ಜೂನ್ ೨೬, ೧೯೯೯. ಈ ದಿನ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಏಕೆಂದರೆ ೧೯೪೮, ೧೯೬೫, ೧೯೭೧ರಲ್ಲಿ ಭಾರತದ ಭೂಭಾಗ ಕಬಳಿಸುವ ದುರುದ್ದೇಶದಿಂದ ಭಾರತದ ಮೇಲೆ ಆಕ್ರಮಣ ಮಾಡಿದ ಪಾಕಿಸ್ತಾನ ಘೋರ ಸೋಲನ್ನು ಅನುಭವಿಸಿದ್ದರೂ, ೧೯೯೯ರಲ್ಲಿ ಮತ್ತೊಮ್ಮೆ ಭಾರತದ ವಿರುದ್ಧ ಸೆಣೆಸುವ ದುಸ್ಸಾಹಸಕ್ಕೆ ಕೈ ಹಾಕುತ್ತದೆ. ಆದರೆ ನಮ್ಮ ಸೈನಿಕರ ಧೈರ್ಯ, ಸಾಹಸ, ಪರಾಕ್ರಮದಿಂದ ಈ ಯುದ್ಧವನ್ನೂ ಗೆದ್ದ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನೂ, ವಿಶ್ವಕ್ಕೆ ಭಾರತದ ಸೈನಿಕರ ಸಾಮರ್ಥ್ಯದ ಪರಿಚಯವನ್ನು ಮಾಡಿಕೊಡುತ್ತದೆ. ಈ ಯುದ್ಧಕ್ಕೆ “ಆಪರೇಶನ್ ವಿಜಯ್” ಎಂಬ ಹೆಸರಿಟ್ಟ ಕಾರಣ ಯುದ್ಧ ಗೆದ್ಧನಂತರ ರಾಷ್ಟಾçದ್ಯಂತ ವಿಜಯ್ ದಿವಸನ್ನು ಆಚರಿಸಲಾಗುತ್ತದೆ. ಈ ವಿಜಯೋತ್ಸವಕ್ಕೆ ೨೬ನೇ ಸಂವತ್ಸರ.
ಕಾರ್ಗಿಲ್! ಕಾಶ್ಮೀರದ ಶ್ರೀನಗರದಿಂದ ೨೦೫ ಕಿ.ಮೀ. ದೂರದಲ್ಲಿರುವ ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್ಗೆ ಸಂಪರ್ಕ ಕಲ್ಪಿಸುವ ರಾಷ್ಟಿçÃಯ ಹೆದ್ದಾರಿ ೧ ಇದೇ ಕಾರ್ಗಿಲ್ ಮೂಲಕ ಹಾದು ಹೋಗುತ್ತದೆ. ಇದೇ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಇದೆ. ಚಳಿಗಾಲದಲ್ಲಿ ಮೈನಸ್ ಡಿಗ್ರಿಗೆ ಇಳಿಯುವ ತಾಪಮಾನದಿಂದಾಗಿ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಮೊದಲಿನಿಂದಲೂ ಜೆಂಟಲ್ಮನ್ ಒಪ್ಪಂದದ ಪ್ರಕಾರ ಎರಡೂ ರಾಷ್ಟçದ ಸೇನೆ ಚಳಿಗಾಲದಲ್ಲಿ ಬೇಸ್ಕ್ಯಾಂಪ್ಗೆ ತೆರಳಬೇಕಿತ್ತು. ಆದರೆ ಪಾಕಿಸ್ತಾನ ತಂತ್ರಹೂಡಿ ಈ ಸಮಯವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿತು. ತಯಾರಿ ಹೇಗಿತ್ತು