ಭಾರತದ ಸ್ವಾತಂತ್ರ್ಯ ಹೋರಾಟ ೨೦೦೦ ವರ್ಷಗಳ ಸಂಘರ್ಷದ ಇತಿಹಾಸವನ್ನು ಹೊಂದಿದೆ. ವಿವಿಧ ಮಜಲುಗಳಲ್ಲಿ ಈ ನಾಡಿನ ಸ್ವರಾಜ್ಯಕ್ಕಾಗಿ ದುಡಿದವರಿದ್ದಾರೆ. ರಾಜ-ಮಹಾರಾಜರುಗಳಿಂದ ಹಿಡಿದು, ಸಾಮಾನ್ಯ ವ್ಯಕ್ತಿಯವರೆಗೂ ಈ ನಾಡಿನ ಸ್ವಾತಂತ್ರö್ಯಕ್ಕಾಗಿ ಶ್ರಮವಹಿಸಿದ್ದಾನೆ. ಅನೇಕ ಮಂದಿ ದಾರ್ಶನಿಕರು ಸ್ವಾತಂತ್ರö್ಯ ಹೋರಾಟದಲ್ಲಿ ಸ್ವತಃ ತೊಡಗಿಸಿಕೊಂಡಿದ್ದಲ್ಲದೇ ಪ್ರೇರಣಾ ಸ್ರೋತವಾಗಿ ಮುಂದಿನ ಪೀಳಿಗೆಗೆ ಪ್ರೇರಣೆಯನ್ನೋದಗಿಸಿದ್ದಾರೆ. ಈ ನಾಡಿನ ಸ್ವಾತಂತ್ರö್ಯ ಹೋರಾಟದ ವಿಶೇಷತೆ ಏನೆಂದರೆ, ಕೇವಲ ವ್ಯಕ್ತಿಗಳು ಮಾತ್ರ ತಮ್ಮ ತ್ಯಾಗ, ಬಲಿದಾನ, ಶೌರ್ಯ, ಸಾಹಸಗಳ ಮೂಲಕ ಸ್ವಾತಂತ್ರö್ಯ ಹೋರಾಟಕ್ಕೆ ಪ್ರೇರಣೆಯನ್ನು ನೀಡಿದ್ದಲ್ಲದೇ ಈ ನಾಡಿನಲ್ಲಿ ನಿರ್ಮಾಣಗೊಂಡ ಗೀತೆಗಳು, ಘೋಷಣೆಗಳು, ಮಂತ್ರಗಳು ಕೂಡಾ ಸ್ವಾತಂತ್ರö್ಯ ಹೋರಾಟಗಾರರಿಗೆ ಪ್ರೇರಣೆಯನ್ನು ಒದಗಿಸಿದೆ. ಅವುಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತಹ ಗೀತೆ ‘ವಂದೇ ಮಾತರಂ’. ಅದಕ್ಕೀಗ ೧೫೦ ಸಂವತ್ಸರಗಳು ತುಂಬಿದ ಸಂತಸ.
