ಭಾರತದ ಸ್ವಾತಂತ್ರೊö್ಯÃತ್ತರ ಇತಿಹಾಸದಲ್ಲಿ ಈ ನಾಡಿನ ಸಾರ್ವಭೌಮತೆಗೆ, ಪ್ರಜಾಪ್ರಭುತ್ವಕ್ಕೆ, ಸಂವಿಧಾನದ ಆಶಯಗಳಿಗೆ ಒದಗಿದ ಬಹುದೊಡ್ಡ ಸಂಕಷ್ಟ ಇಂದಿರಾಗಾAಧಿಯವರ ಕಾಂಗ್ರೆಸ್ ಸರ್ಕಾರದಿಂದ ಜಾರಿಯಾದ ‘ಆಂತರಿಕ ತುರ್ತುಪರಿಸ್ಥಿತಿ’. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಕಾರ್ಯಾಚರಿಸುವ ಪ್ರಜಾಪ್ರಭುತ್ವವನ್ನು ಮೂಲೆಗುಂಪಾಗಿಸಲಾಯಿತು. ಯಾವ ಸರ್ಕಾರವನ್ನು ಇಡೀ ರಾಷ್ಟçದ ಜನಾದೇಶದÀ ಪ್ರತಿಫಲವೆನ್ನುತ್ತೇವೆಯೋ, ಜಾಗತಿಕವಾಗಿ ಭಾರತದ ಧ್ವನಿ ಎಂದು ಸಂಬೋಧಿಸುತ್ತೇವೆಯೋ ಅದೇ ಸರ್ಕಾರ ಅಧಿಕಾರದ ದಾಹದಿಂದಾಗಿ ಸರ್ವಾಧಿಕಾರಿ ಧೋರಣೆಯನ್ನು ತೋರಿದ್ದಲ್ಲದೇ ವಿಶ್ವದ ಮುಂದೆ ರಾಷ್ಟçವನ್ನು ತಲೆತಗ್ಗಿಸುವಂತೆ ಮಾಡಿತ್ತು. ಈ ವರ್ಷ ಈ ಕರಾಳ ಹೇರಿಕೆಗೆ, ಸರ್ವಾಧಿಕಾರಿ ಧೋರಣೆಗೆ ೫೦ ವರ್ಷ!
ಹಿನ್ನೆಲೆ: ೧೯೬೬ರಲ್ಲಿ ಲಾಲ್ ಬಹದ್ದೂರ್ ಶಾಸ್ತಿçà ಅವರು ತಾಷ್ಕೆಂಟ್ ಒಪ್ಪಂದಕ್ಕೆAದು ತೆರಳಿ ನಿಗೂಢವಾಗಿ ನಿಧನರಾದ ನಂತರ ಇಂದಿರಾಗಾAಧಿ ಪ್ರಧಾನಿಯಾದರು. ಅವರು ಪ್ರಧಾನಿಯಾಗಿ ಕೆಲವೇ ವರ್ಷಗಳಲ್ಲಿ ಇಂದಿರಾಗಾAಧಿ ಅವರ ನೇತೃತ್ವಕ್ಕೆ ಕಾಂಗ್ರೆಸ್‌ನ ಹಿರಿಯ ನೇತಾರರಲ್ಲಿ ಭಿನ್ನಮತವುಂಟಾಗಿ ಕಾಂಗ್ರೆಸ್ ಇಬ್ಭಾಗವಾಯಿತು. ಕೆಲವರು ಸಮತಾ ಕಾಂಗ್ರೆಸ್ ಕಟ್ಟಿಕೊಂಡರು. ಕಮ್ಯುನಿಷ್ಟ್ ಹಿನ್ನೆಲೆಯ ಬೆಂಬಲದೊAದಿಗೆ ಇಂದಿರಾಗಾAಧಿ ಅಧಿಕಾರವನ್ನು ಮುನ್ನಡೆಸಿದರು. ಇಂದಿರಾಗಾAಧಿ ಅವರ ನೇತೃತ್ವದ ಸರ್ಕಾರಕ್ಕೆ ಜಾಗತಿಕ ಮನ್ನಣೆ ದೊರೆತಿದ್ದು ೧೯೭೧ರಲ್ಲಿ ಬಾಂಗ್ಲಾ ವಿಮೋಚನೆಗೆ ಭಾರತ ಸಹಕಾರಕೊಟ್ಟು ಪಾಕ್ ವಿರುದ್ಧ ನಡೆದ ಯುದ್ಧದಲ್ಲಿ ಜಯಗಳಿಸಿದ ನಂತರ.
ಬಾಂಗ್ಲಾದ ಶೇಖ್ ಮುಜೀಬುರ್ ರಹಮಾನ್ ತನ್ನ ಅವಾಮಿ ಲೀಗ್ ಮೂಲಕ ಪಾಕ್ ವಿರುದ್ಧ ಹೋರಾಟ ಆರಂಭಿಸಿರುತ್ತಾರೆ. ಅವರಿಗೆ ಬೆಂಬಲವಾಗಿ ಭಾರತ ೧೯೭೧ರಲ್ಲಿ ಪಾಕ್ ವಿರುದ್ಧ ಹೋರಾಟ ಮಾಡಿ ಅತಿದೊಡ್ಡ ವಿಜಯವನ್ನು ಗಳಿಸುತ್ತೇವೆ. ೧೯೭೧ರಲ್ಲಿ ಡಿಸೆಂಬರ್ ೧೬ರಂದು ನಮ್ಮ ೧೬,೦೦೦ ಸೈನಿಕರು ೯೨೦೦೦ ಮಂದಿ ಪಾಕ್ ಸೈನಿಕರನ್ನು ವಶಕ್ಕೆ ತೆಗೆದುಕೊಂಡು ಗೆದ್ದರು. ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸಿ ನೂತನ ದೇಶವನ್ನು ರಚಿಸಲಾಯಿತು. ಇದರ ಬೆನ್ನಲ್ಲೇ ೧೯೭೨ರ ಚುನಾವಣೆಯಲ್ಲಿ ೫೧೮ ಲೋಕಸಭಾ ಕ್ಷೇತ್ರಗಳಲ್ಲಿ ೩೫೨ ಕ್ಷೇತ್ರಗಳನ್ನು ಕಾಂಗ್ರೆಸ್ ಸದಸ್ಯರು ಗೆದ್ದರು. ಆಗ ‘Iಟಿಜiಚಿ is Iಟಿಜiಡಿಚಿ, Iಟಿಜiಡಿಚಿ is Iಟಿಜiಚಿ’ ಎನ್ನುವ ಘೋಷಣೆಯೂ ಪ್ರಸಿದ್ಧಿ ಪಡೆಯಿತು. ದೇಶ – ವಿದೇಶಗಳಿಂದ ಹೊಗಳಿಕೆಗಳು ಬಂದಾಗ ಸಹಜವಾಗಿ ಇಂದಿರಾಗಾAಧಿಯವರಿಗೆ ಅಧಿಕಾರದ ಮದ ತಲೆಗೇರಿತು. ಜತೆಗೇ ಕಾಂಗ್ರೆಸ್‌ನ ಅನೇಕರು ಭ್ರಷ್ಟಾಚಾರಕ್ಕೆ ಇಳಿದರು.
೧೯೭೩ರಲ್ಲಿ ಗುಜರಾತ್‌ನಲ್ಲಿ ಸಮಾಜವಾದಿ ನಾಯಕ ಹಾಗೂ ರಾಷ್ಟಿçÃಯ ಸ್ವಯಂಸೇವಕ ಸಂಘದ ಹಿತೈಷಿಯಾಗಿದ್ದ ಜಯಪ್ರಕಾಶ್ ನಾರಾಯಣ್ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದರು. ಇದರ ಪರಿಣಾಮ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಚಿಮನ್‌ಭಾಯಿ ಪಟೇಲ್ ೧೯೭೩ರ ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಬೇಕಾಯಿತು, ಅಲ್ಲಿ ರಾಷ್ಟçಪತಿ ಆಡಳಿತ ಬಂತು. ಬಿಹಾರದಲ್ಲಿಯೂ ಪ್ರತಿಭಟನೆ ಕಾವೇರಿತು. ಈ ಸಂದರ್ಭದಲ್ಲಿ ಅನೇಕರು ಇಂದಿರಾಗಾAಧಿಗೆ “ವಿರೋಧ ಪಕ್ಷಗಳನ್ನು ಈಗಲೇ ಮಟ್ಟಹಾಕಬೇಕು” ಎಂದು ಸಲಹೆ ನೀಡಿದರು. ಆದರೆ ಕೆಲವೇ ದಿನಗಳಲ್ಲಿ ನಂತರ ಸ್ವತಃ ಇಂದಿರಾಗಾAಧಿ ಮೇಲೆ ೧೯೭೧ರ ಚುನಾವಣೆಯಲ್ಲಿ ಭ್ರಷ್ಟಾಚಾರ ಮಾಡಿದ ಆರೋಪದಿಂದ ಅಲಹಾಬಾದ್ ಹೈಕೋರ್ಟ್ನಲ್ಲಿ ಕೇಸು ದಾಖಲಾಯಿತು.
ತುರ್ತುಪರಿಸ್ಥಿತಿ ಹೇರಿಕೆ: ೧೯೭೫ ಜೂನ್ ೧೨ಕ್ಕೆ ಅಲಹಾಬಾದಿನ ಹೈಕೋರ್ಟ್ ಇಂದಿರಾಗಾAಧಿ ಭ್ರಷ್ಟಾಚಾರ ಮಾಡಿದ್ದು ಹೌದು ಎಂದು ತೀರ್ಪಿಟ್ಟಿತ್ತು. ಅದೇ ದಿನ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಆಗ ಇಂದಿರಾಗಾAಧಿಯವರು ನ್ಯಾಯಾಂಗ ಬಂಧನದಿAದ ತಪ್ಪಿಸಿಕೊಳ್ಳಲು ಮಾಡಿದ ಯೋಜನೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಬೇಕು ಎನ್ನುವುದಾಗಿತ್ತು. ೧೯೭೫ ಜೂನ್ ೨೫ ರಾತ್ರಿ ಇಂದಿರಾಗಾAಧಿ ಅವರು ನೇರವಾಗಿ ರಾಷ್ಟçಪತಿಗಳಾಗಿದ್ದ ಡಾ|ಫಕ್ರುದ್ದೀನ್ ಅಲಿ ಅಹಮ್ಮದ್ ಅವರಿಂದ ತುರ್ತು ಪರಿಸ್ಥಿತಿ ಹೇರಲು ಒಪ್ಪಿಗೆ ಪಡೆದು ಜೂನ್ ೨೬ ಬೆಳಗ್ಗೆ ಇಡೀ ದೇಶ ಎರಡನೇ ಬಾರಿಗೆ ಗುಲಾಮಗಿರಿಗೆ ಮರಳುವಂತೆ ಮಾಡಿದರು. ಪತ್ರಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು, ಮುದ್ರಣಕ್ಕಿಂತ ಮುಂಚೆ ಸರಕಾರಿ ಅಧಿಕಾರಿಗಳ ಅನುಮತಿ ಪಡೆಯಬೇಕಿತ್ತು, ವಿರೋಧ ಪಕ್ಷದ ನಾಯಕರುಗಳಿಂದ ಹಿಡಿದು, ಅಸಂವಿಧಾನಿಕ ನಡೆಯನ್ನು ಪ್ರಶ್ನಿಸಿದ ಸಾಮಾನ್ಯರವರೆಗೆ ಎಲ್ಲರನ್ನೂ ಬಂಧಿಸಲಾಯಿತು. ಇಂದಿರಾಗಾAಧಿಗೆ ಅನೇಕರು “ಇದು ಸರಿಯಲ್ಲ” ಎಂದು ಸಲಹೆಕೊಟ್ಟರೂ ಅವರು ಕೇಳಲಿಲ್ಲ. ನನ್ನಲ್ಲಿ ಸೈನ್ಯ, ಪೊಲೀಸ್ ಇದೆ ಎಂಬ ಅಹಂಕಾರ ಮೂಡಿತ್ತು. ಯಾರೂ ಮಾತನಾಡುವಂತಿರಲಿಲ್ಲ.
ಆರೆಸ್ಸೆಸ್ ಮೇಲೆ ನಿರ್ಬಂಧ: ಜುಲೈ ೪ ರಂದು ಆರೆಸ್ಸೆಸ್‌ಗೆ ನಿರ್ಬಂಧ. ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರನ್ನು ಪುಣೆಯ ಯರವಾಡ ಜೈಲಿಗೆ ಹಾಕಿದರು. ಆದರೆ ತರುಣ ಸ್ವಯಂಸೇವಕರು, ಕಾರ್ಯಕರ್ತರು ಅವರೆಲ್ಲರಿಗೂ ಅನಿಸಿದ್ದು ಇದು ದುರದೃಷ್ಟಕರ ಬೆಳವಣಿಗೆ. ಇದರ ವಿರುದ್ಧ ಸಮಾಜದಲ್ಲಿ ನೇತೃತ್ವ ವಹಿಸಿ ಯಾವ ಕಾರಣಕ್ಕೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೯೭೪ರಿಂದಲೇ ಲೋಕ ಸಂಘರ್ಷ ಸಮಿತಿ, ‘ಅiಣizeಟಿs ಜಿoಡಿ ಆemoಛಿಡಿಚಿಛಿಥಿ’ ದೇಶದಲ್ಲಿ ರಚನೆಯಾಯಿತು. ಅದರ ಪ್ರಮುಖರಾಗಿದ್ದ ಜಯಪ್ರಕಾಶ್ ನಾರಾಯಣರನ್ನೂ ಜೈಲಿಗೆ ಹಾಕಲಾಯಿತು. ಆಗ ಅವರು ಸಂಘದ ಹಿರಿಯ ಕಾರ್ಯಕರ್ತರು, ಸಂಸದ ನಾನಾಜಿ ದೇಶ್‌ಮುಖ್ ಅವರಿಗೆ ‘ಲೋಕ ಸಂಘರ್ಷ ಸಮತಿಯ ಕಾರ್ಯದರ್ಶಿಯಾಗಿ ನೀವು ಜವಾಬ್ದಾರಿ ತೆಗೆದುಕೊಂಡು, ಚಳುವಳಿ ರೂಪಿಸಿ’ ಎಂದು ಪತ್ರ ಬರೆದರು.
ನಂತರ ಇಡೀ ದೇಶದಲ್ಲಿ ಅಭೂತಪೂರ್ವ ಹೋರಾಟ. ಒಟ್ಟು ೬ ರೀತಿಯ ಹಂತಗಳಲ್ಲೂ ಸಂಘರ್ಷ.
೧. ಅಖಿಲ ಭಾರತೀಯ ಮಟ್ಟದಲ್ಲಿ ಯೋಜನೆ.
೨. ಹೋರಾಟಕ್ಕೆ ಬೇಕಾದ ಭೂಗತ ಸಾಹಿತ್ಯ ರಚನೆ
೩. ರಾಜಕೀಯ ಪ್ರಮುಖರ ಜಾಗೃತಿಗೆ ವ್ಯವಸ್ಥೆ
೪. ಸಮಾಜದ ಜಾಗೃತಿಗೆ ವ್ಯವಸ್ಥೆ
೫. ಹೋರಾಟಗಾರರಿಗೆ ಜೈಲಾದರೆ ಅವರ ಮನೆಯ ಪರಿಸ್ಥಿತಿ ಕುರಿತು ಕಾಳಜಿ.
