ಭಾರತವನ್ನು ರತ್ನಗರ್ಭ ವಸುಂಧರಾ ಎಂದೂ ಕರೆಯಲಾಗುತ್ತದೆ. ಏಕೆಂದರೆ ಆಕೆಯ ಮಡಿಲನ್ನು ಶ್ರೀಮಂತಗೊಳಿಸಿದ ಅಸಂಖ್ಯಾತ ಮಹಾನ್ ಪುರುಷರು ಜನಿಸಿ ಈ ನಾಡಿನ ಏಳಿಗೆಗಾಗಿ ಶ್ರಮಿಸಿದ್ದಾರೆ. ಅಂತಹ ಮಹನೀಯರಲ್ಲಿ ಡಾ| ಕೇಶವ್ ಬಲಿರಾಮ್ ಹೆಡಗೇವಾರ್ ಪ್ರಮುಖರು. ರಾಷ್ಟç ದಾಸ್ಯದ ಕಗ್ಗತ್ತಲೆಯಲ್ಲಿದ್ದಾಗ ದಾಸ್ಯದ ಸಂಕೋಲೆಯನ್ನು ಬಿಡಿಸುವುದಕ್ಕಾಗಿ ಕ್ರಾಂತಿಕಾರಿಯಾಗಿ ಹೋರಾಡಿದರು. ಮುಂದೊAದು ದಿನ ಖಂಡಿತವಾಗಿಯೂ ನಮ್ಮದಾಗುವ ಸ್ವಾತಂತ್ರö್ಯವನ್ನು ಉಳಿಸಿಕೊಳ್ಳುವುದಕ್ಕೆ ಸಂಘಟಿತ ಸಮಾಜವನ್ನು ನಿರ್ಮಿಸಬೇಕೆಂದು ರಾಷ್ಟಿçÃಯ ಸ್ವಯಂಸೇವಕ ಸಂಘವನ್ನು ಪ್ರಾರಂಭಿಸಿ ಭಾರತೀಯರನ್ನು ಸಂಘಟಿಸಲು ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟ ರಾಷ್ಟçದ್ರಷ್ಟ ಡಾ| ಕೇಶವ ಬಲಿರಾಮ ಹೆಡಗೇವಾರ್. ೧೮೮೯ರ ಎಪ್ರಿಲ್ ೧ ಯುಗಾದಿಯ ಶುಭದಿನದಂದು ಜನಿಸಿದ ಡಾ.ಕೇಶವ ಬಲಿರಾಮ ಹೆಡಗೇವಾರರಿಗೆ ದೇಶಭಕ್ತಿ ರಕ್ತಗತವಾಗಿತ್ತು. ಬಾಲ್ಯದಲ್ಲೇ ವಿದೇಶಿಗರ ಸಂಭ್ರಮದ ಪ್ರಯುಕ್ತ ನೀಡಲಾಗಿದ್ದ ಸಿಹಿಯನ್ನು ತಿರಸ್ಕರಿಸಿ ಎಳವೆಯಲ್ಲೇ ತಮ್ಮ ಸ್ವಾಭಿಮಾನ ಮೆರೆದಿದ್ದರು. ಸೀತಾಬರ್ಡಿ ಕೋಟೆಯ ಮೇಲೆ ಹಾರಾಡುತ್ತಿದ್ದ ಬ್ರಿಟಿಷರ ಧ್ವಜ ಯೂನಿಯನ್ ಜಾಕ್ ಅನ್ನು ಕೆಳಗಿಳಿಸಲೇಬೇಕೆಂದು ನಿರ್ಧರಿಸಿ, ಸ್ನೇಹಿತರೊಡಗೂಡಿ ತಮ್ಮ ಗುರುವಿನ ಮನೆಯಿಂದ ಸೀತಾಬರ್ಡಿ ಕೋಟೆಗೆ ಸುರಂಗ ತೋಡುವ ಮೂಲಕ ದಾಸ್ಯದಿಂದ ಮುಖ್ತರಾಗಬೇಕು ಎಂಬ ಭಾವ ಬಾಲಕನಾಗಿರುವಾಗಲೇ ಅವರಲ್ಲಿ ಪ್ರಕಟವಾಗಿದ್ದನ್ನು ಗುರುತಿಸಬಹುದು. ಯಾವ ವಂದೇ ಮಾತರಂ ಘೋಷಣೆಯನ್ನು ಕೇಳಿದರೆ ಬ್ರಿಟಿಷರು ಉರಿದುಬೀಳುತ್ತಿದ್ದರೋ, ಅಂತಹ ಘೋಷಣೆಯನ್ನು ತಮ್ಮ ಶಾಲೆ ಆಗಮಿಸಿದ್ದ ಬ್ರಿಟಿಷ್ ಅಧಿಕಾರಿಯ ಎದುರು ಗೆಳೆಯರನ್ನೆಲ್ಲಾ ಸೇರಿಸಿಕೊಂಡು ರಣಕಹಳೆಯಂತೆ ಮೊಳಗಿಸಿದವರು ಇನ್ನೂ ವಿದ್ಯಾರ್ಥಿಯಾಗಿದ್ದ ಕೇಶವ. ಬಾಲ್ಯದಲ್ಲೇ ರಕ್ತಗತವಾಗಿದ್ದ ದೇಶಭಕ್ತಿಯ ಕಾರಣಕ್ಕಾಗಿ ಉನ್ನತ ವ್ಯಾಸಂಗವನ್ನು ನೆಪವನ್ನಾಗಿಟ್ಟುಕೊಂಡು ಅಂದಿನ ಕಾಲಕ್ಕೆ ಕ್ರಾಂತಿಕಾರಿಗಳ ನಾಡಾಗಿದ್ದ ಬಂಗಾಲಕ್ಕೆ ಬಂದರು. ೧೯೨೦ರ ದಶಕದಲ್ಲಿ ಯುಗಾಂತರ, ಅನುಶೀಲನ ಸಮಿತಿಯಂತಹ ಕ್ರಾಂತಿಕಾರಿ ಸಂಘಟನೆಗಳ ಭಾಗವಾಗಿದ್ದಲ್ಲದೇ ಮೊದಲ ದರ್ಜೆಯ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡಿದ್ದರು. ಅವರು ಪಾಂಡುರAಗ ಖಾನಖೋಜೇ, ಅರವಿಂದ ಘೋಷ್, ವಾರೀಂದ್ರ ಘೋಷ್, ತ್ರೆöÊಲೋಕ್ಯನಾಥ ಚಕ್ರವರ್ತಿ ಮೊದಲಾದವರ ಸಹವರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದವರು. ಕಲ್ಕತ್ತೆಯಲ್ಲಿ ವ್ಯಾಸಂಗ ಮುಗಿಸಿ ನಾಗಪುರಕ್ಕೆ ಬಂದ ಡಾಕ್ಟರ್‌ಜಿ ನಾಗಪುರ ಮತ್ತು ಬಂಗಾಳ ನಡುವಿನ ಕ್ರಾಂತಿಕಾರ್ಯದ ಒಂದು ಬಹು ಮಹತ್ವದ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಭಾರತ ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದರು. ನಾಗಪುರ ಪ್ರದೇಶ ಕಾಂಗ್ರೆಸ್ ಮುಖಂಡರಾಗಿಯೂ ಗುರುತಿಸಿಕೊಂಡಿದ್ದರು. ಅನೇಕ ಸತ್ಯಾಗ್ರಹಗಳಲ್ಲಿ ಭಾಗವಹಿಸಿದ ಕಾರಣ ಕಾರಾಗೃಹಶಿಕ್ಷೆ ಅನುಭವಿಸಿದರು. ಆದರೆ ರಾಜಕೀಯದಲ್ಲಿದ್ದ ಅನೇಕ ಲೋಪಗಳನ್ನು ನೋಡಿದ ಹೆಡಗೇವಾರರಿಗೆ ಇದರಿಂದ ಸಮಾಜಪರಿವರ್ತನೆ ಅಸಾಧ್ಯ ಎನಿಸಿತು. ದೇಶನಿಷ್ಠರಾದ ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲ, ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಸಂಘಟನೆ ಮಾಡುವ ಧೈರ್ಯಶಾಲಿ ಕಾರ್ಯಕರ್ತರು ಇದ್ದರೆ ಮಾತ್ರ ಸ್ವಾತಂತ್ರ‍್ಯಪ್ರಾಪ್ತಿ ಸಾಧ್ಯ ಹಾಗೂ ಬಂದAತಹದ ಸ್ವಾತಂತ್ರö್ಯದ ರಕ್ಷಣೆ ಸಾಧ್ಯ ಎಂಬುದು ಅವರಿಗೆ ಮನವರಿಕೆಯಾಯಿತು. ಅಂತಹ ವ್ಯಕ್ತಿಗಳನ್ನು ತಯಾರು ಮಾಡಲು ೧೯೨೫ರ ಸೆಪ್ಟೆಂಬರ್ ೨೭ರಂದು ವಿಜಯದಶಮಿಯ ಪರ್ವ ಕಾಲದಲ್ಲಿ ಸಂಘವನ್ನು ಪ್ರಾರಂಭಿಸಿದರು. ವ್ಯಕ್ತಿನಿರ್ಮಾಣದಿಂದ ಮಾತ್ರ ರಾಷ್ಟçನಿರ್ಮಾಣ ಸಾಧ್ಯ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಆದ್ದರಿಂದ ವ್ಯಕ್ತಿನಿರ್ಮಾಣವೇ ಸಂಘದ ಪ್ರಮುಖ ಉದ್ದೇಶವಾಯಿತು. ವ್ಯಕ್ತಿ ಶಾಶ್ವತವಲ್ಲ, ತತ್ತ÷್ವ ಶಾಶ್ವತ ಎನ್ನುವುದನ್ನು ಅರಿತಿದ್ದ ಡಾ.ಹೆಡಗೇವಾರ್ ಅವರು ತ್ಯಾಗ, ಶೌರ್ಯದ ಸಂಕೇತವಾದ ಕೇಸರಿ ಬಣ್ಣದ ‘ಭಗವಾ ಧ್ವಜ’ ವನ್ನು ಸಂಘದ ಗುರುವಾಗಿ ಸ್ವೀಕರಿಸಿದರು. ಇಡೀ ರಾಷ್ಟçವನ್ನು ಸಂಘಟಿತಗೊಳಿಸಬೇಕು ಎಂಬ ಉದ್ದೇಶಕ್ಕಾಗಿ ನಾಗಪುರದ ಅವರ ಮನೆಯ ಮೊದಲನೇ ಮಹಡಿಯಲ್ಲಿ ೧೫-೨೦ ಮಂದಿ ನಿತ್ಯ ಸೇರುವುದರೊಂದಿಗೆ ಶುರುವಾದ ರಾಷ್ಟಿçÃಯ ಸ್ವಯಂಸೇವಕ ಸಂಘ ನಿಧಾನವಾಗಿ ಸಂಘಟನೆಯ ರೂಪು ಪಡೆದು ವಿವಿಧ ಪ್ರಾಂತಗಳನ್ನು ತಲುಪಿತು. ಸಂಘದ ಕೆಲಸಕ್ಕಾಗಿ ತಮ್ಮ ಸರ್ವಸ್ವವನ್ನು ಮುಡಿಪಿಟ್ಟು ತಮ್ಮ ಕುಟುಂಬವನ್ನು ತೊರೆದು ಅನೇಕ ಮಂದಿ ಯುವಕರು ‘ಪ್ರಚಾರಕ’ರಾಗಿ ಹೊರಟರು. ೧೯೪೦ರ ಹೊತ್ತಿಗೆ ಇಡೀ ರಾಷ್ಟçದ ಎಲ್ಲಾ ಪ್ರಾಂತಗಳನ್ನು ರಾಷ್ಟಿçÃಯ ಸ್ವಯಂಸೇವಕ ಸಂಘ ತಲುಪಿತ್ತು. ಅದರ ಮೊದಲ ಸರಸಂಘಚಾಲಕರಾಗಿದ್ದ ಡಾ.ಹೆಡಗೇವಾರ್ ನಿರಂತರವಾಗಿ ದೇಶವ್ಯಾಪಿ ಪ್ರವಾಸಗಳಲ್ಲಿ ನಿರತರಾಗಿದ್ದರು. ಇದು ಅವರ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಿತ್ತು. ಕೊನೆಯದಾಗಿ ಅವರು ಮೇ ೧೬, ೧೯೪೦ ರಂದು ನಾಗಪುರದಲ್ಲಿ ಒಂದು ತಿಂಗಳ ಕಾಲ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಒಂದು ತಿಂಗಳ ಬದಲಾಗಿ ೩ ದಿನಗಳು ಮಾತ್ರ ಭಾಗವಹಿಸಿದ್ದರು. ಜೂನ್ ೯ ರಂದು ಶಿಬಿರದಲ್ಲಿ ಪಾಲ್ಗೊಂಡು ಭಾರತದ ಉದ್ದಗಲದಿಂದ ಬಂದಿದ್ದ ೧೫೦೦ ಸ್ವಯಂಸೇವಕರನ್ನು ಸಂಬೋಧಿಸಿದರು. ಅವರು "ಆರ್‌ಎಸ್‌ಎಸ್ ಒಂದು ಹಿಂದೂ ರಕ್ಷಣಾ ದಳವೋ, ಅರೆಸೈನಿಕ ಪಡೆಯೋ ಅಲ್ಲ. ಆದರೆ ಇಡೀ ರಾಷ್ಟçವನ್ನು ಮೌಲ್ಯಾಧಾರಿತ, ವೈಭವಯುತ, ಸರ್ವಾಂಗೀಣ ಉನ್ನತಿಯ ದಾರಿಯಲ್ಲಿ ಕೊಂಡುಹೋಗುವ ಮಹತ್ತರವಾದ ಜವಾಬ್ದಾರಿ ಎಲ್ಲಾ ಸ್ವಯಂಸೇವಕರ ಮೇಲೂ ಇದೆ" ಎಂದರು. ಇದೇ ಅವರ ಕಡೆಯ ಸಾರ್ವಜನಿಕ ಸಂಬೋಧನೆಯಾಗಿತ್ತು. ಹೆಡಗೇವಾರ್ ರವರು ಜೂನ್ ೨೧, ೧೯೪೦ ರಲ್ಲಿ ನಾಗಪುರದಲ್ಲಿ ನಿಧನರಾದರು. ೧೯೪೦ರಲ್ಲಿ ಡಾಕ್ಟರ್‌ಜೀ ನಿಧನರಾದಾಗ ‘ಕೇಸರಿ' ಪತ್ರಿಕೆ ಹೀಗೆ ಬರೆಯಿತು. “ಸಾಮಾನ್ಯವಾಗಿ ನಾಯಕರಲ್ಲಿ ಕಾಣಿಸದಿರುವ ವಿನಯಶೀಲತೆಯು ಅವರಲ್ಲಿ ತುಂಬಿತ್ತು. ರಾಷ್ಟ್ರಸೇವೆಗಾಗಿ ತಮ್ಮ ಸ್ವಂತ ಪರಿವಾರ ಹಾಗೂ ತಮ್ಮ ಉಜ್ವಲ ಭವಿಷ್ಯವನ್ನೂ ತ್ಯಾಗ ಮಾಡಿದವರು ಅವರು. ಇನ್ನೊಂದು ಮರಾಠಿ ಪತ್ರಿಕೆ 'ಕಾಳೆ' ಹೀಗೆ ಬರೆಯಿತು, "ಭಾರತದ ಸ್ವಾತಂತ್ರಕ್ಕಾಗಿ ಅವರು ನಡೆಸಿದ ಅವಿರತ ಪ್ರಯತ್ನಕ್ಕೆ ಸರಿಸಾಟಿಯಾದುದು ಬೇರೊಂದಿಲ್ಲ." ಅಂತಹ ಮಹಾನ್ ವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ ಹೇಳಿದ ಪ್ರೇರಣಾದಾಯಿ ಮಾತುಗಳನ್ನು ಇಲ್ಲಿ ನೀಡಲಾಗಿದೆ. ೧. ಕೇವಲ ಭೂಮಿಯ ಒಂದು ತುಂಡನ್ನು ರಾಷ್ಟç ಎಂದು ಕರೆಯಲು ಆಗುವುದಿಲ್ಲ. ಒಂದೇ ವಿಚಾರ, ಒಂದೇ ಆಚಾರ, ಒಂದೇ ಸಂಸ್ಕೃತಿ ಹಾಗೂ ಒಂದೇ ಪರಂಪರೆ ಇದ್ದು, ಪುರಾತನ ಕಾಲದಿಂದಲೂ ಒಂದು ಭೂಮಿಯಲ್ಲಿ ನೆಲೆಸಿ ಬಾಳಿರುವ ಜನರೇ ಒಂದು ರಾಷ್ಟçವಾಗುತ್ತಾರೆ. ೨. ನಮ್ಮಲ್ಲಿ ಮೇಲುನೋಟಕ್ಕೆ ಮತಭೇದಗಳು ಎಷ್ಟೇ ಇರಬಹುದು. ಅಷ್ಟಾದರೂ ಹಿಂದುಗಳಾದ ನಾವೆಲ್ಲರೂ ಒಂದೇ ರಾಷ್ಟç. ಸಮಾನ ಆಚಾರ ವಿಚಾರ, ಸಮಾನ ಸಂಸ್ಕೃತಿ, ಸಮಾನ ಪರಂಪರೆ ಮತ್ತು ಸಮಾನ ಧ್ಯೇಯಗಳಿಂದ ಕೂಡಿದವರಲ್ಲಿಯೇ ನಿಜವಾದ ಒಗ್ಗಟ್ಟು ಸಾಧ್ಯ. ನಮ್ಮ ಸಂಘಟನೆಯ ಈ ಅಡಿಪಾಯ ಅತ್ಯಂತ ಶಾಸ್ತçಶುದ್ಧವಾದುದು. ೩. ನಮ್ಮ ಸಮಾಜವನ್ನು ಪೀಡಿಸುತ್ತಿರುವ ಮೂಲ ರೋಗವನ್ನು ನಿವಾರಿಸಲು ನಮ್ಮ ಜನರ ರೋಮ ರೋಮಗಳಲ್ಲಿ ರಾಷ್ಟಿçÃಯತೆಯನ್ನು ತುಂಬಬೇಕು. ಇಡೀ ಸಮಾಜವನ್ನು ಶಿಸ್ತುಬದ್ಧಗೊಳಿಸಬೇಕು. ಚೈತನ್ಯಶಾಲಿಯಾಗಿಸಬೇಕು. ತನ್ಮೂಲಕ ಅದಕ್ಕೆ ಶಾಶ್ವತವಾದ ವಿಜಯಶಾಲಿ ರಾಷ್ಟçದ ಸ್ವರೂಪವನ್ನು ಮತ್ತೊಮ್ಮೆ ನಾವು ತಂದುಕೊಡಬೇಕು. ೪. ನಾವು ದುರ್ಬಲರಾಗಿ ಇರುವ ತನಕ ಸಹಜವಾಗಿಯೇ ಬಲಿಷ್ಠರಿಗೆ ನಮ್ಮ ಮೇಲೆ ಆಕ್ರಮಣ ಮಾಡುವ ಆಸೆಯಾಗುತ್ತದೆ. ನಾವು ಶಕ್ತಿವಂತರಾಗಿ ಇದ್ದಲ್ಲಿ, ನಮ್ಮ ಮೇಲೆ ಆಕ್ರಮಣ ಮಾಡುವ ಧೈರ್ಯವಾಗಲೀ, ನಮ್ಮನ್ನು ಅಪಮಾನಗೊಳಿಸುವ ಸಾಹಸವಾಗಲೀ ಯಾರಿಗೂ ಇರುತ್ತಿರಲಿಲ್ಲ. ೫. ನಮಗೆ ಶಕ್ತಿ ಗಳಿಸಬೇಕೆಂಬ ಆಸೆಯಿದೆ. ಅದನ್ನು ಗಳಿಸುವಂತಹ ಒಂದೇ ದಾರಿಯೂ ತಿಳಿದಿದೆ. ಆದರೆ, ಕೇವಲ ಆಸೆ ಮತ್ತು ತಿಳುವಳಿಕೆಗಳಿಂದ ಮಾತ್ರ ನಾವು ಬಲಶಾಲಿಗಳಾಗಲಾರೆವು. ಅದಕ್ಕಾಗಿ ನಿರಂತರ ಕೆಲಸ ಮಾಡುವ ಅಗತ್ಯವೂ ಇದೆ. ಸಂಘಟನೆಯ ತತ್ವವನ್ನು ನಾವು ಆಚರಣೆಯಲ್ಲಿ ತಂದಾಗ ಮಾತ್ರ ನಮ್ಮಲ್ಲಿ ಶಕ್ತಿ ಬೆಳೆಯಬಲ್ಲದು. ಶಕ್ತಿಯ ನಿರ್ಮಾಣವಾಗುವುದು ಮಾತುಗಳಿಂದಲ್ಲ, ಕೃತಿಯಿಂದ. ೬. ನಮ್ಮ ಪವಿತ್ರವಾದ ಹಿಂದು ಧರ್ಮ, ಹಿಂದು ಸಂಸ್ಕೃತಿಗಳು ಜಗತ್ತಿನಲ್ಲಿ ಗೌರವದಿಂದ ಚಿರಕಾಲ ಬಾಳಬೇಕೆಂಬುದೇ ನಮ್ಮ ಆಸೆ. ಆದರೆ, ನಮ್ಮ ಧರ್ಮ ಸಂಸ್ಕೃತಿಗಳು ಎಷ್ಟೇ ಶ್ರೇಷ್ಠವಾಗಿದ್ದರೂ, ಅವುಗಳನ್ನು ರಕ್ಷಿಸುವಷ್ಟು ಶಕ್ತಿ ನಮ್ಮ ಬಳಿ ಇಲ್ಲದಿದ್ದಲ್ಲಿ ಜಗತ್ತು ಅವುಗಳನ್ನು ಗೌರವಿಸುವುದಿಲ್ಲ. ೭. ನಾವು ಬಲಿಷ್ಠರಾಗಬಯಸುವುದು ಹಿಂಸೆ ಮಾಡುವುದಕ್ಕಲ್ಲ. ಆದರೆ, ಪ್ರಪಂಚದಲ್ಲಿನ ಹಿಂಸೆ, ಅತ್ಯಾಚಾರಗಳನ್ನು ಎಂದೆAದಿಗೂ ಇಲ್ಲದಂತೆ ಮಾಡುವುದಕ್ಕಾಗಿ. ೮. ತತ್ವ ಇರುವುದು ಪೊಳ್ಳು ಹರಟೆಗಾಗಿ ಅಲ್ಲ, • ವ್ಯವಹಾರದಲ್ಲಿ ತರುವುದಕ್ಕಾಗಿ. ತತ್ವದ ಆಚರಣೆಯೇ ವ್ಯವಹಾರ. ತತ್ವಕ್ಕೆ ಹೊಂದುವ ಬಾಳ್ವೆಯೇ ಧೈಯ ಪಥದಲ್ಲಿ ಮುಂದೆ ಸಾಗಲು, ಕೊನೆಯಲ್ಲಿ ಅಂತಿಮ ಗುರಿ ಸೇರಲು ಸಹ ನೆರವಾಗುವಂತಹದು. ೯. ತತ್ವಕ್ಕೆ ಮಹತ್ವ ಬರುವುದು ಅದನ್ನು ಪಟ್ಟಾಗಿ, ಛಲದಿಂದ ಎತ್ತಿ ಹಿಡಿದಾಗಲೇ. ತತ್ವವನ್ನು ಸಮರ್ಥಿಸುವವರು ಆಗಾಗ್ಗೆ ಏರಿಳಿತಕ್ಕೆ ಒಳಗಾಗಬಹುದು. ಆದರೆ ತತ್ವ ಮಾತ್ರ ಶಾಶ್ವತವಾದುದು. ೧೦. ಸಿದ್ಧಾಂತ ಮತ್ತು ವ್ಯವಹಾರಗಳ ಸಮನ್ವಯವನ್ನು ಕುಶಲತೆಯಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮನುಷ್ಯತ್ವ. ೧೧. ನಮ್ಮ ಮನಸ್ಸಿನ ದುರ್ಬಲತೆಯೇ ಎಲ್ಲಕ್ಕೂ ಹೆಚ್ಚು ಅಪಾಯಕಾರಿ. ಅದೇ ಎಲ್ಲಕ್ಕಿಂತ ದೊಡ್ಡ ದೋಷ. ನಮ್ಮ ಸಾಮರ್ಥ್ಯವನ್ನು ಅರಿತು, ಎಚ್ಚರಗೊಂಡು ನಾವು ಸಂಘಟಿತರಾದಾಗ ನಮ್ಮ ಶಕ್ತಿಯು ವಿರಾಟರೂಪ ತಾಳಬಲ್ಲದು. ಆಗ ಯಾವುದೇ ಕೆಲಸವೂ ನಮಗೆ ಅಸಾಧ್ಯ ಎನಿಸದು. ೧೨. ರಾಷ್ಟçದ ಜೀವನಕ್ರಮವನ್ನು ಸರಿಯಾಗಿ ನಡೆಸಬೇಕಾದರೆ ಅದಕ್ಕೆ ಅಸೀಮ ಪರಿಶ್ರಮ ಅಗತ್ಯ. ಪ್ರಯತ್ನವೇ ಇಲ್ಲದೆ ಸಿದ್ದಿ ಎಲ್ಲಿಯದು? ೧೩. ಮನುಷ್ಯನು ತನ್ನದೊಂದು ಚಿಕ್ಕ ಕುಟುಂಬವನ್ನು ಸಹ ಪ್ರಯತ್ನವಿಲ್ಲದೆ ನಿಭಾಯಿಸಲಾರನು. ಹಾಗಿದ್ದ ಮೇಲೆ ರಾಷ್ಟ್ರದ ವಿಶಾಲ ಜೀವನಕ್ರಮವು ನಮ್ಮ ಪ್ರಯತ್ನಗಳಿಲ್ಲದೆಯೇ, ತನ್ನಷ್ಟಕ್ಕೆ ಚಿರಂತನವಾಗಿ ನಡೆಯುತ್ತಾ ಹೋಗುವುದೆಂದು ಅಪೇಕ್ಷಿಸುವುದು ಮೂರ್ಖತನ, ವಿಶೇಷ ಪುರುಷಾರ್ಥವಿಲ್ಲದೆ ಹಿಂದು ರಾಷ್ಟçವನ್ನು ಅಮರಗೊಳಿಸುವುದು ಅಶಕ್ಯ. ೧೪. ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿಯೂ ಯಾರು ಕೆಲಸ ಮಾಡುತ್ತಾರೋ, ಅಂತಹರೇ ಕೊನೆಯಲ್ಲಿ ಗೆಲ್ಲುತ್ತಾರೆ. ಅಂತಹರ ಹೆಸರೇ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವುದು. ೧೫. ಕೇವಲ ಸದಾಶಯ ಇದ್ದ ಮಾತ್ರಕ್ಕೆ ಯಾವುದೇ ಕೆಲಸವಾಗದು. ಪ್ರತ್ಯಕ್ಷ ಪರಮಾತ್ಮನು ಸಹ ಹತ್ತು ಅವತಾರಗಳನ್ನು ಎತ್ತಿ ಮನುಷ್ಯಶಕ್ತಿಯ ಮೂಲಕವೇ ತನ್ನ ಕಾರ್ಯ ಸಾಧಿಸಬೇಕಾಯಿತು.