ಭಾರತದ ಸ್ವಾತಂತ್ರö್ಯ ಹೋರಾಟದಲ್ಲಿ ವಿದೇಶಿಗರ ವಿರುದ್ಧ ಕೊನೆಯದಾಗಿ ಈ ನಾಡಿನ ಜನ ಟೊಂಕಕಟ್ಟಿನಿAತಿದ್ದು ಬ್ರಿಟಿಷರ ವಿರುದ್ಧ. ಸುಮಾರು ೨೦೦ ವರ್ಷಗಳ ಕಾಲ ಆಡಳಿತ ನಡೆಸಿದ ಬ್ರಿಟಿಷರು ಈ ನಾಡನ್ನು ಎಷ್ಟು ಸಾಧ್ಯವೋ, ಅಷ್ಟು ವಿಘಟಿಸಲು ಪ್ರಯತ್ನಿಸಿದರು. ಜಾತಿ ಆಧಾರಿತವಾಗಿ, ಆಚರಣಾ ವಿಧಾನಗಳ ಆಧಾರಿತವಾಗಿ ಹಾಗೂ ಇನ್ನಿತರ ಮಾನದಂಡಗಳ ಮೂಲಕ ಭಾರತೀಯರನ್ನು ಒಡೆದು ಆಳುವ ನೀತಿಯ ವ್ಯೂಹದಲ್ಲಿ ಸಿಲುಕಿಸಲು ಪ್ರಯತ್ನಿಸಿತು. ಅಂತಹ ಸಂದರ್ಭದಲ್ಲಿ ಇಡೀ ರಾಷ್ಟçವನ್ನು ತಾಯಿಯಂತೆ ಪೂಜಿಸುವ, ಅವಳಿಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ವಿದೇಶಿಗರ ಆಡಳಿತದಿಂದ ಆಕೆ ಕಳೆದುಕೊಂಡ ಸ್ವಾತಂತ್ರö್ಯವನ್ನು ಮರಳಿ ಪಡೆದುಕೊಳ್ಳಬೇಕು ಎಂಬ ರಾಷ್ಟçಭಾವ ಜಾಗರಣವನ್ನು ಉಂಟುಮಾಡುವಲ್ಲಿ ಮಹತ್ತರದ ಪಾತ್ರ ವಹಿಸಿದ ಗೀತೆ ಬಂಕಿಮಚAದ್ರ ಚಟರ್ಜಿ ಅವರು ಬರೆದ ‘ಆನಂದಮಠ’ ಕಾದಂಬರಿಯಲ್ಲಿರುವ ವಂದೇ ಮಾತರಂ ಗೀತೆ. ಕೇವಲ ‘ವಂದೇ ಮಾತರಂ’ ಎಂಬ ಪದಗಳಷ್ಟೇ ಸಹಸ್ರಾರು ಭಾರತೀಯರಲ್ಲಿ ಪಂಚಾಕ್ಷರಿ ಮಂತ್ರದAತೆ ಪಸರಿ ರಾಷ್ಟಿçÃಯತೆಯ ಕಿಚ್ಚನ್ನು ಹೆಚ್ಚಿಸುವಲ್ಲಿ ಪ್ರಧಾನಪಾತ್ರ ವಹಿಸಿತು. ಆಂಗ್ಲರ ವಿರುದ್ಧ ಮೊಳಗಿದ ಸಿಂಹನಾದವಾಗಿ ಮಾರ್ದನಿಸಿತು.
ಸಾಹಿತಿ ಬಂಕಿಮ್ ಚಂದ್ರ ಚಟರ್ಜಿ ಅವರು ಬಂಗಾಳದವರು. ಭಾರತದಲ್ಲಿ ಅದಾಗಲೇ ಘಟಿಸಿದ ಅನೇಕ ಸ್ವಾತಂತ್ರö್ಯ ಹೋರಾಟಗಳನ್ನು ಓದಿದ, ನೋಡಿದ ಅನುಭವಗಳು ಅವರನ್ನು ರಾಷ್ಟçದ ಪರ ಚಿಂತಿಸುವAತೆ ಮಾಡಿತು. ೧೭೭೦ರಲ್ಲಿ ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ನಡೆದ ಸನ್ಯಾಸಿಗಳ ಹೋರಾಟ, ೧೮೫೭ರ ಸ್ವಾತಂತ್ರ‍್ಯ ಸಂಗ್ರಾಮದ ಪ್ರಭಾವ ಅವರಲ್ಲಿ ಅಚ್ಚಳಿಯದೇ ಉಳಿದಿತ್ತು. ಇಂತಹ ಹೋರಾಟಗಳ ಸಂದರ್ಭಗಳಲ್ಲಿ ಬ್ರಿಟಿಷರ ದಬ್ಬಾಳಿಕೆಯನ್ನು ಕಂಡಿದ್ದರು. ಭಾರತೀಯರು ನಾನಾ ಕಾರಣಗಳಿಂದ ಒಡೆದು ಹಂಚಿಹೋದದ್ದನ್ನು ಗಮನಿಸಿದ್ದರು. ಇಡೀ ಭಾರತವನ್ನು ಒಂದಾಗಿ ಪ್ರತಿನಿಧಿಸುವ ಮತ್ತು ಭಾರತದ ಸ್ವಾತಂತ್ರö್ಯಕ್ಕಾಗಿ ಜನಮಾನಸವನ್ನು ಎಚ್ಚರಿಸುವುದಕ್ಕಾಗಿ ಬರೆದ ಗೀತೆಯೇ 'ವಂದೇ ಮಾತರಂ'.
