ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ| ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರುವೇ ನಮಃ|| ಅವಿಭಾಜ್ಯ, ಅನಂತ, ಕಾಲಾತೀತ, ದೈವಿಕ ಮತ್ತು ಇಡೀ ವಿಶ್ವವನ್ನು ವ್ಯಾಪಿಸಿರುವ ಸತ್ಯವನ್ನು ನನಗೆ ಬಹಿರಂಗಪಡಿಸಿದ ಗುರುವಿಗೆ ನಮನ ಎನ್ನುವುದು ಈ ಮೇಲಿನ ಶ್ಲೋಕದ ಅರ್ಥ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ‘ಗುರು’ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುವವನು ಗುರು. ಆ ಹಿನ್ನೆಲೆಯಲ್ಲಿಯೇ ರಾಷ್ಟçಕವಿ ಕುವೆಂಪು ಅವರು ಕೂಡ ‘ಮುಂದೆ ಗುರಿಯಿರಬೇಕು, ಹಿಂದೆ ಗುರುವಿರಬೇಕು’ ಎಂದು ಹೇಳಿದ್ದಾರೆ. ಭಾರತೀಯ ಪರಂಪರೆಯಲ್ಲಿ ‘ಗುರು’ವಿಗೆ ವಿಶೇಷವಾದ ಸ್ಥಾನಮಾನವನ್ನು ನೀಡಿದ್ದೇವೆ. ‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂದು ದಾಸಶ್ರೇಷ್ಠರು ತಿಳಿಸಿದ್ದಾರೆ. ಗುರು: ಹಿಂದು ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಮಹತ್ವದ್ದು. ಗುರು ಪದದ ಅರ್ಥವೇ ಮಹಾನ್ ಎಂದು. ಹಾಗಾಗಿ ಗುರುವನ್ನು ಭಗವಂತನಿಗೆ ಸಮಾನ ಎಂದು ನಮ್ಮ ಪೂರ್ವಜರು ಭಾವಿಸಿ, ಗುರುವಿನಲ್ಲಿ ಬ್ರಹ್ಮ, ವಿಷ್ಣು ಮಹೇಶ್ವರರನ್ನು ಕಂಡಿದ್ದಾರೆ. ವ್ಯಕ್ತಿಯ ಜೀವನದಲ್ಲಿನ ಕತ್ತಲೆಯನ್ನು ತೊಡೆದುಹಾಕುವವನು ಗುರು, ಜ್ಞಾನವೆಂಬ ಔಷಧಿಯಿಂದ ಅಜ್ಞಾನವನ್ನು ಹೋಗಲಾಡಿಸುವವನೇ ಗುರು - ಹೀಗೆ ನಮ್ಮ ಪೂರ್ವಜರು ಗುರುವನ್ನು ವರ್ಣಿಸಿದ್ದಾರೆ. ಆಕಸ್ಮಿಕ ಮರಣ ಮತ್ತು ನಿಶ್ಚಿತ ಮರಣದ ಮಧ್ಯದ ಬದುಕಿನ್ನು ಶ್ರೇಷ್ಠವಾಗಿಸಲು ವ್ಯಕ್ತಿಯ ಬದುಕಿನಲ್ಲಿ ಗುರಿ ಇರಬೇಕು. ಹಾಗೆಯೇ ಗುರಿಯ ಕಡೆಗೆ ಸರಿಯಾದ ದಾರಿಯಲ್ಲಿ ಮುನ್ನಡೆಸಲು ಗುರು ಅವಶ್ಯಕ. ವ್ಯಾಸಪೂರ್ಣಿಮೆ: ಆಷಾಢ ಮಾಸದ ಹುಣ್ಣಿಮೆ ಕೃಷ್ಣದ್ವೆöÊಪಾಯನರ ಜನ್ಮದಿನ. ತಮ್ಮ ಅಪಾರ ಜ್ಞಾನದಿಂದ ಮಹಾಭಾರತ, ಭಗವದ್ಗೀತೆಯ ಕರ್ತೃ ಆದರು. ವೇದಗಳನ್ನು ವರ್ಗೀಕರಿಸಿ ‘ವೇದವ್ಯಾಸ’ರಾಗಿ ಪ್ರಖ್ಯಾತರಾದರು. ಆದಿಗುರು ಎಂದು ಕರೆಯಲ್ಪಡುವ ವೇದವ್ಯಾಸರ ಜನ್ಮದಿನವನ್ನು ಶ್ರೀಗುರುಪೂರ್ಣಿಮೆಯಾಗಿ ಆಚರಿಸುವುದು ಹಿಂದು ಸಮಾಜದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿ. ಸಪ್ತಚಿರಂಜೀವಿಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಡುವ ವೇದವ್ಯಾಸರು ಪುರಾಣಗಳನ್ನು, ಬ್ರಹ್ಮಸೂತ್ರಗಳನ್ನು ರಚಿಸಿ ಭಾರತದ ಭವ್ಯ ಜ್ಞಾನ ಸಂಪತ್ತಿಗೆ ಅತ್ಯದ್ಭುತ ಕೊಡುಗೆ ನೀಡಿದವರು. ಭಗವಾಧ್ವಜ ನಮ್ಮ ಗುರು: ವ್ಯಕ್ತಿಯ ಬದುಕಿನಲ್ಲಿ ಹೇಗೆ ಗುರು ಅವಶ್ಯಕವೋ ಅಂತೆಯೇ ಸಂಘಟನೆಗೂ ಗುರುವಿನ ಅವಶ್ಯಕತೆ ಇದೆ ಎಂಬುದನ್ನು ರಾಷ್ಟಿçÃಯ ಸ್ವಯಂಸೇವಕ ಸಂಘದ ಸ್ಥಾಪಕ ಡಾ. ಹೆಡಗೇವಾರ್ ಮನಗಂಡರು. ಸಂಘದಲ್ಲಿ ವ್ಯಕ್ತಿ ನಿಷ್ಠೆಯಿಲ್ಲ, ತತ್ವನಿಷ್ಠೆ ಇದೆ. ಸಂಘಕಾರ್ಯ ಸಮಸ್ತ ಸಮಾಜದ ಸರ್ವಾಂಗೀಣ ಉನ್ನತಿಯ ಮಹತ್ತರ ಕಾರ್ಯ. ಇದು ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಆಗುವಂತಹುದಲ್ಲ. ನಿರಂತರ ಕಾರ್ಯಕ್ಕೆ ನಿರಂತರ ಪ್ರೇರಣೆ ನೀಡುವ ಗುರು ಅವಶ್ಯ. ವ್ಯಕ್ತಿ ಪರಿಪೂರ್ಣನಲ್ಲ; ಶಾಶ್ವತನಲ್ಲ. ಹಾಗಾಗಿ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಪ್ರತಿನಿಧಿಸುವ ಭಗವಾಧ್ವಜವೇ ನಮಗೆ ಗುರುವಿನ ಸ್ಥಾನದಲ್ಲಿದೆ. ಮೂರ್ತರೂಪದ ಬಟ್ಟೆಯ ಧ್ವಜದಲ್ಲಿ ಅಡಕವಾಗಿರುವುದು ಅಮೂರ್ತ ತತ್ತ÷್ವಗಳು. ಹೇಗೆ ನೀರಿಗೆ ಶ್ರದ್ಧೆಯನ್ನು ಜೋಡಿಸಿದಾಗ ತೀರ್ಥವಾಗುವುದೋ, ಆಹಾರಕ್ಕೆ ಶ್ರದ್ಧೆಯನ್ನು ಜೋಡಿಸಿದಾಗ ನೈವೇದ್ಯವಾಗುವುದೋ, ಅಂತೆಯೇ ಬರಿಗಣ್ಣಿನಿಂದ ಕಾಣುವುದು ಬಟ್ಟೆಯ ತುಂಡಾದರೂ ಶ್ರದ್ಧೆ, ಭಕ್ತಿಯಿಂದ ಕಂಡಾಗ ಭಗವಾಧ್ವಜದಲ್ಲಿ ಗುರುವನ್ನು ಕಾಣಬಹುದು. ಜ್ಞಾನ: ಕತ್ತಲೆ ಕಳೆದು ಬೆಳಕು ಹರಿಯುವಾಗಿನ ಅರುಣೋದಯದ, ಜ್ಞಾನೋದಯದ ಸಂಕೇತ ಅರುಣ ವರ್ಣ ಭಗವೆಯದ್ದು. ಭಗವೆಯನ್ನು ಕಂಡಾಗ ಜಗತ್ತಿಗೆ ಜ್ಞಾನಸುಧೆಯನ್ನು ಹರಿಸಿದ ಪುಣ್ಯಭೂಮಿ ಭಾರತದ ಜ್ಞಾನದ ಪರಂಪರೆ ನಮಗೆ ನೆನಪಾಗಬೇಕು. ಶೌರ್ಯ: ಹಿಂದು ಸಮಾಜದ ಮೇಲೆ ಸಹಸ್ರಾರು ವರ್ಷಗಳ ಕಾಲದಿಂದ ನಿರಂತರ ಆಕ್ರಮಣ ನಡೆದಿದೆ. ಆ ಎಲ್ಲಾ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದ ಶೌರ್ಯದ ಪರಂಪರೆ ನಮ್ಮದು. ನಮ್ಮೆಲ್ಲಾ ವೀರ ಮಹಾಪುರುಷರಿಗೆ ಪ್ರೇರಣೆ ನೀಡಿದ ಧ್ವಜ ಭಗವಾಧ್ವಜ. ನಮ್ಮ ಪುರಾಣಗಳಲ್ಲಿ ಧರ್ಮಧ್ವಜವಾಗಿ ಮೆರೆದ ಭಗವೆಯನ್ನೇ, ಇತಿಹಾಸದಲ್ಲಿ ನಮ್ಮೆಲ್ಲಾ ಹಿಂದು ವೀರರು ಉಪಯೋಗಿಸಿದ್ದು ಮತ್ತು ಅದರಿಂದಲೇ ಪ್ರೇರಣೆ ಪಡೆದಿದ್ದು. ಭಗವಾಧ್ವಜವನ್ನು ಕಂಡಾಗ ಭಾರತದ ಶೌರ್ಯದ ಪರಂಪರೆ ನೆನಪಾಗಬೇಕು. ತ್ಯಾಗ: ತ್ಯಾಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ, ಸರ್ವಸಂಗ ಪರಿತ್ಯಾಗಿಗಳಾಗಿ ಅಧ್ಯಯನ, ಅಧ್ಯಾಪನ ಮಾಡುತ್ತಾ ಸಮಾಜದ ಹಿತಚಿಂತನೆ ಮಾಡುವ ಸನ್ಯಾಸಿ ಪರಂಪರೆಯ ಸಂಕೇತ ಭಗವಾಧ್ವಜ. ತ್ಯಾಗ, ಬಲಿದಾನಗಳಿಂದ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿದ ಶೂರ-ವೀರರ, ಮಹಾತ್ಮರ ಪರಂಪರೆ ನೆನಪಿಸುವ ಸಂಕೇತ ಭಗವಾಧ್ವಜ. ಹಾಗಾಗಿ ನಮ್ಮ ಸಂಸ್ಕೃತಿಯ ಪುನರುಜ್ಜೀವನಕ್ಕೆ ಕಟಿಬದ್ಧವಾದ ಸಂಘಕಾರ್ಯಕ್ಕೆ ಗುರುವಿನ ಸ್ಥಾನದಲ್ಲಿರುವ ಭಗವಾಧ್ವಜವೇ ನಮಗೆ ಪ್ರೇರಕ ಶಕ್ತಿ. ಸಮರ್ಪಣೆ: ವಜ್ರಾಯುಧಕ್ಕಾಗಿ ತನ್ನ ಬೆನ್ನುಮೂಳೆಯನ್ನೇ ಸಮರ್ಪಿಸಿದ ದಧೀಚಿ, ಪುಟ್ಟ ಹಕ್ಕಿಯ ಪ್ರಾಣ ಉಳಿಸಲು ತನ್ನ ಶರೀರದ ಭಾಗಗಳನ್ನೇ ಕತ್ತರಿಸಿ, ಅದೂ ಸಾಲದಾದಾಗ ತನ್ನನ್ನೇ ಸಮರ್ಪಿಸಿಕೊಂಡ ಶಿಬಿ ಚಕ್ರವರ್ತಿ ಇತ್ಯಾದಿ ಸಮಾಜಹಿತಕ್ಕೆ ಸಮರ್ಪಣೆ ಮಾಡಿದ ಉದಾಹರಣೆಗಳೇ ನಮಗೆ ಪ್ರೇರಣೆ. ಯಜ್ಞದಲ್ಲಿ ನಾವು ಶ್ರೀಗಂಧ, ತುಪ್ಪ, ರೇಶಿಮೆ ಮುಂತಾದ ಶ್ರೇಷ್ಠವಾದ ವಸ್ತುಗಳನ್ನೇ ಅರ್ಪಿಸುತ್ತೇವೆ. ಹಾಗೆಯೇ ಸಮಾಜದ ಕೆಲಸಕ್ಕೆ ನಮ್ಮಲ್ಲಿನ ಶ್ರೇಷ್ಠ ಸಂಗತಿಗಳನ್ನು ಅರ್ಪಿಸಬೇಕು. ಅಗ್ನಿ ಹೇಗೆ ಲೋಹಗಳನ್ನು ಕರಗಿಸಿ ಶುದ್ಧೀಕರಿಸುತ್ತದೋ ಹಾಗೆಯೇ ಈ ಸಮಾಜದೇವನಲ್ಲಿ ನಮ್ಮೆಲ್ಲಾ ಕೆಟ್ಟಗುಣಗಳೂ ನಾಶವಾಗಿ ನಾವು ಸದ್ಗುಣಿಗಳಾಗುತ್ತೇವೆ. ಗುರುಪೂಜೆ: ಹೂ-ಹಣ್ಣು, ದೀಪ-ಧೂಪ-ನೈವೇದ್ಯ, ಆರತಿ, ಮಂತ್ರ-ತAತ್ರ ಇತ್ಯಾದಿಗಳಿಂದ ಮಾಡುವ ಪೂಜೆ - ಬಾಹ್ಯ ಪೂಜೆ. ನಾವೂ ಸದ್ಗುಣಗಳನ್ನು ಮೈಗೂಡಿಸಿಕೊಂಡು, ಪರಹಿತಕ್ಕಾಗಿ ಬದುಕುತ್ತಾ ದೇವರಂತೆಯೇ ಆಗಲು ಯತ್ನಿಸುವುದೇ ನಿಜವಾದ ದೇವರ ಪೂಜೆ. ಸಂಘದ ಕೆಲಸ ಮಾಡುತ್ತಾ ನಾವು ಮಾಡುವ ಸತತ ಸಾಧನೆ, ಸಮಾಜ ಹಿತಕ್ಕಾಗಿ ನಮ್ಮದೆಲ್ಲವನ್ನೂ ಸಮರ್ಪಿಸುವುದು - ಇದುವೇ ನಿಜವಾದ ಗುರುಪೂಜೆ. ಗುರುದಕ್ಷಿಣೆ: ಸಂಘ ಒಂದು ಕುಟುಂಬವಿದ್ದAತೆ. ಕುಟುಂಬದ ಎಲ್ಲ ಅವಶ್ಯಕತೆಗಳು ಕುಟುಂಬದ ಸದಸ್ಯರಿಂದಲೇ ಪೂರೈಕೆಯಾಗುತ್ತವೆ. ಸಂಘಕಾರ್ಯಕ್ಕೆ ಅವಶ್ಯವಿರುವ ಆರ್ಥಿಕ ಸಂಪನ್ಮೂಲವೂ ಸ್ವಯಂಸೇವಕರಿAದಲೇ ಆಗಬೇಕಾದುದು ಸಹಜ. ಸಂಘದ ಗುರುಪೂಜೆ ಉತ್ಸವದಲ್ಲಿ ಸ್ವಯಂಸೇವಕರು ಮಾಡುವ ಗುರುದಕ್ಷಿಣೆಯ ಅರ್ಪಣೆ ಇದಕ್ಕೆ ಪೂರಕ. ಗುರುದಕ್ಷಿಣೆ ವಂತಿಗೆಯಲ್ಲ, ದೇಣಿಗೆಯಲ್ಲ, ಕಾಣಿಕೆಯಲ್ಲ. ನಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟು ಭಗವಾಧ್ವಜದ ಸಮಕ್ಷಮದಲ್ಲಿ ಗುರುದಕ್ಷಿಣೆಯಾಗಿ ಸಮರ್ಪಿಸುತ್ತಿದ್ದೇವೆ. ಇದು ಯಜ್ಞಕ್ಕೆ ಸಮರ್ಪಿಸುವ ಹವಿಸ್ಸಿನಂತೆ - "ರಾಷ್ಟಾçಯ ಸ್ವಾಹಾ, ಇದಂ ನ ಮಮ" (ರಾಷ್ಟçಕ್ಕೆ ಸಮರ್ಪಿಸುತ್ತಿದ್ದೇನೆ, ಇದು ನನ್ನದಲ್ಲ). ನಮ್ಮ ಸಂಪಾದನೆ ನಾವು ಸಮಾಜದಿಂದ ಪಡೆದಿರುವುದು. ನಮ್ಮ ಅವಶ್ಯಕತೆಗಳ ಪೂರೈಕೆಗೆ ಬೇಕಾಗುವಷ್ಟು ಮಾತ್ರ ನಮ್ಮದು. ಉಳಿದದ್ದೆಲ್ಲ ವಾಸ್ತವವಾಗಿ ಸಮಾಜದ್ದೇ, ಸಮಾಜಕ್ಕೆ ಸಲ್ಲಬೇಕು. ಸಂಘ ಕಾರ್ಯ: ವ್ಯಕ್ತಿ ನಿರ್ಮಾಣದಿಂದ ರಾಷ್ಟçನಿರ್ಮಾಣ - ಈ ಕಲ್ಪನೆಯೊಂದಿಗೆ ಕಾರ್ಯ ಮಾಡುತ್ತಿರುವ ಸಂಘದ ಶಾಖೆ ೬೦ ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ನಡೆಯುತ್ತಿದೆ. ಶಾಖೆಯಲ್ಲಿ ನಿರ್ಮಾಣಗೊಂಡ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವ್ಯವಸ್ಥಾ ಪರಿವರ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಸೇವಾ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜ ಪರಿವರ್ತನೆಯ ದೃಷ್ಟಿಯಿಂದ ಧರ್ಮಜಾಗರಣ, ಕುಟುಂಬ ಪ್ರಬೋಧನ್, ಸಾಮರಸ್ಯ, ಗ್ರಾಮವಿಕಾಸ, ಗೋಸೇವೆ, ರ‍್ಯಾವರಣದ ಕಾರ್ಯಕ್ಕೆ ಸಂಘದ ಸ್ವಯಂಸೇವಕರು, ಸಮಾಜವನ್ನು ಜೋಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಸಮಯ ಸಮರ್ಪಣೆ ಸಂಘಕ್ಕೆ ೧೦೦ ವರ್ಷಗಳು ತುಂಬುವ ಈ ಅಮೃತಕಾಲದಲ್ಲಿ ಭಾರತವು ವೈಶ್ವಿಕ ನೇತೃತ್ವವನ್ನು ಕೊಡುವಂತಾಗಲು ಸಂಘಟಿತ ಪ್ರಯತ್ನ ಮಾಡಬೇಕಾಗಿದೆ. ಹಿಂದು ಧರ್ಮ, ಸಂಸ್ಕೃತಿ, ಸಮಾಜಯ ರಕ್ಷಣೆಯ ಮೂಲಕ ಹಿಂದುರಾಷ್ಟçದ ಸರ್ವಾಂಗೀಣ ಉನ್ನತಿಯ ಕಾರ್ಯ ಮಾಡಬೇಕಾಗಿದೆ. ಸಮಾಜ ಪರಿವರ್ತನೆಯ ಕಾರ್ಯ ನನ್ನಿಂದ, ನನ್ನ ಮನೆಯಿಂದ, ನನ್ನ ಪರಿಸರದಲ್ಲಿ ಆಗುವಂತೆ ಪ್ರಯತ್ನ ಆಗಬೇಕಾಗಿದೆ. ಪಂಚ ಪರಿವರ್ತನೆಗಳಾದ ಕುಟುಂಬ ಪ್ರಬೋಧನ, ಸಾಮರಸ್ಯ, ಪರ್ಯಾವರಣ, ಸ್ವದೇಶಿ ಜೀವನಶೈಲಿ, ನಾಗರಿಕ ಕರ್ತವ್ಯ - ನನ್ನಿಂದ ಆರಂಭಗೊAಡು, ನನ್ನ ಮನೆಯಲ್ಲಿ ಅನುಷ್ಠಾನ, ನನ್ನ ಪ್ರಯತ್ನದಿಂದ ನನ್ನ ಮನೆಯ ಸುತ್ತಲಿನ ಹತ್ತು ಮನೆಗಳಲ್ಲಿ ಪರಿವರ್ತನೆಯನ್ನು ತರುವುದರ ಮೂಲಕ ಸಮಾಜ ಪರಿವರ್ತನೆಯ ಕಾರ್ಯಕ್ಕೆ ಸಮಯ ನೀಡಬೇಕಾಗಿದೆ. ರಾಷ್ಟçಸೇವೆಯ ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಸ್ವಲ್ಪ ಸಮಯವನ್ನು, ಹಲವರು ಹೆಚ್ಚು ಸಮಯವನ್ನು, ಕೆಲವರು ಪೂರ್ಣ ಸಮಯವನ್ನು ನೀಡಬೇಕಾಗಿದೆ. ಎಲ್ಲರಿಗೂ ಗುರುವಿನ ಸ್ಥಾನದಲ್ಲಿ ನಿಂತು ಪ್ರೇರಣೆ ತುಂಬುವ ಕೆಲಸವನ್ನು ಭಗವಾಧ್ವಜ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.