ಭರತವರ್ಷದ ಐತಿಹ್ಯ, ಅದರಾಧ್ಯಾತ್ಮಿಕತೆಯ ಮೂಲ ಸಹಸ್ರಾರು ವರ್ಷಗಳಷ್ಟು ಹಿಂದಿನದ್ದಾಗಿದೆ. “ನ ಆದಿ ನ ಅಂತ್ಯ'' ಎಂಬAತೆ ಆದಿಯೂ ಇಲ್ಲದ ಅಂತ್ಯವೂ ಇಲ್ಲದ ಆಧ್ಯಾತ್ಮಿಕತೆಯ ಪ್ರತೀಕವಾಗಿ ಇಲ್ಲಿನ ಆಚರಣೆಗಳು ನಿಂತಿವೆ. ಈ ಎಲ್ಲ ಆಚರಣೆಗಳ ಹರಿವೂ ಕೂಡ ಸೃಷ್ಟಿ, ಸ್ಥಿತಿ ಮತ್ತು ಲಯದ ಪ್ರತೀಕವಾಗಿರುವ ಋತದ ಚಲನೆಗನುಸಾರವಾಗಿ ಇರುತ್ತದೆಂಬುದು ಮಗದೊಂದು ವಿಶೇಷ. ಇದರ ಭಾಗವಾಗಿಯೇ ೨೦೨೫ರ ಮಹಾಕುಂಭಮೇಳವನ್ನು ಕೂಡ ನಾವು ಕಾಣಬಹುದಾಗಿದೆ. ಒಂದೆಡೆ ವಿಶ್ವದ ದಿಗ್ಗಜ ರಾಷ್ಟçಗಳ ಅನೇಕ ಗಣ್ಯವ್ಯಕ್ತಿಗಳು, ಅಲ್ಲಿನ ಸಮುದಾಯಗಳು ಸೇರಿದಂತೆ ಎಲ್ಲರ ಕಣ್ಮನಗಳನ್ನು ತನ್ನತ್ತ ಸೆಳೆದಿರುವ ‘ಮಹಾಕುಂಭ' ಮತ್ತೊಂದೆಡೆ ತನ್ನೊಡಲಲ್ಲಿ ‘ಅಧ್ಯಾತ್ಮ ಸಾಧನೆಯ' ಇಚ್ಛೆಯನ್ನು ಹೊತ್ತುಬರುವ ಅನೇಕ ಜೀವಾತ್ಮಗಳಿಗೆ ಮಡಿಲಾಗಿ ನಿಂತಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ೧೪೪ ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು ೪೫ ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ.
ಮಹಾಕುಂಭ ಎಂದರೇನು?
ಮಹಾಕುಂಭವನ್ನು ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ವಿಶ್ವದ ಅತಿದೊಡ್ಡ ಮೇಳ ಎಂದು ಹೇಳಲಾಗುತ್ತದೆ. ಈ ಮೇಳ ಭಾರತದ ೪ ಸ್ಥಳಗಳಲ್ಲಿ (ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿ) ಮಾತ್ರ ನಡೆಯುತ್ತದೆ. ಮಹಾಕುಂಭದ ಸಮಯದಲ್ಲಿ ನಾಗಾ ಸಾಧುಗಳು ಮೊದಲು ಸ್ನಾನ ಮಾಡುತ್ತಾರೆ. ಮಹಾಕುಂಭದಲ್ಲಿ ಸ್ನಾನ ಮಾಡಿದ ನಂತರ ವ್ಯಕ್ತಿಯ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಎಂಬ ನಂಬಿಕೆ ಇದೆ. ಹಿಂದೂ ಗ್ರಂಥಗಳಲ್ಲಿ, ಕುಂಭಮೇಳವನ್ನು ‘ಅಮರತ್ವದ ಜಾತ್ರೆ’ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ಭಕ್ತರು ತಮ್ಮ ಆತ್ಮವನ್ನು ಶುದ್ಧೀಕರಿಸಲು ಈ ಪವಿತ್ರ ಸ್ಥಳದಲ್ಲಿ ಸ್ನಾನ ಮಾಡಲು ಬರುತ್ತಾರೆ, ಪ್ರಪಂಚದಾದ್ಯAತ ಇರುವ ಸಂತರು ಮತ್ತು ಭಕ್ತರಲ್ಲಿ ಕುಂಭಮೇಳದಲ್ಲಿ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಹರಿದ್ವಾರ, ಉಜ್ಜೆöÊನಿ, ಪ್ರಯಾಗರಾಜ್ ಮತ್ತು ನಾಸಿಕ್‌ನಲ್ಲಿ ಪ್ರತಿ ೩ ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯನ್ನು ಕುಂಭ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಹರಿದ್ವಾರ ಮತ್ತು ಪ್ರಯಾಗ್ರಾಜ್‌ನಲ್ಲಿ ಪ್ರತಿ ೬ ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧ ಕುಂಭ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ಪ್ರಯಾಗರಾಜ್‌ನಲ್ಲಿ ಪ್ರತಿ ೧೨ ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಎಂದು ಕರೆಯಲಾಗುತ್ತದೆ. ಇದಲ್ಲದೇ ಪ್ರಯಾಗರಾಜ್‌ನಲ್ಲಿ ೧೪೪ ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಮಹಾಕುಂಭಮೇಳವೆAದು ಕರೆಯಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಪ್ರತೀ ೧೪೪ ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ಮಹಾಕುಂಭವನ್ನು ಆಯೋಜಿಸಲಾಗುತ್ತದೆ. ೧೪೪ ಹೇಗೆ? ೧೨ ರಿಂದ ೧೨ನ್ನು ಗುಣಿಸಿದಾಗ ೧೪೪ ಆಗುತ್ತದೆ. ವಾಸ್ತವವಾಗಿ, ಕುಂಭ ಕೂಡ ಹನ್ನೆರಡು. ಅದರಲ್ಲಿ ನಾಲ್ಕು ಭೂಮಿಯಲ್ಲಿವೆ, ಉಳಿದ ಎಂಟು ಸ್ವರ್ಗದಲ್ಲಿವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಪ್ರತಿ ೧೪೪ ವರ್ಷಗಳಿಗೊಮ್ಮೆ ಮಹಾಕುಂಭವನ್ನು ಪ್ರಯಾಗರಾಜ್‌ನಲ್ಲಿ ಆಯೋಜಿಸಲಾಗುತ್ತದೆ. ಮಹಾಕುಂಭದ ಮಹತ್ವವನ್ನು ಇತರ ಕುಂಭಗಳಿಗಿAತ ಹೆಚ್ಚು ಎಂದು ಪರಿಗಣಿಸಲಾಗುತ್ತದೆ.
ಕುಂಭಮೇಳದ ಇತಿಹಾಸ
ಕೆಲ ಮೂಲಗಳ ಪ್ರಕಾರ ಕುಂಭಮೇಳವನ್ನು ಆಯೋಜಿಸಿದ ಇತಿಹಾಸವು ೮೫೦ ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ. ಇದನ್ನು ಆದಿ ಶಂಕರರು ಪ್ರಾರಂಭಿಸಿದರು. ಅದೇ ಸಮಯದಲ್ಲಿ, ಸಮುದ್ರ ಮಥನದ ಕಥೆಯ ಪ್ರಾರಂಭದಿAದಲೂ ಕುಂಭವನ್ನು ಆಯೋಜಿಸಲಾಗಿದೆ ಎಂದು ಕೆಲವು ಕಥೆಗಳಲ್ಲಿ ಹೇಳಲಾಗಿದೆ. ಕೆಲವು ವಿದ್ವಾಂಸರು ಇದು ಗುಪ್ತ ಕಾಲದ ಆರಂಭ ಎಂದು ನಂಬುತ್ತಾರೆ. ಆದರೆ ಹರ್ಷವರ್ಧನ ಚಕ್ರವರ್ತಿಯ ಆಳ್ವಿಕೆ ಕಾಲದಿಂದಲೂ ಪುರಾವೆಗಳು ಲಭ್ಯವಿದೆ. ಪುರಾಣ ಕಥನಗಳ ಪ್ರಕಾರ, ದೇವರುಗಳು ಮತ್ತು ಅಸುರರು ಒಟ್ಟಾಗಿ ಸಮುದ್ರವನ್ನು ಮಥಿಸಿದರು. ಈ ಮಥನದ ಸಮಯದಲ್ಲಿ ಅನೇಕ ರತ್ನಗಳು, ಅಪ್ಸರೆಯರು, ಪ್ರಾಣಿಗಳು, ವಿಷ ಮತ್ತು ಅಮೃತ ಸೇರಿದಂತೆ ಇತ್ಯಾದಿ ವಸ್ತುಗಳು ಹೊರಬಂದವು. ದೇವರುಗಳು ಮತ್ತು ಅಸುರರ ನಡುವಿನ ಸಂಘರ್ಷವು ಅಮೃತದಿಂದ ಪ್ರಾರಂಭವಾಯಿತು. ಈ ಹೋರಾಟದ ಮಧ್ಯೆ, ಕೆಲವು ಹನಿ ಅಮೃತವು ಭೂಮಿಯ ಮೇಲೆ ಬಿದ್ದಿತು. ಅಮೃತದ ಹನಿಗಳು ಯಾವೆಲ್ಲ ಸ್ಥಳಗಳಲ್ಲಿ ಬಿದ್ದವೋ ಅಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿತ್ತು. ಪ್ರಯಾಗ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಗಳಲ್ಲಿ ಅಮೃತದ ಹನಿಗಳು ಬಿದ್ದಿದ್ದವು. ಇನ್ನು ಅಮೃತವನ್ನು ಎಳೆಯುವ ಸಂದರ್ಭದಲ್ಲಿ ಚಂದ್ರನು ಅಮೃತವನ್ನು ಇತರೆಡೆಗೆ ಹರಿಯದಂತೆ ಉಳಿಸಿದ್ದನಂತೆ. ಆ ನಂತರ ಗುರು ಬೃಹಸ್ಪತಿ ದೇವನು ಚಿತಾಭಸ್ಮವನ್ನು ಒಂದೆಡೆ ಯಾರಿಗೂ ಕಾಣದಂತೆ ಎತ್ತಿಟ್ಟಿದ್ದ, ಸೂರ್ಯದೇವ ಕಲಶ ಸ್ಪೋಟಿಸದಂತೆ ರಕ್ಷಿಸಿದನು ಮತ್ತು ಶನಿದೇವ ಇಂದ್ರನ ಕೋಪವನ್ನು ನಿಯಂತ್ರಿಸಿದನು. ಆದ್ದರಿಂದ, ಈ ಗ್ರಹಗಳ ಸಂಯೋಜನೆಯು ಒಂದು ರಾಶಿಚಕ್ರದಲ್ಲಿದ್ದಾಗ ಮಹಾ ಕುಂಭವನ್ನು ಆಯೋಜಿಸಲಾಗುತ್ತದೆ. ಏಕೆಂದರೆ ಅಮೃತ ಕಲಶವು ಈ ಗ್ರಹಗಳ ಸಂಯೋಜನೆಯಿAದ ರಕ್ಷಿಸಲ್ಪಟ್ಟಿತು ತದನಂತರ ದೇವರುಗಳು ವಿಷ್ಣುವಿನ ಸಹಾಯದಿಂದ ಅಮೃತವನ್ನು ಸೇವಿಸಿದರೆಂಬ ನಂಬಿಕೆಯುAಟು. ಇನ್ನು ವೈದಿಕ ಜ್ಯೋತಿಷ್ಯದ ಪ್ರಕಾರ, ಬೃಹಸ್ಪತಿ ಅಥವಾ ಗುರುವು ಒಂದೇ ರಾಶಿಯಲ್ಲಿ ಸುಮಾರು ಒಂದು ವರ್ಷಗಳ ಕಾಲ ವಾಸಿಸುತ್ತಾರೆ ಮತ್ತು ಇನ್ನೊಂದು ರಾಶಿಚಕ್ರವನ್ನು ಪ್ರಯಾಣಿಸಲು ಅವರಿಗೆ ೧೨ ವರ್ಷಗಳು ಬೇಕಾಗುತ್ತದೆ. ಆದ್ದರಿಂದ ೧೨ ವರ್ಷಗಳ ನಂತರ ಈ ಪವಿತ್ರ ಸ್ಥಳಗಳಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಕ್ಕೆ ನಿಗದಿಯಾದ ವಿವಿಧ ಸ್ಥಳಗಳಲ್ಲಿ ಜಾತ್ರೆ ನಡೆಯುತ್ತದೆ. ಗುರುವು ಕುಂಭರಾಶಿಯಲ್ಲಿದ್ದಾಗ ಮತ್ತು ಸೂರ್ಯ ಮೇಷ ರಾಶಿಯಲ್ಲಿದ್ದಾಗ, ಕುಂಭ ಮೇಳದ ಸಂಘಟನೆ ಪ್ರಾರಂಭವಾಗುತ್ತದೆ.