ಗೊತ್ತೇನು?. ಪಾಕಿಸ್ತಾನಿ ಸೇನೆಯೊಂದಿಗೆ ದೀರ್ಘಕಾಲದ ಗೆಳತನ ಹೊಂದಿರುವ ಜಮಾಲ್-ಎ-ಇಸ್ಲಾಮಿಯೆಂಬ ಜಿಹಾದಿ ತಂಡದೊಡಗೂಡಿ ಭಯೋದ್ಪಾದಕರ ವೇಷಧರಿಸಿ ಗುಡ್ಡವನ್ನೇರಿ, ಬಂಕರ್ಗಳನ್ನು ವಶಪಡಿಸಿಕೊಂಡು, ತಾತ್ಕಾಲಿಕ ಸಂರ್ಗಳನ್ನೂ ನಿರ್ಮಿಸಿತ್ತು. ಮಾಹಿತಿಗಳ ಪ್ರಕಾರ ಲಾಹೋರ್ ಒಪ್ಪಂದಕ್ಕೂ ಮುನ್ನ ಪಾಕಿಸ್ತಾನ ಯುದ್ಧದ ತಂತ್ರವನ್ನು ಹೂಡಿಯಾಗಿತ್ತು. ಆದ್ದರಿಂದ ೧೯೯೯ರಲ್ಲಿ ಫೆಬ್ರವರಿಯ ಮೊದಲ ಭಾಗದಲ್ಲಿ ಭಾರತಕ್ಕೆ ಚಿಕ್ಕಪುಟ್ಟ ದಾಳಿಗಳನ್ನು ಮಾಡಲು ಪ್ರಾರಂಭಿಸಿತು. ರಜೌರಿ, ಪೂಂಚ್, ಗಂದರ್ಬಾಲ್, ಅನಂತ್ನಾಗ್ ಹಾಗೂ ಇನ್ನಿತರ ಸಮೀಪದ ಪ್ರದೇಶಗಳ ಸುತ್ತಲೇ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದರಿಂದ ಪಾಕಿಸ್ತಾನದ ಉದ್ದೇಶ ಭಾರತದ ಭೂಭಾಗವನ್ನು ಕಬಳಿಸುವುದೆನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
೧೯೯೯ರ ಮೇ.೯, ೧೦ರಂದು ಸೇನಾ ಬ್ರಿಗೇಡ್ನ ಶಸ್ತಾçಸ್ತç ಘಟಕದ ಹತ್ತಿರಕ್ಕೆ ಪಾಕಿಸ್ತಾನದ ಬಾಂಬ್ ಶೆಲ್ ಬಂದು ಬಿತ್ತು. ಅದು ಶಕ್ತಗುರಿಯೆಂದು ಸೇನೆ ಭಾವಿಸಲಿಲ್ಲ. ಆದರೆ ಮರುದಿನ ಗುಡ್ಡದ ಮೇಲೆ ಕುರಿಗಳನ್ನು ಮೇಯಿಸಲು ಹೋದ ಒಂದಷ್ಟು ತರುಣರು ಅಪರಿಚಿತರನ್ನು ಗುರುತಿಸಿ ಸೇನಾ ಠಾಣ್ಯಕ್ಕೆ ವಿಷಯ ಮುಟ್ಟಿಸಿದರು. ಮೇ ೧೨ರೊಳಗೆ ಭಯೋತ್ಪಾದಕರು ಬಂದು ಕುಳಿತಿರುವುದು ಸೇನೆಗೆ ಖಾತ್ರಿಯಾಗಿತ್ತು. ನುಸಳುಕೋರರು ಬಂದಿದ್ದಾರೆ ಎಂದೇ ಭಾವಿಸಿದ್ದ ಅಂದಿನ ರಕ್ಷಣ ಸಚಿವ ಜಾಜ್ ಫೆರ್ನಾಂಡಿಸ್ ೪೮ ಗಂಟೆಗಳಲ್ಲಿ ಅವರನ್ನು ಹೊರದಬ್ಬುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತಾರೆ. ಆದರೆ ಅಲ್ಲಿಗೆ ಬಂದದ್ದು ಪಾಕಿಸ್ತಾನದ ಸುಸಜ್ಜಿತ ಸೇನೆಯೇ ಆಗಿತ್ತು.
ವಿಷಯ ತಿಳಿದ ಮರುದಿನವೆ ಸೇನೆ ಜಾಟ್ ರೆಜಿಮೆಂಟಿನ ಕ್ಯಾಪ್ಟನ್ ಸೌರಭ್ ಕಾಲಿಯ ಹಾಗೂ ೬ ಜನರ ತಂಡ ಗುಡ್ಡವೇರಲು ಬೇಕಾದಷ್ಟು ಮಂಜು ಕರಗಿದೆಯೇ ಎಂದು ನೋಡಲು ಕಕ್ಸರ್ ಭಾಗದ ಬಜರಂಗ್ ಪೋಸ್ಟ್ನತ್ತ ಹೊರಟರು. ಆಗ ಬಂಕರ್ಗಳನ್ನು ಆವರಿಸಿಕೊಂಡ ದೊಡ್ಡ ನುಸುಳುಕೋರರ ಕುರಿತಾದ ಮೊದಲ ಮಾಹಿತಿ ಸೇನೆಗೆ ತಲುಪಿಸುತ್ತಾರೆ. ತನ್ನ ವ್ಯಾಪ್ತಿಯ ಗುಡ್ಡವನ್ನು ನುಸಳುಕೋರರು ಆಕ್ರಮಿಸಿರುವುದನ್ನು ಸಹಿಸದ ಕ್ಯಾ.ಸೌರಭ್ ಕಾಲಿಯ ತನ್ನ ತಂಡದೊಡನೆ ಯುದ್ಧಕ್ಕಿಳಿದರು. ಶತ್ರುವನ್ನು ಅಂದಾಜಿಸುವುದರಲ್ಲಿ ಎಡವಿದ್ದು ತಿಳಿದ ತಂಡ ಹಿಂದೆ ಹೋಗುವುದನ್ನೊಪ್ಪದೆ ಕೊಂಡೊಯ್ದ ಗುಂಡುಗಳು ಮುಗಿದರೂ ಯುದ್ದವನ್ನು ಮುಂದುವರಿಸುತ್ತಾರೆ. ಆದರೆ ತಕ್ಷಣ ಸುತ್ತುವರಿದ ಪಾಕಿಸೇನೆ ಜೀವಂತವಾಗಿ ಅವರನ್ನು ಬಂಧಿಸುತ್ತಾರೆ. ೨೨ ದಿನಗಳಕಾಲ ಕ್ಯಾ.ಸೌರಭ್ ಕಾಲಿಯರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಕೊಟ್ಟು ಗುಂಡಿಟ್ಟು ಕೊಲ್ಲಲಾಗುತ್ತದೆ. ಶವವನ್ನು ಭಾರತಕ್ಕೆ ಹಸ್ತಾಂತರಿಸಿದಾಗ ನಮ್ಮ ಯೋಧರನ್ನು ಕೆಟ್ಟದಾಗಿ ನೆಡೆಸಿಕೊಂಡ ಪಾಕಿಸ್ತಾನದ ನಡೆಯನ್ನು ಕಂಡು ಸೇನೆಯ ಎಲ್ಲಾ ಸೈನಿಕರೂ ಬೆಚ್ಚಿಬೀಳುತ್ತಾರೆ ಮತ್ತು ಇದಕ್ಕೆ ತಕ್ಕ ಉತ್ತರವನ್ನು ನೀಡಬೇಕೆಂದು ನಿಶ್ಚಯಿಸುತ್ತಾರೆ.
೧೯೯೯ರಲ್ಲಿ ಕಾರ್ಗಿಲ್ ಕದನವು ಆರಂಭವಾದದ್ದು ಹೀಗೆ! ಈ ಘಟನೆಯ ನಂತರ ದೇಶದೆಲ್ಲೆಡೆ ಸಂಚಲನ ಮೂಡುತ್ತದೆ. ಮೇ ೩ರಂದು ಆರಂಭವಾದ ಕಾರ್ಯಾಚರಣೆ ನಿಜಕ್ಕೂ ದೊಡ್ಡ ಸವಾಲಾಗಿತ್ತು. ಪರ್ವತ ಶ್ರೇಣಿಯ ಮೇಲಿರುವ ಪಾಕ್ ಸೈನಿಕರನ್ನು ಕೆಳಗಿನಿಂದ ಎದುರಿಸುವುದು ಸುಲಭವಾಗಿರಲಿಲ್ಲ. ತುಸು ಚಲನೆ ಕಂಡರೂ ಮೇಲಿನಿಂದ ಗುಂಡಿನ ಸುರಿಮಳೆ ಆಗುತ್ತಿತ್ತು. ಆದರೆ ನಮ್ಮ ದೇಶದ ಶಕ್ತಿಯಾದ ಕಾಲ್ದಳ, ವಾಯುದಳ ಹಾಗೂ ನೌಕದಳ ಒಟ್ಟಾಗಿ ಹೋರಾಡಲು ನಿಶ್ಚಯಿಸುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವಾಯುಪಡೆ ಮೇ ೨೬ರಿಂದ ಭೂಸೇನೆಯ ಜೊತೆಗೆ ನಿಂತಿತು. ಭೂಸೇನೆಗೆ ವಾಯುಪಡೆಗೆ ಸಾಥ್ ಕೊಟ್ಟ ಬೆನ್ನಲ್ಲೇ ನೌಕಾಪಡೆ ತಾನೂ ಆಪರೇಷನ್ ವಿಜಯಕ್ಕೆ ಕೈ ಜೋಡಿಸಿತು. ‘ಆಪರೇಶನ್ ತಲವಾರ್' ಎಂಬ ಹೆಸರಿನಲ್ಲಿ ಅರಬ್ಬಿ ಸಮುದ್ರದಲ್ಲಿ ತನ್ನ ಹಿಡಿತ ಹೆಚ್ಚಿಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ತಲುಪದಂತೆ ಮಾಡಿತು. ನೌಕಾಪಡೆ ಮಾಡಿದ ಅನಿರೀಕ್ಷಿತ ದಾಳಿ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಕೊಟ್ಟಿತು. ಇತ್ತ ವಾಯುಪಡೆಯ ಆಪರೇಷನ್ ಸಫೇದ್ ಸಾಗರ್ ಪಾಕ್ ಸೈನಿಕರನ್ನು ಘಾಸಿಗೊಳಿಸಿತ್ತು. ಭೂಸೇನೆಯ ಸತತ ಪ್ರಯತ್ನದಿಂದ ಟೋಲೋಲಿಂಗ್, ಟೈಗರ್ ಹಿಲ್ಸ್, ದ್ರಾಸ್ ಮತ್ತು ಇತರ ಭೂಭಾಗಗಳನ್ನು ವಶಪಡಿಸಿತು. ಎರಡು ತಿಂಗಳುಗಳ ಕಾರ್ಯಾಚರಣೆಯ ಮೂಲಕ ಬಹುತೇಕ ಭಾಗಗಳು ಭಾರತವು ಪುನಃ ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಒತ್ತಡದಿಂದಾಗಿ ಪಾಕಿಸ್ತಾನ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿತು.
ಕ್ಯಾನ್ಬರ್ರಾ ಎಂಬ ಪರಿಶೋಧನೆಯ ವಿಮಾನದ ಮೂಲಕ ಗುಡ್ಡಗಳ ಮೇಲಿನ ಸ್ಥಿತಿಯ ಕುರಿತು ಮಾಹಿತಿ ದೊರೆತವು. ನಂತರದ ದಿನಗಳಲ್ಲಿ ಹಲವಾರು ವೀರ ಸೈನಿಕರ ಪ್ರಾರ್ಣಾಪಣೆಯಿಂದಾಗಿ ಪಾಕಿಗಳ ವಶದಲ್ಲಿದ್ದ ಒಂದೊAದೆ ಪರ್ವತವನ್ನು ಗೆಲ್ಲಲಾಗುತ್ತದೆ. ತೋಲೋಲಿಂಗ್, ಪಾಯಿಂಟ್ ೫೧೪೦, ಪಾಯಿಂಟ್ ೪೭೦೦, ಥ್ರೀ ಪಿಂಪಲ್, ಟೈಗರ್ ಹಿಲ್, ದ್ರಾಸ್ ವಿಭಾಗದ ಸ್ಥಳಗಳು, ಪಿಂಪಲ್ ೨, ಜುಬೇರ್ ಹಿಲ್( ಇದನ್ನು ಗೆದ್ದರೆ ಪಾಯಿಂಟ್ ೪೮೧೨, ಖಾಲೂಬಾರ್, ಪಾಯಿಂಟ್ ೫೮೨೭ಗಳನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಹಾಯವಾಗುತ್ತದೆ.), ಪಾಯಿಂಟ್ ೫೫೦೦, ಪಾಯಿಂಟ್೫೫೯೦ ಹಾಗೂ ಇನ್ನಿತರ ಗುಡ್ಡಗಳನ್ನು ಗೆದ್ದು ವಿಶ್ವಮಟ್ಟದಲ್ಲಿ ನಮ್ಮ ಸೇನೆ ಸೈ ಎನಿಸಿಕೊಳ್ಳುತ್ತದೆ. ಈ ಎಲ್ಲಾ ಗುಡ್ಡಗಳನ್ನು ಗೆಲ್ಲುವುದು ಸುಲಭದ ಮಾತಗಿರಲಿಲ್ಲ. ನೆನಪಿರಲಿ ನಮ್ಮ ಸೈನಿಕರು ಗುಡ್ಡಗಳ ಕೆಳಗಿನಿಂದ ಯುದ್ಧ ಮಾಡಬೇಕಿತ್ತು!. ಮೇಲಿಂದ ಒಂದು ಬಂಡೆಗಲ್ಲು ತಳ್ಳಿದ್ದರೂ ಹಲವಾರು ಸೈನಿಕರು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ. ಹೀಗಿದ್ದರೂ ಕೂಡ ಭಾರತ ಈ ಯುದ್ಧದಲ್ಲಿ ವಿಜಯ ಪತಾಕೆಯನ್ನು ಹಾರಿಸುತ್ತದೆ. ಈ ವಿಜಯಕ್ಕಾಗಿ ನಾವು ಕಳೆದು ಕೊಂಡಿದ್ದು ಅಜಯ್ ಅಹುಜಾ, ಮೇ.ರಾಜೇಶ್ ಅಧಿಕಾರಿ, ಆರ್.ಪುಂಡಿರ್, ಮುಹಿಲನ್, ವಿವೇಕ್ ಗುಪ್ತ, ವಿಕ್ರಂ ಬಾತ್ರ, ಮೇ.ಪದ್ಮಪಾಣಿ ಆಚಾರ್ಯ, ರೈಫಲ್ ಮ್ಯಾನ್ ಸಂಜಯ್ ಕುಮಾರ್, ಮನೋಜ್ ಕುಮಾರ್ ಪಾಂಡೆಯAತಹ ಅನರ್ಘ್ಯ ರತ್ನಗಳನ್ನು. ಅಕಸ್ಮಾತ್ ನಮ್ಮ ಸೈನಿಕರು ವೀರಾವೇಶದಿಂದ ಹೋರಾಡಿ ವಿಜಯ ದೊರಕಿಸಿಕೊಡದಿದ್ದರೆ ಇಂದು ಭಾರತದ ಅನೇಕ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿರುತ್ತಿತ್ತು.
