ಅಜಿತ್ ಶೆಟ್ಟಿ ಹೆರಂಜೆ ಚುನಾವಣೆಯನ್ನು ಪ್ರಜಾಪ್ರಭುತ್ವದ ಉತ್ಸವ ಎನ್ನುತ್ತಾರೆ, ಆದರೆ ಮುಂದೊAದು ದಿನ ಇದೇ ಉತ್ಸವ ಪ್ರಜಾಪ್ರಭುತ್ವವೆಂಬ ತೇರನ್ನು ಎಳೆಯಲಾಗದಷ್ಟು ಭಾರವಾದಾಗ ಏನು ಮಾಡಬೇಕು? ಸಹಜವಾಗಿಯೇ ಭಾರವನ್ನು ಕಡಿಮೆಯಾಗಿಸಬೇಕು ಅಲ್ಲವೇ. ಆ ಭಾರವನ್ನು ಇಳಿಸುವ ಸಲುವಾಗಿಯೇ ‘ಒಂದು ದೇಶ ಒಂದು ಚುನಾವಣೆ’ಯ ನೀತಿಯನ್ನು ಜಾರಿಗೆ ತರಲು ಈಗ ಕೇಂದ್ರದ ಮೋದಿ ಸರಕಾರ ಹೊರಟಿದೆ. ವರ್ತಮಾನದ ಸಂಕೀರ್ಣವಾದ ಚುನಾವಣಾ ಪ್ರಕ್ರಿಯೆಯಲ್ಲಿ ಈ ರೀತಿಯ ಕ್ರಾಂತಿಕಾರಿ ನಿರ್ಧಾರವನ್ನು ತೆಗೆದುಕೊಂಡು, ಅದನ್ನು ಅತ್ಯಂತ ಸಮರ್ಪಕವಾಗಿ ಭಾರತದಂತಹ ದೇಶದಲ್ಲಿ ಅನುಷ್ಠಾನಕ್ಕೆ ತರುವುದು ನಿಜಕ್ಕೂ ಒಂದು ಸವಾಲಿನ ಸಂಗತಿಯೇ. ಚುನಾವಣಾ ಆವರ್ತನೆ ಹಳಿತಪ್ಪಿದ್ದು ಹೇಗೆ ಭಾರತದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದದ್ದು ೨೫ ಅಕ್ಟೋಬರ್ ೧೯೫೧ ಮತ್ತು ೨೧ ಫೆಬ್ರವರಿ ೧೯೫೨ರ ನಡುವೆ. ೬೮ ಹಂತದಲ್ಲಿ ನಡೆದ ಈ ಚುನಾವಣೆಯಲ್ಲಿ ಸುಮಾರು ೩೫ ಕೋಟಿ ಇದ್ದ ಭಾರತದ ಜನಸಂಖ್ಯೆಯಲ್ಲಿ ೧೬ ಕೋಟಿ ಮಂದಿ ಚುನಾವಣೆಯಲ್ಲಿ ಭಾಗಿಯಾಗಿದ್ದರು. ನಂತರ ೧೯೫೭ರಲ್ಲಿ ರಾಜ್ಯ ಮತ್ತು ಲೋಕಸಭೆಗಳಿಗೆ ಏಕಕಾಲದಲ್ಲಿಯೇ ನಡೆದ ಚುನಾವಣೆಯೂ ಸೇರಿದಂತೆ ದೇಶದಲ್ಲಿ ೨ ಬಾರಿ ‘ಒಂದು ದೇಶ ಒಂದು ಚುನಾವಣೆ’ ಯಶಸ್ವಿಯಾಗಿ ನಡೆದಿವೆ. ಆದರೆ ಇದರ ಆವರ್ತನೆ ತಪ್ಪಿದ್ದು ಇದರ ನಂತರದ ಚುನಾವಣೆಯಲ್ಲಿ. ೧೯೫೯ರಲ್ಲಿ ಪ್ರಧಾನಿ ನೆಹರು ಆರ್ಟಿಕಲ್ ೩೫೬ ಅನ್ನು ಬಳಿಸಿ ೧೯೫೭ರಲ್ಲಿ ಚುನಾಯಿತವಾದ ಕೇರಳದ ಕಮ್ಯುನಿಸ್ಟ್ ಸರಕಾರವನ್ನು ವಜಾ ಮಾಡಿತು. ಅಲ್ಲಿಂದಾಚೆಗೆ ೨೦೧೪ರವರಗೆ ರಾಜಕೀಯ ಹಾಗೂ ಸಾಂವಿಧಾನಿಕ ಕಾರಣಗಳಿಂದ ಒಟ್ಟು ೧೨೫ ಬಾರಿ ರಾಜ್ಯ ಸರಕಾರಗಳು ಬರ್ಕಾಸ್ತುಗೊಂಡಿವೆ. ಇದರ ಜೊತೆಗೆ, ಭಾಷಾವಾರು ರಾಜ್ಯಗಳ ರಚನೆ, ರಾಜ್ಯಗಳ ವಿಭಜನೆ ಹಾಗೂ ಹೊಸ ರಾಜ್ಯಗಳ ರಚನೆ ಚುನಾವಣೆ ಆವರ್ತನಗಳನ್ನು ಬದಲು ಮಾಡಿತು. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ೧೯೭೫ರಲ್ಲಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ದೇಶದ ಬಹುತೇಕ ಚುನಾಯಿತ ರಾಜ್ಯ ಸರಕಾರಗಳನ್ನು ವಜಾಗೊಳಿಸಿದರು. ಈ ಅಷ್ಟೂ ಘಟನೆಗಳು ದೇಶದಲ್ಲಿ ಒಂದೇ ಆವರ್ತನದಲ್ಲಾಗುತ್ತಿದ್ದ ಚುನಾವಣಾ ಪ್ರಕ್ರಿಯೆಯ ಹಳಿ ತಪ್ಪಿಸಿತು. ಭಾರತಕ್ಕೆ ಭಾರವಾದ ವರ್ತಮಾನದ ಚುನಾವಣಾ ವ್ಯವಸ್ಥೆ ಪ್ರಸ್ತುತ ದೇಶದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿ ೩೬ ರಾಜ್ಯಗಳು, ೨,೩೭,೫೩೯ ಗ್ರಾಮ ಪಂಚಾಯತ್, ೬,೩೨೬ ಬ್ಲಾಕ್ ಪಂಚಾಯತ್, ೬೫೫ ಜಿಲ್ಲಾ ಪಂಚಾಯತ್. ಹಾಗೂ ೪,೯೪೬ ನಗರಾಡಳಿತ ವ್ಯವಸ್ಥೆಗಳಿವೆ. ಈ ಕಾರಣದಿಂದಾಗಿಯೇ ದೇಶದಲ್ಲಿ ಪ್ರತೀ ವರ್ಷ ಯಾವುದಾದರೂ ೫-೬ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಲೇ ಇರುತ್ತದೆ. ಈಗ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂ ಬಂದ ಕಾರಣಕ್ಕೆ ಈ ಪರಿಯ ಚುನಾವಣಾ ಒತ್ತಡಗಳನ್ನು ನಿಭಾಯಿಸುವುದು ಸರಕಾರಿ ವ್ಯವಸ್ಥೆಗಳಿಗೆ ಅಸಾಧ್ಯವೇನಿಲ್ಲ. ಈಗ ಭಾರತದ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟç. ೨೦೨೪ರ ಚುನಾವಣೆಯಲ್ಲಿ ೯೬ ಕೋಟಿ ಮತದಾದರು, ೧೦ ಲಕ್ಷ ಚುನಾವಣಾ ಬೂತ್‌ಗಳು, ಜೊತೆಗೆ ೧.೨ ಕೋಟಿ ಚುನಾವಣಾ ಸಿಬ್ಬಂದಿಗಳನ್ನು ಬಳಸಲಾಗಿತ್ತು. ಇದರಲ್ಲಿ ೨೦ ಲಕ್ಷ ಮಂದಿ ಭದ್ರತಾ ಸಿಬ್ಬಂದಿಗಳಿದ್ದರು. ಈ ಪ್ರಮಾಣದಲ್ಲಿ ಚುನಾವಣೆ ನಡೆಸಲು ಸರಕಾರಿ ಯಂತ್ರಗಳು ೧ ವರ್ಷ ಇರುವಾಗಲೇ ಪೂರ್ವ ತಯಾರಿ ನಡೆಸುತ್ತವೆ. ಸುಮಾರು ಮೂರು ತಿಂಗಳುಗಳ ಕಾಲ ನೀತಿಸಂಹಿತೆ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಸರಕಾರದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ತಬ್ಧವಾಗುತ್ತದೆ. ಸರಕಾರದ ರಾಜಕೀಯ ನೇತೃತ್ವ ದೇಶದ ಆಡಳಿತದ ಬಗ್ಗೆ ಗಮನ ಹರಿಸುವ ಬದಲು ಚುನಾವಣೆಯತ್ತ ತಮ್ಮ ಗಮನ ಕೇಂದ್ರೀಕರಣ ಮಾಡಬೇಕಾಗುತ್ತದೆ. ಇದರ ಜೊತೆ ರಾಜಕೀಯ ಪಕ್ಷದ ಕಾರ್ಯಕರ್ತರು ಬೃಹತ್ ಪ್ರಮಾಣದಲ್ಲಿ ತಮ್ಮ ಎಲ್ಲಾ ದೈನಂದಿನ ಕೆಲಸಗಳನ್ನು ಬಿಟ್ಟು ಚುನಾವಣೆಗೆ ಧುಮುಕುತ್ತಾರೆ. ರಾಜ್ಯದ ವಿಧಾನಸಭಾ ಚುನಾವಣೆಗಳು ಮೇಲೆ ಉಲ್ಲೇಖಿಸಿದ ಕಾರಣಗಳಿಂದಾಗಿ ಲೋಕಸಭಾ ಚುನಾವಣೆಯ ಜೊತೆಗೆ ಆಗುತ್ತಿಲ್ಲವಾದುದರಿಂದ ಇವುಗಳನ್ನು ಪ್ರತ್ಯೇಕವಾಗಿ ಮಾಡಬೇಕಾಗುತ್ತಿದೆ. ಇದೆಲ್ದರ ಜೊತೆಗೆ ವಲಸೆ ಕಾರ್ಮಿಕರ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ ದೇಶದಲ್ಲಿ ಇಂತಹ ಅನಿಯಮಿತ ಚುನಾವಣೆಗಳು ಉತ್ಪಾದನಾ ವಲಯಗಳು ಹಾಗೂ ಮೂಲಭೂತ ಸೌಕರ್ಯ ನಿರ್ಮಾಣ ವಲಯಗಳ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ. ಇವುಗಳ ಜೊತೆಗೆ ಸ್ಥಳಿಯ ಸಂಸ್ಥೆಗಳ ಚುನಾವಣೆಗಳದ್ದು ಬೇರೆಯೇ ಲೆಕ್ಕ. ಹೀಗೆ ಪ್ರತೀ ವರ್ಷದಲ್ಲಿ ಕನಿಷ್ಠ ಪಕ್ಷ ೩-೫ ತಿಂಗಳು ಚುನಾವಣೆಯ ಸುತ್ತಲೇ ಗಿರಕಿ ಹೊಡೆದರೆ ದೇಶದ ಅಭಿವೃದ್ದಿಯ ಕೆಲಸ ಮಾಡುವುದು ಯಾವಾಗ? ಆ ಕಾರಣಕ್ಕೇ ಈ ಭಾರವನ್ನು ತಗ್ಗಿಸಲೆಂದೇ ಒಂದು ರಾಷ್ಟç ಒಂದು ಚುನಾವಣೆಯ ಕಲ್ಪನೆ ಹುಟ್ಟಿಕೊಂಡಿತು ಒAದು ರಾಷ್ಟç ಒಂದು ಚುನಾವಣೆಯ ಕಲ್ಪನೆ ಪ್ರಥಮ ಬಾರಿಗೆ ಇದರ ಉಲ್ಲೇಖವನ್ನು ೧೯೮೩ರಲ್ಲಿ ಭಾರತಿಯ ಚುನಾವಣಾ ಆಯೋಗ ತನ್ನ ಮೊದಲ ವಾರ್ಷಿಕ ವರದಿಯಲ್ಲಿ ಮಾಡಿತ್ತು. ಅಂದಿನಿAದ ಕಾನೂನು ಆಯೋಗ, ರಾಷ್ಟಿçÃಯ ಆಯೋಗ ಮತ್ತು ನೀತಿ ಆಯೋಗಗಳು ಇದರ ಎಲ್ಲಾ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತಲೇ ಬಂದಿದ್ದವು. ನಂತರ ಸಂಸತ್ತಿನ ೨೦೧೮ರ ಅಧಿವೇಷನದಲ್ಲಿ ಅಂದಿನ ರಾಷ್ಟçಪತಿಗಳಾಗಿದ್ದ ರಾಮನಾಥ ಕೋವಿಂದ್ ಇದರ ಅವಶ್ಯಕತೆಯನ್ನು ಪ್ರಸ್ತಾಪಿಸಿದ್ದರು. ಅಲ್ಲಿಂದ ನೇಪತ್ಯ ಕಂಡಿದ್ದ ಈ ಚಿಂತನೆ ಮತ್ತೆ ಮುನ್ನೆಲೆಗೆ ಬಂತು. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಪ್ರಸ್ತುತ ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಇದರ ಔಚಿತ್ಯದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಉನ್ನತ ಮಟ್ಟದ ಆಯೋಗದ ರಚನೆ ಮತ್ತು ಶಿಫಾರಸ್ಸುಗಳು ೨೦೨೩ರಲ್ಲಿ ಭಾರತ ಸರಕಾರ, ಮಾಜಿ ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ಅವರ ನೇತ್ರತ್ವದಲ್ಲಿ ಇದರ ಬಗ್ಗೆ ಅಧ್ಯಯನ ಮಾಡಿ ವಿಸ್ತೃತವಾದ ವರದಿ ಸಲ್ಲಿಸಲು ಉನ್ನತ ಮಟ್ಟದ ಆಯೋಗದ ರಚನೆ ಮಾಡಿತು. ಈ ಸಮಿತಿ ಮಾರ್ಚ್ ೧೪, ೨೦೨೪ರಂದು ೧೮,೦೦೦ ಪುಟಗಳ ತನ್ನ ವರದಿಯನ್ನು ಸರಕಾರ ಸಲ್ಲಿಸಿತು. ಇದರಲ್ಲಿ ಸಮಿತಿ ಸಾಂವಿಧಾನಿಕ ತಿದ್ದುಪಡಿ ಸೇರಿದಂತೆ ಒಂದಷ್ಟು ಆಡಳಿತಾತ್ಮಕ ಸುಧಾರಣೆಗಳನ್ನು ತರಲು ಸೂಚಿಸಿತು. ಈ ಪಕ್ರಿಯೆಯಲ್ಲಿ ಸಮಿತಿಯು ೪೭ ರಾಷ್ಟಿçÃಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿದ್ದು ಅದರಲ್ಲಿ ೩೨ ಪಕ್ಷಗಳು ಇದನ್ನು ಬೆಂಬಲಿಸಿದವು ಮತ್ತು ೧೫ ರಾಜಕೀಯ ಪಕ್ಷಗಳು ಅದನ್ನು ವಿರೋಧಿಸಿದವು. ಈ ಪ್ರಕ್ರಿಯೆಯಲ್ಲಿ ಭಾರತದ ನಾಲ್ವರು ಮಾಜಿ ಮುಖ್ಯ ನ್ಯಾಯಮೂರ್ತಿಗಳೊಂದಿಗೂ ಸಹ ಸಮಾಲೋಚಿಸಲಾಯಿತು. ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿಲ್ಲ ಎನ್ನುವ ಕಾರಣಕ್ಕೆ ಅವರೆಲ್ಲರೂ ಇದನ್ನು ಬೆಂಬಲಿಸಿದರು. ದೇಶದ ಉದ್ದಗಲದಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಈ ಮೈಲ್, ವೆಬ್‌ಸೈಟ್ ಮತ್ತು ಅಂಚೆ ಮೂಲಕ ಸ್ವೀಕರಿಸಿದ ೨೧,೫೫೮ ಅಭಿಪ್ರಾಯಗಳಲ್ಲಿ ೮೦% ಪ್ರತಿಕ್ರಿಯೆಗಳು ಇದರ ಪರವಾಗಿ ಬಂದಿದೆ. ಶಿಫಾರಸ್ಸುಗಳು ಎರಡು ಹಂತದ ಚುನಾವಣೆ: ವರದಿಯು ಎರಡು-ಹಂತದ ಚುನಾವಣಾ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ, ಇದರಲ್ಲಿ ಲೋಕಸಭೆ ಮತ್ತು ಆಯಾ ರಾಜ್ಯ ಅಸೆಂಬ್ಲಿಗಳಿಗೆ ಚುನಾವಣೆಗಳನ್ನು ಮೊದಲ ಹಂತದಲ್ಲಿ ಮಾಡಬೇಕು. ಇದರ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸದನದ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಗಳು ನಡೆದ ನೂರು ದಿನಗಳೊಳಗೆ ನಡೆಸಬೇಕು. ಮಧ್ಯಂತರ ಚುನಾವಣೆಗಳು ಮತ್ತು ಅವಧಿಗೂ ಮುನ್ನದ ಚುನಾವಣೆ: ಸಂವಿಧಾನದಲ್ಲಿ ತಿದ್ದುಪಡಿ ಮಾಡುವು ಮೂಲಕ. ಲೊಕಸಭೆ ಅಥವಾ ಯಾವುದೇ ಶಾಸಕಾಂಗ ಸಭೆಗಳು ಮದ್ಯಾವಧಿಯಲ್ಲಿ ವಿಸರ್ಜಿಸಲ್ಪಟ್ಟರೆ ಅವುಗಳ ಹಿಂದಿನ ಸರಕಾರದ ಉಳಿದ ಅವಧಿಗಷ್ಟೇ ಮಾಡಬೇಕು. ಟ್ರಾನ್ಸಿಟರಿ ನಿಬಂಧನೆಗಳು: ಈ ಹೊಸ ವ್ಯವಸ್ಥೆಯ ಅಡಿಯಲ್ಲಿ ಒಂದೇ ಆವರ್ತನೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆಗಳನ್ನು ರಚಿಸಲ್ಪಡುವ ಸರಕಾರಗಳು ಆ ದಿನದಿನದ ತನ್ನ ನಿಗದಿಗೊಳಿಸದ ಅಷ್ಟೂ ಅವಧಿಗೆ ಇರಬೇಕು ಎನ್ನು ಕಾನೂನನ್ನು ಜಾರಿಗೆ ತರಬೇಕು. ಇದೇರಿತಿಯ ವ್ಯವಸ್ಥೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮಾಡಬೇಕು. ಸಧ್ಯ ಈ ಮಸೂದೆ ಲೋಸಭೆಯಲ್ಲಿ ಮಂಡನೆಗೊAಡು ಅನುಮೋದೆನೆಯಾಗಿದೆ. ಏಕ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಚುನಾವಣೆಗಳನ್ನು ನಡೆಸಲು ತಾನು ಸನ್ನದ್ಧವಿರುವುದಾಗಿ ಕೇಂದ್ರ ಚುನಾವಣಾ ಆಯೋಗವು ಹೇಳಿದೆ. ಇದು ಜಾರಿಗೆ ಬರುವುದರಿಂದ ಅಪಾರ ಪ್ರಮಾಣದ ಹಣ, ಮಾನವ ಸಂಪನ್ಮೂಲ ವ್ಯರ್ಥವಾಗುವುದು ನಿಲ್ಲುತ್ತದೆ. ಚುನಾವಣಾ ಭ್ರಷ್ಟಾಚಾರವು ಸಹ ಕಡಿಮೆಯಾಗಬಹುದು. ರಾಜಕೀಯ ಕಾರಣಕ್ಕಾಗಿ ದೂರದೃಷ್ಟಿ ತೀರ್ಮಾನಗಳನ್ನು ಕೈಗೊಳ್ಳಲು ಹಿಂದೆಟು ಹಾಕುವ ಅಂಜಿಕೆ ಕಡಿಮೆಯಾಗಿ ಅಭಿವೃದ್ಧಿಪರ ತೀರ್ಮಾನಗಳನ್ನು ಸರ್ಕಾರಗಳು ಕೈಗೊಳ್ಳಲು ಸಾಧ್ಯವಾಗಬಹುದು. ಪದೇ ಪದೇ ಬಂದೆರಗುವ ನೀತಿ ಸಂಹಿತೆಗಳು ಇಲ್ಲವಾಗುವುದರಿಂದ ಪ್ರಗತಿಯ ಯೋಜನೆಗಳು ಮತ್ತು ಕಾಮಗಾರಿಗಳು ನಿರಾಂತಕವಾಗಿ ಮುಂದುವರೆಯುತ್ತವೆ