ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಶನ್ಸ್
ಬೆಲೆ: ₹99.00
ಭಾರತದ ಇತಿಹಾಸದಲ್ಲಿ ದೊಡ್ಡ ಸಂಚಲನಮೂಡಿಸಿದ ಆಂದೋಲನ ಅಯೋಧ್ಯೆ ರಾಮಮಂದಿರದ್ದು, ಐನೂರು ವರ್ಷಗಳ ಸುದೀರ್ಘ ಆಂದೋಲನವಿದು. ನಿರಂತರ ನಡೆದಿದ್ದು ಸಂಘರ್ಷವೇ. ಬಲಿಪಡೆದದ್ದು ಆಂದೋಲನಕಾರರನ್ನೇ. ಅಯೋಧ್ಯಾ ಆಂದೋಲನದ ಕಾರಸೇವಕರಲ್ಲಿ ಇದ್ದುದು ಒಂದು ಕೇಸರಿ ಬಟ್ಟೆತುಂಡು, ಅದು ಶಸ್ತçವಲ್ಲ, ಅಸ್ತçವಂತೂ ಅಲ್ಲವೇ ಅಲ್ಲ. ಪ್ರಜಾತಂತ್ರಕ್ಕೆ ಸೂಕ್ತವಾದ ರಾಮನ ಈ ನಿದ್ವೇðಷದ ದಾರಿ ಕಾರಸೇವಕರಿಗೆ ಪ್ರೇರಣೆ.
ರಾಮನ ವ್ಯಕ್ತಿತ್ವವನ್ನು ಈ ಹಿನ್ನೆಲೆಯಲ್ಲಿ ಒಂದಿಷ್ಟು ನೋಡುವ ಕಿರು ಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಜತೆಗೆ ಆಂದೋಲನ ಸಂಬAಧಿತ ವಿಷಯಗಳ ಕಡೆಗೂ ನೋಟವನ್ನು ಹರಿಸಲಾಗಿದೆ. ವಾಲ್ಮೀಕಿ ಕಾವ್ಯದ ರಾಮನನ್ನೂ, ಐತಿಹಾಸಿಕ ಪುರುಷ ರಾಮನನ್ನೂ, ಕಲಿಯುಗದಲ್ಲಿ ಬಗೆಬಗೆಯ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳಬೇಕಾಗಿಬಂದ ರಾಮನನ್ನೂ ತೂಗುತ್ತ, ತೌಲನಿಕವಾಗಿ ನೋಡುತ್ತ, ಒಂದರ ಬೆಳಕಲ್ಲಿ ಇನ್ನೊಂದನ್ನು ಅವಲೋಕಿಸುತ್ತ ಸಾಗುವ ವಿಶಿಷ್ಟ ಪುಸ್ತಕ ‘ಅಯೋಧ್ಯಾ ರಾಮ'. ರಾಮಾಯಣದ ಎಲ್ಲ ಪಾತ್ರಗಳನ್ನೂ ವಿಶ್ಲೇಷಿಸುವ, ಆದರೆ ಎಲ್ಲೂ ನ್ಯಾಯಾಧೀಶರ ತೀರ್ಪಿನಂಥ ನಿರ್ಣಯಗಳನ್ನು ಕೊಡದ, ಓದುಗರ ಬುದ್ಧಿಯಲ್ಲಿ ಹೊಸ ಹೊಸ ಚಿಂತನೆಗಳನ್ನು ಮೊಳೆಯಿಸುವ ಕೃತಿ ‘ಅಯೋಧ್ಯಾ ರಾಮ'.
ಸಂಪರ್ಕ: ೭೭೯೫೮೨೭೩೦೭, ೬೩೬೦೫೮೧೯೫೭