ಸಂಘ ಶುರುವಾಗಿದ್ದೇಕೆ? ಸಂಘ ಏನು ಮಾಡಿದೆ? ಒಬ್ಬ ವ್ಯಕ್ತಿ ನೂರು ವರ್ಷ ಬದುಕುವುದು ವಿಶೇಷವಾದರೂ, ಅಲ್ಲಲ್ಲಿ ಅಂತಹವರು ನೋಡಲು ಕಾಣಸಿಗುತ್ತಾರೆ. ಆದರೆ, ಒಂದು ಸಂಘಟನೆ ನೂರು ವರ್ಷದಲ್ಲಿ ತನ್ನತನವನ್ನು ಕಳೆದುಕೊಳ್ಳದೇ, ಬದಲಾದ ಕಾಲದಲ್ಲಿಯೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡು, ಹೊಸ ತಲೆಮಾರಿನ ಜನರನ್ನು ತನ್ನತ್ತ ಸೆಳೆಯುತ್ತ ಉಳಿಯುವುದು ಮಾತ್ರವಲ್ಲ, ಬೆಳೆಯುತ್ತಲೂ ಇದೆ ಎನ್ನುವುದು ವಿಶೇಷವೇ. ಇಂತಹ ಸಂಘಟನೆಗಳು ಕಾಣಸಿಗುವುದು ಬಹಳ ವಿರಳ. ಆರೆಸ್ಸೆಸ್ ಅಥವಾ ಸಂಘ ಎಂದೇ ಜನಜನಿತವಾದ ಈ ಸಂಘಟನೆಯೇ ‘ರಾಷ್ಟಿçÃಯ ಸ್ವಯಂಸೇವಕ ಸಂಘʼ. ೧೯೨೫ರ ವಿಜಯದಶಮಿಯಂದು ಪ್ರಾರಂಭವಾದ ಈ ಸಂಘಟನೆ ಈಗ ನೂರನೇ ವರ್ಷಕ್ಕೆ ಕಾಲಿಡುತ್ತಿದೆ. ಸಂಘವನ್ನು ಪ್ರಾರಂಭಿಸಿದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಮಹಾರಾಷ್ಟçದ ನಾಗಪುರದಲ್ಲಿ ಜನಿಸಿದವರು. ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವಾಗಲೇ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, ನಾಗಪುರಕ್ಕೆ ಹಿಂದಿರುಗಿದ ಮೇಲೆ ಕಾಂಗ್ರೆಸ್ಸಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಿದವರು. ಸ್ವಾತಂತ್ರ‍್ಯ ಹೋರಾಟದ ಕ್ರಾಂತಿಕಾರಿ ಮಾರ್ಗ ಹಾಗೂ ರಾಜಕೀಯ ಮಾರ್ಗ - ಇವೆರಡರಲ್ಲೂ ಭಾಗವಹಿಸಿದ ಅವರು, ಸ್ವಾತಂತ್ರö್ಯ ತಂದುಕೊಡಲು ಈ ಮಾರ್ಗಗಳು ಉಪಯುಕ್ತವಾದರೂ, ಸ್ವತಂತ್ರರಾಷ್ಟçವೊAದನ್ನು ಕಟ್ಟಲು ಇವುಗಳಿಂದ ಸಾಧ್ಯವಿಲ್ಲ ಎಂಬ ನಿಷ್ಕರ್ಷೆಗೆ ಬರಲು ಹೆಚ್ಚು ಕಾಲ ಹಿಡಿಯಲಿಲ್ಲ. ತಮ್ಮ ಅಸ್ಮಿತೆಯನ್ನೇ ಮರೆತ, ಆತ್ಮವಿಶ್ವಾಸವಿಲ್ಲದ, ಸ್ವಾರ್ಥಿಗಳಾದ, ದೇಶಭಕ್ತಿಯಿಲ್ಲದ ಜನರೇ ದೊಡ್ಡ ಸಂಖ್ಯೆಯಲ್ಲಿರುವ ಹಾಗೂ ಜಾತಿ-ಭಾಷೆಯ ಹೆಸರಲ್ಲಿ ಒಡೆದುಹೋದ ಸಮಾಜವೊಂದು ಹೇಗೆ ತಾನೇ ಒಂದು ಸ್ವಾವಲಂಬಿ ರಾಷ್ಟçವನ್ನು ನಿರ್ಮಿಸಲು ಸಾಧ್ಯ? ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು. ಹಾಗಾದರೆ, ಇದಕ್ಕೆ ಪರಿಹಾರವೇನು? ನಮ್ಮೆಲ್ಲ ಭೇದಗಳನ್ನು ಮೀರಿ ನಾವೆಲ್ಲ ಹಿಂದು ಎಂಬ ನೆಲೆಯಲ್ಲಿ ಸಮಾಜವನ್ನು ಸಂಘಟಿಸಬೇಕು. ನಮ್ಮ ಶ್ರೇಷ್ಠ ಪರಂಪರೆ, ಇತಿಹಾಸ, ಧರ್ಮ-ಸಂಸ್ಕೃತಿಗಳ ಬಗ್ಗೆ ನಮ್ಮ ಜನರಲ್ಲಿ ಹೆಮ್ಮೆ ಮೂಡಬೇಕು. ಪ್ರತಿಯೊಬ್ಬನಲ್ಲೂ ಅಚಲ ದೇಶಭಕ್ತಿ ಮೂಡಬೇಕು. ‘ದೇಶ ಮೊದಲುʼ ಎಂಬುದೇ ಸಮಾಜದ ಚಿಂತನೆಯಾಗಬೇಕು. ಆಗ ಮಾತ್ರ ನಮ್ಮ ರಾಷ್ಟçದ ಸರ್ವಾಂಗೀಣ ಉನ್ನತಿ ಸಾಧ್ಯ ಎಂಬುದು ಹೆಡಗೇವಾರರಿಗೆ ಸ್ಪಷ್ಟವಾಯಿತು. ಆದರೆ, ಅದು ಸಾಧ್ಯವಾಗುವುದು ಹೇಗೆ? ಸಮಾಜಪರಿವರ್ತನೆಗಾಗಿ ಕೆಲಸ ಮಾಡುವ ಸ್ವಯಂಸೇವಕ ನಿಸ್ವಾರ್ಥತೆ ಹಾಗೂ ಪ್ರಾಮಾಣಿಕತೆಯಿಂದ ಕೆಲವರು ಈ ಸಮಾಜಪರಿವರ್ತನೆಯ ಕೆಲಸವನ್ನು ಕೈಗೆತ್ತಿಕೊಳ್ಳದ ಹೊರತು, ಇದು ತಾನಾಗಿಯೇ ಆಗಲಾರದು ಎಂಬುದು ಅವರಿಗೆ ಸ್ಪಷ್ಟವಾಯಿತು. ಅಂತಹ ವ್ಯಕ್ತಿಗಳ ನಿರ್ಮಾಣಕ್ಕಾಗಿ ಸಂಘವನ್ನು ಪ್ರಾರಂಭಿಸಿದರು ಡಾ.ಹೆಡಗೇವಾರ್. ಹೀಗೆ ವ್ಯಕ್ತಿನಿರ್ಮಾಣವನ್ನೇ ಗುರಿಯಾಗಿಟ್ಟುಕೊಂಡು ಸಂಘದ ಶಾಖೆ ಪ್ರಾರಂಭವಾಯಿತು. ಶಾಖೆಯಲ್ಲಿ ಸಿಗುವ ಸಂಸ್ಕಾರದಿAದಾಗಿ, ಸಂಘಕ್ಕೆ ಬಂದ ಸಮಾನ್ಯ ವ್ಯಕ್ತಿಯೂ ಕೂಡ ಈ ದೇಶವನ್ನು ಪರಮವೈಭವದ ಸ್ಥಿತಿಗೆ ಕೊಂಡೊಯ್ಯಬೇಕು ಎಂಬ ಧ್ಯೇಯವನ್ನು ತನ್ನೆದುರು ಇರಿಸಿಕೊಳ್ಳುತ್ತಾನೆ. ಸ್ವಂತಕ್ಕಾಗಿ ಏನನ್ನೂ ಅಪೇಕ್ಷೆಪಡದೇ, ಪ್ರಸಿದ್ಧಿಯನ್ನು ಬಯಸದೇ, ತನ್ನದೆಲ್ಲವನ್ನೂ ಸಮಾಜಸೇವೆಗೆ ಸಮರ್ಪಿಸಿ ಈ ಗುರಿಯನ್ನು ಸಾಧಿಸುವ ಮಾನಸಿಕತೆ ಅವನಲ್ಲಿ ಮೂಡುತ್ತದೆ. ಒಮ್ಮೆ ಇಂತಹ ವ್ಯಕ್ತಿಗಳ ನಿರ್ಮಾಣವಾದರೆ, ಸಮಾಜವನ್ನು ಸಂಘಟಿಸುವ ಹಾಗೂ ಪರಿವರ್ತನೆ ತರುವ ಕೆಲಸವನ್ನು ಅವರು ಮಾಡುತ್ತಾರೆ ಎಂಬ ಕಲ್ಪನೆ ಡಾ.