- ಡಾ ಸುಧಾಕರ ಹೊಸಳ್ಳಿ ಪ್ರತಿವರ್ಷ ಏಪ್ರಿಲ್ ೧೪ರ ದಿನ ಭಾರತ ಮಾತ್ರವಲ್ಲದೆ, ಜಗತ್ತು ಕೂಡ ವಿಶ್ವ ಜ್ಞಾನ ದಿನದ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತದೆ. ಎಷ್ಟೋ ಜನ ಸಾಮಾಜಿಕ ಸಮಾನತೆಗಾಗಿ ಸಮ- ಸಮಾಜದ ಸೃಷ್ಟಿಗಾಗಿ ಹೋರಾಟ ಮಾಡಿದ ಮಹಾಪುರುಷರ ಐತಿಹಾಸಿಕ ದಾಖಲೆ ನಮಗೆ ಸಿಗುತ್ತದೆ. ಆದರೆ, ಸಾಮಾಜಿಕ ಸಮಾನತೆ ಎಂಬುದನ್ನು ಸಾಂವಿಧಾನಿಕ ಹಕ್ಕನ್ನಾಗಿ ಮಾರ್ಪಡಿಸಿದ ಹಾಗೂ ಅಸಮಾನತೆಯ ಆಚರಣೆಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಗುರಿಪಡಿಸಿದ ಕಾರಣಕ್ಕಾಗಿ, ಅಂಬೇಡ್ಕರರನ್ನು ಸಮ-ಸಮಾಜದ ದಿಸೆಯಲ್ಲಿ ನಿಂತು ನೋಡುವ ಎಲ್ಲರೂ ತಮ್ಮೊಳಗೆ ಆತ್ಮಾರ್ಪಿಸಿಕೊಳ್ಳುತ್ತಾರೆ. ಇಂಥ ವಿಶೇಷ ದಿನದಂದು ಸಾಮಾಜಿಕ ಅಸಮಾನತೆ ಸಂಪೂರ್ಣ ನಾಶವಾಗಿದೆ, ಜಾತೀಯತೆ ಕಣ್ಮರೆಯಾಗಿದೆ ಎಂದು ಎದೆಯುಬ್ಬಿಸಿ ಹೇಳಲು ಸಾಧ್ಯವಾಗದೇ ಇರಬಹುದು, ಆದರೆ ಸಮ-ಸಮಾಜದ ನಿರ್ಮಾಣದ ಕಾರ್ಯ ಆಶಾದಾಯಕ ನೆಲಗಟ್ಟಿನಲ್ಲಿ ಸ್ಥಾಪಿತವಾಗಿರುವುದನ್ನೂ, ಅಸ್ಪೃಶ್ಯತೆ ಆಚರಣೆಗೆ ಬೆನ್ನು ತೋರಿಸುವವರ ಸಂಖ್ಯೆ ಹಿರಿದಾದದ್ದನ್ನು ಅವಿತಿಡಲು ಸಾಧ್ಯವಿಲ್ಲ. ದೇಶ ಇಂತಹ ಸಕಾರಾತ್ಮಕ ಪಥದಲ್ಲಿ ಸಾಗಲು ಸಾಧ್ಯವಾದದ್ದು, ಅಂಬೇಡ್ಕರರ ಸಾಂವಿಧಾನಿಕ ಶಕ್ತಿಯಿಂದ ಎಂಬುದು ನಿರ್ವಿವಾದ. ಈ ದೆಸೆಯಲ್ಲಿ ಶೋಷಿತರು, ಅಬಲರು, ತಳಸಮುದಾಯಗಳು ಈ ದಿನವನ್ನು ಅತ್ಯಂತ ಪೂಜ್ಯ ಭಾವನೆಯಿಂದ ಸ್ಮರಿಸುವ, ಆಚರಿಸುವ, ಮುಂದುವರಿದು ಪೂಜೆಗೈವ ಸಂಗತಿಗಳು ಕಾಣಸಿಗುತ್ತವೆ. ಇಂದು ಪ್ರಜ್ಞಾವಂತ ಮನಸ್ಥಿತಿಯುಳ್ಳ ಸರ್ವರೂ ಅಂಬೇಡ್ಕರರ ಸಮಾಜಪರ ಕೊಡುಗೆಗಳನ್ನು ಅಭಿನಂದಿಸಿರುತ್ತಾರೆ. ಹಾಗಾದರೆ, ಈ ದಿವಸ ಕೇವಲ ಸ್ಮರಣೆ ಮತ್ತು ಅಭಿನಂದನೆಗೆ ಸೀಮಿತವಾದರೆ, ಅದು ಅಂಬೇಡ್ಕರರಿಗೆ ಮಾಡುವ ಅಪಮಾನವೇ ಸರಿ. ಕಾರಣವಿಷ್ಟೇ, ಅಂಬೇಡ್ಕರರ ನೈಜ ಆಶಯಗಳನ್ನು ಅವರ ಇರುವಿಕೆಯ ನಂತರ ಹಿಮ್ಮುಖವಾಗಿ ಬಿಂಬಿಸುವ ಕೆಲಸ ನಿರಂತರವಾಗಿ ಸಾಗುತ್ತಲೇ ಬಂದಿದೆ. ಅಂಬೇಡ್ಕರರು ಸಮಾಜದ ಭಾಗವಾಗಬೇಕೆನಿಸಿದ್ದ ಅನೇಕ ಸಂಗತಿಗಳನ್ನು, ವಿರುದ್ಧ ದಿಕ್ಕಿನಲ್ಲಿ ತೋರುವ ಮೂಲಕ ಯುವ ಸಮುದಾಯದಲ್ಲಿ ಗೊಂದಲ ಮತ್ತು ಅಸತ್ಯದ ಅಂಬೇಡ್ಕರರನ್ನು ಅನುಸರಿಸುವಂತೆ ಅಪವ್ಯಾಖ್ಯಾನ ಮಾಡುತ್ತಲೇ ಬಂದಿದ್ದಾರೆ. ಅಖಂಡ ಭಾರತದ ಪ್ರತಿಪಾದಕ ಡಾ.ಬಿ.ಆರ್.ಅಂಬೇಡ್ಕರ್ ಭಾರತದ ಅಖಂಡತೆಯನ್ನು ಅನೇಕರು, ಪ್ರತಿಪಾದನೆ ಮಾಡಿದ್ದು ದಿಟವೇ ಆದರೂ, ಭಾರತ ಪ್ರಕೃತಿದತ್ತವಾಗಿಯೇ ಅಖಂಡವಾದುದ್ದು ಎಂದು ಸಾರಿದ ಮೊದಲಿಗ ಮತ್ತು ಏಕೈಕ ರಾಷ್ಟಿçÃಯವಾದಿ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ. ಆದಾಗಿಯೂ ಅಂಬೇಡ್ಕರ ರಾಷ್ಟçಪ್ರೇಮದ ಸಂಕಲ್ಪವನ್ನು ಮರೆಮಾಚುವ ಪ್ರಯತ್ನಗಳು, ನಡವಳಿಕೆಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿರುತ್ತವೆ. ಇದಕ್ಕೆ ನಿದರ್ಶನವೆಂಬAತೆ ಭಾರತದಲ್ಲಿ ಆಗಾಗ ನಡೆಯುವ ರಾಷ್ಟçದ ಸಾರ್ವಭೌಮತೆಗೆ ಧಕ್ಕೆಯನ್ನುಂಟುಮಾಡುವ ಹೋರಾಟಗಳಲ್ಲಿಯೂ ಅಂಬೇಡ್ಕರ್‌ರ ಭಾವಚಿತ್ರವನ್ನು ಬಳಸಲಾಗುತ್ತದೆ. ಇದು ವಿಪರ್ಯಾಸ ಅಷ್ಟೇ ಅಲ್ಲ - ಹಿಡನ್ ಅಜೆಂಡವು ಹೌದು. ಪ್ರಾದೇಶಿಕವಾದ, ಪ್ರತ್ಯೇಕತೆಯ ಅಮಲನ್ನು ಯುವ ಜನತೆಗೆ ವಾಮ ಮಾರ್ಗದ ಮೂಲಕ ತುಂಬುವ ಒಂದು ವರ್ಗ ಅದರ ಬಹುದೊಡ್ಡ ಅಸ್ತçವನ್ನಾಗಿ ಅಂಬೇಡ್ಕರರನ್ನು ಬಳಸುವುದು ಆಧುನಿಕ ಭಾರತದ ವೈರುಧ್ಯಗಳಲ್ಲಿ ಅಗ್ರಗಣ್ಯವಾದದ್ದು. ಅಪ್ರತಿಮ ರಾಷ್ಟçಭಕ್ತರಾದ ಅಂಬೇಡ್ಕರರನ್ನು ಒಡಕಿನ, ದೇಶ ವಿರೋಧ ಹೋರಾಟಗಳಲ್ಲಿ ಪ್ರೇರಕ ಶಕ್ತಿಯಂತೆ ಬಿಂಬಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಅಂಬೇಡ್ಕರರು ಸಮಾಜಕ್ಕೆ ಮುಟ್ಟಿಸಬೇಕೆಂದಿದ್ದ ಅಂತರಾಳದ ಸಂಗತಿಗಳನ್ನು ಅವಲೋಕಿಸುವುದು ಜರೂರು. ಅಂತಹ ಅಪವ್ಯಾಖ್ಯಾನಗಳನ್ನು ಸಂಶೋಧಿತ ಪರಾಮರ್ಶೆಯ ಮುಖಾಂತರ ಒಡೆದು ಉರುಳಿಸುವ ಹೊಣೆಗಾರಿಕೆಯು ರಾಷ್ಟಿçÃಯತೆಯ ಆರಾಧಕರ ಮೇಲೆಯೇ ಇದೆ. ಉದಾಹರಣೆಗೆ, ಸಕಲವು ರಾಷ್ಟç ಪ್ರಾಧಾನ್ಯತೆಯನ್ನೇ ಹೊಂದಬೇಕು. ಡಿಸೆಂಬರ್ ೧೭, ೧೯೪೬ರಂದು ತಮಗೆ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಲು ದೊರಕಿದ ಪ್ರಥಮ ಅವಕಾಶದಲ್ಲಿ ತಮ್ಮ ಪ್ರತಿಪಾದನೆಯುದ್ದಕ್ಕೂ ಭಾರತಕ್ಕೆ ರಚನೆಯಾಗುವ ಹೊಸ ಸಂವಿಧಾನ ಸರ್ವಪಥದಲ್ಲೂ ಭಾರತದ ಸ್ಥಿರತೆಯ ದೃಷ್ಟಿಕೋನವನ್ನು ತನ್ನ ಆದ್ಯತೆಯ ಚೌಕಟ್ಟನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದರು. ರಾಷ್ಟçದ ಗುರಿಯನ್ನು ಗುರುತು ಮಾಡುವಾಗ ವ್ಯಕ್ತಿಗಳ ಪಕ್ಷಗಳ ಗುರುತನ್ನು ಪರಿಗಣಿಸಬಾರದು, ಪ್ರತಿಯೊಂದಕ್ಕೂ ರಾಷ್ಟçವನ್ನೇ ಪ್ರಧಾನವಾಗಿ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಭಾರತವನ್ನು ವಿಭಜಿಸುವುದು ಎಂದರೆ ಕೇವಲ ವಿಭಜನೆ ಅಲ್ಲ, ಅದು ಭಾರತದ ಒಂದು ಭಾಗವನ್ನು ಕತ್ತರಿಸಿ ಕೊಡುವುದು ಎಂದರ್ಥ. ಹಾಗಾಗಿ ಭಾರತ ಐಕ್ಯವಾಗಿರಬೇಕೆ ಹೊರತು ಇಬ್ಭಾಗವಾಗಬಾರದು ಎಂದಿದ್ದರು. (ಆಧಾರ: ಸಂವಿಧಾನ ರಚನಾ ಸಭೆಯ ಚರ್ಚೆಗಳು ಪುಟ ಸಂಖ್ಯೆ ೧೫೦ ಸಂಪುಟ -೧) ೧೩ ಸಂವಿಧಾನ ರಚನೆಯ ಉಪ ಸಮಿತಿಗಳಲ್ಲಿ ಅಂಬೇಡ್ಕರರನ್ನು ನಿರ್ಲಕ್ಷಿಸಲಾಗಿತ್ತು. ಸಂವಿಧಾನ ರಚನೆಯ ಆರಂಭದ ಕಾಲಘಟ್ಟದಲ್ಲಿ ಅಂಬೇಡ್ಕರ್‌ರನ್ನು ಕೇವಲ ಅಧಿಕಾರ ರಹಿತ ಸದಸ್ಯನಾಗಿ ಮಾಡಿದ್ದಾಗಿಯೂ ಭಾವಿ ಸಂವಿಧಾನವು ಭಾರತೀಯತೆಯನ್ನು ಬಿಟ್ಟು ತನ್ನ ಚೌಕಟ್ಟು ಸೃಷ್ಟಿ ಮಾಡಿಕೊಳ್ಳದಂತೆ ಜಾಗೃತೆವಹಿಸಿದ್ದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಆಗಸ್ಟ್ ೨೯, ೧೯೪೭ಕ್ಕೆ ಅಂಬೇಡ್ಕರ್‌ರನ್ನು ಸಂವಿಧಾನ ರಚನಾ ಸಭೆಯು ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ದಿವಸಕ್ಕಿಂತ ಮುಂಚೆ ೨೬೫ ದಿನಗಳ ಸಂವಿಧಾನ ರಚನೆಯ ಪ್ರಾರಂಭದ ದಿನಗಳಲ್ಲಿ ರಚಿತವಾದ ೧೩ ಉಪ ಸಮಿತಿಗಳಲ್ಲಿ ಅಂಬೇಡ್ಕರರಿಗೆ ಅಧ್ಯಕ್ಷೀಯ ಸ್ಥಾನವಿರಲಿ, ಸದಸ್ಯರಾಗಿಯೂ ಅವಕಾಶ ನೀಡಿರಲಿಲ್ಲ. (ಆಧಾರ- ಸಂವಿಧಾನ ರಚನಾ ಸಭೆಯ ಚರ್ಚೆಗಳು, ಡಿಸೆಂಬರ್ ೨೩ /೧೯೪೬ ಪುಟ ಸಂಖ್ಯೆ, ೨೪೫, ೨೪೬, ೨೪೭ ಸಂಪುಟ -೧) ಆರ್ಯ ಅನಾರ್ಯ ಸಿದ್ಧಾಂತ ತಿರಸ್ಕರಿಸಿದ್ದರು. ಆರ್ಯ ಜನಾಂಗವು ಭಾರತದ ಮೇಲೆ ದಾಳಿ ಮಾಡಿ ಅಲ್ಲಿನ ಮೂಲ ನಿವಾಸಿಗಳನ್ನು ದಾಸ್ಯಕ್ಕೆ ದೂಡಿದರು ಎಂಬುದಕ್ಕೆ ಯಾವ ಆಧಾರವಿದೆ? ಆರ್ಯರು ಹೊರಗಿನಿಂದ ಬಂದವರು ಎನ್ನುವುದಕ್ಕೆ ಲವಲೇಶದ ಆಧಾರವೂ ಇಲ್ಲ, ಆರ್ಯ- ದ್ರಾವಿಡ ಸಿದ್ಧಾಂತವು ಎಂದು ಸತ್ತು ಹೋಗಬೇಕಿತ್ತು ಎಂದು ತಿಳಿಸಿದರು. (ಆಧಾರ-ಅಂಬೇಡ್ಕರರ ಅವರ ಬದುಕು ಬರೆಹಗಳು ಮತ್ತು ಭಾಷಣಗಳು, ಪುಟ ಸಂಖ್ಯೆ ೬೮, ಸಂಪುಟ- ೬) ಬೌದ್ಧ ಮತದಲ್ಲಿ ಇರುವ ಜಾತಿ ಮತ್ತು