ಲೇಖಕರು: .
ಪ್ರಕಾಶಕರು: ವಿಶ್ವ ಸಂವಾದ ಕೇಂದ್ರ ಕರ್ನಾಟಕ
ಬೆಲೆ: ₹25.00
ಬಾಂಗ್ಲಾದೇಶದಲ್ಲಿ ಹಿಂದೂಗಳ ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಇಸ್ಲಾಮಿಕ್ ಉಗ್ರಗಾಮಿಗಳು ನಡೆಸುತ್ತಿರುವ ದೌರ್ಜನ್ಯಗಳು, ದಾಳಿ, ಹತ್ಯೆ, ದರೋಡೆ, ಬೆಂಕಿ ಹಚ್ಚುವುದು, ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯ ಕಿರುಕುಳ ಎಚ್ಚರಿಕೆಯ ಕರೆಗಂಟೆಯಾಗಿದೆ. ಇಂತಹ ಘಟನೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಬದಲು ಬಾಂಗ್ಲಾದೇಶದ ಪ್ರಸ್ತುತ ಸರ್ಕಾರ ಹಾಗೂ ಇತರ ಸಂಬAಧಿತ ಸಂಸ್ಥೆಗಳು ಮೂಕ ಪ್ರೇಕ್ಷಕರಾಗಿ ನಿಂತಿದೆ. ಅಸಹಾಯಕತೆಯಿಂದ, ಬಾಂಗ್ಲಾದೇಶೀ ಹಿಂದೂಗಳು ತಮ್ಮ ಸ್ವ ರಕ್ಷಣೆಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತಿದಾಗ ಅವರ ಧ್ವನಿಯನ್ನು ಹತ್ತಿಕ್ಕಲು ಅಮಾನವೀಯ ಪ್ರಯತ್ನಗಳಾಗಿವೆ. ಹಿಂದೂಗಳ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್ ಸನ್ಯಾಸಿ ಪೂಜ್ಯ ಶ್ರೀ ಚಿನ್ಮಯ್ ದಾಸ್ ಅವರನ್ನು ಬಾಂಗ್ಲಾದೇಶದ ಸರ್ಕಾರ ಬಂಧಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮುಂದುವರಿಸಲು ಹಾಗೂ ಅಂತಾರಾಷ್ಟಿçÃಯ ಬೆಂಬಲವನ್ನು ಪಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಬಾಂಗ್ಲಾದೇಶದಲ್ಲಾಗುತ್ತಿರುವ ಈ ಎಲ್ಲಾ ಸಂಗತಿಗಳಾಧಾರಿತ ವಾಸ್ತವಾಂಶಗಳು ಹಾಗೂ ಹೆಚ್ಚುತ್ತಿರುವ ಮೂಲಭೂತವಾದಿ ಮನಸ್ಥಿತಿಗಳ ಕುರಿತು ಅಂಕಿಅAಶಗಳೊAದಿಗೆ ತಿಳಿಸಿಕೊಡುವ ಪುಸ್ತಕ ಇದಾಗಿದೆ.
ಪುಸ್ತಕಕ್ಕಾಗಿ ಸಂಪರ್ಕಿಸಿ: ೬೩೬೦೫೮೧೯೫೭