೬. ನಿಧಿ ಸಂಗ್ರಹ
ಲೋಕ ಸಂಘರ್ಷ ಸಮಿತಿಯ ಹೆಸರಲ್ಲಿ ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ರೂಪಿಸಿದ್ದು ಸಂಘದ ಕಾರ್ಯಕರ್ತರು. ಆರೆಸ್ಸೆಸ್ ಅನ್ನು ವಿರೋಧಿಸುತ್ತಿದ್ದವರೂ ಬೆಂಬಲ ನೀಡಿದರು. ಗೋಕಾಕ್‌ನ ಸ್ವಾತಂತ್ರö್ಯ ಹೋರಾಟಗಾರ ಅಣ್ಣು ಗುರೂಜಿ ತಮ್ಮ ಆತ್ಮ ಚರಿತ್ರೆಯಲ್ಲಿ ಹೀಗೆ ಉಲ್ಲೇಖಿಸುತ್ತಾರೆ “ತುರ್ತುಪರಿಸ್ಥಿತಿ ವೇಳೆ ಹೋರಾಟ ಮಾಡಬೇಕೆಂದು ಅವರ ಊರಿನಲ್ಲಿದ್ದ, ಸರ್ಕಾರದ ಪಿಂಚಣಿ ಪಡೆಯುತ್ತಿದ್ದ ೩೦೦ ಮಂದಿ ಹೋರಾಟಗಾರರನ್ನು ಕೇಳಿಕೊಂಡೆ. ಆದರೆ ಪಿಂಚಣಿ ರದ್ದಾಗುವ ಭಯದಿಂದ ಒಬ್ಬರೂ ಬರಲಿಲ್ಲ. ನನ್ನ ಜತೆ ಹೆಗಲು ಕೊಟ್ಟು ದುಡಿದವರು ಆರೆಸ್ಸೆಸ್ ಸ್ವಯಂಸೇವಕರು” ಎಂದರು.
ಅನೇಕರು ನೌಕರಿ ಕಳೆದುಕೊಂಡರು, ಪೊಲೀಸರ ದೌರ್ಜನ್ಯಕ್ಕೆ ಕೈ-ಕಾಲು ಕಳೆದುಕೊಂಡರು. ಈ ದೇಶವನ್ನು ನಿಜವಾಗಿ ಪ್ರೀತಿಸುವವರು ಆರೆಸ್ಸೆಸ್‌ನವರು ಎಂಬ ಭಾವ ಬಲಗೊಂಡಿತು. ಪಂಜಾಬ್‌ನಲ್ಲಿ ಅಕಾಲಿದಳ ತುರ್ತು ಪರಿಸ್ಥಿತಿಯ ವಿರುದ್ಧ ದೇಶಾದ್ಯಂತ ಏಕಕಾಲಕ್ಕೆ ಸತ್ಯಾಗ್ರಹವನ್ನು ನವೆಂಬರ್ ೧೪ ರಂದು ಏರ್ಪಡಿಸಿದರು. ಮೊಬೈಲ್ ಇಲ್ಲದ ಕಾಲದಲ್ಲಿ, ಹೊರಗಡೆ ಓಡಾಡಿದರೂ ಅರೆಸ್ಟ್ ಮಾಡುವ ಭೀತಿಯಿದ್ದ ಸಮಯದಲ್ಲಿ, ಇಡೀ ದೇಶದಲ್ಲಿ ತಾಲೂಕಿನವರೆಗೆ ಪೊಲೀಸ್‌ಗೆ ಗೊತ್ತಾಗದೇ ಸತ್ಯಾಗ್ರಹದ ಮಾಹಿತಿ ಹೋಯಿತು. ನವೆಂಬರ್ ೧೪ರಂದು ಏಕಕಾಲಕ್ಕೆ ಎಲ್ಲಾ ಕಡೆಗಳಲ್ಲಿ ಬಹುತೇಕ ಎಲ್ಲಾ ನಾಯಕರು ಸೇರಿ ಚಳುವಳಿ ಆರಂಭಿಸಿದರು. ಪಂಜಾಬಿನ ಅಕಾಲಿದಳ ಎಲ್ಲಿಯವರೆಗೆ ತುರ್ತು ಪರಿಸ್ಥಿತಿ ಹೋಗುವುದಿಲ್ಲವೋ ಅಲ್ಲಿಯವರೆಗೆ ಪ್ರತಿನಿತ್ಯ ಹೋರಾಟದ ನಿಶ್ಚಯ ಮಾಡಿದರು.
