ನಮ್ಮನ್ನು ಅನುಸರಿಸಿ: Facebook Twitter Instagram YouTube

ಅಖಂಡ ರಾಷ್ಟç ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್

ಅಪ್‌ಲೋಡ್ ಮಾಡಿದ ದಿನಾಂಕ: 31-07-2026 10:03

ಅಖಂಡ ರಾಷ್ಟç ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್

ಲೇಖಕರು: ಮೇಘಾ ಪ್ರಮೋದ್

ಪ್ರಕಾಶಕರು: ಸಮೃದ್ಧ ಸಾಹಿತ್ಯ

ಬೆಲೆ: ₹120.00

ಅಹಲ್ಯಾ ಬಾಯಿ ಹೋಳ್ಕರ್ ಎಂಬ ಮೇರು ವ್ಯಕ್ತಿತ್ವವು ಪುಣ್ಯಭೂಮಿ ಭಾರತದಲ್ಲಿ ಜನ್ಮತಾಳಿ ೩೦೦ ವಸಂತಗಳು ತುಂಬಿದೆ. ಜೀವನದುದ್ದಕ್ಕೂ ಎದುರಾದ ಕಷ್ಟಗಳ ಸರಮಾಲೆಯ ನಡುವಿನಲ್ಲೂ ತನ್ನ ಪ್ರಜೆಗಳ ಹಿತಕ್ಕಾಗಿ, ಭಾರತದ ಏಕಾತ್ಮತೆಗಾಗಿ ಕಾರ್ಯನಿರ್ವಹಿಸಿ, ತನ್ನ ಸಮಸ್ತ ಸಂಪತ್ತು, ಅಧಿಕಾರ ಎಲ್ಲವೂ ಶಿವನಿಗೆ ಸೇರಿದ್ದಾಗಿದ್ದು ತಾನು ಕೇವಲ ಅವನ ಆಜ್ಞಾಪಾಲನೆ ಮಾಡುತ್ತಿದೀನಿ ಎಂಬ ಭಾವದಿಂದ ರಾಜ್ಯಭಾರ ಮಾಡುತ್ತಿದ್ದ, ದೇಶ ಹಿಂದೆAದೂ ಕಂಡಿಲ್ಲದ ಅಪರೂಪದ ವ್ಯಕ್ತಿತ್ವ ಪರಕೀಯರ ದಾಳಿ, ಆಕ್ರಮಣಗಳ ನಡುವೆಯೂ ತನ್ನ ರಾಜ್ಯವನ್ನು ಸಮೃದ್ಧಗೊಳಿಸುತ್ತಾ ಇಡೀ ಭಾರತದ ಸಾಂಸ್ಕೃತಿಕ ವೈಭವವನ್ನು, ರಾಷ್ಟಿçÃಯ ಚೇತನವನ್ನು, ಭಾರತದ ಏಕಾತ್ಮತೆಯನ್ನು ಮರು ಸ್ಥಾಪಿಸಲು ಶ್ರಮಿಸಿದವರು- ‘ಅಖಂಡ ರಾಷ್ಟç ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್’. ಲೋಕಮಾತೆ ಅಹಲ್ಯಾಬಾಯಿ ಹೋಳ್ಕರರ ಅಂದಿನ ರಾಜಕೀಯ, ಸಾಮಾಜಿಕ ನಿಲುವುಗಳು ಇಂದಿಗೂ ಸ್ಫೂರ್ತಿದಾಯಕವಾದದ್ದು ಎನ್ನುವುದರಲ್ಲಿ ಸಂಶಯವಿಲ್ಲ.
ಪುಸ್ತಕಕ್ಕಾಗಿ ಸಂಪರ್ಕಿಸಿ: ೯೮೮೦೭೭೩೦೨೭

⬅ ಮುಖಪುಟ