ಸ್ವಾಮಿ ವಿವೇಕಾನಂದ ಎಂಬ ವಿದ್ಯುತ್ ಶಕ್ತಿಯ ಸಂಚಾರದ ಮಾತ್ರದಿಂದಾಗಿ ಭಾರತದಲ್ಲಾದ ಬದಲಾವಣೆ ಕಡಿಮೆಯದ್ದೇನಲ್ಲ. ಕೇವಲ ೩೯ ವರ್ಷ, ೫ ತಿಂಗಳು, ೨೨ ದಿನಗಳು ಬದುಕಿದ್ದ ಸ್ವಾಮಿ ವಿವೇಕಾನಂದರು ಭಾರತದ ಪ್ರತೀ ಕ್ಷೇತ್ರದ ಔನತ್ಯಕ್ಕಾಗಿ ಕಟ್ಟಿಕೊಟ್ಟ ಕಲ್ಪನೆಗಳು ಮತ್ತು ಇಲ್ಲಿನ ಸಮಸ್ಯೆಗಳಿಗೆ ಅವರು ನೀಡಿದ ಪರಿಹಾರ ಇಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಕಾಲಘಟ್ಟದ ಪ್ರಮುಖ ಇತಿಹಾಸಕಾರನಾಗಿದ್ದ ಬಿಮಾನ್ ಬಿಹಾರಿ ಮಜುಮ್ದಾರ್ “೧೮೯೭ರಲ್ಲಾದ ಸ್ವಾಮಿ ವಿವೇಕಾನಂದರ ವಿದೇಶ ಪ್ರವಾಸದ ಪುನರ್ ಆಗಮನ ಭಾರತದ ರಾಷ್ಟಿçÃಯತೆಯ ಇತಿಹಾಸದಲ್ಲಿ ಹೊಸದೊಂದು ಪರ್ವವೊಂದನ್ನು ನಿರ್ಮಿಸಿತು” ಎಂದು ನುಡಿದಿದ್ದಾರೆ. ಏಕೆ ಸ್ವಾಮೀಜಿಯವರ ಪುನರ್ ಆಗಮನ ರಾಷ್ಟçದ ಸ್ವಾತಂತ್ರö್ಯಕ್ಕೆ ಹೆಚ್ಚು ಮಹತ್ವಯುತವಾಗಿತ್ತೆನ್ನುವುದಕ್ಕೆ ಕಾಕತಾಳಿಯವಾದರೂ ಸತ್ಯವಾಗಿರುವ ಈ ನಿದರ್ಶನವೇ ಸಾಕ್ಷಿ. ಫೆ.೧೪, ೧೮೯೭ರಲ್ಲಿ ಸ್ವಾಮೀಜಿ ತಮ್ಮ ಮದ್ರಾಸ್ ಉಪನ್ಯಾಸದಲ್ಲಿ “ಗುಲಾಮರಾಗಿರುವುದನ್ನು ಬಿಟ್ಟು, ನೂರಾರು ದೇವರುಗಳನ್ನು ಪಕ್ಕಕ್ಕಿರಿಸಿ ಮುಂದಿನ ೫೦ ವರ್ಷಗಳ ಕಾಲ ತಾಯಿ ಭಾರತಿಯನ್ನು ಮಾತ್ರ ಪೂಜಿಸೋಣ” ಎಂದಿದ್ದರು. ಕಾಕತಾಳೀಯವೆಂಬAತೆ ಸರಿಯಾಗಿ ೫೦ ವರ್ಷಗಳ ನಂತರ ಅಂದರೆ ೧೯೪೭ ಫೆ.೨೩ರಂದು ಯು.ಕೆಯ ಆಗಿನ ಪ್ರಧಾನಿ ಮೇಜರ್ ಅಟ್ಲಿ, ಹೌಸ್ ಆಫ್ ಕಾಮನ್ಸ್ನಲ್ಲಿ ಭಾರತವನ್ನು ಬಿಟ್ಟು ಬರುವ ಮಾತನ್ನಾಡುತ್ತಾನೆ! ಸ್ವಾಮಿ ವಿವೇಕಾನಂದರು ಅವತರಿಸಿ ೧೬೨ ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ ಸ್ವಾಮಿ ವಿವೇಕಾನಂದರು ಕೇವಲ ಭೌತಿಕವಾಗಿ ಸ್ವಾತಂತ್ರö್ಯಗಳಿಸುವುದಕ್ಕಾಗಿ ಹೋರಾಡಿದವರಿಗೆ ಮಾತ್ರ ಪ್ರೇರಣೆಯಾಗದೆ ಭಾರತದ ಸರ್ವಾಂಗೀಣ ಸ್ವಾತಂತ್ರö್ಯಕ್ಕಾಗಿ ದುಡಿದವರಿಗೂ ಪ್ರೇರಣೆಯನ್ನೊದಗಿಸಿದವರು ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ನುಡಿ ಬ್ರಿಟಿಷರ ವಿರುದ್ಧದ ಸ್ವಾತಂತ್ರö್ಯ ಹೋರಾಟದ ಮುನ್ನುಡಿ: ೧೮೯೩ರ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸವೇ ಪಾಶ್ಚಾತ್ಯರಿಗೆ ನುಂಗಲಾರದ ತುತ್ತಾಗಿತ್ತು. ಹೆಸರಿಗೆ ಮಾತ್ರ ‘ವಿಶ್ವಧರ್ಮ ಸಮ್ಮೇಳನ’ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿದ್ದರೂ, ಕೊಲಂಬಸ್ ಅಮೇರಿಕಾವನ್ನು ಕಂಡು ಹಿಡಿದು ೪೦೦ ವರ್ಷಗಳಾದ ಸಂಭ್ರಮದ ಜೊತೆಗೆ ಕ್ರೆöÊಸ್ತ ರಿಲಿಜನ್ನೇ ಶ್ರೇಷ್ಠ ಎನ್ನುವುದನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸುವ ಉದ್ದೇಶವಡಗಿತ್ತು. ಸ್ವಾಮಿ ವಿವೇಕಾನಂದರು ಭಾಗವಹಿಸಿದ ಕಾರಣ ಅದು ನಿಜಾರ್ಥದಲ್ಲಿ “ವಿಶ್ವಧರ್ಮ ಸಮ್ಮೇಳನ” ಎನಿಸಿತು. ವಿಶ್ವಧರ್ಮ ಸಮ್ಮೇಳನದ ಕುರಿತಾಗಿ ಆಗಿನ ವಿಮರ್ಶಕರು “ಒಂದು ವೇಳೆ ಸ್ವಾಮಿ ವಿವೇಕಾನಂದರು ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸದೇ ಇರುತ್ತಿದ್ದರೆ ಅದು ಸ್ವ ಮತ ಪ್ರತಿಪಾದನಾ ಸಭೆಯಾಗಿರುತ್ತಿತ್ತಷ್ಟೇ” ಎಂದಿರುವುದೇ ಇದಕ್ಕೆ ಸಾಕ್ಷಿ. ಸ್ವಾಮೀಜಿಯವರು ತಮ್ಮ ಭಾಷಣಗಳಲ್ಲಿ ಜಗತ್ತಿಗೆ ವಿಶ್ವಧರ್ಮದ ಕಲ್ಪನೆ ಕಟ್ಟಿಕೊಟ್ಟಿದ್ದಲ್ಲದೆ, ಅವರ ಮಾತುಗಳ ಮೂಲಕವೇ ಭಾರತ ವಿರೋಧಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸಿದ್ದರು. ಅದರ ಜೊತೆಗೆ ಅವರ ನಡೆ-ನುಡಿಗಳಲ್ಲಿ ವ್ಯಕ್ತವಾದ ಭಾರತಪ್ರೇಮ ಮುಂದೆ ಭಾರತದ ಸ್ವಾತಂತ್ರö್ಯಲಕ್ಷಿö್ಮÃಗಾಗಿ ಪ್ರಾಣಾರ್ಪಣೆಗೈಯಲು ಮುಂದಾದವರಿಗೆ ಪ್ರೇರಣೆಯೊದಗಿಸಿದಂತೂ ನಿಜ. ಸ್ವಾಮೀಜಿಯವರ ದೇಶಭಕ್ತಿಯ ಕಲ್ಪನೆ ಸೊಗಸಾಗಿತ್ತು. ಸ್ವಾಮೀಜಿಯೇ ಹೇಳುವಂತೆ “ನಮ್ಮ ಪರಂಪರೆಯ ಜನರನ್ನು ನಮ್ಮವರೆಂದು ಭಾವಿಸುವುದಕ್ಕೆ ನಿನ್ನಿಂದ ಸಾಧ್ಯವಾಗುತ್ತದೆಯೇ? ಅವರ ಉದ್ಧಾರಕ್ಕಾಗಿ ನೀನು ನಿರಂತರವಾಗಿ ಶ್ರಮವಹಿಸುತ್ತೀಯಾ? ಅವರ ಹಿತಚಿಂತನೆಯಿAದ ನೀನು ನಿದ್ರಾಹೀನನಾಗುತ್ತೀಯಾ? ನಿನ್ನ ಹೃದಯದ ಪ್ರತಿ ಬಡಿತದಲ್ಲೂ ಇವರುಗಳ ಕುರಿತು ಯೋಜಿಸುತ್ತೀಯಾ? ನೀನು ಹಾಗಾದಾಗ ಮಾತ್ರ ದೇಶಭಕ್ತನಾಗುವ ಪ್ರಥಮ ಹೆಜ್ಜೆಯನ್ನು ಇಟ್ಟಿದ್ದೀಯ” ಎಂದು ಸ್ವಾಮೀಜಿ ತಿಳಿಸುತ್ತಾರೆ. ಇಂತಹ ದೇಶಭಕ್ತಿ ತುಂಬಿದ ಯುವಕರು ಇಂದಿಗೂ ದೇಶಕ್ಕೆ ಅತ್ಯಗತ್ಯ. ಸ್ವಾಮಿ ವಿವೇಕಾನಂದರ ಪ್ರಭಾವದ ಕುರಿತು ದಾಖಲೆ ಸಹಿತ ನಮಗೆ ಸಿಗುವಂತದ್ದು ಚಾರ್ಲ್ ಟೆಗಾಟ್ ರಿಪೋರ್ಟ್ನಲ್ಲಿ. ಆತ ಕಲ್ಕತ್ತಾದಲ್ಲಿ ಅಧಿಕಾರದಲ್ಲಿದ್ದಾಗ ಗೂಢಚರ್ಯೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ. ಆ ಸಂದರ್ಭದಲ್ಲಿ ಅನೇಕ ಕ್ರಾಂತಿಕಾರಕ ಚಟುವಟಿಕೆಗಳು ನಡೆಯುತ್ತವೆ. ಲಾಹೋರ್ ಕಾನ್ಸಿ÷್ಪರಸಿಗೆ ಕಾರಣಕರ್ತರಾದ ರಾಶ್ ಬಿಹಾರಿ ಬೋಸ್, ಬರಸಾಲ್ ಕಾನ್ಸಿ÷್ಪರಸಿಯಲ್ಲಿ ಸೆರೆಸಿಕ್ಕ ೧೨ ಜನ ಯುವಕರು, ಚಿತ್ತಗಾಂವ್ ಕಾನ್ಸಿ÷್ಪರಸಿಯಲ್ಲಿ ಮಹತ್ವದ ಪಾತ್ರವಹಿಸಿದ ಸೂರ್ಯಸೇನ ಮುಂತಾದವರೆಲ್ಲರಿಗೂ ಪ್ರೇರಣೆಯನ್ನೊದಗಿಸಿದ್ದು ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣಾಶ್ರಮ ಎನ್ನುವುದು ತಿಳಿಯಿತು. ಬ್ರಿಟಿಷರ ಕೈಸಿಕ್ಕ ಬಹುತೇಕ ಕ್ರಾಂತಿಕಾರಿಗಳಲ್ಲಿ ಸಿಗುತ್ತಿದ್ದಿದ್ದು ಭಗವದ್ಗೀತೆ ಮತ್ತು ಸ್ವಾಮಿ ವಿವೇಕಾನಂದರ ಪತ್ರಮಾಲೆಗಳು. ಸ್ವಾಮಿ ವಿವೇಕಾನಂದರ ಕೊಲೊಂಬೊದಿAದ ಅಲ್ಮೋರಕ್ಕೆ ಉಪನ್ಯಾಸಗಳು. ಭಾಗಾ ಜತಿನ್ ಎಂಬ ಅಪ್ರತಿಮ ಪರಾಕ್ರಮಿಗೆ ತನ್ನ ಕ್ರಾಂತಿಕಾರಿ ಹೋರಾಟಕ್ಕೆ ಪ್ರೇರಣೆಯನ್ನೊದಗಿಸಿದವರು ಸ್ವಾಮಿ ವಿವೇಕಾನಂದರು. ಆತ ಪ್ರಮುಖನಾಗಿದ್ದ ಅನುಶೀಲನ ಸಮಿತಿಯ ರಹಸ್ಯ ಪತ್ರಗಳ ಕೋಡ್ ವರ್ಡ್ ‘ಮಿಶನ್’ ಮತ್ತು ಪಾಸ್‌ವರ್ಡ್ ‘ವಿವೇಕಾನಂದ’ ಎಂದಾಗಿತ್ತು! ಯೋಗಿ ಅರವಿಂದರು ಆಲಿಪುರದ ಜೈಲಿನಲ್ಲಿದ್ದಾಗ ಚಾರ್ಲ್ಸ್ ಟೆಗರ‍್ಟ್ ಪರಿವೀಕ್ಷಣೆಗೆ ಬರುತ್ತಾನೆ. ಆಗ ಅರವಿಂದರ ಬಳಿಯಿದ್ದ ಒಂದು ಪೊಟ್ಟಣವನ್ನು ಆತ ತೆಗೆದುಕೊಂಡು ಏನಿದು ಎಂದು ಕೇಳುತ್ತಾನೆ. ಅದಕ್ಕೆ ಅರವಿಂದರು “Iಣs ಚಿ ಜಿuಣuಡಿe bomb” ಎಂದು ಉತ್ತರಿಸುತ್ತಾರೆ. ದಿಗ್ಭಾçಂತನಾದ ಟೆಗರ‍್ಟ್ ಆ ಪೊಟ್ಟಣವನ್ನು ಬಿಚ್ಚಿ ನೋಡಿದಾಗ ಅದರಲ್ಲಿದ್ದಿದ್ದು ಮಣ್ಣಿನ ಹೆಂಟೆ. ಆಗ ಅರವಿಂದರು “ಇದನ್ನು ಸಾಮಾನ್ಯ ಮಣ್ಣಿನ ಹೆಂಟೆ ಎಂದು ಭಾವಿಸಬೇಡಿ. ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರAತಹ ಶಕ್ತಿ ಕೇಂದ್ರಗಳು ಓಡಾಡಿದ ದಕ್ಷಿಣೇಶ್ವರದ ಮಣ್ಣಿದು. ಮುಂದೆ ಅನೇಕ ಕ್ರಾಂತಿಕಾರಿಗಳು ಈ ಮಣ್ಣಿನ ಸಹಕಾರದಿಂದ ನಿಮ್ಮ ವಿರುದ್ಧ ಮುಗಿಬೀಳಲಿದ್ದಾರೆ” ಎಂದರು ಈ ಒಂದು ಘಟನೆ ಕೇವಲ ಅರವಿಂದರಲ್ಲದೆ ಇತರೆ ಕ್ರಾಂತಿಕಾರಿಗಳ ಮೇಲೂ ಸ್ವಾಮೀಜಿ ಬೀರಿದ ಪ್ರಭಾವದ ಕುರಿತು ತಿಳಿಸುತ್ತದೆ. ೧೮೯೨ರಲ್ಲಿ ತಮ್ಮ ಪರಿವ್ರಾಜಕ ಸಮಯದಲ್ಲಿ ಮುಂಬೈನಲ್ಲಿ ತಿಲಕರ ಮತ್ತು ಸ್ವಾಮೀಜಿಯ ಭೇಟಿಯಾಗಿತ್ತು. ಆಗ ಸ್ವಾಮಿ ವಿವೇಕಾನಂದರಲ್ಲಿ ತಿಲಕರು, “ನೀವ್ಯಾಕೆ ಸ್ವಾತಂತ್ರö್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸಬಾರದು” ಎಂದು ಕೇಳಿದಾಗ ಸ್ವಾಮೀಜಿ, “ನಾನು ಸ್ವಾತಂತ್ರö್ಯವನ್ನು ೨೪ ಗಂಟೆಗಳಲ್ಲಿ ಕೊಡಿಸಬಲ್ಲೆ! ಆದರೆ ದೊರೆತ ಸ್ವಾತಂತ್ರö್ಯವನ್ನು ಜವಾಬ್ದಾರಿಯುತವಾಗಿ ಕಾಪಾಡಿಕೊಳ್ಳುವವರು ಬೇಕಾಗಿದ್ದಾರೆ” ಎಂದರಲ್ಲದೆ ಅಂತಹವರ ನಿರ್ಮಾಣಕ್ಕೆ ಪಣತೊಟ್ಟರು. ೧೯೦೧ರಲ್ಲಿ ಸ್ವಾಮೀ ವಿವೇಕಾನಂದರನ್ನು ಮತ್ತೊಮ್ಮೆ ಕೊಲ್ಕತ್ತಾದಲ್ಲಿ ಭೇಟಿಯಾಗಿದ್ದ ತಿಲಕರಲ್ಲಿ ಸ್ವಾಮೀಜಿ, “ಐeಣ us exಛಿhಚಿಟಿge ouಡಿ ಡಿoಟe” ಎಂದಿದ್ದರAತೆ. ಈ ಘಟನೆ ಸ್ವಾಮೀಜಿಯವರಿಗೆ ಸ್ವಾತಂತ್ರö್ಯ ಹೋರಾಟದ ಕುರಿತಾಗಿದ್ದ ತುಡಿತದ ಕುರಿತು ತಿಳಿಸುತ್ತದೆ. ಸ್ವಾಮೀಜಿಯವರ ಕಾರ್ಯವೈಖರಿಯಿಂದಾಗಿ ಪ್ರೇರೇಪಿತರಾದ ತಿಲಕರು ಸ್ವಾಮೀಜಿಯನ್ನು “ಖeಚಿಟ ಜಿಚಿಣheಡಿ oಜಿ Iಟಿಜiಚಿ's ಖegeಟಿeಡಿಚಿಣioಟಿ” ಎಂದು ಸಂಬೋಧಿಸಿದ್ದರು. ಸ್ವಾಮೀ ವಿವೇಕಾನಂದರಿAದ ತಮ್ಮ ೧೫ನೇ ವರ್ಷಕ್ಕೆ ಪ್ರೇರಣೆಯನ್ನು ಪಡೆದು ತ್ಯಾಗ ಜೀವನಕ್ಕೆ ಮುಂದಾದವರು ೧೮೯೭ ಹುಟ್ಟಿದ ಸುಭಾಶ್‌ಚಂದ್ರ ಬೋಸ್. ಆತ ‘ನಿಯೋ ವಿವೇಕಾನಂದ’ ಎಂಬ ತಂಡವನ್ನು ಕಟ್ಟಿಕೊಳ್ಳುತ್ತಾನೆ. ಶಿಕ್ಷಣದ ಜೊತೆಗೆ ರಾಷ್ಟçದ ಪುನರುಜ್ಜೀವನ ಅದರ ಧ್ಯೇಯವಾಗಿತ್ತು. ಸುಭಾಶ್‌ಚಂದ್ರರೇ ಹೇಳಿರುವಂತೆ “Wheಟಿ ಚಿ ಣಡಿouಠಿ oಜಿ ಡಿeಚಿಟmeಟಿ is ಡಿeಚಿಜಥಿ, ಣheಟಿ ಣhe ಚಿim oಜಿ Sತಿಚಿmi ಗಿiveಞಚಿಟಿಚಿಟಿಜಚಿ is ಜಿuಟಜಿiಟಟeಜ.” ಎನ್ನುವುದನ್ನು ಯುವ ಕಾಂಗ್ರೆಸ್ ಅಧಿವೇಶನ ಸೇರಿದಂತೆ ಹಲವು