ಇಡೀ ದೇಶದಲ್ಲಿ ಒಂದೇ ಒಂದು ಕಡೆ ಪೊಲೀಸರಿಗೆ ವಿರೋಧ ನೀಡದೆ ಶಾಂತಯುತವಾಗಿ ಸತ್ಯಾಗ್ರಹ ಮಾಡಿದರು. ಮಾಧವ ರಾವ್ ಮುಳೆ, ಮೋರೋಪಂತ ಪಿಂಗಳೆ, ಭಾವುರಾವ್ ದೇವರಸ್ ಇಡೀ ದೇಶದ ಎಲ್ಲಾ ಪ್ರಮುಖರ ಜತೆ ಸಂಪರ್ಕ ಸಾಧಿಸಿದರು. ಅತ್ಯಂತ ನೋವಿನ ಪರಿಸ್ಥಿತಿಯಲ್ಲೂ ಮನಸ್ಸಿನ ಸಂಕಲ್ಪ ಉಳಿಸಿಕೊಂಡರು. ಸ್ವಯಂಸೇವಕರ ಮನೆಯ ತಾಯಂದಿರೂ ಪೊಲೀಸರಿಂದ ಬೈಸಿಕೊಂಡರೂ, ಬಡಿಸಿಕೊಂಡರೂ ಪೊಲೀಸ್ ಎದುರು ಯಾವುದೇ ರೀತಿ ಮಾಹಿತಿ ಬಿಟ್ಟುಕೊಡಲಿಲ್ಲ.
ತುರ್ತುಪರಿಸ್ಥಿತಿ ಹೇರಿಕೆಗೆ ವಿದೇಶಗಳಲ್ಲೂ ವಿರೋಧ: ಅಮೆರಿಕಾ, ಬ್ರಿಟನ್, ಜರ್ಮನಿ ಮುಂತಾದ ರಾಷ್ಟçಗಳಲ್ಲೂ ಭಾರತೀಯರ ಪ್ರಜಾಸತ್ತಾತ್ಮತೆಯನ್ನು ಉಳಿಸುವುದಕ್ಕಾಗಿ ಅನೇಕ ಸಂಸ್ಥೆಗಳು, ಪತ್ರಿಕೆಗಳು ಪ್ರಯತ್ನಿಸಿದವು. ಅಮೇರಿಕಾದಲ್ಲಿ ಸ್ಥಾಪನೆಯಾದ ‘ಇಂಡಿಯನ್ಸ್ ಫಾರ್ ಡೆಮಾಕ್ರಸಿ’ ಮತ್ತು ಇಂಗ್ಲೆAಡಿನ ‘ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ’ ಪರಸ್ಪರ ಸಂಪರ್ಕವನ್ನಿಟ್ಟುಕೊAಡು ವಿಶ್ವದ ಇತರೆ ರಾಷ್ಟçಗಳಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಿದರು. ನೋಡನೋಡುತ್ತಿದ್ದಂತೆ ೮೨ ರಾಷ್ಟçಗಳಲ್ಲಿನ ಭಾರತೀಯರ ಜೊತೆ ಇವು ಸಂಪರ್ಕ ಸಾಧಿಸಿತ್ತು.