ಬAಕಿಮಚAದ್ರ ಚಟರ್ಜಿ ಅವರು ೧೮೮೨ರಲ್ಲಿ ‘ಆನಂದಮಠ’ ಕಾದಂಬರಿಯನ್ನು ಪ್ರಕಟಿಸಿದರು. ಕೆಲವು ತಿಂಗಳುಗಳಲ್ಲಿ ಬಂಗಾಳದಾದ್ಯAತ ‘ವಂದೇ ಮಾತರಂ’ ಗೀತೆಯ ಕುರಿತು ಚರ್ಚೆ ಪ್ರಾರಂಭವಾಯಿತು. ಮೆಚ್ಚುಗೆಗಳು ವ್ಯಕ್ತವಾದವು. ಜನರು ಆ ಹಾಡಿಗೆ ನೀಡಿದ ಪ್ರಶಂಸೆ ೧೮೯೬ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ್ ಠಾಗೋರ್ ಅವರು ಮೊದಲ ಬಾರಿಗೆ ‘ವಂದೇ ಮಾತರಂ' ಹಾಡುವಂತೆ ಮಾಡಿತು. ಅಲ್ಲಿಂದ ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ‘ವಂದೇ ಮಾತರಂ’ ಪಂಚಾಕ್ಷರಿ ಮಂತ್ರವಾಗಿ, ರಾಷ್ಟçಭಾವ ಜಾಗರಣದ ಗಂಗಾಪ್ರವಾಹವಾಗಿ, ಭಾರತದ ಸ್ವಾತಂತ್ರö್ಯಕ್ಕಾಗಿ ವಿಶ್ವದಾದ್ಯಂತ ನಡೆದ ಹೋರಾಟಗಳಿಗೆ ಪ್ರೇರಣಾ ದೀಪವಾಗಿ ಬೆಳಗಿತು. ಆನಂತರ ನಡೆದ ಎಲ್ಲಾ ರೀತಿಯ ಹೋರಾಟಗಳಲ್ಲಿ ಸಮಾನವಾಗಿ ಗುರುತಿಸಿಕೊಂಡ ಘೋಷಣೆ ವಂದೆ ಮಾತರಂ.
ವAದೇ ಮಾತರಂ ಗೀತೆಯಲ್ಲಿ ಏನಿದೆ?
ಬಂಗಾಲಿ ಮತ್ತು ಸಂಸ್ಕೃತ ಭಾಷೆಗಳ ಪದಗಳಿಂದ ರಚಿತಗೊಂಡ ಗೀತೆ ‘ವಂದೇ ಮಾತರಂ'. ವಂದೇ ಮಾತರಂ ಪದದ ಅರ್ಥ ‘ತಾಯಿಗೆ ವಂದಿಸುವೆ' ಎನ್ನುವುದಾಗಿದೆ. ಈ ಹಾಡಿನ ಪಲ್ಲವಿ ಮತ್ತು ಮೊದಲ ಚರಣ ಭಾರತದ ಭೌಗೋಳಿಕ ವಿವಿಧತೆಯ ಕುರಿತು ಕೊಂಡಾಡಿದ್ದು ನಂತರದ ಎರಡು ಚರಣಗಳು ಆಕೆಯ ಗುಣವಿಶೇಷತೆಗಳನ್ನು ತಿಳಿಸುತ್ತವೆ. ಅದರ ನಂತರದ ನಾಲ್ಕು ಚರಣಗಳು ಭಾರತ ಮಾತೆ ಮತ್ತು ಅವಳ ಮಕ್ಕಳಾದ ನಮ್ಮ ನಡುವಿನ ಸಂಬAಧವನ್ನು ಹಾಗೂ ಭಾರತಮಾತೆ ದುರ್ಗೆ, ಲಕ್ಷಿö್ಮ, ಸರಸ್ವತಿಯ ಸ್ವರೂಪವೆಂದೂ ಬಣ್ಣಿಸಲಾಗಿದೆ.