ಹೆಡಗೇವಾರ್ ಅವರದ್ದಾಗಿತ್ತು. ಅದು ನೂರಕ್ಕೆ ನೂರು ನಿಜ ಎಂಬುದು ಕಳೆದ ನೂರು ವರ್ಷಗಳಲ್ಲಿ ಸಾಬೀತಾಗಿದೆ. ಸಂಘದ ಧ್ಯೇಯ: ರಾಷ್ಟçದ ಪರಮವೈಭವ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ, ಸಹಬಾಳ್ವೆ, ಸಾಮರಸ್ಯ ಇರಬೇಕಾದರೆ ಸಮಾಜವ್ಯವಸ್ಥೆ ಧರ್ಮದ ಆಧಾರದಲ್ಲಿರಬೇಕು ಎಂಬುದು ಭಾರತದ ಚಿಂತನೆ. ಅದು ಹಳಿ ತಪ್ಪಿದಾಗ ಎಲ್ಲವೂ ಅಸ್ತವ್ಯಸ್ತವಾಗುತ್ತದೆ ಎನ್ನುವುದು ಅನುಭವಸಿದ್ಧವಾದ ವಿಚಾರ. ಧರ್ಮದ ಆಧಾರದ ಮೇಲೆ ಸಮಾಜ ನಿರ್ಮಾಣವಾದರೆ ಭಾರತವು ಪರಮವೈಭವ ಸ್ಥಿತಿಯನ್ನು ಸಹಜವಾಗಿಯೇ ತಲುಪುತ್ತದೆ ಎನ್ನುವುದು ಸಂಘದ ಕಲ್ಪನೆ. ಒಂದು ಕಾಲವಿತ್ತು, ಭಾರತ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಗುರುಸ್ಥಾನದಲ್ಲಿತ್ತು. ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಉನ್ನತಿಯನ್ನು ಸಾಧಿಸಿದ್ದ, ಸಂಘರ್ಷರಹಿತವಾದ ಸಮಾಜ ಇಲ್ಲಿತ್ತು. ಈ ಭಾರತೀಯ ಚಿಂತನೆಯನ್ನು ಹಾಗೂ ಅದನ್ನು ಅನುಷ್ಠಾನಗೊಳಿಸಿದ್ದ ಸಮಾಜವನ್ನು ಅಭ್ಯಾಸ ಮಾಡಲು ವಿದೇಶಗಳಿಂದಲೂ ಇಲ್ಲಿನ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಬರುತ್ತಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ಅಂತಹ ಉನ್ನತಸ್ಥಿತಿಯಲ್ಲಿದ್ದ ಸಮಾಜ ಇಂದಿನ ಅಧೋಗತಿಗಿಳಿಯಲು ಕಾರಣವೆಂದರೆ, ನಮ್ಮ ಮೇಲೆ ಎರಡು ಸಾವಿರ ವರ್ಷಗಳ ಕಾಲ ನಡೆದ ಪರಕೀಯರ ಧಾಳಿ ಹಾಗೂ ನಮ್ಮ ಮೈಮರೆವು. ಹಾಗಾಗಿ, ಪುನಃ ಸಮಾಜ ಜಾಗೃತಿ ಹಾಗೂ ಸಂಘಟನೆ ಮಾಡಿದರೆ, ಉಳಿದದ್ದೆಲ್ಲವೂ ತಾನಾಗಿಯೇ ಸರಿಯಾಗುತ್ತದೆ. ಏಕೆಂದರೆ, ಇಲ್ಲಿನ ಮೂಲವಿಚಾರದಲ್ಲಿ ಆ ಶಕ್ತಿಯಿದೆ. ಹಾಗಾಗಿ, ನಿರಂತರವಾಗಿ ಈ ಸಮಾಜ ಜಾಗೃತಿ ಹಾಗೂ ಸಂಘಟನೆಯ ಕೆಲಸವನ್ನು ಸಂಘದ ಸ್ವಯಂಸೇವಕರು ಮಾಡುತ್ತಾ ಬಂದಿದ್ದಾರೆ. ನೂರು ವರ್ಷದಲ್ಲಿ ಆರೆಸ್ಸೆಸ್ ಏನು ಮಾಡಿದೆ? ಈ ಹಾದಿಯಲ್ಲಿ ಆರೆಸ್ಸೆಸ್ ನೂರು ವರ್ಷಗಳ ಕಾಲ ನಿರಂತರವಾಗಿ ಕ್ರಮಿಸಿದೆ. ಹೆಚ್ಚು ಕಡಿಮೆ ಮೂರ್ನಾಲ್ಕು ತಲೆಮಾರಿನ ಜನ ಈ ರಾಷ್ಟçಯಜ್ಞದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಹಾಗಾದರೆ, ತನ್ನ ಗುರಿಯನ್ನು ಸಂಘವು ಸಾಧಿಸಿದೆಯೇ ಎಂದು ಕೇಳಿದರೆ, ಕೆಲವಷ್ಟು ಆಗಿದೆ ಇನ್ನೂ ಆಗಬೇಕಾದ್ದು ಬಹಳ ಇದೆ ಎನ್ನಬಹುದು. ಮೊದಲನೆಯದಾಗಿ, ಹಿಂದು ಎನ್ನಲು ಸಂಕೋಚಪಡುತ್ತಿದ್ದ ಕಾಲ ಹೋಗಿ, ಈಗ ಹಿಂದು ಎನ್ನಲು ಸಮಾಜ ಹೆಮ್ಮೆಪಡುವ ಸ್ಥಿತಿ ನಿರ್ಮಾಣವಾಗಿದೆ. ಹಿಂದು ಸ್ವಾಭಿಮಾನ ಎಲ್ಲೆಡೆ ಕಾಣಸಿಗುತ್ತಿದೆ. ದೇಶ ಧರ್ಮದ ವಿಷಯ ಬಂದಾಗ ರಾಜಿ ಮಾಡಿಕೊಳ್ಳಲು ನಾವು ಸಿದ್ಧರಿಲ್ಲ ಎಂಬುದನ್ನು ನಮ್ಮ ಸಮಾಜ ಯಾವಾಗಲೂ ತೋರಿಸುತ್ತಿದೆ. ಮೊಗಲರ, ಬ್ರಿಟಿಷರ ಆಳ್ವಿಕೆಯ ಪ್ರಭಾವದಿಂದಾಗಿ ಸಮಾಜದಲ್ಲಿದ್ದ ದಾಸ್ಯದ ಮನಃಸ್ಥಿತಿ ಬದಲಾಗಿ, ನಮ್ಮತನದ ಆಧಾರದ ಮೇಲೆಯೇ ಚಿಂತನೆ, ಆಚರಣೆಗಳು ಪ್ರಾರಂಭವಾಗಿವೆ. ಈ ಮಾನಸಿಕತೆಯ ನಿರ್ಮಾಣದಲ್ಲಿ ಸಂಘದ ಪಾತ್ರ ಬಹಳ ದೊಡ್ಡದಿದೆ ಎನ್ನುವುದನ್ನು ಹಲವು ಚಿಂತಕರು, ಸಮಾಜಶಾಸ್ತçಜ್ಞರು ಗುರುತಿಸಿದ್ದಾರೆ. ಎರಡನೆಯದು, ಜಾತಿಭೇದ, ತರತಮಭಾವದಲ್ಲಿ ಮುಳುಗಿದ್ದ ಹಿಂದುಸಮಾಜವನ್ನು ಸಂಘಟಿಸಲು ಬ್ರಹ್ಮ ಬಂದರೂ ಸಾಧ್ಯವಿಲ್ಲ ಎಂಬ ಸ್ಥಿತಿಯನ್ನು ಮೀರಿನಿಂತು ಇಂದು ಹಿಂದುಸಮಾಜ ಸಂಘಟಿತವಾಗುತ್ತಿದೆ ಎನ್ನುವುದೂ ಎಲ್ಲರ ಅನುಭವಕ್ಕೆ ಬಂದಿದೆ. ಬರೀ ನಾವಾಯಿತು, ನಮ್ಮ ಪಾಡಾಯಿತು ಎಂದು ಯೋಚಿಸುವ ಬದಲು, ದೇಶ-ಧರ್ಮಕ್ಕಾಗಿ ಕೆಲಸ ಮಾಡಬೇಕು ಎನ್ನುವ ಉತ್ಸಾಹ ಇಂದು ಎಲ್ಲೆಡೆ ತೋರುತ್ತಿದೆ. ಇಂತಹ ಹಿಂದೂ ಸ್ವಾಭಿಮಾನ, ರಾಷ್ಟಾçಭಿಮಾನದ ಜಾಗೃತಿಯ ಪರಿಣಾಮವಾಗಿ ರಾಜಕೀಯ, ಉದ್ಯಮ, ಶಿಕ್ಷಣ, ಕೃಷಿ, ಕಲೆ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತೀಯ ಚಿಂತನೆಯ ಆಧಾರದಲ್ಲಿ ಕೆಲಸ ನಡೆಯುತ್ತಿದೆ. ಹೀಗೆ, ಭಾರತ ತನ್ನತನವನ್ನು ಪುನಃ ಗಳಿಸಿಕೊಳ್ಳುವತ್ತ, ನಿಜ ಅರ್ಥದಲ್ಲಿ ಸ್ವಾತಂತ್ರö್ಯ ಗಳಿಸುವತ್ತ ಹೆಜ್ಜೆಯಿಡುತ್ತಿರುವುದನ್ನು, ಹಿಂದುಸಮಾಜ ಮತ್ತೆ ಪುಟಿದೇಳುತ್ತಿರುವುದನ್ನು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ. ಹಿಂದೆAದೂ ಇಲ್ಲದಷ್ಟು ಗೌರವ, ಮನ್ನಣೆಗಳು ಇಂದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ದೊರಕುತ್ತಿವೆ. ಇವೆಲ್ಲದರ ಹಿಂದೆ ಸಂಘವೊAದೇ ಕೆಲಸ ಮಾಡಿದೆ ಎಂದಲ್ಲದಿದ್ದರೂ, ಸಂಘದ ಸ್ವಯಂಸೇವಕರ ಶತಮಾನದ ಶ್ರಮವಿದೆ ಎಂಬುದನ್ನು ಖಂಡಿತಾ ಗುರುತಿಸಬಹುದು. ೧೯೪೭ರ ದೇಶವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನ ಹಾಗೂ ಭಾರತದಲ್ಲಿನ ಹಿಂದುಗಳ ರಕ್ಷಣೆ, ಗೋವಾ, ಹೈದರಾಬಾದ್ ಮುಕ್ತಿಸಂಗ್ರಾಮ, ೧೯೬೨ರ ಚೀನಾ ಯುದ್ಧದ ಸಂದರ್ಭದಲ್ಲಿ ಸೈನ್ಯದೊಂದಿಗೆ ಸಹಕಾರ, ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕ ನಿರ್ಮಾಣ, ೧೯೭೫ರ ತುರ್ತುಪರಿಸ್ಥಿತಿ ಹೇರಿಕೆಯಾದಾಗ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಆಂದೋಲನ, ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ದೇಶವ್ಯಾಪಿ ಆಂದೋಲನ, ರಾಮಸೇತು ರಕ್ಷಣೆಗಾಗಿ ಹೋರಾಟ, ಪ್ರವಾಹ, ಬರ, ಭೂಕಂಪ, ಅಪಘಾತದ ಸಂದರ್ಭಗಳಲ್ಲಿ ತುರ್ತು ಪರಿಹಾರ ಕಾರ್ಯಾಚರಣೆಯಿರಬಹುದು - ಎಲ್ಲ ಸಂದರ್ಭಗಳಲ್ಲಿ ಸಂಘ ಯಾವಾಗಲೂ ಸಮಾಜದ ತುರ್ತು ಅಗತ್ಯಕ್ಕೆ ಸ್ಪಂದಿಸಿದೆ, ನೇತೃತ್ವ ವಹಿಸಿದೆ, ಸಮಾಜದ ಜತೆ ನಿಂತಿದೆ. ಅಲ್ಲದೇ, ದೇಶದೆಲ್ಲೆಡೆ ೧.೫ ಲಕ್ಷಕ್ಕೂ ಹೆಚ್ಚು ಸೇವಾ ಪ್ರಕಲ್ಪಗಳನ್ನು ಸಂಘ ಹಾಗೂ ಸಂಘಪ್ರೇರಿತ ಸಂಘಟನೆಗಳು ನಡೆಸುತ್ತಿವೆ. ಸಾವಿರಾರು ಶಾಲೆಗಳನ್ನು ನಡೆಸುತ್ತಿವೆ. ಸ್ವಸಹಾಯ ಸಂಘಗಳೂ, ಆಸ್ಪತ್ರೆಗಳೂ, ಅನಾಥಾಲಯಗಳೂ, ವನವಾಸಿ ವಿದ್ಯಾರ್ಥಿನಿಲಯಗಳು - ಹೀಗೆ ಸಮಾಜದ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಚಟುವಟಿಕೆಗಳನ್ನು ಪ್ರಾರಂಭಿಸುತ್ತಲೇ ಇದೆ. ಸಮಾಜವೇ ಸಂಘವಾಗಲಿ ಎಂಬುದೇ ಸಂಘದ ಆಶಯ ಹೀಗೆ ಸಂಘ ಇಂದು ಒಂದು ಸಂಘಟನೆಯಾಗಿ ಮಾತ್ರ ಉಳಿದಿಲ್ಲ. ಒಂದು ಆಂದೋಲನವಾಗಿಯೇ ಬೆಳೆದಿದೆ. ಇಡೀ ಭಾರತೀಯ ಸಮಾಜ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಇದರಲ್ಲಿ ಭಾಗಿಯಾಗುತ್ತಿದೆ. ಅನೇಕ ಸಾಮಾಜಿಕ ನಾಯಕರು, ಸಂಘ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ. ಭಾರತದ ಪುನರುತ್ಥಾನದಲ್ಲಿ ತಮ್ಮದೇ ನೆಲೆಯಲ್ಲಿ ಸಕ್ರಿಯ ಪಾತ್ರವಹಿಸುತ್ತಿವೆ. ಸಂಘವೆನ್ನುವುದು ಸಮಾಜದಲ್ಲಿ ಒಂದು ಸಂಘಟನೆಯಾಗಬಾರದು, ಬದಲಾಗಿ ಸಂಪೂರ್ಣ ಸಮಾಜದ ಸಂಘಟನೆಯಾಗಬೇಕು ಎಂಬುದು ಸಂಘಸ್ಥಾಪಕರಾದ ಡಾ. ಕೇಶವ ಬಲಿರಾಮ ಹಡಗೇವಾರರ ಕಲ್ಪನೆಯಾಗಿತ್ತು. ಇಂದು ಸಂಘ ಆ ಹಾದಿಯಲ್ಲಿಯೇ ಮುನ್ನಡೆಯುತ್ತಿದೆ. ಸಮಾಜದ ಸಂಘಟನೆಯಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಸಂಘದ ಸಿದ್ಧಾಂತ ಅಥವಾ ಫಿಲಾಸಫಿ ಏನು ಎಂದು ಹಲವರು ಕೇಳುತ್ತಾರೆ. ಸಂಘವು ತನ್ನದೇ ಹೊಸ ಸಿದ್ಧಾಂತವನ್ನೇನೂ ಹುಟ್ಟುಹಾಕಿಲ್ಲ. ಹಿಂದು ಚಿಂತನೆಯೇ ಸಂಘದ ಚಿಂತನೆ, ಸಿದ್ಧಾಂತ ಎಂದೇ ಸಂಘದ ಕಾರ್ಯಕರ್ತರು ಉತ್ತರಿಸುತ್ತಾರೆ. ಹಿಂದುಧರ್ಮದ ಸಂಕೇತವಾಗಿ ಅನಾದಿಕಾಲದಿಂದಲೂ ಗೌರವಿಸಲ್ಪಡುತ್ತಿರುವ ಭಗವಾಧ್ವಜವೇ ಸಂಘದ ಸ್ವಯಂಸೇವಕರಿಗೆ ಗುರು! ಯಾವುದನ್ನು ಶ್ರೀರಾಮ-ಶ್ರೀಕೃಷ್ಣ, ಬುದ್ಧ-ಮಹಾವೀರ-ಗುರುನಾನಕರು, ಶಂಕರ-ರಾಮಾನುಜರು, ರಾಮಕೃಷ್ಣ-ವಿವೇಕಾನಂದರು, ಕಬೀರ-ಬಸವ, ಶಿವಾಜಿ-ರಾಣಾಪ್ರತಾಪ-ಕೃಷ್ಣದೇವರಾಯ ಮೊದಲಾದವರು ಮಾಡಿದರೋ ಅದೇ ಕೆಲಸದ ಮುಂದುವರೆದ ಭಾಗವಾಗಿ ಸಂಘ ತನ್ನನ್ನು ತಾನು ಈ ರಾಷ್ಟçಸೇವೆಯಲ್ಲಿ ತೊಡಗಿಸಿಕೊಂದಿದೆ. ಇದು ದೇವರ ಕೆಲಸ, ಇದಕ್ಕಾಗಿ ತಾನು ಕಟಿಬದ್ಧ ಎಂದೇ ಸಂಘದ ಸ್ವಯಂಸೇವಕ ಪ್ರತಿನಿತ್ಯ ಮಾಡುವ ಪ್ರಾರ್ಥನೆಯಲ್ಲಿ ಹೇಳುತ್ತಾನೆ. ಕಷ್ಟಕರವಾದ ಈ ಮಾರ್ಗವನ್ನು ಸ್ವಂತ ಇಚ್ಛೆಯಿಂದಲೇ ಆರಿಸಿಕೊಂಡಿರುವ ಸ್ವಯಂಸೇವಕ, ಈ ಕೆಲಸದ ನಡುವೆ ಬರುವ ಅಡ್ಡಿಆತಂಕಗಳನ್ನು ಯಶಸ್ವಿಯಾಗಿ ನಿವಾರಿಸಿಕೊಂಡು ರಾಷ್ಟçದ ಪರಮವೈಭವವನ್ನು ಸಾಧಿಸಲು ಅನುಗ್ರಹಿಸು ಎಂದು ಭಗವಂತನಲ್ಲಿ ಬೇಡುತ್ತಾನೆ. ತನ್ನನ್ನು ಯಾರೇ ವಿರೋಧಿಸಲಿ, ತಾನು ಮಾತ್ರ ಯಾರನ್ನೂ ವಿರೋಧಿಸುವವನಲ್ಲ. ಯಾರ ಬಗ್ಗೆಯೂ ದ್ವೇಷಭಾವನೆಯಿಲ್ಲ. ಸಮಾಜದ ಎಲ್ಲರ ಬಗ್ಗೆ ಪ್ರೇಮ, ಸ್ನೇಹಭಾವನೆಯೇ ಸ್ವಯಂಸೇವಕನ ಸಹಜಗುಣ. ಅದೇ ಅವನ ಶಕ್ತಿ. ಸಂಘ ಏನನ್ನೂ ಮಾಡುವುದಿಲ್ಲ, ಸ್ವಯಂಸೇವಕ ಎಲ್ಲವನ್ನೂ ಮಾಡುತ್ತಾನೆ ಎಂಬುದಾಗಿ ಡಾ.ಹೆಡಗೇವಾರ್ ಹೇಳುತ್ತಿದ್ದರಂತೆ. ಹಾಗೆ, ಇಂದು ಸಂಘದ ಸ್ವಯಂಸೇವಕರು ಎಲ್ಲೇ ಇರಲಿ, ಏನೇ ಮಾಡಲಿ, ‘ದೇಶ ಮೊದಲು, ಧರ್ಮ ಮೊದಲುʼ ಎಂಬುದೇ ಅವರ ಚಿಂತನೆ. ಅದಕ್ಕನುಗುಣವಾಗಿಯೇ ಅವರು ಕಾರ್ಯಪ್ರವೃತ್ತರಾಗುತ್ತಿದ್ದಾರೆ. ಈ ಚಿಂತನೆ ಸಮಾಜದೆಲ್ಲೆಡೆ ಪಸರಿಸಲಿ, ಸಮಾಜವೇ ಸಂಘವಾಗಲಿ, ಸಂಘ ಸಮಾಜದಲ್ಲಿ ಲೀನವಾಗಲಿ ಎಂಬುದೇ ಪ್ರತಿಯೊಬ್ಬ ಸ್ವಯಂಸೇವಕನ ಆಶಯ.