ಶಾಹಿ ಸ್ನಾನದ ಮಹತ್ವ
ಮಹಾಕುಂಭ ಮೇಳವು ಜಗತ್ತಿನ ಅತಿದೊಡ್ಡ ಸಾರ್ವಜನಿಕ ಸಮಾರಂಭ ಎಂದು ಖ್ಯಾತಿ ಪಡೆದಿದೆ. ಇದರಲ್ಲಿ ಶಾಹಿ ಸ್ನಾನವು ಪ್ರಮುಖವಾಗಿದೆ. ಕಾಶಿಯ ಪೀಠಾಧಿಪತಿಗಳು, ಸಂತರು, ಸನ್ಯಾಸಿಗಳು ತಮ್ಮ ಅನುಯಾಯಿಗಳೊಂದಿಗೆ ಪೂರ್ವಕಾಲದ ಸಾಂಸ್ಕೃತಿಕ ರೀತಿ-ನೀತಿಗಳನ್ನು ಪಾಲಿಸುತ್ತಾ ಪವಿತ್ರ ಸ್ನಾನವನ್ನು ಮಾಡುತ್ತಾರೆ. ಮಹಾಕುಂಭದ ಸಮಯದಲ್ಲಿ ಕೆಲವು ಪ್ರಮುಖ ದಿನಾಂಕಗಳಿವೆ. ಅವು ಧಾರ್ಮಿಕ ದೃಷ್ಟಿಕೋನದಿಂದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಪ್ರಮುಖ ದಿನಾಂಕಗಳಲ್ಲಿ ವಿವಿಧ ಋಷಿಗಳು ಮತ್ತು ಸಂತರು ತಮ್ಮ ಶಿಷ್ಯರೊಂದಿಗೆ ಭವ್ಯವಾದ ಮೆರವಣಿಗೆಗಳನ್ನು ನಡೆಸುತ್ತಾರೆ. ಅವರು ಕುಂಭಮೇಳದ ಆರಂಭವನ್ನು ಸೂಚಿಸುವ ‘ಶಾಹಿ ಸ್ನಾನ' ಎಂದೂ ಕರೆಯಲ್ಪಡುವ ಭವ್ಯವಾದ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಶಾಹಿ ಸ್ನಾನ ಈ ಮಹಾಕುಂಭಮೇಳದ ಪ್ರಮುಖ ಆಕರ್ಷಣೆಯಾಗಿದ್ದು, ಇದಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಶಾಹಿ ಸ್ನಾನದ ಸಂದರ್ಭದಲ್ಲಿ ಜನರು ಶಾಹಿ ಸ್ನಾನವನ್ನು ತೆಗೆದುಕೊಳ್ಳುವ ಸಂತರ ಆಶೀರ್ವಾದ ಪಡೆಯುತ್ತಾರೆ.
ಮಹಾಕುಂಭದ ಮಹಾ ಆಯೋಜನೆ
ಭಾರತದ ಪುರಾತನ ಸಾಂಸ್ಕೃತಿಕ, ಧಾರ್ಮಿಕ ಸಂಪ್ರದಾಯಗಳನ್ನು ಮಹಾಕುಂಭ ಮೇಳ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚಿಗೆ ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದರು. ತಮ್ಮ ಪುರಾತನ ಸಂಪ್ರದಾಯಗಳು ಹಾಗು ಸಾಂಸ್ಕೃತಿಕ ಬೇರುಗಳ ಜೊತೆಗೆ ಮರು ಸಂಬAಧ ಬೆಳೆಸಲು ಮಹಾಕುಂಭ ಮೇಳ ಜಗತ್ತಿನಾದ್ಯಂತದ ಜನರಿಗೆ ಅವಕಾಶ ಮಾಡಿಕೊಡುತ್ತದೆ. ಈ ಸಾಲಿನ ಮಹಾಕುಂಭ ಅದ್ದೂರಿತನ, ದೈವಿಕತೆ ಮತ್ತು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿ ಮೇಳೈಸಿದೆ. ಇದು ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಆಗಿರುವುದರಿಂದ ಮೇಳಕ್ಕೆ ಆಗಮಿಸುವ ಭಕ್ತರಿಗಾಗಿ ವಿವಿಧ ಕಾರ್ಯಕ್ರಮಗಳ ವಿವರ ತಿಳಿಯಲು ಸರಿಸುಮಾರು ೫೦ ಸಾವಿರ ಕಿಖ ಕೋಡ್‌ಗಳ ರಚನೆ ಮಾಡಲಾಗಿದೆ. ಇನ್ನು ೨೪ ಗಂಟೆಗಳ ಕಾಲ ನೀರೊಳಗಿನಿಂದ ಡ್ರೋಣ್‌ಗಳಿಂದ ನಿರಂತರ ಕಣ್ಗಾವಲು ಪಿಎಸಿ, ಎನ್‌ಡಿಆರ್‌ಎಫ್, ಎಟಿಎಸ್, ಎನ್‌ಎಸ್‌ಜಿ ಸೇರಿ ೪೫ ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯ ನಿಯೋಜನೆ ಸೇರಿದಂತೆ ೩,೦೦೦ಕ್ಕೂ ಹೆಚ್ಚು ಕ್ಯಾಮೆರಾಗಳ ಅಳವಡಿಕೆ ನೋಡಿದರೆ ಉತ್ತರಪ್ರದೇಶ ಸರ್ಕಾರವು ಸುಸಜ್ಜಿತ ಭದ್ರತೆಗೆ ಒತ್ತು ನೀಡಿರುವುದು ಕಂಡುಬರುತ್ತದೆ. ೧.