ಪಂಥಗಳನ್ನು ತಿರಸ್ಕರಿಸಿದ್ದರು. ಅಕ್ಟೋಬರ್ ೧೩ ೧೯೫೬ರ ಬೌದ್ಧ ಮತದ ಕುರಿತು ಅವರ ಭಾಷಣದಲ್ಲಿ “I ತಿiಟಟ ಚಿಛಿಛಿeಠಿಣ ಚಿಟಿಜ ಜಿoಟಟoತಿ ಣhe ಣeಚಿಛಿhiಟಿgs oಜಿ ಃuಜಜhಚಿ. I ತಿiಟಟ ಞeeಠಿ mಥಿ ಠಿeoಠಿಟe ಚಿತಿಚಿಥಿ ಜಿಡಿom ಣhe ಜiಜಿಜಿeಡಿeಟಿಣ oಠಿiಟಿioಟಿs oಜಿ ಊiಟಿಚಿಥಿಚಿಟಿಚಿ ಚಿಟಿಜ ಒಚಿhಚಿಥಿಚಿಟಿಚಿ, ಔuಡಿ ಃuಜಜhism is ಓಚಿvಚಿಥಿಚಿಟಿಚಿ.” ಎಂಬ ಸಂದೇಶ ಕೊಟ್ಟಿದ್ದರು. ಆರ್‌ಎಸ್‌ಎಸ್ ಶ್ಲಾಘಿಸಿದ್ದ ಅಂಬೇಡ್ಕರರು. ೧೨-೦೫-೧೯೩೯ ಪುಣೆಯ ಭಾವೆ ಶಾಲೆ ಆವರಣದಲ್ಲಿ, “ಈ ಶಿಬಿರದಲ್ಲಿ ನನಗೆ ನಿಮ್ಮ ನಡೆ-ನುಡಿ, ಶಿಸ್ತು, ಸಂಯಮ, ಕಾರ್ಯ, ಸಮಯ ಪಾಲನೆ ನೋಡಿ ಸೈನಿಕರ ನೆನಪಾಗಿದೆ. ಸಂಘದ ಕಾರ್ಯ ಆದರ್ಶವಾದದ್ದು” ಎಂದಿದ್ದರು. (ಆಧಾರ: ಅಂಬೇಡ್ಕರರೇ ಸ್ಥಾಪಿಸಿದ್ದ ಎಸ್ಸಿ ಫೆಡರೇಶನ್ ರಾಜಕೀಯ ಪಕ್ಷದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬಾಳಾಸಾಹೇಬ್ ಸಾಳುಂಕೆ ಅವರ ದಿನಚರಿ ಆಧರಿಸಿದ ಹಮಾರೇ ಸಾಹೇಬ್ ಪುಸ್ತಕ) ಜಾತ್ಯತೀತತೆಯನ್ನು ಸಂವಿಧಾನದ ಒಳಬಿಡಲು ಸಾಧ್ಯವಿಲ್ಲವೆಂದಿದ್ದರು. ಜಾತ್ಯಾತೀತತೆಯನ್ನು ಸಂವಿಧಾನದ ಭಾಗವಾಗಬೇಕೆಂದು ಪ್ರೊ ಕೆ.ಟಿ ಷಾ ಮಂಡಿಸಿದ್ದ ತಿದ್ದುಪಡಿಯನ್ನು ತಿರಸ್ಕರಿಸಿ ಜಾತ್ಯಾತೀತೆ ಎಂಬುದು ಪಶ್ಚಿಮಾತ್ಯ ಚಿಂತನೆ, ಇದು ಈ ನೆಲದ ಗುಣಕ್ಕೆ ಹೊಂದುವುದಿಲ್ಲ ಎಂದಿದ್ದರು. (ಆಧಾರ-೧೫ ನವಂಬರ್ ೧೯೪೮ರ ಸಂವಿಧಾನ ರಚನಾ ಸಭೆಯ ಚರ್ಚೆಗಳು, ಪುಟ ಸಂಖ್ಯೆ ೫೪೭, ೫೪೮ ಸಂಪುಟ- ೩) ಬಲಿಷ್ಠ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಆಧಾರ. “ಒಟ್ಟು