ಪ್ರಕೃತಿಯ ಸ್ವರೂಪ
ಪಂಚ ಪರಿವರ್ತನೆಯ ಇನ್ನೊಂದು ವಿಷಯವೇ ಪರಿಸರ. ಈ ಪ್ರಕೃತಿಯು ಭೂಮಿ, ಆಕಾಶ, ಗಾಳಿ, ಬೆಂಕಿ ಮತ್ತು ನೀರು ಎಂಬ ಪಂಚಭೂತಗಳಿAದ ನಿರ್ಮಿತವಾಗಿದೆ. ಭೂಮಿಯಿಂದ ಗಂಧ(ವಾಸನೆ), ಆಕಾಶದಿಂದ ಶಬ್ದ, ಗಾಳಿಯಿಂದ ಸ್ಪರ್ಶ, ನೀರಿನಿಂದ ರುಚಿ ಹಾಗೂ ಬೆಂಕಿಯಿAದ ರೂಪ (ದೃಶ್ಯ)ವು ಉಂಟಾಗಿದೆ. ಮಹರ್ಷಿ ಚರಕರು ತಮ್ಮ ಸಂಹಿತೆಯಲ್ಲಿ ಈ ಪಂಚಭೂತಗಳ ಜೊತೆಗೆ ಮತ್ತೊಂದು ತತ್ತ÷್ವವನ್ನು ಸೇರಿಸಿ, ಆರು ತÀತ್ತ÷್ವಗಳಿಂದ ಈ ಭೂಮಿಯ ನಿರ್ಮಾಣವಾಗಿದೆ ಎಂದು ವಿವರಿಸಿದ್ದಾರೆ.
ಆದ್ದರಿಂದ ಮನುಷ್ಯನು ತೀರಿಕೊಂಡು ಅವನ ಅಂತ್ಯಕ್ರಿಯೆ ನಡೆದಾಗ ‘ದೇಹವು ಪಂಚಭೂತಗಳಲ್ಲಿ ವಿಲೀನವಾಯಿತು’ ಎಂದು ಹೇಳುತ್ತೇವೆ. ಈ ವಿಲೀನತೆ ಹಲವು ರೀತಿಯಲ್ಲಿ ನಡೆಯುತ್ತದೆ. ಮಣ್ಣಿನಲ್ಲಿ ಹೂಳುವ ಮೂಲಕ, ಜಲ ಸಮಾಧಿಯ ಮೂಲಕ, ಬೆಂಕಿಯಲ್ಲಿ ಸುಡುವ ಅಥವಾ ಗಾಳಿಯಲ್ಲಿ ಕರಗುವ ಮೂಲಕ ನಡೆಯುತ್ತದೆ. ಇಲ್ಲಿ ಆರನೇ ತÀತ್ತ÷್ವವು ಆತ್ಮ ಅಥವಾ ಭಗವಂತ. ಭಗವಂತನೆAಬ ಈ ಚೇತನದಿಂದಾಗಿಯೇ ಪಂಚಭೂತಗಳ ಮೂಲಕ ಪ್ರಕೃತಿ ಅಥವಾ ಮನುಷ್ಯನ ಸೃಷ್ಟಿಯಾಯಿತು. ಭಗವಂತನೆAಬ ಈ ಚೈತನ್ಯ ಶಕ್ತಿಯೇ ಇವೆಲ್ಲವನ್ನೂ ಸಚೇತನ ಮತ್ತು ಕ್ರಿಯಾಶೀಲಗೊಳಿಸುತ್ತದೆ. ಮತ್ತು ಆತ್ಮರಹಿತವಾಗುತ್ತಿದ್ದಂತೆ, ಈ ಪಂಚತÀತ್ತ÷್ವಗಳು ನಿರ್ಜೀವವಾಗುತ್ತವೆ. ಈ ಪಂಚಭೂತಗಳ ವಿಶಿಷ್ಟ ಸಮತೋಲನದಿಂದಲೇ ಎಲ್ಲಾ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿರುತ್ತವೆ. ಈ ಸಮತೋಲನಕ್ಕೆ ಯಾವುದೇ ರೀತಿಯ ತೊಂದರೆ ಬಾರದಂತೆ ಕಾಪಾಡುವುದು ಮನುಷ್ಯನ ಕರ್ತವ್ಯವಾಗಿದೆ ಎಂದು ಆಚಾರ್ಯ ಚರಕರು ಹೇಳುತ್ತಾರೆ.
ಮಾಲಿನ್ಯ ಮತ್ತು ವೃಕ್ಷಾರೋಹಣ
ಮೇಲೆ ತಿಳಿಸಿದಂತಹ ಅಸಮತೋಲನವೇ ಇಂದಿನ ಅತಿದೊಡ್ಡ ಜಾಗತಿಕ ಸಮಸ್ಯೆಯಾಗಿದೆ. ಮಾಲಿನ್ಯ ಎಂದರೇನು? ಜಲ ಮಾಲಿನ್ಯ, ವಾಯು ಮಾಲಿನ್ಯ, ಭೂ ಮಾಲಿನ್ಯ ಇಂತಹ ಅನೇಕ ಮಾಲಿನ್ಯಗಳು ಇಂದು ಜಾಗತಿಕ ಚರ್ಚೆಯ ವಿಷಯಗಳಾಗಿವೆ. ಭಾರತೀಯ ಸಂಸ್ಕöÈತಿಯಲ್ಲಿ ‘ಮಾಲಿನ್ಯ’ ಎಂಬ ಪದವೇ ಇರಲಿಲ್ಲ ಎಂಬುದು ಗಮನಾರ್ಹ ಅಂಶ. ಈ ಪದವನ್ನು ನಂತರ ಬಳಕೆಗೆ ತರಲಾಯಿತು. ಮಿಥ್ಯಾಯೋಗ ಅಥವಾ ದುರುಪಯೋಗದಿಂದ ಉಂಟಾಗುವ ಪರಿಣಾಮಗಳ ಕುರಿತು ಚರಕ ಸಂಹಿತೆಯಲ್ಲಿ ವಿಸ್ತಾರವಾಗಿ ವಿವರಿಸಲಾಗಿದೆ. ಪೃಥ್ವಿ ಸೂಕ್ತದಲ್ಲಿ ನಮ್ಮ ಭೂಮಿಗೆ ವಸುಂಧರಾ, ಅವನಿ, ಪರಿಪಾಲಕ, ಪೋಷಕ, ಗೌರಿ, ಅನಂತಾ, ಪೃಥ್ವಿ ಮುಂತಾದ ೭೦ಕ್ಕೂ ಹೆಚ್ಚು ಹೆಸರುಗಳನ್ನು ನೀಡಲಾಗಿದೆ. ನಮ್ಮ ಸಂಸ್ಕöÈತಿಯಲ್ಲಿ ಭೂಮಿಯನ್ನು ತಾಯಿ ಎಂದು ಸಂಬೋಧಿಸಲಾಗುತ್ತದೆ.
“ಮಾತಾ ಭೂಮಿಃ ಪುತ್ರೋಽಹಂ ಪೃಥಿವ್ಯಾಃ” (ಭೂಮಿಯು ತಾಯಿ, ನಾನು ಪೃಥ್ವಿಯ ಮಗ) ಅಥರ್ವವೇದದ ಭೂಮಿ ಸೂಕ್ತ.
ನಾವು ಭೂಮಿಯನ್ನು ತಾಯಿ ಎಂದು ಮತ್ತು ನಮ್ಮನ್ನು ಅದರ ಮಕ್ಕಳೆಂದು ಕರೆದಿದ್ದೇವೆ. ನಮ್ಮ ಪೂರ್ವಜರು ಸೃಷ್ಟಿಯನ್ನು ತಮ್ಮನ್ನು ಪಾಲಿಸುವ ಅಂಶವೆAದು ಭಾವಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ತಮ್ಮ ನಾಗರಿಕತೆಯನ್ನು ಕಟ್ಟಿದರು. ನಾವು ಯಾವಾಗಲೂ ಪ್ರಕೃತಿ ಮತ್ತು ಪುರುಷರ ನಡುವೆ ಸಮತೋಲನವನ್ನು ಕಾಪಾಡಲು ಪ್ರಯತ್ನಿಸಿದೆವು ಮತ್ತು ನಮ್ಮ ಜೀವನಶೈಲಿ ಹಾಗೂ ಸಂಸ್ಕöÈತಿಯ ವಿಕಾಸವು ಈ ಮೂಲಮಂತ್ರವನ್ನು ಗಮನದಲ್ಲಿಟ್ಟುಕೊಂಡೇ ನಡೆಯಿತು.
ಸಂಯಮಿತ ಜೀವನಶೈಲಿ ಎಂದರೇನು? ಬದುಕಿ ಮತ್ತು ಬದುಕಲು ಬಿಡಿ, ಸಾವಿರಾರು ಲಕ್ಷಾಂತರ ವರ್ಷಗಳಿಂದ ವಿವಿಧ ಪ್ರಾಣಿಗಳು ಈ ಭೂಮಿಯ ಮೇಲೆ ವಾಸಿಸುತ್ತಿವೆ, ಆದರೆ ಅವು ಪ್ರಕೃತಿಗೆ ಯಾವುದೇ ಅನ್ಯಾಯವನ್ನು ಮಾಡಿಲ್ಲ. ಆದರೆ, ಮನುಷ್ಯರು ಮಾತ್ರ ತಮ್ಮ ನಾಗರಿಕತೆಯ ಅಭಿವೃದ್ಧಿಗೆ ಪ್ರಕೃತಿಯನ್ನು ಶೋಷಿಸುತ್ತಿದ್ದಾರೆ.
ವಿವಿಧ ರೀತಿಯ ಮಾಲಿನ್ಯಗಳು
ತಾಂತ್ರಿಕ ಕ್ರಾಂತಿಯ ಈ ಯುಗದಲ್ಲಿ, ಇ-ತ್ಯಾಜ್ಯದ (ಎಲೆಕ್ಟಾçನಿಕ್ ತ್ಯಾಜ್ಯ) ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮನ್ನು ನಾವು ವಿಶ್ಲೇಷಿಸಿಕೊಂಡರೆ, ನಾವು ಎಷ್ಟು ಸಿಡಿಗಳನ್ನು, ಎಷ್ಟು ಚಾರ್ಜರ್‌ಗಳನ್ನು ಬಳಸಿದ ನಂತರ ಬಿಸಾಡಿದ್ದೇವೆ ಎಂಬುದು ನಮಗೆ ತಿಳಿಯುತ್ತದೆ. ರೈಲು ಪ್ರಯಾಣದಲ್ಲಿ ಹಳಿಗಳ ಎರಡೂ ಬದಿಯಲ್ಲಿ ನೋಡಿದರೆ, ಖಾಲಿ ಬಾಟಲಿಗಳ ರಾಶಿಗಳು ಕಾಣಿಸುತ್ತವೆ. ಈ ರಾಶಿಗಳು ಎಲ್ಲಿಂದ ಬಂದವು? ಅವು ಪ್ರಕೃತಿಯಿಂದ ಬಂದವೇ? ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು ನೂರಾರು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಮಗೆಲ್ಲ ತಿಳಿದಿದೆ. ಆದ್ದರಿಂದ, ಪ್ಲಾಸ್ಟಿಕ್ ಇಂದಿನ ಯುಗದ ಅತಿ ದೊಡ್ಡ ಸಮಸ್ಯೆಯಾಗಿದೆ ಮತ್ತು ಇದರಿಂದ ಉದ್ಭವಿಸುವ ಸವಾಲುಗಳು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಈ ಪ್ಲಾಸ್ಟಿಕ್ ರಾಶಿಗಳು ಹೇಗೆ ಉಂಟಾಗುತ್ತವೆ ಎಂಬುದರ ಕುರಿತು ನಾವೆಲ್ಲರೂ ಯೋಚಿಸಬೇಕಾಗಿದೆ.
ಅನಗತ್ಯ ಹಾಗೂ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರವು ಈ ಭಯಾನಕ ರೂಪವನ್ನು ಪಡೆದುಕೊಂಡಿದೆ, ಇದರ ವಿಡಿಯೋಗಳು ಮತ್ತು ಚಿತ್ರಗಳನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಸಂಯಮಿತ ಜೀವನಶೈಲಿಯಿಂದ ನಾವು ಪ್ರಕೃತಿಯನ್ನು ಮತ್ತು ನಮ್ಮನ್ನು ಉಳಿಸಬಹುದು. ಈ ತಿಳುವಳಿಕೆ ನಮ್ಮೆಲ್ಲರಿಗೂ ಇದ್ದೇ ಇದೆ, ಆದರೆ ಅದನ್ನು ಆಚರಣೆಯಲ್ಲಿ ತರುವಲ್ಲಿ ತೊಂದರೆಯಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ವಿಷಯ ನಮಗೆಲ್ಲರಿಗೂ ಗೊತ್ತಿರುವಂಥದ್ದೇ. ಭೂಮಿಯ ಸರಾಸರಿ ಉಷ್ಣತೆಯು ಇನ್ನೊಂದು ಡಿಗ್ರಿ ಹೆಚ್ಚಾದರೂ ಸಹ ಬದುಕುವುದು ಕಷ್ಟವಾಗುತ್ತದೆ. ಭಾರತದಲ್ಲೇ ಅನೇಕ ಸ್ಥಳಗಳಲ್ಲಿ ತಾಪಮಾನವು ೫೦-೫೨ ಡಿಗ್ರಿಗಳವರೆಗೆ ತಲುಪುತ್ತಿದೆ. ಒಂದು ವೇಳೆ ೬೦ ಡಿಗ್ರಿಗಿಂತ ಹೆಚ್ಚಾದರೆ ಮನುಷ್ಯನು ಜೀವಂತವಾಗಿರಲು ಸಾಧ್ಯವಿಲ್ಲ. ಹಾಗೂ ಓಝೋನ್ ಪದರದಲ್ಲಿ ಆಗುತ್ತಿರುವ ರಂಧ್ರದಿAದಲೂ ಸಹ ವಿವಿಧ ಸಮಸ್ಯೆಗಳು ಉದ್ಭವಿಸುತ್ತಿವೆ.
ಸೂರ್ಯನ ಕಿರಣಗಳು ನೇರವಾಗಿ ನಮ್ಮನ್ನು ತಲುಪುವುದಿಲ್ಲ, ಅವು ಓಝೋನ್ ಪದರದ ಮೂಲಕ ಶೋಧಿಸಿ ನಂತರ ನಮ್ಮನ್ನು ತಲುಪುತ್ತವೆ. ಓಝೋನ್ ಪದರವು ಹಾನಿಕಾರಕ ನೇರಳಾತೀತ ಕಿರಣಗಳು (ಅಲ್ಟಾç-ವೈಲೆಟ್ ಕಿರಣಗಳು) ನಮ್ಮನ್ನು ತಲುಪದಂತೆ ತಡೆಯುತ್ತವೆ. ಈ ನೇರಳಾತೀತ ಕಿರಣಗಳು ನೇರವಾಗಿ ನಮ್ಮನ್ನು ತಲುಪಲು ಪ್ರಾರಂಭಿಸಿದರೆ, ಅದು ಗಂಭೀರ ದುಷ್ಪರಿಣಾಮವನ್ನು ಬೀರುತ್ತದೆ ಮತ್ತು ಬದುಕುವುದು ಕಷ್ಟಕರವಾಗುತ್ತದೆ. ಇದರ ಬಗ್ಗೆ ಜಾಗೃತಿ ಕೂಡ ಮೂಡುತ್ತಿರುವುದರಿಂದ ಅನೇಕ ದೇಶಗಳಲ್ಲಿ ಇದರ ನಿವಾರಣೆಗೆ ಪ್ರಯತ್ನಗಳು ನಡೆದಿವೆ. ಪರಿಸ್ಥಿತಿಯು ತಕ್ಕ ಮಟ್ಟಿಗೆ ಸುಧಾರಿಸಿದೆ. ಆದರೆ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಯನ್ನು ಪರಿಹರಿಸಲು ಈ ಪ್ರಯತ್ನಗಳು ಸಾಕಾಗುವುದಿಲ್ಲ.
ಇನ್ನೊಂದು ಗಂಭೀರ ಸಮಸ್ಯೆ ಇದೆ, ಅದುವೇ ಆಮ್ಲ ಮಳೆ (ಆಸಿಡ್ ರೇನ್). ಊಹಿಸಿಕೊಳ್ಳಿ, ಒಂದು ವೇಳೆ ನದಿಗಳಲ್ಲಿ ನೀರಿನ ಬದಲು ಆಮ್ಲ (ಆಸಿಡ್) ಹರಿಯಲು ಶುರುವಾದರೆ ಏನಾಗಬಹುದು! ಇದು ಕೇವಲ ಕಲ್ಪನೆಗೆ ಸೀಮಿತವಾಗಿಲ್ಲ. ಪರಿಸರದಲ್ಲಿ ಹೆಚ್ಚುತ್ತಿರುವ ಸಲ್ಫರ್ ಡೈಆಕ್ಸೆöÊಡ್ ಮತ್ತು ನೈಟ್ರೇಟ್ ನ ಪ್ರಮಾಣದಿಂದಾಗಿ ಆಸಿಡ್ ಮಳೆಯು ಒಂದು ಸಾಮಾನ್ಯ ವಿದ್ಯಮಾನವಾಗುತ್ತಿದೆ. ಹಲವೆಡೆ ಆಸಿಡ್ ಮಳೆಯು ಅಲ್ಲಿನ ಜೀವನದ ಮೇಲೆ ಪರಿಣಾಮ ಬೀರಿದೆ. ಸಮುದ್ರ ಮಾಲಿನ್ಯವೂ ಹೆಚ್ಚುತ್ತಿದೆ. ಇನ್ನು ಬಳಕೆಯ ನಂತರ ಎಸೆಯಲಾದ ಪ್ಲಾಸ್ಟಿಕ್ ಅಂತಿಮವಾಗಿ ಸಮುದ್ರವನ್ನು ತಲುಪುತ್ತದೆ ಮತ್ತು ಅದನ್ನು ಕಲುಷಿತಗೊಳಿಸುತ್ತದೆ, ಇದು ಸಮುದ್ರ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ದೊಡ್ಡ ದೊಡ್ಡ ಹಡಗುಗಳು ತೈಲವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವಾಗ, ಹಲವು ಬಾರಿ ಬೇರೆ ಬೇರೆ ಕಾರಣಗಳಿಂದಾಗಿ ತೈಲವು ನೀರಿನಲ್ಲಿ ಸೋರಿಕೆಯಾಗುತ್ತದೆ ಮತ್ತು ಆ ತೈಲವು ಸಮುದ್ರದ ಮೇಲ್ಮೆöÊಯಲ್ಲಿ ಸಂಗ್ರಹವಾಗಿ ತೇಲುತ್ತಾ ಇರುತ್ತದೆ. ಕೆಲವು ವರ್ಷಗಳ ಹಿಂದೆ ಮಲೇಷ್ಯಾ ಬಳಿ ಇದೇ ರೀತಿಯ ಘಟನೆ ಸಂಭವಿಸಿತ್ತು, ಇದರಿಂದಾಗಿ ಹಿಂದೂ ಮಹಾಸಾಗರದಲ್ಲಿ ಅಪಾರ ಸಂಖ್ಯೆಯಲ್ಲಿ ಮೀನುಗಳು ಸತ್ತವು. ನಾವು ನಮ್ಮ ದೈನಂದಿನ ಇಂಧನ ಬಳಕೆಯನ್ನು ನಿಯಂತ್ರಣಕ್ಕೆ ತರಬೇಕು ಹಾಗೂ ಎಚ್ಚರಿಕೆಯಿಂದ ಮತ್ತು ಸಂಯಮದಿAದ ಬಳಸಬೇಕು.
