ನಮ್ಮನ್ನು ಅನುಸರಿಸಿ: Facebook Twitter Instagram YouTube

ಸಂದುಹೋದ ಸಾತ್ವಿಕರು

ಅಪ್‌ಲೋಡ್ ಮಾಡಿದ ದಿನಾಂಕ: 31-07-2026 09:38

ಸಂದುಹೋದ ಸಾತ್ವಿಕರು

ಲೇಖಕರು: ಡಾ. ಹೆಚ್. ಆರ್.ವಿಶ್ವಾಸ

ಪ್ರಕಾಶಕರು: ಸಾಹಿತ್ಯ ಸಿಂಧು ಪ್ರಕಾಶನ

ಬೆಲೆ: ₹100.00

ನೂರಾರು ಪುಸ್ತಕಗಳು ಪಾಂಡಿತ್ಯಪೂರ್ಣವಾಗಿ ಹೇಳುವ ವಿಚಾರಗಳ ಪ್ರಭಾವಕ್ಕಿಂತಲೂ ವ್ಯಕ್ತಿಯೊಬ್ಬ ಪ್ರತ್ಯಕ್ಷ ಬದುಕಿದ ರೀತಿ, ಅವನ ವ್ಯವಹಾರ, ಮಾತುಕತೆಗಳು ಸುತ್ತಲಿನ ಸಮಾಜದ ಮೇಲೆ ಬೀರುವ ಪ್ರಭಾವ ಇನ್ನೂ ಹೆಚ್ಚು ಗಾಢವಾಗಿರುತ್ತದೆ. ಅಂತಹ ಹದಿನಾಲ್ಕು ಮಂದಿ ಸಾತ್ವಿಕರ ಬದುಕಿನ ಚಿತ್ರಣಗಳನ್ನು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿ ನೀಡುವ ಪ್ರಯತ್ನವನ್ನು ‘ಸಂದುಹೋದ ಸಾತ್ವಿಕರು’ ಎಂಬ ಪುಸ್ತಕದಲ್ಲಿ ಮಾಡಲಾಗಿದೆ. “ನಾನು ಕಂಡದ್ದನ್ನು ಮಾತ್ರ ದಾಖಲಿಸುತ್ತೇನೆ, ಬೇರೇನನ್ನೂ ಅಲ್ಲ” ಎಂಬ ಲೇಖಕರೇ ಹಾಕಿಕೊಂಡಿರುವ ನಿಯಮ ಪುಸ್ತಕವನ್ನು ಓದುವುದಕ್ಕೆ ಪ್ರಭಾವಿಸುತ್ತದೆ. ರಾಷ್ಟಿçÃಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಸಿ.ಆರ್.ಮುಕುಂದ ಅವರು ಈ ಕಿರುಹೊತ್ತಿಗೆಗೆ ಮುನ್ನುಡಿಯನ್ನು ಬರೆದಿದ್ದಾರೆ.
ಪುಸ್ತಕಕ್ಕಾಗಿ ಸಂಪರ್ಕಿಸಿ:  ೬೩೬೦೫೮೧೯೫೭


⬅ ಮುಖಪುಟ