೫ ಲಕ್ಷಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣ, ಭದ್ರತೆಯಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳ (ಂI) ಪರಿಣಾಮಕಾರಿ ಬಳಕೆ, ಸಂಗಮದಲ್ಲಿ ಭಕ್ತರ ಓಡಾಟಕ್ಕೆ ೩೦ ಪಾಂಟೂನ್ ಸೇತುವೆಗಳ ನಿರ್ಮಾಣ, ೧೦ ಸಾವಿರ ಎಕರೆ ಪ್ರದೇಶಗಳಲ್ಲಿ ಅಭೂತಪೂರ್ವ ವ್ಯವಸ್ಥೆಯಾಗಿದ್ದು, ವಿಶೇಷವಾಗಿ ಶುಚಿತ್ವ, ಭದ್ರತೆಗೆ ಪ್ರಾಶಸ್ತö್ಯ ನೀಡಿ ಆಧುನಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಶೌಚಾಲಯಗಳ ಶುಚಿತ್ವವನ್ನು ನಿರ್ವಹಿಸಲು ಭಕ್ತರ ಅನುಕೂಲಕ್ಕಾಗಿ ಡಿಜಿಟಲ್ ಟೂರಿಸಂ ಮ್ಯಾಪ್ ಇದೆ. ಸ್ಮಾರ್ಟ್ಫೋನ್‌ಗಳ ಮೂಲಕ ಕೃತಕ ಬುದ್ಧಿಮತ್ತೆ ಆಧಾರಿತ ಭದ್ರತಾ ವ್ಯವಸ್ಥೆಯನ್ನು ಸಂಯೋಜಿಸಲಾಗಿದೆ ಎಂದು ಸಿಎಂ ಯೋಗಿ ಹೇಳಿರುವರು. ಅದೇ ರೀತಿ ಮಹಾ ಕುಂಭ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಇದು ಸಾಮಾಜಿಕ ಮತ್ತು ಆಧ್ಯಾತ್ಮಿಕ ಒಗ್ಗಟ್ಟಿನ ಸಂಕೇತ ಎಂದೂ ಅವರು ಬಣ್ಣಿಸಿದ್ದಾರೆ. ಈ ಕಾರ್ಯಕ್ರಮವು ಪ್ರಯಾಗ್‌ರಾಜ್ ಅನ್ನು ವಿಶ್ವದ ಅತಿ ದೊಡ್ಡ ತಾತ್ಕಾಲಿಕ ನಗರವನ್ನಾಗಿಯೂ ಮಾರ್ಪಡಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಷ್ಟçದ ಐಕ್ಯತೆಗೆ ಬುನಾದಿ
ಇನ್ನು ೨೧ನೇ ಶತಮಾನದಲ್ಲಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಭರತವರ್ಷದಾಧ್ಯಾತ್ಮಿಕ ಐಕ್ಯತಾರೂಪವಾಗಿ ಮಹಾಕುಂಭವನ್ನು ಪರಿಗಣಿಸಬೇಕಾಗಿದೆ. ಎಲ್ಲ ಜಾತಿ, ಧರ್ಮ, ಸಂಪ್ರದಾಯ ಮತ್ತು ಪಂಥಗಳ ಭೇದವನ್ನು ಮರೆತು ರಾಷ್ಟçದ ಆಧ್ಯಾತ್ಮಿಕ ಉತ್ಥಾನಕ್ಕೆ ಬುನಾದಿಯಂತಿರುವ ಈ ಪುಣ್ಯಮೇಳವನ್ನು ಪ್ರತಿಯೊಬ್ಬ ನಾಗರಿಕನೂ ಕೂಡ ಸ್ವಾಗತಿಸಬೇಕು. ೨೦೨೪ರ ಜನವರಿ ೨೨ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ನಂತರದಲ್ಲಿ ನಡೆಯುತ್ತಿರುವ ಮೊದಲ ಕುಂಭ ಮೇಳ ಇದಾಗಿದ್ದು ಸರ್ವರಿಗೂ ಶುಭವನ್ನುಂಟುಮಾಡಲಿ.