ಅರಣ್ಯದ ಮಹತ್ವ
ಒಟ್ಟು ಭೂಮಿಯ ಶೇ.೩೩ ರಷ್ಟು ಭಾಗವು ಅರಣ್ಯವಾಗಿರಬೇಕು ಎಂದು ಅಂತರರಾಷ್ಟಿçÃಯ ಮಟ್ಟದಲ್ಲಿ ಒಪ್ಪಂದವಾಗಿದೆ. ಭಾರತವೂ ಸಹ ರಾಷ್ಟಿçÃಯ ಅರಣ್ಯ ನೀತಿಯಲ್ಲಿ ಇದೇ ಮಾತನ್ನು ಪುನರುಚ್ಚರಿಸಿದೆ, ಅದರೊಳಗೆ ೩೩ ಪ್ರತಿಶತದಷ್ಟು ಅರಣ್ಯ ಪ್ರದೇಶದ ಗುರಿಯನ್ನು ಇಡಲಾಗಿದೆ, ಆದರೆ ಈಗ ಉಳಿದಿರುವ ಅರಣ್ಯವೆಷ್ಟು? ಕೇವಲ ೨೧.೭೬ ಪ್ರತಿಶತ. ಒಂದು ವೇಳೆ ೩.೪೧ ಪ್ರತಿಶತದಷ್ಟು ಇತರ ಮರಗಳನ್ನೂ ಸೇರಿಸಿದರೆ, ಒಟ್ಟು ಅರಣ್ಯ ಪ್ರದೇಶವು ೨೫.೧೭ ಪ್ರತಿಶತ ಮಾತ್ರ ಆಗುತ್ತದೆ. ‘ಭಾರತ ಅರಣ್ಯ ಸ್ಥಿತಿಗತಿ ವರದಿ (ಐ.ಎಸ್.ಎಫ್.ಆರ್) ೨೦೨೩’ ರ ಪ್ರಕಾರ ೧೪೪೫ ಚದರ ಕಿ.ಮೀ. ಅರಣ್ಯ ಹೆಚ್ಚಳವಾಗಿದೆ. ಆದರೂ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗಳು ನಡೆಯುವುದು ಅವಶ್ಯಕ. ಗಿಡಗಳನ್ನು ನೆಡಿ, ಮರಗಳನ್ನು ಬೆಳೆಸಿ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಹೀಗೇಕೆ ಹೇಳುತ್ತಿರುತ್ತಾರೆ ಎಂಬ ಬಗ್ಗೆ ಯೋಚಿಸಬೇಕು. ನಾವು ಹಸಿರನ್ನು ಹೆಚ್ಚಿಸಬೇಕು, ನಮ್ಮ ಭಾರತದ ಮೂರನೇ ಒಂದು ಭಾಗದಷ್ಟು ಭೂಮಿ ಅರಣ್ಯ ಪ್ರದೇಶವಾಗಿರಬೇಕು. ಕೆಲವು ಸ್ಥಳಗಳಲ್ಲಿ ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ ಮರುಭೂಮಿಯಲ್ಲಿ ಮರಗಳನ್ನು ನೆಡುವುದು ಸಾಧ್ಯವಿಲ್ಲ, ಲೇಹ್ ಲಡಾಖ್‌ನಲ್ಲಿರುವ ಹಿಮಾವೃತ ಪ್ರದೇಶಗಳಲ್ಲಿ ಮತ್ತು ಹಿಮಾಲಯದಲ್ಲಿಯೂ ಇದು ಸಾಧ್ಯವಿಲ್ಲ. ಆದ್ದರಿಂದ, ಲಭ್ಯವಿರುವ ೩೩ ಪ್ರತಿಶತದಷ್ಟು ಭೂಮಿಯನ್ನು ಅರಣ್ಯೀಕರಣ ಮಾಡಬೇಕು ಮತ್ತು ಎಲ್ಲಿ ಸಾಧ್ಯವೋ ಅಲ್ಲಿ ಹೆಚ್ಚು ಗಿಡಮರಗಳನ್ನು ನೆಡಬೇಕು. ಈ ಗುರಿಯನ್ನು ಸಾಧಿಸಲು ದೇಶದಲ್ಲಿ ಒಂದು ದೊಡ್ಡ ಅಭಿಯಾನವನ್ನು ನಡೆಸಬೇಕು.
