ಬನ್ನಿ, ಸಮರ್ಥ ಭಾರತವನ್ನು ನಿರ್ಮಿಸೋಣ ೧೯೨೫ರ ವಿಜಯದಶಮಿಯಂದು ಪ್ರಾರಂಭವಾದ ರಾಷ್ಟಿçÃಯ ಸ್ವಯಂಸೇವಕ ಸಂಘವು ತನ್ನ ಸ್ಥಾಪನೆಯ ೧೦೦ ವರ್ಷಗಳನ್ನು ಪೂರೈಸಿದೆ. ಸಂಘವು ಇಂದು ಜಗತ್ತಿನ ಅತಿದೊಡ್ಡ ಸಾಮಾಜಿಕ ಸಂಘಟನೆಯಾಗಿ ಬೆಳೆದಿದೆ. ಸಾವಿರಾರು ಜನರನ್ನು ಸೇವಾಕಾರ್ಯದಲ್ಲಿ ಹಾಗೂ ಸಮಾಜ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿಸಿದೆ. ಹಾಗಾಗಿ ಸಂಘವನ್ನು ತಿಳಿಯಬೇಕೆಂಬ ಕುತೂಹಲ ಸಹಜವಾಗಿಯೇ ಸಮಾಜದಲ್ಲಿ ಹೆಚ್ಚಿದೆ. ಸಂಘವನ್ನು ತಿಳಿಯಬೇಕಾದರೆ ಸಂಘದ ಸ್ಥಾಪಕರಾದ ಡಾ|| ಕೇಶವ ಬಲಿರಾಮ ಹೆಡಗೇವಾರ್ ಅವರನ್ನು ತಿಳಿಯುವುದು ಅಗತ್ಯ. ಹುಟ್ಟಿನಿಂದಲೇ ದೇಶಭಕ್ತರಾಗಿದ್ದ ಹೆಡಗೇವಾರರು ಸ್ವಾತಂತ್ರö್ಯ ಹೋರಾಟದ ಅನೇಕ ವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿಯೇ ಪಾಲ್ಗೊಂಡಿದ್ದರು. ಈ ಕಾರಣದಿಂದಾಗಿ ಅವರು ಎರಡು ಬಾರಿ (೧೯೨೧ ಮತ್ತು ೧೯೩೦ರಲ್ಲಿ) ಜೈಲುವಾಸವನ್ನು ಅನುಭವಿಸಿದ್ದರು. ಸಂಘ ಸ್ಥಾಪನೆ ನಮ್ಮ ದೇಶವು ಸ್ವಾತಂತ್ರö್ಯಕ್ಕಾಗಿ ಹೋರಾಡುತ್ತಿದ್ದ ಸಮಯದಲ್ಲಿ ಸಂಘದ ಸ್ಥಾಪನೆಯಾಯಿತು. ರಾಷ್ಟçದ ಸ್ವಾತಂತ್ರö್ಯ, ಅದರ ನಂತರ ರಾಷ್ಟçದ ಸರ್ವತೋಮುಖ ವಿಕಾಸ, ಸಮಾಜದ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ - ಇವೆಲ್ಲ ಇಲ್ಲಿನ ಹಿಂದು ಸಮಾಜವನ್ನು ಸಂಘಟಿಸುವುದರಿAದ ಮಾತ್ರ ಸಾಧ್ಯ ಎಂಬುದು ಡಾ|| ಹೆಡಗೇವಾರರ ಸ್ಪಷ್ಟ ಅಭಿಪ್ರಾಯವಾಗಿತ್ತು. ಜಾತಿ, ಭಾಷೆ, ಪ್ರಾಂತ ಇತ್ಯಾದಿ ಹೆಸರಿನಲ್ಲಿ ಹರಿದು ಹಂಚಿಹೋಗಿದ್ದ ಹಿಂದು ಸಮಾಜವನ್ನು ‘ಹಿಂದುತ್ವ’ದ ಆಧಾರದ ಮೇಲೆ ಸಂಘಟಿಸುವ ದೃಢಸಂಕಲ್ಪವನ್ನು ಮಾಡಿ ಸಂಘವನ್ನು ಸ್ಥಾಪಿಸಿದರು. ನಮ್ಮಲ್ಲಿ ಹಿಂದುತ್ವ ಎಂದರೆ ಯಾವುದೋ ಒಂದು ಪೂಜಾಪದ್ಧತಿ ಅಥವಾ ಮತ (ಖeಟigioಟಿ) ಅಲ್ಲ, ಅದೊಂದು ಜೀವನದೃಷ್ಟಿ ಮತ್ತು ಆ ದೃಷ್ಟಿಯ ಆಧಾರದ ಮೇಲೆ ಬೆಳೆದುನಿಂತ ಜೀವನ ಪದ್ಧತಿಯಾಗಿದೆ. ಸಂಘಕಾರ್ಯವನ್ನು ರಾಷ್ಟçವ್ಯಾಪಿಯಾಗಿ ಬೆಳೆಸಬೇಕಾದರೆ ಸಾವಿರಾರು ಸಂಖ್ಯೆಯಲ್ಲಿ ಗುಣವಂತ ಕಾರ್ಯಕರ್ತರು ಅವಶ್ಯಕ. ಅಂತಹ ಕಾರ್ಯಕರ್ತರನ್ನು ರೂಪಿಸಲು ಡಾ|| ಹೆಡಗೇವಾರರು ಒಂದು ಸರಳವಾದ, ಆದರೆ ಅತ್ಯಂತ ಪರಿಣಾಮಕಾರಿಯಾದ ದೈನಂದಿನ ಶಾಖಾ ಪದ್ಧತಿಯನ್ನು ವಿಕಸಿತಗೊಳಿಸಿದರು. ವ್ಯಕ್ತಿ ನಿರ್ಮಾಣದ ಕಾರ್ಯಪದ್ಧತಿ ನಮಗೆ ಅತ್ಯಂತ ಸಾಮಾನ್ಯವೆಂದು ಕಾಣುವ ಆಟ, ವ್ಯಾಯಾಮ, ಯೋಗಾಸನ, ಗೀತೆ, ಪ್ರಾರ್ಥನೆ ಮುಂತಾದ ಕಾರ್ಯಕ್ರಮಗಳು ದೈನಂದಿನ ಶಾಖೆಯಲ್ಲಿ ನಡೆಯುತ್ತವೆ. ಈ ಸರಳ ಕಾರ್ಯಕ್ರಮಗಳೇ ಸ್ವಯಂಸೇವಕರಲ್ಲಿ ಶಿಸ್ತು, ಧೈರ್ಯ, ದೇಶಭಕ್ತಿ, ಸೇವೆ, ಪ್ರಾಮಾಣಿಕತೆ ಮುಂತಾದ ಗುಣಗಳನ್ನು ಅರಳಿಸಿ ಬೆಳೆಸುತ್ತವೆ. ಈವರೆಗೆ ಸಾವಿರಾರು ಕಾರ್ಯಕರ್ತರು ದೇಶದಾದ್ಯಂತ ತಯಾರಾಗಿದ್ದುದು ಈ ಪದ್ಧತಿಯಿಂದಲೇ. ‘ಈ ದೇಶ ನನ್ನದು, ಈ ಸಮಾಜ ನನ್ನದು. ನಾನು ಇದರ ಋಣವನ್ನು ತೀರಿಸಬೇಕು’ ಎಂಬ ಸಂಸ್ಕಾರವನ್ನು ಜನಸಾಮಾನ್ಯರ ಅಂತಃಕರಣದಲ್ಲಿ ಅಂಕಿತಗೊಳಿಸುವಲ್ಲಿ ಶಾಖಾಪದ್ಧತಿ ಯಶಸ್ವಿಯಾಗಿದೆ. ಅದಕ್ಕಾಗಿಯೇ ಸಂಘವು ಸಾಮಾನ್ಯ ಜನರ ಅಸಾಮಾನ್ಯ ಸಂಘಟನೆಯಾಗಿದೆ. ಶಾಖೆಯಲ್ಲಿ ತಯಾರಾದ ಸ್ವಯಂಸೇವಕರ ನಡವಳಿಕೆಯ ಕಾರಣದಿಂದ ‘ಸಂಘ ಅಂದರೆ ದೇಶಭಕ್ತಿ, ಶಿಸ್ತು, ನಿಸ್ವಾರ್ಥ ಸೇವೆ’ ಎಂಬ ಭಾವ ಜನಮನದಲ್ಲಿ ಅಚ್ಚೊತ್ತಿದೆ. ಸಂಘಕಾರ್ಯದ ವಿಸ್ತಾರ ಯಾವುದೇ ಶ್ರೇಷ್ಠ ಕಾರ್ಯವು ಅಪಹಾಸ್ಯ, ನಿರ್ಲಕ್ಷö್ಯ, ವಿರೋಧ ಮತ್ತು ಸ್ವೀಕಾರ ಎಂಬ ೪ ಹಂತಗಳನ್ನು ದಾಟಬೇಕಾಗುತ್ತದೆ. ಅದೇ ರೀತಿ ಸಂಘವೂ ಈ ಎಲ್ಲ ಹಂತಗಳನ್ನು ದಾಟಿ ಸಮಾಜದ ವಿಶ್ವಾಸವನ್ನು ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಇಂದು ಸಂಘಕಾರ್ಯವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಛ್‌ನಿಂದ ಅರುಣಾಚಲ ಪ್ರದೇಶದವರೆಗೆ ಭಾರತದ ಮೂಲೆಮೂಲೆಗೂ ತಲುಪಿದೆ. ಇಂದು ಭಾರತದ ಬಹುತೇಕ ಎಲ್ಲ ಜಿಲ್ಲೆಗಳಿಗೂ ಸಂಘ ವ್ಯಾಪಿಸಿದೆ. ಒಟ್ಟು ೬೬೧೮ ತಾಲ್ಲೂಕುಗಳ ಪೈಕಿ ೯೨% ತಾಲ್ಲೂಕುಗಳಲ್ಲಿ ಸಂಘದ ಚಟುವಟಿಕೆಗಳು ನಡೆಯುತ್ತಿವೆ. ದೇಶದ ೫೧,೭೪೦ ಸ್ಥಾನಗಳಲ್ಲಿ ೮೩,೧೨೯ ದೈನಂದಿನ ಶಾಖೆಗಳು ಮತ್ತು ೨೬,೪೬೦ ಸ್ಥಾನಗಳಲ್ಲಿ ೩೨,೧೪೭ ಸಾಪ್ತಾಹಿಕ ಮಿಲನ್‌ಗಳ ಮೂಲಕ ಸಂಘಕಾರ್ಯವು ದೇಶಾದ್ಯಂತ ವಿಸ್ತರಿಸಿದೆ. ಒಟ್ಟು ಶಾಖೆಗಳಲ್ಲಿ ೫೯% ವಿದ್ಯಾರ್ಥಿಗಳ ಹಾಗೂ ೪೧% ಉದ್ಯೋಗಿಗಳ ಶಾಖೆಗಳಾಗಿವೆ. ಒಟ್ಟಿನಲ್ಲಿ ಸಂಘದಷ್ಟು ವ್ಯಾಪಕವಾದ ಸಂಘಟನೆ ಭಾರತದಲ್ಲಿ ಇನ್ನೊಂದಿಲ್ಲ ಎಂದೇ ಹೇಳಬಹುದು. ಸೇವೆಗೆ ಸದಾ ಸಿದ್ಧ ಯಾವುದೇ ನೈಸರ್ಗಿಕ ಅಥವಾ ಇತರ ದುರಂತಗಳು - ಭೂಕಂಪ, ನೆರೆ, ಬರಗಾಲ, ಅಗ್ನಿದುರಂತ, ವಿಮಾನ ದುರಂತ ಇತ್ಯಾದಿಗಳು ಸಂಭವಿಸಿದಾಗ ಅಲ್ಲಿ ಸಂತ್ರಸ್ತರ ನೆರವಿಗೆ ಮೊಟ್ಟಮೊದಲು ಧಾವಿಸುವವರು ಸಂಘದ ಸ್ವಯಂಸೇವಕರೇ. ಕೇವಲ ವಿಪತ್ತಿನ ಘಳಿಗೆಯಲ್ಲಿ ಅಷ್ಟೇ ಅಲ್ಲ, ಸಮಾಜದಲ್ಲಿ ಕಂಡುಬರುವ ಕೊರತೆ, ನೋವು, ಉಪೇಕ್ಷೆಗಳನ್ನು ಹೋಗಲಾಡಿಸಲು ಸ್ವಯಂಸೇವಕರು ನಿಯಮಿತವಾಗಿ ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂದು ಸ್ವಯಂಸೇವಕರು ಸಮಾಜದ ಸಹಯೋಗದೊಂದಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶಿಕ್ಷಣ, ಸಂಸ್ಕಾರ, ಆರೋಗ್ಯ ಮತ್ತು ಸ್ವಾವಲಂಬನೆಯ ಕ್ಷೇತ್ರಗಳಲ್ಲಿ ೧,೨೯,೦೦೦ ಕ್ಕೂ ಹೆಚ್ಚು ಸೇವಾಕಾರ್ಯಗಳನ್ನು ನಡೆಸುತ್ತಿದ್ದಾರೆ. ಇದರ ಜೊತೆಗೆ, ಕೇವಲ ಸರ್ಕಾರ ಅಥವಾ ಆಡಳಿತವನ್ನು ಅವಲಂಬಿಸದೆ, ಗ್ರಾಮಸ್ಥರೇ ಒಗ್ಗೂಡಿ ತಮ್ಮ ಗ್ರಾಮದ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವಂತಾಗಬೇಕು ಎಂಬ ಉದ್ದೇಶದಿಂದ ಸ್ವಯಂಸೇವಕರು ‘ಗ್ರಾಮವಿಕಾಸ’ದ ಕಾರ್ಯವನ್ನು ಮಾಡುತ್ತಿದ್ದಾರೆ. ಭಾರತೀಯ ತಳಿಯ ಹಸುಗಳ ಸಂರಕ್ಷಣೆ, ಸಂವರ್ಧನೆ, ತಳಿ ಸುಧಾರಣೆಯ ಜೊತೆಗೆ ಗೋಮಯ ಆಧಾರಿತ ಸಾವಯವ ಕೃಷಿಗಾಗಿ ರೈತರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ‘ಗೋ ಸೇವೆ-ಗೋ ಸಂವರ್ಧನೆ’ಯ ಕಾರ್ಯವೂ ನಡೆಯುತ್ತಿದೆ. ಪಂಚ ಪರಿವರ್ತನೆ ಈ ವರ್ಷದಿಂದ ೫ ವಿಷಯಗಳ ಕುರಿತು ಜನಜಾಗೃತಿಗಾಗಿ ಸ್ವಯಂಸೇವಕರು ಸಮಾಜದ ಸಜ್ಜನಶಕ್ತಿಯ ಸಹಕಾರದೊಂದಿಗೆ ವಿಶೇಷ ಪ್ರಯತ್ನಗಳನ್ನು ಮಾಡಲಿದ್ದಾರೆ. ಇವುಗಳನ್ನು ‘ಪಂಚ ಪರಿವರ್ತನೆ’ ಎಂದು ಕರೆಯಲಾಗಿದೆ. ಆ ೫ ವಿಷಯಗಳು ಈ ರೀತಿ ಇವೆ: ೧. ಸಾಮಾಜಿಕ ಸಾಮರಸ್ಯ ದುರದೃಷ್ಟವಶಾತ್, ಅನೇಕ ಶತಮಾನಗಳಿಂದ ನಮ್ಮದೇ ಸಮಾಜದ ಕೆಲವರ್ಗಗಳನ್ನು ಅಸ್ಪೃಶ್ಯರೆಂದು ಪರಿಗಣಿಸಿ, ಅವರನ್ನು ಎಲ್ಲ ಸೌಲಭ್ಯಗಳು ಮತ್ತು ಗೌರವದಿಂದ ವಂಚಿತರನ್ನಾಗಿ ಮಾಡಿರುವುದು ಅತ್ಯಂತ ಅಮಾನವೀಯ ಸಂಗತಿಯಾಗಿದೆ. ಅಸ್ಪೃಶ್ಯತೆ ನಮ್ಮ ಹಿಂದು ಸಮಾಜಕ್ಕೆ ಅಂಟಿರುವ ಘೋರ ಕಳಂಕವಾಗಿದೆ. ಈ ಅನ್ಯಾಯವನ್ನು ಹೋಗಲಾಡಿಸಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರಸ್ಯದ ಪ್ರಯತ್ನಗಳಿಗೆ ಎಲ್ಲರೂ ಬಲ ತುಂಬಬೇಕಾಗಿದೆ. ಅದಕ್ಕಾಗಿ, ನಮ್ಮ ಸ್ನೇಹಿತ ಮತ್ತು ಕುಟುಂಬ ವಲಯದಲ್ಲಿ ಎಲ್ಲ ಜಾತಿ ಸಮುದಾಯದ ಜನರನ್ನು ಸೇರಿಸಿಕೊಳ್ಳುವುದು, ನಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅವರ ಕುಟುಂಬಗಳನ್ನು ಗೌರವಪೂರ್ವಕವಾಗಿ ಆಮಂತ್ರಿಸುವುದು, ನಮ್ಮ ಮನೆ ಅಥವಾ ನಾವು ಕೆಲಸ ಮಾಡುವ ಸ್ಥಾನದಲ್ಲಿ ಸೇವೆ ಮಾಡುತ್ತಿರುವ ಎಲ್ಲರ ಜೊತೆ ಆತ್ಮೀಯತೆಯ ವ್ಯವಹಾರ, ಆಗಾಗ್ಗೆ ಅವರ ಮನೆ ಭೇಟಿ, ಎಲ್ಲ ಜಾತಿಸಮುದಾಯಗಳ ಪ್ರಮುಖರು ಒಟ್ಟಿಗೆ ಕುಳಿತು ಸಾಮಾಜಿಕ ಸಮಸ್ಯೆ-ಸವಾಲುಗಳ ಬಗ್ಗೆ ಚರ್ಚಿಸುವುದು ಮತ್ತು ಅವುಗಳ ಪರಿಹಾರಕ್ಕೆ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದು ಅಗತ್ಯವಾಗಿದೆ. ೨. ಪರಿಸರ ಸಂರಕ್ಷಣೆ ಈ ಪ್ರಕೃತಿಯು ನಮ್ಮೆಲ್ಲ ಜೀವಿಗಳ ತಾಯಿ. ಹೆಚ್ಚುತ್ತಿರುವ ಭೋಗಜೀವನದ ಪರಿಣಾಮವಾಗಿ ಪ್ರಕೃತಿಯ ಶೋಷಣೆ ನಿರಂತರ ನಡೆಯುತ್ತಿದೆ. ಪಾಶ್ಚಾತ್ಯ ಮಾನದಂಡಗಳ ಆಧಾರದ ಮೇಲೆ ನಡೆದ ಅಭಿವೃದ್ಧಿಯಿಂದಾಗಿ ಕೇವಲ ೫೦೦ ವರ್ಷಗಳಲ್ಲಿ ಪರಿಸರದ ಸಮತೋಲನ ಹದಗೆಟ್ಟಿದೆ. ಅನ್ನ, ನೀರು, ಗಾಳಿ, ಭೂಮಿ ಎಲ್ಲವೂ ವಿಷಮಯವಾಗುತ್ತಿವೆ, ಮಾಲಿನ್ಯದ ಅಪಾಯ ಬಹಳಷ್ಟು ಹೆಚ್ಚಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮೂರು ಕೆಲಸವನ್ನು ನಾವೆಲ್ಲರೂ ಮಾಡಬಹುದು – I. ನೀರನ್ನು ಉಳಿಸುವುದು (ನೀರಿನ ಮಿತಬಳಕೆ) II. ಮರಗಳನ್ನು ನೆಡುವುದು III. ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು. (Siಟಿgಟe Use Pಟಚಿsಣiಛಿ - ಏಕಬಳಕೆ ಪ್ಲಾಸ್ಟಿಕನ್ನು ಸಂಪೂರ್ಣ ತ್ಯಜಿಸುವುದು) ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದನ್ನು ಸಂರಕ್ಷಿಸುವ ಚಟುವಟಿಕೆಗಳನ್ನು ಸಮಾಜದ ಸಹಭಾಗಿತ್ವದೊಂದಿಗೆ ವ್ಯಾಪಕವಾಗಿ ಮಾಡಬೇಕಾಗಿದೆ. ೩. ಕುಟುಂಬ ಪ್ರಬೋಧನ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬಗಳ ಪಾತ್ರ ಅತ್ಯಂತ ಮಹತ್ವದ್ದು. ನಮ್ಮ ಸಂಸ್ಕೃತಿ, ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುವುದು ಕುಟುಂಬ ವ್ಯವಸ್ಥೆಯ ಕಾರಣದಿಂದಲೇ. ಇತ್ತೀಚಿನ ವರ್ಷಗಳಲ್ಲಿ ನಗರೀಕರಣ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಬದಲಾಗುತ್ತಿರುವ ಜೀವನಶೈಲಿ ಇತ್ಯಾದಿ ಕಾರಣಗಳಿಂದ ಈ ಕುಟುಂಬ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವುದು ಗಂಭೀರ ಚಿಂತೆಯ ವಿಷಯವಾಗಿದೆ. ಆದ್ದರಿಂದ ಪ್ರತಿಯೊಂದು ಕುಟುಂಬದಲ್ಲೂ ಎಲ್ಲಾ ಸದಸ್ಯರು ಆಗಾಗ್ಗೆ ಒಟ್ಟಿಗೆ ಸೇರಿ ಮಾತುಕತೆ, ಭಜನೆ, ಸದ್ವಿಚಾರಗಳ ಬಗ್ಗೆ ಚರ್ಚೆ, ಒಟ್ಟಿಗೆ ಕೂತು ಭೋಜನ, ನೆರೆಕೆರೆಯ ಕೆಲ ಕುಟುಂಬಗಳ ಜತೆ ಸೇರಿ ಕುಟುಂಬ ಮಿಲನ್ (ಸತ್ಸಂಗ), ಅಲ್ಲಿ ಕುಟುಂಬದ ಉತ್ತಮ ಸಂಪ್ರದಾಯ-ರೂಢಿಗಳ ಬಗ್ಗೆ ವಿಚಾರ ವಿನಿಮಯ - ಈ ರೀತಿ ಕೌಟುಂಬಿಕ ಮೌಲ್ಯಗಳನ್ನು ಗಟ್ಟಿಗೊಳಿಸುವಂಥ ಚಟುವಟಿಕೆಗಳು ಹೆಚ್ಚೆಚ್ಚು ನಡೆಯುವಂತಾಗಬೇಕು. ೪. `ಸ್ವ’ ಆಧಾರಿತ ಜೀವನ ಈ ಮಣ್ಣಿನ ವಿಚಾರ, ಮೌಲ್ಯಗಳು ಮತ್ತು ಸಂಪನ್ಮೂಲಗಳ ಆಧಾರದ ಮೇಲೆ ರಾಷ್ಟçಜೀವನವನ್ನು ರೂಪಿಸಬೇಕು, ಆ ಮೂಲಕ ಭಾರತವು ಒಂದು ಸ್ವಾವಲಂಬಿ, ಬಲಿಷ್ಠ ರಾಷ್ಟçವಾಗಿ ಎದ್ದು ನಿಲ್ಲುವಂತಾಗಬೇಕು. `ಸ್ವ ಆಧಾರಿತ ಜೀವನ’ದ ತಾತ್ಪರ್ಯವಿದು. ಸ್ವದೇಶಿ ಜೀವನಶೈಲಿಯನ್ನು ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಕುಟುಂಬವೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಭಾರತವು ಆತ್ಮನಿರ್ಭರವಾಗುತ್ತದೆ. ನಮ್ಮ ಮಾತೃಭಾಷೆ, ನಮ್ಮ ಉಡುಗೆ ತೊಡುಗೆ, ನಮ್ಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಅಭಿಮಾನ ಇಟ್ಟುಕೊಂಡು ಜೀವನದಲ್ಲಿ ಅನುಸರಿಸಬೇಕು. ೫. ನಾಗರಿಕ ಕರ್ತವ್ಯಪ್ರಜ್ಞೆ ಸಂವಿಧಾನ, ಕಾನೂನು, ನಿಯಮ, ಶಿಸ್ತುಗಳನ್ನು ಎಲ್ಲರೂ ಎಲ್ಲ ಸಂದರ್ಭಗಳಲ್ಲೂ ಪಾಲಿಸಬೇಕು. ಯಾವುದೇ ಪ್ರಚೋದನಕಾರಿ ಘಟನೆ ನಡೆದಾಗಲೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನು ಬಾಹಿರವಾಗಿ ವರ್ತಿಸಬಾರದು. ಇಂದು ದೇಶಕ್ಕಾಗಿ ೨೪ ಗಂಟೆ ಬದುಕುವ ಅವಶ್ಯಕತೆ ಇದೆ. ಸಣ್ಣಪುಟ್ಟ ವಿಷಯಗಳಲ್ಲೂ ಎಲ್ಲರ ಬಗ್ಗೆ, ದೇಶ ಮತ್ತು ಸಮಾಜದ ಬಗ್ಗೆ ಕಾಳಜಿ ಇರಬೇಕು. ‘ಇದು ನನ್ನಿಂದಲೇ ಆರಂಭವಾಗಬೇಕು’ ಎಂದು ಪ್ರತಿಯೊಬ್ಬರೂ ನಿಶ್ಚಯಿಸಿ ಕಾರ್ಯಪ್ರವೃತ್ತರಾಗಬೇಕು. ಆಗ ಇದು ನಮ್ಮಿಂದ ಸಮಾಜಕ್ಕೂ, ಆ ಮೂಲಕ ಇಡೀ ದೇಶಕ್ಕೂ ವ್ಯಾಪಿಸುತ್ತದೆ. ಸಮಾಜ ಬಾಂಧವರಿಗೆ ಕರೆ ಕಳೆದ ನೂರು ವರ್ಷಗಳಿಂದ ರಾಷ್ಟç ಪುನರ್ನಿರ್ಮಾಣದ ಈ ಮಹಾನ್ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಡೀ ಸಮಾಜವನ್ನು ಸಂಘಟಿಸಿ, ಆ ಮೂಲಕ ದೇಶ ಎದುರಿಸುತ್ತಿರುವ ಸಮಸ್ಯೆ-ಸವಾಲುಗಳಿಗೆ ಪರಿಹಾರ ಹುಡುಕುವುದು, ಸಮಾಜದಲ್ಲಿ ಸುಯೋಗ್ಯ ಬದಲಾವಣೆಗಳನ್ನು ತರಲು ಕಾಲಕ್ಕೆ ತಕ್ಕಂತೆ ಸಮಾಜದ ವ್ಯವಸ್ಥೆಗಳನ್ನು ರೂಪಿಸುವುದು ಸಂಘಕಾರ್ಯದ ಮುಂದಿನ ಹಂತವಾಗಿದೆ. ನಮ್ಮದು ಬಹಳ ವಿಶಾಲವಾದ ದೇಶ. ಯಾವುದೇ ಒಂದೇ ಸಂಘಟನೆಯಿAದ ಶಾಶ್ವತ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಎಲ್ಲರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಒಂದಾಗಿ ಕೆಲಸ ಮಾಡಿದರೆ ಮಾತ್ರ ಇದು ಸಾಧ್ಯವಾದೀತು. ಈ ರಾಷ್ಟçಕಾರ್ಯದಲ್ಲಿ ಎಲ್ಲ ಸೋದರ ಸೋದರಿಯರು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸಕ್ರಿಯ ಪಾತ್ರ ವಹಿಸಬೇಕೆಂಬ ವಿನಂತಿ ನಮ್ಮದು. ತಾಯಿ ಭಾರತಿಯ ರಥವನ್ನು ಎಳೆಯಲು ಎಲ್ಲರ ಕೈಗಳು ಮತ್ತು ಶಕ್ತಿ ಸೇರಲಿ. ಬನ್ನಿ! ಈ ಅಮೃತಕಾಲದಲ್ಲಿ ಎಲ್ಲರೂ ಸೇರಿ ನಮ್ಮ ಭಗೀರಥ ಪ್ರಯತ್ನದಿಂದ ಭಾರತಾಂಬೆಯನ್ನು ಪರಮ ವೈಭವದತ್ತ ಕೊಂಡೊಯ್ಯೋಣ. ಭಾರತಮಾತೆಗೆ ಜಯವಾಗಲಿ