ವೇದಿಕೆಗಳಲ್ಲಿ ಸುಭಾಶ್‌ಚಂದ್ರ ಬೋಸ್ ತಿಳಿಸುತ್ತಾರೆ. ಗಾಂಧೀಜಿ ೧೯೦೧ರಲ್ಲಿ ವಿವೇಕಾನಂದರನ್ನು ಭೇಟಿ ಮಾಡಬೇಕೆಂದು ಬೇಲೂರು ಮಠಕ್ಕೆ ಹೋಗಿರುತ್ತಾರೆ. ಆದರೆ ಸ್ವಾಮೀಜಿ ಅವರು ಅಲ್ಲಿರುವುದಿಲ್ಲ. ಅದಾಗಿ ೨೦ ವರ್ಷದ ನಂತರ ಕಲ್ಕತ್ತಾಗೆ ಬಂದಾಗ ರಾಮಕೃಷ್ಣಾಶ್ರಮಕ್ಕೆ ಗಾಂಧೀಜಿ ಮರಳಿ ಭೇಟಿ ನೀಡುತ್ತಾರೆ. ಕಾಕತಾಳೀಯವೆಂಬAತೆ ಅಂದು ಸ್ವಾಮೀ ವಿವೇಕಾನಂದರ ಜನ್ಮದಿನವನ್ನು ಆಚರಿಸಲಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಗಾಂಧೀಜಿಯವರ ಬಳಿ ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಲು ಹೇಳಿದಾಗ, ಗಾಂಧೀಜಿ “ಸ್ವಾಮೀ ವಿವೇಕಾನಂದರ ಅಧ್ಯಯನದ ನಂತರ ನನ್ನಲ್ಲಿದ್ದ ಭಾರತಪ್ರೀತಿ ಸಾವಿರ ಪಟ್ಟು ಹೆಚ್ಚಾಗಿದೆ” ಎಂದು ನುಡಿದರು. ಗುರುದೇವ ರವೀಂದ್ರನಾಥ ಠಾಗೋರ್ ಅವರು “ನೀವು ಭಾರತದ ಅಧ್ಯಯನ ಮಾಡಬೇಕಾದರೆ, ಸ್ವಾಮೀ ವಿವೇಕಾನಂದರ ಅಧ್ಯಯನ ಮಾಡಿ” ಎಂಬ ತಮ್ಮ ಮಾತಿನ ಮೂಲಕ ವಿವೇಕಾನಂದರ ಭಾರತಪ್ರೀತಿಯ ಕುರಿತು ಸ್ಪಷ್ಟಪಡಿಸುತ್ತಾರೆ. “ಸ್ವಾಮೀಜಿ ಅವರ ಅದ್ಭುತ ಕಂಠದಿAದ ‘ಇಂಡಿಯಾ’ ಎಂದು ಕೇಳಿದಾಗಿನಿಂದ ಭಾರತದ ಕುರಿತಾದ ಪ್ರೀತಿ ನಮ್ಮಲ್ಲಿ ಜನನವಾಯಿತು” ಎಂದು ಅಮೇರಿಕಾದ ಸ್ವಾಮೀ ವಿವೇಕಾನಂದರ ಶಿಷ್ಯೆ ಕ್ರಿಸ್ಟಿನಾ ತಿಳಿಸುತ್ತಾರೆ. “ಭಾರತದಲ್ಲಿ ಏನೇ ತೊಂದರೆಯಾದರೂ ಮೊದಲು ತಿಳಿಯುತ್ತಿದ್ದಿದ್ದು ವಿವೇಕಾನಂದರ ಹೃದಯಕ್ಕೆ” ಎಂಬ ಸೋದರಿ ನಿವೇದಿತಾಳ ಮಾತು ಸ್ವಾಮೀ ವಿವೇಕಾನಂದರ ಭಾರತ ಪ್ರೀತಿಯ ಕುರಿತು ಬೆಳಕನ್ನು ಚೆಲ್ಲುತ್ತವೆ. ಸ್ವಾಮೀಜಿ ಅವರ ವಿಶ್ವಧರ್ಮದ ಕುರಿತಾದ ಕಲ್ಪನೆ ಹೀಗಿತ್ತು. “ವಿಶ್ವಧರ್ಮ ಎಂದರೆ ಅದು ದೇಶ ಕಾಲಗಳ ಮಿತಿ ಮೀರಿರಬೇಕು. ಆ ಧರ್ಮ ಭಾಸ್ಕರನ ಬೆಳಕು ಕೃಷ್ಣನ ಅನುಯಾಯಿಗಳ ಮೇಲೆ, ಕ್ರಿಸ್ತನ ಅನುಯಾಯಿಗಳ ಮೇಲೆ, ಪುಣ್ಯವಂತರ ಮೇಲೆ, ಪಾಪಿಗಳ ಮೇಲೆ ಸಮವಾಗಿ ಬೀಳಬೇಕು. ಅದು ವೈದಿಕವಾಗಲಿ, ಮಹಮದ್ದೀಯವಾಗಲಿ, ಬೌದ್ಧವಾಗಲಿ ಅಥವ ಕ್ರೆöÊಸ್ತವಾಗಲಿ ಆಗಿರದೆ ಇವೆಲ್ಲದರ ಸಮಗ್ರೀಕರಣವಾಗಿರಬೇಕು. ಅದು ಸುಧಾರಣೆ ಅಥವಾ ಅಭಿವೃದ್ಧಿಗೆ ಅಪಾರ ಅವಕಾಶ ಹೊಂದಿರಬೇಕು. ಅದು ಪಶುಸದೃಶ ಕಾಡು ಜನರಿಂದ ಹಿಡಿದು ಹೃದಯ ಬುದ್ಧಿಗಳ ತುತ್ತತುದಿಗೇರಿ ಸಾಮಾನ್ಯ ಮಾನವತೆಯ ಮೇರೆಯನ್ನು ಮೀರಿರುವ ಮಹಾಮಾನವನವರೆಗೆ ಸರ್ವರಿಗೂ ಆಶ್ರಯವನ್ನೀಯುವಂಥದ್ದಾಗಿರಬೇಕು. ವ್ಯಕ್ತಿ ತನ್ನ ನೈಜ ಸ್ವರೂಪವನ್ನು ಕಂಡುಕೊಳ್ಳುವAತೆ ಮಾಡುವಲ್ಲಿ ಆ ಧರ್ಮದ ವಿಶಾಲ ಪಂಥಿಯು ಕೇಂದ್ರಿಕೃತವಾಗಿರಬೇಕು. ಒಟ್ಟಿನಲ್ಲಿ ಜಗತ್ತಿನ ಜನರೆಲ್ಲರೂ ಒಪ್ಪುವಂತಿರಬೇಕು.” ಎಂದು ತಿಳಿಸಿದರು. ರಾಷ್ಟçದ ಸ್ವಾತಂತ್ರö್ಯಕ್ಕಾಗಿ ಹೋರಾಟ ಉತ್ತುಂಗದಲ್ಲಿದ್ದ ಸಮಯದಲ್ಲೇ ನಮ್ಮಲ್ಲಿ ಸಾಮಾಜಿಕ ಸ್ವಾತಂತ್ರö್ಯದ ಅಗತ್ಯತೆಯೂ ಇತ್ತು. ಸ್ವಾಮಿ ವಿವೇಕಾನಂದರು ತಮ್ಮ ಬದುಕಿನುದ್ದಕ್ಕೂ ಸಾಮಾಜಿಕ ಸ್ವಾತಂತ್ರö್ಯಕ್ಕಾಗಿ ಶ್ರಮಿಸಿದ್ದಾರೆ. ಪರಿವ್ರಾಜಕ ದಿನಗಳಲ್ಲಿ ಕೇರಳಕ್ಕೆ ಬಂದಿದ್ದ ಸ್ವಾಮೀಜಿ ಅಲ್ಲಿನ ಜಾತಿಬೇಧವನ್ನು ಕಂಡು “ಇದೊಂದು ದೊಡ್ಡ ಹುಚ್ಚಾಸ್ಪತ್ರೆ” ಎಂದಿದ್ದರು. ಹಾಗೆಯೇ ಅಲ್ಲಿನ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ನಾರಾಯಣ ಗುರುಗಳ ಶೋಧಕ್ಕೂ ಸ್ವಾಮೀಜಿ ಕಾರಣೀಭೂತರಾಗುತ್ತಾರೆ ಎನ್ನುವುದನ್ನು ತಿಳಿಯಬೇಕಾಗಿದೆ. ಈ ರಾಷ್ಟçದ ಎರಡು ಆದರ್ಶಗಳು ತ್ಯಾಗ ಮತ್ತು ಸೇವೆ ಎನ್ನುವುದನ್ನು ಹೇಳುತ್ತಿದ್ದ ಸ್ವಾಮೀಜಿ ದೀನ ದಲಿತ ಸೇವೆ ಮಾಡುವುದರ ಕುರಿತು ಭಾರತೀಯರಿಗೆ ತಿಳಿಸುತ್ತಾರೆ. ಅಷ್ಟೇ ಅಲ್ಲದೇ ದೀನರನ್ನೂ ದೇವರಂತೆ ಕಾಣು ಎನ್ನುವ ಕಲ್ಪನೆಯನ್ನು ನಾಡಿಗೆ ಕಟ್ಟಿಕೊಡುತ್ತಾರೆ. ಅವರೇ ಹೇಳಿದ ಮಾತಿಗೆ ಸ್ವಾಮೀಜಿ ಎಷ್ಟು ಬದ್ಧರಾಗಿದ್ದರೆಂದರೆ “ಒಂದು ವೇಳೆ ರಾಷ್ಟçದ ಹಿತಕ್ಕಾಗಿ ಅವರು ರೂಪಿಸಿಕೊಂಡಿದ್ದ ಯೋಜನೆಗಳ ಅನುಷ್ಠಾನಕ್ಕೆ ಹಣದ ಕೊರತೆಯಾದರೆ ಅದಕ್ಕಾಗಿ ಮಠವನ್ನು ಮಾರಿಯಾದರು ನಾನು ಅಂದುಕೊAಡ ಕಾರ್ಯವನ್ನು ಸಾಧಿಸುತ್ತೇನೆ” ಎಂದಿದ್ದರು. “ಅಂಧಾನುಕರಣೆ ನಾಗರಿಕತೆಯ ಅವನತಿಗೆ ಕಾರಣವಾಗುತ್ತದೆ” ಎನ್ನುವುದನ್ನು ಸಮರ್ಥವಾಗಿ ತಿಳಿಸಿದ ಸ್ವಾಮಿ ವಿವೇಕಾನಂದರು ಅನೇಕ ಮೂಢನಂಬಿಕೆಯ ರೂಪದಲ್ಲಿ ಬಂದAತಹ ಅಂಧಾನುಕರಣೆಯ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ ಜೊತೆಗೆ ಪರಿಹಾರವನ್ನೂ ತಿಳಿಸಿದ್ದಾರೆ. ನಮಗೆ ಪ್ರಥಮವಾಗಿ ನಮ್ಮ ರಾಷ್ಟçದ ಸಂಸ್ಕೃತಿಯ ಅರಿವು ಮುಖ್ಯವಾಗಿರಬೇಕು. ನಮ್ಮ ದೇಶದ ಆತ್ಮವಾದ ಆಧ್ಯಾತ್ಮವನ್ನು ಮರೆತರೆ ನಮಗೆ ಉಳಿಗಾಲವಿಲ್ಲ. ನಮ್ಮನ್ನು ನಾವು ಅರಿತುಕೊಳ್ಳುವ ಆದ್ಯ ಕರ್ತವ್ಯ ನಮ್ಮಲ್ಲರ ಮೇಲಿದೆ. ಅದರ ಜೊತೆಯಲ್ಲಿ ಜಗತ್ತಿನ ಒಳ್ಳೆಯ ಸಂಗತಿಗಳನ್ನು ಬಿಗಿದಪ್ಪಿಕೊಂಡು ನಮ ಮಣ್ಣಿನ ಸತ್ವಕ್ಕೆ ಅನುಗುಣವಾಗಿ ಅವುಗಳನ್ನು ಸ್ವೀಕರಿಸುವ ಔದರ್ಯ ನಮಗಿರಬೇಕೇ ವಿನಃ ಅವುಗಳನ್ನು ಅಲ್ಲಿನಂತೆಯೇ ಅನುಕರಿಸುವ ಪ್ರವೃತ್ತಿಯನ್ನು ದೂರ ಸರಿಸಬೇಕಾಗಿದೆ ಎಂದು ತಿಳಿಸಿದ್ದರು. ಅವರ ಅಧ್ಯಯನ ಮತ್ತು ಅಧ್ಯಾಪನ ಹೆಚ್ಚೆಚ್ಚು ಆದಷ್ಟು ರಾಷ್ಟçಭಕ್ತಿಯ ರಥ ಸಮರ್ಥವಾಗುತ್ತಲೇ ಹೋಗುತ್ತದೆ.