ಪರಿಸರ ಸ್ನೇಹಿ ಜೀವನಶೈಲಿ
ಹವಾಮಾನಕ್ಕೆ ಅನುಗುಣವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆಯೇ ನಮ್ಮ ದೈನಂದಿನ ಜೀವನದಲ್ಲಿ ಪ್ರಕೃತಿಯೊಂದಿಗೂ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಪ್ರಕೃತಿ ಮತ್ತು ಮನುಷ್ಯನ ನಡುವೆ ಆಳವಾದ ಸಂಬAಧವಿದೆ. ಉದಾಹರಣೆಗೆ ಪ್ರಕೃತಿಯಲ್ಲಿ ಅಗ್ನಿ ಮತ್ತು ಗಾಳಿ, ಗಾಳಿ ಮತ್ತು ಆಕಾಶ, ಆಕಾಶ ಮತ್ತು ಭೂಮಿ ಸಂಬAಧ ಹೊಂದಿರುವAತೆಯೇ ಮನುಷ್ಯ ಮತ್ತು ಪ್ರಕೃತಿಯೂ ಸಹ ಒಂದಕ್ಕೊAದು ಬೆಸೆದುಕೊಂಡಿದೆ. ಈ ಸೃಷ್ಟಿಚಕ್ರವನ್ನು ಹಾಳುಮಾಡಲು ಬಿಡಬಾರದು.
ನೀರಿನ ಮಿತ ಬಳಕೆ
ತಜ್ಞರ ಪ್ರಕಾರ, ೨೦೫೦ರ ವೇಳೆಗೆ ಭಾರತದ ೮-೧೦ ರಾಜ್ಯಗಳ ಸುಮಾರು ೧೫೦ ರಿಂದ ೨೦೦ ಜಿಲ್ಲೆಗಳಲ್ಲಿ ನೀರಿನ ಕೊರತೆ ಹೆಚ್ಚಾಗಲಿದೆ. ೧೯೪೭ರವರೆಗೆ ನಮ್ಮ ದೇಶದಲ್ಲಿ ಪ್ರತಿ ವ್ಯಕ್ತಿಗೆ ಸುಮಾರು ೬೦೦೦ ಘನ ಮೀಟರ್ ನೀರು ಲಭ್ಯವಿತ್ತು, ಆದರೆ ೨೦೦೦ದಲ್ಲಿ ಮಾಡಿದ ಅಂದಾಜಿನ ಪ್ರಕಾರ ಇದು ತಲಾ ಸುಮಾರು ೨೦೦೦ ಘನ ಮೀಟರ್‌ಗೆ ಇಳಿದಿದೆ. ೧೯೪೭ರಿಂದ ೨೦೦೦ದವರೆಗೆ ಹೀಗಾದರೆ, ೨೦೫೦ರ ವೇಳೆಗೆ ಏನಾಗಬಹುದು! ಇದು ತಲಾ ಸುಮಾರು ೧೨೦೦ ಘನ ಮೀಟರ್‌ಗೆ ಇಳಿಯುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ, ಆದರೆ ನೀರಿನ ಮೂಲಗಳು ಹೆಚ್ಚಾಗುತ್ತಿಲ್ಲ. ಆದ್ದರಿಂದ, ಈ ಸಮಸ್ಯೆಯ ಪರಿಹಾರಕ್ಕಾಗಿ ನಾವು ಯೋಚಿಸಬೇಕಿದೆ. ಮುಂದಿನ ವಿಶ್ವಯುದ್ಧವು ನೀರಿನ ಕಾರಣದಿಂದ ನಡೆಯಲಿದೆ ಎಂದು ಪ್ರಪಂಚದ ಅನೇಕ ಚಿಂತಕರು ಹೇಳಿದ್ದಾರೆ. ಆದ್ದರಿಂದ, ನೀರನ್ನು ಹನಿ ಹನಿಯಾಗಿ ರಕ್ಷಿಸುವುದು ಅವಶ್ಯಕ ಮತ್ತು ನೀರಿನ ಮೂಲಗಳ ಸಂಖ್ಯೆಯೂ ಹೆಚ್ಚಾಗಬೇಕು. ನಗರೀಕರಣದ ಪ್ರಕ್ರಿಯೆಯು ಹೆಚ್ಚು ವ್ಯಾಪಕವಾಗುತ್ತಿರುವುದರಿಂದ ಕೆರೆಗಳು ಮಾಯವಾಗುತ್ತಿವೆ. ಕೆರೆಗಳ ಜಾಗದಲ್ಲಿ ಬಸ್ ನಿಲ್ದಾಣಗಳಂತಹ ಅನೇಕ ರೀತಿಯ ಸಾರ್ವಜನಿಕ ವ್ಯವಸ್ಥೆಗಳಿಗೆ ಸಂಬAಧಿಸಿದ ನಿರ್ಮಾಣಗಳನ್ನು ಮಾಡಲಾಗುತ್ತಿದೆ. ಇರುವ ಕೆರೆಗಳು ನಿರಂತರವಾಗಿ ಒಣಗುತ್ತಿವೆ ಮತ್ತು ಆ ಪ್ರಮಾಣದಲ್ಲಿ ಹೊಸ ಕೆರೆಗಳ ನಿರ್ಮಾಣವಾಗುತ್ತಿಲ್ಲ. ಹೀಗಿರುವ ಕೆರೆಗಳೂ ಒಣಗಿಹೋದರೆ, ಆಗ ಎಂತಹ ಭಯಾನಕ ಪರಿಸ್ಥಿತಿ ಉಂಟಾಗಬಹುದು ಎಂಬುದನ್ನು ಯೋಚಿಸಿ! ಭೂಮಿಯ ಮೇಲಿನ ಒಟ್ಟು ನೀರಿನ ಪ್ರಮಾಣದಲ್ಲಿ ಕೇವಲ ೪ ಪ್ರತಿಶತದಷ್ಟು ಮಾತ್ರ ಶುದ್ಧವಾಗಿದೆ ಅಥವಾ ಕುಡಿಯಲು ಯೋಗ್ಯವಾಗಿದೆ ಎಂದು ನಮಗೆ ತಿಳಿದಿದೆಯಲ್ಲವೇ?
ನಮ್ಮ ಉಪಕ್ರಮಗಳು ಅವಶ್ಯಕ
ಈ ಎಲ್ಲಾ ಪರಿಸ್ಥಿತಿಗಳಲ್ಲಿ, ನಾವು ಭಾರತದ ಪರಿಸ್ಥಿತಿಯನ್ನು ಮುಂದಿಟ್ಟುಕೊAಡು ಯೋಚಿಸಿದಾಗ ಗಂಭೀರ ಚಿಂತನೆಗಳು ನಮ್ಮಲ್ಲಿ ಮೂಡುತ್ತದೆ. ಸುಮ್ಮನೆ ಕುಳಿತುಕೊಳ್ಳುವುದರಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ, ಬದಲಾಗಿ ನಾವು ನಮ್ಮ ಜೀವನಶೈಲಿಯ ಬಗ್ಗೆ ಆಲೋಚಿಸಬೇಕು. ಕೆಲವು ವಸ್ತುಗಳನ್ನು ಮರುಬಳಕೆ ಮಾಡುವುದು, ಪ್ಲಾಸ್ಟಿಕ್ ಬಳಕೆಯನ್ನು ಹಂತಹAತವಾಗಿ ಕಡಿಮೆ ಮಾಡುತ್ತಾ ಹೋಗುವುದು. ಎಲ್ಲಿ ಸಾಧ್ಯವೋ ಅಲ್ಲಿ ಪ್ಲಾಸ್ಟಿಕ್ ಬಳಸದಿರುವುದು ಪರಿಹಾರೋಪಾಯಗಳಾಗಿವೆ. ಬಟ್ಟೆ ಮತ್ತು ಕಾಗದವನ್ನು ಪದೇ ಪದೇ ಬಳಸಬಹುದು.
ಬುದ್ಧನ ಶಿಷ್ಯರಲ್ಲಿ ಪ್ರಸಿದ್ಧನಾದ ಆನಂದನೆAಬ ಶಿಷ್ಯನ ಒಂದು ಕಥೆಯೊಂದಿದೆ. ಒಮ್ಮೆ ಆನಂದನು ಬೌದ್ಧ ಭಿಕ್ಷುಗಳಿಗಾಗಿ ಬಟ್ಟೆ ಕೇಳಲು ಶ್ರೇಷ್ಠಿಯ (ವ್ಯಾಪಾರಿ) ಬಳಿಗೆ ಹೋದನು. ವ್ಯಾಪಾರಿಯು ‘ಹಿಂದಿನ ಬಾರಿ ತೆಗೆದುಕೊಂಡು ಹೋಗಿದ್ದ ಬಟ್ಟೆಗಳನ್ನು ಏನು ಮಾಡಿದಿರಿ?’ ಎಂದು ಕೇಳಿದ. ಆನಂದನು ‘ಆ ಬಟ್ಟೆಗಳನ್ನು ನಾವು ಉಟ್ಟೆವು ಮತ್ತು ಅವು ಹರಿದುಹೋದವು’ ಎಂದು ಉತ್ತರಿಸಿದನು. ವ್ಯಾಪಾರಿಯು ಎರಡನೇ ಪ್ರಶ್ನೆಯನ್ನು ಕೇಳಿದ - ‘ಬಟ್ಟೆ ಹರಿದ ನಂತರ ಏನು ಮಾಡಿದಿರಿ?’