೧೯೯೯ರ ಕಾರ್ಗಿಲ್ ಕದನದಲ್ಲಿ ಭಾರತದ ಗೆಲುವನ್ನು ಜುಲೈ ೨೬ರಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈ ಯುದ್ಧದಲ್ಲಿ ತಾಯಿ ಭಾರತಿ ಕಳೆದುಕೊಂಡದ್ದು ೫೨೭ ಪರಾಕ್ರಮಿ ಪುತ್ರರನ್ನು! ಜಗತ್ತಿನ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಒಂದಾದ ಕಾರ್ಗಿಲ್ನಲ್ಲಿ ನಡೆದ ಕದನದಲ್ಲಿ ಭಾರತ ಕಂಡ ವಿಜಯವು ಐತಿಹಾಸಿಕ ಮಾತ್ರವಾಗಿರದೆ, ೫೨೭ ಯೋಧರ ಬಲಿದಾನದ ಫಲವಾದ್ದರಿಂದ ಇಡೀ ದೇಶ ಭಾವನಾತ್ಮಕವಾಗಿ ಕಂಬನಿ ಮಿಡಿಯಿತು. ಯೋಧರು ಪ್ರಾಣ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಟ ಮಾಡಿ ಕೊನೆಗೆ ಶಿಖರದ ಮೇಲೆ ತಿರಂಗಾ ಹಾರಿಸಿ ವಿಜಯವನ್ನು ಆಚರಿಸಿಕೊಂಡ ಆ ಅಪೂರ್ವ ಕ್ಷಣಗಳನ್ನು ದೂರದರ್ಶನದ ಮೂಲಕ ಇಡೀ ದೇಶ ಬೆರಗಾಗಿ ನೋಡಿತು.
ಭಾರತದ ಸ್ವಾತಂತ್ರö್ಯಕ್ಕೆ ಹೇಗೆ ಲಕ್ಷಾಂತರ ಮಹಾಪುರುಷರು ಕಾರಣವೋ, ಹಾಗೆ ಇಂದು ನಾವು ಈ ವಿಶಾಲವಾದ ರಾಷ್ಟçದ ಪುಟ್ಟ ಗ್ರಾಮದಲ್ಲಿ ನಿರ್ಭಯವಾಗಿ ಜೀವಿಸಲು ಸೈನಿಕರು ಕಾರಣ. ಹಗಲು ರಾತ್ರಿಯೆನ್ನದೆ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ರಾಷ್ಟçದ ಸುರಕ್ಷತೆಗಾಗಿ ದುಡಿಯುತ್ತಾರಲ್ಲ ನಿಜಕ್ಕೂ ಅವರು ಶ್ರೇಷ್ಠರು. ನಮ್ಮ ಜೀವನದಲ್ಲಿ ಯಾರನ್ನು ಮರೆತರೂ ರಾಷ್ಟç ಕಾಯೊ ಯೋಧ, ಅನ್ನದಾತ ರೈತ ಹಾಗೂ ರಾಷ್ಟçದ ಒಳಿತಿಗಾಗಿ ದುಡಿದ ಹಾಗೂ ದುಡಿಯುತ್ತಿರುವವರನ್ನೂ ಮಾತ್ರ ಮರೆಯಬಾರದು.



