಾತ್ಮಿಕ ಐಕ್ಯತಾರೂಪವಾಗಿ ಮಹಾಕುಂಭವನ್ನು ಪರಿಗಣಿಸಬೇಕಾಗಿದೆ. ಎಲ್ಲ ಜಾತಿ, ಧರ್ಮ, ಸಂಪ್ರದಾಯ ಮತ್ತು ಪಂಥಗಳ ಭೇದವನ್ನು ಮರೆತು ರಾಷ್ಟçದ ಆಧ್ಯಾತ್ಮಿಕ ಉತ್ಥಾನಕ್ಕೆ ಬುನಾದಿಯಂತಿರುವ ಈ ಪುಣ್ಯಮೇಳವನ್ನು ಪ್ರತಿಯೊಬ್ಬ ನಾಗರಿಕನೂ ಕೂಡ ಸ್ವಾಗತಿಸಬೇಕು. ೨೦೨೪ರ ಜನವರಿ ೨೨ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ನಂತರದಲ್ಲಿ ನಡೆಯುತ್ತಿರುವ ಮೊದಲ ಕುಂಭ ಮೇಳ ಇದಾಗಿದ್ದು ಸರ್ವರಿಗೂ ಶುಭವನ್ನುಂಟುಮಾಡಲಿ.
ನಿಂತ ನೆಲ ಬಿಡದೇ ಒಗ್ಗಟ್ಟಾಗಿ ಪ್ರತಿರೋಧ ತೋರುತ್ತಿರುವ ಅಲ್ಪಸಂಖ್ಯಾತ ಹಿಂದುಸಮಾಜ ಪ್ರತ್ಯೇಕ ಮುಸ್ಲಿಂ ದೇಶ ಬೇಕೆಂಬ ಒತ್ತಡಕ್ಕೆ ಅಂದಿನ ನಾಯಕರು ಬಗ್ಗಿದ ಪರಿಣಾಮ 1947ರಲ್ಲಿ ಪಾಕಿಸ್ತಾನ ಎಂಬ ಮುಸ್ಲಿಂ ದೇಶ ಹುಟ್ಟಿಕೊಂಡಿತು. ಇಂದಿನ ಬಾಂಗ್ಲಾದೇಶವೂ ಪಾಕಿಸ್ತಾನದಲ್ಲೇ ಇತ್ತು. ಆದರೂ, ಪೂರ್ವದಲ್ಲಿನ ಬಾಂಗ್ಲಾಕ್ಕೂ, ಪಶ್ಚಿಮದ ಸಿಂಧ್, ಪಂಜಾಬ್ ಮೊದಲಾದ ಭಾಗಗಳಿಗೂ ಸಾಂಸ್ಕೃತಿಕವಾಗಿಯೂ, ಭಾಷೆಯ ದೃಷ್ಟಿಯಿಂದಲೂ ತಾಳಮೇಳ ಹೊಂದಾಣಿಕೆಯಾಗುತ್ತಿರಲಿಲ್ಲ. ಹಾಗಾಗಿ, ಬಾಂಗ್ಲಾದಲ್ಲಿ ಪುನಃ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು. 1971 ರಲ್ಲಿ ನಡೆದ ಬಾಂಗ್ಲಾ ಮುಕ್ತಿ ಆಂದೋಲನದಲ್ಲಿ ಹೋರಾಟಗಾರರನ್ನು ಬಗ್ಗುಬಡಿಯಲು ಪಾಕಿಸ್ತಾನ ಸೈನ್ಯಬಲ ಪ್ರಯೋಗಿಸಿದಾಗ, ಭಾರತ ರಣಕಣಕ್ಕಿಳಿದು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶ ಎನ್ನುವ ಹೊಸ ದೇಶದ ಉದಯಕ್ಕೆ ಕಾರಣವಾಯಿತು. ಹಾಗೆ ನೋಡಿದರೆ, ಭಾರತವೇ ಬಾಂಗ್ಲಾದೇಶದ ಜನಕ ಎನ್ನಲು ಅಡ್ಡಿಯಿಲ್ಲ. ಬಾಂಗ್ಲಾದಲ್ಲಿ ಹಿಂದು ದಮನದ ಇತಿಹಾಸ ಈ ಆಂದೋಲನದ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಬಲಿಯಾದದ್ದು ಮಾತ್ರ ಹಿಂದುಗಳೇ. ಲಕ್ಷಾಂತರ ಹಿಂದುಗಳ ಮಾರಣಹೋಮ ಬಾಂಗ್ಲಾದಲ್ಲಿ ನಡೆಯಿತು. ಎಷ್ಟು ಹಿಂದು ಮನೆಗಳಿಗೆ ಬೆಂಕಿಯಿಟ್ಟರು, ಎಷ್ಟು ಹಿಂದು ಮಹಿಳೆಯರ ಮೇಲೆ ಅತ್ಯಾಚಾರವಾಯಿತು ಎಂಬುದರ ಲೆಕ್ಕವಿಟ್ಟವರು ಯಾರೂ ಇಲ್ಲ. ಆಗ ದೇಶ ಬಿಟ್ಟು ಬಂದ ಹಿಂದುಗಳಿಗೆ ಭಾರತ ಸಹಜ ಆಶ್ರಯತಾಣವಾಯಿತು. ಹಾಗೆ ಬಂದ ನಿರಾಶ್ರಿತ ಹಿಂದುಗಳ ಶಿಬಿರಗಳು ಭಾರತದಲ್ಲಿ ಅನೇಕ ಕಡೆ ಇವೆ. ನಮ್ಮ ಕರ್ನಾಟಕದ ಸಿಂಧನೂರಿನ ಬಳಿಯೂ ಅಂತಹ ನಿರಾಶ್ರಿತರ ಶಿಬಿರವಿದೆ. ಅಲ್ಲಿ ಈಗ ಇರುವವರ ಸಂಖ್ಯೆ 30,000 ದಷ್ಟು. ಅವರು ಅನುಭವಿಸಿದ ನರಕಯಾತನೆ ಕೇಳಿದರೆ, ಎಂತಹವರಿಗೂ ಕಣ್ಣೀರು ಬರದಿರದು! ಅಳಿದುಳಿವರು ಹೇಳಿದ ಕಥೆ ಪ್ರಪಂಚಕ್ಕೆ ಗೊತ್ತಿದೆ ಅಷ್ಟೇ. ತಮ್ಮ ನೋವಿನ ಕಥೆಯೊಂದಿಗೇ ಮಣ್ಣಾಗಿ ಹೋದವರು ಅದೆಷ್ಟೋ ಮಂದಿ. 1951 ರ ಜನಗಣತಿಯ ಪ್ರಕಾರ ಬಾಂಗ್ಲಾದೇಶದಲ್ಲಿದ್ದ ಹಿಂದುಗಳ ಜನಸಂಖ್ಯೆ ಶೇ, 22 ರಷ್ಟು. ಈಗ ಅಲ್ಲಿನ ಹಿಂದುಗಳ ಜನಸಂಖ್ಯೆ ಶೇ. 7 ಮಾತ್ರ ಎಂದರೆ, ಉಳಿದ ಹಿಂದುಗಳು ಎಲ್ಲಿ ಹೋದರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಬೇರೆ ಬೇರೆ ದೇಶಕ್ಕೆ ವಲಸೆ ಹೋದ ಹಿಂದುಗಳು ಕೆಲವರಾದರೆ, ಪ್ರತಿನಿತ್ಯ ಎಂಬಂತೆ ನಡೆದ ಹಿಂಸಾಚಾರಕ್ಕೆ ಬಲಿಯಾದವರು ಇನ್ನು ಕೆಲವರು. ಮುಸ್ಲಿಂ ದೇಶದಲ್ಲಿನ ಹಿಂದುಗಳ ದಯನೀಯ ಸ್ಥಿತಿ ತಮ್ಮ ಮಕ್ಕಳಿಗೆ ಬರದಿರಲಿ ಎಂಬ ಕಾರಣಕ್ಕೆ ಮಕ್ಕಳ ಸಂಖ್ಯೆಯನ್ನೇ ಹಿಂದುಗಳು ಕಡಿಮೆ ಮಾಡಿಕೊಂಡರೆ, ಮುಸ್ಲಿಮರು ಮಾತ್ರ ಎಗ್ಗಿಲ್ಲದೇ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಾ ಹೋದರು. ಸ್ವಾತಂತ್ರ್ಯ ಬಂದಲ್ಲಿಂದ ಇಲ್ಲಿಯವರೆಗೂ ಹಿಂದು ಮನೆಗಳ ಧ್ವಂಸ, ದೇವಾಲಯಗಳ ನಾಶ, ಅತ್ಯಾಚಾರಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಇದಕ್ಕೆಲ್ಲ ಸರ್ಕಾರದ ಪರೋಕ್ಷ ಬೆಂಬಲವಿದ್ದದ್ದರಿಂದ ಹಿಂದುಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಬಂದಿದೆ. ಮತ್ತೆ ನಡೆದಿದೆ ಹಿಂದು ಹತ್ಯಾಕಾಂಡ ಈಗ ಮತ್ತೆ ಬಾಂಗ್ಲಾದೇಶ ಸುದ್ದಿಯಲ್ಲಿರುವುದು ಅಲ್ಲಿ ಉಂಟಾಗಿರುವ ಅರಾಜಕತೆಯಿಂದ. 1971 ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಿಗೆ ಸರ್ಕಾರ ಮೀಸಲಾತಿ ಕೊಡುತ್ತಿತ್ತು. ಅವರ ಮಕ್ಕಳು ಮೊಮ್ಮಕ್ಕಳಿಗೂ ಇದು ವಿಸ್ತರಿಸಿತು. ಈ ವಿಷಯವಾಗಿ ನಡೆದ ಆಂದೋಲನವು ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ ಕೊಟ್ಟು ಜೀವ ಉಳಿಸಿಕೊಳ್ಳಲು ಭಾರತಕ್ಕೆ ಬಂದು ಆಶ್ರಯ ಪಡೆಯುವವರೆಗೂ ಬಂದು ನಿಂತಿತು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಲ್ಲಿನ ಸಾಮಾಜಿಕ ನಾಯಕ ಮೊಹಮದ್ ಯೂನಸ್ ಅವರ ನೇತೃತ್ವದ ತಾತ್ಕಾಲಿಕ ಸರ್ಕಾರ ಅಲ್ಲಿ ಈಗ ನಡೆಯುತ್ತಿದೆ. ಸರ್ಕಾರದಲ್ಲಿ ಅವರಿದ್ದರೂ ಅಲ್ಲಿ ನಡೆಯುತ್ತಿರುವ ಕಾರುಬಾರು ಮುಸ್ಲಿಂ ಮೂಲಭೂತವಾದಿಗಳದ್ದೇ. ಬಾಂಗ್ಲಾದ ಜನಕ ಎಂಬ ಬಿರುದು ಪಡೆದ ಮೊದಲ ಅಧ್ಯಕ್ಷ ಮುಜೀಬುರ್ ರೆಹಮಾನ್ ಅವರ ಪ್ರತಿಮೆಯನ್ನು ಮುಸ್ಲಿಂ ಮತಾಂಧರು ಧ್ವಂಸ ಮಾಡಿದರು. ದೇಶದೆಲ್ಲೆಡೆ ಅನೇಕ ಪ್ರತಿಮೆಗಳನ್ನೂ, ಚಿತ್ರಗಳುಳ್ಳ ಗೋಡೆಗಳನ್ನೂ ನಾಶ ಮಾಡಲಾಯಿತು. ಸಂಗೀತಜ್ಞ ರಾಹುಲ್ ಆನಂದ್ ಅವರ 140 ವರ್ಷ ಹಳೆಯ ಮನೆಯ ಮೇಲೆ ಧಾಳಿ ನಡೆಯಿತು. ಅವರು ಸಂಗ್ರಹಿಸಿಟ್ಟಿದ್ದ 3,000 ಕ್ಕೂ ಹೆಚ್ಚು ಸಂಗೀತ ಉಪಕರಣಗಳಿಗೆ ಬೆಂಕಿಯಿಟ್ಟರು. ಇಸ್ಲಾಮಿನಲ್ಲಿ ಪ್ರತಿಮೆಗಳಿಗೂ, ಸಂಗೀತಕ್ಕೂ ನಿಷೇಧವಿದೆಯಲ್ಲ, ಅದಕ್ಕೇ ಇವು ಇರಬಾರದು ಎಂಬಷ್ಟು ಮತಾಂಧತೆ! ಸುಮಾರು 500 ಕ್ಕೂ ಹೆಚ್ಚು ಕಡೆ ಹಿಂದುಗಳ ಮೇಲೆ ಧಾಳಿ, ನೂರಾರು ದೇವಸ್ಥಾನಗಳ ನಾಶ, ನೂರಾರು ತಾಯಂದಿರ ಮೇಲೆ ಅತ್ಯಾಚಾರ, ಸಾವಿರಕ್ಕೂ ಹೆಚ್ಚು ಹಿಂದುಗಳ ಕೊಲೆ ನಡೆದಿದೆ. ಹಿಂದುಗಳಿಗೂ ಅಲ್ಲಿನ ಹೋರಾಟಕ್ಕೂ ಯಾವ ಸಂಬಂಧವೂ ಇಲ್ಲದಿದ್ದರೂ ಮುಸ್ಲಿಮರ ಸಿಟ್ಟಿಗೆ ಬಲಿಯಾದವರು ಮಾತ್ರ ಹಿಂದುಗಳು. ಡ್ಯಾನಿಶ್ ಪತ್ರಿಕೆಯೊಂದು ಪ್ರವಾದಿ ಮೊಹಮದ್ ಮೇಲಿನ ವ್ಯಂಗಚಿತ್ರ ಪ್ರಕಟಿಸಿದಾಗ ಬೆಂಗಳೂರಿನಲ್ಲಿ ಕಲ್ಲು ತೂರಾಟ ನಡೆದು ಹಿಂದುಗಳ ಮೇಲೆ ಧಾಳಿ ನಡೆಯಲಿಲ್ಲವೇ? ಯಾರ ಮೇಲೆ ಸಿಟ್ಟು ಬಂದರೂ ಆಕ್ರಮಣ ಮಾಡುವುದು ಮಾತ್ರ ಕಾಫಿರರ ಮೇಲೆಯೇ. ಯಾವ ಪಾಕಿಸ್ತಾನದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದಿದ್ದರೋ ಅದೇ ಪಾಕಿಸ್ತಾನದ ಪರ ಒಲವು ಈಗ ಅಲ್ಲಿ ಜಾಸ್ತಿಯಾಗುತ್ತಿದೆ! ಬಾಂಗ್ಲಾದೇಶವನ್ನು ಇಸ್ಲಾಮಿಕ್ ದೇಶವೆಂದು ಘೋಷಿಸಬೇಕೆಂಬ ಬೇಡಿಕೆ ಶುರುವಾಗಿದೆ. ಅಷ್ಟೇ ಅಲ್ಲ, ಅದು ಆದರೂ ಆಗದಿದ್ದರೂ ಅಲ್ಲಿನ ಹಿಂದುಗಳ ತಲೆಯ ಮೇಲಂತೂ ತೂಗುಗತ್ತಿ ಇದ್ದದ್ದೇ. ಇಷ್ಟು ವರ್ಷಗಳ ಕಾಲ ಎಲ್ಲವನ್ನೂ ಸಹಿಸಿಕೊಂಡಿದ್ದ ಹಿಂದುಗಳು ಮೊನ್ನೆ ಆಗಸ್ಟ್ನಲ್ಲಿ ಹಿಂಸಾಚಾರ ಜಾಸ್ತಿಯಾದಾಗ ಬೀದಿಗಿಳಿದು ಪ್ರತಿಭಟಿಸಿದರು. ಢಾಕಾದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹಿಂದು ಸಂನ್ಯಾಸಿ ಚಿನ್ಮಯ ಕೃಷ್ಣದಾಸರ ಬಂಧನ ಮೊನ್ನೆ ಮೊನ್ನೆ ಅಲ್ಲಿನ ಹಿಂದು ಸಮಾಜಕ್ಕೆ ನೇತೃತ್ವ ಕೊಡುತ್ತಿದ್ದ ಇಸ್ಕಾನ್ನ ಪ್ರಭು ಚಿನ್ಮಯ ಕೃಷ್ಣದಾಸ ಅವರನ್ನು ಏಕಾಏಕಿ ಬಂಧಿಸಲಾಗಿದೆ. ಒಂದು ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಕ್ಕಿಂತ ಭಗವಾಧ್ವಜವನ್ನು ಎತ್ತರಕ್ಕೆ ಹಾರಿಸಿದ್ದರೆಂಬ ದೇಶದ್ರೋಹದ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗಿದೆ. ಅವರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಲು ಬರದಂತೆ ವಕೀಲರಿಗೆ ಬೆದರಿಕೆ ಹಾಕಲಾಗಿದೆ. ಹಾಗಾಗಿ, ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಕೊರೋನಾ ಕಾಲದಲ್ಲಿ ಸಾವಿರಾರು ಜನರಿಗೆ ನಿತ್ಯ ಅನ್ನದಾನ ಮಾಡಿದ ಸಂನ್ಯಾಸಿ ಇವರು. ವಿಪರ್ಯಾಸವೆಂದರೆ, ಯಾರು ಅಂದು ಇಸ್ಕಾನ್ನ ಊಟ ಮಾಡಿದ್ದರೋ ಅವರೇ ಇಂದು ಇಸ್ಕಾನ್ ನಿಷೇಧ ಮಾಡಿ ಎಂಬ ಬೇಡಿಕೆಯಿಡುತ್ತಿದ್ದಾರೆ. ಕಾಫಿರನೊಬ್ಬ ಎಷ್ಟೇ ಸಹಾಯ ಮಾಡಿರಲಿ, ಜೀವ ಉಳಿಸಿರಲಿ, ಆತ ಎಂದಿಗೂ ಕಾಫಿರನೇ. ಆತನೊಂದಿಗೆ ಯಾವ ಕರುಣೆ, ಸ್ನೇಹವೂ ಸಲ್ಲ ಎಂಬ ಇಸ್ಲಾಮಿನ ಸಿದ್ಧಾಂತವನ್ನು ಈ ಮತಾಂಧರು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ! 1990 ರ ಕಾಶ್ಮೀರ ಕಣಿವೆಯಲ್ಲಿ ಹಿಂದುಗಳ ಮಾರಣಹೋಮ ನಡೆಸಿದವರೂ ಎಲ್ಲಿಂದಲೋ ಬಂದವರಲ್ಲ. ಪಕ್ಕದ ಮನೆಯ ಮುಸ್ಲಿಮರೇ, ನಿನ್ನೆ ಮೊನ್ನೆಯವರೆಗೂ ಸ್ನೇಹಿತರಂತೆ ಇದ್ದವರೇ! ಬಾಂಗ್ಲಾ ಹಿಂದುಗಳಿಗೆ ಬೇಕಿದೆ ಎಲ್ಲರ ಬೆಂಬಲ ಇಂದು ಬಾಂಗ್ಲಾದ ಹಿಂದುಗಳು ತಮ್ಮ ಜಾಗ ಬಿಡದೇ ಮಾಡು ಇಲ್ಲವೇ ಮಡಿ ಎಂಬಂತೆ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ತಮ್ಮ ದೇವಾಲಯಗಳನ್ನು ರಾತ್ರಿ ಹಗಲೆನ್ನದೇ ಕಾಯುತ್ತಿದ್ದಾರೆ, ಗ್ರಾಮಗಳಲ್ಲಿ ಯುವಕರ ಪಹರೆಯಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಅವರೊಂದಿಗೆ ನಿಲ್ಲಬೇಕಿದೆ. ಬಾಂಗ್ಲಾ ಅಲ್ಪಸಂಖ್ಯಾತರಾದ ಹಿಂದೂ ಬೌದ್ಧ ಕ್ರಿಶ್ಚಿಯನ್ನರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ವಿಶ್ವದೆಲ್ಲೆಡೆಯಿಂದ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಬರುತ್ತಿದೆ. ನಮ್ಮ ಬೆಂಬಲ ಅವರಿಗೆ ನೈತಿಕ ಸ್ಥೈರ್ಯವನ್ನು ಕೊಡಲಿದೆ. ಪರಿಸ್ಥಿತಿಯನ್ನು ಎದುರಿಸಲು ಬಲ ತುಂಬಲಿದೆ. ಬಾಕ್ಸ್ನಲ್ಲಿ ನಾಮಶೂದ್ರ ಎಂಬ ನತದೃಷ್ಟ ಸಮಾಜ ಬಾಂಗ್ಲಾದಲ್ಲಿರುವ ಹಿಂದುಗಳಲ್ಲಿ ಹೆಚ್ಚಿನವರು ನಾಮಶೂದ್ರ ಎಂಬ ಪರಿಶಿಷ್ಟ ಜಾತಿಯವರು, ಅವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು, ಕೃಷಿಕರು, ಮೀನುಗಾರರು. ಶ್ರೀಮಂತರು ಎಂದು ಹೇಳಬಹುದಾದವರು ಎಲ್ಲೋ ಕೆಲವು ಮಂದಿ ಮಾತ್ರ. 1906 ರಲ್ಲಿ ಬಂಗಾಳ ವಿಭಜನೆಯಾದಾಗ ಮೇಲ್ವರ್ಗದ ಹೆಚ್ಚಿನವರು ಈಗ ಭಾರತದಲ್ಲಿರುವ ಬಂಗಾಳಕ್ಕೆ ವಲಸೆ ಬಂದುಬಿಟ್ಟರು. ಅಷ್ಟೇನೂ ವಿದ್ಯಾವಂತರಲ್ಲದ, ಪ್ರಪಂಚದ ಆಗುಹೋಗುಗಳ ಬಗ್ಗೆ ಹೆಚ್ಚು ಅರಿವು ಇಲ್ಲದ ಮುಗ್ಧ ಸಮಾಜ ಮಾತ್ರ ಅಲ್ಲೇ ಉಳಿದುಬಿಟ್ಟಿತು. ಹಾಗೆಯೇ, ಪಾಕಿಸ್ತಾನದ ಮೊದಲ ಕಾನೂನು ಮಂತ್ರಿಯಾಗಿದ್ದ ಜೋಗೇಂದ್ರನಾಥ ಮಂಡಲ್ ಅವರೂ ಇದೇ ನಾಮಶೂದ್ರ ಸಮಾಜಕ್ಕೆ ಸೇರಿದವರು. ಪಾಕಿಸ್ತಾನ ಸೆಕ್ಯುಲರ್ ದೇಶವಾಗಿ ಉಳಿಯಲಿದೆ ಎಂಬ ಆಶಯದಿಂದ ಅಲ್ಲೇ ಉಳಿದು ಸರ್ಕಾರದಲ್ಲಿ ಮಂತ್ರಿಯಾದ ಕೆಲವೇ ದಿನಗಳಲ್ಲಿ ಅವರಿಗೆ ನಿಜಸ್ಥಿತಿಯ ಅರಿವಾಗತೊಡಗಿತು. ಎಲ್ಲೆಡೆ ಹಿಂದುಗಳ ಮೇಲೆ ಹಿಂಸಾಚಾರ ನಡೆಯುತ್ತಿತ್ತು. ಅದರಲ್ಲಿ ಪೆಟ್ಟು ತಿಂದಿದ್ದು ಈ ತಳಸಮುದಾಯದವರೇ! ಸರ್ಕಾರದ ಅಧಿಕಾರಿಗಳು, ಪೊಲೀಸರೇ ಮತಾಂಧರ ಜತೆ ಕೈಜೋಡಿಸಿ ಹಿಂದೂದಮನ ಮಾಡುತ್ತಿರುವುದನ್ನು ನೋಡಿದ ಅವರು ಅನುಭವಿಸಿದ ವ್ಯಥೆ ಅಷ್ಟಿಷ್ಟಲ್ಲ. ಸರ್ಕಾರಕ್ಕೆ ಪತ್ರ ಬರೆದರು, ಅಧಿಕಾರಿಗಳನ್ನು ಭೇಟಿ ಮಾಡಿ ಹಿಂದುಗಳ ರಕ್ಷಣೆಗೆ ಆಗ್ರಹಿಸಿದರು. ಯಾವುದೂ ಫಲ ನೀಡಲಿಲ್ಲ, ಕೊನೆಗೆ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೊಲ್ಕತ್ತಾಕ್ಕೆ ಬಂದು ನೆಲೆಸಿದರು. ತನ್ನ ಜನರನ್ನು ರಕ್ಷಿಸಲಾಗಲಿಲ್ಲ ಎಂಬ ನೋವು ಮಾತ್ರ ಅವರನ್ನು ಕೊನೆಯವರೆಗೆ ಕಾಡುತ್ತಲೇ ಇತ್ತು.

ಪಶ್ಚಿಮ ಬಂಗಾಳದ ಚಿತ್ತಗಾಂವ್(ಈಗ ಬಾಂಗ್ಲಾದೇಶಕ್ಕೆ ಸೇರಿದೆ)ನಲ್ಲಿ ಓರ್ವ ಸಮಾನ್ಯ ಶಾಲಾ ಶಿಕ್ಷಕನಾಗಿದ್ದ ಸೂರ್ಯಸೇನ್ನ ನೇತೃತ್ವದಲ್ಲಿ ಹದಿಹರೆಯದ ಬಾಲಕರು-ತರುಣಿಯರು ಸಶಸ್ತç ಹೋರಾಟಕ್ಕಿಳಿದು ಬ್ರಿಟೀಷರನಿದ್ದೆಗೆಡಿಸಿದ್ದನ್ನು, ತತ್ಪರಿಣಾಮವಾಗಿ ಬಂಗಾಳದ ಹಳ್ಳಿಹಳ್ಳಿಗಳಲ್ಲೂ ಕ್ರಾಂತಿಜ್ವಾಲೆ ಹರಡಿದ್ದನ್ನೂ ಸಾಧಾರವಾಗಿ ವಿವರಿಸುವ ಅಪೂರ್ವ ಕಥನ – ‘ಮಾಡಿ ಮಡಿದವರು’. ತರುಣಿಯೊಬ್ಬಳು ಮೊತ್ತಮೊದಲ ಬಾರಿಗೆ ಕಾರ್ಯಾಚರಣೆಯ ನೇತೃತ್ವವಹಿಸಿ ಬಲಿದಾದಗೈಯುವ ಮೂಲಕ ಕ್ರಾಂತಿಕಾರೀ ಹೋರಾಟದ ರಣಕಣಕ್ಕೆ ಹೆಣ್ಣುಮಕ್ಕಳೂ ಪ್ರತ್ಯಕ್ಷವಾಗಿ ಧುಮುಕಲು ಪ್ರೇರಣೆಯಾದ ಹೋರಾಟವಿದು. ಗಾಂಧಿಯವರು ‘ಮಾಡು ಇಲ್ಲವೇ ಮಡಿ’ ಎಂದು ಘೋಷಿಸುವುದಕ್ಕೂ ಮೊದಲೇ ‘ಮಾಡು ಮತ್ತು ಮಡಿ’ ಎಂದು ರಣಹೂಂಕಾರಗೈದ ಚಿತ್ತಗಾಂವ್ನ ಕ್ರಾಂತಿಕಾರಿಗಳು ನೇತಾಜಿ ಸುಭಾಷ್ಚಂದ್ರ ಬೋಸರು ‘ಭಾರತೀಯ ರಾಷ್ಟ್ರೀಯ ಸೇನೆ’ ರಚಿಸುವದಕ್ಕೂ ಮೊದಲೇ ‘ಭಾರತೀಯ ಗಣತಂತ್ರ ಸೇನೆ’ಯನ್ನು ಕಟ್ಟಿ ಬ್ರಿಟೀಷರ ವಿರುದ್ಧ ಸಶಸ್ತç ಯುದ್ಧ ನಡೆಸಿದ್ದರ ಪ್ರೇರಣಾದಾಯೀ ಕಥನವಿದು. ಪ್ರತಿಗಳಿಗಾಗಿ ಸಂಪರ್ಕಿಸಿ: +91 6360581957
ಬಸ್/ರೈಲು/ಮೆಟ್ರೋ/ವಿಮಾನ ಇತ್ಯಾದಿ ಪ್ರಯಾಣದ ವೇಳೆ ಮೊಬೈಲ್ ಬಳಕೆ ಸೇರಿದಂತೆ ನಡವಳಿಕೆಯಲ್ಲಿ, ಸಾಮೂಹಿಕ ಶಿಸ್ತಿನ ಪಾಲನೆಗೆ ಆದ್ಯತೆ ನೀಡುವುದು ಅಗತ್ಯ. ಎಲ್ಲವೂ ಸಾರ್ವಜನಿಕ ಸ್ಥಳವಾದ್ದರಿಂದ ನಮ್ಮ ನಡವಳಿಕೆ ಇತರರಿಗೆ ಆಭಾಸವನ್ನುಂಟು ಮಾಡಬಾರದು. ಪ್ರಮುಖವಾಗಿ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವಾಗ ಗಟ್ಟಿಧ್ವನಿಯಲ್ಲಿ ಮೊಬೈಲ್ನಲ್ಲಿ ಮಾತಾಡುವುದು, ಕಿರುಚುವುದು, ಅಸಭ್ಯ ಪದಗಳನ್ನು ಬಳಸುವುದು, ಹೆಚ್ಚು ಶಬ್ದವನ್ನಿಟ್ಟು ಮೊಬೈಲ್ ಉಪಯೋಗಿಸುವುದು ಸರಿಯಲ್ಲ. ಹಾಗೆಯೇ ಸಾರ್ವಜನಿಕ ವಾಹನಗಳಲ್ಲಿ ಪಯಣಿಸುವಾಗ ನಮ್ಮ ಇತರೆ ನಡವಳಿಕೆಯೂ ಯಾರಿಗೂ ತೊಂದರೆ ನೀಡುವಂತೆ ಇರಬಾರದು. ಹೆಚ್ಚು ತಾಳ್ಮೆಯನ್ನು ಹೊಂದಿರಬೇಕು. ಹಿರಿಯರೊಂದಿಗೆ, ಮಹಿಳೆಯರೊಂದಿಗೆ ಗೌರವಯುತ ವ್ಯವಹಾರವಿರಬೇಕು. ಆಯಾ ಸಾರ್ವಜನಿಕ ವಾಹನಗಳ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡಬೇಕು.
ಪ್ರತಿಯೊಂದು ಪಯಣವು ತನ್ನ ಉದ್ದೇಶಿತ ತಾಣವನ್ನು ಸೇರುವ ಮೂಲಕ ಕೊನೆಗೊಳ್ಳಬೇಕು ಎಂಬ ನಿಯಮವೇನೂ ಇಲ್ಲ, ಕೆಲವು ಪಯಣಗಳು ಅಪೂರ್ಣವಾಗಿಯೇ ಉಳಿದು ಬಿಡುತ್ತವೆ. 12 ನವೆಂಬರ್ 1996 ರ ಸಂಜೆ ಇಂತಹ ಒಂದು ಘಟನೆ ಸಂಭವಿಸಿತು. ಹರಿಯಾಣದ ಚರಖೀ ದಾದರೀ ಜಿಲ್ಲೆಯು ಒಂದು ಭೀಕರ ಅಪಘಾತಕ್ಕೆ ಸಾಕ್ಷಿಯಾಯಿತು. ಹೃದಯವನ್ನು ನಡುಗಿಸುವ ಆ ಶಬ್ದ, ಭಯಾನಕವಾದ ಮಿಂಚಿನ ಆರ್ಭಟ ಹಾಗೂ ಭಯಂಕರವಾದ ಬೆಂಕಿಯ ಉಂಡೆಗಳ ತೀವ್ರತೆಯು ನೋಡು ನೋಡುತ್ತಿದಂತೆ ಹಳ್ಳಿಯ ಹೊಲ ಗದ್ದೆಗಳ ಮೇಲೆ ಬೀಳಲಾರಂಬಿಸಿದವು. ಅದು ದೆಹಲಿಯಿಂದ ಅರಬ್ ನತ್ತ ಪಯಣಿಸುತ್ತಿದ್ದ ಒಂದು ಯಾತ್ರಿಕರ ವಿಮಾನ ಹಾಗೂ ದೆಹಲಿಯತ್ತ ಬರುತ್ತಿದ್ದ ಕಝಕಿಸ್ತಾನ್ ನ ಸರಕು ವಿಮಾನಗಳ ಅವಶೇಷಗಳಾಗಿತ್ತು. ಈ ಎರಡು ವಿಮಾನಗಳ ಘರ್ಷಣೆಯಾದ ನಂತರ ಭೂಮಿಯ ಮೇಲೆ ಬಿದ್ದ ಇದರ ಮೊನಚಾದ ಭಾಗವು ಭೂಮಿಯಿಂದ 16 ಅಡಿ ಕೆಳಗೆ ಹೂತುಹೋಯಿತು. ಒಂದೆ ಕ್ಷಣದಲ್ಲಿ ಸೌದಿ ವಿಮಾನದಲ್ಲಿದ್ದ 312 ಜನ ಹಾಗೂ ಕಝಕಿಸ್ಥಾನ ವಿಮಾನದ 37ಜನ ಮೃತ್ಯುವಶವಾಗಿದ್ದರು. ಚರಖಿ ದಾದರೀಯ ಸುತ್ತಮುತ್ತ ನಾಲ್ಕು-ಐದು ಕಿಲೋಮೀಟರ್ ದೂರದ ಢಾಣಿ ಫೌಗಾಟ್, ಖೇಡಿ ಸೋನಾವಾಲ್ ಮತ್ತು ಮಾಲಿಯಾವಾಸ್ ಗ್ರಾಮಗಳ ಗದ್ದೆಗಳಲ್ಲಿ ಸುಟ್ಟು ಕರಕಲಾಗಿ ಚಿಂದಿಯಾಗಿ 351ಶವಗಳು ಬಿದ್ದಿದ್ದವು. ಅಪಘಾತದ ಸುದ್ದಿ ತಿಳಿದ ತಕ್ಷಣ ಸರ್ಕಾರಿ ಸಿಬ್ಬಂದಿಗಳು ಬರುವ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಸ್ಥಳಕ್ಕೆ ಆಗಮಿಸಿದ್ದರು. ಛಿದ್ರ ಛಿದ್ರವಾಗಿ ಚದುರಿಹೋಗಿದ್ದ ಶವಗಳ ನಡುವೆ ಬದುಕುಳಿದವರಿಗಾಗಿ ಹುಡುಕಾಡುತ್ತಿದ್ದ ಭಿವಾನಿ ಜಿಲ್ಲೆಯ ಅಂದಿನ ಸಂಘಚಾಲಕರಾದ ಜೀತರಾಮಜೀಯವರು ಸ್ವಯಂಸೇವಕರೊAದಿಗೆ ಅಲ್ಲಿಗೆ ಬಂದು ನೋಡಿದಾಗ ಅವರ ಜೀವವೆ ಬಾಯಿಗೆ ಬಂದಂತಾಗಿತ್ತು. ಒಂದು ಕ್ಷಣವನ್ನೂ ವ್ಯರ್ಥಮಾಡದೆ ಒಂದು ಗಂಟೆಯೊಳಗೆ ಪೆಟ್ರೊಮ್ಯಾಕ್ಸ್ ದೀಪಗಳು, ಜನರೇಟರ್, ನೀರು, ಇತ್ಯಾದಿ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಯಿತು. ಚಳಿಗಾಲದ ಆ ನಿಶ್ಶಬ್ದವಾದ ಕತ್ತಲೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಕಾಣದಂತಹ ಸಂದರ್ಭದಲ್ಲಿ ಪೆಟ್ರೊಮ್ಯಾಕ್ಸ್ ದೀಪಗಳ ಬೆಳಕಿನ ಸಹಾಯದಿಂದ ಸ್ವಯಂಸೇವಕರು ಬದುಕುಳಿದವರಿಗಾಗಿ ಹುಡುಕಾಡಲು ಪ್ರಾರಂಭಿಸಿದರು. ಆದರೆ ಕೇವಲ ಇಬ್ಬರೆ ಇಬ್ಬರು ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದವರು ಸಿಕ್ಕಿದ್ದರು. ಆದರೆ ಜೀವನ್ಮರಣದ ಹೋರಾಟದಲ್ಲಿದ್ದ ಅವರನ್ನು ಸ್ಥಳದಲ್ಲಿ ಉಪಸ್ಥಿತರಿದ್ದ ಹೆಡ್ಗೇವಾರ್ ಚಿಕಿತ್ಸಾಲಯದ ತಂಡದವರಿಂದ ಉಳಿಸಿಕೊಳ್ಳಲಾಗಲಿಲ್ಲ. 24 ವರ್ಷಗಳ ಹಿಂದೆ ನೋಡಿದ ಆ ಭಯಾನಕ ದೃಶ್ಯದ ವಿಷಯ ಬಂದ ತಕ್ಷಣ ಅಂದಿನ ಸಂಘಚಾಲಕರಾದ ಶ್ರೀ ಜಿತರಾಮಜೀಯವರು ಇಂದಿಗೂ ಭಾವುಕರಾಗುತ್ತಾರೆ. ಅಲ್ಲಿನ ಸ್ಥಳೀಯ ರೈತರಾದ ಶ್ರೀ ಚಂದ್ರಭಾನ್ ಅವರ ಟ್ರ್ಯಾಕ್ಟರ್ನಲ್ಲಿ ತೀವ್ರವಾಗಿ ಸುಟ್ಟುಹೋಗಿದ್ದ ಶವಗಳನ್ನು ಸ್ವಯಂಸೇವಕರು ಸಾಗಿಸಿದರು. ಶವಗಳು ಕೊಳೆಯದಂತೆ ಕಾಪಾಡಲು ರಾತ್ರಿಯ 11ಗಂಟೆಯ ವೇಳೆಯಲ್ಲಿ ಐಸ್ ಗೆಡ್ಡೆಯ ಕಾರ್ಖಾನೆಯ ಬಾಗಿಲನ್ನು ತೆರೆಸಲಾಯಿತು ಎಂಬುದನ್ನು ಅವರು ನೆನಪಿಸುತ್ತಾರೆ. ಭಿವಾನಿ, ಝಜ್ಜರ್ ಹಾಗೂ ರೇವಾಡಿಯಂತಹ ಸುತ್ತಮುತ್ತಲಿನ ಪ್ರದೇಶಗಳಿಂದ ಐಸ್ ಸ್ಲಾಬ್ಗಳನ್ನು ತರಸಿಕೊಳ್ಳಲಾಯಿತು. ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದ ಎಸ್.ಪಿ. ಅವರ ಸಹಾಯದಿಂದ ಶವ ಸಂಸ್ಕಾರಕ್ಕೆ ಬೇಕಾಗುವ ಅವಶ್ಯ ವಸ್ತುಗಳ ಪಟ್ಟಿಯನ್ನು ಮಾಡಲಾಯಿತು. ಹಳ್ಳಿಯ ಜನರ ಸಹಾಯದಿಂದ ಶವ ಸಂಸ್ಕಾರಕ್ಕಾಗಿ ಶವ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಲಾಯಿತು. ಸಾವನ್ನಪ್ಪಿದ ಪ್ರಯಾಣಿಕರಲ್ಲಿ ಹೆಚ್ಚಿನವರು ಮುಸಲ್ಮಾನರು ಅಥವಾ ಕ್ರಿಶ್ಚಿಯನ್ನರಾಗಿದ್ದರು. ಹಾಗಾಗಿ ಭಿವಾನಿ ಜಿಲ್ಲೆಯ ಸ್ವಯಂಸೇವಕರಾದ ಸಂತರಾಮ್ ಜೀಯವರ ಫ್ಯಾಕ್ಟರಿಯಲ್ಲಿ ಗರಗಸದ ಮಿಶನ್ ನಿಂದ ಶವದ ಪೆಟ್ಟಿಗೆಯನ್ನು ತಯಾರಿಸಲಾಯಿತು. ಬೆಳಿಗ್ಗೆ 5ಗಂಟೆಯೊಳಗೆ 159 ಶವಗಳನ್ನು ಭಿವಾನಿಯ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರೊಳಗೆ ಶ್ರೀ ಜೀತಾರಾಮ ಅವರ ನೇತೃತ್ವದಲ್ಲಿ ಸ್ವಯಂಸೇವಕರು ವಿಮಾನ ಅಪಘಾತ ಸಂತ್ರಸ್ತರ ಸಹಾಯ ಸಮಿತಿಯನ್ನು ರಚಿಸಿದ್ದರು. ಇದರಲ್ಲಿ ವಿಶ್ವ ಹಿಂದೂ ಪರಿಷತ್, ಆರ್ಯ ಸಮಾಜ, ವಿದ್ಯಾರ್ಥಿ ಪರಿಷತ್ ಹಾಗೂ ಗುರುದ್ವಾರ ಸಮಿತಿಗಳು ಸೇರಿದಂತೆ ಅನೇಕ ಸಾಮಾಜಿಕ ಸಂಸ್ಥೆಗಳ ಸದಸ್ಯರನ್ನು ಸೇರಿಸಿಕೊಂಡು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದರು. ಬೆಳಗಾಗುತ್ತಿದ್ದಂತೆ ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದ್ದರಿಂದ ಮೃತರ ಸಂಬAಧಿಕರು, ಮಾಧ್ಯಮದವರು, ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿದ್ದರು. ಸಮಿತಿಯು ಇವರೆಲ್ಲರಿಗೂ ಪಾನೀಯ ಹಾಗೂ ಭೋಜನ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿತು. ಯಾವ ಯಾತ್ರಿಗಳ ಸಂಬAಧಿಕರು ಘಟನೆಯ ಸ್ಥಳಕ್ಕೆ ಬರಲಾಗಲಿಲ್ಲವೊ ಅಂಥಹ ಮೃತ ದೇಹಗಳನ್ನು ಹೂಳುವ ವ್ಯವಸ್ಥೆಯನ್ನು ಸ್ವಯಂಸೇವಕರೇ ಮಾಡಿದರು. ಇದಕ್ಕೆ ಸ್ಥಳಿಯ ಮೌಲ್ವಿ ಹಾಗೂ ದೆಹಲಿಯಿಂದ ಬಂದಿದ್ದ ಇಸ್ಲಾಮಿಯ ಪ್ರತಿನಿಧಿ ಮಂಡಳಿಯ ಸಹಾಯವನ್ನು ತೆಗೆದುಕೊಳ್ಳಲಾಯಿತು. ಸಮಿತಿಯ ಕಾರ್ಯಕರ್ತರು ಮೂರು ದಿನಗಳ ಕಾಲ ಕಾರ್ಯನಿರ್ವಹಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ಅಂದಿನ ಕ್ಷೇತ್ರ ಪ್ರಚಾರಕರಾದ ಶ್ರೀ ಪ್ರೇಮ್ ಗೋಯಲ್ ಅವರ ಪ್ರಕಾರ, ಮೊದಲ ಬಾರಿಗೆ ಮಸೀದಿಯಲ್ಲಿ ಸ್ವಯಂಸೇವಕರನ್ನು ಚರಖಿ ದಾದರಿಯ ಸ್ಥಳಿಯ ಮುಸ್ಲಿಂ ಸಮಾಜವು ಗೌರವಿಸಿತ್ತು. ಈ ಸಂದರ್ಭದಲ್ಲಿ ಅಲ್ಲಿಯ ಮೌಲ್ವಿಯಾದ ಮೊಹಮ್ಮದ್ ಹಮೀದ್ ಅವರ ಮಾತಿನಲ್ಲಿ ಹೇಳುವುದಾದರೆ, ಅವರು ಸ್ವಯಂಸೇವಕರ ಯೋಗ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾ “ಸಂಘದ ಸ್ವಯಂಸೇವಕರು ಕೇವಲ ಮಾನವೀಯತೆಯಿಂದ ಕೆಲಸ ಮಾಡುತ್ತಾರೆ” ಎಂದು ಹೇಳಿದರು. ಅಲ್ಲದೆ, ದುರ್ಘಟನೆಯ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಅಂದಿನ ಕೇಂದ್ರೀಯ ನಾಗರಿಕ ವಿಮಾನಯಾನ ಸಚಿವ ಶ್ರೀ ಇಬ್ರಾಹಿಂ ಅವರು “ಇವರು ಎಲ್ಲ ಜಾತಿ ಧರ್ಮವನ್ನು ಮೀರಿ ನಿಂತ ಮಾನವತೆಯ ಮೂರ್ತಿಗಳು” ಎಂದು ಸ್ವಯಂಸೇವಕರನ್ನು ಶ್ಲಾಘಿಸಿದರು.
ಭಾರತೀಯ ನೌಕಾಪಡೆಯ ಹೊಸ ಹೆಮ್ಮೆ ಐಎನ್ಎಸ್ ನಿಸ್ತಾರ್. ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತೀಯ ನೌಕಾಪಡೆಯ ಮೊತ್ತ ಮೊದಲ ಸ್ಥಳೀಯ ಡೈವಿಂಗ್ ಬೆಂಬಲ ಹಡಗು. ಐಎನ್ಎಸ್ ನಿಸ್ತಾರ್ ಎಂದು ಹೆಸರಿಸಲಾಗಿರುವ ಇದನ್ನು, ಹಿಂದೂಸ್ತಾನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ. ವಿಶ್ವದ ಕೆಲವೇ ನೌಕಾಪಡೆಗಳು ಮಾಡಲು ಸಾಧ್ಯವಾಗುವ ಆಳ ಸಮುದ್ರಗಳಲ್ಲಿನ ಡೈವಿಂಗ್ ಮತ್ತು ರಕ್ಷಣೆಯಂತಹ ಕಷ್ಟಕರವಾದ ಕೆಲಸಗಳನ್ನು ಮಾಡುವುದು ಇದರ ಕೆಲಸ. ಐಎನ್ಎಸ್ ನಿಸ್ತಾರ್ ಕೇವಲ ಒಂದು ಹಡಗು ಅಲ್ಲ, ಅದು ಒಂದು ದೊಡ್ಡ ಶಕ್ತಿ. ಈ ಹಡಗು ನಮ್ಮ ನೌಕಾಪಡೆಗೆ ಮಾತ್ರವಲ್ಲದೆ ನಮ್ಮ ನೆರೆಯ ರಾಷ್ಟçಗಳಿಗೂ ಜಲಾಂತರ್ಗಾಮಿ ನೌಕೆಗಳ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಆ ಮೂಲಕ ಇದು ಭಾರತವನ್ನು, ಈ ವಿಚಾರದಲ್ಲಿ ವಿಶ್ವಾಸಾರ್ಹ ಪಾಲುದಾರನನ್ನಾಗಿ ಮಾಡುತ್ತದೆ. ಈ ಹಡಗು ೧೨೦ ಮೀಟರ್ ಉದ್ದವಿದೆ. ಇದರ ತೂಕ ಸುಮಾರು ೧೦,೦೦೦ ಟನ್ಗಳು. ಇದು ರಿಮೋಟ್ ಕಂಟ್ರೋಲ್ಡ್ ವಾಹನಗಳು, ವಿಶೇಷವಾಗಿ ಲೈಫ್ ಬೋಟ್ಗಳು ಮತ್ತು ಡೈವಿಂಗ್ ಚೇಂಬರ್ಗಳAತಹ ಆಧುನಿಕ ಉಪಕರಣಗಳನ್ನು ಹೊಂದಿದೆ. ಇದು ೩೦೦ ಮೀಟರ್ ಆಳ ಸಮುದ್ರದಲ್ಲಿ ಚಾಲನೆ ಮತ್ತು ರಕ್ಷಣಾ ಕಾರ್ಯಗಳನ್ನು ಮಾಡಬಹುದು. ಯಾವುದೇ ಜಲಾಂತರ್ಗಾಮಿಯು ತೊಂದರೆಯಲ್ಲಿ ಸಿಲುಕಿಕೊಂಡರೆ, ರಕ್ಷಣೆಗೆ ಇದನ್ನು ಬಳಸಬಹುದು. ಸೋನಾರ್ಗಳು, ಕ್ಯಾಮೆರಾಗಳು ಮತ್ತು ಮ್ಯಾನಿಪ್ಯುಲೇಟರ್ಗಳನ್ನು ಹೊಂದಿದ ರಿಮೋಟ್ ಚಾಲಿತ ವಾಹನಗಳನ್ನು ಇದು ಹೊಂದಿದೆ. ಇವು ನೀರೊಳಗಿನ ಹಾನಿಯನ್ನು ನಿರ್ಣಯಿಸಲು, ಅವಶೇಷಗಳನ್ನು ತೆರವುಗೊಳಿಸಲು ಪೂರ್ಣ ಒಂದು ಕಿಲೋಮೀಟರ್ ಗಳಷ್ಟು ಕೆಳಗೆ ಇಳಿಯಬಹುದು.
ಅನೇಕ ಸಂದರ್ಭಗಳಲ್ಲಿ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳ ಕುರಿತಾಗಿ ಮಾತ್ರ ನಾವು ಗಮನವಹಿಸುತ್ತೇವೆ. ಆದರೆ ನಮ್ಮ ಮೂಲಭೂತ ಕರ್ತವ್ಯಗಳನ್ನು ನಾವು ನಿರ್ಲಕ್ಷಿಸಿದ್ದೇವೆ. ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ “ಸ್ವಾತಂತ್ರ್ಯಹೋರಾಟಕ್ಕೆ ಸ್ಪೂರ್ತಿ ನೀಡಿದ ಆದರ್ಶಗಳನ್ನು ಪಾಲಿಸುವುದು ಮತ್ತು ಅನುಸರಿಸುವುದು” ಎಂಬ ಕರ್ತವ್ಯವನ್ನೂ ತಿಳಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ರಾಜಕೀಯ ಹಾಗೂ ಸೈದ್ಧಾಂತಿಕ ಕಾರಣಗಳಿಗಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ, ಅವರನ್ನು ವಾಚಾಮಗೋಚರ ನಿಂದಿಸುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅವರ ಜೀವನವನ್ನು ವಿಮರ್ಶಿಸುವುದಕ್ಕೂ, ನಿಂದಿಸುವುದಕ್ಕೂ ವ್ಯತ್ಯಾಸವಿದೆ. ಅದನ್ನು ಅರಿತು ನಾವೆಲ್ಲರೂ ನಮ್ಮ ವ್ಯವಹಾರವನ್ನು ಮಾಡಬೇಕಿದೆ. ಪ್ರತಿಯೊಬ್ಬ ಸ್ವಾತಂತ್ರö್ಯ ಹೋರಾಟಗಾರರೂ ಅವರವರ ಕಾಲಘಟ್ಟದಲ್ಲಿ ಅವರವರ ಶಕ್ತಿಗನುಗುಣವಾಗಿ ರಾಷ್ಟ್ರದ ಸ್ವಾತಂತ್ರö್ಯಕ್ಕೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ. ಅದನ್ನು ಗೌರವಿಸುತ್ತಾ, ಅವರ ಆದರ್ಶಗಳನ್ನು ಪಾಲಿಸುತ್ತಾ ರಾಷ್ಟ್ರಕ್ಕಾಗಿ ದುಡಿಯುವ ಅವಕಾಶ ಇದೀಗ ನಮ್ಮೆಲ್ಲರ ಪಾಲಿಗಿದೆ.

‘ಸಂಚಾರ - ಇದು ಒಳಗಿನ ಪಯಣ' ಪುಸ್ತಕವು ನಮ್ಮ ನಿಮ್ಮ ಜೀವನಗಳಲ್ಲಿ ದಿನನಿತ್ಯ ನಡೆಯುವ, ಆದರೆ ನಮ್ಮ ಗಮನಕ್ಕೆ ಬರದೆ ಮರೆಯಾಗುವ ಹತ್ತುಹಲವು ಕುತೂಹಲಕಾರಿ ಘಟನೆಗಳನ್ನು ಮುಂದಿಟ್ಟು ಜೀವನಪಾಠ ಕಲಿಸುವ ಸುಂದರ ಹೊತ್ತಗೆ. ಜೀವನಮೌಲ್ಯಗಳ ಪಾಠವನ್ನು ಹೀಗೂ ಮಾಡಬಹುದೆಂಬ ಅತ್ಯುತ್ತಮ ಮಾದರಿ; ಪಾಠ್ಯಪುಸ್ತಕವಾಗಬೇಕಾದ ರಸಪೂರ್ಣ ಬದುಕಿನ ಬುತ್ತಿ. ಮುಖ್ಯವಾಗಿ ತ್ರಿಕರಣಗಳ ನಡುವೆ ಎಂಥವರಿಗೂ ಇದ್ದೇ ತೀರುವ ಅಂತರವನ್ನು ಹೇಗೆ ತಗ್ಗಿಸಿಕೊಳ್ಳಬೇಕೆಂಬುವುದನ್ನು ‘ಸಂಚಾರ' ಕೃತಿಯಲ್ಲಿ ಕಾಣಬಹುದು. ಇಂಥ ಪ್ರಾಮಾಣಿಕ ಶೋಧನೆಯೇ ಈ ಬಗೆಯ ಸಂಚಾರದ ಗುರಿಯನ್ನು ದಿಟ್ಟವಾಗಿಸುತ್ತದೆ, ಗಟ್ಟಿಯಾಗಿಸುತ್ತದೆ. ಈ ಕೃತಿಯು ‘Sanchara: A Philosophical Journey’ ಎಂಬ ಶೀರ್ಷಿಕೆಯಲ್ಲಿ ಇಂಗ್ಲೀಷ್ನಲ್ಲೂ ಲಭ್ಯವಿದೆ. ಪುಸ್ತಕಕ್ಕಾಗಿ ಸಂಪರ್ಕಿಸಿ: 7795827307, 6360581957

ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಮಾನದ ವ?ವನ್ನು ಸಮೀಪಿಸುತ್ತಿರುವ ಸಂದರ್ಭದಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ವಿಶೇ? ಸಂದರ್ಶನ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೈದ್ಧಾಂತಿಕ ತಳಹದಿ, ದೇಶದ ಸದ್ಯದ ಸ್ಥಿತಿ ಹಾಗೂ ಭವಿ?ದ ಕುರಿತು ಮಾತನಾಡಿದ್ದಾರೆ. ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಮತ್ತು ಸರಸಂಘಚಾಲಕರಾಗಿ, ಸಂಘದ ೧೦೦ ವ?ಗಳ ಪಯಣವನ್ನು ಹೇಗೆ ನೋಡುತ್ತೀರಿ? ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ ಹೆಡಗೆವಾರ್ ಅವರು ಸಂಘದ ಕೆಲಸವನ್ನು ಬಹಳ ಆಳವಾದ ಚಿಂತನೆಯ ಆಧಾರದಲ್ಲಿ ಆರಂಭಿಸಿದರು. ದೇಶದ ಮುಂದಿರುವ ಸಂಕ?ಗಳಿಗೆ ಯಾವ ಪರಿಹಾರಗಳನ್ನು ಕೈಗೊಳ್ಳಬೇಕು ಎಂಬುದನ್ನು ಪ್ರಯೋಗಗಳ ಆಧಾರದ ಮೇಲೆ ನಿರ್ಧರಿಸಲಾಯಿತು ಮತ್ತು ಆ ಕಾರ್ಯಗಳು ಯಶಸ್ವಿಯಾದವು. ಸಂಘದ ಕಾರ್ಯವಿಧಾನದಿಂದ ಸಫಲತೆ ಲಭಿಸುತ್ತದೆ ಮತ್ತು ದಾರಿಯಲ್ಲಿ ಬರುವ ಎಲ್ಲ ಅಡೆತಡೆಗಳನ್ನು ದಾಟಿ ಸಂಘ ಮುಂದುವರಿಯಬಹುದು ಎಂಬುದು ಅನುಭವದಿಂದ ಸಾಬೀತಾಗಿದ್ದು ೧೯೫೦ರ ವೇಳೆಗೆ. ಆನಂತರ ಸಂಘದ ದೇಶವ್ಯಾಪಿ ವಿಸ್ತರಣೆ ಮತ್ತು ಸಮಾಜದೊಳಗೆ ಸ್ವಯಂಸೇವಕರ ಸಮ್ಮಿಳನ ಪ್ರಾರಂಭವಾಯಿತು. ಮುಂದಿನ ನಾಲ್ಕು ದಶಕಗಳವರೆಗೆ ಸಂಘದ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ, ತಮ್ಮ ಕರ್ತೃತ್ವ, ಸ್ನೇಹಭಾವ ಮತ್ತು ಶೀಲದ ಆಧಾರದ ಮೇಲೆ ಸಮಾಜದ ವಿಶ್ವಾಸವನ್ನು ಗಳಿಸಿದರು. ೧೯೯೦ರ ನಂತರ ಈ ಚಿಂತನೆ ಮತ್ತು ತಮ್ಮ ಗುಣಸಂಪತ್ತಿನ ಆಧಾರದ ಮೇಲೆ ದೇಶವನ್ನು ಮುನ್ನಡೆಸಬಹುದು ಎಂಬುದನ್ನು ಸಾಬೀತುಪಡಿಸಿದರು. ಭವಿ?ದಲ್ಲಿ ನಮ್ಮ ಮುಂದಿರುವ ಕರ್ತವ್ಯವೆಂದರೆ, ಇದೇ ಗುಣಮಟ್ಟ ಮತ್ತು ಚಿಂತನೆಯ ಆಧಾರದಲ್ಲಿ ಸಮಾಜವು ಎಲ್ಲ ಬೇಧಗಳನ್ನು ಮರೆತು ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಬುದ್ಧಿಯಿಂದ ದೇಶಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸುವಂತೆ ಮಾಡುವುದು ಹಾಗೂ ಆ ಮೂಲಕ ದೇಶವನ್ನು ಶ್ರೇ?ವನ್ನಾಗಿಸುವುದು. ೧೦೦ ವ?ಗಳ ಈ ಪಯಣದಲ್ಲಿ ಸಂಘವು ಕಂಡ ಪ್ರಮುಖ ಹಂತಗಳು ಯಾವುವು? ಆರಂಭದ ದಿನಗಳಲ್ಲಿ ಸಂಘದ ಬಳಿ ಏನೂ ಇರಲಿಲ್ಲ. ಸಂಘದ ಚಿಂತನೆಗೆ ಸಮಾಜದಲ್ಲಿ ಮಾನ್ಯತೆ ಇರಲಿಲ್ಲ, ಪ್ರಚಾರದ ಸಾಧನ ಇರಲಿಲ್ಲ. ಸಮಾಜದಲ್ಲಿ ಇದ್ದದ್ದು ಕೇವಲ ಉಪೇಕ್ಷೆ ಮತ್ತು ವಿರೋಧ. ಕಾರ್ಯಕರ್ತರೂ ಇರಲಿಲ್ಲ. ಇ?ಲ್ಲ ದತ್ತಾಂಶವನ್ನು ನೀವು ಕಂಪ್ಯೂಟರ್ಗೆ ನೀಡಿ, ಈ ರೀತಿಯ ಸ್ಥಿತಿಯಲ್ಲಿರುವ ಸಂಘಟನೆ ಭವಿ?ದಲ್ಲಿ ಏನಾಗಬಹುದು ಎಂದು ಕೇಳಿದರೆ, ’ಅದು ಹುಟ್ಟಿದ ಕೂಡಲೆ ಕೊನೆಯುಸಿರೆಳೆಯುತ್ತದೆ? ಎಂಬ ಭವಿ?