ಕ್ರಾಂತಿ-ಶಾAತಿ ಮಾರ್ಗದ ಪ್ರೇರಣಾ ಸ್ರೋತ
ಈ ರಾಷ್ಟçದ ಸ್ವಾತಂತ್ರö್ಯ ಹೋರಾಟದಲ್ಲಿ ಪ್ರಮುಖವಾದ ಪಾತ್ರವಹಿಸಿದ್ದ ಎರಡು ಸ್ವಾತಂತ್ರö್ಯ ಹೋರಾಟದ ಮಾರ್ಗ ‘ಕ್ರಾಂತಿಯ ಮಾರ್ಗ’ ಮತ್ತು ‘ಶಾಂತಿಯ ಮಾರ್ಗ’. ಈ ಎರಡೂ ಮಾರ್ಗವನ್ನು ಸಮಾನವಾಗಿ ಪ್ರೇರೇಪಿಸಿದ ಕೀರ್ತಿ ವಂದೇಮಾತರA ಗೀತೆಗೆ ಸಲ್ಲುತ್ತದೆ. ಎಷ್ಟರ ಮಟ್ಟಿಗೆ ವಂದೇ ಮಾತರಂ ಗೀತೆ ಮತ್ತು ಘೋಷಣೆ ಬ್ರಿಟಿಷರ ನಿದ್ದೆ ಕೆಡಿಸಿತ್ತೆಂದರೆ ‘ವಂದೇ ಮಾತರಂ’ ಘೋಷಣೆಯನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಬೇಕಾಯಿತು. ಸಾರ್ವಜನಿಕವಾಗಿ ಘೋಷಣೆ ಕೂಗಿದವರನ್ನು ಬಂಧಿಸಲಾಗುತ್ತಿತ್ತು. ೧೯೧೫ರಿಂದ ಪತಿ ವರ್ಷ ಕಾಂಗ್ರೆಸ್ ಅಧಿವೇಶನದಲ್ಲಿ “ವಂದೇ ಹಾಡುವುದಕ್ಕಾಗಿಯೇ ಆಗಿನ ಖ್ಯಾತ ಗಾಯಕ ವಿಷ್ಣು ದಿಗಂಬರ ಪಲುಸ್ಕರ್ ಅವರನ್ನು ಆಹ್ವಾನಿಸಲಾಗುತ್ತಿತ್ತು. ಗಾಂಧೀಜಿ ತಮ್ಮ ಭಾಷಣಗಳಲ್ಲಿ ಈ ಹಾಡಿನ ಅರ್ಥವನ್ನು ಒತ್ತಿ ಹೇಳುತ್ತಿದ್ದರು. ೧೯೦೫ರಲ್ಲಿ ಮೇಡಮ್ ಕಾಮಾ ಜರ್ಮನಿಯಲ್ಲಿ ಭಾರತದ ಧ್ವಜ ಹಿಡಿದು ಬ್ರಿಟಿಷರ ವಿರುದ್ಧ ಪ್ರತಿಭಟಿಸಿದ್ದರು. ಆ ಧ್ವಜದ ಮೇಲೆ ‘ವಂದೇ ಮಾತರಂ' ಎಂದು ಬರೆಯಲಾಗಿತ್ತು. ರಾಮ್‌ಪ್ರಸಾದ್ ಬಿಸ್ಮಿಲ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು, ಸುಖ್‌ದೇವ್, ಆಶ್ಫಾಕುಲ್ಲಾ ಖಾನ್ ಮುಂತಾದ ಕ್ರಾಂತಿಕಾರಿಗಳ ಧ್ಯೇಯವಾಕ್ಯವೇ ವಂದೇ ಮಾತರಂ ಆಗಿತ್ತು. ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಎಲ್ಲಾ ಚಳುವಳಿಗಳಲ್ಲಿ ಮೊಳಗುತ್ತಿದ್ದ ಘೋಷವಾಕ್ಯ ‘ವಂದೇ ಮಾತರಂ’. ಸುಭಾಷ್‌ಚಂದ್ರ ಬೋಸ್‌ರ ಆಜಾದ್ ಹಿಂದ್ ಫೌಜಿನ ರಣಮಂತ್ರವೇ ‘ವಂದೇ ಮಾತರಂ’ ೧೯೪೨-೪೪ರ ಅವಧಿಯಲ್ಲಿ ಆಝಾದ್ ಹಿಂದ್ ರೇಡಿಯೋದಲ್ಲಿ ಸುಭಾಷ್‌ಚಂದ್ರ ಬೋಸ್ ಸಂದೇಶ ಆರಂಭವಾಗುತ್ತಿದ್ದದ್ದು ‘ವಂದೇ ಮಾತರಂ'ನಿAದ. ಬಂಗಾಳದಲ್ಲಿ ಬಿಪಿನ್ ಚಂದ್ರಪಾಲ್, ಅರವಿಂದ್ ಘೋಷ್, ಪಂಜಾಬ್‌ನಲ್ಲಿ ಲಾಲಾ ಲಜಪತ್ ರಾಯ್, ಮಹಾರಾಷ್ಟçದಲ್ಲಿ ತಿಲಕ್, ಕೇಶವ ಬಲಿರಾಮ್ ಹೆಡಗೆವಾರ್, ದಕ್ಷಿಣ ಭಾರತದಲ್ಲಿ ಸುಬ್ರಮಣ್ಯ ಭಾರತಿ, ಚಿದಂಬರA ಪಿಳ್ಳೆ ಸುಬ್ರಹ್ಮಣ್ಯ ಶಿವ ಮುಂತಾದವರು ‘ವಂದೇ ಮಾತರಂ’ ಆಂದೋಲನದ ನೇತೃತ್ವ ವಹಿಸಿದ್ದರು.
ವಂದೇ ಮಾತರಂ ಗೀತೆಗೆ ತಪ್ಪಿದ ರಾಷ್ಟçಗೀತೆ ಗೌರವ.
‘ವಂದೇ ಮಾತರಂ' ಗೀತೆ ಅಷ್ಟೆಲ್ಲ ಪ್ರಸಿದ್ಧಿ ಪಡೆದಿದ್ದರೂ, ಸ್ವಾತಂತ್ರ‍್ಯದ ನಂತರ ಅದು ರಾಷ್ಟçಗೀತೆಯಾಗಲಿಲ್ಲ. ಮಿಲಿಟರಿ ಬ್ಯಾಂಡ್ ಸಂಗೀತ ರಚನೆಗೆ ‘ವಂದೇ ಮಾತರಂ' ಹೊಂದುವುದಿಲ್ಲ ಎಂಬುದು ನೆಹರು ಕೊಟ್ಟ ಸಮರ್ಥನೆಯಾಗಿತ್ತು. ಆಗ ಖ್ಯಾತ ಸಂಗೀತಗಾರ ಕೃಷ್ಣರಾವ್ ಪುಲಂಬ್ರೀಕರ್, ಯಾವುದೇ ಭಾರತೀಯ ಅಥವಾ ವಿದೇಶಿ ವಾದ್ಯಕ್ಕೆ ‘ವಂದೇ ಮಾತರಂ' ಗೀತೆಯನ್ನು ಹೊಂದಿಸಬಹುದು ಎಂದು ಹೇಳಿದರೂ, ಅವರಿಗೆ ಅವಕಾಶ ನೀಡಲು ನೆಹರು ನಿರಾಕರಿಸಿದ್ದರು ಎನ್ನಲಾಗಿದೆ.
ವಂದೇ ಮಾತರಂ ಗೀತೆಗೆ ‘ರಾಷ್ಟçಗಾನ’ ಸ್ಥಾನಮಾನ
ಈ ರಾಷ್ಟçದ ಸ್ವಾತಂತ್ರö್ಯ ಹೋರಾಟದ ಭಾಗವೇ ಆದ ‘ವಂದೇ ಮಾತರಂ’ ಗೀತೆಗೆ ಅದರ ಅಮೃತ ಮಹೋತ್ಸವದ (೭೫ನೇ ವರ್ಷ) ಸಂದರ್ಭದಲ್ಲಿ ‘ರಾಷ್ಟಿçÃಯ ಗಾನ' ಸ್ಥಾನಮಾನವನ್ನು ನೀಡಲಾಯಿತು. ಈ ಸ್ಥಾನಮಾನ ಸಿಕ್ಕಿ ವಂದೇ ಮಾತರಂಗೆ ಈ ವರ್ಷ ೭೫ ವರ್ಷಗಳು ತುಂಬಿದೆ. ೧೯೫೦ ಜ.೨೪ರಂದು ‘ವಂದೇ ಮಾತರಂ' ಗೀತೆಗೆ ‘ಜನ ಗಣ ಮನ’ದಷ್ಟೇ ಸಮಾನ ಸ್ಥಾನ ಹಾಗೂ ಗೌರವ ಘೋಷಣೆ ಆಯಿತು. ಅಂದು ಸಂವಿಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಬು ರಾಜೇಂದ್ರ ಪ್ರಸಾದ್, ಜನಗಣಮನ ಭಾರತದ ರಾಷ್ಟçಗೀತೆಯಾಗಿರಲಿದೆ ಎಂದು ಘೋಷಿಸಿದ್ದರಲ್ಲದೆ, ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರೇರಣೆಯೊದಗಿಸಿದ ವಂದೇಮಾತರAಗೂ ಸಮಗೌರವ ನೀಡಲಾಗುವುದು ಎಂದರು.
ವಿವಿಧ ಪ್ರಸಿದ್ಧ ಸಂಯೋಜನೆಗಳು
ಸ್ವಾತAತ್ರö್ಯ ಪೂರ್ವದಿಂದ ಇಂದಿನವರೆಗೂ ಆನೇಕ ಸಂಗೀತಗಾರರು ಭಿನ್ನ ಶೈಲಿಗಳಲ್ಲಿ 'ವಂದೇ ಮಾತರಂ' ಗೀತೆಗೆ ರಾಗ ಸಂಯೋಜಿಸಿ ಹಾಡಿದ್ದಾರೆ. ಜಡುನಾಥ್ ಭಟ್ಟಾಚಾರ್ಯ ಈ ಗೀತೆಗೆ ಮೊದಲು ರಾಗ ಸಂಯೋಜಿಸಿದವರು. ನಂತರ ದಕ್ಷಿಣ ಚರಣ್ ಸೇನ್, ವಿ.ಡಿ. ಆಂಭಾಲಿಕರ್ ಭಿನ್ನ ಶೈಲಿಯಲ್ಲಿ ಹಾಡನ್ನು ಪ್ರಸ್ತುತಪಡಿಸಿದ್ದರು. ೧೯೪೭, ಆಗಸ್ಟ್ ೧೫ರಂದು ಪಂ. ಓಂಕಾರನಾಥ್ ಠಾಕೂರ್ ತಮ್ಮ ಶಾಸ್ತಿçÃಯ ಗಾಯನದಲ್ಲಿ ಆಕಾಶವಾಣಿಯಲ್ಲಿ ಮೊದಲ ಬಾರಿ 'ವಂದೇ ಮಾತರಂ' ಗೀತೆ ಪ್ರಸ್ತುತಪಡಿಸಿದರು. ಇಂದಿಗೂ ಆಕಾಶವಾಣಿ ಪ್ರತಿನಿತ್ಯ ‘ವಂದೇ ಮಾತರಂ' ಗೀತೆಯೊಂದಿಗೆ ತನ್ನ ಪ್ರಸಾರ ಕಾರ್ಯ ಆರಂಭಿಸುತ್ತದೆ. ೧೯೫೨ರಲ್ಲಿ ತೆರೆಕಂಡ ಆನಂದಮಠ ಕಾದಂಬರಿ ಆಧಾರಿತ ಚಲನಚಿತ್ರದಲ್ಲಿ ನಿರ್ದೇಶಕ ಹೇಮಂತ್ ಕುಮಾರ್ 'ವಂದೇ ಮಾತರಂ' ಗೀತೆಗೆ ಹೊಸ ಸ್ಪರ್ಶ ನೀಡಿದ್ದರು. ಲತಾ ಮಂಗೇಶ್ವರ್, ಸಂಗೀತಾ ಕಟ್ಟಿ, ವಿಜಯ್ ಪ್ರಕಾಶ್, ಶ್ರೇಯಾ ಘೋಷಲ್ ಮುಂತಾದ ಗಾಯಕರು ವಿವಿಧ ರಾಗಸಂಯೋಜನೆಗಳಿAದ ಹಾಡಿರುವ ಈ ಗೀತೆ ಹೆಚ್ಚು ಪ್ರಸಿದ್ಧಿ ಪಡೆದಿದೆ.
ವಂದೇ ಮಾತರಂಗೆ ವಿರೋಧ!
೧೯೨೩ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ‘ವಂದೇ ಮಾತರಂ' ಗೀತೆಗೆ ಮೊದಲ ವಿರೋಧ ವ್ಯಕ್ತವಾಯಿತು. ಅಧಿವೇಶನದ ಅಧ್ಯಕ್ಷರಾಗಿದ್ದ ಮೌಲಾನಾ ಮಹಮದ್ ಅಲಿ, 'ವಂದೇ ಮಾತರಂ' ಒಂದು ಕೋಮಿನ ಗೀತೆ. ಇಸ್ಲಾಂ ಪ್ರಕಾರ ಸಂಗೀತ ನಿಷೇಧವೆಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ತಮ್ಮ ರಿಲಿಜನ್‌ನಲ್ಲಿ ದೇಶವನ್ನು ದೇವತೆ ರೂಪದಲ್ಲಿ ನೋಡುವ ಪದ್ಧತಿ ಇಲ್ಲ ಎಂದು ಆಕ್ಷೇಪಿಸಿದರು. ಆದರೂ ಪಲುಸ್ಕರ್ ಅವರು ಮೌಲಾನಾ ಅವರ ಆಕ್ಷೇಪ ತಿರಸ್ಕರಿಸಿ, ‘ವಂದೇ ಮಾತರಂ' ಹಾಡಿದ್ದರು. ಮಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ದೇಶದಲ್ಲಿ ಪ್ರಬಲಗೊಂಡAತೆ ವಂದೇ ಮಾತರಂ ಹಾಡಿಗೆ ನಿಷೇಧ ತರಲು ಒತ್ತಡ ಹೇರಿತ್ತು. ಹೀಗಾಗಿ ಆರು ಚರಣಗಳಿದ್ದರೂ ಕಾಂಗ್ರೆಸ್ ಮಾತ್ರ ಮೊದಲೆರಡು ಚರಣಗಳನ್ನು ಮಾತ್ರ ತಮ್ಮ ಸಮಾರಂಭಗಳಲ್ಲಿ ಹಾಡಲಾಗುತ್ತಿತ್ತು.



