ಲೇಖಕರು: ಕೆ. ಶ್ಯಾಮಪ್ರಸಾದ್, ಜನಮೇಜಯ ಉಮರ್ಜಿ
ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಶನ್ಸ್
ಬೆಲೆ: ₹120.00
ಒಡೆದು ಆಳುವುದು ವಿದೇಶೀಯರ ನೀತಿ. ನಮಗೆ ವಿಶ್ವವೇ ಪರಿವಾರದ ರೀತಿ. ಕೆಲವರಿಗೆ ಎದ್ದು ಬಂದ ಹೊಸ ವಿಚಾರಗಳೆಲ್ಲವೂ ಪ್ರೊಟೆಸ್ಟೆಂಟ್; ಇನ್ನು ಕೆಲವರಿಗೆ ಎಲ್ಲವೂ ಕೆಂಪು ಕ್ರಾಂತಿ. ಈ ಎರಡೂ ಕೂಡ ದಾರಿ ತಪ್ಪಿಸುತ್ತವೆ. ನಾವು ಬಿಡಲೇ ಬಾರದ ದಾರಿ ಸಮನ್ವಯ. ಬುದ್ಧ ಮತ್ತು ವಿವೇಕಾನಂದರನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ. ಇಬ್ಬರು ಮಹಾನ್ ವ್ಯಕ್ತಿಗಳನ್ನು ಹೋಲಿಸುವುದಲ್ಲ, ಬದಲಾಗಿ ಅವರಲ್ಲಿಯ ಸಾಮ್ಯವನ್ನು ಓದುಗರ ಮುಂದಿಡುವ ಪ್ರಯತ್ನ ಈ ಪುಸ್ತಕದಲ್ಲಿದೆ. ವೈಯಕ್ತಿಕ ಬದುಕನ್ನು ಬದಿಗಿಟ್ಟು, ಸಮಾಜ ಉದ್ಧಾರದ ದಾರಿ ಹಿಡಿದ ಈರ್ವರ ಬದುಕು ಮತ್ತು ಅವರು ನೀಡಿದ ಸಂದೇಶಗಳು ಬದುಕಿಗೆ ದಾರಿದೀಪಗಳಾಗಿವೆ. ಜಗತ್ತನ್ನು ವಿಘಟಿಸಬೇಕು ಎಂದು ಸಂಚುರೂಪಿಸುತ್ತಿರುವವರ, ಅದರಲ್ಲೂ ಭಾರತದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಬೇಕೆಂದು ಹಲವು ಪ್ರಯತ್ನಗಳನ್ನು ಮಾಡುತ್ತಿರುವವರ ಕುರಿತು ಎಚ್ಚರಿಕೆಯನ್ನು ವಹಿಸಿ, ಸಾಮರಸ್ಯವನ್ನು ಸಾಧಿಸಬೇಕಾದ ಅಗತ್ಯತೆಗಳ ಕುರಿತು ಪುಸ್ತಕ ತಿಳಿಸಿಕೊಡುತ್ತದೆ.