ಲೇಖಕರು: ದೀಕ್ಷಿತ್ ನಾಯರ್
ಪ್ರಕಾಶಕರು: ಸ್ನೇಹ ಬುಕ್ ಹೌಸ್
ಬೆಲೆ: ₹175.00
ಎಸ್ ಎಲ್ ಭೈರಪ್ಪ ಅವರು ಅತಿಹೆಚ್ಚು ಓದಿಸಿಕೊಂಡ ಮತ್ತು ಅಪಾರ ಓದುಗರನ್ನು ಸಂಪಾದಿಸಿದ ಅಪರೂಪದ ಲೇಖಕರು. ಅವರ ಹಾಗೆ ಬರೆದ ಮತ್ತು ಜಗತ್ತನ್ನು ಸುತ್ತಿದ ಲೇಖಕ ಕನ್ನಡದ ಮಟ್ಟಿಗಂತೂ ಅಪರೂಪವೇ ಸರಿ. ಅವರು ಅಖಿಲ ಭಾರತೀಯ ಸ್ತರದ ಲೇಖಕ. ಅಷ್ಟೇ ಅಲ್ಲ; ವಿಶ್ವಮಾನ್ಯ ಲೇಖಕರೂ ಹೌದು. ಅವರ ಕೃತಿಗಳು ನಲವತ್ತಕ್ಕೂ ಹೆಚ್ಚು ಭಾಷೆ ಮತ್ತು ಉಪಭಾಷೆಗಳಿಗೆ ಅನುವಾದಗೊಂಡಿವೆ.
ಅವರ ಕುರಿತಾದ ಈ ಕೃತಿಯಲ್ಲಿ ಡಾ. ಎಸ್.ಎಲ್. ಭೈರಪ್ಪನವರ ಬದುಕಿನ ಅಪರೂಪದ ಪ್ರಸಂಗಗಳಿವೆ. ಹೆಚ್ಚಿನವರಿಗೆ ಗೊತ್ತಿರದ ಸಂಗತಿಗಳಿವೆ. ವಿರೋಧಿಗಳೂ ಮೆಚ್ಚಿಕೊಳ್ಳುವಂಥ ಭೈರಪ್ಪನವರ ಖಾಸಗಿ ಬದುಕಿನ ವಿಷಯಗಳನ್ನು ಇಲ್ಲಿ ದಾಖಲಿಸಲಾಗಿದೆ. ಇದು ‘ಎತ್ತರೆತ್ತರ ಭೈರಪ್ಪ: ಅಗೆದಷ್ಟೂ ಆಳ ಮೊಗೆದಷ್ಟೂ ಬೆರಗು!' ಇಲ್ಲಿ ದಾಖಲಾಗಿರುವ ಯಾವ ಪ್ರಸಂಗವೂ ಕಪೋಲಕಲ್ಪಿತವಲ್ಲ. ದಂತಕತೆಯೂ ಅಲ್ಲ. ನೋಡಿ-ಕೇಳಿ-ಓದಿ ಮತ್ತು ಕಂಡವರಿAದ ತಿಳಿದು ಹೆಕ್ಕಿ ಅಕ್ಷರ ರೂಪಕ್ಕಿಳಿಸಿದ ಪ್ರಸಂಗಗಳು. ಇದು ‘ಗ್ಲೋಬಲ್ ಸ್ಟಾರ್' ಲೇಖಕನೊಬ್ಬನ ಕುರಿತಾದ ಬೊಗಸೆ ಗಾತ್ರದ ಕೈಪಿಡಿ ಎಂದು ಲೇಖಕರು ತಿಳಿಸುತ್ತಾರೆ.
ಪುಸ್ತಕಕ್ಕಾಗಿ ಸಂಪರ್ಕಿಸಿ: ೯೮೪೫೦೩೧೩೩೫