ತುರ್ತುಪರಿಸ್ಥಿತಿ ಮತ್ತು ಕರ್ನಾಟಕ: ಕರ್ನಾಟಕದಲ್ಲಿ ೧೮ ತಿಂಗಳ ಒಳಗಡೆ ಕಹಳೆ ಸೇರಿ ೫೭೭ ಪ್ರಕಟಣೆಗಳನ್ನು ಕಾರ್ಯಕರ್ತರು ತಂದರು. ೫೭ ಕಡೆಗಳಲ್ಲಿ, ೧೮ ತಿಂಗಳಲ್ಲಿ ಮುದ್ರಣವಾಗಿದ್ದು ೩೨ ಲಕ್ಷ ಪ್ರತಿಗಳು. ರಾಜ್ಯದಲ್ಲಿ ೧೭೦೦೦ ಜೈಲು ಸೇರಿದರೆ, ದಕ್ಷಿಣ ಕನ್ನಡ ಜಿಲ್ಲೆಯವರೇ ೧೧,೦೦೦ ಮಂದಿ ಇದ್ದರು. ಎಲ್ಲರೂ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ೧೯೭೬ರ ಅಂತ್ಯದಲ್ಲಿ ಇಂದಿರಾಗಾAಧಿ ಅವರಿಗೆ ಚುನಾವಣೆಯಲ್ಲಿ ಗೆದ್ದರೆ ಮತ್ತೆ ತನ್ನನ್ನು ತಡೆಯುವವರಾರೂ ಇಲ್ಲ ಎಂದನಿಸಿತು. ೧೯೭೭ ಫೆ.೧೮ಕ್ಕೆ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಆಗ ಸಂಘದ ಕಾರ್ಯಕರ್ತ ಶಕ್ತಿ ಇಡೀ ದೇಶದಲ್ಲಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಿದರು. ಜನಸಂಘ ಮತ್ತು ಇನ್ನಿತರ ರಾಜಕೀಯ ಪಕ್ಷಗಳು ‘ಜನತಾ ಪಕ್ಷ’ದ ಹೆಸರಿನಲ್ಲಿ ಒಂದಾಗಿ ಕಾಂಗ್ರೆಸ್ ಅನ್ನು ಎದುರಿಸಿತು. ಎಲ್ಲದರ ಪರಿಣಾಮವಾಗಿ ಮಾರ್ಚ್ ೨೭, ೧೯೭೭ ಫಲಿತಾಂಶ ಪ್ರಕಟವಾಗಿ ಇಂದಿರಾಗಾAಧಿ ಅವರಿಗೆ ಹೀನಾಯ ಸೋಲಾಯಿತು. ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತು. ಒಂದು ಕಾಲು ಲಕ್ಷ ಜನ ಸ್ವಯಂಸೇವಕರನ್ನು ಬಂಧಿಸಲಾಗಿತ್ತು.
ಆಂತರಿಕ ತುರ್ತುಪರಿಸ್ಥಿತಿಯ ನಿರ್ಧಾರದ ವಿರುದ್ಧ ಮಾತನಾಡಿದ ಕಾರಣಕ್ಕಾಗಿ ಕರ್ನಾಟಕದಲ್ಲಿ ಪೊಲೀಸರ ಲಾಠಿಪ್ರಹಾರದಿಂದ ಗಾಯಗೊಂಡ ಸತ್ಯಾಗ್ರಾಹಿಗಳು, ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯಕ್ಕೆ ತುತ್ತಾದವರ ಒಟ್ಟು ಸಂಖ್ಯೆ ೧೯೧೭. ದೇಹದ ಯಾವುದಾದರೂ ಒಂದು ಅಂಗ ಶಾಶ್ವತವಾಗಿ ಊನವಾದವರ ಸಂಖ್ಯೆ ನೂರಕ್ಕೂ ಹೆಚ್ಚಿದೆ. ಅಧಿಕಾರದ ದಾಹಕ್ಕೆ ಬಲಿಯಾದವರ ಸಂಖ್ಯೆಯೂ ಹಲವಿದೆ. ತಮ್ಮ ಸತ್ಯಾಗ್ರಹದಿಂದಾಗಿ, ನ್ಯಾಯಕ್ಕಾಗಿ ಮಾಡಿದ ಹೋರಾಟದಿಂದಾಗಿ ಅವರ ಮನೆಯವರೂ ಕಷ್ಟಪಡುವಂತಾಗಿರುವುದನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡವರೂ, ಹೃದಯಾಘಾತಕ್ಕೆ ಒಳಗಾದವರೂ ಅನೇಕರು. ಇವರೆಲ್ಲರ ತ್ಯಾಗ ಮತ್ತು ಬಲಿದಾನದಿಂದ ೧೯೭೭ರ ಮಾರ್ಚ್ ೨೧ರ ಬೆಳಗ್ಗೆ ತುರ್ತುಪರಿಸ್ಥಿತಿ ಮುಕ್ತಾಯಗೊಂಡಿತು.