ವಾಣಿಯನ್ನೇ ನುಡಿಯುತ್ತದೆ. ಆದರೆ ದೇಶದ ವಿಭಜನೆಯ ಸಮಯದಲ್ಲಿ ಹಿಂದೂಗಳ ರಕ್ಷಣೆಯ ಸವಾಲು ಮತ್ತು ಸಂಘದ ಮೇಲಿನ ನಿ?ಧದ ಕಠಿಣ ಸಂಕ?ಗಳಿಂದ ಸಂಘ ಯಶಸ್ವಿಯಾಗಿ ಹೊರಬಂದಿತು ಹಾಗೂ ಸಂಘದ ಕೆಲಸ ಮುಂದುವರಿಯುತ್ತದೆ ಹಾಗೂ ಬೆಳೆಯುತ್ತದೆ ಎಂಬುದು ೧೯೫೦ರ ವೇಳೆಗೆ ಸಾಬೀತಾಯಿತು. ಈ ವಿಧಾನದಿಂದ ಹಿಂದೂ ಸಮಾಜವನ್ನು ಸಂಘಟಿಸಬಹುದು ಎಂಬುದು ಅರಿವಾದ ನಂತರದಲ್ಲಿ ಸಂಘದ ವಿಸ್ತರಣೆ ಇನ್ನ? ಹೆಚ್ಚಾಯಿತು. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಸಂಘದ ಭಾಗವಹಿಸುವಿಕೆಯಿಂದಾಗಿ ಈ ಶಕ್ತಿಯ ಮಹತ್ವ ಸಮಾಜದ ಗಮನಕ್ಕೆ ಬಂದಿತು. ಏಕಾತ್ಮತಾ ರಥಯಾತ್ರೆ, ಕಾಶ್ಮೀರದ ಕುರಿತು ಜನಜಾಗೃತಿ, ಶ್ರೀರಾಮ ಜನ್ಮಭೂಮಿ ಮುಕ್ತಿ ಆಂದೋಲನ, ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವ?ಚರಣೆ ಅಭಿಯಾನಗಳ ಮೂಲಕ ಮತ್ತು ಸೇವಾ ಕಾರ್ಯಗಳ ಭಾರೀ ವಿಸ್ತರಣೆಯಿಂದ ಸಮಾಜದಲ್ಲಿ ಸಂಘದ ಚಿಂತನೆ ಮತ್ತು ವಿಶ್ವಾಸಾರ್ಹ ಭಾವನೆ ಗಣನೀಯವಾಗಿ ಹೆಚ್ಚಾಯಿತು. ೧೯೪೮ ಮತ್ತು ೧೯೭೫ರಲ್ಲಿ ಎರಗಿಬಂದ ಸಂಕ?ಗಳಿಂದ ಸಂಘಟನೆ ಕಲಿತ ಪಾಠಗಳೇನು? ಈ ಎರಡೂ ನಿ?ಧಗಳ ಹಿಂದೆ ರಾಜಕೀಯ ಉದ್ದೇಶವಿತ್ತು. ಸಂಘದಿಂದ ಯಾವುದೇ ಹಾನಿಯಿಲ್ಲ, ಬದಲಿಗೆ ಲಾಭವೇ ಇದೆ ಎನ್ನುವುದು ನಿ?ಧ ಹೇರಿದವರಿಗೂ ತಿಳಿದಿತ್ತು. ಆದರೂ, ಇ? ವಿಸ್ತೃತ ಸಮಾಜದಲ್ಲಿ ಸಹಜವಾಗಿ ವಿಸ್ತಾರವಾಗುವ ಚಿಂತನೆಗಳೊಂದಿಗಿನ ಸ್ಪರ್ಧೆಯಲ್ಲಿ ತಮ್ಮ ರಾಜಕೀಯ ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದ ಪಟ್ಟಭದ್ರರು ಸಂಘದ ಮೇಲೆ ನಿ?ಧ ಹೇರಿದರು. ಮೊದಲ ನಿ?ಧದಲ್ಲಿ ಸಂಘಕ್ಕೆ ಎಲ್ಲ ಸಂಗತಿಗಳೂ ವಿರುದ್ಧವಾಗಿದ್ದವು. ಹಾಗೆ ನೋಡಿದರೆ ಸಂಘವು ಸಂಪೂರ್ಣವಾಗಿ ಧೂಳೀಪಟವಾಗಬೇಕಿತ್ತು. ಆದರೆ ಎಲ್ಲ ವಿರೋಧದ ನಡುವೆಯೂ ಸಂಘ ಆ ನಿ?ಧದಿಂದ ಹೊರಬಂದಿತು ಮತ್ತು ಮುಂದಿನ ೧೫-೨೦ ವ?ಗಳಲ್ಲಿ ಪೂರ್ವಸ್ಥಿತಿಗೆ ಮರಳಿ, ಹಿಂದಿಗಿಂತಲೂ ಹೆಚ್ಚು ಮುನ್ನಡೆಯಿತು. ತಮ್ಮ ಪಾಡಿಗೆ ತಾವು ಶಾಖೆಗಳನ್ನು ನಡೆಸುವುದರಲ್ಲ? ಮಗ್ನರಾಗಿದ್ದ ಸಂಘದ ಸ್ವಯಂಸೇವಕರು ಸಮಾಜದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿದರು. ೧೯೪೮ರ ನಿ?ಧದಿಂದ ಸಂಘಕ್ಕೆ ತನ್ನ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಲಾಭವಾಯಿತು ಮತ್ತು ಸಮಾಜದಲ್ಲಿ ಹಾಗೂ ವ್ಯವಸ್ಥೆಗಳಲ್ಲಿ ಬದಲಾವಣೆ ತರುವ ಯೋಜನೆಯೊಂದಿಗೆ ಸ್ವಯಂಸೇವಕರು ಮುಂದುವರಿದರು. ಸಂಘದ ಕೆಲಸ ಕೇವಲ ಒಂದು ಗಂಟೆಯ ಶಾಖೆಗೆ ಸೀಮಿತವಲ್ಲ, ಬದಲಿಗೆ ದಿನದ ಉಳಿದ ೨೩ ಗಂಟೆಗಳಲ್ಲಿ ವೈಯಕ್ತಿಕ, ಕೌಟುಂಬಿಕ, ಸಾರ್ವಜನಿಕ ಮತ್ತು ಜೀವನೋಪಾಯದ ಚಟುವಟಿಕೆಗಳಲ್ಲಿ ಸಂಘದ ಸಂಸ್ಕಾರಗಳನ್ನು ಅಭಿವ್ಯಕ್ತಪಡಿಸಬೇಕು ಎನ್ನುವುದು ನಿಶ್ಚಯವಾಗಿದ್ದು ಇದೇ ಅವಧಿಯಲ್ಲಿ. ೧೯೭೫ರ ನಿ?ಧದಲ್ಲಿ ಸಂಘದ ಈ ವಿಸ್ತರಿತ ಶಕ್ತಿಯ ಅನುಭವವು ಸಮಾಜಕ್ಕೆ ಆಯಿತು. ಇನ್ನು ಏನೂ ಆಗುವುದಿಲ್ಲ ಎಂದು ದೊಡ್ಡದೊಡ್ಡವರೆಲ್ಲ ನಿರಾಶೆಗೊಂಡು ಕುಳಿತಿದ್ದಾಗ, ಈ ಸಂಕ?ವು ತೊಲಗುತ್ತದೆ ಮತ್ತು ನಾವೆಲ್ಲರೂ ಸುರಕ್ಷಿತವಾಗಿ ಇದನ್ನು ಮೆಟ್ಟಿನಿಲ್ಲುವೆವು ಎಂದು ಸಾಮಾನ್ಯ ಸ್ವಯಂಸೇವಕನೂ ವಿಶ್ವಾಸದಿಂದ ಯೋಚಿಸುತ್ತಿದ್ದ. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಸಂಘವು ತನ್ನ ಮೇಲಿನ ನಿ?ಧವನ್ನು ಪ್ರಮುಖ ವಿ?ಯವನ್ನಾಗಿಸದೆ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕೆಲಸ ಮಾಡಿತು, ಸಂಘವನ್ನು ಟೀಕಿಸುವವರೊಂದಿಗೂ ಕೈಜೋಡಿಸಿತು. ಆ ಸಮಯದಲ್ಲಿ ವಿಶೇ?ವಾಗಿ ಸಮಾಜದ ಚಿಂತಕ ವಲಯದಲ್ಲಿ ಸಂಘವು ಒಂದು ವಿಶ್ವಾಸಾರ್ಹ ಚಿಂತನೆಯ ಕೇಂದ್ರವಾಗಿ ಸ್ಥಾನ ಪಡೆಯಿತು. ತುರ್ತು ಪರಿಸ್ಥಿತಿಯ ನಂತರ ಸಂಘವು ಹಲವು ಪಟ್ಟು ಬಲಿ?ವಾಗಿ ಹೊರಹೊಮ್ಮಿತು. ಭೌಗೋಳಿಕ ಮತ್ತು ಸಂಖ್ಯಾತ್ಮಕ ದೃಷ್ಟಿಯಿಂದ ಸಂಘ ಬೆಳೆಯುತ್ತಿದೆ. ಕಾರ್ಯದ ಗುಣಮಟ್ಟ ಮತ್ತು ಸ್ವಯಂಸೇವಕರ ತರಬೇತಿ ಗುಣಮಟ್ಟದಲ್ಲೂ ಸಂಘ ಯಶಸ್ವಿಯಾಗಿದೆ. ಇದು ಹೇಗೆ ಸಾಧ್ಯವಾಯಿತು? ಗುಣಮಟ್ಟ ಮತ್ತು ಸಂಖ್ಯೆ ಎಂಬ ಎರಡು ವಿ?ಯಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸದೆಯೇ ಕೇವಲ ಗುಣಮಟ್ಟವನ್ನು ಹೆಚ್ಚಿಸುತ್ತಾಹೋದರೆ ಅಥವಾ ಗುಣಮಟ್ಟವನ್ನು ಹೆಚ್ಚಿಸದೆ ಕೇವಲ ಸಂಖ್ಯೆಯನ್ನು ಏರಿಸುತ್ತಾಹೋದರೆ ಅತ್ತ ಗುಣಮಟ್ಟವೂ ಹೆಚ್ಚುವುದಿಲ್ಲ ಇತ್ತ ಸಂಖ್ಯೆಯೂ ಉಳಿಯುವುದಿಲ್ಲ. ಇದನ್ನು ಅರಿತೇ ಸಂಘವು ಸಂಪೂರ್ಣ ಸಮಾಜವನ್ನು ಸಂಘಟಿಸಬೇಕು ಎಂಬುದರ ಮೇಲೆಯೇ ಗಮನ ಕೇಂದ್ರೀಕರಿಸಿದೆ. ಒಬ್ಬ ವ್ಯಕ್ತಿಯನ್ನು ತಯಾರು ಮಾಡುವುದು ಹೇಗೆ? ಅಂತಹ ಎಲ್ಲ ವ್ಯಕ್ತಿಗಳ ಸಮೂಹ ಅಥವಾ ಸಂಘಟನೆ ಹೇಗಿರಬೇಕು? ’ನಾವು’ ಎಂಬ ಭಾವನೆ ಹೇಗೆ ಅಭಿವ್ಯಕ್ತಗೊಳ್ಳಬೇಕು ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಕೆಲವು ಮಾನದಂಡಗಳನ್ನು ಈಗಾಗಲೆ ನಿರ್ಧರಿಸಲಾಗಿದೆ. ಆ ಮಾನದಂಡಗಳನ್ನು ಉಳಿಸಿಕೊಂಡೇ ಸಂಖ್ಯೆಯನ್ನು ಹೆಚ್ಚಿಸಬೇಕು. ಮಾನದಂಡಗಳನ್ನು ಉಳಿಸಿಕೊಳ್ಳುವುದು ಎಂದರೆ ಜನರನ್ನು ಸಂಘಟನೆಯಿಂದ ಹೊರಗಿಡುವುದು ಎಂದರ್ಥವಲ್ಲ. ಇದಕ್ಕೆ ಒಂದು ಉದಾಹರಣೆಯಿದೆ: ಒಂದು ದೊಡ್ಡ ಸಂಘಟನೆಯ ಆರಂಭದ ದಿನಗಳಲ್ಲಿ, ಸಮಾಜವಾದಿ ಚಿಂತನೆಯ ಒಬ್ಬ ವ್ಯಕ್ತಿ ಆ ಸಂಘಟನೆಯ ಕಾರ್ಯಕರ್ತನಾಗಿ ಸೇರ್ಪಡೆಗೊಂಡ. ಅವನಿಗೋ ನಿರಂತರ ಸಿಗರೇಟ್ ಸೇದುವ ಚಟವಿತ್ತು. ಅವನು ಇದೇ ಮೊದಲ ಬಾರಿಗೆ ಸಂಘಟನೆಯ ಶಿಬಿರಕ್ಕೆ ಆಗಮಿಸಿದ. ಅಲ್ಲಿ ಸಿಗರೇಟ್ ಸೇದುವವರಿರಲಿ, ಸುಪಾರಿ ತಿನ್ನುವ ಅಭ್ಯಾಸ ಹೊಂದಿರುವವರೂ ಇರಲಿಲ್ಲ. ಹೊಸ ಕಾರ್ಯಕರ್ತ ದಿನವಿಡೀ ತವಕಿಸುತ್ತಲೇ ಇದ್ದ. ರಾತ್ರಿ ಹಾಸಿಗೆಯಲ್ಲಿ ಮಲಗಿದಾಗ ನಿದ್ದೆಯೇ ಬರಲಿಲ್ಲ. ಆಗ ಸಂಘಟನಾ ಕಾರ್ಯದರ್ಶಿಯೊಬ್ಬರು ಬಂದು, ನಿದ್ದೆ ಬರುತ್ತಿಲ್ಲವೇ? ಹೊರಗೆ ಹೋಗಿ ಸ್ವಲ್ಪ ಓಡಾಡಿಕೊಂಡು ಬರೋಣ ಬಾ ಎಂದು ಕರೆದರು. ಹೊರಗೆ ಕರೆದೊಯ್ದು, ಅಗೋ ಅಲ್ಲಿ ಮುಂದಿನ ಚೌಕದಲ್ಲಿ ಸಿಗರೇಟ್ ಸಿಗುತ್ತದೆ. ಮನಸಾರೆ ಸೇದಿಕೊಂಡು ಬಾ. ಶಿಬಿರದೊಳಗೆ ಸಿಗರೇಟ್ ಸಿಗುವುದಿಲ್ಲ ಎಂದರು. ಆ ಹೊಸ ಕಾರ್ಯಕರ್ತ ಸಂಘಟನೆಯಲ್ಲಿ ಉಳಿದುಕೊಂಡ. ತುಂಬಾ ಒಳ್ಳೆಯ ಕಾರ್ಯಕರ್ತನಾದ. ಮುಂದಿನ ದಿನಗಳಲ್ಲಿ ಸಿಗರೇಟ್ ಚಟದಿಂದಲೂ ಹೊರಗೆಬಂದ. ಸಂಘಟನೆಯನ್ನು ಆ ಪ್ರಾಂತದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ದ. ವ್ಯಕ್ತಿಯನ್ನು ಅವನು ಹೇಗಿದ್ದಾನೋ ಹಾಗೆಯೇ ಸ್ವೀಕರಿಸಬೇಕು ಎಂಬ ವಿಚಾರವನ್ನು ನಾವು ಹೊಂದಿದ್ದೇವೆ. ಹಾಗೆಯೇ ನಿಧಾನವಾಗಿ ಆತನನ್ನು ನಮಗೆ ಬೇಕಾದಂತೆ ರೂಪಿಸುವ ಸ್ನೇಹಮಯ ಕೌಶಲವನ್ನೂ ರೂಢಿಸಿಕೊಂಡಿದ್ದೇವೆ. ಈ ಧೈರ್ಯ ಮತ್ತು ಶಕ್ತಿಯನ್ನು ನಾವು ಹೊಂದಿದ್ದೇವೆ. ಇದರಿಂದಾಗಿಯೇ ಸಂಘವು ಸಂಖ್ಯೆಯ ಆಧಾರದಲ್ಲಿ ಬೆಳೆಯುವುದರ ಜತೆಗೇ ಗುಣಮಟ್ಟವನ್ನೂ ಕಾಯ್ದುಕೊಂಡಿದೆ. ಸಂಘಟನೆಯಲ್ಲಿ ಗುಣಮಟ್ಟ ಬೇಕು ಎನ್ನುವುದೇನೋ ಸರಿ. ಅದರ ಜತೆಗೆ ಸಂಪೂರ್ಣ ಸಮಾಜವನ್ನೇ ಗುಣಮಟ್ಟದಿಂದ ಕೂಡಿರುವಂತೆ ಮಾಡಬೇಕು ಎಂಬ ಅರಿವನ್ನೂ ನಾವು ಇರಿಸಿಕೊಂಡಿದ್ದೇವೆ. ಸಂಘವು ಇಂದಿಗೂ ಡಾ. ಹೆಡಗೆವಾರ್ ಮತ್ತು ಗುರೂಜಿ ಅವರ ಮೂಲ ಚಿಂತನೆಗಳಿಗೆ ಅನುಗುಣವಾಗಿ ನಡೆಯುತ್ತಿದೆ. ಸಂದರ್ಭದ ಅಗತ್ಯಕ್ಕೆ ತಕ್ಕಂತೆ ಈ ಮೂಲಚಿಂತನೆಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ? ಡಾಕ್ಟರ್ಜಿ, ಶ್ರೀಗುರೂಜಿ ಅಥವಾ ಬಾಳಾಸಾಹೇಬ್ ದೇವರಸ್ ಅವರ ಚಿಂತನೆಗಳು ಸನಾತನ ಪರಂಪರೆ ಅಥವಾ ಸಂಸ್ಕೃತಿಯಿಂದ ಭಿನ್ನವಾದವಲ್ಲ. ಗಾಢವಾದ ಚಿಂತನೆ ಮತ್ತು ಕಾರ್ಯಕರ್ತರು ನಡೆಸಿದ ಪ್ರಯೋಗಗಳ ನೇರ ಅನುಭವದಿಂದ ಸಂಘದ ವಿಧಾನವು ಸ್ಥಿರವಾಯಿತು ಹಾಗೂ ಅದು ಈಗಲೂ ಮುಂದುವರಿಯುತ್ತಿದೆ. ಒಂದು ಪುಸ್ತಕಕ್ಕೆ ನಿ?, ವ್ಯಕ್ತಿನಿ? ಅಥವಾ ಮೂಢನಂಬಿಕೆಗೆ ಸಂಘದಲ್ಲಿ ಸ್ಥಾನವಿಲ್ಲ. ನಾವು ತತ್ವಪ್ರಧಾನವಾಗಿದ್ದೇವೆ. ಮಹಾಪುರು?ರ ಗುಣಗಳನ್ನು, ಅವರು ತೋರಿಸಿದ ದಿಕ್ಕನ್ನು ಅನುಸರಿಸಬೇಕು, ಸರಿ. ಆದರೆ ಪ್ರತಿ ದೇಶ-ಕಾಲ-ಪರಿಸ್ಥಿತಿಯಲ್ಲಿ ತಾವೇ ದಾರಿಯನ್ನು ರೂಪಿಸಿಕೊಂಡು ನಡೆಯಬೇಕು. ಇದೆಲ್ಲಕ್ಕೂ ನಿತ್ಯ-ಅನಿತ್ಯ ವಿವೇಕ ಇರಬೇಕು. ಸಂಘದಲ್ಲಿ ನಿತ್ಯವಾದದ್ದು ಏನು? "ಹಿಂದೂಸ್ಥಾನವು ಹಿಂದೂರಾಷ್ಟ್ರವಾಗಿದೆ" ಎಂಬ ಈ ಮಾತನ್ನು ಬಿಟ್ಟು ಸಂಘದಲ್ಲಿ ಉಳಿದ ಎಲ್ಲ ವಿಚಾರಗಳೂ ಬದಲಾಗಬಹುದು ಎಂದು ಬಾಳಾಸಾಹೇಬ್ ದೇವರಸ್ ಅವರು ಒಮ್ಮೆ ಹೇಳಿದ್ದರು. ಸಂಪೂರ್ಣ ಹಿಂದೂ ಸಮಾಜವು ಈ ದೇಶದ ಉತ್ತರದಾಯಿ ಸಮಾಜ. ಈ ದೇಶದ ಸ್ವಭಾವ ಮತ್ತು ಸಂಸ್ಕೃತಿಯು ಹಿಂದೂಗಳ ಸಂಸ್ಕೃತಿ. ಆದ್ದರಿಂದಲೇ ಇದು ಹಿಂದೂ ರಾಷ್ಟ್ರ. ಈ ವಿ?ಯವನ್ನು ಆಧಾರವಾಗಿಸಿಕೊಂಡು ಎಲ್ಲ ಕಾರ್ಯವನ್ನೂ ಮಾಡಬೇಕು. ಆದ್ದರಿಂದಲೇ ನಮ್ಮ ಪವಿತ್ರವಾದ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ಸಮಾಜ ಇವುಗಳನ್ನು ಸಂರಕ್ಷಿಸಿ, ಹಿಂದೂರಾ?ದ ಸವಾಂಗೀಣ ಉನ್ನತಿಯನ್ನು ಮಾಡುವುದಕ್ಕಾಗಿ ಕೆಲಸ ಮಾಡುವುದು ಎಂದು ಸ್ವಯಂಸೇವಕರ ಪ್ರತಿಜ್ಞೆಯಲ್ಲಿ ಹೇಳಲಾಗಿದೆ. ಇದರಲ್ಲಿ ’ಹಿಂದೂ’ ಎಂಬುದರ ವ್ಯಾಖ್ಯೆ ವಿಶಾಲವಾಗಿದೆ. ಆ ಚೌಕಟ್ಟಿನೊಳಗೇ ತನ್ನ ದಿಶೆಯನ್ನು ಕಾಯ್ದುಕೊಂಡು, ದೇಶ-ಕಾಲ-ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ನಡೆಯಲು ಸಾಕ? ಅವಕಾಶವಿದೆ. ಸಂಘದ ಪ್ರತಿಜ್ಞೆಯಲ್ಲಿ, ನಾನು ಸಂಘದ ಘಟಕನಾಗಿದ್ದೇನೆ ಎಂದೂ ಹೇಳಲಾಗುತ್ತದೆ. ಘಟಕ ಎಂದರೆ ಸಂಘವನ್ನು ರೂಪಿಸುವವನು, ಸಂಘದ ಸಣ್ಣ ರೂಪ ಮತ್ತು ಸಂಘದ ಅವಿಭಾಜ್ಯ ಅಂಗ ಎಂದರ್ಥ. ಆದ್ದರಿಂದ ಪರಸ್ಪರರ ನಡುವೆ ವಿಭಿನ್ನ ಅಭಿಪ್ರಾಯಗಳಿದ್ದರೂ, ಚರ್ಚೆಯಲ್ಲಿ ಅವುಗಳ ಅಭಿವ್ಯಕ್ತಿಗೆ ಪೂರ್ಣ ಸ್ವಾತಂತ್ರ್ಯವಿದೆ. ಒಮ್ಮೆ ಒಮ್ಮತ ಸಾಧಿಸಿ ನಿರ್ಧಾರವಾದರೆ, ಎಲ್ಲರೂ ತಮ್ಮ-ತಮ್ಮ ಅಭಿಪ್ರಾಯವನ್ನು ಆ ನಿರ್ಧಾರದಲ್ಲಿ ವಿಲೀನಗೊಳಿಸಿ ಒಂದೇ ದಿಕ್ಕಿನಲ್ಲಿ ನಡೆಯುತ್ತಾರೆ. ಕೈಗೊಂಡ ನಿರ್ಧಾರವನ್ನು ಎಲ್ಲರೂ ಪಾಲಿಸಬೇಕು ಎಂಬುದು ಮನಃಸ್ಥಿತಿ. ಆದ್ದರಿಂದ ಇಲ್ಲಿ ಎಲ್ಲರಿಗೂ ಕೆಲಸ ಮಾಡುವ ಸ್ವಾತಂತ್ರ್ಯವಿದೆ ಮತ್ತು ಎಲ್ಲರ ದಿಕ್ಕೂ ಒಂದೇ ಆಗಿರುತ್ತದೆ. ನಿತ್ಯವಾದದ್ದನ್ನು ನಾವು ಕಾಯ್ದುಕೊಳ್ಳುತ್ತೇವೆ ಮತ್ತು ಅನಿತ್ಯವಾದದ್ದನ್ನು ದೇಶ-ಕಾಲ-ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಿಕೊಂಡು ಮುನ್ನಡೆಯುತ್ತೇವೆ. ಸಂಘವನ್ನು ಒಳಗಿನಿಂದ ಅನುಭವಿಸದೆಯೇ ಹೊರಗಿನಿಂದ ನೋಡುವವರಿಗೆ ಅದರ ಸಂರಚನೆ ಮಾತ್ರ ಕಾಣುತ್ತದೆ. ಸಂಘದ ಆಂತರ್ಯದಲ್ಲಿ ಚರ್ಚೆ-ಪರಾಮರ್ಶೆ ಮತ್ತು ಆತ್ಮಾವಲೋಕನದ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ? ಇದಕ್ಕಾಗಿ ಸಂಘದಲ್ಲಿ ಒಂದು ವಿಧಾನವನ್ನು ರೂಪಿಸಲಾಗಿದೆ. ಇದರಲ್ಲಿಯೇ ಉದ್ದೇಶ ಮತ್ತು ಆಶಯವೂ ನಿಶ್ಚಿತವಾಗಿದೆ. ಆದರೆ ಅವುಗಳನ್ನು ನೀಡುವ ವಿಧಾನವು ವಿಭಿನ್ನವಾಗಿರಬಹುದು. ಹೊರಗಿನ ಸಂರಚನೆಯು ಬದಲಾಗಬಹುದು, ಆದರೆ ಆ ಸಂರಚನೆಯೊಳಗಿನ ವಿ?ಯವು ಸ್ಥಿರವಾಗಿದೆ. ಪರಿಸ್ಥಿತಿಯ ಜೊತೆಗೆ ಮನಃಸ್ಥಿತಿಯೂ ಮುಖ್ಯ. ಆದ್ದರಿಂದ ನಮ್ಮ ತರಬೇತಿಗಳಲ್ಲಿ ದೇಶದ ಸ್ಥಿತಿ, ಸವಾಲುಗಳು ಮುಂತಾದ ಹಲವಾರು ಚಿಂತನೆಗಳಿರುತ್ತವೆ. ಇದರ ಜೊತೆಗೆ, ವಿವಿಧ ಸಂದರ್ಭಗಳಲ್ಲಿ ಸ್ವಯಂಸೇವಕನು ಹೇಗಿರಬೇಕು, ಸಂಘಟನೆಯು ಯಾವ ಗುಣಗಳ ಆಧಾರದ ಮೇಲೆ ರೂಪಿತವಾಗಿದೆ, ತನ್ನಲ್ಲಿ ಆ ಗುಣಗಳನ್ನು ಬೆಳೆಸಿಕೊಳ್ಳಲು ಏನು ಮಾಡುತ್ತೇವೆ ಎಂಬ ವಿ?ಯಗಳ ಬಗ್ಗೆಯೂ ಚಿಂತನೆ ನಡೆಯುತ್ತದೆ. ಪ್ರಾರ್ಥನೆಯಲ್ಲಿ ನಮ್ಮ ಸಾಮೂಹಿಕ ಸಂಕಲ್ಪವನ್ನು ಮತ್ತು ಪ್ರತಿಜ್ಞೆಯಲ್ಲಿ ಪ್ರತಿ ಸ್ವಯಂಸೇವಕನ ವೈಯಕ್ತಿಕ ಸಂಕಲ್ಪವನ್ನು ಪ್ರತಿದಿನ ಸ್ಮರಿಸಲಾಗುತ್ತದೆ. ಸ್ವಯಂಸೇವಕ ಎಂದರೆ ಸ್ವಯಂ ಕಾರ್ಯಪ್ರವೃತ್ತನಾಗುವವನು ಎಂದರ್ಥ. ಸಂಘದ ಘಟಕ ಎಂಬ ಪದದ ಅರ್ಥವೆಂದರೆ, ನಾನು ಹೇಗಿರುವೆನೋ, ಸಂಘವೂ ಹಾಗೆಯೇ ಇದೆ; ಸಂಘವು ಹೇಗಿರುವುದೋ, ನಾನೂ ಹಾಗೆಯೇ ಇದ್ದೇನೆ ಎನ್ನುವುದು. ಸಮುದ್ರದ ಪ್ರತಿ ಹನಿಯೂ ಸಮುದ್ರದಂತಿರುತ್ತದೆ ಮತ್ತು ಎಲ್ಲ ಹನಿಗಳಿಂದಲೇ ಸಮುದ್ರ ರೂಪುಗೊಳ್ಳುತ್ತದೆಯಲ್ಲ, ಹಾಗೆಯೆ. ಈ ’ಒಂದು’ ಮತ್ತು ’ಪೂರ್ಣ’ದ ಸಂಬಂಧವು ಸಂಘದಲ್ಲಿ ಆರಂಭದಿಂದಲೂ ಹಸಿರಾಗಿಯೇ ಉಳಿದಿದೆ. ಇಲ್ಲಿ ಸ್ವಯಂಸೇವಕನ ಆತ್ಮಾವಲೋಕನವು ನಿರಂತರವಾಗಿ ನಡೆಯುತ್ತದೆ. ಯಶಸ್ಸಿನ ಶ್ರೇಯಸ್ಸು ಸಂಪೂರ್ಣ ಸಂಘಕ್ಕೆ ಸಲ್ಲುತ್ತದೆ. ಹಿನ್ನಡೆಯ ಸ್ಥಿತಿಯಲ್ಲಾದರೆ, "ಯಾವ ಹಂತದಲ್ಲಿ ನನ್ನ ಪ್ರಯತ್ನದಲ್ಲಿ ಕೊರತೆಯಾಯಿತು ಎಂದು ಪ್ರತಿ ಸ್ವಯಂಸೇವಕ ಚಿಂತನೆ ನಡೆಸುತ್ತಾನೆ. ಸ್ವಯಂಸೇವಕರ ತರಬೇತಿ ಎಂದರೆ ಇದೇ. ಸಮಾಜ ಬದಲಾಗಿದೆ, ಜೀವನಶೈಲಿ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಸಂಘದ ದೈನಂದಿನ ಶಾಖೆಯ ಮಾದರಿಯು ಎ? ಪರಿಣಾಮಕಾರಿಯಾಗಿದೆ? ಅಥವಾ ಈ ಮಾದರಿಗೆ ಯಾವುದಾದರೂ ಪರ್ಯಾಯ ವ್ಯವಸ್ಥೆಯಿದೆಯೇ? ಶಾಖೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪರ್ಯಾಯವಿರಬಹುದು, ಮತ್ತು ಅದನ್ನು ನಾವು ಸ್ವೀಕರಿಸುತ್ತೇವೆ. ಆದರೆ, ಒಟ್ಟಿಗೆ ಸೇರುವುದು, ಸದ್ಗುಣಗಳ ಸಾಮೂಹಿಕ ಆಚರಣೆ, "ನಾವು ಮಾತೃಭೂಮಿಗಾಗಿ ಕಾರ್ಯ ಮಾಡುತ್ತಿದ್ದೇವೆ, ಪರಮವೈಭವಕ್ಕಾಗಿ ಕಾರ್ಯ ಮಾಡುತ್ತಿದ್ದೇವೆ" ಎನ್ನುವಂತಹ ಭಾವನೆ, ಪರಸ್ಪರರ ಭೇಟಿ, ಒಬ್ಬರಿಗೊಬ್ಬರು ಸಹಕಾರ ನೀಡುವಂತಹವು ಶಾಖೆಯ ಮೂಲ ತತ್ವಗಳು. ಇವುಗಳಿಗೆ ಪರ್ಯಾಯವಿಲ್ಲ. ಸಾಮಾನ್ಯ ವ್ಯಕ್ತಿಯು ಇತರರೊಡನೆ ಸಂಪರ್ಕಕ್ಕೆ ಬರುವವರೆಗೂ ಸಾಮಾನ್ಯನೇ ಆಗಿರುತ್ತಾನೆ. ಇತರರ ಸಂಪರ್ಕಕ್ಕೆ ಬಂದ ನಂತರ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ಕಾರ್ಯವನ್ನು ಮಾಡುತ್ತಾನೆ, ಅಸಾಮಾನ್ಯ ತ್ಯಾಗವನ್ನೂ ಮಾಡುತ್ತಾನೆ. ಆದರೆ, ಇದಕ್ಕೆ ಒಂದು ವಾತಾವರಣವಿರಬೇಕು ಮತ್ತು ಆ ವಾತಾವರಣದೊಂದಿಗೆ ಆತ ಸಂಪರ್ಕದಲ್ಲಿರಬೇಕು. ಮಾದರಿ ಮತ್ತು ಸ್ನೇಹಭಾವವೇ ಬದಲಾವಣೆಯ ಮೂಲಗಳು; ಬೇರೆ ಯಾವುದೂ ಅಲ್ಲ. ವಿಶ್ವದಲ್ಲಿ ಎಲ್ಲಿಗೆ ಹೋಗಿ ನೋಡಿದರೂ, ಅಲ್ಲಿ ಬದಲಾವಣೆಯಾದಾಗ ಒಂದು ಮಾದರಿಯಿರುತ್ತದೆ. ಅದೆಂದರೆ, ಮೊದಲು ತನ್ನನ್ನು ಬದಲಾಯಿಸಿಕೊಳ್ಳಬೇಕು, ಅದನ್ನು ನೋಡಿ ಜನರಲ್ಲಿ ಬದಲಾವಣೆಯಾಗುತ್ತದೆ. ದೂರದಲ್ಲೆಲ್ಲೋ ಇದ್ದುಕೊಂಡು ಕಾರ್ಯವನ್ನು ಮಾಡಲಾಗದು. ಒಡನಾಟವಿರಬೇಕು, ಸನಿಹದಲ್ಲಿರಬೇಕು. ನಮ್ಮಲ್ಲಿ ಅನೇಕ ಮಹಾಪುರು?ರು ಇದ್ದಾರೆ. ಅವರನ್ನು ಅರಿತಿದ್ದೇವೆ, ಅವರ ಬಗ್ಗೆ ಶ್ರದ್ಧೆ, ಗೌರವವಿದೆ. ಆದರೆ, ನಾನು ಯಾರ ಸಹವಾಸದಲ್ಲಿರುತ್ತೇನೆಯೋ ಹಾಗೆಯೇ ನಡೆಯುತ್ತೇನೆ. ನನ್ನ ಸ್ನೇಹಿತನಾದರೂ, ನನಗಿಂತ ಸ್ವಲ್ಪ ಒಳ್ಳೆಯವನಾದರೆ ಅವನನ್ನೇ ಅನುಸರಿಸುತ್ತೇನೆ. ಇದು, ಬದಲಾವಣೆಯು ನಡೆಯುವುದರ ಸಾಮಾನ್ಯ ವಿಧಾನ. ಈ ಮಾದರಿಯಲ್ಲಿ ಎಲ್ಲಿಯೂ ಬದಲಾವಣೆ ಕಂಡಿಲ್ಲ. ಶಾಖೆಯಲ್ಲಿನ ಕಾರ್ಯಕ್ರಮಗಳು, ಸಮಯ ಬದಲಾಗುತ್ತದೆ, ಉಡುಪು ಬದಲಾಗುತ್ತದೆ. ಶಾಖೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮೊದಲಿನಿಂದಲೂ ಅವಕಾಶವಂತೂ ಇದ್ದೇ ಇದೆ. ಆದ್ದರಿಂದಲೇ ಹೇಳಿದ್ದು, ಶಾಖೆಗೆ ಪರ್ಯಾಯ ಮಾದರಿಯಿಲ್ಲ ಎಂದು. ಶಾಖೆ ಎಂದಿಗೂ ಅಪ್ರಸ್ತುತವಾಗುವುದಿಲ್ಲ. ಇಂದು ನಮ್ಮ ಶಾಖೆಯ ಮಾದರಿಯ ಬಗ್ಗೆ ಅಭಿವೃದ್ಧಿಹೊಂದಿದ ರಾ?ಗಳ ಜನರು ಬಂದು ಅಧ್ಯಯನ ಮಾಡುತ್ತಿದ್ದಾರೆ. ಪ್ರತಿ ಹತ್ತು ವ?ಕ್ಕೊಮ್ಮೆ ನಾವೂ ಈ ಕುರಿತು ಚಿಂತನೆ ನಡೆಸುತ್ತೇವೆ. ಬೇರೆ ಯಾವುದಾದರೂ ಪರ್ಯಾಯವಿದೆಯೇ ಎಂದು ಚರ್ಚಿಸುತ್ತೇವೆ. ಇಂತಹ ಚಿಂತನೆಗಳಲ್ಲಿ ನಾನು ಇದುವರೆಗೆ ೬-೭ ಬಾರಿ ಭಾಗವಹಿಸಿದ್ದೇನೆ. ಆದರೆ ನಾವು ಕೈಗೊಳ್ಳಬೇಕಿರುವ ಕಾರ್ಯಕ್ಕೆ ಅನುಗುಣವಾದ ಪರ್ಯಾಯವು ಇನ್ನೂ ಸಿಕ್ಕಿಲ್ಲ. ಸಂಘವು ಬುಡಕಟ್ಟು ಸಮುದಾಯಗಳ ಪ್ರದೇಶಗಳಲ್ಲಿ ಹೇಗೆ ಬೆಳೆಯುತ್ತಿದೆ? ಬುಡಕಟ್ಟು ಸಮುದಾಯಗಳ ಪ್ರದೇಶಗಳಲ್ಲಿ ಸಂಘದ ಮೊದಲ ಕೆಲಸವೆಂದರೆ ಬುಡಕಟ್ಟು ಬಂಧುಗಳನ್ನು ಸಶಕ್ತಗೊಳಿಸುವುದು, ಅವರ ಸೇವೆ ಮಾಡುವುದು ಎನ್ನುವುದಾಗಿತ್ತು. ನಂತರದ ದಿನಗಳಲ್ಲಿ, ಅವರ ಹಿತಾಸಕ್ತಿಗಳ ರಕ್ಷಣೆಗಾಗಿ ಪ್ರಯತ್ನಿಸುವುದೂ ಇದರೊಟ್ಟಿಗೆ ಸೇರಿಕೊಂಡಿತು. ಈಗ ನಮ್ಮ ಬುಡಕಟ್ಟು ಸಮಾಜವು ಬೇರೆಯವರ ಮುಂದಾಳತ್ವದಿಂದ ನಡೆಯುತ್ತಿದೆ. ತಮ್ಮ ಸಮಾಜದ ಕುರಿತು ಚಿಂತನೆ ನಡೆಸುವ ಮತ್ತು ಸಂಪೂರ್ಣ ರಾಷ್ಟ್ರೀಯ ಜೀವನದ ಒಂದು ಅಂಗವೆಂದು ತಿಳಿದುಕೊಂಡು ಅವರನ್ನು ಮುಂದಕ್ಕೆ ಕೊಂಡೊಯ್ಯುವ ನಾಯಕತ್ವವು ಬುಡಕಟ್ಟು ಸಮಾಜದಿಂದಲೇ ಎದ್ದುಬರಬೇಕೆಂದು ನಾವು ಬಯಸುತ್ತೇವೆ. ಈ ಪ್ರದೇಶಗಳಲ್ಲಿ ಕೆಲಸ ಮಾಡುವ ಸ್ವಯಂಸೇವಕರ ಸಂಖ್ಯೆ ಹೆಚ್ಚುತ್ತಿದೆ. ಬುಡಕಟ್ಟು ಸಮಾಜವೆಂದರೇನು, ಅವರ ಬೇರುಗಳು ಎಲ್ಲಿವೆ, ಬುಡಕಟ್ಟು ಸಮಾಜದ ಮಹಾಪುರು?ರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡುಗೆ ನೀಡಿದ ಬುಡಕಟ್ಟು ನಾಯಕರು... ಈ ಎಲ್ಲ ವಿ?ಯಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುತ್ತಾ, ಕ್ರಮೇಣ ರಾಷ್ಟ್ರೀಯ ಸ್ವರದಲ್ಲಿ ಮಾತನಾಡುವ, ಕೊಡುಗೆ ನೀಡುವ ಕಾರ್ಯಕರ್ತರು ಮತ್ತು ನಾಯಕತ್ವವು ಅಲ್ಲಿ ಎದ್ದುನಿಲ್ಲುವಂತೆ ಮಾಡುವ ಪ್ರಯತ್ನ ನಡೆದಿದೆ. ಈಶಾನ್ಯದ ಜೊತೆಗೆ ಇತರ ಬುಡಕಟ್ಟು ಪ್ರದೇಶಗಳಲ್ಲಿ ಸಂಘದ ಶಾಖೆಗಳು ಹೆಚ್ಚುತ್ತಿವೆ. ಭಾರತದ ನೆರೆಯ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವಾಗುತ್ತಿದೆ. ಮಾನವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವವರು ಹಿಂದೂಗಳ ಬಗ್ಗೆಯೂ ಅಂತಹ ಕಾಳಜಿಯನ್ನು ತೋರಿಸುತ್ತಿದ್ದಾರೆಯೇ? ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲೂ ಈ ವಿ?ಯಕ್ಕೆ ಒತ್ತುನೀಡಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಿಂದೂ ಸಮಾಜವು ಸಶಕ್ತವಾದಾಗ ಮಾತ್ರವೇ ಹಿಂದೂಗಳ ಕುರಿತು ಕಾಳಜಿಯು ವ್ಯಕ್ತವಾಗುತ್ತದೆ. ಏಕೆಂದರೆ ಹಿಂದೂ ಸಮಾಜ ಮತ್ತು ಭಾರತ ದೇಶವು ಒಂದಕ್ಕೊಂದು ಬೆಸೆದುಕೊಂಡಿವೆ. ಉತ್ತಮವಾದ ಹಿಂದೂ ಸಮಾಜವು ಭಾರತವನ್ನು ಉತ್ತಮ ದೇಶವನ್ನಾಗಿಸುತ್ತದೆ. ತಾವು ಹಿಂದೂಗಳೆಂದು ಕರೆದುಕೊಳ್ಳದವರನ್ನೂ ಒಡಗೂಡಿಸಿಕೊಂಡು ನಡೆಯಬಹುದು. ಏಕೆಂದರೆ ಅವರೂ ಹಿಂದೊಮ್ಮೆ ಹಿಂದೂಗಳೇ ಆಗಿದ್ದರು. ಭಾರತದ ಹಿಂದೂ ಸಮಾಜವು ಸಾಮರ್ಥ್ಯವಂತವಾದರೆ, ವಿಶ್ವದಾದ್ಯಂತದ ಹಿಂದೂಗಳಿಗೆ ಸ್ವಾಭಾವಿಕವಾಗಿ ಸಾಮರ್ಥ್ಯದ ಅರಿವಾಗುತ್ತದೆ. ಈ ಕೆಲಸ ನಡೆಯುತ್ತಿದೆಯಾದರೂ ಇನ್ನೂ ಪೂರ್ಣಗೊಂಡಿಲ್ಲ. ಕ್ರಮೇಣ ಆ ಸ್ಥಿತಿಯು ಬರುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆದ ದೌರ್ಜನ್ಯಕ್ಕೆ ಈ ಬಾರಿ ತೋರಿದ ಆಕ್ರೋಶದ ಪ್ರಕಟೀಕರಣವು ಈ ಹಿಂದೆ ಎಂದೂ ಆಗಿರಲಿಲ್ಲ. ಅ? ಅಲ್ಲ, ಅಲ್ಲಿನ ಹಿಂದೂಗಳು ತಾವು ಓಡಿಹೋಗುವುದಿಲ್ಲ, ಬದಲಿಗೆ ಅಲ್ಲಿಯೇ ಉಳಿದು ತಮ್ಮ ಹಕ್ಕುಗಳನ್ನು ಪಡೆಯುವುದಾಗಿ ಹೇಳಿದ್ದಾರೆ. ಈಗ ಹಿಂದೂ ಸಮಾಜದ ಆಂತರಿಕ ಸಾಮರ್ಥ್ಯವು ಹೆಚ್ಚುತ್ತಿದೆ. ಸಂಘಟನೆಯು ಬೆಳವಣಿಗೆ ಆಗುತ್ತಿದ್ದರೆ ಅದರ ಪರಿಣಾಮವು ಸ್ವಾಭಾವಿಕವಾಗಿ ಮುನ್ನೆಲೆಗೆ ಬರುತ್ತದೆ. ಅಲ್ಲಿಯವರೆಗೆ ಹೋರಾಡುತ್ತಲೇ ಇರಬೇಕು. ವಿಶ್ವದ ಎಲ್ಲೆಡೆಯೂ ಹಿಂದೂಗಳಿರುವ ಜಾಗದಲ್ಲಿ, ಹಿಂದೂ ಸಂಘಟನೆಯಾಗಿ, ತನ್ನ ವ್ಯಾಪ್ತಿಯಲ್ಲಿದ್ದುಕೊಂಡು ಏನೆಲ್ಲ ಮಾಡಬಹುದೋ ಅದನ್ನೆಲ್ಲ ಮಾಡುವೆವು. ಸಂಘ ಇರುವುದೇ ಅದಕ್ಕಾಗಿ. "ಧರ್ಮ, ಸಂಸ್ಕೃತಿ ಮತ್ತು ಸಮಾಜವನ್ನು ರಕ್ಷಿಸಿ ರಾಷ್ಟ್ರದ ಸವಾಂಗೀಣ ಉನ್ನತಿಗೆ" ಕೆಲಸ ಮಾಡುತ್ತೇವೆ ಎನ್ನುವುದೇ ಸ್ವಯಂಸೇವಕರ ಪ್ರತಿಜ್ಞೆಯಲ್ಲವೇ? ಜಾಗತಿಕ ವ್ಯವಸ್ಥೆಯಲ್ಲಿ ಸೈನಿಕ ಶಕ್ತಿ, ರಾಷ್ಟ್ರೀಯ ಭದ್ರತೆ, ಆರ್ಥಿಕ ಶಕ್ತಿಯು ತನ್ನದೇ ಆದ ಮಹತ್ವವನ್ನು ಹೊಂದಿವೆ. ಸಂಘವು ಇದರ ಬಗ್ಗೆ ಏನು ಆಲೋಚಿಸುತ್ತದೆ? ಶಕ್ತಿವಂತರಾಗಬೇಕಾದ ಅನಿವಾರ್ಯತೆ ಇದೆ. ’ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್’-ನಮ್ಮನ್ನು ಯಾರೂ ಗೆಲ್ಲಲಾಗದಂತಹ ಸಾಮರ್ಥ್ಯ ಇರಬೇಕು ಎನ್ನುವ ಮಾತುಗಳು ಸಂಘದ ಪ್ರಾರ್ಥನೆಯಲ್ಲೇ ಇದೆ. ನಮಗೆ ಸ್ವಂತ ಎ? ಶಕ್ತಿ ಇದೆಯೋ ಅದ? ನಿಜವಾದ ಶಕ್ತಿ. ಭದ್ರತೆಯ ವಿ?ಯದಲ್ಲಿ ನಾವು ಯಾರ ಮೇಲೂ ಅವಲಂಬಿತರಾಗಿರಬಾರದು, ನಾವೇ ನಮ್ಮ ಭದ್ರತೆಯನ್ನು ಮಾಡಿಕೊಳ್ಳಬೇಕು. ಇಡೀ ವಿಶ್ವವೇ ಒಟ್ಟಾಗಿ ಬಂದರೂ ನಮ್ಮನ್ನು ಗೆಲ್ಲಲಾಗದಂತಹ ಸಾಮರ್ಥ್ಯವಂತರಾಗಿರಬೇಕು. ಏಕೆಂದರೆ ವಿಶ್ವದಲ್ಲಿ ಕೆಲವು ದು? ಜನರಿದ್ದಾರೆ, ಅವರು ಸ್ವಭಾವದಿಂದಲೇ ಆಕ್ರಮಣಕಾರಿಯಾಗಿರುತ್ತಾರೆ. ಸಜ್ಜನ ವ್ಯಕ್ತಿಯು ಕೇವಲ ಸಜ್ಜನತೆಯಿಂದ ಸುರಕ್ಷಿತನಾಗಿರುವುದಿಲ್ಲ. ಸಜ್ಜನತೆಯ ಜೊತೆಗೆ ಶಕ್ತಿಯೂ ಬೇಕು. ಕೇವಲ ಶಕ್ತಿಯಿದ್ದರೆ ಅದು ದಿಕ್ಕುತಪ್ಪಿ ಹಿಂಸೆಗೆ ಕಾರಣವಾಗಬಹುದು. ಆದ್ದರಿಂದ ಶಕ್ತಿಯ ಜೊತೆಗೆ ಸನ್ನಡತೆಯೂ ಬೇಕು. ಈ ಎರಡರ ಆರಾಧನೆಯನ್ನು ನಾವು ಮಾಡಬೇಕು. ಭಾರತವು ಅಜೇಯವಾಗಿರಬೇಕು. ’ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್’ ಎಂಬಂತಹ ಸಾಮರ್ಥ್ಯವಿರಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ದು? ಶಕ್ತಿಗಳನ್ನು ಬಲವಂತವಾಗಿಯಾದರೂ ನಾಶಪಡಿಸಬೇಕು. ಆದರೆ ಸನ್ನಡತೆಯ ಸ್ವಭಾವವಿದ್ದರೆ, ರಾವಣನನ್ನು ನಾಶಮಾಡಿ, ಆ ಸ್ಥಾನದಲ್ಲಿ ವಿಭೀ?ಣನನ್ನು ರಾಜನನ್ನಾಗಿ ಮಾಡಿ ಹಿಂದಿರುಗುತ್ತೇವೆ. ವಿಶ್ವದ ಮೇಲೆ ನಮ್ಮ ಛಾಪು ಮೂಡಲಿ ಎಂಬ ಕಾರಣಕ್ಕಾಗಿ ನಾವು ಇದೆಲ್ಲವನ್ನೂ ಮಾಡುತ್ತಿಲ್ಲ. ಎಲ್ಲರ ಜೀವನವೂ ಆರೋಗ್ಯಪೂರ್ಣವಾಗಲಿ, ಎಲ್ಲರೂ ಸಾಮರ್ಥ್ಯವಂತರಾಗಲಿ ಎಂಬ ಕಾರಣಕ್ಕಾಗಿ ಮಾಡುತ್ತಿದ್ದೇವೆ. ಶಕ್ತಿವಂತರಾಗಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ದು? ಜನರ ದು?ತೆಯ ಅನುಭವವನ್ನು ನಾವು ನಮ್ಮ ಎಲ್ಲ ಗಡಿಗಳಲ್ಲಿಯೂ ಎದುರಿಸುತ್ತಿದ್ದೇವೆ. ಭಾರತದಲ್ಲಿ ಭಾ?, ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯಿದೆ. ಇದರ ಹಿನ್ನೆಲೆಯಲ್ಲಿ ಸಂಘವು ಎಲ್ಲರನ್ನೂ ಹೇಗೆ ಒಳಗೊಳ್ಳುತ್ತದೆ? ಇದಕ್ಕೆ ಉತ್ತರ ಬೇಕೆಂದರೆ ಸಂಘದೊಳಗೆ ಬಂದು ನೋಡಬೇಕು. ಎಲ್ಲ ಭಾ?ಗಳ, ಧರ್ಮ, ಪಂಥಗಳ ಜನರು ತುಂಬಾ ಆನಂದದಿಂದ ಒಟ್ಟಿಗೆ ಸಂಘದಲ್ಲಿ ಕೆಲಸ ಮಾಡುತ್ತಾರೆ. ಸಂಘದ ಗೀತೆಗಳು ಕೇವಲ ಹಿಂದಿಯಲ್ಲಿರುವುದಿಲ್ಲ, ಅನೇಕ ಭಾ?ಗಳಲ್ಲಿವೆ. ಪ್ರತಿ ಭಾ?ಯಲ್ಲೂ ಸಂಘದ ಗೀತೆಗಳನ್ನು ಹಾಡುವ ಗಾಯಕರು, ಗೀತೆಗಳನ್ನು ರಚಿಸುವ ಕವಿಗಳು, ಸಂಗೀತ ಸಂಯೋಜಕರಿದ್ದಾರೆ. ಆದರೂ, ಸಂಘದ ಶಿಕ್ಷಣ ವರ್ಗಗಳಲ್ಲಿ ಕೊಡಲಾಗುವ ಮೂರು ಗೀತೆಗಳನ್ನು ಭಾರತದಾದ್ಯಂತ ಎಲ್ಲರೂ ಹಾಡುತ್ತಾರೆ. ಎಲ್ಲರೂ ತಮ್ಮ-ತಮ್ಮ ವಿಶಿ?ತೆಯನ್ನು ಕಾಯ್ದುಕೊಂಡು, ರಾಷ್ಟ್ರೀಯತೆಯನ್ನು ಗೌರವಿಸುತ್ತಾ, ಸಂಪೂರ್ಣ ಸಮಾಜದ ಏಕತೆಯ ಅರಿವನ್ನು ರಕ್ಷಿಸಿಕೊಂಡು ನಡೆಯುತ್ತಿದ್ದಾರೆ. ಇದೇ ಸಂಘ. ಇ? ವಿವಿಧತೆಯಿಂದ ಕೂಡಿರುವ ಸಮಾಜವನ್ನು ಒಂದು ದಾರದಲ್ಲಿ ಪೋಣಿಸಬೇಕಾಗಿರುವ ದಾರವನ್ನು ನೀಡುವುದೇ ನಮ್ಮ ಕೆಲಸ. ಸಂಘವು ಸಾಮಾಜಿಕ ಸಾಮರಸ್ಯದ ಬಗ್ಗೆ ಮಾತನಾಡುತ್ತದೆ ಮತ್ತು ಅದಕ್ಕಾಗಿ ಕೆಲಸವನ್ನೂ ಮಾಡುತ್ತದೆ. ಆದರೆ ಕೆಲವರು ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಈ ಎರಡರ ನಡುವಿನ ವ್ಯತ್ಯಾಸವನ್ನು ನೀವು ಹೇಗೆ ನೋಡುತ್ತೀರಿ? ಸಮಾನತೆ ಎನ್ನುವುದು ಆರ್ಥಿಕವಾಗಿ, ರಾಜಕೀಯವಾಗಿರುವುದರ ಜತೆಗೆ ಸಾಮಾಜಿಕ ಸಮಾನತೆಯೂ ಬರಬೇಕು. ಇಲ್ಲದಿದ್ದರೆ ಆರ್ಥಿಕ, ರಾಜಕೀಯ ಸಮಾನತೆಗೆ ಅರ್ಥವಿರುವುದಿಲ್ಲ. ಬಂಧುಭಾವವೇ ಸಾಮರಸ್ಯ. ಸ್ವಾತಂತ್ರ್ಯ ಮತ್ತು ಸಮತೆಯ ಆಧಾರವೇ ಬಂಧುಭಾವ. ಸ್ವಾತಂತ್ರ್ಯವಿಲ್ಲದ ಸಮತೆಯು ಸಂಕುಚಿತತೆಯನ್ನು ತರುತ್ತದೆ, ಮತ್ತು ಸಮಾನತೆಯು ಶಾಶ್ವತವಾಗಿರಬೇಕಾದರೆ ಬಂಧುಭಾವದ ಆಧಾರ ಬೇಕು. ಈ ಬಂಧುಭಾವವೇ ಸಾಮರಸ್ಯ. ಇದು ಸಮಾನತೆಯ ಮೊದಲ ಹೆಜ್ಜೆ. ಜಾತಿಭೇದ, ಅಸ್ಪೃಶ್ಯತೆಯ ವಿರುದ್ಧ ಕಾನೂನಿದ್ದರೂ ಅಸಮಾನತೆಯು ಹೋಗಿಲ್ಲ. ಏಕೆಂದರೆ ಅಸಮಾನತೆಯು ನಿಜವಾಗಿ ಜೀವಂತವಾಗಿರುವುದು ಮನಸ್ಸಿನಲ್ಲಿ. ಮೊದಲಿಗೆ ಅಸಮಾನತೆಯನ್ನು ಮನಸ್ಸಿನಿಂದ ತೆಗೆಯಬೇಕು. ಎಲ್ಲರೂ ನಮ್ಮವರೇ, ಆದ್ದರಿಂದಲೇ ನಾವೆಲ್ಲರೂ ಸಮಾನರಾಗಿದ್ದೇವೆ ಎಂದು ಒಪ್ಪಿಕೊಳ್ಳಬೇಕು. ನೋಡಲು ನಾವ್ಯಾರೂ ಏಕರೂಪವಾಗದಿದ್ದರೂ ಪರಸ್ಪರರಿಗಾಗಿಯೇ ಇದ್ದೇವೆ. ನಾವೆಲ್ಲರೂ ಸ್ನೇಹದಲ್ಲಿ ಬಂಧಿತರಾಗಿದ್ದೇವೆ. ಇದೇ ಸಾಮರಸ್ಯ. ಪ್ರೇಮಭಾವ, ಬಂಧುಭಾವವೇ ಸಾಮರಸ್ಯ. ಸಂಘದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಆಗಾಗ ಸವಾಲುಗಳು ಏಳುತ್ತಿರುತ್ತವೆ. ಇದರ ಬಗ್ಗೆ ನೀವು ಏನು ಹೇಳುತ್ತೀರಿ? ಮಹಿಳೆಯರಲ್ಲಿ ವ್ಯಕ್ತಿನಿರ್ಮಾಣ ಮತ್ತು ಸಮಾಜ ಸಂಘಟನೆಯ ಕೆಲಸವನ್ನು ರಾ? ಸೇವಿಕಾ ಸಮಿತಿಯ ಮೂಲಕವೇ ಮಾಡಬೇಕೆಂದು ೧೯೩೩ರ ಸುಮಾರಿಗೆ ನಿರ್ಧಾರವಾಯಿತು. ಅದೇ ಈಗಲೂ ನಡೆಯುತ್ತಿದೆ. ಮಹಿಳೆಯರ ನಡುವೆಯೂ ಸಂಘವೇ ಕಾರ್ಯ ಮಾಡಲಿ ಎಂದು ರಾಷ್ಟ್ರ ಸೇವಿಕಾ ಸಮಿತಿಯು ಹೇಳುವವರೆಗೂ ನಾವು ಆ ಕಾರ್ಯಕ್ಕೆ ಹೋಗುವುದಿಲ್ಲ. ಎರಡನೇಯದಾಗಿ, ಸಂಘದ ಶಾಖೆಯ ಕಾರ್ಯಕ್ರಮಗಳು ಪುರು?ರಿಗಾಗಿಯೇ ಇವೆ. ಕಾರ್ಯಕ್ರಮಗಳನ್ನು ನೋಡಲು ಮಹಿಳೆಯರು ಬರುತ್ತಿದ್ದಾರೆ. ಆದರೆ ಸಂಘದ ಕೆಲಸವು ಕೇವಲ ಪುರು? ಕಾರ್ಯಕರ್ತರಿಂದ? ನಡೆಯುವುದಿಲ್ಲ ಎನ್ನುವುದನ್ನು ನೆನಪಿನಲ್ಲಿಡಬೇಕು. ಸ್ವಯಂಸೇವಕನ ತಾಯಿ-ತಂಗಿ-ಪತ್ನಿಯ ಸಹಕಾರದಿಂದಲೇ ಸಂಘ ನಡೆಯುತ್ತಿರುವುದು. ಸಂಘದ ಸ್ವಯಂಸೇವಕನ ಮನೆಯಲ್ಲಿ ಎ? ಮಹಿಳೆಯರಿದ್ದಾರೋ, ಅ? ಮಹಿಳೆಯರು ಸಂಘದಲ್ಲಿದ್ದಾರೆ ಎಂದೇ ಅರ್ಥ. ವಿವಿಧ ಸಂಘಟನೆಗಳಲ್ಲಿ (ಸಂಘ ಪರಿವಾರ) ಮಹಿಳೆಯರು ಸಂಘದ ಸ್ವಯಂಸೇವಕರ ಜೊತೆಗೇ ಕೆಲಸ ಮಾಡುತ್ತಾರೆ. ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಸಕ್ರಿಯ ಭಾಗವಹಿಸುವಿಕೆಯಿದೆ. ಮೊದಲ ಬಾರಿಗೆ ಭಾರತದ ಮಹಿಳಾ ಜಗತ್ತಿನ ವಿಶಾಲ ಸಮೀಕ್ಷೆಯನ್ನು ಮಾಡಿದವರು ಇದೇ ಮಹಿಳೆಯರು. ಈ ಸಮೀಕ್ಷೆಯನ್ನು ಸರ್ಕಾರವೂ ಸ್ವೀಕರಿಸಿದೆ. ಕಳೆದ ವ? ದೇಶಾದ್ಯಂತ ಮಹಿಳಾ ಸಮ್ಮೇಳನಗಳನ್ನು ಮಹಿಳೆಯರೇ ಆಯೋಜಿಸಿದ್ದಾರೆ, ಇದರಲ್ಲಿ ಲಕ್ಷಾಂತರ ಮಹಿಳೆಯರು ಭಾಗವಹಿಸಿದ್ದಾರೆ. ಈ ಎಲ್ಲ ಕಾರ್ಯಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲ ಮತ್ತು ಸಹಕಾರವಿತ್ತು. ಮಹಿಳೆಯರ ಉದ್ಧಾರವನ್ನು ಪುರು?ರು ಮಾಡಲಾಗದು, ಮಹಿಳೆಯರೇ ತಮ್ಮ ಉದ್ಧಾರವನ್ನು ಮಾಡಿಕೊಳ್ಳಲು ಸಶಕ್ತರು ಎಂದು ನಾವು ನಂಬಿದ್ದೇವೆ. ಮಹಿಳೆಯರು ಸಬಲರಾದಾಗ ಎಲ್ಲರ ಉದ್ಧಾರವೂ ಆಗುತ್ತದೆ. ಸಂಘದ ಶತಮಾನದ ವ?ದಲ್ಲಿ ಪಂಚ ಪರಿವರ್ತನೆಯ ಸಂಕಲ್ಪವನ್ನು ಕೈಗೊಳ್ಳಲಾಗಿದೆ. ಯಾವುದರ ಆಧಾರದಲ್ಲಿ ಇವುಗಳನ್ನು ಅನು?ನಗೊಳಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವ ಕಾರ್ಯಯೋಜನೆಯನ್ನು ರೂಪಿಸಲಾಗಿದೆ? ನಡವಳಿಕೆಯ ಬದಲಾವಣೆಗೆ ಬೇಕಾಗಿರುವುದು ಮನಸ್ಸಿನ ಭಾವನೆ. ಯಾವ ಕೆಲಸ ಮಾಡುವುದರಿಂದ ಮನಸ್ಸಿನ ಭಾವನೆ ಬದಲಾಗುತ್ತದೆಯೋ, ಸ್ವಭಾವವು ರೂಪಾಂತರಗೊಳ್ಳುತ್ತದೆಯೋ, ಆ ಕೆಲಸವನ್ನು ನೀಡಬೇಕು. ಆಗ ಜೀವನವೂ ಸರಿಯಾಗುತ್ತದೆ. ಆದ್ದರಿಂದ ಪಂಚ ಪರಿವರ್ತನೆಯ ಮಾತನ್ನು ಹೇಳುತ್ತಿದ್ದೇವೆ. ೧. ಮೊದಲನೆಯದಾಗಿ ಸಾಮರಸ್ಯದ ಮಾತು. ನಮ್ಮ ಸಮಾಜದಲ್ಲಿ ಪ್ರೀತಿ ಹೆಚ್ಚಬೇಕು. ನಮ್ಮ ಸಮಾಜವು ವಿವಿಧ ಸ್ವರೂಪದಲ್ಲಿದೆ, ವಿವಿಧ ಸ್ಥಿತಿಗಳಲ್ಲಿದೆ, ವಿವಿಧ ಭೌಗೋಳಿಕ ಪ್ರದೇಶಗಳಲ್ಲಿದೆ. ಇಲ್ಲಿ ಅನೇಕ ಸಮಸ್ಯೆಗಳಿವೆ. ಒಬ್ಬರಿಗೆ ರೂಪಿಸಿದ ನಿಯಮ ಇನ್ನೊಬ್ಬರಿಗೂ ಸರಿಯಾಗಿ ಹೊಂದುತ್ತದೆ ಎನ್ನುವಂತಿಲ್ಲ. ಇದು ವಿಶಾಲವಾದ ದೇಶ. ಇಂತಹ ಸನ್ನಿವೇಶದಲ್ಲಿ, ಎಲ್ಲರೂ ಸುರಕ್ಷಿತವಾಗಿರುವಂತಹ ವ್ಯವಸ್ಥೆಯನ್ನು ರೂಪಿಸಿದರೆ ಪ್ರೀತಿಯೂ ಹೆಚ್ಚುತ್ತದೆ. ಸಾಮಾಜಿಕ ಸಾಮರಸ್ಯವನ್ನು ಮಾತನಾಡುವುದ? ಅಲ್ಲ, ಅದರ ಆಚರಣೆಯನ್ನು ಮಾಡಬೇಕು. ಸಮಾಜದ ಹೊರಗೆ ಎ? ಬೇಧಭಾವವಿರಲಿ, ನಾವು ಮಾತ್ರ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ನನ್ನ ಹಾಗೂ ಕುಟುಂಬಕ್ಕೆ ಸಂಬಂಧಿಸಿ ಎಲ್ಲ ರೀತಿಯ ಸ್ನೇಹಿತರಾಗಿರಬೇಕು. ನಮ್ಮ ಪ್ರಭಾವವಿರುವ ಕಡೆಗಳಲ್ಲಿ ದೇವಾಲಯ, ನೀರು, ಸ್ಮಶಾನ ಎಲ್ಲರಿಗೂ ಸಮಾನವಾಗಿರಬೇಕು. ಈ ಕಾರ್ಯ ಆರಂಭವಾಗಿದೆ, ಮುಂದುವರಿಸಬೇಕಾಗಿದೆ. ೨. ಎರಡನೆಯದು, ಕುಟುಂಬ ಪ್ರಬೋಧನ. ಜಗತ್ತಿಗೆ ಶಾಂತಿಯನ್ನು ನೀಡುವ ವಿ?ಯಗಳು ಸಾಂಪ್ರದಾಯಿಕ ಸಂಸ್ಕಾರಗಳಿಂದ ಲಭಿಸುತ್ತವೆ. ಆ ವಿ?ಯಗಳು ನಮ್ಮ ಕುಲಾಚಾರಗಳಲ್ಲಿವೆ ಹಾಗೂ ದೇಶದ ರೀತಿನೀತಿಯಲ್ಲಿಯೂ ಇವೆ. ಇವುಗಳ ಬಗ್ಗೆ ಒಂದೆಡೆ ಕಲೆತು ಚರ್ಚೆ ಮಾಡಿ, ಒಮ್ಮತವೇರ್ಪಡಿಸಿ ಕುಟುಂಬದ ಆಚರಣೆಗೆ ತರಬೇಕು. ಇದೇ ಕುಟುಂಬ ಪ್ರಬೋಧನ. ೩. ಮೂರನೆಯದು ಪರಿಸರ ಸಂರಕ್ಷಣೆ. ಪರಿಸರ ಸಂರಕ್ಷಣೆಗಾಗಿ ಆಂದೋಲನಗಳೇನೋ ನಡೆಯುತ್ತಿವೆ. ಆದರೆ, ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ವ್ಯರ್ಥವಾಗಿ ನೀರು ಸೋರಿಕೆಯಾಗುತ್ತಿದೆ ಎಂದು ಚಿಂತಿಸುವುದೇ ಇಲ್ಲ. ಮೊದಲು ಈ ಕೆಲಸವನ್ನು ಮಾಡಬೇಕು. ಮರಗಳನ್ನು ನೆಡಬೇಕು, ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು, ನೀರನ್ನು ಉಳಿಸಬೇಕು. ಈ ಮೂಲಭೂತ ಕೆಲಸಗಳನ್ನು ಮಾಡುವುದರಿಂದ ಪರಿಸರದ ಕುರಿತು ತಿಳುವಳಿಕೆ ಬರುತ್ತದೆ, ಮುಂದಿನ ಹೆಜ್ಜೆಗಳನ್ನು ಆಲೋಚಿಸಲು ಮುಂದಾಗುತ್ತಾರೆ. ೪. ನಾಲ್ಕನೆಯದು ಸ್ವ. ನಮ್ಮ ’ಸ್ವ?ತ್ವದ ಆಧಾರದ ಮೇಲೆ ನಮ್ಮ ಜೀವನಕ್ರಮ ಇರಬೇಕು. ನಮ್ಮೆಲ್ಲರಿಗೆ ಸೇರಿದ ’ಸ್ವ’ದ ಆಧಾರದಲ್ಲೇ ನಡೆಯಬೇಕು. ಮನೆಯಲ್ಲಿ ಭಾ?, ಉಡುಗೆ, ಆಹಾರ, ಭಜನೆ ಇವೆಲ್ಲವೂ ನಮ್ಮತನದ ಆಧಾರದಲ್ಲೇ ಇರಬೇಕು. ಮನೆಯ ಹೊರಗೆ ಪರಿಸ್ಥಿತಿಗೆ ತಕ್ಕಂತೆ ವರ್ತಿಸಬೇಕು. ಮನೆಯೊಳಗೆ ನಾವೇ ಇದ್ದೇವಲ್ಲ? ಇದರಿಂದಲೇ ಸಂಸ್ಕಾರಗಳೂ ಉಳಿಯುತ್ತವೆ. ಸ್ವಾವಲಂಬಿ ದೇಶವಾಗಬೇಕಾದರೆ, ಸಾಧ್ಯವಾದಷ್ಟೂ ನಮ್ಮ ದೇಶದ ವಸ್ತುಗಳನ್ನೇ ಬಳಸಬೇಕು. ಇದರರ್ಥ ಅಂತಾರಾಷ್ಟ್ರೀಯ ವ್ಯಾಪಾರವನ್ನು ನಿಲ್ಲಿಸಬೇಕು ಎಂದರ್ಥವಲ್ಲ. ಅದಕ್ಕೊಂದು ಸಮತೋಲನವಿದೆ. ನನ್ನ ದೇಶದ ವಸ್ತುವಿನಿಂದಲೇ ಕೆಲಸವಾಗುತ್ತದೆ ಎಂದರೆ ಅದರಲ್ಲೇ ನಡೆಸುತ್ತೇನೆ. ದೇಶಕ್ಕೆ ಅತ್ಯಗತ್ಯವಾಗಿರುವ, ಜೀವನಾವಶ್ಯ ವಸ್ತುವಿದ್ದರೆ ಹೊರದೇಶದಿಂದ ಪಡೆಯಬಹುದು. ಆದರೆ ಇದನ್ನು ಬೇರೆಯವರ ಒತ್ತಡಕ್ಕೆ ಮಣಿದಲ್ಲ, ನಮ್ಮ ಅಗತ್ಯಕ್ಕೆ ಅನುಗುಣವಾಗಿ ಪಡೆಯಬೇಕು. ’ಸ್ವ’ತ್ವದ ಆಚರಣೆಯಲ್ಲಿ ಈ ಎಲ್ಲ ವಿ?ಯಗಳು ಒಳಗೊಳ್ಳುತ್ತವೆ. ೫. ಐದನೆಯದು ನಾಗರಿಕ ಶಿ?ಚಾರ. ಕಾನೂನು, ಸಂವಿಧಾನ, ಸಾಮಾಜಿಕ ಸಭ್ಯತೆಯ ಪಾಲನೆಯೇ ನಾಗರಿಕ ಶಿ?ಚಾರ. ಶತಾಬ್ದಿ ವ?ದಲ್ಲಿ ಈ ಐದು ವಿ?ಯಗಳನ್ನು ಸ್ವಯಂಸೇವಕರು ತಮ್ಮ ಜೀವನದಲ್ಲಿ ಪಾಲಿಸುತ್ತಾರೆ. ಶತಾಬ್ದಿ ವ?ವು ಪೂರ್ಣಗೊಂಡ ನಂತರ ಈ ಅಂಶಗಳನ್ನು ಶಾಖೆಗಳ ಮೂಲಕ ಸಮಾಜಕ್ಕೆ ಕೊಂಡೊಯ್ಯುತ್ತಾರೆ. ಈ ಆಚರಣೆಯು ಸಾರ್ವತ್ರಿಕವಾದರೆ ಅದೇ ರೀತಿಯ ವಾತಾವರಣವೂ ರೂಪುಗೊಳ್ಳುತ್ತದೆ. ವಾತಾವರಣವು ರೂಪುಗೊಂಡರೆ ಬದಲಾವಣೆ ಆಗುತ್ತದೆ. ಅಲ್ಲಿಂದ ಇನ್ನೂ ಅನೇಕ ವಿ?ಯಗಳು ಮುಂದುವರಿದುಕೊಂಡುಹೋಗುತ್ತವೆ. ಇಂತಹ ಆಲೋಚನೆಯಿದೆ. ಏನಾಗುತ್ತದೆ ಮುಂದೆ ನೋಡೋಣ. ಮುಂದಿನ ೨೫ ವ?ಗಳಿಗೆ ಸಂಘವು ಯಾವ ದೃಷ್ಟಿಯನ್ನು ಹೊಂದಿದೆ? ಸಂಪೂರ್ಣ ಹಿಂದೂ ಸಮಾಜವನ್ನು ಸಂಘಟಿಸುವುದು ಮತ್ತು ದೇಶವನ್ನು ಪರಮವೈಭವದಿಂದ ಸಂಪನ್ನಗೊಳಿಸುವುದು. ಹೇಳದೇ ಉಳಿದ ಮತ್ತೊಂದು ವಿ?ಯವೆಂದರೆ ಸಂಪೂರ್ಣ ವಿಶ್ವವನ್ನು ಇದೇ ರೀತಿ ಮಾಡುವುದು. ಇದೇನು ಹೊಸದಲ್ಲ. ಡಾ. ಹೆಡಗೆವಾರ್ ಅವರ ಕಾಲದಿಂದಲೇ ಈ ದೃಷ್ಟಿಯಿದೆ. "ಭಾರತದ ಸಂಪೂರ್ಣ ಸ್ವಾತಂತ್ರ್ಯವೇ ನಮ್ಮ ಗುರಿಯಾಗಿದೆ ಮತ್ತು ಸ್ವತಂತ್ರ ಭಾರತವು ವಿಶ್ವದ ಇತರೆ ದೇಶಗಳನ್ನು ಬಂಡವಾಳಶಾಹಿಯ ಕಪಿಮುಷ್ಠಿಯಿಂದ ಮುಕ್ತಗೊಳಿಸುತ್ತದೆ" ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೇಳಬೇಕೆಂದು ಅವರು ೧೯೨೦ರಲ್ಲಿ ಒಂದು ಪ್ರಸ್ತಾವನೆಯನ್ನು ಮಂಡಿಸಿದ್ದರು. ಇದೀಗ ಸಂಘಕ್ಕೆ ೧೦೦ ವ?ಗಳಾಗಿವೆ ಮತ್ತು ದೇಶದ ಸ್ವಾತಂತ್ರ್ಯದ ೧೦೦ ವ?ಗಳು ೨೦೪೭ರಲ್ಲಿ ಪೂರ್ಣಗೊಳ್ಳಲಿದೆ. ಭಾರತವು ವಿಶ್ವಗುರುವಾಗುವುದು ಹೇಗೆ? ಈ ಸಮಯದಲ್ಲಿ ಕೆಲವರು ವಿವಿಧ ರೀತಿಯಲ್ಲಿ ಭಿನ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರಲ್ಲ? ಇವೆಲ್ಲವನ್ನೂ ನೀವು ಹೇಗೆ ನೋಡುತ್ತೀರಿ? ವಿ?ಯಗಳನ್ನು ಗ್ರಹಿಸುವ ನಮ್ಮ ಪ್ರಕ್ರಿಯೆಯಲ್ಲಿ ಈ ಎಲ್ಲ ವಿ?ಯಗಳ ಬಗ್ಗೆ ಚಿಂತನೆ ಮಾಡಿದ್ದೇವೆ. ಆತ್ಮವಿಸ್ಮೃತಿ, ಸ್ವಾರ್ಥ ಮತ್ತು ಭೇದ ಈ ಮೂರು ವಿ?ಯಗಳ ವಿರುದ್ಧ ಹೋರಾಡುತ್ತಲೇ ನಾವು ಮುಂದೆ ಸಾಗುತ್ತಿದ್ದೇವೆ. ಇದೇ ಕಾರಣದಿಂದಾಗಿ ಇಂದು ಸಮಾಜದ ವಿಶ್ವಾಸವನ್ನು ಗಳಿಸಿದ್ದೇವೆ. ಈ ಪ್ರಕ್ರಿಯೆಯೇ ಭವಿ?ದಲ್ಲೂ ಮುಂದುವರಿಯುತ್ತದೆ. ಸ್ನೇಹಭಾವದ ಆಧಾರದಲ್ಲಿ ಸಮಾಜದ ಎಲ್ಲ ಜನರೂ ಒಂದೇ ಮನಃಸ್ಥಿತಿಗೆ ಬರುತ್ತಾರೆ. ಒಂದು ಮತ್ತು ಒಂದು ಸೇರಿದರೆ ಎರಡಾಗದೆ ಹನ್ನೊಂದಾಗುತ್ತದೆ! ಭಾರತವನ್ನು ಸಂಘಟಿತ ಮತ್ತು ಶಕ್ತಿಯುತವಾಗಿಸುವ ಕಾರ್ಯವು ೨೦೪೭ರವರೆಗೆ ಎಲ್ಲೆಡೆ ವ್ಯಾಪಿಸಿರುತ್ತದೆ, ಮತ್ತೂ ಮುಂದುವರಿಯುತ್ತದೆ. ಸಾಮರಸ್ಯಭರಿತ, ಶಕ್ತಿಯುತ ಭಾರತದ ಕೊಡುಗೆಯನ್ನು ವಿಶ್ವದ ಎಲ್ಲರೂ ನೋಡುತ್ತಾರೆ, ಈ ಮಾದರಿಯನ್ನು ಅನುಕರಿಸಲು ಮುಂದಾಗುತ್ತಾರೆ. ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೋಡಿ ವಿಶ್ವದ ಇತರ ದೇಶಗಳ ಜನರು ಆ ದೇಶದಲ್ಲಿ ತಮ್ಮದೇ ಆದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸುತ್ತಾರೆ. ಇದರಿಂದ ಇಡೀ ವಿಶ್ವದ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದು ೧೯೯೨ರಲ್ಲಿ ನಮ್ಮ ಒಬ್ಬ ಹಿರಿಯ ಕಾರ್ಯಕರ್ತರು ಹೇಳಿದ್ದರು. ಈ ಪ್ರಕ್ರಿಯೆಯು ೨೦೪೭ರ ನಂತರ ಆರಂಭವಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಮತ್ತೆ ೧೦೦ ವ?ಗಳು ಬೇಕಾಗಿಲ್ಲ. ೨೦-೩೦ ವ?ಗಳಲ್ಲಿ ಪೂರ್ಣಗೊಳ್ಳುತ್ತದೆ. ಶತಮಾನದ ವ?ದಲ್ಲಿ ಹಿಂದೂ-ಹಿತೈಷಿಗಳ ಸಮುದಾಯ, ಸಂಘದ ಶುಭಚಿಂತಕರ ಸಮುದಾಯ, ಈ ರಾಷ್ಟ್ರದ ಹಿತಚಿಂತಕರ ಸಮುದಾಯಕ್ಕೆ ನಿಮ್ಮ ಸಂದೇಶವೇನು? ಹಿಂದೂ ಸಮಾಜವು ಈಗ ಎಚ್ಚರಗೊಳ್ಳಲೇಬೇಕು. ಎಲ್ಲ ಬೇಧಗಳನ್ನು ಮತ್ತು ಸ್ವಾರ್ಥವನ್ನು ಮರೆತು, ಹಿಂದುತ್ವದ ಶಾಶ್ವತ ಮೌಲ್ಯಗಳ ಆಧಾರದ ಮೇಲೆ ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಜೀವನೋಪಾಯದ ಜೀವನವನ್ನು ರೂಪಿಸಿಕೊಂಡು, ಶಕ್ತಿಯುತ, ನೀತಿಯುತ ಮತ್ತು ಎಲ್ಲ ರೀತಿಯಲ್ಲೂ ವೈಭವದಿಂದ ಸಂಪನ್ನವಾದ ಭಾರತವನ್ನು ನಿರ್ಮಿಸಬೇಕು. ವಿಶ್ವವು ಹೊಸ ಮಾರ್ಗಕ್ಕಾಗಿ ಕಾತರಿಸುತ್ತಿದೆ. ಅದನ್ನು ನೀಡುವುದು ಭಾರತಕ್ಕೆ, ಅಂದರೆ ಹಿಂದೂ ಸಮಾಜಕ್ಕೆ ದೇವರೇ ವಹಿಸಿದ ಕರ್ತವ್ಯ. ಕೃಷಿ ಕ್ರಾಂತಿಯಾಗಿದೆ, ಕೈಗಾರಿಕಾ ಕ್ರಾಂತಿಯಾಗಿದೆ, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ರಾಂತಿಯಾಗಿದೆ. ಈಗ ಧರ್ಮ ಕ್ರಾಂತಿಯ ಅಗತ್ಯವಿದೆ. ನಾನು ರಿಲೀಜನ್ನಿನ ಬಗ್ಗೆ ಹೇಳುತ್ತಿಲ್ಲ. ಸತ್ಯ, ಶೀಲ, ಕರುಣೆ ಮತ್ತು ತಪಸ್ಸಿನ ಆಧಾರದ ಮೇಲೆ ಮಾನವ ಜೀವನದ ಪುನರ್ರಚನೆಯಾಗಬೇಕು. ವಿಶ್ವಕ್ಕೆ ಇದರ ಅಗತ್ಯವಿದೆ ಮತ್ತು ಭಾರತವೇ ಅದರ ಅಗ್ರೇಸರನಾಗಬೇಕು. ಇದು ಅನಿವಾರ್ಯ. ಸಂಘದ ಕೆಲಸದ ಮಹತ್ವವನ್ನು ನಾವೆಲ್ಲರೂ ಅರಿಯಬೇಕು, ’ನಾನು ಮತ್ತು ನನ್ನ ಕುಟುಂಬ’ದ ಚೌಕಟ್ಟಿನಿಂದ ಹೊರಬಂದು, ತಮ್ಮ ಜೀವನವನ್ನೇ ಮಾದರಿಯಾಗಿಸಿಕೊಂಡು ಸಕ್ರಿಯವಾಗಿ ಎಲ್ಲರ ಜೊತೆಗೆ ಮುನ್ನಡೆಯಬೇಕು. ಇದರ ಅಗತ್ಯತೆಯಿದೆ.
ಸಂಘ ಶುರುವಾಗಿದ್ದೇಕೆ? ಸಂಘ ಏನು ಮಾಡಿದೆ? ಒಬ್ಬ ವ್ಯಕ್ತಿ ನೂರು ವರ್ಷ ಬದುಕುವುದು ವಿಶೇಷವಾದರೂ, ಅಲ್ಲಲ್ಲಿ ಅಂತಹವರು ನೋಡಲು ಕಾಣಸಿಗುತ್ತಾರೆ. ಆದರೆ, ಒಂದು ಸಂಘಟನೆ ನೂರು ವರ್ಷದಲ್ಲಿ ತನ್ನತನವನ್ನು ಕಳೆದುಕೊಳ್ಳದೇ, ಬದಲಾದ ಕಾಲದಲ್ಲಿಯೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡು, ಹೊಸ ತಲೆಮಾರಿನ ಜನರನ್ನು ತನ್ನತ್ತ ಸೆಳೆಯುತ್ತ ಉಳಿಯುವುದು ಮಾತ್ರವಲ್ಲ, ಬೆಳೆಯುತ್ತಲೂ ಇದೆ ಎನ್ನುವುದು ವಿಶೇಷವೇ. ಇಂತಹ ಸಂಘಟನೆಗಳು ಕಾಣಸಿಗುವುದು ಬಹಳ ವಿರಳ. ಆರೆಸ್ಸೆಸ್ ಅಥವಾ ಸಂಘ ಎಂದೇ ಜನಜನಿತವಾದ ಈ ಸಂಘಟನೆಯೇ ‘ರಾಷ್ಟಿçÃಯ ಸ್ವಯಂಸೇವಕ ಸಂಘʼ. ೧೯೨೫ರ ವಿಜಯದಶಮಿಯಂದು ಪ್ರಾರಂಭವಾದ ಈ ಸಂಘಟನೆ ಈಗ ನೂರನೇ ವರ್ಷಕ್ಕೆ ಕಾಲಿಡುತ್ತಿದೆ. ಸಂಘವನ್ನು ಪ್ರಾರಂಭಿಸಿದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಮಹಾರಾಷ್ಟçದ ನಾಗಪುರದಲ್ಲಿ ಜನಿಸಿದವರು. ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವಾಗಲೇ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, ನಾಗಪುರಕ್ಕೆ ಹಿಂದಿರುಗಿದ ಮೇಲೆ ಕಾಂಗ್ರೆಸ್ಸಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಿದವರು. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಮಾರ್ಗ ಹಾಗೂ ರಾಜಕೀಯ ಮಾರ್ಗ - ಇವೆರಡರಲ್ಲೂ ಭಾಗವಹಿಸಿದ ಅವರು, ಸ್ವಾತಂತ್ರö್ಯ ತಂದುಕೊಡಲು ಈ ಮಾರ್ಗಗಳು ಉಪಯುಕ್ತವಾದರೂ, ಸ್ವತಂತ್ರರಾಷ್ಟçವೊAದನ್ನು ಕಟ್ಟಲು ಇವುಗಳಿಂದ ಸಾಧ್ಯವಿಲ್ಲ ಎಂಬ ನಿಷ್ಕರ್ಷೆಗೆ ಬರಲು ಹೆಚ್ಚು ಕಾಲ ಹಿಡಿಯಲಿಲ್ಲ. ತಮ್ಮ ಅಸ್ಮಿತೆಯನ್ನೇ ಮರೆತ, ಆತ್ಮವಿಶ್ವಾಸವಿಲ್ಲದ, ಸ್ವಾರ್ಥಿಗಳಾದ, ದೇಶಭಕ್ತಿಯಿಲ್ಲದ ಜನರೇ ದೊಡ್ಡ ಸಂಖ್ಯೆಯಲ್ಲಿರುವ ಹಾಗೂ ಜಾತಿ-ಭಾಷೆಯ ಹೆಸರಲ್ಲಿ ಒಡೆದುಹೋದ ಸಮಾಜವೊಂದು ಹೇಗೆ ತಾನೇ ಒಂದು ಸ್ವಾವಲಂಬಿ ರಾಷ್ಟçವನ್ನು ನಿರ್ಮಿಸಲು ಸಾಧ್ಯ? ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು. ಹಾಗಾದರೆ, ಇದಕ್ಕೆ ಪರಿಹಾರವೇನು? ನಮ್ಮೆಲ್ಲ ಭೇದಗಳನ್ನು ಮೀರಿ ನಾವೆಲ್ಲ ಹಿಂದು ಎಂಬ ನೆಲೆಯಲ್ಲಿ ಸಮಾಜವನ್ನು ಸಂಘಟಿಸಬೇಕು. ನಮ್ಮ ಶ್ರೇಷ್ಠ ಪರಂಪರೆ, ಇತಿಹಾಸ, ಧರ್ಮ-ಸಂಸ್ಕೃತಿಗಳ ಬಗ್ಗೆ ನಮ್ಮ ಜನರಲ್ಲಿ ಹೆಮ್ಮೆ ಮೂಡಬೇಕು. ಪ್ರತಿಯೊಬ್ಬನಲ್ಲೂ ಅಚಲ ದೇಶಭಕ್ತಿ ಮೂಡಬೇಕು. ‘ದೇಶ ಮೊದಲುʼ ಎಂಬುದೇ ಸಮಾಜದ ಚಿಂತನೆಯಾಗಬೇಕು. ಆಗ ಮಾತ್ರ ನಮ್ಮ ರಾಷ್ಟçದ ಸರ್ವಾಂಗೀಣ ಉನ್ನತಿ ಸಾಧ್ಯ ಎಂಬುದು ಹೆಡಗೇವಾರರಿಗೆ ಸ್ಪಷ್ಟವಾಯಿತು. ಆದರೆ, ಅದು ಸಾಧ್ಯವಾಗುವುದು ಹೇಗೆ? ಸಮಾಜಪರಿವರ್ತನೆಗಾಗಿ ಕೆಲಸ ಮಾಡುವ ಸ್ವಯಂಸೇವಕ ನಿಸ್ವಾರ್ಥತೆ ಹಾಗೂ ಪ್ರಾಮಾಣಿಕತೆಯಿಂದ ಕೆಲವರು ಈ ಸಮಾಜಪರಿವರ್ತನೆಯ ಕೆಲಸವನ್ನು ಕೈಗೆತ್ತಿಕೊಳ್ಳದ ಹೊರತು, ಇದು ತಾನಾಗಿಯೇ ಆಗಲಾರದು ಎಂಬುದು ಅವರಿಗೆ ಸ್ಪಷ್ಟವಾಯಿತು. ಅಂತಹ ವ್ಯಕ್ತಿಗಳ ನಿರ್ಮಾಣಕ್ಕಾಗಿ ಸಂಘವನ್ನು ಪ್ರಾರಂಭಿಸಿದರು ಡಾ.ಹೆಡಗೇವಾರ್. ಹೀಗೆ ವ್ಯಕ್ತಿನಿರ್ಮಾಣವನ್ನೇ ಗುರಿಯಾಗಿಟ್ಟುಕೊಂಡು ಸಂಘದ ಶಾಖೆ ಪ್ರಾರಂಭವಾಯಿತು. ಶಾಖೆಯಲ್ಲಿ ಸಿಗುವ ಸಂಸ್ಕಾರದಿAದಾಗಿ, ಸಂಘಕ್ಕೆ ಬಂದ ಸಮಾನ್ಯ ವ್ಯಕ್ತಿಯೂ ಕೂಡ ಈ ದೇಶವನ್ನು ಪರಮವೈಭವದ ಸ್ಥಿತಿಗೆ ಕೊಂಡೊಯ್ಯಬೇಕು ಎಂಬ ಧ್ಯೇಯವನ್ನು ತನ್ನೆದುರು ಇರಿಸಿಕೊಳ್ಳುತ್ತಾನೆ. ಸ್ವಂತಕ್ಕಾಗಿ ಏನನ್ನೂ ಅಪೇಕ್ಷೆಪಡದೇ, ಪ್ರಸಿದ್ಧಿಯನ್ನು ಬಯಸದೇ, ತನ್ನದೆಲ್ಲವನ್ನೂ ಸಮಾಜಸೇವೆಗೆ ಸಮರ್ಪಿಸಿ ಈ ಗುರಿಯನ್ನು ಸಾಧಿಸುವ ಮಾನಸಿಕತೆ ಅವನಲ್ಲಿ ಮೂಡುತ್ತದೆ. ಒಮ್ಮೆ ಇಂತಹ ವ್ಯಕ್ತಿಗಳ ನಿರ್ಮಾಣವಾದರೆ, ಸಮಾಜವನ್ನು ಸಂಘಟಿಸುವ ಹಾಗೂ ಪರಿವರ್ತನೆ ತರುವ ಕೆಲಸವನ್ನು ಅವರು ಮಾಡುತ್ತಾರೆ ಎಂಬ ಕಲ್ಪನೆ ಡಾ.ಹೆಡಗೇವಾರ್ ಅವರದ್ದಾಗಿತ್ತು. ಅದು ನೂರಕ್ಕೆ ನೂರು ನಿಜ ಎಂಬುದು ಕಳೆದ ನೂರು ವರ್ಷಗಳಲ್ಲಿ ಸಾಬೀತಾಗಿದೆ. ಸಂಘದ ಧ್ಯೇಯ: ರಾಷ್ಟçದ ಪರಮವೈಭವ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ, ಸಹಬಾಳ್ವೆ, ಸಾಮರಸ್ಯ ಇರಬೇಕಾದರೆ ಸಮಾಜವ್ಯವಸ್ಥೆ ಧರ್ಮದ ಆಧಾರದಲ್ಲಿರಬೇಕು ಎಂಬುದು ಭಾರತದ ಚಿಂತನೆ. ಅದು ಹಳಿ ತಪ್ಪಿದಾಗ ಎಲ್ಲವೂ ಅಸ್ತವ್ಯಸ್ತವಾಗುತ್ತದೆ ಎನ್ನುವುದು ಅನುಭವಸಿದ್ಧವಾದ ವಿಚಾರ. ಧರ್ಮದ ಆಧಾರದ ಮೇಲೆ ಸಮಾಜ ನಿರ್ಮಾಣವಾದರೆ ಭಾರತವು ಪರಮವೈಭವ ಸ್ಥಿತಿಯನ್ನು ಸಹಜವಾಗಿಯೇ ತಲುಪುತ್ತದೆ ಎನ್ನುವುದು ಸಂಘದ ಕಲ್ಪನೆ. ಒಂದು ಕಾಲವಿತ್ತು, ಭಾರತ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಗುರುಸ್ಥಾನದಲ್ಲಿತ್ತು. ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಉನ್ನತಿಯನ್ನು ಸಾಧಿಸಿದ್ದ, ಸಂಘರ್ಷರಹಿತವಾದ ಸಮಾಜ ಇಲ್ಲಿತ್ತು. ಈ ಭಾರತೀಯ ಚಿಂತನೆಯನ್ನು ಹಾಗೂ ಅದನ್ನು ಅನುಷ್ಠಾನಗೊಳಿಸಿದ್ದ ಸಮಾಜವನ್ನು ಅಭ್ಯಾಸ ಮಾಡಲು ವಿದೇಶಗಳಿಂದಲೂ ಇಲ್ಲಿನ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಬರುತ್ತಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ಅಂತಹ ಉನ್ನತಸ್ಥಿತಿಯಲ್ಲಿದ್ದ ಸಮಾಜ ಇಂದಿನ ಅಧೋಗತಿಗಿಳಿಯಲು ಕಾರಣವೆಂದರೆ, ನಮ್ಮ ಮೇಲೆ ಎರಡು ಸಾವಿರ ವರ್ಷಗಳ ಕಾಲ ನಡೆದ ಪರಕೀಯರ ಧಾಳಿ ಹಾಗೂ ನಮ್ಮ ಮೈಮರೆವು. ಹಾಗಾಗಿ, ಪುನಃ ಸಮಾಜ ಜಾಗೃತಿ ಹಾಗೂ ಸಂಘಟನೆ ಮಾಡಿದರೆ, ಉಳಿದದ್ದೆಲ್ಲವೂ ತಾನಾಗಿಯೇ ಸರಿಯಾಗುತ್ತದೆ. ಏಕೆಂದರೆ, ಇಲ್ಲಿನ ಮೂಲವಿಚಾರದಲ್ಲಿ ಆ ಶಕ್ತಿಯಿದೆ. ಹಾಗಾಗಿ, ನಿರಂತರವಾಗಿ ಈ ಸಮಾಜ ಜಾಗೃತಿ ಹಾಗೂ ಸಂಘಟನೆಯ ಕೆಲಸವನ್ನು ಸಂಘದ ಸ್ವಯಂಸೇವಕರು ಮಾಡುತ್ತಾ ಬಂದಿದ್ದಾರೆ. ನೂರು ವರ್ಷದಲ್ಲಿ ಆರೆಸ್ಸೆಸ್ ಏನು ಮಾಡಿದೆ? ಈ ಹಾದಿಯಲ್ಲಿ ಆರೆಸ್ಸೆಸ್ ನೂರು ವರ್ಷಗಳ ಕಾಲ ನಿರಂತರವಾಗಿ ಕ್ರಮಿಸಿದೆ. ಹೆಚ್ಚು ಕಡಿಮೆ ಮೂರ್ನಾಲ್ಕು ತಲೆಮಾರಿನ ಜನ ಈ ರಾಷ್ಟçಯಜ್ಞದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಹಾಗಾದರೆ, ತನ್ನ ಗುರಿಯನ್ನು ಸಂಘವು ಸಾಧಿಸಿದೆಯೇ ಎಂದು ಕೇಳಿದರೆ, ಕೆಲವಷ್ಟು ಆಗಿದೆ ಇನ್ನೂ ಆಗಬೇಕಾದ್ದು ಬಹಳ ಇದೆ ಎನ್ನಬಹುದು. ಮೊದಲನೆಯದಾಗಿ, ಹಿಂದು ಎನ್ನಲು ಸಂಕೋಚಪಡುತ್ತಿದ್ದ ಕಾಲ ಹೋಗಿ, ಈಗ ಹಿಂದು ಎನ್ನಲು ಸಮಾಜ ಹೆಮ್ಮೆಪಡುವ ಸ್ಥಿತಿ ನಿರ್ಮಾಣವಾಗಿದೆ. ಹಿಂದು ಸ್ವಾಭಿಮಾನ ಎಲ್ಲೆಡೆ ಕಾಣಸಿಗುತ್ತಿದೆ. ದೇಶ ಧರ್ಮದ ವಿಷಯ ಬಂದಾಗ ರಾಜಿ ಮಾಡಿಕೊಳ್ಳಲು ನಾವು ಸಿದ್ಧರಿಲ್ಲ ಎಂಬುದನ್ನು ನಮ್ಮ ಸಮಾಜ ಯಾವಾಗಲೂ ತೋರಿಸುತ್ತಿದೆ. ಮೊಗಲರ, ಬ್ರಿಟಿಷರ ಆಳ್ವಿಕೆಯ ಪ್ರಭಾವದಿಂದಾಗಿ ಸಮಾಜದಲ್ಲಿದ್ದ ದಾಸ್ಯದ ಮನಃಸ್ಥಿತಿ ಬದಲಾಗಿ, ನಮ್ಮತನದ ಆಧಾರದ ಮೇಲೆಯೇ ಚಿಂತನೆ, ಆಚರಣೆಗಳು ಪ್ರಾರಂಭವಾಗಿವೆ. ಈ ಮಾನಸಿಕತೆಯ ನಿರ್ಮಾಣದಲ್ಲಿ ಸಂಘದ ಪಾತ್ರ ಬಹಳ ದೊಡ್ಡದಿದೆ ಎನ್ನುವುದನ್ನು ಹಲವು ಚಿಂತಕರು, ಸಮಾಜಶಾಸ್ತçಜ್ಞರು ಗುರುತಿಸಿದ್ದಾರೆ. ಎರಡನೆಯದು, ಜಾತಿಭೇದ, ತರತಮಭಾವದಲ್ಲಿ ಮುಳುಗಿದ್ದ ಹಿಂದುಸಮಾಜವನ್ನು ಸಂಘಟಿಸಲು ಬ್ರಹ್ಮ ಬಂದರೂ ಸಾಧ್ಯವಿಲ್ಲ ಎಂಬ ಸ್ಥಿತಿಯನ್ನು ಮೀರಿನಿಂತು ಇಂದು ಹಿಂದುಸಮಾಜ ಸಂಘಟಿತವಾಗುತ್ತಿದೆ ಎನ್ನುವುದೂ ಎಲ್ಲರ ಅನುಭವಕ್ಕೆ ಬಂದಿದೆ. ಬರೀ ನಾವಾಯಿತು, ನಮ್ಮ ಪಾಡಾಯಿತು ಎಂದು ಯೋಚಿಸುವ ಬದಲು, ದೇಶ-ಧರ್ಮಕ್ಕಾಗಿ ಕೆಲಸ ಮಾಡಬೇಕು ಎನ್ನುವ ಉತ್ಸಾಹ ಇಂದು ಎಲ್ಲೆಡೆ ತೋರುತ್ತಿದೆ. ಇಂತಹ ಹಿಂದೂ ಸ್ವಾಭಿಮಾನ, ರಾಷ್ಟಾçಭಿಮಾನದ ಜಾಗೃತಿಯ ಪರಿಣಾಮವಾಗಿ ರಾಜಕೀಯ, ಉದ್ಯಮ, ಶಿಕ್ಷಣ, ಕೃಷಿ, ಕಲೆ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತೀಯ ಚಿಂತನೆಯ ಆಧಾರದಲ್ಲಿ ಕೆಲಸ ನಡೆಯುತ್ತಿದೆ. ಹೀಗೆ, ಭಾರತ ತನ್ನತನವನ್ನು ಪುನಃ ಗಳಿಸಿಕೊಳ್ಳುವತ್ತ, ನಿಜ ಅರ್ಥದಲ್ಲಿ ಸ್ವಾತಂತ್ರö್ಯ ಗಳಿಸುವತ್ತ ಹೆಜ್ಜೆಯಿಡುತ್ತಿರುವುದನ್ನು, ಹಿಂದುಸಮಾಜ ಮತ್ತೆ ಪುಟಿದೇಳುತ್ತಿರುವುದನ್ನು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ. ಹಿಂದೆAದೂ ಇಲ್ಲದಷ್ಟು ಗೌರವ, ಮನ್ನಣೆಗಳು ಇಂದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ದೊರಕುತ್ತಿವೆ. ಇವೆಲ್ಲದರ ಹಿಂದೆ ಸಂಘವೊAದೇ ಕೆಲಸ ಮಾಡಿದೆ ಎಂದಲ್ಲದಿದ್ದರೂ, ಸಂಘದ ಸ್ವಯಂಸೇವಕರ ಶತಮಾನದ ಶ್ರಮವಿದೆ ಎಂಬುದನ್ನು ಖಂಡಿತಾ ಗುರುತಿಸಬಹುದು. ೧೯೪೭ರ ದೇಶವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನ ಹಾಗೂ ಭಾರತದಲ್ಲಿನ ಹಿಂದುಗಳ ರಕ್ಷಣೆ, ಗೋವಾ, ಹೈದರಾಬಾದ್ ಮುಕ್ತಿಸಂಗ್ರಾಮ, ೧೯೬೨ರ ಚೀನಾ ಯುದ್ಧದ ಸಂದರ್ಭದಲ್ಲಿ ಸೈನ್ಯದೊಂದಿಗೆ ಸಹಕಾರ, ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕ ನಿರ್ಮಾಣ, ೧೯೭೫ರ ತುರ್ತುಪರಿಸ್ಥಿತಿ ಹೇರಿಕೆಯಾದಾಗ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಆಂದೋಲನ, ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ದೇಶವ್ಯಾಪಿ ಆಂದೋಲನ, ರಾಮಸೇತು ರಕ್ಷಣೆಗಾಗಿ ಹೋರಾಟ, ಪ್ರವಾಹ, ಬರ, ಭೂಕಂಪ, ಅಪಘಾತದ ಸಂದರ್ಭಗಳಲ್ಲಿ ತುರ್ತು ಪರಿಹಾರ ಕಾರ್ಯಾಚರಣೆಯಿರಬಹುದು - ಎಲ್ಲ ಸಂದರ್ಭಗಳಲ್ಲಿ ಸಂಘ ಯಾವಾಗಲೂ ಸಮಾಜದ ತುರ್ತು ಅಗತ್ಯಕ್ಕೆ ಸ್ಪಂದಿಸಿದೆ, ನೇತೃತ್ವ ವಹಿಸಿದೆ, ಸಮಾಜದ ಜತೆ ನಿಂತಿದೆ. ಅಲ್ಲದೇ, ದೇಶದೆಲ್ಲೆಡೆ ೧.೫ ಲಕ್ಷಕ್ಕೂ ಹೆಚ್ಚು ಸೇವಾ ಪ್ರಕಲ್ಪಗಳನ್ನು ಸಂಘ ಹಾಗೂ ಸಂಘಪ್ರೇರಿತ ಸಂಘಟನೆಗಳು ನಡೆಸುತ್ತಿವೆ. ಸಾವಿರಾರು ಶಾಲೆಗಳನ್ನು ನಡೆಸುತ್ತಿವೆ. ಸ್ವಸಹಾಯ ಸಂಘಗಳೂ, ಆಸ್ಪತ್ರೆಗಳೂ, ಅನಾಥಾಲಯಗಳೂ, ವನವಾಸಿ ವಿದ್ಯಾರ್ಥಿನಿಲಯಗಳು - ಹೀಗೆ ಸಮಾಜದ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಚಟುವಟಿಕೆಗಳನ್ನು ಪ್ರಾರಂಭಿಸುತ್ತಲೇ ಇದೆ. ಸಮಾಜವೇ ಸಂಘವಾಗಲಿ ಎಂಬುದೇ ಸಂಘದ ಆಶಯ ಹೀಗೆ ಸಂಘ ಇಂದು ಒಂದು ಸಂಘಟನೆಯಾಗಿ ಮಾತ್ರ ಉಳಿದಿಲ್ಲ. ಒಂದು ಆಂದೋಲನವಾಗಿಯೇ ಬೆಳೆದಿದೆ. ಇಡೀ ಭಾರತೀಯ ಸಮಾಜ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಇದರಲ್ಲಿ ಭಾಗಿಯಾಗುತ್ತಿದೆ. ಅನೇಕ ಸಾಮಾಜಿಕ ನಾಯಕರು, ಸಂಘ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ. ಭಾರತದ ಪುನರುತ್ಥಾನದಲ್ಲಿ ತಮ್ಮದೇ ನೆಲೆಯಲ್ಲಿ ಸಕ್ರಿಯ ಪಾತ್ರವಹಿಸುತ್ತಿವೆ. ಸಂಘವೆನ್ನುವುದು ಸಮಾಜದಲ್ಲಿ ಒಂದು ಸಂಘಟನೆಯಾಗಬಾರದು, ಬದಲಾಗಿ ಸಂಪೂರ್ಣ ಸಮಾಜದ ಸಂಘಟನೆಯಾಗಬೇಕು ಎಂಬುದು ಸಂಘಸ್ಥಾಪಕರಾದ ಡಾ. ಕೇಶವ ಬಲಿರಾಮ ಹಡಗೇವಾರರ ಕಲ್ಪನೆಯಾಗಿತ್ತು. ಇಂದು ಸಂಘ ಆ ಹಾದಿಯಲ್ಲಿಯೇ ಮುನ್ನಡೆಯುತ್ತಿದೆ. ಸಮಾಜದ ಸಂಘಟನೆಯಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಸಂಘದ ಸಿದ್ಧಾಂತ ಅಥವಾ ಫಿಲಾಸಫಿ ಏನು ಎಂದು ಹಲವರು ಕೇಳುತ್ತಾರೆ. ಸಂಘವು ತನ್ನದೇ ಹೊಸ ಸಿದ್ಧಾಂತವನ್ನೇನೂ ಹುಟ್ಟುಹಾಕಿಲ್ಲ. ಹಿಂದು ಚಿಂತನೆಯೇ ಸಂಘದ ಚಿಂತನೆ, ಸಿದ್ಧಾಂತ ಎಂದೇ ಸಂಘದ ಕಾರ್ಯಕರ್ತರು ಉತ್ತರಿಸುತ್ತಾರೆ. ಹಿಂದುಧರ್ಮದ ಸಂಕೇತವಾಗಿ ಅನಾದಿಕಾಲದಿಂದಲೂ ಗೌರವಿಸಲ್ಪಡುತ್ತಿರುವ ಭಗವಾಧ್ವಜವೇ ಸಂಘದ ಸ್ವಯಂಸೇವಕರಿಗೆ ಗುರು! ಯಾವುದನ್ನು ಶ್ರೀರಾಮ-ಶ್ರೀಕೃಷ್ಣ, ಬುದ್ಧ-ಮಹಾವೀರ-ಗುರುನಾನಕರು, ಶಂಕರ-ರಾಮಾನುಜರು, ರಾಮಕೃಷ್ಣ-ವಿವೇಕಾನಂದರು, ಕಬೀರ-ಬಸವ, ಶಿವಾಜಿ-ರಾಣಾಪ್ರತಾಪ-ಕೃಷ್ಣದೇವರಾಯ ಮೊದಲಾದವರು ಮಾಡಿದರೋ ಅದೇ ಕೆಲಸದ ಮುಂದುವರೆದ ಭಾಗವಾಗಿ ಸಂಘ ತನ್ನನ್ನು ತಾನು ಈ ರಾಷ್ಟçಸೇವೆಯಲ್ಲಿ ತೊಡಗಿಸಿಕೊಂದಿದೆ. ಇದು ದೇವರ ಕೆಲಸ, ಇದಕ್ಕಾಗಿ ತಾನು ಕಟಿಬದ್ಧ ಎಂದೇ ಸಂಘದ ಸ್ವಯಂಸೇವಕ ಪ್ರತಿನಿತ್ಯ ಮಾಡುವ ಪ್ರಾರ್ಥನೆಯಲ್ಲಿ ಹೇಳುತ್ತಾನೆ. ಕಷ್ಟಕರವಾದ ಈ ಮಾರ್ಗವನ್ನು ಸ್ವಂತ ಇಚ್ಛೆಯಿಂದಲೇ ಆರಿಸಿಕೊಂಡಿರುವ ಸ್ವಯಂಸೇವಕ, ಈ ಕೆಲಸದ ನಡುವೆ ಬರುವ ಅಡ್ಡಿಆತಂಕಗಳನ್ನು ಯಶಸ್ವಿಯಾಗಿ ನಿವಾರಿಸಿಕೊಂಡು ರಾಷ್ಟçದ ಪರಮವೈಭವವನ್ನು ಸಾಧಿಸಲು ಅನುಗ್ರಹಿಸು ಎಂದು ಭಗವಂತನಲ್ಲಿ ಬೇಡುತ್ತಾನೆ. ತನ್ನನ್ನು ಯಾರೇ ವಿರೋಧಿಸಲಿ, ತಾನು ಮಾತ್ರ ಯಾರನ್ನೂ ವಿರೋಧಿಸುವವನಲ್ಲ. ಯಾರ ಬಗ್ಗೆಯೂ ದ್ವೇಷಭಾವನೆಯಿಲ್ಲ. ಸಮಾಜದ ಎಲ್ಲರ ಬಗ್ಗೆ ಪ್ರೇಮ, ಸ್ನೇಹಭಾವನೆಯೇ ಸ್ವಯಂಸೇವಕನ ಸಹಜಗುಣ. ಅದೇ ಅವನ ಶಕ್ತಿ. ಸಂಘ ಏನನ್ನೂ ಮಾಡುವುದಿಲ್ಲ, ಸ್ವಯಂಸೇವಕ ಎಲ್ಲವನ್ನೂ ಮಾಡುತ್ತಾನೆ ಎಂಬುದಾಗಿ ಡಾ.ಹೆಡಗೇವಾರ್ ಹೇಳುತ್ತಿದ್ದರಂತೆ. ಹಾಗೆ, ಇಂದು ಸಂಘದ ಸ್ವಯಂಸೇವಕರು ಎಲ್ಲೇ ಇರಲಿ, ಏನೇ ಮಾಡಲಿ, ‘ದೇಶ ಮೊದಲು, ಧರ್ಮ ಮೊದಲುʼ ಎಂಬುದೇ ಅವರ ಚಿಂತನೆ. ಅದಕ್ಕನುಗುಣವಾಗಿಯೇ ಅವರು ಕಾರ್ಯಪ್ರವೃತ್ತರಾಗುತ್ತಿದ್ದಾರೆ. ಈ ಚಿಂತನೆ ಸಮಾಜದೆಲ್ಲೆಡೆ ಪಸರಿಸಲಿ, ಸಮಾಜವೇ ಸಂಘವಾಗಲಿ, ಸಂಘ ಸಮಾಜದಲ್ಲಿ ಲೀನವಾಗಲಿ ಎಂಬುದೇ ಪ್ರತಿಯೊಬ್ಬ ಸ್ವಯಂಸೇವಕನ ಆಶಯ.
ಭಾರತದ ಸ್ವಾತಂತ್ರ್ಯ ಹೋರಾಟ ೨೦೦೦ ವರ್ಷಗಳ ಸಂಘರ್ಷದ ಇತಿಹಾಸವನ್ನು ಹೊಂದಿದೆ. ವಿವಿಧ ಮಜಲುಗಳಲ್ಲಿ ಈ ನಾಡಿನ ಸ್ವರಾಜ್ಯಕ್ಕಾಗಿ ದುಡಿದವರಿದ್ದಾರೆ. ರಾಜ-ಮಹಾರಾಜರುಗಳಿಂದ ಹಿಡಿದು, ಸಾಮಾನ್ಯ ವ್ಯಕ್ತಿಯವರೆಗೂ ಈ ನಾಡಿನ ಸ್ವಾತಂತ್ರö್ಯಕ್ಕಾಗಿ ಶ್ರಮವಹಿಸಿದ್ದಾನೆ. ಅನೇಕ ಮಂದಿ ದಾರ್ಶನಿಕರು ಸ್ವಾತಂತ್ರö್ಯ ಹೋರಾಟದಲ್ಲಿ ಸ್ವತಃ ತೊಡಗಿಸಿಕೊಂಡಿದ್ದಲ್ಲದೇ ಪ್ರೇರಣಾ ಸ್ರೋತವಾಗಿ ಮುಂದಿನ ಪೀಳಿಗೆಗೆ ಪ್ರೇರಣೆಯನ್ನೋದಗಿಸಿದ್ದಾರೆ. ಈ ನಾಡಿನ ಸ್ವಾತಂತ್ರö್ಯ ಹೋರಾಟದ ವಿಶೇಷತೆ ಏನೆಂದರೆ, ಕೇವಲ ವ್ಯಕ್ತಿಗಳು ಮಾತ್ರ ತಮ್ಮ ತ್ಯಾಗ, ಬಲಿದಾನ, ಶೌರ್ಯ, ಸಾಹಸಗಳ ಮೂಲಕ ಸ್ವಾತಂತ್ರö್ಯ ಹೋರಾಟಕ್ಕೆ ಪ್ರೇರಣೆಯನ್ನು ನೀಡಿದ್ದಲ್ಲದೇ ಈ ನಾಡಿನಲ್ಲಿ ನಿರ್ಮಾಣಗೊಂಡ ಗೀತೆಗಳು, ಘೋಷಣೆಗಳು, ಮಂತ್ರಗಳು ಕೂಡಾ ಸ್ವಾತಂತ್ರö್ಯ ಹೋರಾಟಗಾರರಿಗೆ ಪ್ರೇರಣೆಯನ್ನು ಒದಗಿಸಿದೆ. ಅವುಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತಹ ಗೀತೆ ‘ವಂದೇ ಮಾತರಂ’. ಅದಕ್ಕೀಗ ೧೫೦ ಸಂವತ್ಸರಗಳು ತುಂಬಿದ ಸಂತಸ. ಭಾರತದ ಸ್ವಾತಂತ್ರö್ಯ ಹೋರಾಟದಲ್ಲಿ ವಿದೇಶಿಗರ ವಿರುದ್ಧ ಕೊನೆಯದಾಗಿ ಈ ನಾಡಿನ ಜನ ಟೊಂಕಕಟ್ಟಿನಿAತಿದ್ದು ಬ್ರಿಟಿಷರ ವಿರುದ್ಧ. ಸುಮಾರು ೨೦೦ ವರ್ಷಗಳ ಕಾಲ ಆಡಳಿತ ನಡೆಸಿದ ಬ್ರಿಟಿಷರು ಈ ನಾಡನ್ನು ಎಷ್ಟು ಸಾಧ್ಯವೋ, ಅಷ್ಟು ವಿಘಟಿಸಲು ಪ್ರಯತ್ನಿಸಿದರು. ಜಾತಿ ಆಧಾರಿತವಾಗಿ, ಆಚರಣಾ ವಿಧಾನಗಳ ಆಧಾರಿತವಾಗಿ ಹಾಗೂ ಇನ್ನಿತರ ಮಾನದಂಡಗಳ ಮೂಲಕ ಭಾರತೀಯರನ್ನು ಒಡೆದು ಆಳುವ ನೀತಿಯ ವ್ಯೂಹದಲ್ಲಿ ಸಿಲುಕಿಸಲು ಪ್ರಯತ್ನಿಸಿತು. ಅಂತಹ ಸಂದರ್ಭದಲ್ಲಿ ಇಡೀ ರಾಷ್ಟçವನ್ನು ತಾಯಿಯಂತೆ ಪೂಜಿಸುವ, ಅವಳಿಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ವಿದೇಶಿಗರ ಆಡಳಿತದಿಂದ ಆಕೆ ಕಳೆದುಕೊಂಡ ಸ್ವಾತಂತ್ರö್ಯವನ್ನು ಮರಳಿ ಪಡೆದುಕೊಳ್ಳಬೇಕು ಎಂಬ ರಾಷ್ಟçಭಾವ ಜಾಗರಣವನ್ನು ಉಂಟುಮಾಡುವಲ್ಲಿ ಮಹತ್ತರದ ಪಾತ್ರ ವಹಿಸಿದ ಗೀತೆ ಬಂಕಿಮಚAದ್ರ ಚಟರ್ಜಿ ಅವರು ಬರೆದ ‘ಆನಂದಮಠ’ ಕಾದಂಬರಿಯಲ್ಲಿರುವ ವಂದೇ ಮಾತರಂ ಗೀತೆ. ಕೇವಲ ‘ವಂದೇ ಮಾತರಂ’ ಎಂಬ ಪದಗಳಷ್ಟೇ ಸಹಸ್ರಾರು ಭಾರತೀಯರಲ್ಲಿ ಪಂಚಾಕ್ಷರಿ ಮಂತ್ರದAತೆ ಪಸರಿ ರಾಷ್ಟಿçÃಯತೆಯ ಕಿಚ್ಚನ್ನು ಹೆಚ್ಚಿಸುವಲ್ಲಿ ಪ್ರಧಾನಪಾತ್ರ ವಹಿಸಿತು. ಆಂಗ್ಲರ ವಿರುದ್ಧ ಮೊಳಗಿದ ಸಿಂಹನಾದವಾಗಿ ಮಾರ್ದನಿಸಿತು. ಸಾಹಿತಿ ಬಂಕಿಮ್ ಚಂದ್ರ ಚಟರ್ಜಿ ಅವರು ಬಂಗಾಳದವರು. ಭಾರತದಲ್ಲಿ ಅದಾಗಲೇ ಘಟಿಸಿದ ಅನೇಕ ಸ್ವಾತಂತ್ರö್ಯ ಹೋರಾಟಗಳನ್ನು ಓದಿದ, ನೋಡಿದ ಅನುಭವಗಳು ಅವರನ್ನು ರಾಷ್ಟçದ ಪರ ಚಿಂತಿಸುವAತೆ ಮಾಡಿತು. ೧೭೭೦ರಲ್ಲಿ ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ನಡೆದ ಸನ್ಯಾಸಿಗಳ ಹೋರಾಟ, ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವ ಅವರಲ್ಲಿ ಅಚ್ಚಳಿಯದೇ ಉಳಿದಿತ್ತು. ಇಂತಹ ಹೋರಾಟಗಳ ಸಂದರ್ಭಗಳಲ್ಲಿ ಬ್ರಿಟಿಷರ ದಬ್ಬಾಳಿಕೆಯನ್ನು ಕಂಡಿದ್ದರು. ಭಾರತೀಯರು ನಾನಾ ಕಾರಣಗಳಿಂದ ಒಡೆದು ಹಂಚಿಹೋದದ್ದನ್ನು ಗಮನಿಸಿದ್ದರು. ಇಡೀ ಭಾರತವನ್ನು ಒಂದಾಗಿ ಪ್ರತಿನಿಧಿಸುವ ಮತ್ತು ಭಾರತದ ಸ್ವಾತಂತ್ರö್ಯಕ್ಕಾಗಿ ಜನಮಾನಸವನ್ನು ಎಚ್ಚರಿಸುವುದಕ್ಕಾಗಿ ಬರೆದ ಗೀತೆಯೇ 'ವಂದೇ ಮಾತರಂ'. ಬAಕಿಮಚAದ್ರ ಚಟರ್ಜಿ ಅವರು ೧೮೮೨ರಲ್ಲಿ ‘ಆನಂದಮಠ’ ಕಾದಂಬರಿಯನ್ನು ಪ್ರಕಟಿಸಿದರು. ಕೆಲವು ತಿಂಗಳುಗಳಲ್ಲಿ ಬಂಗಾಳದಾದ್ಯAತ ‘ವಂದೇ ಮಾತರಂ’ ಗೀತೆಯ ಕುರಿತು ಚರ್ಚೆ ಪ್ರಾರಂಭವಾಯಿತು. ಮೆಚ್ಚುಗೆಗಳು ವ್ಯಕ್ತವಾದವು. ಜನರು ಆ ಹಾಡಿಗೆ ನೀಡಿದ ಪ್ರಶಂಸೆ ೧೮೯೬ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ್ ಠಾಗೋರ್ ಅವರು ಮೊದಲ ಬಾರಿಗೆ ‘ವಂದೇ ಮಾತರಂ' ಹಾಡುವಂತೆ ಮಾಡಿತು. ಅಲ್ಲಿಂದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ‘ವಂದೇ ಮಾತರಂ’ ಪಂಚಾಕ್ಷರಿ ಮಂತ್ರವಾಗಿ, ರಾಷ್ಟçಭಾವ ಜಾಗರಣದ ಗಂಗಾಪ್ರವಾಹವಾಗಿ, ಭಾರತದ ಸ್ವಾತಂತ್ರö್ಯಕ್ಕಾಗಿ ವಿಶ್ವದಾದ್ಯಂತ ನಡೆದ ಹೋರಾಟಗಳಿಗೆ ಪ್ರೇರಣಾ ದೀಪವಾಗಿ ಬೆಳಗಿತು. ಆನಂತರ ನಡೆದ ಎಲ್ಲಾ ರೀತಿಯ ಹೋರಾಟಗಳಲ್ಲಿ ಸಮಾನವಾಗಿ ಗುರುತಿಸಿಕೊಂಡ ಘೋಷಣೆ ವಂದೆ ಮಾತರಂ. ವAದೇ ಮಾತರಂ ಗೀತೆಯಲ್ಲಿ ಏನಿದೆ? ಬಂಗಾಲಿ ಮತ್ತು ಸಂಸ್ಕೃತ ಭಾಷೆಗಳ ಪದಗಳಿಂದ ರಚಿತಗೊಂಡ ಗೀತೆ ‘ವಂದೇ ಮಾತರಂ'. ವಂದೇ ಮಾತರಂ ಪದದ ಅರ್ಥ ‘ತಾಯಿಗೆ ವಂದಿಸುವೆ' ಎನ್ನುವುದಾಗಿದೆ. ಈ ಹಾಡಿನ ಪಲ್ಲವಿ ಮತ್ತು ಮೊದಲ ಚರಣ ಭಾರತದ ಭೌಗೋಳಿಕ ವಿವಿಧತೆಯ ಕುರಿತು ಕೊಂಡಾಡಿದ್ದು ನಂತರದ ಎರಡು ಚರಣಗಳು ಆಕೆಯ ಗುಣವಿಶೇಷತೆಗಳನ್ನು ತಿಳಿಸುತ್ತವೆ. ಅದರ ನಂತರದ ನಾಲ್ಕು ಚರಣಗಳು ಭಾರತ ಮಾತೆ ಮತ್ತು ಅವಳ ಮಕ್ಕಳಾದ ನಮ್ಮ ನಡುವಿನ ಸಂಬAಧವನ್ನು ಹಾಗೂ ಭಾರತಮಾತೆ ದುರ್ಗೆ, ಲಕ್ಷಿö್ಮ, ಸರಸ್ವತಿಯ ಸ್ವರೂಪವೆಂದೂ ಬಣ್ಣಿಸಲಾಗಿದೆ. ಕ್ರಾಂತಿ-ಶಾAತಿ ಮಾರ್ಗದ ಪ್ರೇರಣಾ ಸ್ರೋತ ಈ ರಾಷ್ಟçದ ಸ್ವಾತಂತ್ರö್ಯ ಹೋರಾಟದಲ್ಲಿ ಪ್ರಮುಖವಾದ ಪಾತ್ರವಹಿಸಿದ್ದ ಎರಡು ಸ್ವಾತಂತ್ರö್ಯ ಹೋರಾಟದ ಮಾರ್ಗ ‘ಕ್ರಾಂತಿಯ ಮಾರ್ಗ’ ಮತ್ತು ‘ಶಾಂತಿಯ ಮಾರ್ಗ’. ಈ ಎರಡೂ ಮಾರ್ಗವನ್ನು ಸಮಾನವಾಗಿ ಪ್ರೇರೇಪಿಸಿದ ಕೀರ್ತಿ ವಂದೇಮಾತರA ಗೀತೆಗೆ ಸಲ್ಲುತ್ತದೆ. ಎಷ್ಟರ ಮಟ್ಟಿಗೆ ವಂದೇ ಮಾತರಂ ಗೀತೆ ಮತ್ತು ಘೋಷಣೆ ಬ್ರಿಟಿಷರ ನಿದ್ದೆ ಕೆಡಿಸಿತ್ತೆಂದರೆ ‘ವಂದೇ ಮಾತರಂ’ ಘೋಷಣೆಯನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಬೇಕಾಯಿತು. ಸಾರ್ವಜನಿಕವಾಗಿ ಘೋಷಣೆ ಕೂಗಿದವರನ್ನು ಬಂಧಿಸಲಾಗುತ್ತಿತ್ತು. ೧೯೧೫ರಿಂದ ಪತಿ ವರ್ಷ ಕಾಂಗ್ರೆಸ್ ಅಧಿವೇಶನದಲ್ಲಿ “ವಂದೇ ಹಾಡುವುದಕ್ಕಾಗಿಯೇ ಆಗಿನ ಖ್ಯಾತ ಗಾಯಕ ವಿಷ್ಣು ದಿಗಂಬರ ಪಲುಸ್ಕರ್ ಅವರನ್ನು ಆಹ್ವಾನಿಸಲಾಗುತ್ತಿತ್ತು. ಗಾಂಧೀಜಿ ತಮ್ಮ ಭಾಷಣಗಳಲ್ಲಿ ಈ ಹಾಡಿನ ಅರ್ಥವನ್ನು ಒತ್ತಿ ಹೇಳುತ್ತಿದ್ದರು. ೧೯೦೫ರಲ್ಲಿ ಮೇಡಮ್ ಕಾಮಾ ಜರ್ಮನಿಯಲ್ಲಿ ಭಾರತದ ಧ್ವಜ ಹಿಡಿದು ಬ್ರಿಟಿಷರ ವಿರುದ್ಧ ಪ್ರತಿಭಟಿಸಿದ್ದರು. ಆ ಧ್ವಜದ ಮೇಲೆ ‘ವಂದೇ ಮಾತರಂ' ಎಂದು ಬರೆಯಲಾಗಿತ್ತು. ರಾಮ್ಪ್ರಸಾದ್ ಬಿಸ್ಮಿಲ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು, ಸುಖ್ದೇವ್, ಆಶ್ಫಾಕುಲ್ಲಾ ಖಾನ್ ಮುಂತಾದ ಕ್ರಾಂತಿಕಾರಿಗಳ ಧ್ಯೇಯವಾಕ್ಯವೇ ವಂದೇ ಮಾತರಂ ಆಗಿತ್ತು. ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಎಲ್ಲಾ ಚಳುವಳಿಗಳಲ್ಲಿ ಮೊಳಗುತ್ತಿದ್ದ ಘೋಷವಾಕ್ಯ ‘ವಂದೇ ಮಾತರಂ’. ಸುಭಾಷ್ಚಂದ್ರ ಬೋಸ್ರ ಆಜಾದ್ ಹಿಂದ್ ಫೌಜಿನ ರಣಮಂತ್ರವೇ ‘ವಂದೇ ಮಾತರಂ’ ೧೯೪೨-೪೪ರ ಅವಧಿಯಲ್ಲಿ ಆಝಾದ್ ಹಿಂದ್ ರೇಡಿಯೋದಲ್ಲಿ ಸುಭಾಷ್ಚಂದ್ರ ಬೋಸ್ ಸಂದೇಶ ಆರಂಭವಾಗುತ್ತಿದ್ದದ್ದು ‘ವಂದೇ ಮಾತರಂ'ನಿAದ. ಬಂಗಾಳದಲ್ಲಿ ಬಿಪಿನ್ ಚಂದ್ರಪಾಲ್, ಅರವಿಂದ್ ಘೋಷ್, ಪಂಜಾಬ್ನಲ್ಲಿ ಲಾಲಾ ಲಜಪತ್ ರಾಯ್, ಮಹಾರಾಷ್ಟçದಲ್ಲಿ ತಿಲಕ್, ಕೇಶವ ಬಲಿರಾಮ್ ಹೆಡಗೆವಾರ್, ದಕ್ಷಿಣ ಭಾರತದಲ್ಲಿ ಸುಬ್ರಮಣ್ಯ ಭಾರತಿ, ಚಿದಂಬರA ಪಿಳ್ಳೆ ಸುಬ್ರಹ್ಮಣ್ಯ ಶಿವ ಮುಂತಾದವರು ‘ವಂದೇ ಮಾತರಂ’ ಆಂದೋಲನದ ನೇತೃತ್ವ ವಹಿಸಿದ್ದರು. ವಂದೇ ಮಾತರಂ ಗೀತೆಗೆ ತಪ್ಪಿದ ರಾಷ್ಟçಗೀತೆ ಗೌರವ. ‘ವಂದೇ ಮಾತರಂ' ಗೀತೆ ಅಷ್ಟೆಲ್ಲ ಪ್ರಸಿದ್ಧಿ ಪಡೆದಿದ್ದರೂ, ಸ್ವಾತಂತ್ರ್ಯದ ನಂತರ ಅದು ರಾಷ್ಟçಗೀತೆಯಾಗಲಿಲ್ಲ. ಮಿಲಿಟರಿ ಬ್ಯಾಂಡ್ ಸಂಗೀತ ರಚನೆಗೆ ‘ವಂದೇ ಮಾತರಂ' ಹೊಂದುವುದಿಲ್ಲ ಎಂಬುದು ನೆಹರು ಕೊಟ್ಟ ಸಮರ್ಥನೆಯಾಗಿತ್ತು. ಆಗ ಖ್ಯಾತ ಸಂಗೀತಗಾರ ಕೃಷ್ಣರಾವ್ ಪುಲಂಬ್ರೀಕರ್, ಯಾವುದೇ ಭಾರತೀಯ ಅಥವಾ ವಿದೇಶಿ ವಾದ್ಯಕ್ಕೆ ‘ವಂದೇ ಮಾತರಂ' ಗೀತೆಯನ್ನು ಹೊಂದಿಸಬಹುದು ಎಂದು ಹೇಳಿದರೂ, ಅವರಿಗೆ ಅವಕಾಶ ನೀಡಲು ನೆಹರು ನಿರಾಕರಿಸಿದ್ದರು ಎನ್ನಲಾಗಿದೆ. ವಂದೇ ಮಾತರಂ ಗೀತೆಗೆ ‘ರಾಷ್ಟçಗಾನ’ ಸ್ಥಾನಮಾನ ಈ ರಾಷ್ಟçದ ಸ್ವಾತಂತ್ರö್ಯ ಹೋರಾಟದ ಭಾಗವೇ ಆದ ‘ವಂದೇ ಮಾತರಂ’ ಗೀತೆಗೆ ಅದರ ಅಮೃತ ಮಹೋತ್ಸವದ (೭೫ನೇ ವರ್ಷ) ಸಂದರ್ಭದಲ್ಲಿ ‘ರಾಷ್ಟಿçÃಯ ಗಾನ' ಸ್ಥಾನಮಾನವನ್ನು ನೀಡಲಾಯಿತು. ಈ ಸ್ಥಾನಮಾನ ಸಿಕ್ಕಿ ವಂದೇ ಮಾತರಂಗೆ ಈ ವರ್ಷ ೭೫ ವರ್ಷಗಳು ತುಂಬಿದೆ. ೧೯೫೦ ಜ.೨೪ರಂದು ‘ವಂದೇ ಮಾತರಂ' ಗೀತೆಗೆ ‘ಜನ ಗಣ ಮನ’ದಷ್ಟೇ ಸಮಾನ ಸ್ಥಾನ ಹಾಗೂ ಗೌರವ ಘೋಷಣೆ ಆಯಿತು. ಅಂದು ಸಂವಿಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಬು ರಾಜೇಂದ್ರ ಪ್ರಸಾದ್, ಜನಗಣಮನ ಭಾರತದ ರಾಷ್ಟçಗೀತೆಯಾಗಿರಲಿದೆ ಎಂದು ಘೋಷಿಸಿದ್ದರಲ್ಲದೆ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರೇರಣೆಯೊದಗಿಸಿದ ವಂದೇಮಾತರAಗೂ ಸಮಗೌರವ ನೀಡಲಾಗುವುದು ಎಂದರು. ವಿವಿಧ ಪ್ರಸಿದ್ಧ ಸಂಯೋಜನೆಗಳು ಸ್ವಾತAತ್ರö್ಯ ಪೂರ್ವದಿಂದ ಇಂದಿನವರೆಗೂ ಆನೇಕ ಸಂಗೀತಗಾರರು ಭಿನ್ನ ಶೈಲಿಗಳಲ್ಲಿ 'ವಂದೇ ಮಾತರಂ' ಗೀತೆಗೆ ರಾಗ ಸಂಯೋಜಿಸಿ ಹಾಡಿದ್ದಾರೆ. ಜಡುನಾಥ್ ಭಟ್ಟಾಚಾರ್ಯ ಈ ಗೀತೆಗೆ ಮೊದಲು ರಾಗ ಸಂಯೋಜಿಸಿದವರು. ನಂತರ ದಕ್ಷಿಣ ಚರಣ್ ಸೇನ್, ವಿ.ಡಿ. ಆಂಭಾಲಿಕರ್ ಭಿನ್ನ ಶೈಲಿಯಲ್ಲಿ ಹಾಡನ್ನು ಪ್ರಸ್ತುತಪಡಿಸಿದ್ದರು. ೧೯೪೭, ಆಗಸ್ಟ್ ೧೫ರಂದು ಪಂ. ಓಂಕಾರನಾಥ್ ಠಾಕೂರ್ ತಮ್ಮ ಶಾಸ್ತಿçÃಯ ಗಾಯನದಲ್ಲಿ ಆಕಾಶವಾಣಿಯಲ್ಲಿ ಮೊದಲ ಬಾರಿ 'ವಂದೇ ಮಾತರಂ' ಗೀತೆ ಪ್ರಸ್ತುತಪಡಿಸಿದರು. ಇಂದಿಗೂ ಆಕಾಶವಾಣಿ ಪ್ರತಿನಿತ್ಯ ‘ವಂದೇ ಮಾತರಂ' ಗೀತೆಯೊಂದಿಗೆ ತನ್ನ ಪ್ರಸಾರ ಕಾರ್ಯ ಆರಂಭಿಸುತ್ತದೆ. ೧೯೫೨ರಲ್ಲಿ ತೆರೆಕಂಡ ಆನಂದಮಠ ಕಾದಂಬರಿ ಆಧಾರಿತ ಚಲನಚಿತ್ರದಲ್ಲಿ ನಿರ್ದೇಶಕ ಹೇಮಂತ್ ಕುಮಾರ್ 'ವಂದೇ ಮಾತರಂ' ಗೀತೆಗೆ ಹೊಸ ಸ್ಪರ್ಶ ನೀಡಿದ್ದರು. ಲತಾ ಮಂಗೇಶ್ವರ್, ಸಂಗೀತಾ ಕಟ್ಟಿ, ವಿಜಯ್ ಪ್ರಕಾಶ್, ಶ್ರೇಯಾ ಘೋಷಲ್ ಮುಂತಾದ ಗಾಯಕರು ವಿವಿಧ ರಾಗಸಂಯೋಜನೆಗಳಿAದ ಹಾಡಿರುವ ಈ ಗೀತೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ವಂದೇ ಮಾತರಂಗೆ ವಿರೋಧ! ೧೯೨೩ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ‘ವಂದೇ ಮಾತರಂ' ಗೀತೆಗೆ ಮೊದಲ ವಿರೋಧ ವ್ಯಕ್ತವಾಯಿತು. ಅಧಿವೇಶನದ ಅಧ್ಯಕ್ಷರಾಗಿದ್ದ ಮೌಲಾನಾ ಮಹಮದ್ ಅಲಿ, 'ವಂದೇ ಮಾತರಂ' ಒಂದು ಕೋಮಿನ ಗೀತೆ. ಇಸ್ಲಾಂ ಪ್ರಕಾರ ಸಂಗೀತ ನಿಷೇಧವೆಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ತಮ್ಮ ರಿಲಿಜನ್ನಲ್ಲಿ ದೇಶವನ್ನು ದೇವತೆ ರೂಪದಲ್ಲಿ ನೋಡುವ ಪದ್ಧತಿ ಇಲ್ಲ ಎಂದು ಆಕ್ಷೇಪಿಸಿದರು. ಆದರೂ ಪಲುಸ್ಕರ್ ಅವರು ಮೌಲಾನಾ ಅವರ ಆಕ್ಷೇಪ ತಿರಸ್ಕರಿಸಿ, ‘ವಂದೇ ಮಾತರಂ' ಹಾಡಿದ್ದರು. ಮಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ದೇಶದಲ್ಲಿ ಪ್ರಬಲಗೊಂಡAತೆ ವಂದೇ ಮಾತರಂ ಹಾಡಿಗೆ ನಿಷೇಧ ತರಲು ಒತ್ತಡ ಹೇರಿತ್ತು. ಹೀಗಾಗಿ ಆರು ಚರಣಗಳಿದ್ದರೂ ಕಾಂಗ್ರೆಸ್ ಮಾತ್ರ ಮೊದಲೆರಡು ಚರಣಗಳನ್ನು ಮಾತ್ರ ತಮ್ಮ ಸಮಾರಂಭಗಳಲ್ಲಿ ಹಾಡಲಾಗುತ್ತಿತ್ತು.
ಸ್ವಾಮಿ ವಿವೇಕಾನಂದ ಎಂಬ ವಿದ್ಯುತ್ ಶಕ್ತಿಯ ಸಂಚಾರದ ಮಾತ್ರದಿಂದಾಗಿ ಭಾರತದಲ್ಲಾದ ಬದಲಾವಣೆ ಕಡಿಮೆಯದ್ದೇನಲ್ಲ. ಕೇವಲ ೩೯ ವರ್ಷ, ೫ ತಿಂಗಳು, ೨೨ ದಿನಗಳು ಬದುಕಿದ್ದ ಸ್ವಾಮಿ ವಿವೇಕಾನಂದರು ಭಾರತದ ಪ್ರತೀ ಕ್ಷೇತ್ರದ ಔನತ್ಯಕ್ಕಾಗಿ ಕಟ್ಟಿಕೊಟ್ಟ ಕಲ್ಪನೆಗಳು ಮತ್ತು ಇಲ್ಲಿನ ಸಮಸ್ಯೆಗಳಿಗೆ ಅವರು ನೀಡಿದ ಪರಿಹಾರ ಇಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಕಾಲಘಟ್ಟದ ಪ್ರಮುಖ ಇತಿಹಾಸಕಾರನಾಗಿದ್ದ ಬಿಮಾನ್ ಬಿಹಾರಿ ಮಜುಮ್ದಾರ್ “೧೮೯೭ರಲ್ಲಾದ ಸ್ವಾಮಿ ವಿವೇಕಾನಂದರ ವಿದೇಶ ಪ್ರವಾಸದ ಪುನರ್ ಆಗಮನ ಭಾರತದ ರಾಷ್ಟಿçÃಯತೆಯ ಇತಿಹಾಸದಲ್ಲಿ ಹೊಸದೊಂದು ಪರ್ವವೊಂದನ್ನು ನಿರ್ಮಿಸಿತು” ಎಂದು ನುಡಿದಿದ್ದಾರೆ. ಏಕೆ ಸ್ವಾಮೀಜಿಯವರ ಪುನರ್ ಆಗಮನ ರಾಷ್ಟçದ ಸ್ವಾತಂತ್ರö್ಯಕ್ಕೆ ಹೆಚ್ಚು ಮಹತ್ವಯುತವಾಗಿತ್ತೆನ್ನುವುದಕ್ಕೆ ಕಾಕತಾಳಿಯವಾದರೂ ಸತ್ಯವಾಗಿರುವ ಈ ನಿದರ್ಶನವೇ ಸಾಕ್ಷಿ. ಫೆ.೧೪, ೧೮೯೭ರಲ್ಲಿ ಸ್ವಾಮೀಜಿ ತಮ್ಮ ಮದ್ರಾಸ್ ಉಪನ್ಯಾಸದಲ್ಲಿ “ಗುಲಾಮರಾಗಿರುವುದನ್ನು ಬಿಟ್ಟು, ನೂರಾರು ದೇವರುಗಳನ್ನು ಪಕ್ಕಕ್ಕಿರಿಸಿ ಮುಂದಿನ ೫೦ ವರ್ಷಗಳ ಕಾಲ ತಾಯಿ ಭಾರತಿಯನ್ನು ಮಾತ್ರ ಪೂಜಿಸೋಣ” ಎಂದಿದ್ದರು. ಕಾಕತಾಳೀಯವೆಂಬAತೆ ಸರಿಯಾಗಿ ೫೦ ವರ್ಷಗಳ ನಂತರ ಅಂದರೆ ೧೯೪೭ ಫೆ.೨೩ರಂದು ಯು.ಕೆಯ ಆಗಿನ ಪ್ರಧಾನಿ ಮೇಜರ್ ಅಟ್ಲಿ, ಹೌಸ್ ಆಫ್ ಕಾಮನ್ಸ್ನಲ್ಲಿ ಭಾರತವನ್ನು ಬಿಟ್ಟು ಬರುವ ಮಾತನ್ನಾಡುತ್ತಾನೆ! ಸ್ವಾಮಿ ವಿವೇಕಾನಂದರು ಅವತರಿಸಿ ೧೬೨ ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ ಸ್ವಾಮಿ ವಿವೇಕಾನಂದರು ಕೇವಲ ಭೌತಿಕವಾಗಿ ಸ್ವಾತಂತ್ರö್ಯಗಳಿಸುವುದಕ್ಕಾಗಿ ಹೋರಾಡಿದವರಿಗೆ ಮಾತ್ರ ಪ್ರೇರಣೆಯಾಗದೆ ಭಾರತದ ಸರ್ವಾಂಗೀಣ ಸ್ವಾತಂತ್ರö್ಯಕ್ಕಾಗಿ ದುಡಿದವರಿಗೂ ಪ್ರೇರಣೆಯನ್ನೊದಗಿಸಿದವರು ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ನುಡಿ ಬ್ರಿಟಿಷರ ವಿರುದ್ಧದ ಸ್ವಾತಂತ್ರö್ಯ ಹೋರಾಟದ ಮುನ್ನುಡಿ: ೧೮೯೩ರ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸವೇ ಪಾಶ್ಚಾತ್ಯರಿಗೆ ನುಂಗಲಾರದ ತುತ್ತಾಗಿತ್ತು. ಹೆಸರಿಗೆ ಮಾತ್ರ ‘ವಿಶ್ವಧರ್ಮ ಸಮ್ಮೇಳನ’ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿದ್ದರೂ, ಕೊಲಂಬಸ್ ಅಮೇರಿಕಾವನ್ನು ಕಂಡು ಹಿಡಿದು ೪೦೦ ವರ್ಷಗಳಾದ ಸಂಭ್ರಮದ ಜೊತೆಗೆ ಕ್ರೆöÊಸ್ತ ರಿಲಿಜನ್ನೇ ಶ್ರೇಷ್ಠ ಎನ್ನುವುದನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸುವ ಉದ್ದೇಶವಡಗಿತ್ತು. ಸ್ವಾಮಿ ವಿವೇಕಾನಂದರು ಭಾಗವಹಿಸಿದ ಕಾರಣ ಅದು ನಿಜಾರ್ಥದಲ್ಲಿ “ವಿಶ್ವಧರ್ಮ ಸಮ್ಮೇಳನ” ಎನಿಸಿತು. ವಿಶ್ವಧರ್ಮ ಸಮ್ಮೇಳನದ ಕುರಿತಾಗಿ ಆಗಿನ ವಿಮರ್ಶಕರು “ಒಂದು ವೇಳೆ ಸ್ವಾಮಿ ವಿವೇಕಾನಂದರು ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸದೇ ಇರುತ್ತಿದ್ದರೆ ಅದು ಸ್ವ ಮತ ಪ್ರತಿಪಾದನಾ ಸಭೆಯಾಗಿರುತ್ತಿತ್ತಷ್ಟೇ” ಎಂದಿರುವುದೇ ಇದಕ್ಕೆ ಸಾಕ್ಷಿ. ಸ್ವಾಮೀಜಿಯವರು ತಮ್ಮ ಭಾಷಣಗಳಲ್ಲಿ ಜಗತ್ತಿಗೆ ವಿಶ್ವಧರ್ಮದ ಕಲ್ಪನೆ ಕಟ್ಟಿಕೊಟ್ಟಿದ್ದಲ್ಲದೆ, ಅವರ ಮಾತುಗಳ ಮೂಲಕವೇ ಭಾರತ ವಿರೋಧಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸಿದ್ದರು. ಅದರ ಜೊತೆಗೆ ಅವರ ನಡೆ-ನುಡಿಗಳಲ್ಲಿ ವ್ಯಕ್ತವಾದ ಭಾರತಪ್ರೇಮ ಮುಂದೆ ಭಾರತದ ಸ್ವಾತಂತ್ರö್ಯಲಕ್ಷಿö್ಮÃಗಾಗಿ ಪ್ರಾಣಾರ್ಪಣೆಗೈಯಲು ಮುಂದಾದವರಿಗೆ ಪ್ರೇರಣೆಯೊದಗಿಸಿದಂತೂ ನಿಜ. ಸ್ವಾಮೀಜಿಯವರ ದೇಶಭಕ್ತಿಯ ಕಲ್ಪನೆ ಸೊಗಸಾಗಿತ್ತು. ಸ್ವಾಮೀಜಿಯೇ ಹೇಳುವಂತೆ “ನಮ್ಮ ಪರಂಪರೆಯ ಜನರನ್ನು ನಮ್ಮವರೆಂದು ಭಾವಿಸುವುದಕ್ಕೆ ನಿನ್ನಿಂದ ಸಾಧ್ಯವಾಗುತ್ತದೆಯೇ? ಅವರ ಉದ್ಧಾರಕ್ಕಾಗಿ ನೀನು ನಿರಂತರವಾಗಿ ಶ್ರಮವಹಿಸುತ್ತೀಯಾ? ಅವರ ಹಿತಚಿಂತನೆಯಿAದ ನೀನು ನಿದ್ರಾಹೀನನಾಗುತ್ತೀಯಾ? ನಿನ್ನ ಹೃದಯದ ಪ್ರತಿ ಬಡಿತದಲ್ಲೂ ಇವರುಗಳ ಕುರಿತು ಯೋಜಿಸುತ್ತೀಯಾ? ನೀನು ಹಾಗಾದಾಗ ಮಾತ್ರ ದೇಶಭಕ್ತನಾಗುವ ಪ್ರಥಮ ಹೆಜ್ಜೆಯನ್ನು ಇಟ್ಟಿದ್ದೀಯ” ಎಂದು ಸ್ವಾಮೀಜಿ ತಿಳಿಸುತ್ತಾರೆ. ಇಂತಹ ದೇಶಭಕ್ತಿ ತುಂಬಿದ ಯುವಕರು ಇಂದಿಗೂ ದೇಶಕ್ಕೆ ಅತ್ಯಗತ್ಯ. ಸ್ವಾಮಿ ವಿವೇಕಾನಂದರ ಪ್ರಭಾವದ ಕುರಿತು ದಾಖಲೆ ಸಹಿತ ನಮಗೆ ಸಿಗುವಂತದ್ದು ಚಾರ್ಲ್ ಟೆಗಾಟ್ ರಿಪೋರ್ಟ್ನಲ್ಲಿ. ಆತ ಕಲ್ಕತ್ತಾದಲ್ಲಿ ಅಧಿಕಾರದಲ್ಲಿದ್ದಾಗ ಗೂಢಚರ್ಯೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ. ಆ ಸಂದರ್ಭದಲ್ಲಿ ಅನೇಕ ಕ್ರಾಂತಿಕಾರಕ ಚಟುವಟಿಕೆಗಳು ನಡೆಯುತ್ತವೆ. ಲಾಹೋರ್ ಕಾನ್ಸಿ÷್ಪರಸಿಗೆ ಕಾರಣಕರ್ತರಾದ ರಾಶ್ ಬಿಹಾರಿ ಬೋಸ್, ಬರಸಾಲ್ ಕಾನ್ಸಿ÷್ಪರಸಿಯಲ್ಲಿ ಸೆರೆಸಿಕ್ಕ ೧೨ ಜನ ಯುವಕರು, ಚಿತ್ತಗಾಂವ್ ಕಾನ್ಸಿ÷್ಪರಸಿಯಲ್ಲಿ ಮಹತ್ವದ ಪಾತ್ರವಹಿಸಿದ ಸೂರ್ಯಸೇನ ಮುಂತಾದವರೆಲ್ಲರಿಗೂ ಪ್ರೇರಣೆಯನ್ನೊದಗಿಸಿದ್ದು ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣಾಶ್ರಮ ಎನ್ನುವುದು ತಿಳಿಯಿತು. ಬ್ರಿಟಿಷರ ಕೈಸಿಕ್ಕ ಬಹುತೇಕ ಕ್ರಾಂತಿಕಾರಿಗಳಲ್ಲಿ ಸಿಗುತ್ತಿದ್ದಿದ್ದು ಭಗವದ್ಗೀತೆ ಮತ್ತು ಸ್ವಾಮಿ ವಿವೇಕಾನಂದರ ಪತ್ರಮಾಲೆಗಳು. ಸ್ವಾಮಿ ವಿವೇಕಾನಂದರ ಕೊಲೊಂಬೊದಿAದ ಅಲ್ಮೋರಕ್ಕೆ ಉಪನ್ಯಾಸಗಳು. ಭಾಗಾ ಜತಿನ್ ಎಂಬ ಅಪ್ರತಿಮ ಪರಾಕ್ರಮಿಗೆ ತನ್ನ ಕ್ರಾಂತಿಕಾರಿ ಹೋರಾಟಕ್ಕೆ ಪ್ರೇರಣೆಯನ್ನೊದಗಿಸಿದವರು ಸ್ವಾಮಿ ವಿವೇಕಾನಂದರು. ಆತ ಪ್ರಮುಖನಾಗಿದ್ದ ಅನುಶೀಲನ ಸಮಿತಿಯ ರಹಸ್ಯ ಪತ್ರಗಳ ಕೋಡ್ ವರ್ಡ್ ‘ಮಿಶನ್’ ಮತ್ತು ಪಾಸ್ವರ್ಡ್ ‘ವಿವೇಕಾನಂದ’ ಎಂದಾಗಿತ್ತು! ಯೋಗಿ ಅರವಿಂದರು ಆಲಿಪುರದ ಜೈಲಿನಲ್ಲಿದ್ದಾಗ ಚಾರ್ಲ್ಸ್ ಟೆಗರ್ಟ್ ಪರಿವೀಕ್ಷಣೆಗೆ ಬರುತ್ತಾನೆ. ಆಗ ಅರವಿಂದರ ಬಳಿಯಿದ್ದ ಒಂದು ಪೊಟ್ಟಣವನ್ನು ಆತ ತೆಗೆದುಕೊಂಡು ಏನಿದು ಎಂದು ಕೇಳುತ್ತಾನೆ. ಅದಕ್ಕೆ ಅರವಿಂದರು “Iಣs ಚಿ ಜಿuಣuಡಿe bomb” ಎಂದು ಉತ್ತರಿಸುತ್ತಾರೆ. ದಿಗ್ಭಾçಂತನಾದ ಟೆಗರ್ಟ್ ಆ ಪೊಟ್ಟಣವನ್ನು ಬಿಚ್ಚಿ ನೋಡಿದಾಗ ಅದರಲ್ಲಿದ್ದಿದ್ದು ಮಣ್ಣಿನ ಹೆಂಟೆ. ಆಗ ಅರವಿಂದರು “ಇದನ್ನು ಸಾಮಾನ್ಯ ಮಣ್ಣಿನ ಹೆಂಟೆ ಎಂದು ಭಾವಿಸಬೇಡಿ. ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರAತಹ ಶಕ್ತಿ ಕೇಂದ್ರಗಳು ಓಡಾಡಿದ ದಕ್ಷಿಣೇಶ್ವರದ ಮಣ್ಣಿದು. ಮುಂದೆ ಅನೇಕ ಕ್ರಾಂತಿಕಾರಿಗಳು ಈ ಮಣ್ಣಿನ ಸಹಕಾರದಿಂದ ನಿಮ್ಮ ವಿರುದ್ಧ ಮುಗಿಬೀಳಲಿದ್ದಾರೆ” ಎಂದರು ಈ ಒಂದು ಘಟನೆ ಕೇವಲ ಅರವಿಂದರಲ್ಲದೆ ಇತರೆ ಕ್ರಾಂತಿಕಾರಿಗಳ ಮೇಲೂ ಸ್ವಾಮೀಜಿ ಬೀರಿದ ಪ್ರಭಾವದ ಕುರಿತು ತಿಳಿಸುತ್ತದೆ. ೧೮೯೨ರಲ್ಲಿ ತಮ್ಮ ಪರಿವ್ರಾಜಕ ಸಮಯದಲ್ಲಿ ಮುಂಬೈನಲ್ಲಿ ತಿಲಕರ ಮತ್ತು ಸ್ವಾಮೀಜಿಯ ಭೇಟಿಯಾಗಿತ್ತು. ಆಗ ಸ್ವಾಮಿ ವಿವೇಕಾನಂದರಲ್ಲಿ ತಿಲಕರು, “ನೀವ್ಯಾಕೆ ಸ್ವಾತಂತ್ರö್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸಬಾರದು” ಎಂದು ಕೇಳಿದಾಗ ಸ್ವಾಮೀಜಿ, “ನಾನು ಸ್ವಾತಂತ್ರö್ಯವನ್ನು ೨೪ ಗಂಟೆಗಳಲ್ಲಿ ಕೊಡಿಸಬಲ್ಲೆ! ಆದರೆ ದೊರೆತ ಸ್ವಾತಂತ್ರö್ಯವನ್ನು ಜವಾಬ್ದಾರಿಯುತವಾಗಿ ಕಾಪಾಡಿಕೊಳ್ಳುವವರು ಬೇಕಾಗಿದ್ದಾರೆ” ಎಂದರಲ್ಲದೆ ಅಂತಹವರ ನಿರ್ಮಾಣಕ್ಕೆ ಪಣತೊಟ್ಟರು. ೧೯೦೧ರಲ್ಲಿ ಸ್ವಾಮೀ ವಿವೇಕಾನಂದರನ್ನು ಮತ್ತೊಮ್ಮೆ ಕೊಲ್ಕತ್ತಾದಲ್ಲಿ ಭೇಟಿಯಾಗಿದ್ದ ತಿಲಕರಲ್ಲಿ ಸ್ವಾಮೀಜಿ, “ಐeಣ us exಛಿhಚಿಟಿge ouಡಿ ಡಿoಟe” ಎಂದಿದ್ದರAತೆ. ಈ ಘಟನೆ ಸ್ವಾಮೀಜಿಯವರಿಗೆ ಸ್ವಾತಂತ್ರö್ಯ ಹೋರಾಟದ ಕುರಿತಾಗಿದ್ದ ತುಡಿತದ ಕುರಿತು ತಿಳಿಸುತ್ತದೆ. ಸ್ವಾಮೀಜಿಯವರ ಕಾರ್ಯವೈಖರಿಯಿಂದಾಗಿ ಪ್ರೇರೇಪಿತರಾದ ತಿಲಕರು ಸ್ವಾಮೀಜಿಯನ್ನು “ಖeಚಿಟ ಜಿಚಿಣheಡಿ oಜಿ Iಟಿಜiಚಿ's ಖegeಟಿeಡಿಚಿಣioಟಿ” ಎಂದು ಸಂಬೋಧಿಸಿದ್ದರು. ಸ್ವಾಮೀ ವಿವೇಕಾನಂದರಿAದ ತಮ್ಮ ೧೫ನೇ ವರ್ಷಕ್ಕೆ ಪ್ರೇರಣೆಯನ್ನು ಪಡೆದು ತ್ಯಾಗ ಜೀವನಕ್ಕೆ ಮುಂದಾದವರು ೧೮೯೭ ಹುಟ್ಟಿದ ಸುಭಾಶ್ಚಂದ್ರ ಬೋಸ್. ಆತ ‘ನಿಯೋ ವಿವೇಕಾನಂದ’ ಎಂಬ ತಂಡವನ್ನು ಕಟ್ಟಿಕೊಳ್ಳುತ್ತಾನೆ. ಶಿಕ್ಷಣದ ಜೊತೆಗೆ ರಾಷ್ಟçದ ಪುನರುಜ್ಜೀವನ ಅದರ ಧ್ಯೇಯವಾಗಿತ್ತು. ಸುಭಾಶ್ಚಂದ್ರರೇ ಹೇಳಿರುವಂತೆ “Wheಟಿ ಚಿ ಣಡಿouಠಿ oಜಿ ಡಿeಚಿಟmeಟಿ is ಡಿeಚಿಜಥಿ, ಣheಟಿ ಣhe ಚಿim oಜಿ Sತಿಚಿmi ಗಿiveಞಚಿಟಿಚಿಟಿಜಚಿ is ಜಿuಟಜಿiಟಟeಜ.” ಎನ್ನುವುದನ್ನು ಯುವ ಕಾಂಗ್ರೆಸ್ ಅಧಿವೇಶನ ಸೇರಿದಂತೆ ಹಲವು ವೇದಿಕೆಗಳಲ್ಲಿ ಸುಭಾಶ್ಚಂದ್ರ ಬೋಸ್ ತಿಳಿಸುತ್ತಾರೆ. ಗಾಂಧೀಜಿ ೧೯೦೧ರಲ್ಲಿ ವಿವೇಕಾನಂದರನ್ನು ಭೇಟಿ ಮಾಡಬೇಕೆಂದು ಬೇಲೂರು ಮಠಕ್ಕೆ ಹೋಗಿರುತ್ತಾರೆ. ಆದರೆ ಸ್ವಾಮೀಜಿ ಅವರು ಅಲ್ಲಿರುವುದಿಲ್ಲ. ಅದಾಗಿ ೨೦ ವರ್ಷದ ನಂತರ ಕಲ್ಕತ್ತಾಗೆ ಬಂದಾಗ ರಾಮಕೃಷ್ಣಾಶ್ರಮಕ್ಕೆ ಗಾಂಧೀಜಿ ಮರಳಿ ಭೇಟಿ ನೀಡುತ್ತಾರೆ. ಕಾಕತಾಳೀಯವೆಂಬAತೆ ಅಂದು ಸ್ವಾಮೀ ವಿವೇಕಾನಂದರ ಜನ್ಮದಿನವನ್ನು ಆಚರಿಸಲಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಗಾಂಧೀಜಿಯವರ ಬಳಿ ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಲು ಹೇಳಿದಾಗ, ಗಾಂಧೀಜಿ “ಸ್ವಾಮೀ ವಿವೇಕಾನಂದರ ಅಧ್ಯಯನದ ನಂತರ ನನ್ನಲ್ಲಿದ್ದ ಭಾರತಪ್ರೀತಿ ಸಾವಿರ ಪಟ್ಟು ಹೆಚ್ಚಾಗಿದೆ” ಎಂದು ನುಡಿದರು. ಗುರುದೇವ ರವೀಂದ್ರನಾಥ ಠಾಗೋರ್ ಅವರು “ನೀವು ಭಾರತದ ಅಧ್ಯಯನ ಮಾಡಬೇಕಾದರೆ, ಸ್ವಾಮೀ ವಿವೇಕಾನಂದರ ಅಧ್ಯಯನ ಮಾಡಿ” ಎಂಬ ತಮ್ಮ ಮಾತಿನ ಮೂಲಕ ವಿವೇಕಾನಂದರ ಭಾರತಪ್ರೀತಿಯ ಕುರಿತು ಸ್ಪಷ್ಟಪಡಿಸುತ್ತಾರೆ. “ಸ್ವಾಮೀಜಿ ಅವರ ಅದ್ಭುತ ಕಂಠದಿAದ ‘ಇಂಡಿಯಾ’ ಎಂದು ಕೇಳಿದಾಗಿನಿಂದ ಭಾರತದ ಕುರಿತಾದ ಪ್ರೀತಿ ನಮ್ಮಲ್ಲಿ ಜನನವಾಯಿತು” ಎಂದು ಅಮೇರಿಕಾದ ಸ್ವಾಮೀ ವಿವೇಕಾನಂದರ ಶಿಷ್ಯೆ ಕ್ರಿಸ್ಟಿನಾ ತಿಳಿಸುತ್ತಾರೆ. “ಭಾರತದಲ್ಲಿ ಏನೇ ತೊಂದರೆಯಾದರೂ ಮೊದಲು ತಿಳಿಯುತ್ತಿದ್ದಿದ್ದು ವಿವೇಕಾನಂದರ ಹೃದಯಕ್ಕೆ” ಎಂಬ ಸೋದರಿ ನಿವೇದಿತಾಳ ಮಾತು ಸ್ವಾಮೀ ವಿವೇಕಾನಂದರ ಭಾರತ ಪ್ರೀತಿಯ ಕುರಿತು ಬೆಳಕನ್ನು ಚೆಲ್ಲುತ್ತವೆ. ಸ್ವಾಮೀಜಿ ಅವರ ವಿಶ್ವಧರ್ಮದ ಕುರಿತಾದ ಕಲ್ಪನೆ ಹೀಗಿತ್ತು. “ವಿಶ್ವಧರ್ಮ ಎಂದರೆ ಅದು ದೇಶ ಕಾಲಗಳ ಮಿತಿ ಮೀರಿರಬೇಕು. ಆ ಧರ್ಮ ಭಾಸ್ಕರನ ಬೆಳಕು ಕೃಷ್ಣನ ಅನುಯಾಯಿಗಳ ಮೇಲೆ, ಕ್ರಿಸ್ತನ ಅನುಯಾಯಿಗಳ ಮೇಲೆ, ಪುಣ್ಯವಂತರ ಮೇಲೆ, ಪಾಪಿಗಳ ಮೇಲೆ ಸಮವಾಗಿ ಬೀಳಬೇಕು. ಅದು ವೈದಿಕವಾಗಲಿ, ಮಹಮದ್ದೀಯವಾಗಲಿ, ಬೌದ್ಧವಾಗಲಿ ಅಥವ ಕ್ರೆöÊಸ್ತವಾಗಲಿ ಆಗಿರದೆ ಇವೆಲ್ಲದರ ಸಮಗ್ರೀಕರಣವಾಗಿರಬೇಕು. ಅದು ಸುಧಾರಣೆ ಅಥವಾ ಅಭಿವೃದ್ಧಿಗೆ ಅಪಾರ ಅವಕಾಶ ಹೊಂದಿರಬೇಕು. ಅದು ಪಶುಸದೃಶ ಕಾಡು ಜನರಿಂದ ಹಿಡಿದು ಹೃದಯ ಬುದ್ಧಿಗಳ ತುತ್ತತುದಿಗೇರಿ ಸಾಮಾನ್ಯ ಮಾನವತೆಯ ಮೇರೆಯನ್ನು ಮೀರಿರುವ ಮಹಾಮಾನವನವರೆಗೆ ಸರ್ವರಿಗೂ ಆಶ್ರಯವನ್ನೀಯುವಂಥದ್ದಾಗಿರಬೇಕು. ವ್ಯಕ್ತಿ ತನ್ನ ನೈಜ ಸ್ವರೂಪವನ್ನು ಕಂಡುಕೊಳ್ಳುವAತೆ ಮಾಡುವಲ್ಲಿ ಆ ಧರ್ಮದ ವಿಶಾಲ ಪಂಥಿಯು ಕೇಂದ್ರಿಕೃತವಾಗಿರಬೇಕು. ಒಟ್ಟಿನಲ್ಲಿ ಜಗತ್ತಿನ ಜನರೆಲ್ಲರೂ ಒಪ್ಪುವಂತಿರಬೇಕು.” ಎಂದು ತಿಳಿಸಿದರು. ರಾಷ್ಟçದ ಸ್ವಾತಂತ್ರö್ಯಕ್ಕಾಗಿ ಹೋರಾಟ ಉತ್ತುಂಗದಲ್ಲಿದ್ದ ಸಮಯದಲ್ಲೇ ನಮ್ಮಲ್ಲಿ ಸಾಮಾಜಿಕ ಸ್ವಾತಂತ್ರö್ಯದ ಅಗತ್ಯತೆಯೂ ಇತ್ತು. ಸ್ವಾಮಿ ವಿವೇಕಾನಂದರು ತಮ್ಮ ಬದುಕಿನುದ್ದಕ್ಕೂ ಸಾಮಾಜಿಕ ಸ್ವಾತಂತ್ರö್ಯಕ್ಕಾಗಿ ಶ್ರಮಿಸಿದ್ದಾರೆ. ಪರಿವ್ರಾಜಕ ದಿನಗಳಲ್ಲಿ ಕೇರಳಕ್ಕೆ ಬಂದಿದ್ದ ಸ್ವಾಮೀಜಿ ಅಲ್ಲಿನ ಜಾತಿಬೇಧವನ್ನು ಕಂಡು “ಇದೊಂದು ದೊಡ್ಡ ಹುಚ್ಚಾಸ್ಪತ್ರೆ” ಎಂದಿದ್ದರು. ಹಾಗೆಯೇ ಅಲ್ಲಿನ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ನಾರಾಯಣ ಗುರುಗಳ ಶೋಧಕ್ಕೂ ಸ್ವಾಮೀಜಿ ಕಾರಣೀಭೂತರಾಗುತ್ತಾರೆ ಎನ್ನುವುದನ್ನು ತಿಳಿಯಬೇಕಾಗಿದೆ. ಈ ರಾಷ್ಟçದ ಎರಡು ಆದರ್ಶಗಳು ತ್ಯಾಗ ಮತ್ತು ಸೇವೆ ಎನ್ನುವುದನ್ನು ಹೇಳುತ್ತಿದ್ದ ಸ್ವಾಮೀಜಿ ದೀನ ದಲಿತ ಸೇವೆ ಮಾಡುವುದರ ಕುರಿತು ಭಾರತೀಯರಿಗೆ ತಿಳಿಸುತ್ತಾರೆ. ಅಷ್ಟೇ ಅಲ್ಲದೇ ದೀನರನ್ನೂ ದೇವರಂತೆ ಕಾಣು ಎನ್ನುವ ಕಲ್ಪನೆಯನ್ನು ನಾಡಿಗೆ ಕಟ್ಟಿಕೊಡುತ್ತಾರೆ. ಅವರೇ ಹೇಳಿದ ಮಾತಿಗೆ ಸ್ವಾಮೀಜಿ ಎಷ್ಟು ಬದ್ಧರಾಗಿದ್ದರೆಂದರೆ “ಒಂದು ವೇಳೆ ರಾಷ್ಟçದ ಹಿತಕ್ಕಾಗಿ ಅವರು ರೂಪಿಸಿಕೊಂಡಿದ್ದ ಯೋಜನೆಗಳ ಅನುಷ್ಠಾನಕ್ಕೆ ಹಣದ ಕೊರತೆಯಾದರೆ ಅದಕ್ಕಾಗಿ ಮಠವನ್ನು ಮಾರಿಯಾದರು ನಾನು ಅಂದುಕೊAಡ ಕಾರ್ಯವನ್ನು ಸಾಧಿಸುತ್ತೇನೆ” ಎಂದಿದ್ದರು. “ಅಂಧಾನುಕರಣೆ ನಾಗರಿಕತೆಯ ಅವನತಿಗೆ ಕಾರಣವಾಗುತ್ತದೆ” ಎನ್ನುವುದನ್ನು ಸಮರ್ಥವಾಗಿ ತಿಳಿಸಿದ ಸ್ವಾಮಿ ವಿವೇಕಾನಂದರು ಅನೇಕ ಮೂಢನಂಬಿಕೆಯ ರೂಪದಲ್ಲಿ ಬಂದAತಹ ಅಂಧಾನುಕರಣೆಯ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ ಜೊತೆಗೆ ಪರಿಹಾರವನ್ನೂ ತಿಳಿಸಿದ್ದಾರೆ. ನಮಗೆ ಪ್ರಥಮವಾಗಿ ನಮ್ಮ ರಾಷ್ಟçದ ಸಂಸ್ಕೃತಿಯ ಅರಿವು ಮುಖ್ಯವಾಗಿರಬೇಕು. ನಮ್ಮ ದೇಶದ ಆತ್ಮವಾದ ಆಧ್ಯಾತ್ಮವನ್ನು ಮರೆತರೆ ನಮಗೆ ಉಳಿಗಾಲವಿಲ್ಲ. ನಮ್ಮನ್ನು ನಾವು ಅರಿತುಕೊಳ್ಳುವ ಆದ್ಯ ಕರ್ತವ್ಯ ನಮ್ಮಲ್ಲರ ಮೇಲಿದೆ. ಅದರ ಜೊತೆಯಲ್ಲಿ ಜಗತ್ತಿನ ಒಳ್ಳೆಯ ಸಂಗತಿಗಳನ್ನು ಬಿಗಿದಪ್ಪಿಕೊಂಡು ನಮ ಮಣ್ಣಿನ ಸತ್ವಕ್ಕೆ ಅನುಗುಣವಾಗಿ ಅವುಗಳನ್ನು ಸ್ವೀಕರಿಸುವ ಔದರ್ಯ ನಮಗಿರಬೇಕೇ ವಿನಃ ಅವುಗಳನ್ನು ಅಲ್ಲಿನಂತೆಯೇ ಅನುಕರಿಸುವ ಪ್ರವೃತ್ತಿಯನ್ನು ದೂರ ಸರಿಸಬೇಕಾಗಿದೆ ಎಂದು ತಿಳಿಸಿದ್ದರು. ಅವರ ಅಧ್ಯಯನ ಮತ್ತು ಅಧ್ಯಾಪನ ಹೆಚ್ಚೆಚ್ಚು ಆದಷ್ಟು ರಾಷ್ಟçಭಕ್ತಿಯ ರಥ ಸಮರ್ಥವಾಗುತ್ತಲೇ ಹೋಗುತ್ತದೆ.

ಕಾಶ್ಮೀರದಲ್ಲಿ ಹಿಂದೆ ಊಹಿಸಲೂ ಸಾಧ್ಯವಿಲ್ಲ ಎಂದು ಭಾವಿಸಲಾಗಿದ್ದ ಘಟನೆಗಳು ಇಂದು ನಡೆಯುತ್ತಿವೆ. ಕಾಶ್ಮೀರದ ಹೃದಯಭಾಗವಾದ ಶ್ರೀನಗರದ ಲಾಲ್ ಚೌಕ್ನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಹಿಂದೂಗಳು ಈ ಬಾರಿ ನಿರ್ಭಯವಾಗಿ ಆಚರಿಸಿದ್ದಾರೆ. ಈ ಬೆಳವಣಿಗೆ ಆಧ್ಯಾತ್ಮಿಕ ಸ್ವರೂಪದ್ದಾಗಿದ್ದರೂ, ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ವಿಶಾಲವಾದ ಪರಿವರ್ತನೆಯನ್ನು ಆಳವಾಗಿ ಸಂಕೇತಿಸುತ್ತದೆ, ಇದು ಬದಲಾಗುತ್ತಿರುವ ಕಾಶ್ಮೀರದ ವಾಸ್ತವಗಳ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ದಶಕಗಳ ಕಾಲ, ಕಾಶ್ಮೀರ ಕಣಿವೆ ಸೂಕ್ಷö್ಮ, ಸಂಘರ್ಷ ಪೀಡಿತ ವಲಯವಾಗಿ ಉಳಿದಿತ್ತು, ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಕಾರ್ಯಕ್ರಮಗಳು ಅಶಾಂತಿಯ ಭಯದಿಂದ ನಿಗ್ರಹಿಸಲ್ಪಟ್ಟಿದ್ದವು ಅಥವಾ ನಿರ್ಬಂಧಿಸಲ್ಪಟ್ಟವು. ನಿರ್ದಿಷ್ಟವಾಗಿ ಲಾಲ್ ಚೌಕ್ ರಾಜಕೀಯ ಅಸ್ಥಿರತೆಯ ಸಂಕೇತವಾಗಿ ನಿಂತಿತ್ತು, ಒಂದು ಕಾಲದಲ್ಲಿ ಪ್ರತ್ಯೇಕತಾವಾದಿ ಘೋಷಣೆಗಳು ಪ್ರತಿಧ್ವನಿಸಿದ ಸ್ಥಳವಾಗಿತ್ತು ಮತ್ತು ರಾಷ್ಟçಧ್ವಜವನ್ನು ಹಾರಿಸುವುದು ತೀವ್ರ ವಿವಾದದ ವಿಷಯವಾಗಿತ್ತು. ಆದರೆ ಈಗ ಲಾಲ್ಚೌಕ್ ಸ್ಥಳವು ಭಕ್ತಿಗೀತೆಗಳು, ಮೆರವಣಿಗೆಗಳು ಮತ್ತು ಸ್ಪಷ್ಟವಾದ ಏಕತೆಯ ಪ್ರಜ್ಞೆಯೊಂದಿಗೆ ಸಂಪೂರ್ಣವಾದ ಶಾಂತಿಯುತ ಜನ್ಮಾಷ್ಟಮಿ ಆಚರಣೆಗಳಿಗೆ ಸಾಕ್ಷಿಯಾಗಿದೆ ಎಂಬುದು ಹೊಸ ಕಾಶ್ಮೀರದತ್ತ ಪ್ರಯಾಣದಲ್ಲಿ ಒಂದು ಮೈಲಿಗಲ್ಲು. ನಿರ್ಣಾಯಕ ಆಡಳಿತ, ಭದ್ರತಾ ಸುಧಾರಣೆಗಳು ಮತ್ತು ಸಮಗ್ರ ರಾಷ್ಟ್ರೀಯತೆಯ ದೃಷ್ಟಿಕೋನದ ಮೂಲಕ ಇದು ಸಾಧ್ಯವಾಗಿದೆ.
‘ನಾವು ಯಾವುದೇ ಮತವನ್ನು ಸಹಿಸಿಕೊಳ್ಳುವುದಿಲ್ಲ, ಬದಲಾಗಿ ಒಪ್ಪಿಕೊಳ್ಳುತ್ತೇವೆ’ ಎಂಬ ಸ್ವಾಮಿ ವಿವೇಕಾನಂದರ ಮಾತು ಭಾರತದ ಅಸ್ಮಿತೆಯನ್ನು ತಿಳಿಸುತ್ತದೆ. ಸಹಿಷ್ಣುತೆಯ ಪದದಲ್ಲೇ ಸಹಿಸಿಕೊಳ್ಳುವುದು ಎಂಬ ಅರ್ಥ ಬರುತ್ತದೆ. ಆದರೆ ಭಾರತದ ಗುಣಧರ್ಮ ಎಲ್ಲಾ ಧರ್ಮ-ಮತ-ಪಂಥಗಳನ್ನು ಒಪ್ಪಿಕೊಳ್ಳುತ್ತದೆ. ನಿಮ್ಮಲ್ಲಿನ ಸತ್ಯವನ್ನೂ ನಾವು ಗೌರವಿಸುತ್ತೇವೆ ಎಂದು ಹೇಳುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಆಗಾಗ ನಾವು ಕೇಳುವ ‘ಕೋಮುವಾದ’, ‘ಅಸಹಿಷ್ಣುತೆ’, ‘ಜಾತ್ಯತೀತ’ ಇತ್ಯಾದಿ ಪದಗಳು ಸಮಾಜದಲ್ಲಿ ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಈ ಗೊಂದಲಗಳಿಗೂ ಮೂಲ ಕಾರಣ ‘ಶ್ರೇಷ್ಠತೆಯ ವ್ಯಸನ’. ನಮ್ಮದೇ ಶ್ರೇಷ್ಠ/ ನಮ್ಮದು ಮಾತ್ರ ಶ್ರೇಷ್ಠ ಎಂಬ ಭಾವ ಮೂಡಿದಾಗ ಈ ಅವಾಂತರಗಳಿಗೆ ಕಾರಣವಾಗುತ್ತದೆ. ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ – ಜಗತ್ತಿನ ಮೂಲೆಮೂಲೆಗಳಿಂದ ಶ್ರೇಷ್ಠವಾದ ಸಂಗತಿಗಳು ನಮ್ಮೆಡೆಗೆ ಹರಿದು ಬರಲಿ ಎಂಬ ಶ್ರೇಷ್ಠ ಚಿಂತನೆಯ ನಾಡಿದು. ಅಂತಹ ನಾಡಿನ ಪ್ರಜೆಗಳಾದ ನಾವು ಎಲ್ಲಾ ಜಾತಿ, ಮತ, ಪಂಥ, ಸಂಪ್ರದಾಯ, ಉಪಾಸನಾ ಪದ್ಧತಿ, ಸಮುದಾಯಗಳ ಬಗ್ಗೆ ಸಮಾನ ಗೌರವವನ್ನು ನೀಡೋಣ.
ತಿರುಪತಿ ಜಿಲ್ಲೆಯ ತಮ್ಮ ಹುಟ್ಟೂರಿನ ಚರ್ಚ್ಗೆ ಭೇಟಿ ನೀಡಿದ ಆರೋಪದ ಮೇಲೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ (ಎಇಒ) ಎ ರಾಜಶೇಖರ್ ಬಾಬು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಟಿಟಿಡಿಯಿಂದ ಅಮಾನತುಗೊಳಿಸಲಾಗಿದೆ. ಪ್ರತಿ ಭಾನುವಾರ ಚರ್ಚ್ ಪ್ರಾರ್ಥನೆಗಳಿಗೆ ಹಾಜರಾಗುತ್ತಿದ್ದರು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಬಹಿರಂಗವಾದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ, ಇದು ಹಿಂದೂ ಟ್ರಸ್ಟ್ ಅನ್ನು ಪ್ರತಿನಿಧಿಸುವ ನೌಕರರ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಟಿಟಿಡಿ ಹೇಳಿಕೊಂಡಿದೆ. “ರಾಜಶೇಖರ್ ಬಾಬು ಅವರು ತಮ್ಮ ಹುಟ್ಟೂರಾದ ತಿರುಪತಿ ಜಿಲ್ಲೆಯ ಪುತ್ತೂರಿನಲ್ಲಿ ಪ್ರತಿ ಭಾನುವಾರ ಸ್ಥಳೀಯ ಚರ್ಚ್ ಪ್ರಾರ್ಥನೆಗಳಿಗೆ ಹಾಜರಾಗುತ್ತಾರೆ ಎಂಬುದು ಟಿಟಿಡಿಯ ಗಮನಕ್ಕೆ ಬಂದಿದೆ” ಎಂದು ದೇವಾಲಯ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಹಿಂದೂಯೇತರ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ನೌಕರರ ವಿರುದ್ಧ ವ್ಯಾಪಕವಾದ ಕ್ರಮದ ಭಾಗವಾಗಿ ಟಿಟಿಡಿಯ ನಿರ್ಧಾರ ಬಂದಿದೆ. ಇದಕ್ಕೂ ಮೊದಲು, ಶಿಕ್ಷಕರು, ತಾಂತ್ರಿಕ ಅಧಿಕಾರಿಗಳು, ದಾದಿಯರು ಮತ್ತು ಇತರ ಅಧಿಕಾರಿಗಳು ಸೇರಿದಂತೆ ಕನಿಷ್ಠ 18 ಉದ್ಯೋಗಿಗಳನ್ನು ಇದೇ ರೀತಿಯ ಕಾರಣಗಳಿಗಾಗಿ ಟಿಟಿಡಿ ವರ್ಗಾಯಿಸಿತ್ತು.
ವಾಸ್ತವವಾಗಿ ಭಾರತದ ಅಸ್ತಿತ್ವ ಹಳ್ಳಿಗಳಲ್ಲಿದೆ ಎಂಬುದು ಸತ್ಯವಾದ ಮಾತು. ಒಂದು ವೇಳೆ ನೀವು ಯಾವುದಾದರೂ ಆದರ್ಶ ಗ್ರಾಮವನ್ನು ನೋಡಲು ಬಯಸಿದ್ದರೆ ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯ ಬಘುವಾರ್ ಹಳ್ಳಿಗೆ ಬನ್ನಿ. ಇಲ್ಲಿ ಸ್ವಚ್ಛವಾದ ರಸ್ತೆಗಳು, ಒಳ ಚರಂಡಿಗಳು, ಪ್ರತೀ ಮನೆಯಲ್ಲೂ ಶೌಚಾಲಯಗಳು, ಆಟವಾಡಲು ಒಳಾಂಗಣ ಕ್ರೀಡಾಂಗಣ ಹಾಗೂ ಅಡುಗೆಗಾಗಿ ಜೈವಿಕ ಅನಿಲ ಸ್ಥಾವರವನ್ನು ನೀವು ಇಲ್ಲಿ ನೋಡಬಹುದು. ಹಲವು ವರ್ಷಗಳಿಂದ ಹಳ್ಳಿಯ ಯಾವುದೇ ವಿವಾದವು ಪೊಲೀಸ್ ಠಾಣೆಯವರೆಗೂ ಬಂದಿಲ್ಲ. ಶಾಲೆ ಹಾಗೂ ಸಮುದಾಯ ಭವನಕ್ಕಾಗಿ ಸರ್ಕಾರ ನೀಡಿದ ಹಣವು ಕಮ್ಮಿಯಾದಾಗ ಬಘುವಾರ್ ಹಳ್ಳಿಯ ಜನರೆ ಹಣವನ್ನು ನೀಡಿದ್ದಲ್ಲದೆ ಶ್ರಮಸೇವೆಯನ್ನೂ ಮಾಡಿದ್ದಾರೆ. ಇವೆಲ್ಲವೂ 50 ವರ್ಷಗಳಿಂದ ನಡೆಯುತ್ತಿರುವ ಸಂಘದ ಶಾಖೆ ಹಾಗೂ ಸ್ವಯಂಸೇವಕರಿಂದ ನಡೆಯುತ್ತಿರುವ ಗ್ರಾಮ ವಿಕಾಸದ ಪ್ರಯತ್ನದ ಪರಿಣಾಮವಾಗಿದೆ. ಸುಮಾರು 25 ವರ್ಷಗಳಿಂದ ಅವಿರೋಧವಾಗಿ ಗ್ರಾಮದ ಸರಪಂಚರಾಗಿರುವ ಠಾಕೂರ್ ಸುರೇಂದ್ರ ಸಿಂಹ, ಠಾಕೂರ್ ಸಂಗ್ರಾಮ್ ಸಿಂಹ ಹಾಗೂ ಹರಿಶಂಕರಲಾಲರAತಹ ಸ್ವಯಂಸೇವಕರು ಅಂದಿನ ಸರಕಾರ್ಯವಾಹರಾದ ಭಾವುರಾವ್ ದೇವರಸರ ಪ್ರೇರಣೆಯಿಂದ ತಮ್ಮ ಹಳ್ಳಿಯನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ನಿರ್ಧರಿಸಿದರು. 50 ವರ್ಷಗಳಿಂದ ನಿಯಮಿತವಾಗಿ ನಡೆಯುತ್ತಿರುವ ಪ್ರಭಾತ ಫೇರಿ, ಪ್ರತಿ ಮನೆಯ ಗೋಡೆಗಳ ಮೇಲೆ ಬರೆದ ಒಳ್ಳೆಯ ವಿಚಾರಗಳು ಹಾಗೂ ಮಳೆಯ ನೀರನ್ನು ಸಂಗ್ರಹಿಸುವ ಅಭ್ಯಾಸ, ಇವು ಬಘುವಾರನ್ನು ಬೇರೆ ಎಲ್ಲಾ ಹಳ್ಳಿಗಳಿಗಿಂತ ಭಿನ್ನವಾಗಿಸಿದೆ. 1950ರಿಂದ ಬಘುವಾರ್ನ ಗ್ರಾಮ ವಿಕಾಸ ಸಮಿತಿಯು ಸಮಗ್ರ ಗ್ರಾಮ ವಿಕಾಸಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಯನ್ನು ತಲುಪುವ 3ಕಿ.ಮೀ. ಉದ್ದದ ರಸ್ತೆಯನ್ನು ಇಲ್ಲಿನ ಯುವಕರು ಸೇರಿ ನಿರ್ಮಿಸಿದ್ದಾರೆ. ಕೃಷಿತಜ್ಞ ಹಾಗೂ ಸಂಘದ ತೃತಿಯ ವರ್ಷ ಶಿಕ್ಷಣ ಮುಗಿಸಿರುವ ಸ್ವಯಂಸೇವಕರಾದ ಬಘುವಾರ್ ವಾಸಿಯಾದ ಎಮ್.ಪಿ. ನರೋಲಿಯಾಜೀ ಹೇಳುವಂತೆ ಹಳ್ಳಿಯ ಜನರು ಎಂದಿಗೂ ಅಭಿವೃದ್ಧಿಗಾಗಿ ಸರ್ಕಾರವನ್ನು ಅವಲಂಬಿಸಿಲ್ಲ. ಸರ್ಕಾರದಿಂದ ಪಡೆದ ಹಣಕ್ಕೆ ಹಳ್ಳಿಯವರು 1.5ಲಕ್ಷದಷ್ಟು ಹಣವನ್ನು ಸೇರಿಸಿ ಶಾಲೆಯ ಕಟ್ಟಡವನ್ನು ನಿರ್ಮಿಸಿದರು. ಹಾಗೆಯೆ ಭ್ರಾಮರಿ ನದಿಗೆ ಅಣೆಕಟ್ಟನ್ನು ನಿರ್ಮಿಸಲು 2.5ಲಕ್ಷ ಹಣವನ್ನು ನೀಡಿ ನೀರಿನ ಕೊರತೆಯಿಂದ ಕೃಷಿಗೆ ಆಗುತ್ತಿದ್ದ ತೊಂದರೆಯನ್ನು ಪರಿಹರಿಸಿಕೊಂಡರು. ನಿಯಮಿತವಾದ ಸ್ವಚ್ಛತೆ, ಮನೆಗಳ ಮುಂದೆ ಇಂಗು ಗುಂಡಿ, ಒಳಚರಂಡಿಗಳ ನಿರ್ಮಾಣ, ಮರಗಳನ್ನು ನೆಡುವುದು, ಹಾಗೂ ಇಂದ್ರ ದೇವರ ಕೃಪೆಯಿಂದ ಸುರಿಯುವ ಮಳೆಯ ಪ್ರತಿ ಹನಿಯನ್ನು ಕಾಪಾಡಿ ನೀರಾವರಿಗಾಗಿ ಬಳಸುವುದು ಹಳ್ಳಿಯ ಪ್ರತಿಯೊಬ್ಬರ ಅಭ್ಯಾಸವಾಗಿದೆ. ನೂರಕ್ಕೆ ನೂರಷ್ಟು ಸಾಕ್ಷರತೆ, ಮನೆಗಳ ಗೋಡೆಯ ಮೇಲೆ ಬರೆದ ಪ್ರೇರಣಾದಾಯಕ, ಜ್ಞಾನವರ್ಧಕ ಹಾಗೂ ಸಂಸ್ಕಾರಪೂರ್ಣ ವಾಕ್ಯಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ. ಶೇಕಡ 40ರಷ್ಟು ಮನೆಗಳ ಊಟವನ್ನು ಗೋಬರ್ ಗ್ಯಾಸ್ ಬಳಸಿ ತಯಾರಿಸಲಾಗುತ್ತದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲು, ಮಕ್ಕಳು ಹಾಗೂ ಶಿಕ್ಷಕರ ಹಾಜರಾತಿ ಸರಿಯಾಗಿ ಇರುವಂತೆ ನೋಡಿಕೊಳ್ಳಲು, ಸಮಿತಿಯ ಸದಸ್ಯರು ಎಲ್ಲಾ ಪ್ರಯತ್ನವನ್ನು ಮಾಡುತ್ತಾರೆ. ಇದೇ ಸರ್ಕಾರಿ ಶಾಲೆಯಲ್ಲಿ ಓದು ಮುಗಿಸಿದ ನರೊಲಿಯಾಜೀ ಕೃಷಿ ಸಂಚಾಲಕರಾದರೆ, ಅವಧೇಶ್ ಶರ್ಮ ಲೆಫ್ಟಿನೆಂಟ್ ಆಗಿದ್ದಾರೆ. ಇಷ್ಟೆ ಅಲ್ಲ ಕೆಲವರು ಡಾಕ್ಟರ್ಗಳಾದರೆ, ಮೂವರು ಪಿ ಎಚ್ ಡಿ ಕೂಡಾ ಮಾಡಿದ್ದಾರೆ. ಐಎಎಸ್ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಮೊದಲು ಈ ಹಳ್ಳಿಯನ್ನು ಒಮ್ಮೆ ನೋಡಬೇಕು ಎಂದು ನರಸಿಂಹಪುರದ ಕಲೆಕ್ಟರ್ ಮನೀಶ್ ಸಿಂಹರ ಸಲಹೆಯಂತೆ ವಿದ್ಯಾರ್ಥಿಗಳ ಹಲವು ತಂಡಗಳು ಈ ಹಳ್ಳಿಯನ್ನು ನೋಡಲು ಬಂದಿವೆ. ಸಂಪರ್ಕಿಸಿ: ಶ್ರೀ ಸುಭಾಶ್. ಮೊಬೈಲ್ ನಂ:7697335610