ನಮ್ಮನ್ನು ಅನುಸರಿಸಿ: Facebook Twitter Instagram YouTube

ಹಿಂದುತ್ವ: ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ

ಅಪ್‌ಲೋಡ್ ಮಾಡಿದ ದಿನಾಂಕ: 31-07-2026 09:58

ಹಿಂದುತ್ವ: ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ

ಲೇಖಕರು: .

ಪ್ರಕಾಶಕರು: ಸಾಹಿತ್ಯ ಸಂಗಮ

ಬೆಲೆ: ₹50.00

ಹಿಂದುತ್ವವು ಒಂದು ಜೀವನ ಪದ್ಧತಿಯ ರೂಪದಲ್ಲಿ ವಿಶ್ವದ ಪ್ರಾಚೀನ ಧರ್ಮ, ಸಂಸ್ಕೃತಿ ಮತ್ತು ನಾಗರಿಕತೆಯಾಗಿದೆ. ಇದು ಚಿರಪುರಾತನವಾಗಿರುವ ಜೊತೆಜೊತೆಗೇ ನಿತ್ಯ ನೂತನವೂ ಆಗಿದೆ. ಈ ಕಾರಣದಿಂದಾಗಿಯೇ ಅದನ್ನು ಕಾಲಾತೀತವಾಗಿರುವ ‘ಸನಾತನ' ಎಂದೂ ಕರೆಯಲಾಗುತ್ತದೆ. ಹಿಂದುತ್ವದ ವಿಶೇಷತೆಯೆಂದರೆ, ತನ್ನ ಮೂಲಭೂತ ಶಾಶ್ವತ ಸಿದ್ಧಾಂತಗಳನ್ನು ಪರಿಶುದ್ಧ ಸ್ವರೂಪದಲ್ಲಿಯೇ ಕಾಪಾಡಿಕೊಳ್ಳುವುದರ ಜೊತೆಜೊತೆಗೇ, ಕಾಲದ ಅಗತ್ಯಕ್ಕೆ ತಕ್ಕಂತೆ ತನ್ನ ಅಭಿವ್ಯಕ್ತಿ, ಶಬ್ದಭಂಡಾರ ಮತ್ತು ನಡವಳಿಕೆಗಳನ್ನು ಅದು ಬದಲಾಯಿಸಿಕೊಳ್ಳುತ್ತದೆ. ಅನೇಕ ಘೋರ ದಾಳಿಗಳ ನಂತರವೂ ಅದು ಜೀವಂತವಾಗಿ ಉಳಿದಿರುವ, ಪ್ರಗತಿಯನ್ನು ಸಾಧಿಸುತ್ತಿರುವ ಹಾಗೂ ವಿಜಯಸನ್ನದ್ಧವಾಗಿರುವ ಹಿಂದಿನ ರಹಸ್ಯವೇ ಇದು. ಆದರೆ ಅನೇಕ ವಿಘಟನಕಾರಿ ಶಕ್ತಿಗಳು ಇದನ್ನು ಕಳಂಕಿತಗೊಳಿಸಲು ಅಪಪ್ರಚಾರದಲ್ಲೂ ತೊಡಗಿದ್ದಾರೆ. ‘ಸುಳ್ಳಿಗೆ ಸರಿಯಾದ ಉತ್ತರವನ್ನು ಸತ್ಯದ ಮೂಲಕ ಮಾತ್ರವೇ ನೀಡಲು ಸಾಧ್ಯ. ಈ ಸಮಕಾಲೀನ ಅವಶ್ಯಕತೆಯನ್ನು ಪೂರೈಸಲು ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ಆರೆಸ್ಸೆಸ್ ಸರಸಂಘಚಾಲಕರಾದ ಡಾ॥ ಮೋಹನ್ ಭಾಗವತ್, ಹಿರಿಯ ಚಿಂತಕ ಹಾಗೂ ಅಖಿಲ ಭಾರತೀಯ ಕಾರ್ಯಕಾರಿಣಿಯ ಸದಸ್ಯರಾದ ಶ್ರೀ ಸುರೇಶ್ ಸೋನಿ ಮತ್ತು ಸಂಘದ ಸಹಸರಕಾರ್ಯವಾಹರಾದ ಶ್ರೀ ಅರುಣ್ ಕುಮಾರ್ ಅವರು ಈ ವಿಷಯದ ಕುರಿತು ನೀಡಿರುವ ಉಪನ್ಯಾಸಗಳನ್ನು ಅಕ್ಷರರೂಪಕ್ಕೆ ಇಳಿಸಿ, ಸಂಪಾದಿಸಿ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.
ಪುಸ್ತಕಕ್ಕಾಗಿ ಸಂಪರ್ಕಿಸಿ: ೬೩೬೦೫೮೧೯೫೭

⬅ ಮುಖಪುಟ