ಭಾರತ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಆಧಾರಯುಕ್ತವಾದದ್ದು, ಅಧಿಕಾರಕ್ಕೆ ಬರುವ ಸರ್ಕಾರಗಳು ಈ ನಿಯಮವನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕು ಭಾರತವನ್ನು ಒಟ್ಟುಗೂಡಿಸುವಲ್ಲಿ ಈ ನಿಯಮದ ಪಾತ್ರ ಅವಿಸ್ಮರಣೀಯವಾದದ್ದು, ಈ ನಿಯಮಗಳಲ್ಲಿ ಯಾವುದೇ ಧರ್ಮದ ಹಂಗಿಲ್ಲದೆ ಹಿಂದೂ ಕಾನೂನುಗಳನ್ನು ಸೇರಿಸಿದ್ದೇನೆ. ಅವು ಹಿಂದೂ ಕಾನೂನುಗಳು ಅನ್ನುವುದಕ್ಕಿಂತ ಶ್ರೇಷ್ಠವಾದವು ಎನ್ನುವ ಕಾರಣಕ್ಕೆ ನಿಯಮದ ಭಾಗ ಮಾಡಿದ್ದೇನೆ” ಎಂದು ಸಾರಿದ್ದರು. (ಆಧಾರ ಸಂವಿಧಾನ ರಚನಾ ಸಭೆಯ ಚರ್ಚೆಗಳು ಪುಟ ಸಂಖ್ಯೆ ೭೩೦ ೭೩೩ ೭೩೯ ೭೪೧ ೭೪೨ ಸಂಪುಟ - ೩) ಹೀಗೆ ಅಂಬೇಡ್ಕರರ ವಾಸ್ತವದ ವ್ಯಾಖ್ಯಾನಗಳನ್ನು ಮುಖ ತಿರುಗಿಸಿ ನಿಲ್ಲಿಸುವ ಕೆಲಸಕ್ಕೆ, ಸಂಶೋಧನೆ ಎಂಬ ಅಸ್ತçದ ಮೂಲಕ ತಡೆ ಹೇರಬೇಕಿದೆ, ಆ ಮುಖಾಂತರ ನೈಜ ಅಂಬೇಡ್ಕರನ್ನು ಅವರ ತತ್ತ÷್ವಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯದೊಟ್ಟಿಗೆ ಅಂಬೇಡ್ಕರರಿಗೆ ಸಂಶೋಧನಾ ಗೌರವ ತಲುಪಿಸುವುದು ಪ್ರಾಜ್ಞರ ಗುರುತ್ತರ ಜವಾಬ್ದಾರಿ. ಮುಸ್ಲಿಮರು ಕ್ರಿಶ್ಚಿಯನ್ ನಿಂದ ಬಂದAತಹ ಬಹುದೊಡ್ಡ ಆಮಿಷಗಳನ್ನು ತಿರಸ್ಕರಿಸಿ ನಾನು ರಾಷ್ಟಾçಂತರ ಮಾಡುವ ಪ್ರಶ್ನೆಯೇ ಇಲ್ಲ. ನಾನು ಮೊದಲು ಭಾರತೀಯ ಕಡೆಗೂ ಭಾರತೀಯ ಎಂಬ ಹೆಮ್ಮೆಯ ಭಾವ ಪಸರಿಸಿದ್ದ ಅಂಬೇಡ್ಕರರನ್ನು ಯುವ ಸಮುದಾಯ ಅನುಸರಿಸುವಂತೆ, ಆ ಮೂಲಕ ರಾಷ್ಟçನಿರ್ಮಾಣದ ಕಾರ್ಯದಲ್ಲಿ ಸ್ವ-ತೊಡಗಿಕೊಳ್ಳುವಂತೆ, ಪ್ರೇರೇಪಿಸುವುದು ಅಂಬೇಡ್ಕರರಿಗೆ ಸಲ್ಲಿಸುವ ಗೌರವದ ಮಾದರಿ.