‘ನಾವು ಅದನ್ನು ದೇಹವನ್ನು ಒರೆಸಲು ಬಳಸಿಕೊಂಡೆವು’ ಎಂದುತ್ತರಿಸಿದ ಆನಂದ.
‘ಆಮೇಲೆ ಏನಾಯಿತು?’
‘ಮತ್ತೆ ಹರಿದುಹೋಯಿತು.’
‘ಮತ್ತೆ ಹರಿದ ನಂತರ ಏನು ಮಾಡಿದಿರಿ?’
‘ನಾವು ಅದನ್ನು ಅಡುಗೆಮನೆ ಇತ್ಯಾದಿ ಸ್ಥಳಗಳಲ್ಲಿ ಚೆಲ್ಲಿದ ನೀರನ್ನು ಒರೆಸಲು, ನೆಲ ಒರೆಸುವ ಬಟ್ಟೆಯಾಗಿ ಬಳಸಿಕೊಂಡೆವು’.
ಇದನ್ನು ಕೇಳಿದ ಶ್ರೇಷ್ಠಿಗೆ ಭಿಕ್ಷುಗಳು ಬಟ್ಟೆಯ ಪ್ರತಿಯೊಂದು ದಾರವನ್ನೂ ಬಳಸಿದ್ದಾರೆ ಎಂಬುದು ಅರ್ಥವಾಯಿತು. ಅವನು ಸಂತೋಷಗೊAಡನು ಮತ್ತು ಬೌದ್ಧ ಭಿಕ್ಷುಗಳಿಗೆ ಅವರಿಗೆ ಬೇಕಾದಷ್ಟು ಬಟ್ಟೆಗಳನ್ನು ಕೊಡಲು ನಿರ್ದೇಶಿಸಿದನು. ಪ್ರಕೃತಿಯ ಶೋಷಣೆ ಮಾಡದಂತೆ ಮತ್ತು ಅದನ್ನು ಸಂರಕ್ಷಿಸಲು ನಾವು ನಮ್ಮ ಜೀವನದಲ್ಲಿ ಬಳಸುವ ವಸ್ತುವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು ಎನ್ನುವುದೇ ಈ ಕತೆಯ ಸಂದೇಶ. ಆದ್ದರಿಂದ ಕೆಲವು ವಸ್ತುಗಳನ್ನು ಅದರ ಗರಿಷ್ಠ ಬಳಕೆಯ ಚಕ್ರ ಪೂರ್ಣಗೊಳ್ಳುವಂತೆ ಉಪಯೋಗಿಸಬೇಕು.
ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಒಂದೊAದು ಸಸಿಯೊಂದಿಗೆ ಜೋಡಿಸಿ, ಪ್ರತಿದಿನ ಶಾಲೆ ಮುಗಿಸಿ ಹೋಗುವಾಗ ತಮ್ಮ ಸಸಿಯ ಬಳಿ ಹೋಗಿ ಅದರ ಆರೈಕೆ ಮಾಡಬೇಕು ಎಂದು ಅವರಲ್ಲಿ ವಿನಂತಿಸಬಹುದು. ಇದೇ ರೀತಿಯ ಪ್ರಯತ್ನಗಳನ್ನು ಮಾಡಿ ಜನರು ಮರುಭೂಮಿಯಲ್ಲಿ ಕಾಡುಗಳನ್ನು ಸೃಷ್ಟಿಸಿದ್ದಾರೆ.
ಸ್ಥಳೀಯ ಮಣ್ಣು, ಸಾವಯವ ಗೊಬ್ಬರಗಳ ಮಿಶ್ರಣ ಮಾಡಿ ಸೀಡ್‌ಬಾಲ್ ಬಳಕೆಯನ್ನು ಉತ್ತೇಜಿಸುವುದು - ಪ್ರಕೃತಿ ಮತ್ತು ಜಲ ಸಂರಕ್ಷಣೆಯ ದೃಷ್ಟಿಯಿಂದ ಹೆಚ್ಚು ಉಪಯುಕ್ತ.



